Connect with us

ಲೈಫ್ ಸ್ಟೈಲ್

‘ಸ್ಕಿಜೋಫ್ರೇನಿಯ’ ವಾಸಿಯಾಗದ ಖಾಯಿಲೆ ಏನಲ್ಲ..!

Published

on

ತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡದ ಜೀವನಶೈಲಿಯಿಂದ ಜನರಲ್ಲಿ ಅನೇಕಾನೇಕ ಮಾನಸಿಕ ಸಮಸ್ಯೆಗಳು ಕಾಣಿಸುತ್ತಿರುವುದನ್ನು ನಾವು ಗಮನಿಸಿರುತ್ತೇವೆ. ಅವುಗಳಲ್ಲಿ ಖಿನ್ನತೆ, ಹೊಂದಾಣಿಕೆ ಸಮಸ್ಯೆ ಹೀಗೆ ಮುಂದುವರೆದು ಸ್ಕಿಜೋಫ್ರೇನಿಯವರೆಗೂ ಬೆಳೆದ ಉದಾಹರಣೆಗಳು ನಮ್ಮ ಸುತ್ತಮುತ್ತ ಕಾಣುತ್ತೇವೆ. ಅಂತಹ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆತರೆ ಖಂಡಿತ ಸಾಮಾನ್ಯರಂತೆ ಜೀವಿಸುವುದರಲ್ಲಿ ಯಾವ ಅನುಮಾನವು ಇಲ್ಲ.

ಆದರೆ ಭಾರತದಂತಹ ಹಿಂದುಳಿದ ರಾಷ್ಟ್ರಗಳಲ್ಲಿ ಜನ ಮಾನಸಿಕ ಸಮಸ್ಯೆಗಳನ್ನ ಪಾಪದ ಫಲ, ದೇವರ ಶಾಪ, ಭೂತ ಚೇಷ್ಠೆ ಇನ್ನು ಮುಂತಾದ ಮೂಢನಂಬಿಕೆಯ ದೃಷ್ಠಿಕೋನದಲ್ಲಿ ನೋಡಿ ರೋಗಿಗಳನ್ನ ನರಕಕ್ಕೆ ತಳ್ಳಲಾಗುತ್ತಿದೆ. ಹೆಚ್ಚುತ್ತಿರುವ ಸ್ಕಿಜೋಫ್ರೇನಿಯದಂತಹ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿ ವಿಶ್ವಸಂಸ್ಥೆ ಪ್ರತಿ ವರ್ಷ ಮೇ ತಿಂಗಳ 24ರಂದು ವಿಶ್ವ ಸ್ಕಿಜೋಫ್ರೇನಿಯ ದಿನಾಚರಣೆಯನ್ನ ಆಚರಣೆಯನ್ನು ಆಚರಣೆಗೆ ತಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನ ಕೈಗೊಂಡಿದೆ.

ಈ ಕಾಯಿಲೆಯು ಪ್ರೌಢಾವಸ್ಥೆ ಅಂದರೆ 15-25ರ ವಯಸ್ಸಿನವರು ಹಾಗೂ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಜೀವನದಲ್ಲಿ ತೀವ್ರವಾದ ಸಂಕಟಗಳಿಗೆ ಸಿಲುಕಿದಾಗ ಈ ಖಾಯಿಲೆ ಬರುವ ಸಂಭವ ಹೆಚ್ಚು. ಈ ಖಾಯಿಲೆಗೆ ತುತ್ತಾದ ವ್ಯಕ್ತಿಯು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾನೆ. ಋಣಾತ್ಮಾಕ ಆಲೋಚನೆ, ನಿರಾಸಕ್ತಿ, ಶುಭ್ರತೆ ಹಾಗೂ ಆರೋಗ್ಯದ ನಿರ್ಲಕ್ಷ್ಯ, ತನ್ನಷ್ಟಕ್ಕೆ ತಾನೆ ನಗುವುದು, ವ್ಯಕ್ತಿಯ ಮಾತು ಹಾಗೂ ನಡವಳಿಕೆಯಲ್ಲಿ ಆಕ್ರಮಣ ಪ್ರವೃತ್ತಿ, ಅತಿಯಾದ ಅನುಮಾನ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗಿಯು ಎಲ್ಲಾ ಸಮಯದಲ್ಲೂ ಈ ಮೇಲಿನ ರೀತಿಯೆ ಇರಬೇಕೆಂದಿಲ್ಲ ಈ ಲಕ್ಷಣಗಳು ಆಗಾಗ ಕಾಣಿಸಿಕೊಳ್ಳಬಹುದು. ಇನ್ನು ತೀವ್ರವಾದಂತೆ ವ್ಯಕ್ತಿ ತೀವ್ರ ಭ್ರಮೆಗೊಳಗಾಗುತ್ತಾನೆ. ಯಾರದ್ದೋ ಮಾತು ಕೇಳಿದಂತೆ, ಏನನ್ನೋ ಸ್ಪರ್ಶಿಸಿದಂತೆ, ಏನೋ ನೋಡಿದಂತೆ, ವಾಸನೆಯನ್ನು ಗ್ರಹಿಸಿದಂತೆ, ತನ್ನನ್ನು ತಾನು ಸಾಧಕನೆಂದು ಭಾವಿಸಿ ಭ್ರಮೆಗೊಳಗಾಗುತ್ತಾನೆ.
ಕೆಲವೊಮ್ಮೆ ಸುಳ್ಳುಗಳನ್ನು ಸತ್ಯವೆಂದು ಭಾವಿಸುತ್ತಾರೆ, ತಮ್ಮನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಭಾವಿಸುವುದು, ಒಮ್ಮೆಲೆ ಮಾತು ನಿಲ್ಲಿಸುವುದು, ಪ್ರಶ್ನೆಗಳಿಗೆ ಅಸಂಬದ್ಧ ಉತ್ತರ ನೀಡುವುದು, ಸರಳ ಕೆಲಸಗಳಲ್ಲೂ ಗಮನ ಹರಿಸಲು ಕಷ್ಟವಾಗುವುದು, ಒಂಟಿಯಾಗಿರುವುದು, ಮುಖ ಭಾವರಹಿತವಾಗುವುದು, ಯಾವಾಗಲೂ ಒಂದೇ ದ್ವನಿಯಲ್ಲಿ ಮಾತನಾಡುವುದು ಈ ಲಕ್ಷಣಗಳನ್ನು ಸಹ ಕಾಣಬಹುದಾಗಿದೆ.

ಈ ಕಾಯಿಲೆಗೆ ನಿಖರ ಕಾರಣವನ್ನು ಗುರುತಿಸಲು ಸಂಶೋಧಕರಿಗೂ ಇನ್ನೂ ಸಾಧ್ಯವಾಗಿಲ್ಲ. ಸಂಶೋಧಕರು ಕೆಲವು ಕಾರಣಗಳನ್ನು ಊಹಿಸಿದ್ದಾರೆ. ಮೆದುಳಿನ ರಚನೆ, ವಂಶವಾಹಿ, ಮದ್ಯ ಸೇವನೆ, ಅತಿಯಾದ ಔಷಧಿಗಳ ಸೇವನೆ, ಗರ್ಭಿಣಿಯರು ಪೌಷ್ಠಿಕ ಆಹಾರ ತೆಗೆದುಕೊಳ್ಳದಿದ್ದಲ್ಲಿ ಮಗುವಿಗೆ ಚಿತ್ತವಿಕಲತೆ ಕಾಣಿಸಿಕೊಳ್ಳಬಹುದು.

ಈ ಖಾಯಿಲೆಗೆ ನಿರಂತರ ಚಿಕಿತ್ಸೆಯನ್ನು ನೀಡುವುದರಿಂದ ರೋಗಿಯನ್ನು ಪೂರ್ಣ ಪ್ರಮಾಣ ಆರೋಗ್ಯವಂತನಾಗಿ ಹಾಗೂ ಎಲ್ಲರಂತೆ ಜೀವಿಸುವ ಹಾಗೆ ಮಾಡಬಹುದಾಗಿದ್ದು ಖಾಯಿಲೆ ವಾಸಿಯಾಗುವ ಅವಧಿ ರೋಗಿಗಳಿಂದ ರೋಗಿಗೆ ಭಿನ್ನವಾಗಿರುತ್ತದೆ. ಭಾರತದ ಜನಸಂಖ್ಯೆಯ ಒಂದು ಭಾಗ ಈ ಖಾಯಿಲೆಯಿಂದ ಬಳಲುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು ಜನತೆ ಇಂತಹ ಸಮಸ್ಯೆಗಳ ಬಗ್ಗೆ ಶಿಕ್ಷಿತರಾಗಿ ಹೋರಾಡಬೇಕಾಗಿದೆ.

ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಮಾಜ ಹಾಗೂ ಕುಟುಂಬದ ಸಹಕಾರ ಹಾಗೂ ಪ್ರೀತಿ ಅವಶ್ಯಕವಾಗಿ ಬೇಕು, ಸೂಕ್ತ ವೈದ್ಯರಿಂದ ಚಿಕಿತ್ಸೆ, ಪೂರಕ ಪರಿಸರ, ಸಾಮಥ್ರ್ಯಕ್ಕೆ ಅನುಗುಣವಾದ ಕೆಲಸ-ಮನರಂಜನೆ, ಸರಿಯಾದ ನಿದ್ರೆ- ಆಹಾರ ಹಾಗೂ ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಳ್ಳುವುದು ಇಂತಹ ಸಲಹೆಯನ್ನು ಪಾಲಿಸಿದರೆ ರೋಗಿಯು ಗುಣಮುಖವಾಗುವುದರಲ್ಲಿ ಯಾವ ಅನುಮಾನವು ಇಲ್ಲ.

ಕೆ. ಗೋಪಾಲಕೃಷ್ಣ

(ಲೇಖನ ಕೃಪೆ : ಶಿವಮೊಗ್ಗ ವಾರ್ತಭವನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

Published

on

ತ್ತೀಚಿನ ಗ್ಲಾಮರ್ ಯುಗದಲ್ಲಿ,  ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.

ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.

ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !

ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.

ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending