Connect with us

ಲೈಫ್ ಸ್ಟೈಲ್

ಪೊಂಗಲ್ ಫ್ಯಾಷನ್ ; ಸಂಕ್ರಾಂತಿ ನೈಲ್ ಆರ್ಟ್..!

Published

on

  • ಚಿತ್ರಶ್ರೀ ಹರ್ಷ

2020 ರ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಭಾರತದಲ್ಲಿ ಮನೆ ಮಡಿದ್ದು, ಲೋಹರಿ,ಪೊಂಗಲ್, ಸಂಕ್ರಾಂತಿ ಎಂದು ಬಗೆಯ ಸಾಂಪ್ರದಾಯಿಕ ಆಚರಣೆಗಳನ್ನು ಒಳಗೊಂಡಿದೆ. ನೂತನ ವರ್ಷದ ಮೊದಲ ಹಬ್ಬದ ಸ್ವಾಗತಕ್ಕೆ ಫ್ಯಾಷನ್ ಅಂಗಳದಲ್ಲಿ ನೈಲ್ ಆರ್ಟ್ ರಂಗೋಲಿ, ಸಂಕ್ರಾಂತಿಯ ಸ್ಪೆಷಲ್ ಎನಿಸಿಕೊಂಡಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನೆಯ ಅಂಗಳದಲ್ಲಿ ನಗುವ ಬಣ್ಣದ ರಂಗೋಲಿ ನೈಲ್ ಆರ್ಟ್ ರೂಪ ತಿಳಿದೆ. ಕೈ ಉಗುರಿನ ಮೇಲೆ ಕ್ರಿಯೇಟಿವ್ ನೈಲ್ ಡಿಸೈನ್ ಮಾಡುವ ಪರಿ ಈಗ ಮಾಮೂಲು. ಇದನ್ನು ಮಾಡಿಸಲು ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ. ಬಣ್ಣ ಗಳ ಮಿಕ್ಸ್ ಮ್ಯಾಚ್ ಟೆಕ್ನಿಕ್ ಹಾಗು ಕ್ರಿಯೇಟಿವ್ ಡ್ರಾಯಿಂಗ್ ನಿಂದ ನೀವೇ  ನೈಲ್ ಆರ್ಟ್ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮ ದುಪ್ಪಟ್ಟುಗೊಳಿಸಿ.

ಈಗಂತೂ  ಸಂದರ್ಭಕ್ಕೆ ತಕ್ಕಂತೆ ನೈಲ್ ಆರ್ಟ್ ಟ್ರೆಂಡ್ ಆಗುತ್ತಿದೆ. ಈ ಸಂಕ್ರಾಂತಿ ಸಂಭ್ರಮಕ್ಕೆ ಸಾತ್ ನೀಡಲು ಇದೋ ಬಂದಿದೆ ಪೊಂಗಲ್ ನೈಲ್ ಆರ್ಟ್!  ಇದರ ಒಂದು ಝಲಕ್ ನಿಮಗಾಗಿ  ಇಲ್ಲಿದೆ ನೋಡಿ…

ಪೊಂಗಲ್ ನೈಲ್ ಆರ್ಟ್ !

ಒಂದೊದು ಬೆರಳಿಗೆ ಪೊಂಗಲ್ ಹಬ್ಬ ಸಾರುವ ಒಂದೊಂದು ಸಾಂಕೇತಿಕ  ಚಿತ್ರ ರಚಿಸಲಾಗುತ್ತದೆ. ಪೊಂಗಲ್ ಪಾಟ್ , ಕಬ್ಬು,  ಹಸು, “ಹ್ಯಾಪಿ ಪೊಂಗಲ್ ” ಶುಭಾಶಯಗಳು ಕೋರುವ ನೈಲ್ ಆರ್ಟ್ ಡಿಸೈನ್ ಸದ್ಯ ಸಂಕ್ರಾಂತಿ ಹಬ್ಬಕ್ಕೆಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ಗಾಳಿಪಟ ನೈಲ್ ಆರ್ಟ್ !

ಐದೂ ಬೆರಳಿಗೆ ನೀಲಿ ಆಗಸದ ಬಣ್ಣ ತುಂಬಿ,  ನಡುವಿನ ಎರಡು ಬೆರಳುಗಳ ಮೇಲೆ ಬಣ್ಣದ  ಗಾಳಿಪಟ ನೈಲ್ ಆರ್ಟ್ ಡಿಸೈನ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಸೂರ್ಯೋದಯ ನೈಲ್ ಆರ್ಟ್ !

ಸಂಕ್ರಮಣ ಕಾಲವನ್ನು ಬಿಂಬಿಸುವ ಸೂರ್ಯೋದಯದ  ಕೇಸರಿ- ಕೆಂಪು-ಹಳದಿ- ಕಪ್ಪು  ಕಾಂಬಿನೇಷನ್  ನೈಲ್ ಆರ್ಟ್ ಸಖತ್ ವೈರಲ್ ಆಗಿದೆ.

ರಂಗೋಲಿ ನೈಲ್ ಆರ್ಟ್ !

ಸಂಕ್ರಾಂತಿ ಹಬ್ಬಕ್ಕೂ ರಂಗೋಲಿ ಗೂ ಇರುವ ಅವಿನಾಭಾವ ಸಂಬಂಧ ಹಾರುವ ಕಲರ್ಫುಲ್ ರಂಗೋಲಿ ನೈಲ್ ಆರ್ಟ್ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿರುವುದಂತೂ ಸುಳ್ಳಲ್ಲ.

ಹಾಗಾದರೆ ತಡ ಯಾಕೆ? ಈ ಬಾರಿ ಎಳ್ಳು ಬೀರಲು ಸಿಂಗರಿಸಿಕೊಂಡು ಹೊರಡುವಾಗ, ನಿಮ್ಮ ಉಗುರಿನ ಮೇಲೆ  “ಪೊಂಗಲ್ ಸ್ಪೆಷಲ್ ನೈಲ್ ಆರ್ಟ್” ರಚಿಸಿಕೊಂಡು, ನಿಮ್ಮ ಸಂಕ್ರಾಂತಿಯ ಫ್ಯಾಷನ್ ಸಂಭ್ರಮಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಕಾಜಾಣ

Published

on

  • ಭಗವತಿ ‌ಎಂ.ಆರ್

ಕಾಜಾಣವು ವಿಶೇಷವೆ ಎನ್ನಬಹುದಾದ ಪಕ್ಷಿ. ಅದರ ಸ್ವಭಾವವೇ ಅದಕ್ಕೆ ಕಾರಣ. ರಾಜಕಾಗೆ” ಅಂತಲೂ ಕರೆಯುತ್ತಾರೆ. ದೂರದಿಂದ ನೋಡಿದಾಗ ಕಾಗೆಯಂತೆಯೇ ಕಾಣಬಹುದಾದರೂ ಕಾಗೆಯ ಜಾತಿಗೆ ಸೇರಿದ ಪಕ್ಷಿಯಲ್ಲ. ಇದನ್ನು “ಕಪ್ಪುಮಿಶ್ರಿತ ಬೂದು ಬಣ್ಣದ,  ಕವಲೊಡೆದ ಬಾಲದ, ಮಿಂಚುವ ಕೆಂಪು ಕಣ್ಣುಗಳ, ಸಪೂರ ದೇಹವುಳ್ಳ  ಕಾಜಾಣ ಬಹಳ ದೈರ್ಯಶಾಲಿ.

ತನಗಿಂತ ಗಾತ್ರದಲ್ಲಿ ದೊಡ್ಡದಾದ ಪಕ್ಷಿಗಳ ಮೇಲೆ ಯಾವುದೇ ಭಯವಿಲ್ಲದೆ ಎರಗುತ್ತದೆ. ಕಾಜಾಣದ ಗೂಡಿರುವ ಜಾಗದಲ್ಲಿ, ಇತರೆ ಸಣ್ಣಪುಟ್ಟ ಪಕ್ಷಿಗಳು ಗೂಡು ಕಟ್ಟಿಕೊಂಡಿರುತ್ತವೆ. ಕಾಜಾಣವು ಗೂಡಿನ ಬಳಿ ಬರುವ ಇತರೆ ಆಕ್ರಮಣಕಾರಿ ಪಕ್ಷಿಗಳನ್ನು ಓಡಿಸುತ್ತವೆ. ಕಾಜಾಣ ನಿಂತಲ್ಲಿ ನಿಲ್ಲಲಾರದು. ಬಹಳ ಚುರುಕು, ಆದರೆ, ಮೂಗಿನ ಮೇಲೆ ಕೋಪ ಅವಕ್ಕೆ !

ಕನ್ನಡದಲ್ಲಿ ಕಾಜಾಣ ಅಂದರೆ ನೆನಪಿಗೆ ಬರುವುದು ಶ್ರೀ ಕುವೆಂಪು. “ನಿನಗೆ ನಮೋ ಓ ಕಾಜಾಣ” ಎಂದಿದ್ದಾರೆ “ಕಾಜಾಣ” ಪದ್ಯದಲ್ಲಿ. ಕುವೆಂಪುರವರ ಪುಸ್ತಕಗಳ ಮುಖಪುಟಗಳಲ್ಲಿ ತಂತಿಬಾಲದ ಕಾಜಾಣದ ಜೋಡಿಯ ಚಿತ್ರ ಇದ್ದೇ ಇರುತ್ತದೆ. ರೈತರ ಹೊಲಗಳಲ್ಲಿ ಬೆಳೆಗಳನ್ನು ಹಾಳು ಮಾಡುವ ಕೀಟಗಳನ್ನು ಹಿಡಿದು ತಿನ್ನುವುದರಿಂದ ಸಹಜವಾಗಿಯೇ ರೈತನಿಗೆ ಉಪಕಾರಿಯಾದ ಪಕ್ಷಿ ಇದು. ಈ ಪಕ್ಷಿ ನಮ್ಮ ಸುತ್ತಮುತ್ತ ಇದ್ದಾಗ ಬೇರೆ ಹಕ್ಕಿಗಳ ಕೂಗನ್ನು ಅನುಮಾನಿಸಿ ನೋಡಬೇಕಾಗುತ್ತದೆ. ಬೇರೆ ಪಕ್ಷಿಗಳನ್ನು ಅನುಕರಿಸುವಲ್ಲಿ ಕಾಜಾಣ ಬಲುಜಾಣ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

EyeballTattoo, ScrelalTattoo ಎಲ್ಲಾ ಓಕೆ,  ಕಣ್ಣು ಗುಡ್ಡೆಗೂ ಟಾಟೂ ಬೇಕೇ..!?

Published

on

  • ಚಿತ್ರಶ್ರೀ ಹರ್ಷ

ದಿನೇ ದಿನೇ ಯುವಪೀಳಿಗೆ ಯಲ್ಲಿ ಟಾಟು ಕ್ರೆಜ್ ಹೆಚ್ಚುತಿರುವುದು ಹೊಸದೆನಲ್ಲ. ಈಗಂತೂ ಯುವಕರ ಮೈಮೇಲೆ ಒಂದೆರಡಾದರೂ ಟಾಟು ಇರುವುದು ಮಾಮೂಲಾಗಿ ಬಿಟ್ಟಿದೆ. 24ರ ಹರೆಯದ  ಆಸ್ಟ್ರೇಲಿಯಾ ದ ಅಂಬುರ್ ಲುಕ್ #AmburLuke , ಎಂಬ ಈಕೆ ,  ಸದ್ಯ ಸೋಶಿಯಲ್ ಮೀದಿಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಗುಥಿದ್ದಾರೆ. ವಿಶಿಷ್ಟತೆ ಇರುವುದು ಈಕೆಯ ಟಾಟೂ ಕ್ರೆಜ್ ನಲ್ಲೇ.  ತನ್ನ 14 ನೇ ವಯಸ್ಸಿಗೇ,ಟಾಟೂ ಗೀಳು  ಮೈ ಗಂಟಿಸಿಕೊಂಡಿದ ಈಕೆ ಮಾಡಿದ್ದು ಮಾತ್ರ ಯಾರೂ ಊಹಿಸಲಾಗದ ಕೆಲಸ.

https://www.instagram.com/p/B7s8cV-IVOx/?utm_source=ig_web_copy_link

ಕಳೆದ ಒಂದು ದಶಕದಲ್ಲಿ ತನ್ನ ಇಡೀ ದೇಹವನ್ನ ಟಾಟೂವಿನಿಂದ ಮುಚ್ಚಿರುವ ಈಕೆ , ನವೊಂಬರ್ 2019 ರಲ್ಲಿ ಮಥೊಂದು (ದುಸ್ಸಾಹಸಕ್ಕೆ ! )ದೊಡ್ಡ ಸಾಹಸಕ್ಕೆ ಕೈ ಹಾಕಿಯೇಬಿಟ್ಟಳು. ಇದನ್ನ ಸಾಹಸ ಅನ್ನಬೆಕೊ , ಹುಚ್ಛುತನ ಅನ್ನಬೇಕೋ ತಿಳಿಯುತ್ತಿಲ್ಲ. ಕೈ,ಕಾಲು, ಸೊಂಟ, ಕತ್ತು,ಬೆನ್ನು, ಒಕ್ಕಳು , ಬೆರಳುಗಳ ಮೇಲೆ ಟಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮೈ ತುಂಬಾ ಬಣ್ಣದ ಟಾಟೂ ಗೀಚಿಸಿಕೊಳ್ಳುವ ಖಯಾಲಿಯನ್ನ ಬೇಕಾದರೂ ಫ್ಯಾಷನ್ ಎಂದು ಒಪ್ಪಬಹುದು. ಆದರೆ, “ಅತಿರೇಕಕ್ಕೆ ಮತಿ ಕೇಡು ” ಎಂಬ ನಾನ್ನುಡಿ ನೆನಪಿಸುವ ಹಾಗಿದೆ ಈಕೆಯ ಇತ್ತೀಚಿನ ಟಾಟೂ ಕ್ರೇಜ್!

https://www.instagram.com/p/B7e1MD_D0Jk/?utm_source=ig_web_copy_link

ನವೆಂಬರ್ 2019ರಲ್ಲಿ ಅಂಬರ್ ತನ್ನ ಕಣ್ಣು ಗುಡ್ಡೆಯ ಕಲರ್ ಟಾಟೂ ರಚಿಸುವ (ದು) ಸಾಹಸ ಮಾಡಿಯೇ ಬಿಟ್ಟಳು. ಕಣ್ಣು ಗುಡ್ಡೆ ಗೆ ನೀಲಿ ( turquoise) ಬಣ್ಣ ತುಂಬಿಸಿದ್ದು ತನ್ನನ್ನು ತಾನು #BlueEyeWhiteDragon “ಬ್ಲೂ ಐ ವೈಟ್ ಡ್ರಾಗನ್” ಎಂದು ತನ್ನ ಇಂಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾಳೆ ! ತನ್ನ ಇಡೀ ದೇಹವನ್ನು  200 ಟಾಟೂ ವಿನಿಂದ ಮುಚ್ಚಿ ಕೊಂಡಿರುವ ಈ ಹುಡುಗಿ,  #bodymodification ಹುಚ್ಚಿಗೆ ಬಿದ್ದಿದ್ದು, ಸೀಳು ನಾಲಿಗೆ,  ಕಿವಿ ತಿರುವಿಕೆ , ಮುಖದ ಟಾಟೂ, ಡರ್ಮಲ್ ಜಿವೆಲರಿ ಟ್ರೆಂಡ್ ಗಳನ್ನು ಮಾಡಿಸಿಕೊಂಡಿದ್ದಾಳೆ. ಇದ್ದೆಲ್ಲಕ್ಕೂ ಬರೋಬರ್ರಿ $26000 ಖರ್ಚು ಮಾಡಿದ್ಲಾಳೆ ಏ ಹುಡುಗಿ!

https://www.instagram.com/p/B6m7e2EDJfH/?utm_source=ig_web_copy_link

ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಇಂಕ್ ನಿಂದ ಕಲರ್ ಮಾಡುವ ಈ ಟ್ರೆಂಡ್ ಅಷ್ಟೇ ಅಪಾರಕಾರಿಯೂ ಹೌದು ! 40 ನಿಮಿಷಗಳ ಕಾಲ ನಡೆದ ಈ ಟಾಟೂ ಕಾಲರಿಂಗ್ ಸರಿ ಹೋಗದ ಕಾರಣ ಈಕೆ ಮೂರು ತಿಂಗಳು ಗಳ ಕಾಲ ಕಣ್ಣು ಕಳೆದು ಕೊಂಡು ಕುರುಡತ್ವಕ್ಕೆ ಕಾಲಿಡಬೇಕಾಯಿತು ! ಈಕೆ ಹೇಳಿದ್ದೇನೆಂದರೆ

” ನನಗೆ ಟಾಟೂ ರಚಿಸಿದಾತ ನಾಲ್ಕು ಬಾರಿ ನನ್ನ ಕಣ್ಣು ಗುಡ್ಡೆಯ ಪದರಕ್ಕೆ ಇಂಕ್ ಇಂಜೆಕ್ಟ್ ಮಾಡಿದ, ಇದರ ನೋವು ಒಂದೇ ಬಾರಿಗೆ ಒಡೆದ ಗಾಜನ್ನು ನನ್ನ ಕಣ್ಣಿಗೆ ತರುಕಿದಾಗ ಆಗುವಷ್ಟು ಉರಿ, ನೋವು ಉಂಟಾಯಿತು.  ಆತ ತುಂಬಾ ಜೋರಾಗಿ ನನ್ನ ಗುಡ್ಡೆಗೆ ಇಂಜೆಕ್ಟ್ ಮಾಡಿದ್ದರಿಂದ ನಾನು ಮೂರು ತಿಂಗಳು ಕುರುಡತ್ವಕ್ಕೆ ಕಾಲಿಡಬೇಕಾಯಿತು . ಆದರೂ ನಾನು ಟಾಟೂ ರಚಿಸಿಕೊಂಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಇದು ನನ್ನ ಜೀವನದ ದೊಡ್ಡ ಅನುಭವ. ನಾನು ಇದನ್ನು ಸಂಭ್ರಮಿಸುತ್ತಿದ್ದೇನೆ ” ಎಂದು ನುಡಿದಿದ್ದಾರೆ 24 ರ ಹರೆಯದ  ಟಾಟೂ ಪ್ರಿಯೆ  ಅಂಬೂರ್ .

|BlueEyeWhiteDragon ಅಂಬೂರ್ ಲೂಕ್

ScrelalTattoo ಕಣ್ಣು ಗುಡ್ಡೆಯ ಟಾಟೂ!

ಕಣ್ಣಲ್ಲಿ,  ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಕಲರ್ ಮೂಲಕ ಬದಲಾಯಿಸುವ ಪರಿ ಹುಟ್ಟಿಕೊಂಡಿದ್ದು , ಸಿರಿಂಜ್ ನಲ್ಲಿ ಬಣ್ಣ ತುಂಬಿ,  ಕಣ್ಣು ಗುಡ್ಡೆಯ ಮ್ಲ್ಪದರಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ ! ಇದರಿಂದ ಬಿಳಿಯ ಕಣ್ಣು ಗುಡ್ಡೆಯ ಭಾಗಕ್ಕೆ ನಿಮಗಿಷ್ಟವಾದ ಬಣ್ಣ ತುಂಬ ಬಹುದಾಗಿದೆ. ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಈ ರೀತಿಯ ಪ್ರಯೋಗಗಳಿಗೇನೂ ಕಡಿಮೆ ಇಲ್ಲ.  ಕೆಂಪು,  ನೀಲಿ,ಕಪ್ಪು, ಹಸಿರು, ನೇರಳೇ ಬಣ್ಣದ ಕಣ್ಣು ಗುಡ್ಡೆಯ ಟಾಟೂ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ.

https://www.instagram.com/p/B6QxNhLBFsi/?utm_source=ig_web_copy_link

#EyeballTattoo ಕಣ್ಣು ಗುಡ್ಡೆಯ  ಒಳಗೆ ಟಾಟೂ ಡಿಸೈನಿಂಗ್ ಕ್ರೇಜ್ !

ಇತ್ತೀಚಿನ ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಚಿತ್ರ ವಿಚಿತ್ರ ಫ್ಯಾಷನ್ ನದ್ದೇ ಪರ್ವ ಕಾಲ.ಕಣ್ಣು ಗುಡ್ಡೆಯ ಬಿಳಿಯ ಭಾಗದಲ್ಲಿ ಸ್ಟಾರ್,  ಹಾರ್ಟ್,  ಲವ್ , ಹೆಸರು, ಕರೆಸಿಕೊಳ್ಳುವ ಟ್ರೆಂಡ್ ಒಂದು ಶುರುವಾಗಿದೆ.  ಬಹಳ ಭಯಾನಕ ಹಾಗೂ ವೈದ್ಯಕೀಯ ಲೋಕದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಗೆ ಸಾಕ್ಷಿ ಯಾಗಿದೆ.

ಕಣ್ಣು ದೇಹದಲ್ಲಿ ಬಹಳ ಸೂಕ್ಷ್ಮವಾದ ಭಾಗ. ಹೊರ ಜಗತ್ತಿನ ಬಣ್ಣ ವನ್ನು ನಾವು ನೋಡುವುದೇ ಕಣ್ಣುಗಳಿಂದ . ಕಣ್ಣು ಗುಡ್ಡೆಯ ಒಳಗೆ ಟಾಟೂ ಮಾಡಿಸುವುದು , ಟಾಟೂ ಇಂಕ್  ಇಂಜೆಕ್ಟ್ ಮಾಡುವುದು ಅದೆಷ್ಟರಮಟ್ಟಿಗೆ  ವೈದ್ಯಕೀಯ ವಾಗಿ
ಸರಿ ಎಂಬ ಚರ್ಚೆ ಗಳು ನಡೆಯುತ್ತದೆ ಇದೆ. ಇದರ ನಡುವೆಯೇ #EyeballTattoo ಕ್ರೇಜ್ ಜನರಲ್ಲಿ ಹೆಚ್ಚುತ್ತಲೇ ಇದೆ!

https://www.instagram.com/p/Bz-lopNAqUh/?utm_source=ig_web_copy_link

ಭಾರತಕ್ಕೂ ಕಾಲಿಟ್ಟ ScrelalTattoo

https://www.instagram.com/p/BZpWPgQHmwY/?utm_source=ig_web_copy_link

ದಿಲ್ಲಿ ಯ ಟಾಟೂ ಆರ್ಟಿಸ್ಟ್ ,  ಕರಣ್ ಕಿಂಗ್ ,ತನ್ನ ಕಣ್ಣು ಗುಡ್ಡೆಗೆ ಕಪ್ಪು ಇಂಕ್ ಇಂಜೆಕ್ಟ್ ಮಾಡಿಸಿಕೊಂಡು 2017 ರಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿದ್ದರು .

ScrelalTattooFailures ವೈಫಲ್ಯಗಳನ್ನು ಕಂಡುಕೊಳ್ಳುವ ಕಣ್ಣು ಗುಡ್ಡೆಯ ಟಾಟೂ ಕ್ರೇಜ್!

https://www.instagram.com/p/BO2xlPlF_d1/?utm_source=ig_web_copy_link

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ

Published

on

ಕೋಲಾರ ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು ನೀರಿನ ಸಮಸ್ಯೆ ಇದ್ದರೂ ಸಹ ರೈತರು ಇರುವ ನೀರನ್ನು ಸಮರ್ಪವಾಗಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ಅವರಲ್ಲಿ ಮುಳಬಾಗಿಲು ತಾಲ್ಲೂಕಿನ ಚಾಮರೆಡ್ಡಿಹಳ್ಳಿ ಗ್ರಾಮದ ರೈತರಾದ ಸೀತಮ್ಮ ಅವರು ಅಣಬೆ ಬೇಸಾಯದ ಮೂಲಕ ಆದಾಯ ಮೂಲವನ್ನು ಕಂಡು ಕೊಂಡಿದ್ದಾರೆ.

ಅವರು ಸ್ತ್ರೀ ಶಕ್ತಿ ಸಂಘದ ಸಹಯೋಗದೊಂದಿಗೆ “ಸಮೃದ್ಧಿ” ಅಣಬೆ ಬೇಸಾಯ ಘಟಕವನ್ನು ನಿರ್ಮಿಸಿಕೊಂಡು, ಅಣಬೆ ಉತ್ಪಾದನೆಯನ್ನು ಮಾಡುತ್ತಿದ್ದಾರೆ. ಇವರು ಹುಳಿಮಾವು ಕ್ಷೇತ್ರದಿಂದ ಅಣಬೆ ಬೇಸಾಯದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುವುದರ ಜೊತೆಗೆ ತೋಟಗಾರಿಕೆ ಇಲಾಖೆ ವತಿಯಿಂದ ತಾಂತ್ರಿಕ ಮಾಹಿತಿ, ಸಲಹೆಗಳು ಮತ್ತು ಆರ್ಥಿಕ ನೆರವು ಸಹಾಯಧನದ ವಿವರಗಳನ್ನು ಪಡೆದುಕೊಂಡು ಅದರಂತೆ ಕಾರ್ಯೋನ್ಮುಕರಾಗಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಕ್ಕೆ ಕೊಯ್ಲೋತ್ತರ ತಾಂತ್ರಿಕತೆ ಅಭಿವೃದ್ಧಿ ಕಾರ್ಯಕ್ರಮದಡಿ, ಇಲಾಖೆಯ ವತಿಯಿಂದ ಅಣಬೆ ಬೇಸಾಯ 2017-18 ನೇ ಸಾಲಿನಲ್ಲಿ ಶೇ. 40 ರಷ್ಟು ಸಹಾಯಧನವನ್ನು ಪಡೆದುಕೊಂಡು. ಆಯಿಸ್ಡರ್ ಮತ್ತು ಮಿಲ್ಕಿ ಅಣಬೆಯ್ನನು ಉತ್ಪಾದನೆಯನ್ನು ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಆಯಿಸ್ಡರ್ ಅಣಬೆಗೆ ಹೆಚ್ಚಿನ ಬೇಡಿಕೆ ಇದ್ದು ವಾರದಲ್ಲಿ 3 ದಿನಕ್ಕೆ 30 ರಿಂದ 40 ಕೆ.ಜಿ ಯಂತೆ ಉತ್ಪಾದನೆ ಮಾಡುತ್ತಾರೆ. ಈ ಅಣಬೆಗೆ ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ಮಿಲ್ಕಿ ಅಣಬೆಯು ದಿನಕ್ಕೆ 20 ರಿಂದ 25 ಕೆ.ಜಿ ಉತ್ಪಾದನೆಯಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗುತ್ತಿದ್ದು ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಂತೆಯೇ ಕೃಷಿ ಕ್ಷೇತ್ರದಲ್ಲಿಯೂ ಸಹ ತನ್ನದೇ ಸಾಧನೆಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಅಣಬೆ ಬೇಸಾಯದ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಮಾದರಿಯಾಗಿರುವ ಸೀತಮ್ಮ ತಮ್ಮಂತೆ ಇತರರೂ ಅಣಬೆ ಬೇಸಾಯವನ್ನು ಮಾಡಿ ಸ್ವಯಂ-ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬಿಗಳಾಗಲು ಪ್ರೇರಣೆಯಾಗಿದ್ದಾರೆ.

-ಸುಪ್ರಿಯ.ಕೆ
ಅಪ್ರೆಂಟಿಸ್
ವಾರ್ತಾ ಮತ್ತು ಸಂಪರ್ಕ ಇಲಾಖೆ ಕೋಲಾರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending