Connect with us

ಲೈಫ್ ಸ್ಟೈಲ್

ಮಳೆಗಾಲದಲ್ಲಿ ಅರಳಿದ ಕಾಮನಬಿಲ್ಲು !

Published

on

ಒಂದೆಡೆ ಕರಿ-ಬಿಳಿ ಮೋಡಗಳ ಕಣ್ಣಾಮುಚ್ಚಾಲೆ ಆಟ, ಧರೆಗಿಳಿದ ಮಳೆರಾಯನ ಸಂಭ್ರಮ ಇನ್ನೊಂದೆಡೆ. ಪ್ರತಿ ಸೀಸನ್ಗೂ ಒಂದು ವಿಶಿಷ್ಟ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರಿಗೆಂದೇ ಈ ಮಾನ್ಸೂನ್ ಗೆಂದೇ…”ರೈನ್ ಬೋ ಮೇಕಪ್ ಟ್ರೆಂಡ್ ” ರೆಡಿಯಾಗಿದೆ.

ಇದರಲ್ಲಿ ರೈನ್-ಬೋ ಐ ಮೇಕಪ್, ರೈನ್-ಬೋ ಐಲೈನರ್ , ರೈನ್-ಬೋ ಲಿಪ್ಸ್ಟಿಕ್,ರೈನ್-ಬೋ ನೈಲ್ ಆರ್ಟ್, ರೈನ್-ಬೋ ಹೇರ್ ಕಲರ್, ರೈನ್-ಬೋ ಐಬ್ರೋ… ಹೀಗೆ ಬೆಡಗಿನ ರಂಗಿನ ಪ್ರಪಂಚಕ್ಕೆ ಫ್ಯಾಷನ್ ಮಾಂತ್ರಿಕರು “ರೈನ್-ಬೋ ಮೋಡಿ ” ಸದ್ಯಕ್ಕೆ ಹಾಟ್ ಫೇವರಿಟ್ ಎನಿಸಿಕೊಂಡಿದೆ.

ಏನಿದು ರೈನ್-ಬೋ ಮೇಕಪ್?

ಮಳೆಯ ನಂತರ ಆಗಸದಲ್ಲಿ ಮೂಡುವ ವರ್ಣಮಯ ಕಾಮನಬಿಲ್ಲಿನ ರಂಗನ್ನು ಮೇಕಪ್ ಲೋಕ ತನ್ನದೇ ರೀತಿಯಲಿ ಬಳಸಿಕೊಂಡಿದೆ. ನೇರಳೇ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು.. ಹೀಗೆ.. ಕಾಮನಬಿಲ್ಲಿನಲ್ಲಿನ ಏಳು ಬಣ್ಣಗಳ ಅತ್ಯಾಕರ್ಷಕ ಬೆಡಗಿನ ಚಿತ್ತಾರದ ಅನಾವರಣವೇ ರೈನ್-ಬೋ ಮೇಕಪ್. 

ರೈನ್ ಬೋ ಐಲೈನರ್!

ಏಳು ಬಣ್ಣಗಳ ಬಹಳ ನಾಜೂಕಾಗಿ ಐ ಲೈನರ್ ನ ರೂಪದಲ್ಲಿ ಕಣ್ಣು ರೆಪ್ಪೆಯ ಮೇಲೆ ಮೂಡಿಸುವ ಕಲೆ. ಕಾಮನಬಿಲ್ಲ್ಲೇ ಕಣ್ಣ ಮೇಲೆ ಮೂಡಿದೆ ಏನೋ ಎಂಬಂತೆ ಚಿತ್ರಿಸುವ ಮಾಂತ್ರಿಕತೆ ಈ “ರೈನ್-ಬೋ ಐಲೈನರ್ ” ಗಿದೆ. 

ರೈನ್-ಬೋ ಐ ಷ್ಯಾಡೋ !

ಹಲವು ವಿಶಿಷ್ಟ ವಿನ್ಯಾಸಗಳಿಗೆ , ಚಿತ್ತಾರದ ರೂಪದಲ್ಲಿ ಐ ಷ್ಯಾಡೋ ಧರಿಸುವುದು ಸದ್ಯದ ಹಾಟ್ ಟ್ರೆಂಡ್ ಆಗಿದೆ. ರೈನ್ಬೋ ಕಲರ್ಸ ಗಳ ಮೋಡಿ ಯನ್ನು ಈ ಕಲೆ ಎತ್ತಿ ಹಿಡಿದಿದೆ.

ರೈನ್-ಬೋ ಗ್ಲಿಟರ್ ಐ ಬ್ರೋ!

Vibgyor ಬಣ್ಣದ  ಗ್ಲಿಟರ್ ಐ-ಷ್ಯಾಡೋ ವನ್ನು ಹುಬ್ಬಿನ ಮೇಲೆ ಬ್ರಷ್ ಮೂಲಕ ಹಚ್ಚಿಕೊಂಡು ನಿಮ್ಮ partywear ಗೆ match ಆಗುವ ರೀತಿಯಲ್ಲಿ ಸಿಂಗರಿಸಿಕೊಳ್ಳಿ. Disco party ಹಾಗೂ  Ramp ಗಳಲ್ಲಿ ಈ trend ಹೆಚ್ಚಿನ ಬೇಡಿಕೆಯಲ್ಲಿದೆ.

ರೈನ್ ಬೋ ನೈಲ್ ಆರ್ಟ್

ಮಳೆಗಾಲದಲ್ಲಿ ಮೂಡುವ ಕಾಮನಬಿಲ್ಲಿನ ಏಳು ಹಣ್ಣುಗಳನ್ನು ನಿಮ್ಮ ಕೈ ಬೆರಳುಗಳ ಮೇಲೆ ನೈಲ್  ಕಿಟ್ ಬಳಸಿ artistic ಆದ ವಿನ್ಯಾಸಗಳನ್ನು ಬಿಡಿಸಲಾಗುತ್ತದೆ. 

ರೈನ್ ಬೋ ಹೇರ್ ಕಲರ್

ಮಾರುಕಟ್ಟೆಗಳಲ್ಲಿ ಸಿಗುವ Rainbow colours ಗಳ Hair colours ಗಳನ್ನು ಕೂದಲಿಗೆ layers  ಮಾದರಿಯಲ್ಲಿ ಹಚ್ಚಿಕೊಂಡು ಈ seasonನ trendy hot going Rainbow look ಅನ್ನು ನೀವೂ try ಮಾಡಿ.

ರೈನ್ ಬೋ ಲಿಪ್ಸ್ಟಿಕ್

Multi-coloured lipstick trend ಸದ್ಯ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಬಹಳ ಸುದ್ದಿ ಮಾಡಿದೆ. RAINBOW COLOURS ಗಳ LIPSTICK ಬಳಸಿ ನಿಮ್ಮ ತುಟಿಗಳಿಗೆ ಒಂದು TRENDY LOOK TRY ಮಾಡಿ. 

ರೈನ್ ಬೋ ಮೇಕಪ್ ಕಿಟ್

ಮಾರುಕಟ್ಟೆಯಲ್ಲಿ ಈ VIBRANT COLOURS MAKE UP KIT ಸಿಗುತ್ತದೆ. ಈ MONSOON SEASON ನೀವೂ ಕೂಡ ಮನೆಯಲ್ಲೇ ಒಂದು TRENDY LOOK ನ TRY ಮಾಡಿ.

RAINBOW MAKE-UP TRENDS ಸದ್ಯ FACEBOOK ಹಾಗೂ INSTAGRAM ಗಳಲ್ಲಿ ಯುವತಿಯರ ಕ್ರೇಜ್ ಹೆಚ್ಚಿಸಿದೆ.

ಸೋಷಿಯಲ್ ಮೀಡಿಯಾ ಹಂಗಾಮ

ಸೋಷಿಯಲ್ ಮೀಡಿಯಾ ದಲ್ಲಿ Fashion trends ನ ಕ್ರೇಜ್ ಹೆಚ್ಚಿದೆ. Fashion ಪ್ರಿಯರು ಹಾಗೂ  Fashion ಮಾಂತ್ರಿಕರು  ತಮ್ಮ ಹೊಸ ಟ್ರೆಂಡ್ಗಳನ್ನು ಜನರಿಗೆ ತಲುಪಿಸಲು ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ..

ಸದ್ಯ ಈ ಮಳೆಗಾಲಕ್ಕೆ  “RAINBOW MAKE-UP TRENDS ” ಸೋಷಿಯಲ್ ಮೀಡಿಯಾ hot favourite ಎನಿಸಿಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

Published

on

ತ್ತೀಚಿನ ಗ್ಲಾಮರ್ ಯುಗದಲ್ಲಿ,  ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.

ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.

ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !

ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.

ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending