ಲೈಫ್ ಸ್ಟೈಲ್
ಈಗ ತೂಕ ಇಳಿಸಿಕೊಳ್ಳುವದು ಡೊಳ್ಳು ಹೊಡೆದಷ್ಟೇ ಸುಲಭವಂತೆ..!

ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ ತಲೆ ಕೆಡಸಿಕೊಳ್ಳುವವಳಲ್ಲ.
ಆದರೆ , ಆಧುನಿಕ ಮಹಿಳೆ ಇಂದಿನ ಜಗತ್ತಿಗೆ ಹೊಂದಿಕೊಂಡು ತನ್ನನ್ನು ತಾನು ಆರೋಗ್ಯವಂತಳಾಗಿ ; ಫಿಟ್ ಆಗಿದ್ದ ಇಚ್ಛಿಸುತ್ತಾಳೆ. ಸಮಾಜದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ.. ಎಲ್ಲರೆದುರು ಸೌಂದರ್ಯವತಿಯಂತೆ ಕಂಗೊಳಿಸಬೇಕು ಎಂಬ ಹಂಬಲ ಮಹಿಳಾಮಣಿಯರದು. ಅದಕ್ಕೆಂದೇ ಫಿಟ್ ನೆಸ್ ಮಂತ್ರ ಜಪಿಸುತ್ತಿದ್ದಾರೆ. ಯೋಗ , ಜಿಮ್, ಝುಂಬಾ, ಏರೋಬಿಕ್ಸ್, ನೃತ್ಯ.. ಹೀಗೆ ಹತ್ತು ಹಲವಾರು ರೀತಿಯಲ್ಲಿ “ಫಿಟ್ ನೆಸ್ ಫ್ರೀಕ್” ಗಳಾಗುತ್ತಿದ್ದಾರೆ.
ತಾರಾಮಣಿಯರಂತೆಯೇ ನಾವೂ ಕೂಡಾ ಕಾಣಬೇಕು ಎಂಬ ಹಂಬಲ ಇವರದು. ಸೆಲಿಬ್ರಿಟಿ ಗಳ ಫಿಟ್ ನೆಸ್ ಯೋಜನೆಗಳ ಅನುಕರಣೆ, ಜೀವನಶೈಲಿಯಲ್ಲಿ ಬದಲಾವಣೆಗೆ ಮುಂದಾಗಿದ್ದಾಳೆ.
ಏನಿದು ಪೌಂಡ್ ?
ಸದಾ ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಎಂಬುದು ಹೆಂಗುಳೆಯರ ಹಂಬಲ. ಬಳ್ಳಿಯಂತೆ ಬಳಕುವ ಮೈಮಾಟ ಯಾರಿಗೆ ತಾನೇ ಬೇಡ! ಅದಕ್ಕೆಂದೇ ಮಹಿಳೆಯರು ದುಬಾರಿಯಾದರೂ ಮೋಹಕವಾಗಿ ,ಕಾಣಬೇಕು ಎಂದು, ಫಿಟ್ನೆಸ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.
ಜುಂಬಾ, ಯೋಗ, ಏರಿಯಲ್ ಯೋಗ, ಕಾರ್ಡಿಯೋ, ಜಿಮ್, ಅಂತೆಲ್ಲಾ ಫಿಟ್ ನೆಸ್ ಸೆಂಟರ್ ಗಳ ಮೊರೆ ಹೋಗುತಿತರುವ ಮಹಳಾಮಣಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.
ಅಮೇರಿಕಾ ದಿಂದ ಭಾರತಕ್ಕೆ ಹಾರಿ ಬಂದಿದೆ ಪೌಂಡ್ ಫಿಟ್ ನೆಸ್ ವರ್ಕ್ ಔಟ್. ಮೂಲತಃ ಅಮೇರಿಕಾ ದವರಾದ ಕ್ರಿಸ್ಟೀನ್ ಮತ್ತು ಖ್ರಿಸಿಟೀನಾ ಎಂಬ ಇಬ್ಬರು ಮಹಿಳೆಯರ ಕೊಡುಗೆ ಈ “ಪೌಂಡ್ ” … ಡ್ರಂಮ್ಮಿಗಗ್(ಡೊಳ್ಳು) ಮುಖಾಂತರ ಇಡೀ ದೇಹಕ್ಕೆ ವ್ಯಾಯಾಮ ಮಾಡಲಾಗುತ್ತದೆ. HIGH INTENSITY INTERNAL TRAINING ಒಳಗೊಂಡಿರುವ ಪೌಂಡ್ ( POUND) ವರ್ಕಔಟ್ ಸದ್ಯ ಇಡೀ ವಿಶ್ವದಲ್ಲಿ ಜನಪ್ರಿಯ ಗೂಂಡಿದೆ. ಈಗಾಗಲೇ ಜಗತ್ತಿನ ಅದೆಷ್ಟೋ ಮಂದಿ ಈ ಪೌಂಡ್ ಮ್ಯಾಜಿಕ್ ಗೆ ಫುಲ್ ಫಿದಾ ಆಗಿದ್ದಾರೆ. ಡ್ರಂ ಕಡ್ಡಿಗಳನ್ನ ನೆಲದ ಮೇಲೆ ಬಾರಿಸುತ್ತಾ… ಸಂಗೀತದೊಂದಿಗೆ ಬೆರೆತು.. ಬೆವರಿಳಿಸುವ ಬಗೆಯೇ “ಪೌಂಡ್ “… ದಿನಕ್ಕೆ 45 ನಿಮಿಷಗಳ ಪೌಂಡ್ ವರ್ಕ ಔಟ್ ಆರಾಮಾಗಿ ತಿಂಗಳಿಗೆ 2-3 kg ತೂಕ ಇಳಿಸುತ್ತದೆ. ಸುಮಾರು 800 calorie ಗಳನ್ನ ಸುಲಭವಾಗಿ ಕರಗಿಸುತ್ತದೆ. ತಿಂಗಳಲ್ಲಿ 5-6 ” ಸುತ್ತ ಅಳತೆ ಇಳಿಸುತ್ತದೆಯಂತೆ.
ಸಂಗೀತ ದೊಂದಿಗೆ ಡ್ರಮ್ಮಿಂಗ್ ಮಾಡುತ್ತಾ, ಸ್ಕ್ವಾಟ್, ಕ್ರಾಕ್ ಗಳ ಹೈ ಇಂಟೆಂಸಿಟೀ ವ್ಯಯಾಯಾ ಇದಾಗಿದೆ. ಸೊಂಟದ ಸುತ್ತಳತೆ, ಹಿಪ್ಸ್-ಥೈ ಗಳ ತೂಕ ಇಳಿಸಿಕೊಳ್ಳಲು ಉತ್ತಮ ವ್ಯಾಯಾಮವಂತೆ. ಚರ್ಮಕ್ಕೆ ಉತ್ತಮ ಟೋನಿಂಗ್ ನೀಡುತ್ತದೆ ಎನ್ನುತ್ತಾರೆ ಪೌಂಡ್ ಟ್ರೈನರ್ ಗಳು.
ಭಾರದಲ್ಲಿ ಪೌಂಡ್ !
ಇತ್ತೀಚೆಗೆ ಭಾರತಲ್ಲೂ ಹೆಸರು ಮಾಡುತ್ತಿರುವ “ಪೌಂಡ್ ವರ್ಕ್ ಔಟ್
“ಗೋವಾ, ಮುಂಬೈ, ಚೆನ್ನೈ, ಕೋಲ್ಕತಾದಲ್ಲಿ ಹೆಚ್ಚು ಗಮನ ಸೆಳೆದಿದೆ. ವಿದೇಶಿಯರೇ ಹೆಚ್ಚು ಇರುವ ಗೋವಾ ದಲ್ಲಿ ಇದು ತುಂಬಾ ಫೇಮಸ್ ! ಬೆಂಗಳೂರಿನಲ್ಲೂ ಶುರುವಾಗಿದೆ “ಪೌಂಡ್ ” ಕ್ರೇಜ್ !
ಏನನ್ನುತ್ತಾರೆ ಪೌಂಡ್ ಎಕ್ಸ್ಪರ್ಟ?
ಬೆಂಗಳೂರಿಗೆ ಪೌಂಡ್ ವರ್ಕ್ ಔಟ್ ಹೊಸತಾಗಿದ್ದು..ಬೆರಳಣಿಕೆ ಅಷ್ಟೇ ಟ್ರೈನರ್ ಗಳು ಲಭ್ಯವಿದ್ದಾರೆ. ಇನ್ನುಳಿದ ಫಿಟ್ ನೆಸ್ ವರ್ಕ್ ಔಟ್ ಗಿಂತಲೂ ವಿಭಿನ್ನವಾಗಿರುವ “ಪೌಂಡ್ ” ಸಂಗೀತ ಮತ್ತು ವ್ಯಾಯಾಮ ಸಿಹಿ ಮಿಶ್ರಣವಾಗಿದೆ.
ಬೆಂಗಳೂರಿನ ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ
ನಿಹಾರಿಕಾ( ನಿಕ್ಕಿ) ಬೆಂಗಳೂರಿನ ಪೌಂಡ್ ಟ್ರೈನರ್ ಹೀಗನ್ನುತ್ತಾರೆ… ಕಳೆದೆರಡು ವರ್ಷದ ಹಿಂದೆ, ಪ್ರಸವದ ನಂತರ ವಿಪರೀತ ದಡೂತಿ ಆಗಿದ್ದ ನಿಹಾರಿಕಾ.. ಈಗ 83 kg ಇಂದ 60 kg ಗೆ ತೂಕ ಇಳಿಸಿಕೊಂಡಿದ್ದಾರೆ.. ಕಳೆದ ಆರು ತಿಂಗಳಿಂದ ಪೌಂಡ್ ವರ್ಕ್ ಔಟ್ ಗೆ ತಮ್ಮನ್ನು
ಅರ್ಪಿಸಿಕೊಂಡಿರುವ ನಿಕ್ಕೀ.. ಬೆಂಗಳೂರಿನ ಕೆಲವೇ ಪೌಂಡ್ ಟ್ರೈನರ್ ಗಳಲ್ಲಿ ಒಬ್ಬರು. Gx ಸೆಂಟರ್ ನಲ್ಲಿ ಪೌಂಡ್ ಟ್ರೈನಿಂಗ್ ಮಗಿಸಿಕೊಂಡು.. ಪೌಂಡ್ ಟ್ರೈನರ್ ಆಗಿ ಗುರುತಿಸಿ ಕೊಂಡಿದ್ದಾರೆ 35 ವರ್ಷ ದ ಈ ಫಿಟ್ ಹೆಣ್ಣು.
“ಪೌಂಡ್ ಕೇವಲ ಸಂಗೀತದೊಂದಿಗಿನ ವ್ಯಾಯಾಮ ವಲ್ಲ.. ಇಲ್ಲಿ ಸಂಗೀತವೇ ವ್ಯಾಯಾಮ ವಾಗಿಬಿಡುತ್ತದೆ” ಎನ್ನುತ್ತಾರೆ ನಿಹಾರಿಕಾ.
ಈ ಪೌಂಡ್ ವರ್ಕ್ ಔಟ್ ಈಗ ಕೆಲವೇ ಫಿಟ್ ನೆಸ್ ಸೆಂಟರ್ ಗಳಲ್ಲಿ ಲಭ್ಯವಿದ್ದು ಇದರ ಮಹತ್ವ ವನ್ನು ಜನರಿಗೆ ತಲುಪಿಸಸುವ ಆಸೆ ನಿಹಾರಿಕಾರದ್ದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಲೈಫ್ ಸ್ಟೈಲ್
ರೆಸಿಪಿ | ಹೆಸರು ಬೇಳೆ ಪನ್ನೀರ್ ಸಾಗು

ರುಚಿ ರುಚಿಯಾದ ಹೆಸರು ಬೇಳೆ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು.
ಹೆಸರುಬೇಳೆ 1 ಕಪ್
ಪನೀರ್ 1/2 ಕಪ್
ಕ್ಯಾಪ್ಸಿಕಂ
ಈರುಳ್ಳಿ 1
ಟೊಮೊಟೊ 1
ಕಾರ್ನ್ ಫ್ಲೋರ್ 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲ
ಚಾಟ್ ಮಸಾಲ
ಧನಿಯಾ ಪುಡಿ
ಅಚ್ಚ ಖಾರದಪುಡಿ
ಜೀರಾ ಪುಡಿ
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಕಸೂರಿ ಮೆಹತಿ
ಅರಿಶಿನ
ಹಸಿಮೆಣಸಿನಕಾಯಿ
ಹೆಸರು ಬೇಳೆ ಸಾಗು ಮಾಡುವ ವಿಧಾನ
- ಮೊದಲು ಹೆಸರುಬೇಳೆ ಬೇಯಿಸಿಕೊಳ್ಳಿ.
- ಪ್ಯಾನ್ ಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
- ಕ್ಯಾಪ್ಸಿಕಂ ಹಾಕಿ ಬಾಡಿಸಿ ಟೊಮೊಟೊ ಹಾಕಿ 2 ನಿಮಿಷ ಫ್ರೈ ಮಾಡಿ ಇದಕ್ಕೆ ಗರಂಮಸಾಲ, ಧನಿಯಾಪುಡಿ, ಜೀರಪುಡಿ, ಅರಿಸಿನ, ಚಾಟ್ ಮಸಾಲ, ಖಾರಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ.
- ಮಸಾಲ ಕುಡ್ದ ನಂತರ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ ಬೆಂದ ಹೆಸರು ಬೇಳೆ ಹಾಕಿ ಮಿಕ್ಸ್ ಮಾಡಿ ಪನೀರ್, ಉಪ್ಪು ಹಾಕಿ 5 ನಿಮಿಷ ಕುದಿಸಿ.
- ನಂತರ ಕೊತ್ತಂಬರಿ ಕಸೂರಿ ಮೆತಿ ಹಾಕಿ ಮಿಕ್ಸ್ ಮಾಡಿ.
ಇದು ಪೂರಿ ಚಪಾತಿ ಜೊತೆ ತಿನ್ನಲು ತುಂಬಾ ರುಚಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
‘ಮೆಂತೆ ಸೊಪ್ಪಿನ ಪಲ್ಯ’ ಮಾಡೋದು ಹೀಗೆ ನೋಡಿ..!

ಆರೋಗ್ಯಕರ ಮೆಂತೆ ಸೊಪ್ಪಿನ ಪಲ್ಯ ಮಾಡುವ ಸುಲಭ ವಿಧಾನ ನಿಮಗಾಗಿ.
ಬೇಕಾಗುವ ಸಾಮಗ್ರಿಗಳು
- ಮೆಂತೆ ಸೊಪ್ಪು -1ಕಟ್
- ಈರುಳ್ಳಿ -1
- ಹಸಿಮೆಣಸಿನಕಾಯಿ -2
- ಹುಣಸೇ ರಸ -2ಚಮಚ
- ಉಪ್ಪು,ಬೆಲ್ಲ-ರುಚಿಗೆ
- ಒಗ್ಗರಣೆಗೆ-ಕೊಬ್ಬರಿ
- ಎಣ್ಣೆ,ಕಡಲೇಬೇಳೆ,ಉದ್ದಿನಬೇಳೆ,ಸಾಸಿವೆ,ಇಂಗು
ಮಾಡುವ ವಿಧಾನ-ಮೊದಲು ಮೆಂತೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,ಈರುಳ್ಳಿ, ಕಡಲೇ ಬೇಳೆ,ಉದ್ದಿನಬೇಳೆ,,ಹಸಿಮೆಣಸಿನಕಾಯಿ ,ಇಂಗು ಹಾಕಿ ಬಾಡಿಸಿ ,ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ,ಸೇರಿಸಿ ಸ್ವಲ್ಪ ನೀರು,ಹುಣಸೇ ರಸ ಸೇರಿಸಿ ಚೆನ್ನಾಗಿ ಬೇಯಿಸಿ ಚಪಾತಿ ಪುರಿ ಅಥವಾ ದೋಸೆಯೊಂದಿಗೆ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಒಂದು ದಿನಾ ಇರುವೆ ಬಿಟ್ಕೊಳ್ಳಿ..!

ಸಮಾರು 100-180ದಶಲಕ್ಷ ವರ್ಷಗಳ ಪ್ರಾಚೀನ ಕಾಲದಿಂದಲೂ ಒಂದೆಡೆ ಸಿಪಾಯಿ ಜೀವನ ನಡೆಸಿಕೊಂಡು ಬಂದಿರುವ,ಪ್ರಪಂಚದ ಪ್ರಾಣಿ ಸಂಕುಲದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿರುವ angiosperm ಎಂದ ಸಸ್ಯದ ಪ್ರಭಾವದಿಂದಾಗಿ ಕಣಜದಿಂದ ಬೇರ್ಪಟ್ಟು ವಿಶಿಷ್ಠವಾದ ಜೀವನ ನಡೆಸುತ್ತಿರುವ ಸಾಮಾಜ ಸೇವಕನನ್ನು ,ಸಿಹಿ ಭಕ್ಷಕ ದೊಡ್ಡ ಪ್ರಮಾಣ ಸಂಕುಲ ಹೊಂದಿರುವ Hymenoptera’s ಜಾತಿಯ ಕ್ರಿಮಿಗಳ ಬಗ್ಗೆ ಒಂದಷ್ಟು ತಿಳಿಯುವಾ,.
ಇವುಗಳಲ್ಲಿ ಸು12000 ಪ್ರಭೇದಗಳು ಬೆಳೆದಿವೆ ,ಅಂಟಾರ್ಕ್ಟಿಕಾ ,ಗ್ರೀನ್ ಲ್ಯಾಂಡ್ ,ಐಸ್ ಲ್ಯಾಂಡ್, ಹವಾಯ್, ಪಾಲಿನ ಏಷ್ಯಾ ಗಳಲ್ಲಿ ಹೊರತು ಪಡಿಸಿ ಉಳಿದ ಭೂಮಿಯ ಎಲ್ಲಾ ವಲಯಗಳಲ್ಲಿ ಕಂಡುಬರುವ ಇದು,ದೇಹದ ಒಳ ಭಾಗವನ್ನೆ ಹೃದಯ ಮಾಡಿಕೊಂಡಿರುವ ವಿಶೇಷ ಜಂತು.
ಇವುಗಳಲ್ಲಿ ಗಂಡಿರುವೆ, ರಾಣಿ ಇರುವೆ , ಸೇವಕ ಇರುವೆ ಸಹಾಯಕ ಇರುವೆಗಳು ಎಂದ ಸ್ಥರ ವಿನ್ಯಾಸ ಮಾಡಲಾಗಿದೆ. ಗಂಡಿರುವೆಗಳು ಮಿಲಿನಕ್ಕೆ ಮಾತ್ರ ಸೀಮಿತ, ಸಂಭೋಗಕಿಂತ ಪೂರ್ವದಲ್ಲಿ ಗಂಡಿರುವೆ ಮತ್ತು ರಾಣಿ ಇರುವೆ ಪುಕ್ಕಗಳನ್ನು ಹೊಂದಿರುತ್ತವೆ. ಸಂಭೋಗ ಪೂರ್ತಿ ಮುಗಿದ ತಕ್ಷಣ ಗಂಡಿರುವೆ ಸತ್ತರೆ ರಾಣಿರಾಜನನ್ನು ಕಳೆದುಕೊಂಡ ದುಃಖದಲ್ಲಿ ಸೇವಕರ ಗುಂಪು ಸೇರಿ ಅಲ್ಲೆ ಸುಮ್ಮನೆ ಇದ್ದು ಬಿಡುತ್ತದೆ.
ಇದನ್ನು ಪ್ರಸವ ಪೂರ್ವ ಎಂದು ಹೇಳಬಹುದು. ಗಂಡಿರುವೆ ಕೆಲವೇ ದಿನಗಳಲ್ಲಿ ಸತ್ತೆರೆ ರಾಣಿ ಇರುವೆ 45-50 ವರ್ಷ ಬದುಕುತ್ತವೆ ಎಂದು ಅಂದಾಜು ಮಾಡಲಾಗಿದೆ.ಸೇವಕ ಇರುವೆಗಳು 5-8ವರ್ಷ ಬದುಕಿದರೂ ಸಂತಾನೋತ್ಪತ್ತಿಯ ಭಾಗ್ಯ ಅವುಗಳಿಗೆ ಇಲ್ಲ. ಆದರೆ ವಿಜ್ಞಾನ ಸವಾಲು ಎನ್ನುವಂತೆ ಒಂದೊಂದು ಬಾರಿ ಸೇವಕ ಇರುವೆಗಳು ಮೊಟ್ಟೆಗಳನ್ನು ಹಾಕಿವೆ, ಇದು ಅಚಾತುರ್ಯ ಮಾತ್ರ. ಅವುಗಳ ನಿರಂತರವಾಗಿ ಮೊಟ್ಟೆಗಳು ಇಡಲಾರವು. ಸೇವಕ ಇರುವೆಗಳಿಂದಲೂ ಗಂಡಿರುವೆ ರಾಣಿ ಇರುವೆ ಹುಟ್ಟಿರುವ ಉದಾಹರಣೆಗಳಿವೆ.
ಸಾಮಾನ್ಯವಾಗಿ ಎರಡು ಮೊಟ್ಟೆಗಳನ್ನು ಹಾಕುವ ರಾಣಿ ಇರುವೆಗಳು ಶರತ್ಕಾಲದಲ್ಲಿ ಮರಿಮಾಡುತ್ತವೆ. ಇರುವೆ ಗಳಿಗೆ ಎರಡು ಹೊಟ್ಟೆಗಳಿದ್ದು ಒಂದು ಹೊಟ್ಟೆಯನ್ನು ದಿನಸಿಯ ಬಳಕೆಯಾಗಿ ಇನ್ನೊಂದು ಹೊಟ್ಟೆ ಗಂಡಿರುವೆ ಮತ್ತು ಮರಿ ಇರುವೆಗಳಿಗೆ ಸಲುವಲು ಬಳಕೆ ಮಾಡುವವು.
Escoscolitic ಎಂಬ ಬಿರುಸಾದ ಹೊರವಲಯದಿಂದ ನಮ್ಮನ್ನು ರಕ್ಷಣೆ ಮಾಡಿಕೊಂಡರೆ , forlic acid’sನಂತ ಉರಿತ ತರುವ ದ್ರವ ಹೊರಸೂಸುವಿಕೆಯಿಂದ ತಮ್ಮನ್ನು ತಾವು ವೈರಿಗಳಿಂದ ಅಥವಾ ಅನಾಹುತ ತಡೆಯಲು ಬಳಸಲಾಗುತ್ತದೆ. ಇವುಗಳಿಗೆ ಶ್ವಾಸಕೋಶದ ಕೊರತೆ ಇದೆಯಾದರೆ ಟುಪಿಲ್ಲರ್(Tover)ಗಳಿಂದ ವಾಸನೆಯನ್ನು ಶಬ್ದ ಮತ್ತು ಮಾರ್ಗವನ್ನು ಗ್ರಹಿಕೆಗೆ ಮಾಡುತ್ತವೆ.
ಲಾವಾ ಮತ್ತು ಪ್ಯೂಪಾ ವ್ಯವಸ್ಥೆಯಿಂದ ಹೊರಬರುವ ವರೆಗೆ ಅವುಗಳು ಸೇವಕ ಇರುವೆಗಳ ಸಹಾಯದಿಂದ ಬೆಳೆಯುತ್ತವೆ.ಒಂದು ಸತ್ಯ ಏನ ಗೊತ್ತಾ ? ಸೇವಕ ಇರುವೆಗಳೆ ಮರಿಗಳಿಗೆ ಆಹಾರ ಒದಗಿಸುವುದರಿಂದ ಬಹುತೇಕ ನಾಯಕ ಇರುವೆಯಾಗುವುದು, ರಾಣಿ ಇರುವೆಯಾಗುವುದು,ಸೇವಕ ಇರುವೆಯಾಗುವುದು ಸೇವಕ ಇರುವೆಯ ಮೇಲೆ ಡಿಪೆಂಡ್ ಆಗಿದೆ. ಯಾವ ರೀತಿಯ ಆಹಾರ ನೀಡುತ್ತವೆಯೋ ಅವುಗಳ ಸೃಷ್ಟಿ ಆಗುತ್ತದೆ.
ಇವುಗಳ ಕಾಲುಗಳು ಥೋರಾಕ್ಷ್ ಎನ್ನುವ ಮುಂಡ ಭಾಗದಿಂದ ಸೃಷ್ಟಿಯಾಗಿರುವುದರಿಂದ ಗಟ್ಟಿಯಾಗಿರುತ್ತವೆ. Pheromone aide ಸಂಪರ್ಕಾಮ್ಲವಾಗಿ ಬಳಕೆ ಮಾಡಿಕೊಳ್ಳುತ್ತವೆ.ಆಸ್ಟ್ರೇಲಿಯಾದ ‘ಜಾಕ್ ಜಂಪರ್’ ಎನ್ನುವ ಇರುವೆ ಜಾತಿ Pheromone aide ಸುರಿಸಿ ಮನುಷ್ಯನ ಸಾಯಿಸುವ ಮೂಲಕ ತನ್ನ ವಿಷದ ಪ್ರಬಲತೆ ದಿಕ್ಕುಸಂವೇದನೆ ಮಾಡಿದೆ.
ಸಾವು ಸಮೀಪಿಸಿದ ಸಂದರ್ಭದಲ್ಲಿ Oleic acid ದ್ರವಿಸುವ ಮೂಲಕ ತಮ್ಮ ಸಾವಿನ ಸುದ್ದಿಯನ್ನು ಮುದಿ ಇರುವೆಗಳು ಸಾರುತ್ತವೆ.ಇದರ ಗ್ರಹಿಕೆ ಸೇವಕ ಇರುವೆಗಳಿಗೆ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ ಎನ್ನುವುದೇ ವಿಜ್ಞಾನ ಲೋಕಕ್ಕೆ ಸಿಕ್ಕಿರುವ ವಿಚಿತ್ರ ಸತ್ಯ.
ಒಟ್ಟಾರೆ ಇರುವೆ ಬಿಟ್ಕೊಂಡು ಓದಿ ಇರುವೆಗಳ ಜೀವನ ಮತ್ತು ವಿಶಿಷ್ಟ ಲಕ್ಷಣಗಳನ್ನು ತಿಳಿಸುವುದರಲ್ಲಿ ನನಗೆ ಅತೀವ ಸಂತಸವಾಗಿದೆ..
ಪೂರ್ತಿ ಓದಿ ಅಭಿಪ್ರಾಯ ತಿಳಿಸಿ ಆತ್ಮೀಯರೆ..
ಸಹಾಯ:- ವಿಜ್ಞಾನ ಲೋಕದ ವಿಚಿತ್ರ ಸತ್ಯ, ಬಾಲ ವಿಜ್ಞಾನ ಮತ್ತು ಗೂಗಲ್ ಕೊಂಡಿ..
ವಾಯ್.ಜೆ.ಮಹಿಬೂಬ
ರಾಜ್ಯ ಉಪಾಧ್ಯಕ್ಷರು
ಕರುನಾಡ ಹಣತೆ ಕವಿ ಬಳಗ (ರಿ)
ಚಿತ್ರದುರ್ಗ ಜಿಲ್ಲೆ.
ಮೊ : 9535104785
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಬಹಿರಂಗ6 days ago
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
-
ಅಂತರಂಗ5 days ago
ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್
-
ಭಾವ ಭೈರಾಗಿ5 days ago
ಕವಿತೆ | ಗರ್ಭದೊಳಗೆ
-
ಕ್ರೀಡೆ5 days ago
ದಾವಣಗೆರೆ | ವಾರ್ಷಿಕ ಪೊಲೀಸ್ ಕ್ರೀಡಾಕೂಟ-2019
-
ದಿನದ ಸುದ್ದಿ7 days ago
ಪಶುವೈದ್ಯೆ ಅತ್ಯಾಚಾರ, ಕೊಲೆ : ನಾಲ್ವರು ಆರೋಪಿಗಳ ಎನ್ ಕೌಂಟರ್ | ಪ್ರತಿಕ್ರಿಯೆಗಳು
-
ದಿನದ ಸುದ್ದಿ3 days ago
‘ಪೌರತ್ವ (ತಿದ್ದುಪಡಿ) ಮಸೂದೆ’ | ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಿದು : ಸಿದ್ದರಾಮಯ್ಯ ಕಿಡಿ
-
ಭಾವ ಭೈರಾಗಿ6 days ago
ಕಾಳಾರಾಮ ದೇವಾಲಯ ಪ್ರವೇಶ ಮತ್ತು ಕುವೆಂಪು ‘ಜಲಗಾರ’ ನಾಟಕ : 90 ವರ್ಷಾಚರಣೆಯ ಹೊತ್ತಿನಲ್ಲಿ