Connect with us

ಲೈಫ್ ಸ್ಟೈಲ್

ಮೇಡ್ ಇನ್ ಚೈನಾ

Published

on

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಉಂಟಾದಾಗ ಅಥವಾ ಭಾರತದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅಥವಾ ಅಜರ್ ಮಸೂದ್ ವಿಷಯ ಬಂದಾಗ ಅಥವಾ ಚೀನಾದ ಗಡಿಯಲ್ಲಿ ಘರ್ಷಣೆ ಉಂಟಾದಲೆಲ್ಲ ಎಲ್ಲರು ನಮ್ಮ ದೇಶದಲ್ಲಿ ಒಂದೇ ಮಾತುಗಳನ್ನ ನಾವು ಕೇಳಬಹುದು, ಅದು ಏನೆಂದರೆ ಚೀನಿ ವಸ್ತುಗಳನ್ನ ಬಹಿಷ್ಕರಿಸಿ ಯನ್ನುವುದು. ಆದರೆ ಒಂದು ಸರಿ ನಿಮ್ಮೆದೆ ಮೇಲೆ ಕೈಯಿಟ್ಟುಕೊಂಡು ಹೇಳಿ, ಚೀನಾದ ಎಲ್ಲ ವಸ್ತುಗಳನ್ನು ಬಹಿಷ್ಕರಿಸಿ ಬಿಡೋದಕ್ಕೆ ಸಾಧ್ಯವೇ?

ನಾವು ಬಳಕೆ ಮಾಡುವುದು ಎಲ್ಲವೂ ಮೇಡ್ ಇನ್ ಚೀನಾ ಇರುತ್ತವೆ. ನಮ್ಮ ಕಂಪ್ಯೂಟರ್ಗಳು ಮೇಡ್ ಇನ್ ಚೀನಾ, ನಮ್ಮ ಸೆಲ್ಫೋನ್ಗಳು ಮೇಡ್ ಇನ್ ಚೀನಾ ಕಡೆಗೆ ಸ್ವದೇಶಿ ಕಂಪನಿ ಅಂತ ಹೇಳಿಕೊಳ್ಳುವಷ್ಟು ಎಲೆಕ್ಟ್ರಾನಿಕ್ಸ್ ಕಂಪನಿಗಳು ತಮ್ಮ ವಸ್ತುಗಳನ್ನು ತಯಾರುಮಾಡುವುದು ಚಿನಾದಲ್ಲಿಯೇ. ಇನ್ನು ಅಮೇರಿಕಾದ ಐಫೋನ್ ಐಪ್ಯಾಡ್ ಎಲ್ಲವೂ ತಯಾರಗೋದು ಚಿನದಲ್ಲಿಯೇ! ಅವುಗಳ ಮೇಲೆ ಇರೋದು ಕೂಡ ಮೇಡ್ ಇನ್ ಚೀನಾ ಲೇಬಲ್.

ಚೀನಾ ಉತ್ಪಾದನಾ ಕ್ಷೇತ್ರದಲ್ಲಿ ಅತ್ಯಂತ ವ್ಯಾಪಿಸಿಕೊಂಡಿದಕ್ಕೆ ಕಾರಣವೇನು? ನಾವು ಬಳಸುವ ಆಹಾರ ಪದಾರ್ಥಗಳನ್ನು ಬಿಟ್ರೆ ಭಾರತದ ಹೋಟೆಲುಗಳಲ್ಲಿ ನಮ್ಮ ಫುಟ್ ಪಾತ್ ಗಳಲ್ಲಿ ನಾವು ತಿನ್ನುವ ಚಿನಿಸ್ ಪುಡ್ನ ಹೊರತುಪಡಿಸಿದರೆ ಉಳಿದೆಲ್ಲ ಎಲೆಕ್ಟ್ರೋನಿಕ್ ಐಟೆಮ್ಸ ಚೀನಾದಲ್ಲಿ ತಯಾರಾಗುವುದಕ್ಕೆ ಕಾರಣಗಳೇನು?

ಪಟಾಕಿಗಳಿಂದ ಹಿಡಿದು ರೋಬೋಗಳವರೆಗೆ ಕ್ಯಾಮರಾಗಳಿಂದ ಹಿಡಿದು ಜಗತ್ತಿನ ಅತಿ ದೊಡ್ಡ ಮಿಷನರಿಗಳ ವರೆಗೆ ಪ್ರತಿಯೊಂದು ಚೀನಾ ತಯಾರಿಸುವುದಕ್ಕೆ ಸಾಧ್ಯವಾಗ್ತಿರುವುದು ಹೇಗೆ? ನಾವು ಬಳಸುವ ಬಹುತೇಕ ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಅಂತಯಾಕಿರುತ್ತದೆ? ಈ ಪ್ರಶ್ನೆಗೆ ಸಾಮಾನ್ಯವಾಗಿ ನಮಗೆ ಸಿಗುವ ಉತ್ತರ ಏನು ಅಂದ್ರೆ ಚೀನಾದಲ್ಲಿ ಲೇಬರ್ ಚೀಪು ಉತ್ಪಾದನಾ ವೆಚ್ಚ ಕಡಿಮೆ ಅನ್ನೋ ಕಾರಣಕ್ಕೆ ಎಲ್ಲ ಕಂಪನಿಗಳು ಎಲ್ಲವನ್ನು ಅಲ್ಲಿಯೇ ತಯಾರಿಸುತ್ತಾರೆ ಅನ್ನೋದು ನಿಜಾನ?

ಇವತ್ತು ಇಡೀ ಜಗತ್ತನ್ನು ಆವರಿಸುವುದಕ್ಕೆ ಇದೊಂದೇ ಕಾರಣವೇ? ಚೀನಾ ಅನ್ನುವುದು ಅಪ್ಪಟ ಕಮ್ಯುನಿಸ್ಟ್ ರಾಷ್ಟ್ರ, ಅಲ್ಲಿ ಲೇಬರ್ ಕಡಿಮೆ ವಿರುವುದು ಸಾಧ್ಯವಿಲ್ಲ, ಹಾಗಾದ್ರೆ ಭಾರತದಲ್ಲಿನ ಕಮ್ಯುನಿಸ್ಟ್ ಆಡಳಿತದ ರಾಜ್ಯಗಳಲ್ಲಿ ಕೂಡ ಹೀಗೆ ಇರಬೇಕಿತ್ತಲ್ಲವೇ?

ನಿಮಗೆ ನೆನಪಿರಲಿ ಈಗಿನ ಚೀನಾ, ಮಾವೋ ಪ್ರೆಸಿಡೆಂಟ್ ಆಗಿ ಇದ್ದ ಚಿನಗಿಂತ ಬಹಳ ವ್ಯತ್ಯಾಸವಿದೆ. ಮಾವೋ ಕಾಲದಲ್ಲಿ ಉತ್ಪಾದನೆ, ವ್ಯಾಪಾರ ಪ್ರತಿಯೊಂದನ್ನು ಸರ್ಕಾರವೇ ನೋಡಿಕೊಳ್ಳುತ್ತಿತ್ತು. ಚೀನಿ ಪ್ರಜೆಗಳಿಗೆ ತಮಗಾಗಿ ಏನನ್ನೂ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ ಆದರೆ 1976ರಲ್ಲಿ ಮಾವೋ ವಿಧಿವಶರಾದ ನಂತರ ಚೀನಾದ ಆಡಳಿತ ಹಾಗೂ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳಾದವು ಕೈಗಾರಿಕೀಕರಣಕ್ಕೆ ಆದ್ಯತೆ ಕೊಡಲಾಯಿತು.

ಚೀನಾದಲ್ಲಿ ಫ್ಯಾಕ್ಟರಿಗಳು ಶುರುವಾದವು. ಕಾಲಕ್ರಮೇಣ ಚೀನಾದಲ್ಲಿ ಜಾಗ ಇದ್ದಲೆಲ್ಲ ಫ್ಯಾಕ್ಟರಿಗಳು ತುಂಬಿಕೊಂಡವು. ಈಗ ಚೀನಾ ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ರಫ್ತು ದೇಶ. ಅಮೇರಿಕಾ ಕೂಡ ಒಂದೇ ವರ್ಷದಲ್ಲಿ 220 ಬಿಲಿಯನ್ ಡಾಲರ್ ಗಳಷ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಪ್ರತಿವರ್ಷ ಭಾರತ ಮಾರುಕಟ್ಟೆಗೆ 57 ಬಿಲಿಯನ್ ಡಾಲರ್ಗಳಷ್ಟು ವಸ್ತುಗಳು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.

ಚೀನಾ ಇವತ್ತು ನಾನಾ ರಾಷ್ಟ್ರಗಳ ಜನರ ಹಣ ಮತ್ತು ಉದ್ಯೋಗ ಕಸಿದುಕೊಂಡು ಒಂದು ದೊಡ್ಡ ದೈತ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆದರೆ ಚೀನಾ ಅನ್ನೋ ದೇಶ ಹೇಗೆ ರಫ್ತು ಮಾರುಕಟ್ಟೆಯಲ್ಲಿ ದೈತ್ಯನಾಗಿ ಬೆಳೆಯೋದಕ್ಕೆ ಸಾಧ್ಯವಾಯಿತು, ಈ ಪ್ರಶ್ನೆಗೆ ಉತ್ತರ ಹುಡುಕಬೇಕು ಅಂದರೆ ಕಳೆದ 40 ವರ್ಷಗಳಲ್ಲಿ ಆದೇಶ ಗಳಿಸಿಕೊಂಡಿರುವ ಶಕ್ತಿ ಎಂಥದ್ದು ಅನ್ನೋದು ನಮಗೆ ಅರ್ಥ ಆಗಬೇಕು.

ಚೀನಾದಲ್ಲಿಲೇಬರ್ ಖರ್ಚು ಕಡಿಮೆ ಹಾಗಾಗಿ ಎಲ್ಲ ಕಂಪನಿಗಳು ತಮ್ಮ ವಸ್ತುಗಳನ್ನು ಚೀನಾದಲ್ಲಿ ತಯಾರಿಸುತ್ತಾರೆ ಎನ್ನುವುದಾದರೆ, ಕಡಿಮೆ ಬೆಲೆ ಕೆಲಸದವರು ಸಿಗುವ ಸಾಕಷ್ಟು ದೇಶಗಳು ಜಗತ್ತಲ್ಲಿ ಇಲ್ಲವೇ ಅಲ್ಲಿಗೆ ಯಾಕೆ ಕಂಪನಿಗಳು ಹೋಗ್ತಿಲ್ಲ? ಚೀನಾ ಕೈಗಾರಿಕರಣವನ್ನು ತೆರೆಯುತ್ತಿದಂತಲೆ ಅಲ್ಲಿ ಕೆಲಸಗಾರರ ಕ್ಷಮತೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಾಕಿತು.
ಇವತ್ತು ಒಬ್ಬ ಅಮೆರಿಕನ್ ಒಂದು ವಾರದಲ್ಲಿ ಮಾಡಬಹುದಾದ ಕೆಲಸವನ್ನು ಚೀನಿಯರು ಎರಡು ದಿನಗಳಲ್ಲಿ ಮುಗಿಸುತ್ತಾರೆ.

ಉದಾಹರಣೆಗೆ, ಐಫೋನ್ ತನ್ನ ಸ್ಕ್ರೀನನ್ನು ಬದಲಾವಣೆ ಮಾಡಿ ಒಂದೇ ತಿಂಗಳಲ್ಲಿ ಪ್ರಾಡಕ್ಟನ್ನು ಮಾರುಕಟ್ಟೆಗೆ ಬರಬೇಕು ಅಂದುಕೊಂಡಾಗ ಚೀನಾದ ತಯಾರಿಕಾ ಕಂಪನಿ ಒಂದೇ ದನದಲ್ಲಿ 8000 ಕಾರ್ಮಿಕರನ್ನು ಒಗ್ಗೂಡಿಸಿ 10000ಐಫೋನು ಗಳಂತೆ ಸತತ 96 ಗಂಟೆಗಳ ಕಾಲ ಕೆಲಸ ಮಾಡುತ್ತಿತ್ತು. ಇದು ಚೀನಾದ ತಾಕತ್ತು. ಇಲ್ಲಿ ನುರಿತ ಕೆಲಸಗಾರರು ಸಿಗುತ್ತಾರೆ ಮತ್ತು ಅವರು ಮೈ ಬಗ್ಗಿಸಿ ದುಡಿತಾರೆ. ಇನ್ನು ಚೀನಾದಲ್ಲಿ ಎಲ್ಲ ರೀತಿಯ ಕಾರ್ಖಾನೆಗಳು ಇವೆ.

ಅಲ್ಲಿ ಕನೆಕ್ಟಿವಿಟಿ ಅನ್ನೋದು ಸಮಸ್ಯೆನೆಯಿಲ್ಲ. ಅಷ್ಟು ದೊಡ್ಡ ದೇಶದಲ್ಲಿ ಉತ್ತಮವಾದ ರೈಲು ಸಂಪರ್ಕ ಹಾಗೂ ಅತೀ ವೇಗದ ರೈಲುಗಳು ಇರುವುದರಿಂದ ದೇಶದ ನಾನಾ ಭಾಗಗಳನ್ನು ಏರ್ಪೋರ್ಟ್ ಮತ್ತು ಪೋರ್ಟ್ಗಳ ಜೊತೆಗೆ ಜೋಡಿಸೋದು ಸುಲಭವಾಗಿದೆ. ಸಾವಿರಾರು ಕಾರ್ಖಾನೆಗಳು ಸಮುದ್ರದ ತೀರದಲ್ಲಿಯೇ ಇರುವುದರಿಂದ ತಯಾರಿಸಿದ ವಸ್ತುಗಳನ್ನ ಆದಷ್ಟು ಬೇಗ ಅನ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಕಾರ್ಮಿಕರ ಮುಷ್ಕರ ಕೂಡ ಇಲ್ಲ. ಟ್ರಾನ್ಸ್ಪೋರ್ಟೇಷನ್ ಕೂಡ ಅತಿ ಸುಲಭವಾಗಿದೆ.

ಯಾವುದಕ್ಕೂ ಅಲ್ಲಿ ಕೊರತೆ ಇಲ್ಲ. ಇದೆರೆಲ್ಲರ ಜೊತೆ ಅಲ್ಲಿ ಪೊಲಿಟಿಕಲ್ ಸ್ಟೇಬಿಲಿಟಿ ಇದೆ. ಈ ಎಲ್ಲ ಕಾರಣಗಳಿಂದ ಚೀನಾ ಆರ್ಥಿಕವಾಗಿ ಗಟ್ಟಿಗೊಳ್ತಿರೋದೆ ಅಲ್ಲ ವಿಶ್ವ ಮಾರುಕಟ್ಟೆಗಳನ್ನ ಆಳುವುದಕ್ಕೆ ಆ ದೇಶಕ್ಕೆ ಸಾಧ್ಯವಾಗಿದೆ. ಹಾಗಂತ ಆ ಡ್ರ್ಯಾಗನ್ ದೇಶ ಮುಂದೇನು ಹೀಗೆ ಇರುತ್ತಾ, ಅದು ಆ ದೇವರಿಗೆ ಗೊತ್ತು. ಯಾಕೆ ಅಂದ್ರೆ ಅತಿಯಾದ ಕೈಗಾರಿಕರಣ ಚೀನಾದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಮುಂದೆ 10 ವರ್ಷದ ನಂತರ ನೀವು ಚೀನಾದಲ್ಲಿ ವಾಸಮಾಡ್ತೀನಿ ಅಂದ್ರು, ಅಲ್ಲಿ ನಿಮಿಷಕ್ಕೆ 5 ಸಿಗರೇಟ್ ಸೇದಿದಷ್ಟು ಹೊಗೆ ನಿಮ್ಮ ಶತೀರವನ್ನು ಸೇರಿಕೊಳ್ಳುತ್ತದೆ. ವಿಶ್ವದ ನಾನಾ ದೇಶಗಳ ಮೇಲಿನ ಮಾರುಕಟ್ಟೆ ಅವಲಂಬನೆ ಕೂಡ ಮುಂದೊಂದಿನ ಚೀನಾದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಅದು ಪಾಕಿಸ್ತಾನ ಸೇರಿದಂತೆ ಹಲವು ಏಷ್ಯಾಯದ ದೇಶಗಳ ಮೇಲೆ ತನ್ನ ಬಂಡವಾಳ ಹೂಡುವ ಮೂಲಕ ತನ್ನ ಜನರಿಗೆ ಹೊಸ ಕೆಲಸ ಗಳನ್ನು ಕೊಡುವ ಪ್ರಯತ್ನದಲ್ಲಿದೆ.

ಒಂದು ಬಲಿಷ್ಠ ನಾಯಕತ್ವ ಮತ್ತು ಸ್ಥಿರ ಸರ್ಕಾರ ಹಾಗೂ ಅಲ್ಲಿನ ನಾಯಕರ ದೂರಲೋಚನೆ ಹಾಗೂ ಇಚ್ಚಾಶಕ್ತಿಗಳು ಇವತ್ತು ಚೀನಾದ ವಸ್ತುಗಳ ಮೇಲೆ ಇಡೀ ಜಗತ್ತು ಇವತ್ತು ಆಧಾರ ಪಡುವ ಹಾಗೆ ಮಾಡಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿ ಅಲ್ಲ.

ನಮ್ಮ ಭಾರತದ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಚೀನಾ ನ ಸಡ್ಡು ಹೊಡಿಯೋದಕ್ಕೆ ಆಗ್ಲಿ ಹತ್ತಿರ ಹೋಗಕ್ಕೆ ಕೂಡ ಅದು ಎಷ್ಟು ವರ್ಷಗಳು ಬೇಕಾಗಬಹುದೇನೋ

ಇದೇ ಜಗತ್ತಿನ ಬಹುತೇಕ ವಸ್ತುಗಳು ಮೇಡ್ ಇನ್ ಚೀನಾ ಇರುವ ಕಾರಣಗಳು. ಇದನ್ನು ನಿಮ್ಮವರೊಂದಿಗೆ ಶೇರ್ ಮಾಡಿ.

– ಮನನ್ ಜೈನ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ಯಶಸ್ವಿ ಯೋಗ ದಿನಾಚರಣೆ

Published

on

ಜೂನ್ 21 ರಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ‌.2015ರಿಂದ ಆಚರಣೆಗೆ ಬಂದಿರುವುದು “ಯೋಗ ಡೇ” ಪ್ರಧಾನಿ ಮೋದಿ ಅವರ ಕನಸೂ ಹೌದು. ದೇಶವ್ಯಾಪ್ತಿಯಾಗಿ ಚಿನ್ನರು-ಹಿರಿಯರು ಎಂಬ ಬೇಧವಿಲ್ಲದೆ,  ಸರ್ವರೂ ಯೋಗ ಮಾಡಿ ರೋಗ ನಿವಾರಣೆ ಗೆ ಅಡಿಪಾಯ ಹಾಕಿದರು.

ಚಿತ್ರರಂಗದ ಗಣ್ಯರು, ತಾರಾಮಣಿಯರು, ಕ್ರೀಡಾಪಟುಗಳು ಸೋಷಿಯಲ್ ಮೀಡಿಯಾದಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ದ ಮಹತ್ವ ಸಾರುವ ಪೋಸ್ಟ್ ಮಾಡಿ ವೈರಲ್ ಆದರು.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/By97NtjBIXc/?utm_source=ig_web_button_share_sheet

ಬೆಂಗಳೂರಿಗರು ನಾವೇನು ಕಮ್ಮಿ ಎಂಬಂತೆ ,ವಾರದ ದಿನವಾದರೂ, ತಮ್ಮ ಕಚೇರಿ ಕೆಲಸದ ಮಧ್ಯೆಯೂ, ಎಲ್ಲೆಲ್ಲೂ ಯೋಗ ದಿನಾಚರಣೆ ಕಳೆ ಕಟ್ಟಿತ್ತು. ಹಲವಾರು ಖಾಸಗಿ ಕಂಪನಿಗಳು, ಶಾಲಾ-ಕಾಲೇಜು ಕ್ಯಾಂಪಸ್ ಗಳಲ್ಲಿ  ಆರೋಗ್ಯವರ್ಧಕ ಯೋಗಾಸನಗಳ ಮಹತ್ವದ ಅರಿವು ಮೂಡಿಸಲಾಯಿತು.

ಸದಾ ಕಾಲಾ ಮನೆ-ಮಕ್ಕಳು ಎಂದು ಬಿಜಿ ಆಗಿರುವ ಮಹಿಳೆಯರು ಕೂಡಾ ತಮ್ಮ ಕಿಟ್ಟಿ ಪಾರ್ಟಿಗಳಿಂದ ಹೊರಬಂದು ಯೋಗ ಆಸನಗಳನ್ನು ಅಪಾರ್ಟ್ಮೆಂಟ್ ಗಳಲ್ಲಿ ದಿನನಿತ್ಯ ವೂ ರೂಢಿಸಿಕೊಂಡಿರುವುದು ಸ್ವಾಗತಾರ್ಹ. ಆಧುನಿಕ ಫಿಟ್ನೆಸ್ ಸೆಂಟರ್ಗಳ ಜುಂಬಾ , ಏರೋಬಿಕ್ಸ್, ಜಿಮ್, ಪ್ರಭಾವಳಿಯ ನಡುವೆಯೂ ಭಾರತೀಯ ಸೊಗಡಿನ ಸಾಂಪ್ರದಾಯಿಕ ಯೋಗ ಆಸನಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿದ್ದಾರೆ ಹಲವಾರು ಮಹಿಳೆಯರು.

ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ, ಜೆಲ್.ಪಿ.ನಗರದ ಮಹಾವೀರ ರಿವಿಯೆರಾ ಅಪಾರ್ಟ್ಮೆಂಟ್ ನಿವಾಸಿಗಳು “ಯೋಗ ದಿನಾಚರಣೆಯನ್ನು” ಅರ್ಥಪೂರ್ಣ ವಾಗಿ ಆಚರಿಸಿದ್ದಾರೆ. ಅಪಾರ್ಟ್ಮೆಂಟ್ ಕಲ್ಚರ್ ಹೆಚ್ಚಿರುವ ಬೆಂಗಳೂರಿನಲ್ಲಿ, ಎಸ್.ಎಲ್.ವಿ ಸ್ಪ್ಲೆಂಡರ್, ಸೇರಿದಂತೆ ಹಲವಾರು ಕಡೆಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕ್ಲೌಡ್ ಆರ್ಟ್ ಎಂಬ ಮಾಯೆ..!

Published

on

ಬಿರು ಬಿಸಿಲಿನ ಬೇಗೆಗೆ ಬಸವಳಿದಿದ್ದ ಜನರಿಗೆ ತಂಪೆರಗುತ್ತಿದೆ ಜೂನ್ ತಿಂಗಳ ಮುಂಗಾರು ಮಳೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವ ಬೆನ್ನಲ್ಲೇ ಫ್ಯಾಷನ್ ಋತುಮಾನವೂ ಬದಲಾಗಿದೆ.2019 ರ ಮಾನ್ಸೂನ್ ವಿಶೇಷ ಏನು? ಯಾವ ಟ್ರೆಂಡ್ ಅನುಕರಿಸಬೇಕು! ಯಾವ ಫುಟ್ವೇರ್ ಟ್ರೆಂಡಿಂಗ್? ಯಾವ ಮಾನ್ಸೂನ್ ಲುಕ್ ಸ್ಟೈಲಿಶ್? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೋ ಇಲ್ಲಿದೆ ನೋಡಿ.

ನೀಲಿ ಆಗಸದ ತುಂಬೆಲ್ಲಾ ಕಪ್ಪು-ಬಿಳಿ ಮೋಡಗಳ ತುಂಟಾಟ. ಆಗೊಮ್ಮೆ ಈಗೊಮ್ಮೆ ಸುರಿಯುವ ವರ್ಷ ಧಾರೆ. ಈ ಸುಂದರ ರಮಣೀಯ ದೃಶ್ಯ ಕಣ್ಣಿಗೆ ಕಟ್ಟುವಂತೆ ಇರುವಾಗಲೇ, ಈ  ಕ್ಲೌಡ್ ಆರ್ಟ್ ಗರಿಗೆದರಿ ನಿಂತಿದೆ. ಸುಂದರ ಕೇಶರಾಶಿಯ ಮೇಲೆ ಮುದ್ದು ಮುದ್ದಾದ ಮೋಡಗಳ ಚಿತ್ರ ಸ್ಟೆಂಸಿಲ್ ಮಾಡಲಾಗುತ್ತಿದೆ. ಕ್ಲೌಡ್ ಸ್ಟೇಂಸಿಲ್ ಹೇರ್ ಸ್ಟೈಲ್ ಸದ್ಯ ಸೋಷಿಯಲ್ ಮೀಡಿಯಾ ದಿಲ್ಲಿ ಹಾಟ್ ಫೇವರಿಟ್ ಆಗಿದೆ.

ಯುವತಿಯರಂತೂ ಈ ವಿನೂತನ ಪ್ರಯೋಗಕ್ಕೆ ಕ್ಲೀನ್ ಬೋಲ್ಡ್. ಚೆಂದುಳ್ಳಿ ಚೆಲುವೆಯರ ಕೇಶರಾಶಿಯ ಮೇಲೆ ಮೋಡಕವಿದ ವಿಚಾರಣೆ ಸೃಷ್ಟಿ ಆಗಿದ್ದು, ತುಂತುರು ಮಳೆ ಹನಿಗಳ ಝಲಕ್ ಕಾಣಸಿಗುತ್ತವೆ.

https://www.instagram.com/p/BC18iz2Pslp/?igshid=12aocna4hmi2r

ಚಿತ್ರಶ್ರೀ ಹರ್ಷ

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕಾರಹುಣ್ಣೀಮೇಯ ಕರಿ ಹರಿಯಲು ಸಜ್ಜಾದ ಕರುನಾಡು

Published

on

ತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಕಾರಹುಣ್ಣಿಮೆ ಒಂದಾಗಿದೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ಕೆಲ ಕಡೆ ಒಂದಷ್ಟು ಅವಘಡಗಳು ಸಂಭವಿಸಿದರೂ ಒಟ್ಟಾರೆ ಕಾರಹುಣ್ಣಿಮೆ ಹಬ್ಬ ರೈತಾಪಿ ವರ್ಗದ ಕಳೆಯೇರಿಸಿದ್ದಂತೂ ಹೌದು. ಉತ್ತರ ಕರ್ನಾಟಕದದಲ್ಲಿ ವಿಭಿನ್ನ, ಹಾಗೂ ರೈತರು ನಂಬಿಕೆಯಿಂದ ಕಾರ ಹುಣ್ಣಿಮೆ ಆಚರಿಸುವ ಪದ್ಧತಿ ತಲೆತಲಾಂತರದಿಂದ ಬಂದಿದೆ.

ಹಬ್ಬದ ಅಂಗವಾಗಿ ನಗರ ಹಾಗೂ ಹಳ್ಳಿಗಳಲ್ಲಿ ವಿವಿಧೆಡೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಗುತ್ತದೆ. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ರೈತರು ವಿವಿಧ ಬಗೆ ಶೃಂಗಾರದ ವಸ್ತುಗಳನ್ನು ಹಾಕುತ್ತಾರೆ. ಇನ್ನು ಎತ್ತು, ಹೋರಿಗಳ ಕೊಂಬುಗಳಿಗೆ ಬಣ್ಣ ಬಳೆಯುತ್ತಾರೆ. ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡುತ್ತಾರೆ.

ಸಂಜೆ ಹಮ್ಮಿಕೊಳ್ಳುವ ಕರಿ ಹರಿಯುವ ಸಂರ್ಭಮದಲ್ಲಿ ಭಾಗವಹಿಸಿ ರೋಮಾಂಚನಗೊಳಿಸುತ್ತಾರೆ. ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿ ಕಾರಹುಣ್ಣಿಮೆಯ ಕರಿ ಹರಿವುವ ಕಾರ ಹುಣ್ಣಿಮೆ ನಿಮಿತ್ತ ವಿಶೇಷವಾಗಿ ಶೃಂಗಾರಗೊಂಡಿರುವ ಎತ್ತು ಹೋರಿಗಳಿಗೆ ವಿವಿಧ ಬಗೆಯ ಭಕ್ಷ್ಯಗಳಾದ ಹೋಳಿಗೆ, ಕಡುಬು ಖಾದ್ಯಗಳನ್ನು ಮಾಡಿ ಉಣಬಡಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ ಅಭಿಮಾನ ಮೆರೆಯುತ್ತಾರೆ.

ಎತ್ತು ಹೋರಿಗಳಿಗೆ ಉಣಿಸುವ ಸಂಪ್ರದಾಯ ಉತ್ತರ ಕರ್ನಾಟಕದಾದ್ಯಂತ ರೂಢಿಯಲ್ಲಿದೆ. ಗ್ರಾಮದ ರೈತರು ಹಾಗೂ ಯುವಕರು ಶೃಂಗರಿಸಿ ತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸಿ ಸಂಭ್ರಮಪಡುತ್ತಾರೆ. ನಂತರ ರೈತರು ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು. ಇದರ ಅಂಗವಾಗಿ ನಗರದ ಸುತ್ತ-ಮುತ್ತಲಿರುವ ವಿವಿಧ ಹಳ್ಳಿಯ ಜನರು ಎತ್ತುಗಳ ಕರಿ ಹರಿಯುವ ವಿಶಿಷ್ಠ ಆಚರಣೆಗೆ ನೂರಾರು ರೈತರು, ಗ್ರಾಮದ ಮಹಿಳೆಯರು ಹಾಗೂ ಯುವಕರು ಸಾಕ್ಷಿಯಾಗುತ್ತಾರೆ.

ಇದಕ್ಕೂ ಮೊದಲು ಮಹಿಳೆಯರು ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ, ಈ ವರ್ಷನಾದ್ರೂ ಉತ್ತಮ ಮಳೆ-ಬೆಳೆ, ಸಿರಿ-ಧಾನ್ಯ ಸಂಪತ್ತು ಉತ್ತಮ ರೀತಿಯಲ್ಲಿ ನೀಡಿ ನಮ್ಮನ್ನು ಉದ್ದರಿಸು ಎಂದು ಭೂ ತಾಯಿ ಹಾಗೂ ಗೋಮಾತೆಯಲ್ಲಿ ಮೊರೆಯಿಡುತ್ತಾರೆ. ಅಲ್ಲದೆ ಸಮೀಪದ ಅರಳಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಂಗಾರನ್ನು ಬರಮಾಡಿಕೊಳ್ಳುತ್ತಾರೆ. ಕಾರಹುಣ್ಣಿಮೆ ದಿನದಂದು ಎತ್ತು, ಹೋರಿಗಳಿಗೆ ಕೃಷಿ ಚಟುವಟಿಕೆ ಯಿಂದ ವಿರಾಮ ನೀಡಲಾಗಿರುತ್ತೆ. ಹಬ್ಬದ ಅಂಗವಾಗಿ ಮನೆಯಲ್ಲಿ ತಯಾರಿಸಿದ ವಿಶೇಷ ಸಿಹಿ ಖಾದ್ಯಗಳನ್ನು ಸವಿದು ಸಂಭ್ರಮ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಆಕರ್ಷಣೆಯಾಗಿರುತ್ತದೆ.

ಕಾರಹುಣ್ಣಿಮೆಯ ಉದ್ದೇಶ

ಕಾರಹುಣ್ಣಿಮೆ ದಿನದಂದು ಪ್ರಮುಖವಾಗಿ ಎತ್ತು, ಹೋರಿಗಳೇ ಆಕರ್ಷಣೆಯಾಗಿರುತ್ತವೆ.
ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ ಕಾರ್ಯಕ್ರಮವೂ ಒಂದು. ಕಾರಹುಣ್ಣಿಮೆಯಂದು ಸಂಜೆಯಾಗುತ್ತಿದಂತೆ ಕರಿ ಹರಿಯುವ ಸಮಾರಂಭ ಹಮ್ಮಿಕೊಳ್ಳಲಾಗಿರುತ್ತೆ. ಊರ ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣದ ನಡುವೆ ಕೊಬ್ಬರಿ, ಶೇಂಗಾ, ಬೆಲ್ಲ, ಪುಟ್ಟಾಣಿ, ಚುರುಮುರಿ, ಉತ್ತತ್ತಿ ಹಾಗೂ ಕಲ್ಲುಸಕ್ಕರೆಯನ್ನು ಕಟ್ಟಲಾಗಿರುತ್ತೆ.

ಕರಿ ಹರಿಯಲು ಬಿಳಿ, ಹಾಗೂ ಕೆಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಹಲಗೆ ಸದ್ದು ಮಾಡುತ್ತಿದ್ದಂತೆ ಅಗಸಿ ಎದುರಿಗೆ ಕರಿ ಹರಿಯಲು ಎತ್ತುಗಳೊಂದಿಗೆ ರೈತರು ತಾ ಮುಂದು ನೀ ಮುಂದು ಎಂದು ಎತ್ತುಗಳನ್ನು ಓಡಿಸಿಕೊಂಡು ಬಂದು ಕರಿ ಹರಿಯುತ್ತಾರೆ. ಕರಿಯುವ ಓಟದಲ್ಲಿ ಇತರೆ ರೈತರು ಕೇಕೆ ಹಾಕಿ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಕರಿಹರಿಯುತ್ತೋ ಆ ಬಣ್ಣದ ಬೆಳೆ ಚೆನ್ನಾಗಿ ಬರುತ್ತೆ ಅನ್ನುವ ನಂಬಿಕೆ ರೈತರದ್ದಾಗಿದೆ.

ಈ ಬಾರಿಯ ಕಾರಹುಣ್ಣಿಮೆ ಹಬ್ಬದಂದು ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಕಾರಹುಣ್ಣಿಮೆ ಕರಿ ಹರಿಯುವ ಸಂಪ್ರದಾಯದ ನಡೆಸಲು ಎಲ್ಲ ಜನರು ಎತ್ತುಗಳ ಓಟದ ಕರಿ ಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ರೈತರು ಸಾಕ್ಷಿಯಾಗಲು ಕಾತುರರಾಗಿದ್ದಾರೆ. ಈ ಬಾರಿ, ಓಟದಲ್ಲಿ ಯಾವ ಬಣ್ಣದ ಎತ್ತು ಮೊದಲ ಸ್ಥಾನದಲ್ಲಿ ಓಡಿ ಬಂದು ಕರಿ ಹರಿಯಲಿದೆ ಎನ್ನುವುದೆ ಒಂದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ಬಿಳಿ ಎತ್ತು ಮೊದಲು ಕರಿ ಹರಿದ್ರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆ.

ಇನ್ನು ಕೆಂದು ಬಣ್ಣದ ಕರಿ ಹರಿದ್ರೆ ಮುಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆ ಯನ್ನು ರೈತರು ಹೊಂದಿದ್ದಾರೆ. ಯಾವ ಬಣ್ಣದ ಎತ್ತು ಮೊದಲು ಬರುತ್ತದೆವೋ ಆ ಬೆಳೆ ಬಿತ್ತಲೂ ಕಾತೂರರಾಗಿದ್ದಾರೆ. ಇತ್ತ ಎತ್ತುಗಳು ಒಂದೆಡೆ ಕಂಡು ಬಂದ್ರೆ, ಸಾಲು ಸಾಲಾಗಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ರೈತ್ರು ಕೇಕೆ ಹಾಕಿ ಸಂಭ್ರಮಿಸಿದ್ರು. ಇನ್ನು ಮೊದಲು ಕರಿ ಹರಿದ ಎತ್ತಿಗೆ ರೈತರೆಲ್ಲರೂ ಸೇರಿ ಮೆರವಣಿಗೆ ಮಾಡುತ್ತಾರೆ.

ಕೆಲವು ಕಡೆಗಳಲ್ಲಿ ಕರಿ ಹರಿದ ಬಳಿಕ ಗುಂಡು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿರುತ್ತೆ. ವರ್ಷವಿಡೀ ಕೃಷಿಯಲ್ಲಿ ತೊಡಗಿದ ರೈತರು ದೈಹಿಕ ಕಸರತ್ತು ನಡೆಸುವ ಮೂಲಕ ಕ್ರೀಡಾ ಮನೋಭಾವ ಮೆರೆಯುತ್ತಾರೆ. ಆನಂತರ ಶಕ್ತಿ ದೇವತೆಗಳ ದೇಗುಲಗಳಿಗೆ ತೆರಳಿ ರೈತರು ಮಳೆ ಕುರಿತಾಗಿ ದೇವರ ಹೇಳಿಕೆಯನ್ನು ಕೇಳುತ್ತಾರೆ. ಒಟ್ಟಿನಲ್ಲಿ ಕಾರಹುಣ್ಣಿಮೆ ಎಂದರೆ ರೈತರ- ಎತ್ತುಗಳ ಹಬ್ಬ ಅಂತಾನೆ ಫೇಮಸ್..

ಇನ್ನು ಕಪ್ಪು ಬಣ್ಣದ ಎತ್ತು ಅಪಶಕುನ ಎನ್ನುವ ಕಾರಣಕ್ಕೆ ಕರಿ ಹರಿಯಲು ಕಪ್ಪು ಬಣ್ಣದ ಎತ್ತನ್ನು ಓಟಕ್ಕೆ ಬಿಡುವುದಿಲ್ಲ.ಇನ್ನೊಂದು ನಂಬಿಕೆ ಎಂದರೆ ಕರಿ ಹರಿದ ಎತ್ತು ಕೈಗೆ ಸಿಗದೆ ಊರಿನ ಸೀಮೆ ದಾಟಿ ಹೋದರೆ ಕರಿ ಹರಿಯುದನ್ನು ನಿಷೇಧಿಸಿ ಕಾರಹುಣ್ಣಿಮೆ ಹಬ್ಬವನ್ನು ಕೈಬಿಡುತ್ತಾರೆ. ಒಟ್ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ-ಬೆಳೆ ಚೆನ್ನಾಗಿ ಬರಲಿ ಎನ್ನುವ ಬರವಸೆಯಲ್ಲಿ ಕಾಯುತ್ತಿದ್ದಾರೆ. ಈ ವರ್ಷನಾದ್ರು ಭೂತಾಯಿ ಹಾಗೂ ವರುಣದೇವರಿಬ್ಬರೂ ಸೇರಿ ರೇತನ ದುಖಃದ ಬದುಕು ಬವಣೆಯನ್ನು ನೀಗಿಸಲಿ ಎಂದು ಆಶಿಸುತ್ತೇವೆ.

  • ಕಾರಹುಣ್ಣಿಮೆ ಹಬ್ಬ ಆಚರಿಸಲು ನಮಗೆ ತುಂಬಾ ಸಂತೋಷ ಇದೆ. ನಾನು ನಮ್ಮ ಎತ್ತುಗಳನ್ನು ಸಹ ಓಟಕ್ಕೆಂದು ಸಿಂಗಾರ ಮಾಡಿ ತಯಾರಿ ಮಾಡುತ್ತಿದ್ದೆವೆ. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಬೆಳೆ ಕಡಿಮೆಯಾಗಿದೆ. ಈ ವರ್ಷನಾದ್ರು ದೇವರು ಉತ್ತಮ ಮಳೆ ಕೊಡುತ್ತಾನೆನೋ ಎನ್ನುವ ಬರವಸಲೆಯಲ್ಲಿ ಅನ್ನದಾತ ಕಾಯುತ್ತಿದ್ದಾನೆ. ಅನ್ನದಾತ ಪ್ರತಿವರ್ಷವು ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಈ ವರ್ಷ ಕಡಿಯಾಗುತ್ತದೆ ಎಂದು ನಂಬಿದ್ದವೆ.
     |ಸಂಗಪ್ಪ. ಚಂ. ಮೇತ್ರಿ (ವಿಜಯಪುರ ರೈತ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending