Connect with us

ಲೈಫ್ ಸ್ಟೈಲ್

ನಿಂಬೆಯ ಅದ್ಭುತ ಪ್ರಯೋಜನಗಳ ಕರಿತು ಅರಿವು ಅವಶ್ಯ !

ನಿಂಬೆ ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ.

Published

on

lemon_benefits_kannada

ನಿಸರ್ಗ ನೀಡಿರುವ ಸಾವಿರಾರು ಫಲಗಳಲ್ಲಿ ನಿಂಬೆ ಹಣ್ಣಿಗೆ ವಿಶಿಷ್ಟ ಸ್ಥಾನವಿದೆ. ರುಚಿಯ ಕಾರಣಕ್ಕೆ ಬಹುತೇಕರಿಗೆ ಪ್ರಿಯವಾದರೆ ಆರೋಗ್ಯದ ದೃಷ್ಟಿಯಿಂದ ನಿಂಬೆಹಣ್ಣು ಅಷ್ಟೇ ಉಪಯೋಗಕಾರಿ. ನಿಂಬೆಹಣ್ಣಿನ ಪ್ರಯೋಜನಗಳ (lemon benefits kannada) ಕುರಿತು ನೀವು ಅರಿತರೆ ಅಕ್ಷರಶಃ ನೀವು ಆಶ್ಚರ್ಯ ಪಡುತ್ತೀರಿ !

ನಿಂಬೆ ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ. ಇದರ ವೈದ್ಯಕೀಯ ಗುಣಕ್ಕಾಗಿ ಬಹು ಹಿಂದಿನಿಂದಲೂ ನಿಂಬೆಹಣ್ಣಿನ ಉಪ್ಪಿನ ಕಾಯಿ ಸೇರಿದಂತೆ ವಿವಿಧ ಪದಾರ್ಥ ತಯಾರಿಸುವ ಪದ್ಧತಿಯಿದೆ.

ಬಹು ಉಪಯೋಗಿ ನಿಂಬೆ (lemon benefits kannada)

 • ನಿಂಬೆ ಹಣ್ಣಿನ ರಸವನ್ನು ಒಂದು ಬಟ್ಟಲಿನಲ್ಲಿ ಹಿಂಡಿ ಅದರಲ್ಲಿ  ಕಲ್ಲು ಸಕ್ಕರೆ ಕರಗಿಸಿ ಸೇವಿಸಿದರೆ ವಾಂತಿ ಅಥವಾ ವಾಕರಿಕೆ ನಿಲ್ಲುತ್ತದೆ. ದೂರದ ಊರುಗಳಿಗೆ ವಾಹನದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಡುವುದು ಉತ್ತಮ ಮಾರ್ಗ.
 • ನಿಮಗೆ ಅಜೀರ್ಣ ಸಮಸ್ಯೆಯಿದ್ದರೆ ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಐದಾರು ಬಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗಿ ಊಟಕ್ಕೆ ಅನುಕೂಲವಾಗುತ್ತದೆ. ಜತೆಗೆ ಹುಳಿ ತೇಗು ನೀವಾರಣೆಗೆ ನಿಂಬೆ ರಸ ಸೇವಿಸುವುದು ಸರಳ ಉಪಾಯ.
 • ನಿಂಬೆಗೆ ಬಳಲಿಕೆ, ದಾಹ, ನೀರಡಿಕೆ ಶಮನ ಮಾಡುವ ಶಕ್ತಿಯಿದೆ. ಇದು ಪಿತ್ತ ವಿಕಾರ ನಿವಾರಣೆಗೆ ರಾಮಬಾಣ.  ಒಂದು ಹೋಳು ನಿಂಬೆ ರಸ ಹಿಂಡಿ ಅದರ ಜತೆಗೆ ಕುರಿ ಹಾಲು ಬೆರೆಸಿ ಸೇವಿಸಿದರೆ ಆಮಶಂಕೆ ನಿವಾರಣೆಯಾಗುತ್ತದೆ.
 • ರಕ್ತದಿಂದ ಹರಡುವ ಕಾಯಿಲೆಗಳ ನಿವಾರಣೆಗೆ ನಿಂಬೆ ಸೇವನೆ ಸರಳ ಮಾರ್ಗ. ಜತೆಗೆ ಮಾದಕ ವಸ್ತುಗಳ ಸೇವೆನೆಯಿಂದ ಬರುವ ರೋಗಳಿಗೆ ನಿಂಬೆ ತಡೆ ಹಾಕುತ್ತದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆ ರಸ ಬೆರೆಸಿ ಅದಕ್ಕೆ ಸಿಟಿಕೆ ಉಪ್ಪು ಹಾಕಿ ಸೇವಿಸಿದರೆ ಉರಿ ಮೂತ್ರದ ಸಮಸ್ಯೆ ಕೂಡಲೇ ಪರಿಹಾರ ವಾಗುತ್ತದೆ.
 • ಕೆಲವರಿಗೆ ಗುದದ್ವಾರದಲ್ಲಿ ಕೆರೆತ ಕಾಣಿಸಿಕೊಳ್ಳುತ್ತದೆ. ಅದರ ಬಗ್ಗೆ ಇತರರಿಗೆ ಹೇಳುವುದು ಕೂಡ ಕಷ್ಟ. ಅಂತಹ ಸಮಯದಲ್ಲಿ ಮೊಸರ ಅನ್ನದಲ್ಲಿ ನಿಂಬೆ ರಸ ಬೆಸರಿಸಿಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ಊಟ ಮಾಡಿದರೆ ಗುದದ್ವಾರದಲ್ಲಿ ಕೆರೆತದ ಸಮಸ್ಯೆ ನಿವಾರಣೆ ಯಾಗುತ್ತದೆ.

Read also:  [ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !

ಜ್ವರಕ್ಕೆ ರಾಮಬಾಣ ನಿಂಬೆ (lemon benefits )

ಕಾಯಿಸಿ ಹಾರಿಸಿದ ನೀರು, ಸಕ್ಕರೆ ಹಾಗೂ ನಿಂಬೆ ರಸ ಬೆರೆಯಿಸಿ ಸೇವಿಸಿದರೆ ಜ್ವರದ ತಾಪ ಕಡಿಮೆಯಾಗುತ್ತದೆ. ಕೆಲವಡೆ ಬಿಸಿ ಟಿಗೆ ನಿಂಬೆ ರಸ ಬೆರೆಯಿಸಿ ಸೇವಿಸುವುದು ಉಂಟು. ಹೀಗೆ ಮಾಡಿದರೆ ನೆಗಡಿ ದೂರವಾಗುತ್ತದೆ. ಅದರಂತೆ ಊಟ ಮಾಡುವುದಕ್ಕೆ ಮುನ್ನ ಒಂದು ಊಟದ ಚಮಚ ನಿಂಬೆ ಹಣ್ಣಿನ ರಸ ಸೇವಿಸಿದರೆ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.

ಪತ್ರಿ ನೂರು ಗ್ರಾಂ ನಿಂಬೆಹಣ್ಣಿನಲ್ಲಿವೆ ಹಲವು ಅಂಶಗಳು

 1. ಸಿ ಅನ್ನಾಂಗ 63 ಮಿಲಿ ಗ್ರಾಂ
 2. ಕಿಲೋ ಕ್ಯಾಲೋರಿ 57 ಮಿಲಿ ಗ್ರಾಂ 
 3. ತೇವಾಂಶ 48.5 ಗ್ರಾಂ
 4. ಪ್ರೋಟೀನ್ 1.5 ಗ್ರಾಂ 
 5. ಖನಿಜಾಂಶ 0.7 ಗ್ರಾಂ 
 6. ಮೇದಸ್ 1.0 ಗ್ರಾಂ 
 7. ಕ್ಯಾಲ್ಸಿಯಂ 90 ಮಿಲಿ ಗ್ರಾಂ 

ಆರೋಗ್ಯ, ಆಹಾರ, ಜೀವನಶೈಲಿ ಕುರಿತು suddidina.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ suddidina@gmail.com  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips #healthtips ಲೈಫ್ ಸ್ಟೈಲ್

ಚಿತ್ರ ವಿಚಿತ್ರ ಕ್ರೇಜೀ ಹೇರ್ ಡೇ ಸಂಭ್ರಮ..!

Published

on

ಭಾರತದ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ದಿನವನ್ನು ಆಚರಿಸುವ ಹಾಗೆ, ಪಾಶ್ಚಾತ್ಯ ದೇಶಗಳಲ್ಲಿ ಚಿನ್ನರ ವಿಚಿತ್ರ ವಿಶಿಷ್ಟ ಕೇಶವಿನ್ಯಾಸಕ್ಕೆಂದೇ ಒಂದು ದಿನ ನಿಗದಿ ಮಾಡಿ, ಕ್ರೇಜಿ ಹೇರ್ ಸ್ಟೈಲ್ ಗಳಲ್ಲಿ ಮಕ್ಕಳು ಮಿಂಚುತ್ತಾರೆ. ಇಲ್ಲಿ ಪೋಷಕರ ಕ್ರಿಯಾಶೀಲತೆಗೆ ಹೆಚ್ಚಿನ ಮಣ್ಣನೆ ನೀಡಲಾಗುವುದು. ದಿ ಬೆಸ್ಟ್ ಕ್ರೇಜಿ ಹೇರ್ ಸ್ಟೈಲ್ ಎಂಬ ಪಾರಿತೋಷಕ ಪ್ರಶಸ್ತಿ ಕೂಡ ನೀಡಲಾಗುತ್ತದೆ.

ಮಕ್ಕಳು ಈ ವಿಶಿಷ್ಟ ದಿನದ ಸಂಭ್ರಮದಲ್ಲಿ ಖುಷಿ ಯಿಂದ ಪಾಲ್ಗೊಂಡು, ತಮ್ಮ ಕ್ರಿಯಾತ್ಮಕತೆ ಮೆರೆಯುತ್ತಾರೆ.ಯುನಿಕಾರ್ನ್, ಪಂಕಿನ್, ಸ್ಪೈಡರ್, ಗೋ ಗ್ರೀನ್, ಬಲೂನ್, ಡ್ರಾಗನ್ , ಬರಗರ್, ಪೀಜಾ, ಶೈಲಿಯ ವಿಚಿತ್ರ ಹಾಗೂ ಫಂಕೀ ಹೇರ್ ಸ್ಟೈಲ್ ಸದ್ಯ ಕ್ರೇಜಿ ಹೇರ್ ಡೇ ಸ್ಪೆಶಲ್ ಆಗಿತ್ತು.

ಕೋಕಾ ಕೋಲಾ ಬಾಟಲ್ ಬಳಸಿ ಮಾಡಲಾದ ಕೇಶವಿನ್ಯಾಸ ಹೆಚ್ಚು ಗಮನ ಸೆಳೆಯಿತು. ಅಂತೆಯೇ, ಪೈನಾಪಲ್ ಹೇರ್ ಸ್ಟೈಲ್ ಕೂಡ ಮಕ್ಕಳ ಫೇವರಿಟ್ ಎನಿಸಿಕೊಂಡಿತು.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ವೈರಲ್ ಆಯ್ತು ಎಂಗೇಜ್ಮೆಂಟ್ ಪಿಯರ್ಸಿಂಗ್ ರಿಂಗ್ ಫ್ಯಾಷನ್..!

Published

on

ಪ್ರೇಮಾಂಕುರ ವಾದೊಡನೆಯೇ ಸುಂದರಿಯ ಕೈ ಬೆರಳಿಗೆ ಉಂಗುರ ತೊಡಿಸಿ, ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ. ಆದರೆ ಇಂದಿನ ಹೈಟೆಕ್ ಯುಗದಲ್ಲಿ , ಚಿನ್ನದ ಆಭರಣಗಳ ಮೋಹ ಕಳೆದುಕೊಳ್ಳುತ್ತಿರುವ ಯುವ ಜನಾಂಗ, ಟ್ಯಾಟೂ ಕ್ರೇಜ್ ಮೈ ಗಿಟ್ಟಿಸಿಕೊಂಡಿದೆ. ಎಂಗೇಜ್ಮೆಂಟ್ ರಿಂಗ್ ಜಾಗವನ್ನ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಆಕ್ರಮಿಸಿಕೊಂಡಿದೆ. ರಿಂಗ್ ಬದಲಾಯಿಸಿಕೊಳ್ಳುವ ಬದಲು, ಹುಡುಗ-ಹುಡುಗಿಯರಿಬ್ಬರೂ ರಿಂಗ್ ಟ್ಯಾಟೂ ಮೊರೆ ಹೋಗುತ್ತಿದ್ದಾರೆ.

ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರೇಮಿಗಳು ಫಿಂಗರ್ ಪಿಯರ್ಸಿಂಗ್ ಎಂಗೇಜ್ಮೆಂಟ್ ರಿಂಗ್ ಎಂಬ ಹೊಸಾ ಫ್ಯಾಷನ್ ಸೃಷ್ಟಿಸಿದ್ದಾರೆ. ವಜ್ರ,ಚಿನ್ನದ ರಿಂಗ್ ಬದಲು, ವಜ್ರದ ಸ್ಟಡ್ , ಚಿನ್ನ-ಬೆಳ್ಳಿಯ ಸ್ಟಡ್ ಗಳನ್ನು ಬೆರಳಿಗೆ ಶಾಶ್ವತವಾಗಿ ಚುಚ್ಚಲಾಗುತ್ತದೆ. ಫಿಂಗರ್ ರಿಂಗ್ ಪಿಯರ್ಸಿಂಗ್ ಸದ್ಯ ಟ್ರೆಂಡಿಂಗ್ ಫ್ಯಾಷನ್ ಸಾಲಿಗೆ ಸೇರಿದ್ದು ನೂತನ ಶೈಲಿಯ ಎಂಗೇಜ್ಮೆಂಟ್ ರಿಂಗ್ ( ಪಿಯರ್ಸಿಂಗ್) ಯುವಪೀಳಿಗೆ ಯಲ್ಲಿ ಸಾಕಷ್ಟು ಫ್ಯಾಷನ್ ಸಂಚಲನ ಮೂಡಿಸಿದೆ.

ಈ ರೀತಿಯ ಫಿಂಗರ್ ಪಿಯರ್ಸಿಂಗ್, ಶಾಶ್ವತ ವಾಗಿದ್ದು, ಇದರ ಗಾಯ ಕೂಡಾ ಶಾಶ್ವತ ವಾಗಿರುತ್ತದೆ. ಬಹಳ ಸೂಕ್ಷ್ಮ ವಾದ ಚರ್ಮ ವಾಗಿರುವ ಕೈ ಬೆರಳಿನ ಮೇಲೆ ಚುಚ್ಚಿಸುವುದು ಅಷ್ಟು ಸುಲಭವಲ್ಲ. ಅತಿಯಾದ ನೋವಿನಿಂದ ಕೂಡಿರುವ ಈ ಫಿಂಗರ್ ಪಿಯರ್ಸಿಂಗ್ ಯುವಪೀಳಿಗೆಯ ಫ್ಯಾಷನ್ ಕ್ರೇಜ್ ಗೆ ಸಾಕ್ಷಿ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಸೆಕ್ಸೀ ಸ್ಟೆಂಸಿಲ್ ‘ಐ’ ಮೇಕಪ್

Published

on

ಮುದ್ದು ಮುಖದ ಸೌಂದರ್ಯ ಹೆಚ್ಚಿಸಲು ಮೇಕಪ್ ಮೊರೆ ಹೋಗುವುದುಂಟು. ಮೇಕಪ್ ದುನಿಯಾದಲ್ಲಿ ದಿನ ದಿನಕ್ಕೂ ಹೊಸ ಟ್ರೆಂಡ್ ಸೃಷ್ಟಿ ಆಗುತ್ತದೆ. ಸದಾ ಹೊಸದನ್ನು ಬಯಸುವ ಸೌಂದರ್ಯ ಪ್ರಿಯರ ಸ್ಟೈಲ್ ನ್ನ ಮನಸ್ಸಿನಲ್ಲಿಟ್ಟುಕೊಂಡು ಹೊಚ್ಚ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತವೆ. ಹಬ್ಬ ಹರಿದಿನ ಮದುವೆ ಸಂದರ್ಭದಲ್ಲಿ ಮುಖದ ಅಂದ ಹೆಚ್ಚಿಸುವ ಐ- ಮೆಕಪ್ ಗೆ ಬೇಡಿಕೆ ಹೆಚ್ಚುತ್ತಿದೆ. ಅಂತಹುದ್ದೇ ಒಂದು ಸ್ಟೈಲಿಶ್ ಲುಕ್ ಫ್ಯಾಷನ್ ಅಂಗಳಕ್ಕೆ ಎಂಟ್ರಿ ನೀಡಿದೆ.

ಕನ್ಯಾಮಣಿಯರ ಕಣ್ ಕಮಲಗಳ ಮೇಲೆ ಮೂಡಿದೆ ಹಾರ್ಟ್ ಐ-ಮೇಕಪ್. ಸ್ಟೆಂಸಿಲ್ ಆರ್ಟ್ ಬಳಸಿ ಕಣ್ಣು ರೆಪ್ಪೆಯ ಮೇಲೆ ಸುಂದರವಾಗಿ ಹಾರ್ಟ್ ಆಕಾರ ರಚಿಸಲಾಗಿದ್ದು, ಈ ಕ್ಯೂಟ್ ಲವ್ ಟ್ರೆಂಡ್ ಸೋಷಿಯಲ್ ಮೀಡಿಯಾ ದಿಲ್ಲಿ ಸುದ್ದಿ ಮಾಡುತ್ತಿದೆ. ಗೋಲ್ಡನ್ ಏಜ್ ಲೈನರ್ ಗೆ ಕೆಂಪು ಬಣ್ಣದ ಐ- ಮೆಕಪ್ ಕಾಂಬಿನೇಷನ್ ಸಖತ್ ಹಾಟ್ ಎನಿಸಿದೆ. ಹಾರ್ಟ್ ಸ್ಟೆಂಸಿಲ್ ಬೆಳಸಿ ಮಾಡಲಾಗುವ ಈ ಐದು ಮೇಕಪ್ ಸದ್ಯ ಫ್ಯಾಷನ್ ಪ್ರಿಯರ ನಿದ್ದೆ ಕೆಡಿಸಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending