Connect with us

ಲೈಫ್ ಸ್ಟೈಲ್

ಇದು ಫೇಸ್ಬುಕ್-ವಾಟ್ಸ್ ಅಪ್ ಮೊಗ್ಗಿನ ಜಡೆ ಜಮಾನಾ..!

Published

on

ಇದು ಸೋಷಿಯಲ್ ಮೀಡಿಯಾ ಎಫೆಕ್ಟ್ ಸ್ವಾಮೀ…

ವತ್ತಿನ ತಂತ್ರಜ್ಞಾನ ಆಧಾರಿತ ಬದುಕಿನಲ್ಲಿ ಪ್ರತಿಯೊಬ್ಬರೂ, ಮೊಬೈಲ್ ನ ದಾಸರಾಗಿದ್ದೀವಿ. ಎಲ್ಲರೂ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಯೂ ಟ್ಯೂಬ್, ಗಳ ದಾಸಾನುದಾಸರೇ. ಜನಜೀವನದ ಮೇಲೆ ಸೋಷಿಯಲ್ ಮೀಡಿಯಾದ ಎಫೆಕ್ಟ್ ಎಷ್ಟರ ಮಟ್ಟಿಗೆ ಇದೆ ಎಂದರೆ, ಊಟ ಮರೆತರೂ ವಾಟ್ಸ್ಅಪ್ ಸ್ಟೇಟಸ್ ನೋಡುವುದನ್ನ ಮರೆಯುವುದಿಲ್ಲ. ಇಂತಹ ಸೋಷಿಯಲ್ ಮೀಡಿಯಾ ದಾಸರ ಕ್ರೇಜ್ ತಿಳಿದಿರುವ ಬ್ಯೂಟಿ ತಜ್ಞರು ಫೇಸ್ಬುಕ್-ವಾಟ್ಸ್ ಅಪ್- ಟ್ವಿಟ್ಟರ್ ಗಳ ಮೊಗ್ಗಿನ ಜಡೆ ರೆಡಿ ಮಾಡಿಯೇ ಬಿಟ್ಟರು. ಇದನ್ನು ತೊಟ್ಟು ಫೋಟೋ ಕ್ಲಿಕ್ಕಿಸಿ ಮತ್ತದೇ ಸೋಷಿಯಲ್ ಮೀಡಿಯಾ ಇದನ್ನು ವೈರಲ್ ಕೂಡಾ ಮಾಡಿದೆ..!

ನೈಲ್ ಆರ್ಟ್

ಸೋಷಿಯಲ್ ಮೀಡಿಯಾ ಎಫೆಕ್ಟ್ ಇಷ್ಟಕ್ಕೇ ನಿಂತಿಲ್ಲ. ಕೈ ಉಗುರುಗಳ ನೈಲ್ಸ್ ಆರ್ಟ್ ರೂಪದಲ್ಲಿ ಮತ್ತದೇ ಫೇಸ್ಬುಕ್-ವಾಟ್ಸ್ ಅಪ್ – ಟ್ವಿಟ್ಟರ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿಸಿಕ್ಕಾಪಟ್ಟೆ ವೈರಲ್ ! ನೀವೂ ಸೋಷಿಯಲ್ ಮೀಡಿಯಾ ಫ್ಯಾನ್ ಗಳಾಗಿದ್ದಲ್ಲಿ.. ಈ ಸೋಷಿಯಲ್ ಮೀಡಿಯಾ ನೈಲ್ ಆರ್ಟ್ ಒಮ್ಮೆ ಟ್ರೈ ಮಾಡಿ ನೋಡಿ.

ಲೈಫ್ ಸ್ಟೈಲ್

ಬೆಕ್ಕಿಗೂ ಬಂತು ಫ್ಯಾಷನ್ ಸನ್ಗ್ಲಾಸ್..!

Published

on

ಬೆಕ್ಕು ಪ್ರಿಯರಿಗೆ ಇದೋ ಸಿಹಿ ಸುದ್ದಿ! ಮುದ್ದಾದ ಬೆಕ್ಕುಗಳನ್ನು ಮನೆಯಲ್ಲಿ ಸಾಕುವುದು ಸಾಮಾನ್ಯ. ಮನೆಯ ಸಾಕು ಪ್ರಾಣಿಗಳನ್ನು ಮನೆಮಕ್ಕಳಂತೆ ಮುದ್ದಾಗಿ ಸಾಕುವುದು, ಸಿಂಗರಿಸುವುದು ಸಾಮಾನ್ಯ. ನಾಯಿಯ-ಬೆಕ್ಕು ಗಳು ಜನಪ್ರಿಯ ಸಾಕು ಪ್ರಾಣಿಗಳಾಗಿದ್ದು, ಬೆಕ್ಕು ಪ್ರಿಯರಿಗೆ ಇದೋ ಸಿಹಿ ಸುದ್ದಿ.

ನಿಮ್ಮ ಮನೆಯ ಮುದ್ದು ಬೆಕ್ಕನ್ನು ಸಿಂಗರಿಸಲು
ಫ್ರಾಕ್; ಟೀಶರ್ಟ್, ಟೈ, ಕ್ಯಾಪ್, ಬ್ಯಾಂಡ್ ಗಳು ಬೆಕ್ಕು ಗಳಿಗೆಂದೇ ತಯಾರಾಗುತ್ತಿದ್ದು, ನೆಟ್ ವೆಬ್ಸೈಟುಗಳಲ್ಲಿ ಮಾಯವಾಗುತ್ತಿದೆ. ಇದೆಲ್ಲದರ ಜೊತೆಗೆ ಬೆಕ್ಕು ಗಳ ಫ್ಯಾಷನ್ ಸನ್ಗ್ಲಾಸ್ ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ . ಈಗ ಮನುಷ್ಯರನ್ನು ಫ್ಯಾಷನ್ ನಲ್ಲಿ ಸಡ್ಡು ಹೊಡೆಯುತ್ತಿದೆ ಕ್ಯಾಟ್ ಫ್ಯಾಷನ್!

Continue Reading

ಲೈಫ್ ಸ್ಟೈಲ್

ಪಾದರಕ್ಷೆಗೂ ಬಂತು ಛತ್ರಿ..!

Published

on

ಹಬ್ಬ ಹರಿದಿನವನ್ನೂ ಲೆಕ್ಕಿಸದೆ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಮಳೆಯಲ್ಲಿ ಹೊರಗಡೆ ನಡೆದಾಡಲು ಹಿಂದೆ-ಮುಂದೆ ನೋಡುವುದು ಸಾಮಾನ್ಯ. ಮಳೆಗಾಲದಲ್ಲಿ ರಸ್ತೆ ಗಳಲ್ಲಿ ನಿಂತ ನೀರು, ಕೊಚ್ಚೆ, ಮಳೆಯ ಹನಿಗಳಿಗೆ ಅಂಜಿಕೆ ಮನೆಯಲ್ಲಿಯೇ ಕುಳಿತುಕೊಳ್ಳ ಬಯಸುವವರಿಗೆ ಒಂದು ಸಿಹಿ ಸುದ್ದಿ!

ಮಳೆಗಾಲದಲ್ಲಿ ಕೊಡೆ ಬಳಸುವುದು ಸರ್ವೇ ಸಾಮಾನ್ಯ, ಆದರೇ ಪಾದರಕ್ಷೆಗಳಿಗೂ  ಕೊಡೆ ಬಂದಿದೆ! ಇದು ಅಪ್ಪಟ ಸಹ ಸತ್ಯ. ಮಳೆಗಾಲಕ್ಕೆ ಹೊಸಾ ಫ್ಯಾಷನ್ ತಲೆ ಎತ್ತಿದೆ. ಪುಟ್ಟ ಪುಟ್ಟ ಚೆಂದದ ಛತ್ರಿಗಳನ್ನು ಪಾದರಕ್ಷೆಗಳಿಗೆ ಅಂಟಿಸಲಾಗುತ್ತದೆ. ಮಳೆಯ ಸಂದರ್ಭದಲ್ಲಿ ಅದನ್ನು ತೆರೆಯ ಬಹುದು, ಇಲ್ಲವೇ ಛತ್ರಿ ಮುಚ್ಚಿಡಲೂ ಬಹುದು. ನಿಮಗೂ ಈ ವಿನೂತನ ವಿನ್ಯಾಸದ ಕೊಡೆಯನ್ನು ಪಾದರಕ್ಷೆ ಕೊಳ್ಳುವ ಆಸೆ ಇದ್ದಲ್ಲಿ ಆನ್ಲೈನ್ ನಲ್ಲಿ ಇದು ಲಭ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ಪೆಪ್ಸೀ ಲೋಗೋ ಬಳಸಿ ಮಾಡಿದ ಈ ಮೇಕಪ್ ಸಿಕ್ಕಾಪಟ್ಟೆ ಫೇಮಸ್..! 

Published

on

ನೈಜೀರಿಯದ ಮೇಕಪ್ ಆರ್ಟಿಸ್ಟ್ ವಿನಿಫ್ರೆಡ್ ಎಜಿಗೌ

ಪೆಪ್ಸೀ ಪ್ರಿಯರಿಗೆ ಕಲರ್ಫುಲ್ ನ್ಯೂಸ್..!

ತಂಪು ಪಾನೀಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪೆಪ್ಸೀ ಕಂಪನಿಯ ನೀಲಿ-ಬಿಳಿ-ಕೆಂಪು ಬಣ್ಣದ ಲೋಗೋ ಯಾರಿಗೆ ತಾನೇ ತಿಳಿದಿಲ್ಲ! ಈಗ ಇದೇ ಲೋಗೋ ಮಹಿಳೆಯರ ಹಾಟ್ ಫೇವರಿಟ್! ನೀಲಿ ಲಿಪ್ಸ್ಟಿಕ್ ಸ್ಟೈಲ್, ವಿಶ್ವದ ಫ್ಯಾಷನ್ ದುನಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರೆಂಡ್ ಆಗಿದೆ.

ಇದರ ಬೆನ್ನಲ್ಲೇ ನೈಜೀರಿಯದ ಮೇಕಪ್ ಆರ್ಟಿಸ್ಟ್ ವಿನಿಫ್ರೆಡ್ ಎಜಿಗೌ ಎನ್ನುವ ಈ ಮಹಿಳೆ, ತನ್ನ ಮೇಕಪ್ ಕೈಚಳದಿ ಮೂಡಿಸಿರುವ ಈ ನೀಲಿ ಅಲೆ..ಫ್ಯಾಷನ್ ಲೋಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೆಪ್ಸೀ ಲೋಗೋವನ್ನ ಅಧ್ಬುತವಾಗಿ ಕಣ್ಣು ರೆಪ್ಪೆಯ ಮೇಲೆ ರಚಿಸಿಕೊಂಡಿರುವ ಈ ಮೇಕಪ್ ಸೋಷಿಯಲ್ ಮೀಡಿಯಾ ದಲ್ಲಿ ಸಕ್ಕತ್ ಫೇಮಸ್!

Continue Reading
Advertisement

Trending