Connect with us

ಲೈಫ್ ಸ್ಟೈಲ್

ರೆಸಿಪಿ | ಮುಂಗಾರಿನ ಮನಸ್ಸಿಗೆ ಈರುಳ್ಳಿ ಉಪ್ಪಿನಕಾಯಿ

Published

on

ಳೆಗಾಲದ ಈ ದಿನಗಳಲ್ಲಿ ಬಜ್ಜಿ ಬೋಂಡಾಕ್ಕೆ ನಾಲಿಗೆ ಹಪಹಪಿಸುತ್ತದೆ. ದೇಹಕ್ಕೆ ಉಷ್ಣಾಂಶದ ಕೊರತೆಯುಂಟಾಗುವುದು ಇದಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ತಪ್ಪದೇ ಖಾರದ ಅಂಶ ಆಹಾರದಲ್ಲಿ ಹೆಚ್ಚಿರಲಿ. ಮುಖ್ಯವಾಗಿ ಊಟದಲ್ಲಿ ಉಪ್ಪಿನಕಾಯಿ ಇರಲೇಬೇಕು. ಉಪ್ಪಿನಕಾಯಿ ಇದ್ರೆ ಸಾಕು ಇನ್ನೇನೂ ಬೇಡ. ಬರಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನಬಹುದು.

ಮಳೆಗಾಲ ಅಂದ್ರೆ ಸಾಕು ಎಲ್ಲರ ಮನೆಯಲ್ಲೂ ಖಾರದ ಅಡುಗೆಗಳು ಘಮ ಘಮ ಎನ್ನುತ್ತವೆ. ಅದರಲ್ಲೂ ಬಾಯಿ ರುಚಿ ಅಂತಾ ಬಜ್ಜಿ ಬೋಂಡಾಗಳು ಬೇಯುತ್ತವೆ. ಆದ್ರೆ ಇದರಿಂದ ಎಣ್ಣೆ ಅಂಶ ದೇಹಕ್ಕೆ ಸೇರಿ ಚಳಿಗಾಲದಲ್ಲಿ ಹೃದಯಾಘಾತವಾಗುವ ಸಂಭವವಿರುತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಮನಸು ಬೇಡುವ ಖಾರದ ರುಚಿಗೆ ತಪ್ಪದೇ ಉಪ್ಪಿನ ಸೇವಿಸಿ.
ಹಾಗಾದ್ರೆ ಮುಂಗಾರಿನ ತುಂತುರಿನಲ್ಲಿ ಸವಿಯಲೇಬೇಕಾದ ಈರುಳ್ಳಿ ಉಪ್ಪಿನಕಾಯಿಗಳು ಮಾಡೋದು ಹೇಗೆ ನೋಡಿ.

ಈರುಳ್ಳಿಯ ಸ್ಪೆಷಲ್ ಉಪ್ಪಿನ ಕಾಯಿ, ಮಳೆಗಾಲದಲ್ಲಿ ದೇಹಕ್ಕೆ ಅಗತ್ಯವಾದ ಉಷ್ಣಾಂಶವನ್ನು ಪೂರೈಸುವಲ್ಲಿ ಈರುಳ್ಳಿ ಸೇವನೆ ಪ್ರಯೋಜನಕಾರಿ. ಅಲ್ಲದೇ ಮಳೆಗಾಲದ ಆರೋಗ್ಯ ಸಮಸ್ಯೆಗೆ ಈರುಳ್ಳಿ ಸೇವನೆ ಇರಲಿ. ಸರಿ ಬನ್ನಿ ಹಾಗಿದ್ರೆ ಈರುಳ್ಳಿ ಉಪ್ಪಿನಕಾಯಿ ಸ್ವಾದವನ್ನು ಸವಿಯೋಣ.

ಈರುಳ್ಳಿ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು

• ಮೀಡಿಂಯಂ ಸೈಜ್​ನ 7 ಕೆಂಪು ಈರುಳ್ಳಿಯನ್ನು ಸಿಪ್ಪೆ ಬಿಡಿಸಿಟ್ಟುಕೊಳ್ಳಿ.

• ಒಂದು ನಿಂಬೆ ಹಣ್ಣಿನ ಗಾತ್ರದ ಕೆಂಪು ಅಥವಾ ಹಳೇ ಹುಣಸೇ ಹಣ್ನನ್ನು ಬಳಸಿಕೊಳ್ಲಿ. ಹೂಣಸೇ ಹಣ್ಣು ಉಪ್ಪಿನಕಾಯಿಗೆ ಹೆಚ್ಚು ರುಚಿ ನೀಡುತ್ತದೆ.

• ಇನ್ನು ಮಿಕ್ಸಿ ಮಾಡಿಕೊಳ್ಳಲು ಒಂದು ಗಡ್ಡೆ ಬೆಳ್ಳುಳ್ಲಿ, ಸಿಪ್ಪೆ ಬಿಡಿಸಿಟ್ಟುಕೊಳ್ಳಿ. ಸಿಪ್ಪೆ ಬಿಡಿಸಿದ ಒಂದು ದೊಡ್ಡ ಶುಂಠಿ ಎಸಳು.

• 20-30 ಬ್ಯಾಡಗಿ ಮೆಣಸಿನಕಾಯಿಯನ್ನು ಬಳಸಿಕೊಳ್ಳಿ.ಇದನ್ನು ಮಸಾಲೆಗೆ ಬಳಸಿಕೊಳ್ಳುತ್ತೇವೆ. ಇದು ಉಪ್ಪಿನಕಾಯಿಗೆ ಹೆಚ್ಚ ಟೇಸ್ಟ್ ಕೊಡುತ್ತೆ.

• ಇಂಗು ಬಳಸುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ. ಕರಿಯಲು ಎಣ್ಣೆ, ಎಳ್ಳೆಣ್ಣೆ ಬಳಸಿದ್ರೆ ಹೆಚ್ಚು ಟೇಸ್ಟಿ. ಸ್ವಲ್ಪ ವಿನೆಗರ್ ಕೂಡ ಸೇರಿಸಿಕೊಳ್ಳಬಹುದು.
ಮುಕ್ಕಾಲು ಚಮಚ ಅರಿಶಿಣ ಪುಡಿ
ಕಾಲು ಚಮಚ ಮೆಂತ್ಯೆಕಾಳು

ಈರುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.

• ಮೊದಲಿಗೆ ಈರುಳ್ಳಿಯನ್ನು ಹೆಚ್ಚಿಕೊಂಡು ಒಂದು ಬಾಣಲಿ ಇಟ್ಟು ಈರುಳ್ಳಿ ಹಾಕಿಕೊಳ್ಳಿ. ಇದಕ್ಕೆ ಹುಣಸೇ ಹಣ್ಣು ಸೇರಿಸಿಕೊಳ್ಳಿ, ಜೊತೆಗೆ ಕರಿಬೇವು ಆಡ್ ಮಾಡಿ. 2 ಸ್ಪೂನ್ಸ್ ಉಪ್ಪು ಸೇರಿಸಿ ಕಾಲು ಲೀಟರ್ ಸೇರಿಸಿ ಕುದಿಸಿಕೊಳ್ಳಿ.

• ಈಗ ಒಂದು ಬಾಣಲಿ ಇಟ್ಟು, ಕಾಲು ಚಮಚ ಮೆಂತ್ಯೆಯನ್ನು ಡ್ರೈ ರೋಸ್ಟ್ ಮಾಡಿಕೊಳ್ಲಿ.
ನಂತರ ಇದನ್ನು ಮಿಕ್ಸಿಯಲ್ಲಿ ಇಲ್ಲವೇ ಕುಟ್ಟಾಣೀಯಲ್ಲಿಟ್ಟು ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಈರುಳ್ಳಿ ಕುದಿ ಹತ್ತಿದೆಯೇ ಗಮನಿಸಿಕೊಳ್ಲಿ.

• ಈರುಳ್ಳಿ ಸಾಫ್ಟ್​ ಆಗುವವರೆಗೆ ಕುದಿಸಿಕೊಳ್ಳಿ. ಹೀಗೆ ಗೊಜ್ಜಿನ ಹದ ಬಂದಾಗ ಈರುಳ್ಲಿ ಮಿಶ್ರಣ ಮಿಕ್ಸಿಗೆ ಹಾಕಿ 20 ಬ್ಯಾಡಗಿ ಮೆಣಸಿನಕಾಯಿ, ಒಂದು ದೊಡ್ಡ ಶುಂಠೀಯನ್ನು ಹೋಳುಗಳನ್ನಾಗಿ ಮಾಡಿಕೊಂಡು ರುಬ್ಬಿಕೊಳ್ಳಬೇಕು.ಮಿಕ್ಸಿ ಜಾರು ಚಿಕ್ಕದಿದ್ದರೇ ಎರಡು ಹಂತದಲ್ಲಿ ರುಬ್ಬಿಕೊಳ್ಳಬಹದು.

• ನಂತರ ಒಂದು ಪ್ಯಾನ್ ಇಟ್ಟು 150 ಗ್ರಾಂ ಎಳ್ಳೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಮುಕ್ಕಾಲು ಟೇಬಲ್ ಸ್ಪೂನ್ ಸಾಸಿವೆ ಸೇರಿಸಿ. 2 ಕೆಂಪು ಮೆಣಸಿನಕಾಯಿ, ಕರಿಬೇವು ಸೇರಿಸಿ ಸಿಡಿಸಿಕೊಳ್ಳಿ. ಮಮುಕ್ಕಾಲು ಸ್ಪೂನ್ ಅರಿಶಿನ ಸೇರಿಸಿ ಮಿಕ್ಸ್ ಮಾಡಿಕೊಲ್ಳಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ನೀರಿನಾಂಶ ಇಂಗುವವರೆಗು ಕುದಿಸಿಕೊಳ್ಳಿ.

• ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿಕೊಳ್ಳಿ ನಂತರ ಕೈಯಾಡಿ, ಇದಕ್ಕೆ ಪುಡಿ ಮಾಡಿಕೊಂಡ ಮೆಂತ್ಯೆ ಪುಡಿ ಸೇರಿಸಿ, ತೆಂಗಿನ ಕಾಯಿ ಪುಡಿ ಒಂದು ಸ್ಪೂನ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.ಉಪ್ಪು ಕಡಿಮೆ ಬಿದ್ರೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಬಹುದು. ಇದಕ್ಕೆ 2 ಟೇಬಲ್ ಸ್ಪೂನ್ ನೀರೆ ಸೇರಿಸಿ ಮಿಕ್ಸ್ ಮಾಡಿ . ಮತ್ತೆ ಮಿಶ್ರಣ ಗಟ್ಟಿಯಾದಾ ನೀರು ಸೇರಿಸಿ ಮಿಕ್ಸ್ ಮಾಡಿ. ಕಡೆಯಲ್ಲಿ ಒಂದು ಸ್ಪೂನ್ ವಿನೇಗರ್ ಹಾಕಿ ಬೇಯಿಸಿಕೊಳ್ಲಿ. ಹೀಗೆ ಉಪ್ಪಿನಕಾಯಿ ಎಣ್ಣೆ ಬಿಡಲು ಆರಂಭಿಸಿದ್ರೆ ಉಪ್ಪಿನಕಾಯಿ ಸವಿಯೋದಕ್ಕೆ ಸಿದ್ಧ. ಈಗ ಸ್ಟೌವ್ ಆರಿಸಿ ಇದನ್ನು ಒಂದು ಉಪ್ಪಿನಕಾಯಿ ಜಾರ್​ನಲ್ಲಿ ತುಂಬಿ ಉಪ್ಪಿನಕಾಯಿ ಮಿಶ್ರಣಕ್ಕಿಂತ ಒಂದು ಚೂರು ಮೇಲೆ ಬರುವಂತೆ ಎಣ್ಣೆ ಹಾಕಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

Published

on

ತ್ತೀಚಿನ ಗ್ಲಾಮರ್ ಯುಗದಲ್ಲಿ,  ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.

ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.

ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !

ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.

ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending