Connect with us

ಲೈಫ್ ಸ್ಟೈಲ್

ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯ ಪರಿಣಾಮಗಳು

Published

on

ಬೇಸಿಗೆ ಬಂತೆಂದರೆ ಸಾಕು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯ ಅಥವಾ ಆಫೀಸ್ ಹೊರಗೆ ಕಾಲಿಡಲು ಮನಸಾಗುವುದಿಲ್ಲ. ಕಾರಣ ಇಷ್ಟೆ, ದೇಹವು ತನ್ನನ್ನು ತಾನಾಗಿಯೇ ಹೊರಗಿನ ಯಾವುದೇ ದುಷ್ಪರಿಣಾಮಿ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಬಯಸುತ್ತದೆ. ಇದು ದೇಹದ ಸ್ವ ರಕ್ಷಣಾ ಪರಿಕರಗಳಲ್ಲಿ ಒಂದು.

ಕೆಲವೊಮ್ಮೆ ತುರ್ತು ಪರಿಸ್ಥಿತಿಗಳಲ್ಲಿ ಎಂಥಾ ಉರಿಬಿಸಿಲೂ ಎನ್ನದೇ ಆಗಬೇಕಿರುವ ಕೆಲಸಕ್ಕೆ ಒತ್ತು ನೀಡಿ ಹೊರ ಹೋಗುತ್ತೇವೆ. ಆದರೆ ನಮ್ಮ ನಾಡಿನ ಬೆನ್ನೆಲುಬು ಆಗಿರವ ರೈತರು ಅದರಲ್ಲೂ ನೀರಾವರಿ ಹೊಂದಿರುವವರು ಇದ್ಯಾವ ಬಿಸಿಲಿಗೂ ಲೆಕ್ಕಿಸದೇ ಹೊಲಗಳಲ್ಲಿ ನಿತ್ಯ ಕೆಲಸ ಮಾಡುತ್ತಾರೆ. ಅವರಿಗೆ ನಮಸ್ಕರಿಸೋಣ. ಆದರೆ, ಬಿಸಿಲಲ್ಲಿ ಹೋದರೂ ಹೋಗದಿದ್ದರೂ ದೇಹದಲ್ಲಿ ಈ ಅವಧಿಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಅವುಗಳಿಗೆ ಸ್ವಲ್ಪ ಮುಂಜಾಗ್ರತೆ ವಹಿಸಿದರೆ ಬೇಸಿಗೆ ಮುಗಿಯುವವರೆಗೂ ಯಾವುದೇ ಸಮಸ್ಯೆಯಿಲ್ಲದೇ ಮುಂದೆ ಸಾಗಬಹುದು.

1.ನಿರ್ಜಲೀಕರಣ 

ದೇಹದಲ್ಲಿನ ನೀರಿನಾಂಶ ನಮಗೆ ಗೊತ್ತಾಗುವಂತೆ ಮತ್ತು ಗೊತ್ತಾಗದೆಯೇ ಯಾವಾಗಲೂ ಹೊರಹೋಗುತ್ತಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ನೀರಿನಾಂಶವನ್ನು ಬೆವರು ಮತ್ತು ಉಸಿರಾಟಗಳಲ್ಲಿ ಹೊರಹಾಕುತ್ತೇವೆ. ಕಾರಣ ಹೊರಗಿನ ತಾಪಮಾನಕ್ಕೆ ತಕ್ಕಂತೆ ನಮ್ಮ ದೇಹದೊಳಗಿನ ತಾಪಮಾನವೂ ಹೆಚ್ಚುತ್ತದೆ. ಆಗ ಉಂಟಾಗುವುದೇ ನಿರ್ಜಲೀಕರಣ.

 • ನಿರ್ಜಲೀಕರಣದಿಂದ ಕಿಡ್ನಿಗಳಿಗೆ ಮುಖ್ಯವಾಗಿ ತೊಂದರೆಯಾಗಿ ದೇಹದೊಳಗಿನ ಕಲ್ಮಶಗಳನ್ನು ಹೊರಹಾಕಲಾಗುವುದಿಲ್ಲ.
 • ಕರುಳುಗಳಲ್ಲಿ ನೀರಿನಾಂಶ ಕಡಿಮೆಯಾಗಿ ಮಲವಿಸರ್ಜನೆಗೆ ತೊಂದರೆಯಾಗುತ್ತದೆ
  ತುಟಿ-ನಾಲಗೆ ಒಣಗಿ ಹೋಗುತ್ತವೆ
 • ಮಾಂಸಖಂಡಗಳ ಸೆಳೆತವುಂಟಾಗುತ್ತದೆ
 • ಚರ್ಮ ಸುಕ್ಕುಗಟ್ಟಲು ಶುರುವಾಗಿ ಕಾಂತಿ ಕಳೆದುಕೊಳ್ಳುತ್ತದೆ

2. ಶಾಖದ ಸ್ಟ್ರೋಕ್

 • ದೇಹದೊಳಗೆ ಶಾಖ ಹೆಚ್ಚಾಗಿ ಜೀವಕ್ಕೇ ಅಪಾಯ ತಂದೊಡ್ಡುವ ಪರಿಸ್ಥಿತಿಯೇ ಶಾಖದ ಸ್ಟ್ರೋಕ್.
 • ಇದರ ಪರಿಣಾಮ ಗಾಬರಿಗೊಳ್ಳುವುದು, ಉಸಿರಾಟ ತೊಂದರೆ, ಕ್ಷೀಣವಾದ ನಾಡಿಮಿಡಿತದಿಂದ ಮಿದುಳಿಗೆ ರಕ್ತಸಂಚಾರ ಅಗತ್ಯವಾಗಿ ಪೂರೈಕೆಯಾಗದೇ ಪ್ರಜ್ಞಾಹೀನ ಸ್ಥಿತಿಗೆ ತಲುಪಬಹುದು.

3. ಜೀರ್ಣಾಂಗವ್ಯೂಹದ ತೊಂದರೆಗಳು

 • ಪ್ರವಾಸಕ್ಕೆ ಹೋದಾಗ ಆಹಾರ ತುಂಬಾ ಹೊತ್ತು ಅತಿಯಾದ ಶಾಖಕ್ಕೆ ಒಳಗಾಗುವುದರಿಂದ ಆಹಾರ ಕೆಟ್ಟು ಹೋಗುತ್ತವೆ.
 • ಹೊರಗೆ ಮಾರುಕಟ್ಟೆಗಳಲ್ಲಿ ಮಾರುವ ಆಹಾರ ಪದಾರ್ಥಗಳು ಅಥವಾ ಮನೆಯಲ್ಲೇ ತಯಾರಿಸಿಟ್ಟ ಆಹಾರ ಪದಾರ್ಥಗಳು ಹೊರಗಿನ ಬಿಸಿಲಿನ ತಾಪಮಾನಕ್ಕೆ ತಮ್ಮ ಪೌಷ್ಟಿಕತೆಯನ್ನು ಕಳೆದುಕೊಳ್ಳುತ್ತವೆ.
 • ಅಂತಹ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗವ್ಯೂಹದ ತೊಂದರೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ

4. ಕಣ್ಣುಗಳಿಗೆ ತೊಂದರೆ

ಸೂರ್ಯನ ಕಿರಣಗಳಲ್ಲಿ ಇರುವ ಅತಿನೇರಳೆ ಕಿರಣಗಳು ಕಣ್ಣೊಳಗಿನ ಕಾರ್ನಿಯಾ, ಲೆನ್ಸ್, ರೆಟಿನಾ, ಹೀಗೆ ಎಲ್ಲಾ ಭಾಗಗಳನ್ನೂ ಹಾನಿಯುಂಟು ಮಾಡುವ ಗುಣ ಹೊಂದಿದ್ದು, ಮುಂದೆ ಕಣ್ಣು ಕುರುಡು ಉಂಟಾಗಬಹುದು.

5. ಸನ್ ಬನ್ರ್ಸ್

ಅತಿ ಹೆಚ್ಚು ಕಾಲ ಬಿಸಿಲಲ್ಲಿ ಇರುವುದರಿಂದ ಕೆಲವೊಮ್ಮೆ ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಹಾನಿಯುಂಟಾಗಬಹುದು. ಅದಕ್ಕೆ ಸನ್ ಬನ್ರ್ಸ್ ಎಂದು ಕರೆಯುತ್ತಾರೆ.
– ಹೆಚ್ಚಾಗಿ ಇದು ಸೂಕ್ಷ್ಮ ಚರ್ಮ ಮತ್ತು ಅತಿ ಬಿಳಿ ಚರ್ಮ ಹೊಂದಿರುವವರಿಗೆ ಉಂಟಾಗುತ್ತದೆ

6. ಚರ್ಮದ ಕ್ಯಾನ್ಸರ್

 • ಸನ್ ಬನ್ರ್ಸ್ ಉಂಟಾಗುವುದರ ಜೊತೆಗೆ ಚರ್ಮದೊಳಗಿನ ಕಣಗಳಲ್ಲಿನ ಡಿ ಎನ್ ಎ ದಲ್ಲಿ ವ್ಯತ್ಯಾಸ ಉಂಟಾಗಿ ಚರ್ಮದ ಕ್ಯಾನ್ಸರ್ ಗೂ ಅದು ನಾಂದಿಯಾಗಬಹುದು.
  ಇದು ಸಾಮಾನ್ಯವಾಗಿ 50 ವರ್ಷ ಗಳಿಗಿಂತ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ.

7. ನೀರಿನಲ್ಲಿ ಮುಳುಗುವುದು

 • ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ಧಗೆಯನ್ನು ತಾಳಲಾರದೆ ಹಳ್ಳಿಗಳಲ್ಲಿ ಊರಲ್ಲಿರುವ ಕೆರೆ ಅಥವಾ ನದಿಗಳಲ್ಲಿ ಈಜುವುದಕ್ಕಾಗಲೀ ಅಥವಾ ಸ್ನಾನ ಮಾಡುವುದಕ್ಕಾಗಲೀ ಹದಿಹರೆಯದ ಮಕ್ಕಳು ಹೊಗುವುದುಂಟು. ಇನ್ನು ಪಟ್ಟಣಗಳಲ್ಲಿ ಬಂದರೆ ಈಜು ಕೊಳಗಳಿಗೆ ಹೋಗುವುದುಂಟು.
 • ಆದರೆ ಆ ಸಂದರ್ಭಗಳಲ್ಲಿ ಹತೋಟಿ ನಮ್ಮ ಕೈಮೀರಿ ಹೋದರೆ ನೀರಿನ ಅವಘಡಗಳಿಂದ ಸಾವುಗಳು ಸಂಭವಿಸುವುದುಂಟು

8. ವೆಲ್ಡಿಂಗ್‍ನಿಂದ ಉಂಟಾಗುವ ಹಾನಿ

 • ವೆಲ್ಡಿಂಗ್ ಅಥವಾ ಬೇರೆ ಯಾವುದೇ ಬೆಂಕಿಯನ್ನು ಬಳಸಿಕೊಂಡು ನಡೆಸುವ ವೃತ್ತಿಗಳನ್ನು ಮಾಡುವವರು ಕಣ್ಣು, ಚರ್ಮಕ್ಕೆ ಬೇಸಿಗೆಯ ಧಗೆಯಲ್ಲಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಮುಂಜಾಗ್ರತಾ ಕ್ರಮಗಳು

 • ಸಾಮಾನ್ಯವಾಗಿ ಯಾವ ಕಾಲಕ್ಕೂ ಅನ್ವಯವಾಗುವಂತೆ ದಿನಕ್ಕೆ 2.5 ರಿಂದ 3 ಲೀ ನೀರು ಕುಡಿಯಬೇಕಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ನಿರ್ಜಲೀಕರಣದ ಪರಿಣಾಮ 3ಲೀ ಗೂ ಹೆಚ್ಚು ನೀರು ಕುಡಿಯುವುದು ಸೂಕ್ತ.
 • ಬಿಸಿಲಲ್ಲಿ ಮಾಡಬಹುದಾದ ಕೆಲಸಗಳು ನೆರಳಲ್ಲೂ ಮಾಡಬಹುದಾದರೆ ನೆರಳಲ್ಲೇ ಮಾಡುವುದು ಸೂಕ್ತ.
 • ಅತೀ ಶಾಖಕ್ಕೆ ತೆರೆದಿಟ್ಟ ಆಹಾರ ಪದಾರ್ಥಗಳನ್ನು ತಿನ್ನದಿರುವುದು ಸೂಕ್ತ.
 • ಹೊರಗೆ ಹೋಗುವಾಗ ಕಣ್ಣುಗಳಿಗೆ ತಂಪು ಕನ್ನಡಕಗಳನ್ನು ಬಳಕೆ ಮಾಡುವುದು.ಅದರಲ್ಲೂ ಅತಿನೇರಳೆ ಕಿರಣಗಳು ಹಾಯದ ಕನ್ನಡಕಗಳನ್ನು ಬಳಸಿದರೆ ಉತ್ತಮ.
 • ಚರ್ಮ ಹಾನಿಯನ್ನು ತಪ್ಪಿಸಲು ಸನ್‍ಸ್ಕ್ರೀನ್‍ಗಳನ್ನು ಬಳಸುವುದು.
 • ದೇಹದ ತಾಪಮಾನ ಈಗಾಗಲೇ ಹೆಚ್ಚಿರುವ ಸಂದರ್ಭಗಳಲ್ಲಿ ( ಉದಾ; ಜ್ವರ, ಇತ್ಯಾದಿ) ಬಿಸಿಲಿಗೆ ಹೋಗದಿರುವುದು.
 • ಪ್ರತಿದಿನ ಬೆಳಗ್ಗೆ ವ್ಯಾಯಾಮ ಅಥವಾ ಜಾಗಿಂಗ್ ಗೆ ಹೋಗುವವರು ಆದಷ್ಟು ಸೂರ್ಯ ಉದಯವಾಗುವ ಸಮಯದೊಳಗೆ P ಮನೆ ಸೇರುವುದು.
 • ವೆಲ್ಡಿಂಗ್ ಕೆಲಸ ಮಾಡುವವರು ಕಣ್ಣುಗಳಿಗೆ ದೃಷ್ಟಿ ಪರದೆಗಳನ್ನು ಬಳಸುವುದು.

 

ವಿಡಿಯೋ ಸುದ್ದಿ ನೋಡಲು ಸುದ್ದಿದಿನ Youtube channel ಗೆ subscribe ಆಗಿ:

ಲೈಫ್ ಸ್ಟೈಲ್

ಅಪ್ಪಾ…ಐ ಲವ್ ಯು ಅಪ್ಪಾ…!

Published

on

ಅಪ್ಪ ನಂಗೆ ಸ್ಕೂಲ್ ಫೀಸ್ ಕಟ್ಟಿ.. ಅಪ್ಪ ಆ ಡ್ರೆಸ್ ಕೊಡ್ಸೀ… ಅಪ್ಪ ಈ ಹೋಟೆಲ್ ಗೆ ಕರ್ಕೊಂಡು ಹೋಗಿ..ಅಪ್ಪಾ ಆಫೀಸ್ ಇಂದ ಬರೋವಾಗ ನನ್ನ ಬುಕ್ ತರೋದು ಮರೀಬೇಡಿ.. ಅಪ್ಪಾ.. ಅಪ್ಪಾ ಅಪ್ಪಾ… ಒಂಭತ್ತು ತಿಂಗಳು ಹೆತ್ತು ಹೊರುವವಳು ತಾಯಿ.. ಮಗುವನ್ನು ಜೀವನವಿಡೀ ಪೋಷಿಸುವವನು ತಂದೆ.ಪ್ರತಿ ಗಂಡಸಿನ ಜೀವನದ ಅತ್ಯಂತ ಶ್ರೇಷ್ಠ ಘಳಿಗೆ, ಅಪ್ಪನಾಗುವ ಸುದಿನ. ಪ್ರತಿ ಜೂನ್ ತಿಂಗಳ ಮೂರನೇ ಭಾನುವಾರ ವಿಶ್ವ ಅಪ್ಪಂದಿರ ದಿನ.

ಇಂದು ಜೂನ್ 16 ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆ ಆಚರಿಸಲಾಗುತ್ತಿದೆ. ಜೀವನವಿಡೀ ನಮ್ಮನ್ನು ಸಲಹಿ ಸರ್ವಸ್ವವನ್ನೂ ನಮಗೆ ಧಾರೆ ಎರೆಯುವ ತಂದೆಯ ಋಣ ತೀರಿಸುವುದು ಅಸಾಧ್ಯ. ಆದರೆ ತನ್ನ ಮಗುವಿಗಾಗಿ ಹಗಲಿರುಳು ದುಡಿಯುವ ಅಪ್ಪನಿಗೆ ಪುಟ್ಟದೊಂದು ಗಿಫ್ಟ್, ಕಾರ್ಡ, ಹಾಡು ಹೇಳಿ .. ಅಪ್ಪಾ ಐ- ಲವ್ ಯು …. ಎಂದರೆ ಸಾಕು, ತಂದೆಯ ಜೀವಕ್ಕೆ ನನ್ನ ಮಗ/ಮಗಳು ಎಂಬ ಹೆಮ್ಮೆ.

ಫ್ಯಾಷನ್ ಲೋಕವೂ ಅಪ್ಪಂದಿರ ದಿನಾಚರಣೆ ಆಚರಿಸುತ್ತಿದ್ದರು.. ಇಲ್ಲೊಬ್ಬ ತಂದೆ-ಮಗಳು ಟ್ವಿನ್ನಿಂಗ್ ಫ್ಯಾಷನ್ ನಲ್ಲಿ ಮಿಂಚುತ್ತಿದ್ದಾರೆ.. ಅಪ್ಪಾ ಎಂದೊಡನೆ ನೆನಪಾಗುವುದು ಅಪ್ಪನ ಮೀಸೆ. ಮುಸ್ಟಾಚ್ ಪ್ರಿಂಟ್ ಇರುವ ಫಾದರ್ಸ್ ಡೇ ಟೀ-ಶರ್ಟ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟದ್ದು, ಅಪ್ಪಂದಿರ ದಿನ ದ ಆದರೆ ಅಂಗವಾಗಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ.

ಫಾದರ್ಸ್ ಡೇ ಗ್ರೀಟಿಂಗ್ಸ್, ಬೆಸ್ಟ್ ಫಾದರ್ ಚಾಂಪಿಯನ್ ಕಪ್, ಮೆರಿಟ್ ಸರ್ಟಿಫಿಕೇಟ್, ಮೆಡಲ್,   ಫೋಟೋ ಫ್ರೇಮ್, ಟ್ವಿನ್ನಿಂಗ್ ಶರ್ಟ್, ಹೀಗೆ ಹಲವಾರು ಅಪ್ಪಂದಿರ ದಿನದ ಗಿಫ್ಟ್ ಗಳೊಂದಿಗೆ ನೀವೂ ನಿಮ್ಮ ಮುದ್ದಿನ ಅಪ್ಪನಿಗೆ ಫಾದರ್ಸ್ ಡೇ ವಿಶಸ್ ತಿಳಿಸಬಹುದು.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಚಿತ್ರ ವಿಚಿತ್ರ ಕ್ರೇಜೀ ಹೇರ್ ಡೇ ಸಂಭ್ರಮ..!

Published

on

ಭಾರತದ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ದಿನವನ್ನು ಆಚರಿಸುವ ಹಾಗೆ, ಪಾಶ್ಚಾತ್ಯ ದೇಶಗಳಲ್ಲಿ ಚಿನ್ನರ ವಿಚಿತ್ರ ವಿಶಿಷ್ಟ ಕೇಶವಿನ್ಯಾಸಕ್ಕೆಂದೇ ಒಂದು ದಿನ ನಿಗದಿ ಮಾಡಿ, ಕ್ರೇಜಿ ಹೇರ್ ಸ್ಟೈಲ್ ಗಳಲ್ಲಿ ಮಕ್ಕಳು ಮಿಂಚುತ್ತಾರೆ. ಇಲ್ಲಿ ಪೋಷಕರ ಕ್ರಿಯಾಶೀಲತೆಗೆ ಹೆಚ್ಚಿನ ಮಣ್ಣನೆ ನೀಡಲಾಗುವುದು. ದಿ ಬೆಸ್ಟ್ ಕ್ರೇಜಿ ಹೇರ್ ಸ್ಟೈಲ್ ಎಂಬ ಪಾರಿತೋಷಕ ಪ್ರಶಸ್ತಿ ಕೂಡ ನೀಡಲಾಗುತ್ತದೆ.

ಮಕ್ಕಳು ಈ ವಿಶಿಷ್ಟ ದಿನದ ಸಂಭ್ರಮದಲ್ಲಿ ಖುಷಿ ಯಿಂದ ಪಾಲ್ಗೊಂಡು, ತಮ್ಮ ಕ್ರಿಯಾತ್ಮಕತೆ ಮೆರೆಯುತ್ತಾರೆ.ಯುನಿಕಾರ್ನ್, ಪಂಕಿನ್, ಸ್ಪೈಡರ್, ಗೋ ಗ್ರೀನ್, ಬಲೂನ್, ಡ್ರಾಗನ್ , ಬರಗರ್, ಪೀಜಾ, ಶೈಲಿಯ ವಿಚಿತ್ರ ಹಾಗೂ ಫಂಕೀ ಹೇರ್ ಸ್ಟೈಲ್ ಸದ್ಯ ಕ್ರೇಜಿ ಹೇರ್ ಡೇ ಸ್ಪೆಶಲ್ ಆಗಿತ್ತು.

ಕೋಕಾ ಕೋಲಾ ಬಾಟಲ್ ಬಳಸಿ ಮಾಡಲಾದ ಕೇಶವಿನ್ಯಾಸ ಹೆಚ್ಚು ಗಮನ ಸೆಳೆಯಿತು. ಅಂತೆಯೇ, ಪೈನಾಪಲ್ ಹೇರ್ ಸ್ಟೈಲ್ ಕೂಡ ಮಕ್ಕಳ ಫೇವರಿಟ್ ಎನಿಸಿಕೊಂಡಿತು.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ವೈರಲ್ ಆಯ್ತು ಎಂಗೇಜ್ಮೆಂಟ್ ಪಿಯರ್ಸಿಂಗ್ ರಿಂಗ್ ಫ್ಯಾಷನ್..!

Published

on

ಪ್ರೇಮಾಂಕುರ ವಾದೊಡನೆಯೇ ಸುಂದರಿಯ ಕೈ ಬೆರಳಿಗೆ ಉಂಗುರ ತೊಡಿಸಿ, ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ. ಆದರೆ ಇಂದಿನ ಹೈಟೆಕ್ ಯುಗದಲ್ಲಿ , ಚಿನ್ನದ ಆಭರಣಗಳ ಮೋಹ ಕಳೆದುಕೊಳ್ಳುತ್ತಿರುವ ಯುವ ಜನಾಂಗ, ಟ್ಯಾಟೂ ಕ್ರೇಜ್ ಮೈ ಗಿಟ್ಟಿಸಿಕೊಂಡಿದೆ. ಎಂಗೇಜ್ಮೆಂಟ್ ರಿಂಗ್ ಜಾಗವನ್ನ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಆಕ್ರಮಿಸಿಕೊಂಡಿದೆ. ರಿಂಗ್ ಬದಲಾಯಿಸಿಕೊಳ್ಳುವ ಬದಲು, ಹುಡುಗ-ಹುಡುಗಿಯರಿಬ್ಬರೂ ರಿಂಗ್ ಟ್ಯಾಟೂ ಮೊರೆ ಹೋಗುತ್ತಿದ್ದಾರೆ.

ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರೇಮಿಗಳು ಫಿಂಗರ್ ಪಿಯರ್ಸಿಂಗ್ ಎಂಗೇಜ್ಮೆಂಟ್ ರಿಂಗ್ ಎಂಬ ಹೊಸಾ ಫ್ಯಾಷನ್ ಸೃಷ್ಟಿಸಿದ್ದಾರೆ. ವಜ್ರ,ಚಿನ್ನದ ರಿಂಗ್ ಬದಲು, ವಜ್ರದ ಸ್ಟಡ್ , ಚಿನ್ನ-ಬೆಳ್ಳಿಯ ಸ್ಟಡ್ ಗಳನ್ನು ಬೆರಳಿಗೆ ಶಾಶ್ವತವಾಗಿ ಚುಚ್ಚಲಾಗುತ್ತದೆ. ಫಿಂಗರ್ ರಿಂಗ್ ಪಿಯರ್ಸಿಂಗ್ ಸದ್ಯ ಟ್ರೆಂಡಿಂಗ್ ಫ್ಯಾಷನ್ ಸಾಲಿಗೆ ಸೇರಿದ್ದು ನೂತನ ಶೈಲಿಯ ಎಂಗೇಜ್ಮೆಂಟ್ ರಿಂಗ್ ( ಪಿಯರ್ಸಿಂಗ್) ಯುವಪೀಳಿಗೆ ಯಲ್ಲಿ ಸಾಕಷ್ಟು ಫ್ಯಾಷನ್ ಸಂಚಲನ ಮೂಡಿಸಿದೆ.

ಈ ರೀತಿಯ ಫಿಂಗರ್ ಪಿಯರ್ಸಿಂಗ್, ಶಾಶ್ವತ ವಾಗಿದ್ದು, ಇದರ ಗಾಯ ಕೂಡಾ ಶಾಶ್ವತ ವಾಗಿರುತ್ತದೆ. ಬಹಳ ಸೂಕ್ಷ್ಮ ವಾದ ಚರ್ಮ ವಾಗಿರುವ ಕೈ ಬೆರಳಿನ ಮೇಲೆ ಚುಚ್ಚಿಸುವುದು ಅಷ್ಟು ಸುಲಭವಲ್ಲ. ಅತಿಯಾದ ನೋವಿನಿಂದ ಕೂಡಿರುವ ಈ ಫಿಂಗರ್ ಪಿಯರ್ಸಿಂಗ್ ಯುವಪೀಳಿಗೆಯ ಫ್ಯಾಷನ್ ಕ್ರೇಜ್ ಗೆ ಸಾಕ್ಷಿ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending