ಲೈಫ್ ಸ್ಟೈಲ್
ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

ಇತ್ತೀಚಿನ ಗ್ಲಾಮರ್ ಯುಗದಲ್ಲಿ, ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.
ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.
ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !
ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.
ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
‘ನಾಗಾರ್ಜುನ ಆಯುರ್ವೇದ’ ಕಂಪನಿಯ ಹೊಸ ಉತ್ಪನ್ನ ಮಾರುಕಟ್ಟೆಗೆ

ಸುದ್ದಿದಿನ,ಬೆಂಗಳೂರು : ಕೇರಳ ಮೂಲದ ಪ್ರತಿಷ್ಟಿತ ‘ನಾಗಾರ್ಜುನ ಆಯುರ್ವೇದ ಕಂಪನಿ’ಯ ‘ಹರ್ಬಲ್ ಕಾನ್ಸ್’ನ್’ಟ್ರೇಟ್ ಲಿಮಿಟೆಡ್ (ಎನ್ಎಚ್ಸಿಎಲ್) ಹೊಸ ಗಿಡಮೂಲಿಕೆ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ಕರ್ನಾಟಕದಲ್ಲಿಯೂ ತನ್ನ ವ್ಯಾಪಾರ ವಹಿವಾಟು ಗಳನ್ನು ವಿಸ್ತರಿಸುವ ಯೋಜನೆಗಳನ್ನು ಕೈಗೊಂಡಿದೆ.
ಸಂಸ್ಥೆಯ ಉಪಾಧ್ಯಕ್ಷ ‘ಆರ್.ರಮೇಶ್ ಚಂದ್ರ’ ಮಾತನಾಡುತ್ತಾ ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯವೃದ್ಧಿ ಉತ್ಪನ್ನಗಳ ಮಾರುಕಟ್ಟೆ ಗಮನಾರ್ಹ ಪ್ರಮಾಣದಲ್ಲಿ ಬೆಳೆಯುತ್ತಿದೆ, ಗಿಡಮೂಲಿಕೆ ಮತ್ತು ಆಯುರ್ವೇದ ಉತ್ಪನ್ನಗಳ ಬಗೆಗೆ ಗ್ರಾಹಕರಲ್ಲಿ ಹೆಚ್ಚು ಜಾಗೃತಿ ಇದ್ದು ಈ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ ಹಾಗಾಗಿ ನಾವು ಮನೆಯಲ್ಲೇ ಅಭಿವೃದ್ಧಿಪಡಿಸಿದ ಹೊಸ ಉತ್ಪನ್ನಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮ ಜರುಗಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ನೀಲಿ ನಾಲಿಗೆ ರೋಗ ಮತ್ತು ಚಿಕಿತ್ಸಾ ವಿಧಾನ

ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನೀಲಿ ನಾಲಿಗೆ ರೋಗಕ್ಕೆ ಸಾವಿರಾರು ಆಡು, ಕುರಿಗಳು ಬಲಿಯಾಗುತ್ತಿದ್ದು, ವರ್ಷವೊಂದಕ್ಕೆ ಸುಮಾರು 18,600 ಆಡು, ಕುರಿಗಳು ಈ ಮಾರಣಾಂತಿಕ ಖಾಯಿಲೆಗೆ ತುತ್ತಾಗಿ ಸಾವನ್ನಪುತ್ತಿವೆ.
ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ನೀಲಿ ರೋಗದ ವೈರಾಣುವಿನಲ್ಲಿ 24 ಪ್ರಬೇಧಗಳಿದ್ದು, ನಮ್ಮ ರಾಜ್ಯದಲ್ಲಿ 6 ಪ್ರಬೇಧಗಳು ಈಗಾಗಲೇ ಪರಿಚಲನೆಯಲ್ಲಿವೆ.
ಆಡು, ಕುರಿಗಳನ್ನು ಕೊಲ್ಲುವ ಈ ನೀಲಿ ನಾಲಿಗೆ ರೋಗ 1904 ರಲ್ಲಿ ಮೊದಲು ಆಫ್ರಿಕಾದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಇಷ್ಟೊಂದು ವ್ಯಾಪಕವಾಗಿ ಹರಡಿದ್ದು, ಕರ್ನಾಟಕದಲ್ಲಿ 15 ವರ್ಷಗಳಲ್ಲಿ ಸಾವಿರಾರು ಆಡು, ಕುರಿಗಳು ಸಾವನ್ನಪ್ಪಿವೆ.
ಸಾಮಾನ್ಯವಾಗಿ ಆಗಸ್ಟ್ನಿಂದ ಫೆಬ್ರವರಿವರೆಗೆ ವ್ಯಾಪಕವಾಗಿ ಕಂಡುಬರುವ ಈ ನೀಲಿ ನಾಲಿಗೆ ರೋಗ ಮಳೆ ನಿಂತ ಎರಡು ಮೂರು ವಾರಗಳ ನಂತರ ವ್ಯಾಪಕವಾಗಿ ಹರಡಲು ಶುರುಮಾಡುತ್ತದೆ. ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ತಗ್ಗು ಪ್ರದೇಶ, ನಿಂತ ನೀರು ಮತ್ತು ಜಾಗು ಪ್ರದೇಶಗಳು ಈ ಕುದುರೆ ನೊಣಗಳ ಆವಾಸ ಸ್ಥಾನ. ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡುವ ಮೂಲಕ ಸಂತಾನೋತ್ಪತ್ತಿ ವೃದ್ದಿಸಿಕೊಳ್ಳುತ್ತದೆ. ಇಂಥ ಸ್ಥಳಗಳಲ್ಲಿ ಕುರಿ ಮೇಯಿಸುವುದು ನೀಲಿ ನಾಲಿಗೆ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ನೀಲಿ ರೋಗದ ಲಕ್ಷಣಗಳು
ಕುರಿ ಇಲ್ಲವೇ ಮೇಕೆಗಳಿಗೆ ಮೊದಲು ತೀವ್ರವಾದ ಜ್ವರ ಬರುವುದು. ನಂತರ ಬಾಯಿಯಲ್ಲಿ ಜೊಲ್ಲು ಸುರಿಯುವುದು ಹಾಗೂ ಮೂಗಿನಲ್ಲಿ ಹಳದಿ ಮಿಶ್ರಿತ ಗೊಣ್ಣೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ನಾಲಗೆಯು ಹಳದಿ ಬಣ್ಣಕ್ಕೆ ತಿರುಗುವುದು. ಬಾಯಿ, ಮೂಗು, ಮುಖ ಮತ್ತು ತಲೆಗಳಲ್ಲಿ ಬಾವು ಕಂಡುಬರುತ್ತದೆ. ಮೂಗಿನ ಒಳಪದರಗಳೆಲ್ಲಾ ಕೆಂಪಾಗಿ ತುಟಿ, ಒಸಡು ಮತ್ತು ನಾಲಿಗೆಯು ಊದಿಕೊಂಡಿರುತ್ತದೆ. ಒಸಡಿನ ಮೇಲ್ಬಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣವಾಗಿರುತ್ತದೆ.
ಈ ಕಾರಣಗಳಿಂದಾಗಿ ಆಡು, ಕುರಿಗಳು ಮೇವು ತಿನ್ನಲಾಗದೆ ನಿಶಕ್ತಿಗೆ ಒಳಗಾಗುತ್ತವೆ. ನಂತರದ ದಿನಗಳಲ್ಲಿ ಕುಂಟಲು ಪ್ರಾರಂಭಿಸುತ್ತವೆ. ಕಾಲಿನ ಚರ್ಮ, ಗೊರಸು ಮತ್ತು ಸಂಧುಗಳಲ್ಲಿ ನೀಲಿ ಬಣ್ಣದ ಪಟ್ಟಿ ಕಾಣಿಸುತ್ತದೆ. ಕೆಲವು ಆಡು ಕುರಿಗಳು ಭೇಧಿ ಕಾಣಿಸಿಕೊಂಡು ನಿತ್ರಾಣಗೊಂಡು ಕತ್ತನ್ನು ಪಕ್ಕಕ್ಕೆ ವಾಲಿಸುತ್ತವೆ. ಸೂಕ್ತ ಸಮಯದಲ್ಲಿ ಆರೈಕೆ, ಆಹಾರ ಮತ್ತು ಚಿಕಿತ್ಸೆ ಸಿಗದಿದ್ದರೆ ಬಳಲಿಕೆಯಿಂದಾಗಿ ಸಾವನ್ನಪ್ಪಬಹುದು.
ನೀಲಿ ರೋಗ ಕಂಡುಬಂದಾಗ ಚಿಕಿತ್ಸೆ ಮಾಡುವ ವಿಧಾನ
ವೈರಾಣುವಿನಿಂದ ಹರಡುವ ಈ ಖಾಯಿಲೆಗೆ ಚಿಕಿತ್ಸೆ ನೀಡುವ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಆದಾಗ್ಯೂ ಜ್ವರ, ನೋವು, ನಂಜು ನಿವಾರಣೆಗಾಗಿ ಚಿಕಿತ್ಸೆಯನ್ನು ನೀಡಬಹುದು. ರೋಗ ಹರಡುವ ಮುನ್ನವೇ ಲಸಿಕೆ ಹಾಕಿಸುವುದು ಅಗತ್ಯ.
ಮೂಗು ಒಸಡು ಮತ್ತು ಬಾಯಿಯನ್ನು ನಂಜು ನಿರೋಧಕ ದ್ರಾವಣ/ಅಡುಗೆ ಸೋಡಾದಿಂದ ಶುಚಿಗೊಳಿಸಬೇಕು. ಬಾಯಿಗೆ ಜೇನುತುಪ್ಪ ಸವರುವುದರಿಂದ ರೋಗ ಉಲ್ಬಣವಾಗುವುದನ್ನು ತಡೆಯಬಹುದು. ರಾಗಿ, ಜೋಳದ ಗಂಜಿ ಮತ್ತು ಹೆಸರು ಬೇಳೆ ಹೂರಣವನ್ನು ಕೊಟ್ಟು ಶಕ್ತಿಯನ್ನು ಹೆಚ್ಚಿಸುವ ಆರೈಕೆ ಮಾಡಿದರೆ ರೋಗಪೀಡಿತ ಕುರಿ/ಮೆಕೆಗಳನ್ನು ಬದುಕಿಸಿಕೊಳ್ಳಬಹುದು.
ನಿಯಂತ್ರಣ ಕ್ರಮಗಳು
ಬೆಳಿಗ್ಗೆ ಮತ್ತು ಸಂಜೆ ಕುರಿಹಟ್ಟಿ ಸುತ್ತ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು. ಸುತ್ತಮುತ್ತ ಕೀಟನಾಶಕ ದ್ರಾವಣ ಸಿಂಪಡಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಸೊಳ್ಳೆಗಳು ವೃದ್ದಿಯಾಗದಂತೆ ನೋಡಿಕೊಳ್ಳಬೇಕು. ರೋಗಗ್ರಸ್ಥ ಕುರಿಯನ್ನು ಹೊರಗೆ ಮೇಯಿಸಲು ಕರೆದೊಯ್ಯದೇ ಹಟ್ಟಿಯಲ್ಲಿಯೇ ಮೆತ್ತನೆಯ ಆಹಾರ ಕೊಡಬೇಕು. ಒಣ ಹುಲ್ಲನ್ನು ಆಹಾರವಾಗಿ ನೀಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸಬಾರದು ಉಣ್ಣೆ ಇರುವುದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು. ಸಾಧ್ಯವಾದರೆ ಸೊಳ್ಳೆಪರದೆ ಉಪಯೋಗಿಸಬಹುದು.
ಕುರುಡು ನೊಣಗಳು ಬೆಳಿಗ್ಗೆ ಸೂರ್ಯ ಹುಟ್ಟಿದ ನಂತರದ ಒಂದು ಗಂಟೆ ಮತ್ತೆ ಸಂಜೆ ಸೂರ್ಯ ಮುಳುಗುವ ಒಂದು ಗಂಟೆ ಮುಂಚೆ ಬಹಳ ಚುರುಕಾಗಿರುತ್ತವೆ. ಹಾಗಾಗಿ 9 ಗಂಟೆ ನಂತರ ಹೊರಗಡೆ ಮೇಯಲು ಬಿಡಬಹುದು. ಹಾಗೂ 5 ಗಂಟೆಯ ಒಳಗೆ ಹಟ್ಟಿಗೆ ತರುವುದು ಸೂಕ್ತ. ತಗ್ಗು ಮತ್ತು ಜೌಗು ಪ್ರದೇಶಗಳಿಗಿಂತ ಎತ್ತರದ ಒಣ ಭೂಮಿಯಲ್ಲಿ ಮೇಯಿಸುವುದು ಸೂಕ್ತ.
ರೋಗ ಕಂಡ ಕೂಡಲೇ ಕುರಿಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಹಾಗೂ ಸೂಕ್ತ ಸಲಹೆ ಪಡೆಯುವುದು ಸೂಕ್ತ. ನಾಟಿ ಔಷಧ ಅಥವಾ ಪಶುವೈದ್ಯರ ಸಲಹೆ ಇಲ್ಲದೆ ನೇರವಾಗಿ ಔಷಧಿ ಅಂಗಡಿಗಳಿಂದ ಔಷಧಿಗಳನ್ನು ಪಡೆದು ಚಿಕಿತ್ಸೆ ನೀಡುವುದು ಕುರಿ/ಮೇಕೆಗಳ ಪ್ರಾಣಕ್ಕೆ ಕುತ್ತಾಗಬಹುದು. ಮತ್ತು ರೈತರಿಗೆ ಆರ್ಥಿಕ ನಷ್ಟವುಂಟಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಮಾವು ಬೆಳೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ

ಸುದ್ದಿದಿನ,ಶಿವಮೊಗ್ಗ : ತೋಟಗಾರಿಕೆ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿನ ಮಾವು ಬೆಳೆಗೆ ಬೂದಿ ರೋಗ, ಮತ್ತು ಜಿಗಿ ಹುಳುಗಳ ಬಾಧೆ ಕಂಡುಬರುವ ಸಾಧ್ಯತೆಯಿರುವುದರಿಂದ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆಗಳು ಇರುತ್ತವೆ, ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಮಾವು ಬೆಳೆ ಕೃಷಿಕರು ಈ ಕೆಳಗೆ ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಹತೋಟಿ ಮಾಡುವಂತೆ ಸೂಚನೆ ನೀಡಿದೆ.
ಬೂದಿ ರೋಗಕ್ಕೆ ತುತ್ತಾದ ಗಿಡದ ಎಲೆಗಳು, ಹೂಗೊಂಚಲುಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ ಹಾಗೂ ಎಲೆಗಳು ಮುರುಟಿ ನಂತರದ ದಿನಗಳಲ್ಲಿ ಎಳೆಯ ಕಾಯಿಗಳು ಉದುರುತ್ತವೆ. ಬೂದಿ ರೋಗದ ನಿರ್ವಹಣೆಗೆ ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತಿರುತ್ತದೆ.
ರೋಗಕ್ಕೆ ತುತ್ತದಾದ ಮರದ ಭಾಗಗಳನ್ನು ತೆಗೆದು ನಾಶಪಡಿಸುವುದು, ಮರಗಳ ತಳ ಭಾಗದಲ್ಲಿ ಉದುರಿದ ಒಣಗಿದ ಎಲೆ, ಹೂ ಗೊಂಚಲುಗಳು ಹಾಗೂ ಬಟಾಣಿ ಹೀಚುಗಳನ್ನು ಆರಿಸಿ ಸುಡುವುದು. ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವುದು. 15 ರಿಂದ 20 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸುವುದು ಸೂಕ್ತ.
ಜಿಗಿ ಹುಳು ಕೀಟದ ಹಾನಿಯ ಲಕ್ಷಣಗಳು
ಜಿಗಿಹುಳು ಕೀಟಗಳು ಅಂಟು ಪದಾರ್ಥವನ್ನು ಸ್ರವಿಸುವುದರಿಂದ ಹೂ ಗೊಂಚಲಿನಲ್ಲಿ ಕಪ್ಪು ಬೂಸ್ಟ್ ಬೆಳವಣಿಗೆಕಂಡುಬರುತ್ತದೆ. ಕೀಟದ ನಿರ್ವಹಣೆಗೆ ಅಝಾಡಿರೆಕ್ಟಿನ್ 7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್ಡೈಜಿಂ ಜೊತೆಗೆ ಪ್ರತಿ 200 ಲೀಟರ್ ನೀರಿಗೆ 400 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 100 ಮಿ.ಲೀ.ಇಮಿಡಾಕ್ಲೋಪಿಡ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವಂತೆ ತೋಟಗಾರಿಕೆ ಇಲಾಖೆಯು ಮಾವು ಬೆಳೆಗಾರರಿಗೆ ಸಲಹೆ ಸೂಚನೆ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 hours ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಭಾವ ಭೈರಾಗಿ5 days ago
ಕವಿತೆ | ನೀ ಎಂಥ ಮಕ್ಳಿಗೆ ಜನ್ಮ ಕೊಟ್ಟೆ ನನ್ನವ್ವ..?
-
ಬಹಿರಂಗ2 days ago
ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್
-
ರಾಜಕೀಯ3 days ago
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
-
ಲೈಫ್ ಸ್ಟೈಲ್4 days ago
ನೀಲಿ ನಾಲಿಗೆ ರೋಗ ಮತ್ತು ಚಿಕಿತ್ಸಾ ವಿಧಾನ
-
ದಿನದ ಸುದ್ದಿ6 days ago
ವಿಡಿಯೋ | ವಿಶ್ವ ಪ್ರಸಿದ್ಧ ‘ಬುದ್ಧ ಮಲಗಿದ ದೃಶ್ಯತಾಣ’ದ ಅಭಿವೃದ್ಧಿ ಕಾರ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ಗೋಲ್ ಮಾಲ್..!
-
ಲೈಫ್ ಸ್ಟೈಲ್7 days ago
ಮಾವು ಬೆಳೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ
-
ಸಿನಿ ಸುದ್ದಿ5 days ago
ವಿಡಿಯೋ | ‘ಒಡೆಯ’ ನ ಖಡಕ್ ಟ್ರೈಲರ್ ರಿಲೀಸ್ : ಮಿಸ್ ಮಾಡ್ದೆ ನೋಡಿ