Connect with us

ಲೈಫ್ ಸ್ಟೈಲ್

ಲಾಲ್ ಬಾಗ್ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!

Published

on

ಲಾಲ್‍ಬಾಗ್ ಎಂದರೆ ಎಲ್ಲರಿಗೂ ನೆನಪಾಗುವುದು ಅಲ್ಲಿನ ಗಾಜಿನಮನೆ, ದೊಡ್ಡ ಗಡಿಯಾರ, ವಿಧವಿಧ ಹೂವಿನ ಗಿಡಗಳ ತೋಟ, ಹಳೆದಾದ ಮರಗಳು ಹಾಗೂ ಸುಂದರವಾದ ಕೆರೆ ಮತ್ತು ಸುತ್ತಮುತ್ತಲಿನ ಪರಿಸರ. ಇನ್ನೂ ಹೆಚ್ಚಾಗಿ ನೆನಪಾಗುವುದು, ಪ್ರತಿ ವರ್ಷ ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯ ದಿನೋತ್ಸವದ ಸಂದರ್ಭಗಳಲ್ಲಿ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನಗಳು.

ಈ ಬಾರಿಯ ಫಲಪುಷ್ಪ ಪ್ರದರ್ಶನದ ಬಗ್ಗೆ ತಿಳಿಯುವ ಮುನ್ನ ಲಾಲ್‍ಬಾಗ್ ಬಗ್ಗೆ ಸ್ವಲ್ಪ ತಿಳಿಯೋಣ.

ಲಾಲ್‍ಬಾಗ್, ಬೆಂಗಳೂರಿನ ಹೃದಯ ಭಾಗದಲ್ಲಿ ಇದೆ. 240 ಎಕರೆ ಪ್ರದೇಶದ ಲಾಲ್‍ಬಾಗ್‍ನಲ್ಲಿ ಸುಮಾರು 1,854 ಬಗೆಯ ಗಿಡಗಳು ಇವೆ. ಹೈದರಾಲಿಯು ಇದನ್ನು 1760 ರಲ್ಲಿ ನಿರ್ಮಿಸಲು ಸೂಚಿಸುತ್ತಾನೆ. ಆದರೆ, ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಕಾಲದಲ್ಲಿ ಪೂರ್ಣಗೊಳಿಸಲಾಯಿತು. ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು, ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನು ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದರು. ತುಮಕೂರು ಜಿಲ್ಲೆಯ, ಶಿರಾ ತಾಲ್ಲೂಕಿನಲ್ಲಿರುವ ಮೊಘಲ್ ಉದ್ಯಾನವು ಲಾಲ್‍ಬಾಗ್‍ನ ವಿನ್ಯಾಸಕ್ಕೆ ಮೂಲವಾಗಿದೆ.

ಲಾಲ್‍ಬಾಗ್‍ಗೆ, ಲಾಲ್‍ಬಾಗ್ ಎಂದು ಹೆಸರು ಬರಲು ಮೂರು ಕಾರಣಗಳಿವೆ ಎಂದು ಹೇಳಲಾಗುತ್ತದೆ. ಮೊದಲನೆಯದಾಗಿ, ಇತಿಹಾಸಕಾರ ಮನ್ಸೂರ್ ಅಲಿ ಹೇಳುವ ಪ್ರಕಾರ, ಶ್ರೀರಂಗಪಟ್ಟಣದಲ್ಲಿ ಇರುವ ಲಾಲ್‍ಮಹಲ್ ಅರಮನೆಯ ಹತ್ತಿರ ಇರುವ ತೋಟ, ಇದೇ ಮಾದರಿಯಲ್ಲಿ ಇರುವುದು. ಎರಡನೆಯದು ಹೈದರಾಲಿಯ ತಾಯಿ ಲಾಲ್‍ಬಾಯಿ ಅವರ ಹೆಸರು ಎಂದೂ ಕೆಲವರು ಹೇಳುತ್ತಾರೆ. ಮೂರನೆಯದಾಗಿ, ಲಾಲ್‍ಬಾಗ್‍ನಲ್ಲಿ ಬೆಳೆದಂತಹ ಕೆಂಪು ಗುಲಾಬಿಗಳಿಂದ ಆ ಹೆಸರು ಬಂದಿತು ಎನ್ನುತ್ತಾರೆ.

ಲಾಲ್ ಬಾಗ್‍ನಲ್ಲಿ ಪ್ರಮುಖವಾಗಿ ನೋಡಬೇಕಾಗಿರುವುದು

• ಗಾಜಿನ ಮನೆ-ಇದನ್ನು ಲಂಡನ್ನಿನ ಕ್ರಿಸ್ಟಲ್ ಪಾಲೇಸ್ ಮಾದರಿಯಲ್ಲಿದೆ. ಇದಕ್ಕೆ ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅವರು ನವಂಬರ್ 30, 1898 ರಂದು ಅಡಿಗಲ್ಲು ಹಾಕಿದರು. ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.

• ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆ.

• ಭಾರತದ ಮೊದಲ ಹುಲ್ಲಿನ ಗಡಿಯಾರ.

• ನೂರಾರು ವರ್ಷ ಅಪರೂಪದ ಹಳೆಯ ಮರಗಳ ದೊಡ್ಡದಾದ ಸಂಗ್ರಹ.

• 20 ಮಿಲಿಯನ್ ವರ್ಷ ಹಳೆಯ ಕೋನಿಫೆರಸ್ ಮರದ ಪಳವಳಿಕೆ.

• ಪರ್ಷಿಯಾ, ಅಫ್ಘಾನಿಸ್ತಾನ ಮತ್ತು ಪ್ರಾನ್ಸ್‍ನ ಹಲವಾರು ಅಪರೂಪದ ಸಸ್ಯಗಳು.

• 3000 ವರ್ಷಕ್ಕೂ ಹಳೆಯದಾದ ಬೃಹದಾಕಾರದ ಬಂಡೆ.

• ಸುಂದರವಾದ ಕೆರೆ.

ಫಲಪುಷ್ಪ ಪ್ರದರ್ಶನ

ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನವನ್ನು 1912 ರಲ್ಲಿ ಜಿ.ಹೆಚ್. ಕೃಂಬಿಗಲ್ ರವರು ಪ್ರಥಮವಾಗಿ ಪ್ರಾರಂಭಿಸಿದರು. ಈ ಸಾಲಿನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವು 208ನೇ ಪ್ರದರ್ಶನವಾಗಿದೆ.

ಈ ಬಾರಿ ಮುಖ್ಯವಾಗಿ ರಾಷ್ಟ್ರದ ಯೋಧರಿಗೆ ನಮನ ಸಲ್ಲಿಸಲು, ಭಾರತದ ಸಮಗ್ರ ರಕ್ಷಣಾ ವ್ಯವಸ್ಥೆಯನ್ನು 36 ಸದಸ್ಯರ ತಂಡ 9 ದಿನಗಳಲ್ಲಿ ಅನಾವರಣಗೊಳಿಸಿದೆ ಅಲ್ಲದೇ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿದ ಸವಿನೆನಪಿಗಾಗಿ ಗೌರವವನ್ನೂ ಸಹ ಸಲ್ಲಿಸಲಾಗಿದೆ.

ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆಯೇ, ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಯುದ್ಧ ಸ್ಮಾರಕ ‘ಅಮರ್ ಜವಾನ್ ಜ್ಯೋತಿ’ ಯ ಪ್ರತಿಕೃತಿಯನ್ನು ಇರಿಸಲಾಗಿದೆ. ಅದರ ಹಿಂಭಾಗದಲ್ಲಿ ಸಮುದ್ರ ಮಟ್ಟದಿಂದ 5753 ಮೀಟರ್ ಎತ್ತರದಲ್ಲಿರುವ ಸಿಯಾಚಿನ್ ಹಿಮಪರ್ವತವನ್ನು ಹೋಲುವ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.

ಆ ಪರ್ವತದ ಮುಂಭಾಗದಲ್ಲಿ, ಭೂ ಸೇನೆಯ ಯುದ್ಧ ಟ್ಯಾಂಕರ್, ವಾಯುಸೇನೆಯ ಯುದ್ಧ ವಿಮಾನ, ಹೆಲಿಕಾಪ್ಟರ್, ಫೈಟರ್ ಜೆಟ್‍ಗಳು, ನೌಕಾದಳದ ಸಮರ ನೌಕೆ, ದೇಶದ ಗಡಿ ರಕ್ಷಣಾ ಪಡೆಗೆ ಸಂಬಂಧಿಸಿದ ಮಾದರಿಗಳನ್ನು ಭತ್ತದ ಹುಲ್ಲು, ಥರ್ಮೋಕೋಲ್ ಮತ್ತು ಸಾವಿರಾರು ಹೂವುಗಳಿಂದ ಸಿಂಗರಿಸಲಾಗಿದೆ. ಹಾಗೆಯೇ ಸಿಯಾಚಿನ್‍ನಲ್ಲಿ ಸೇನೆಯ ಕಾರ್ಯಾಚರಣೆ ಬಗ್ಗೆ, ಕೊರೆಯುವ ಚಳಿಯಲ್ಲಿ ಸೈನಿಕರು ಕರ್ತವ್ಯ ನಿರತರಾಗಿರುವ ಬಗ್ಗೆ, ಹಿಮದಿಂದ ಕೂಡಿರುವ ಬೆಟ್ಟವನ್ನು ಸೈನಿಕರು ಹತ್ತುತ್ತಿರುವ ಮಾದರಿಗಳು ಎಲ್ಲರನ್ನೂ ಆಕರ್ಷಿಸುತ್ತಿದೆ.

ದೇಶ ಕಾಯುವ ಸಂದರ್ಭದಲ್ಲಿ, ಹಿಮದಡಿಯಲ್ಲಿ ಸಿಲುಕಿ ಮರಣ ಹೊಂದಿದ ವೀರ ಕನ್ನಡಿಗ, ಹನುಂತಪ್ಪ ಕೊಪ್ಪದ್ ರವರ ಧಾನ್ಯಗಳಿಂದ ರಚಿಸಲ್ಪಟ್ಟ ಭಾವಚಿತ್ರ ಹಾಗೂ ಅಕ್ಕಿಯಿಂದ ರಚಿಸಿರುವ ಭಾರತದ ತ್ರಿವರ್ಣ ಧ್ವಜವು ಎಲ್ಲರ ಕಣ್ಸೆಳೆಯುತ್ತದೆ. ಮುಂದುವರೆದು, ಶೌರ್ಯ ಚಕ್ರಗಳ ಬಗ್ಗೆ, ಸೈನಿಕರ ಸುಭಾಷಿತಗಳು ಹಾಗೂ ಇನ್ನಿತರೆ ಮಾಹಿತಿಗಳ ಫಲಕಗಳನ್ನೂ ಸಹ ಪ್ರದರ್ಶಿಸಲಾಗಿದೆ.

ಬೆಟ್ಟದ ಹಿಂಭಾಗದಲ್ಲಿ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವುದರಿಂದ ಅದಕ್ಕೆ ಗೌರವ ಸಮರ್ಪಿಸಲು ಕೆಂಪು, ಬಿಳಿ, ಕೇಸರಿ ಗುಲಾಬಿಗಳನ್ನು ಹೆಚ್ಚಾಗಿ ಬಳಸಿ ಬೃಹತ್ ಗಾತ್ರದ ಕ್ಯಾಮರಾ, ಫಿಲ್ಮ್‍ರೋಲ್, ಕ್ಲಾಪ್ ಬೋರ್ಡ್ ಇನ್ನೂ ಮುಂತಾದುವುಗಳನ್ನು ನೋಡುಗರಿಗೆ ಆಕರ್ಷಿಸುವಂತೆ ನಿರ್ಮಿಸಲಾಗಿದೆ. ಚಿತ್ರೋದ್ಯಮದಲ್ಲಿ ತೆರೆಯ ಹಿಂದೆ ಕಾರ್ಯನಿರ್ವಹಿಸುವ ಎಲ್ಲಾ ತಂತ್ರಜ್ಞರಿಗೆ ನಮನ ಸಲ್ಲಿಸಲಾಗಿದೆ.

ಬೆಟ್ಟದ ಎಡಭಾಗದಲ್ಲಿ 12 ಅಡಿ ಎತ್ತರದ, 25 ಸಾವಿರ ಸೇವಂತಿಗೆ ಮತ್ತು ಕಾರ್ನೆಷಿಯ ಹೂವುಗಳನ್ನು ಬಳಸಿ ಬೃಹತ್ ಗಾತ್ರದ ಸಿಂಹದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಈ ಸಿಂಹವು ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳುವ ನೆಚ್ಚಿನ ತಾಣವಾಗಿದೆ. ಈ ಸಿಂಹದ ಹಿಂಭಾಗದಲ್ಲಿ ಊಟಿಯ ಫರ್ನ್ ಹಿಲ್‍ನ ಆರ್ಕಿಡ್ ಹೂವಿನ ಪರಿಮಳ ಹಾಗೂ ಸೌಂದರ್ಯ ಎಲ್ಲರ ಮನಸನ್ನು ಸೂರೆಗೊಳ್ಳುತ್ತದೆ.

ಗಾಜಿನ ಮನೆ ಒಳಗೆ ಸುತ್ತಲೂ ಬಾಲ್ಲ್‍ಮ್, ಸ್ಪೈದರ್ ಪ್ಲಾಂಟ್, ಆಂಟೋರಿಯನಂ, ಲಂಟಾನ್, ಅಸ್ಟರ್, ಕೆಲೆಂಡುಲಾ, ಸಾಲ್ವಿಯಾ, ಲಾಕ್ರ್ಸ್‍ಪರ್, ಡಯಾಂತನಿ, ಹೈಡ್ರಾಂಜಿಯಾ, ಜೆನಿಯಾ, ಚೆಂಡು ಹೂವು, ಹೀಗೆ ಹಲವು ಬಗೆಯ ಗಿಡಗಳು ಎಲ್ಲರ ಗಮನ ಸೆಳೆಯುತ್ತವೆ. ಹಿಮ್ಮೇಳದಲ್ಲಿ ಕೇಳುತ್ತಿದ್ದ, ಲಘು ಸಂಗೀತವು ಎಲ್ಲರ ಮನಸ್ಸಿಗೆ ಮೊದ ನೀಡುತ್ತದೆ.

ಗಾಜಿನ ಮನೆಯ ಸುತ್ತಲೂ 4 ವಿಭಾಗಗಳಲ್ಲಿ ಯುದ್ಧ ಟ್ಯಾಂಕರ್, ಕ್ಷಿಪಣಿ, ಸಮರ ನೌಕೆ, ಜೆಟ್ ಯುದ್ಧ ವಿಮಾನಗಳ ಮಾದರಿಯನ್ನು ಭತ್ತದ ಹುಲ್ಲಿನಿಂದ ಬೃಹದಾಕಾರವಾಗಿ ನಿರ್ಮಿಸಲಾಗಿದೆ.

ಗಾಜಿನ ಮನೆಯ ಹೊರಾಂಗಣದಲ್ಲಿ ಹೂವಿನಿಂದ ಮಾಡಿದ ಜಲಪಾತ, ನವಿಲು, ಹೃದಯಾಕಾರದ ಕಮಾನು, ಹೂವುಗಳ ತೂಗು ಗುಚ್ಛ ಕಣ್ಣಿಗೆ ಆನಂದವನ್ನು ನೀಡುತ್ತವೆ.

ಈ ಬಾರಿ ಇನ್ನೊಂದು ವಿಶೇಷವೆಂದರೆ ಲಾಲ್‍ಬಾಗ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗಿದೆ.

ಒಟ್ಟಾರೆ 2 ಕೋಟಿ ರೂ.ವೆಚ್ಚದಲ್ಲಿ, 1 ಲಕ್ಷ 20 ಸಾವಿರಕ್ಕೂ ಅಧಿಕ ಹೂಗಳನ್ನು ಬಳಸಿ ಗಾಜಿನ ಮನೆಯಲ್ಲಿ ಪುಷ್ಪ
ಪ್ರದರ್ಶನವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಈ ಪ್ರದರ್ಶನವು ಆಗಸ್ಟ್ 4 ರಂದು ಪ್ರಾರಂಭಗೊಂಡಿದ್ದು, ಆಗಸ್ಟ್ 15 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಆಸಕ್ತರು ಒಮ್ಮೆ ಭೇಟಿ ನೀಡಿ ಆನಂದ ಹೊಂದಬಹುದಾಗಿದೆ.

-ಸೌಮ್ಯ ಅಶೋಕ್
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ನಿಮ್ಮ ಕನಸಿನ ನೌಕರಿಯ ಪ್ರಯತ್ನ ನಡೆಸುತ್ತಿದ್ದರೇ ಹೀಗೆ ಮಾಡಿ..!

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150

ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ ಉತ್ತಮ ಕೆಲಸ ಅಪೇಕ್ಷಿಸುವುದು ಸಹಜ. ಅದರಲ್ಲೂ ಸರ್ಕಾರಿ ಕೆಲಸಕ್ಕಾಗಿ ನೀವು ಬಹಳಷ್ಟು ಕಷ್ಟಪಡುತ್ತಿರುವ ಸಾಧ್ಯತೆ ಇರುತ್ತದೆ.

ನಿಮ್ಮ ಕನಸಿನ ಕೆಲಸವನ್ನು ಸುಲಭವಾಗಿ ನೆರವೇರಿಸಿಕೊಳ್ಳಲು ವಿದ್ಯೆ ಮತ್ತು ಅದಕ್ಕೆ ಬೇಕಾಗಿರುವ ಸೌಕರ್ಯ, ಸವಲತ್ತು ಅವಶ್ಯವಿರುತ್ತದೆ. ಇಂತಹ ವಿಚಾರಗಳನ್ನು ಹಾಗೂ ನಿಮ್ಮ ಬುದ್ಧಿಶಕ್ತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಈ ಪ್ರಯೋಗ ತಂತ್ರ ಉಪಯುಕ್ತವಾಗಿದೆ.

ಮಣ್ಣಿನ ಕುಡಿಕೆಯಲ್ಲಿ 5 ಗುಂಡಗಿರುವ ಅಡಿಕೆ, ಪಚ್ಚಕರ್ಪೂರ, ತುಳಸಿ ಎಲೆ, ಮತ್ತು ಅರಳಿ ಎಲೆಯನ್ನು ಹಾಕಿ ಕೆಂಪು ವಸ್ತ್ರದಿಂದ ಮುಚ್ಚಿ ಇದನ್ನು ಬಿಳಿ ಎಕ್ಕದ ಗಿಡದ ಬಳಿಗೆ ಇಡಿ. ನಿಮ್ಮ ಕಾರ್ಯ ನೆರವೇರುವುದು ನಿಶ್ಚಿತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ:9945410150

Continue Reading

ಲೈಫ್ ಸ್ಟೈಲ್

ಬುಧವಾರದ ಭವಿಷ್ಯ | ಈ ದಿನ ನಿಮ್ಮದು, ಕಠಿಣ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕರೆಮಾಡಿ

Published

on

ಶ್ರೀ ಗಣಪತಿ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ.

ಇಂದೇ ಕರೆ ಮಾಡಿ.
9945410150

ಮೇಷ ರಾಶಿ

ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವ ನಿಮ್ಮ ವ್ಯವಸ್ಥೆ ಉತ್ತಮವಾಗಿರುತ್ತದೆ. ಈ ದಿನ ಲೇವಾದೇವಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅಷ್ಟು ಸೂಕ್ತವಲ್ಲ. ಬಾಲ್ಯ ಸ್ನೇಹಿತರ ಆಗಮನದಿಂದ ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವ ಸಾಧ್ಯತೆ ಕಂಡುಬರುತ್ತದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ವೃಷಭ ರಾಶಿ

ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಯಶಸ್ವಿ ಹಾಗೂ ಲಾಭ ಗಳಿಕೆ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಕಂಡುಬರುತ್ತದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ನಿಮ್ಮ ಮನಸ್ಸು ವಾಲ ಬಹುದಾದ ದಿನವಿದು.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಮಿಥುನ ರಾಶಿ

ಭವಿಷ್ಯದ ಭದ್ರತೆಗಾಗಿ ಉತ್ತಮವಾದ ಯೋಜನೆಗಳನ್ನು ತಯಾರಿ ಮಾಡುವಿರಿ. ಹಣಕಾಸಿನ ಸ್ಥಿತಿ ಸಮಾಧಾನಕರವಾಗಿ ನಡೆಯುವಂಥದ್ದು ಕಾಣಬಹುದು. ಆತ್ಮೀಯ ವ್ಯಕ್ತಿಗಳೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ನಿಮ್ಮಲ್ಲಿನ ಅಲಕ್ಷತನವನ್ನು ತೆಗೆದುಹಾಕಿ. ಯೋಜನೆಯ ಪೂರ್ಣ ಪ್ರಮಾಣದ ಲಾಭವನ್ನು ಪಡೆಯಲು ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳಿ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕರ್ಕಾಟಕ ರಾಶಿ

ಕೆಲಸದಲ್ಲಿ ಇನ್ನೊಬ್ಬರನ್ನು ಅವಲಂಬಿಸಿ ಕೂರುವುದು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯಿಂದ ತೆಗೆದುಕೊಂಡಿರುವ ಕೆಲಸವನ್ನು ಪೂರ್ಣ ಮಾಡುವುದು ಒಳಿತು. ಸ್ವಂತ ನಿರ್ಧಾರಗಳು ನಿಮ್ಮ ಜೀವನದ ದಿಕ್ಕನ್ನು ಬದಲಿಸಬಹುದಾದ ಸಾಧ್ಯತೆ ಇದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಸಿಂಹ ರಾಶಿ

ಮೋಸದ ಹೂಡಿಕೆಗಳಿಂದ ಆದಷ್ಟು ಎಚ್ಚರಿಕೆಯಿರಲಿ. ಆಹಾರದ ವಿಷಯದಲ್ಲಿ ಜಾಗ್ರತೆ ಆವಶ್ಯಕ, ಉದರ ಬೇನೆ ಬರುವಂತಹ ಸಾಧ್ಯತೆ ಇದೆ. ನಿಮ್ಮಲ್ಲಿ ಇರುವ ನಿರಾಸಕ್ತಿಯನ್ನು ತೊಲಗಿಸಲು ಪ್ರಯತ್ನಿಸಿ. ವಿರೋಧಿ ವರ್ಗದಿಂದ ನಿಮ್ಮ ವಿರುದ್ಧ ಕೆಲಸದಲ್ಲಿ ಕುತಂತ್ರ ನಡೆಯಬಹುದಾದ ಸಾಧ್ಯತೆ ಇದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕನ್ಯಾ ರಾಶಿ

ನಿಮ್ಮ ಕಟು ಧೋರಣೆಯನ್ನು ತೆಗೆದಿಟ್ಟು ಸ್ನೇಹಪರ ಹಸ್ತವನ್ನು ಚಾಚುವುದು ಒಳ್ಳೆಯದು. ಯೋಜನೆಗಳನ್ನು ಆದಷ್ಟು ಸಮಗ್ರವಾಗಿ ಅಧ್ಯಯನ ಮಾಡಿ ನಂತರ ಕಾರ್ಯಗತವಾಗುವುದು ಒಳಿತು. ನಿಮ್ಮ ಕೆಲಸಗಳಲ್ಲಿ ಮೇಲಾಧಿಕಾರಿಗಳ ಹಸ್ತಕ್ಷೇಪ ಹೆಚ್ಚಾಗುತ್ತದೆ. ಆದಷ್ಟು ಈ ದಿನ ತಾಳ್ಮೆ ಕಾಪಾಡಿಕೊಳ್ಳಿ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ ಕಂಡುಬರುತ್ತದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ತುಲಾ ರಾಶಿ

ದೈವಿಕ ಕಾರ್ಯಕ್ರಮಗಳಿಗೆ ಒಲವು ವ್ಯಕ್ತಪಡಿಸುವಿರಿ. ಈ ದಿನ ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವನ್ನು ಆಸ್ವಾದಿಸಲಿದ್ದೀರಿ. ಆದಷ್ಟು ಇದು ಇನ್ನೊಬ್ಬರನ್ನು ಹೊಟ್ಟೆಕಿಚ್ಚು ಅಥವಾ ಮತ್ಸರ ಬರೆದಿರುವ ಹಾಗೆ ನೋಡಿಕೊಳ್ಳಿ. ವಿದೇಶ ಪ್ರವಾಸದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಮೇಲಾಧಿಕಾರಿಗಳಿಂದ ನಿಮಗೆ ಹೆಚ್ಚುವರಿ ಜವಾಬ್ದಾರಿ ಮತ್ತು ವಿಶೇಷ ಸೂಚನೆಗಳು ಕಾಣಬಹುದು.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ವೃಶ್ಚಿಕ ರಾಶಿ

ಸ್ವಂತ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿದ್ದು ಸಕಾಲದಲ್ಲಿ ಕಾರ್ಯವನ್ನು ಮಾಡಲು ಪ್ರಯತ್ನಿಸಿ, ವಿಳಂಬ ಧೋರಣೆಯಿಂದ ತೊಂದರೆಯಲ್ಲಿ ಸಿಲುಕ ಬಹುದಾಗಿದೆ ಎಚ್ಚರ. ನಿಮ್ಮ ಸ್ನೇಹಿತರು ನಿಮ್ಮ ವಿಚಾರ ಗಳಿಂದ ಪ್ರಭಾವಿತರಾಗುತ್ತಾರೆ. ಸಂಗಾತಿಯ ನಡುವೆ ಆದಷ್ಟು ಪ್ರೇಮ ಮತ್ತು ಪ್ರೀತಿಯಿಂದ ವರ್ತಿಸುವುದು ಒಳ್ಳೆಯದು.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಧನಸ್ಸು ರಾಶಿ

ನಿಮ್ಮ ಸ್ವಂತ ನಿಲುವಿನಿಂದ ಈ ದಿನ ಕೆಲಸದಲ್ಲಿ ಪಾಲ್ಗೊಳ್ಳುತ್ತೀರಿ. ಮನಸ್ಸಿನ ಇಷ್ಟಾರ್ಥಗಳು ಈಡೇರುವ ಸಾಧ್ಯತೆಗಳು ಕಂಡು ಬರುತ್ತದೆ. ನಿಮ್ಮ ಯೋಗ್ಯವಾದ ಮಾತುಗಳಿಗೆ ಕುಟುಂಬದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಲೆ ಸಿಗುವುದು ನಿಶ್ಚಿತ. ಸಂಘ ಸಂಸ್ಥೆ ಹಾಗೂ ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರಗಳು ವಿಳಂಬದಿಂದ ಕೂಡಿರಲಿದೆ. ಬರುವ ಹಣಕಾಸಿನಲ್ಲಿ ಅಡೆತಡೆ ಕಂಡುಬರುವ ಸಾಧ್ಯತೆ ಕಾಣಬಹುದು.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಮಕರ ರಾಶಿ

ಕುಟುಂಬದಲ್ಲಿರುವ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಿಮ್ಮಿಂದ ಆಗಬೇಕಾಗಿದೆ. ನಂಬಿಕಸ್ಥರಿಂದ ದ್ರೋಹಗಳು ಆಗುವ ಸಾಧ್ಯತೆ ಕಂಡುಬರುವುದು. ಹೂಡಿಕೆಗಳಲ್ಲಿ ನಿಮ್ಮ ಅಗತ್ಯ ವಿವೇಚನೆಯನ್ನು ಬಳಸುವುದು ಕ್ಷೇಮ. ಮನಸ್ಸನ್ನು ಕೇಂದ್ರೀಕರಿಸಿ ಸಂಕಷ್ಟದಿಂದ ಪಾರಾಗುವ ಯೋಜನೆ ರೂಪಿಸಿ. ದುಂದು ವೆಚ್ಚಗಳಿಂದ ಆದಷ್ಟು ಪರಿಹಾರ ಪಡೆದುಕೊಳ್ಳಿ. ಕುಟುಂಬ ಸಮೇತ ದೈವ ದರ್ಶನ ಮಾಡುವ ಸಾಧ್ಯತೆ ಇದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕುಂಭ ರಾಶಿ

ನಿಮ್ಮ ಯೋಜನೆಗಳನ್ನು ವಿಸ್ತರಣೆ ಮಾಡಲು ಪ್ರಯತ್ನ ಪಡಬೇಕಾದ ಅನಿವಾರ್ಯತೆ ಇದೆ. ಸಾಲದ ಬಾಧೆಯಿಂದ ಪಾರಾಗುವ ಬಗ್ಗೆ ಆದಷ್ಟು ತ್ವರಿತವಾಗಿ ಯೋಚಿಸುವುದು ಅಗತ್ಯವಿದೆ. ಕೆಲಸದ ಬಗೆಗಿನ ನಿಮ್ಮ ಸಾಧನೆ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮ ಕಾರ್ಯಗಳಿಗೆ ನಿರೀಕ್ಷಿತ ಬೆಂಬಲ ಹಾಗೂ ಪ್ರಶಂಸೆ ದೊರೆಯಲಿದೆ. ಸಕಾರಾತ್ಮಕ ಫಲಿತಾಂಶದಿಂದ ಯಶಸ್ವಿದಾಯಕ ನಿರ್ಣಯವನ್ನು ಪಡೆಯುತ್ತೀರಿ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಮೀನ ರಾಶಿ

ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಮಾಡಿಕೊಳ್ಳುವಿರಿ. ನಿಮ್ಮ ಬೆಳವಣಿಗೆಗೆ ಸಾಮಾನ್ಯವಾಗಿ ಕೆಲವರು ಹೊಟ್ಟೆಕಿಚ್ಚು ಪಡಬಹುದು ಅವರನ್ನು ಅಲಕ್ಷಿಸಿ ಮುನ್ನಡೆಯಿರಿ. ಸಂಗಾತಿಯ ಹಿತಾಸಕ್ತಿಯನ್ನು ಕಡೆಗಣಿಸದೆ ನೀವು ಅವರ ಪ್ರೀತಿಗೆ ಪಾತ್ರರಾಗಬೇಕಾಗಿದೆ.

ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಲಭ್ಯರಿದ್ದಾರೆ. ಪರಿಹಾರ ಮಾರ್ಗದರ್ಶನಕ್ಕಾಗಿ

ಇಂದೇ ಕರೆ ಮಾಡಿ:9945410150

Continue Reading

ಲೈಫ್ ಸ್ಟೈಲ್

ಮದುವೆಯು ವಿಳಂಬವಾಗುತ್ತಿದೆಯೇ? ಚಿಂತೆ ಬೇಡ ಇಲ್ಲಿದೇ ಪರಿಹಾರ..!

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150

ದುವೆಯ ಕನಸು ನೀವು ಕಾಣುತ್ತಿರಬಹುದು. ಬರಬರುತ್ತಾ ವಯಸ್ಸು ಹೆಚ್ಚಾಗುತ್ತಾ ಹೋಗುತ್ತಿದೆ ಆದರೆ ಸೂಕ್ತ ಸಂಗಾತಿ ದೊರೆಯದೇ ಮನಸ್ಸಿಗೆ ಬೇಸರಪಟ್ಟು ಕೊಂಡಿರಬಹುದು.

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂಬ ಮಾತನ್ನು ಹಿರಿಯರು ಹೇಳುತ್ತಾರೆ, ಇದು ಸತ್ಯ. ಋಣ ಇದ್ಧ ಕಡೆ ಸಂಕಲ್ಪ ತಾನಾಗಿಯೇ ಕೂಡಿಬರುತ್ತದೆ.

ಕೆಲವು ಜಾತಕದಲ್ಲಿನ ದೋಷಗಳಿಂದ ವಿವಾಹವು ತಡೆ ಯಾಗುತ್ತಿರುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ನೀವು ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ, ಸರ್ಪಸಂಸ್ಕಾರ ನಾಗದೋಷಗಳಿಗೆ ಪರಿವರ್ತನೆ ಮಾಡಿಕೊಳ್ಳಿ, ಕುಜ ಮಂತ್ರ ಅಥವಾ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿ. ಇಂತಹ ಎಲ್ಲಾ ಚಟುವಟಿಕೆಗಳು ನಡೆಸಿಯು ಸಹ ವಿವಾಹ ಇನ್ನೂ ಕೂಡಿ ಬಂದಿಲ್ಲ ಎಂಬ ಚಿಂತೆ ನಿಮಗೆ ಕಾಡುತ್ತಿದ್ದರೆ ನಿಮ್ಮ ಜಾತಕವನ್ನು ಅಥವಾ ಹುಟ್ಟಿದ ಸಮಯ, ಸ್ಥಳ ಮತ್ತು ದಿನಾಂಕವನ್ನು ಕಳುಹಿಸಿ ಪರಿಹಾರ ಪಡೆದುಕೊಳ್ಳಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ:9945410150

Continue Reading
Advertisement

Title

ದಿನದ ಸುದ್ದಿ1 hour ago

ದಾವಣಗೆರೆ| ಇಸ್ಪೀಟ್ ಆಡಿ ಸಿಕ್ಕಿಬಿದ್ದ ಶಿಕ್ಷಣ ಇಲಾಖೆಯ 7 ಸಿಬ್ಬಂದಿ ಅಮಾನತು

ಸುದ್ದಿದಿನ, ದಾವಣಗೆರೆ: ಕೊರೊನಾ ಕರ್ತವ್ಯಕ್ಕೆ ನಿಯೋಜಿಸಿದ್ದಾಗ ಇಸ್ಪೀಟ್ ಜೂಜಾಟ ಆಡಿ ಸಿಕ್ಕಿ ಬಿದ್ದಿದ್ದ ದಾವಣಗೆರೆ ಉತ್ತರವಲಯದ ಬಿಇಓ ಕಚೇರಿಯ ಏಳು ಜನ ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ಆಯುಕ್ತ...

ದಿನದ ಸುದ್ದಿ2 hours ago

ದಾವಣಗೆರೆ | ಎಸ್ ಎಸ್ ಎಲ್ ಸಿ ಪರೀಕ್ಷೆ, ಜಿಲ್ಲೆಯಲ್ಲಿ 1150 ಕೊಠಡಿ ವ್ಯವಸ್ಥೆ ; ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿಗೆ ಅವಕಾಶ : ಡಿಡಿಪಿಐ ಪರಮೇಶ್ವರಪ್ಪ

ಸುದ್ದಿದಿನ,ದಾವಣಗೆರೆ: ಸರ್ಕಾರದ ಆದೇಶದಂತೆ ಜೂ.25 ರಿಂದ ಜು.4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಬೇಕು ಎಂದು ನಿರ್ಧರಿಸಿದ್ದೆವೇ. ಜಿಲ್ಲೆಯಲ್ಲಿ ಒಟ್ಟು 435 ಸರ್ಕಾರಿ ಶಾಲೆಗಳಿದ್ದು, 1150 ಕೊಠಡಿಗಳ ವ್ಯವಸ್ಥೆ...

ದಿನದ ಸುದ್ದಿ3 hours ago

ದಾವಣಗೆರೆ | ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಹಾಗೂ ಅವರ ಅವಲಂಬಿತ ಕುಂಟುಬದ ಸದಸ್ಯರಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಸ್ವಯಂ ಉದ್ಯೋಗ, ಸಮೃದ್ದಿ,...

ದಿನದ ಸುದ್ದಿ3 hours ago

ದಾವಣಗೆರೆ| ಅಂಡರ್ ಪಾಸ್ ನಿರ್ಮಿಸಲು ಗ್ರಾಮಸ್ಥರಿಂದ ಅಡ್ಡಿ: ಡಿಸಿ,ಎಸ್ಪಿಯಿಂದ ಮನವೊಲಿಕೆ

‌ಸುದ್ದಿದಿನ,ದಾವಣಗೆರೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಅಧಿಕಾರಿ...

ದಿನದ ಸುದ್ದಿ3 hours ago

ಚನ್ನಗಿರಿ | ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಎ.ಆರ್.ಟಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಚನ್ನಗಿರಿ ಇಲ್ಲಿ ಖಾಲಿ ಇರುವ 1 ವೈದ್ಯಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ...

ರಾಜಕೀಯ3 hours ago

ದಾವಣಗೆರೆ | ಜೂನ್ 11ರಂದು ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಜೂ.11 ರಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ...

ದಿನದ ಸುದ್ದಿ3 hours ago

‘ವಠಾರ ಶಾಲೆ’ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು : ಸಚಿವ ಸುರೇಶ ಕುಮಾರ್

ಸುದ್ದಿದಿನ,ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಪರೀಕ್ಷೆ ನಡೆಸಲು...

ಲೈಫ್ ಸ್ಟೈಲ್3 hours ago

ನಿಮ್ಮ ಕನಸಿನ ನೌಕರಿಯ ಪ್ರಯತ್ನ ನಡೆಸುತ್ತಿದ್ದರೇ ಹೀಗೆ ಮಾಡಿ..!

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150 ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ ಉತ್ತಮ ಕೆಲಸ ಅಪೇಕ್ಷಿಸುವುದು ಸಹಜ. ಅದರಲ್ಲೂ ಸರ್ಕಾರಿ...

ಅಂತರಂಗ3 hours ago

ಧರ್ಮ ಮರ್ಮ-01: ಭಾರತದಲ್ಲಿ ಧರ್ಮದ ಸ್ವರೂಪ

ಯೋಗೇಶ್ ಮಾಸ್ಟರ್ ಭಾರತದಲ್ಲಿ ಸದಾ ಗೊಂದಲಕ್ಕೊಳಗಾಗುವ ಅನೇಕ ವಿಷಯಗಳಲ್ಲಿ ಧರ್ಮವೂ ಒಂದು. ಸಹಜವಾಗಿ ಗೊಂದಲ ಎಂದರೇನೇ ಸ್ಪಷ್ಟತೆ ಇಲ್ಲ ಎಂದು ಅರ್ಥ. ಬೇರೆ ದೇಶಗಳಲ್ಲಿಯೂ ಕೂಡಾ ಧರ್ಮದ...

ಲೈಫ್ ಸ್ಟೈಲ್3 hours ago

ಬುಧವಾರದ ಭವಿಷ್ಯ | ಈ ದಿನ ನಿಮ್ಮದು, ಕಠಿಣ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕರೆಮಾಡಿ

ಶ್ರೀ ಗಣಪತಿ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,...

Trending