Connect with us

ಲೈಫ್ ಸ್ಟೈಲ್

ಜೀರಿಗೆ ಮಹಿಮೆ ಬಲ್ಲಿರಾ..?

Published

on

ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿರದೆ ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮನೆಯ ಮದ್ದಾಗಿ ಸಹ ಉಪಯೋಗಿಸಲಾಗುತ್ತಿದೆ. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ ಎಂಬ ಮೂರು ವಿಧಗಳಿವೆ. ಅವುಗಳಲ್ಲಿ ಬಿಳಿಜೀರಿಗೆಯನ್ನೇ ಹೆಚ್ಚಾಗಿ ಪಾಚಕಾಂಗಗಳ ಕಾಯಿಲೆಯಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ.ಇದೇ ಜೀರಿಗೆಯನ್ನು ನಾವು ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಿರುವುದು ಕೂಡ.

ಜೀರಿಗೆಯ ಔಷಧೀಯ ಉಪಯೋಗಗಳು

  • ಅತಿಯಾಗಿ ಬೆವರು ಬರುತ್ತಿದ್ದರೆ, ಬೆಳಿಗ್ಗೆ ಸಂಜೆ ಜೀರಿಗೆ ಪುಡಿಯನ್ನು ಬಿಸಿ ನೀರಿನ ಜೊತೆ ಕುಡಿಯುತ್ತಾ ಬಂದರೆ ಬೆವರುವುದು ಕಡಿಮೆಯಾಗುತ್ತದೆ.
  • ಪಿತ್ತ ವಿಕಾರದಿಂದ ತಲೆದೋರುವ ವಾಕರಿಕೆ, ಹೊಟ್ಟೆ ತೊಳಸುವಿಕೆ, ತಲೆ ಸುತ್ತವಿಕೆ ಇತ್ಯಾದಿ ತೊಂದರೆಗಳಿಗೆ, ಜೀರಿಗೆ, ಬೆಲ್ಲ ಮತ್ತು ಹುಣಸೆಹಣ್ಣನ್ನು ಸಮಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಕುಟ್ಟಿ, ಒಂದು ಹೆಬ್ಬೆಟ್ಟು ಗಾತ್ರ ತೆಗೆದುಕೊಂಡು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ರಸ ಹೀರುವುದರಿಂದ ಮೇಲಿನ ತೊಂದರೆ ಉಪಶಮನವಾಗುತ್ತದೆ.
  • ಮಲಬದ್ಧತೆಯುಂಟಾದಾಗ ಮತ್ತು ಅಜೀರ್ಣವಾದಾಗ ಊಟಕ್ಕೆ ಮುಂಚೆ ಮತ್ತು ಊಟದ ನಂತರ ಜೀರಿಗೆಯನ್ನು ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
  • ಚೇಳು ಕಡಿದಾಗ ಜೀರಿಗೆ ಪುಡಿಗೆ ಸ್ವಲ್ಪ ಸೈಧವಲವಣವನ್ನು ತುಪ್ಪದಲ್ಲಿ ಕಲೆಸಿ ಕಡಿದ ಜಾಗಕ್ಕೆ ಹಚ್ಚಿದರೆ ಕಡಿತದ ನೋವು ಉಪಶಮನವಾಗುತ್ತದೆ.

ಲೈಫ್ ಸ್ಟೈಲ್

ರೆಸಿಪಿ | ಹೆಸರು ಬೇಳೆ ಪನ್ನೀರ್ ಸಾಗು

Published

on

ರುಚಿ‌ ರುಚಿಯಾದ ಹೆಸರು ಬೇಳೆ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು.

ಹೆಸರುಬೇಳೆ 1 ಕಪ್
ಪನೀರ್ 1/2 ಕಪ್
ಕ್ಯಾಪ್ಸಿಕಂ
ಈರುಳ್ಳಿ 1
ಟೊಮೊಟೊ 1
ಕಾರ್ನ್ ಫ್ಲೋರ್ 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲ
ಚಾಟ್ ಮಸಾಲ
ಧನಿಯಾ ಪುಡಿ
ಅಚ್ಚ ಖಾರದಪುಡಿ
ಜೀರಾ ಪುಡಿ
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಕಸೂರಿ ಮೆಹತಿ
ಅರಿಶಿನ
ಹಸಿಮೆಣಸಿನಕಾಯಿ

ಹೆಸರು ಬೇಳೆ ಸಾಗು ಮಾಡುವ ವಿಧಾನ

  • ಮೊದಲು ಹೆಸರುಬೇಳೆ ಬೇಯಿಸಿಕೊಳ್ಳಿ.
  • ಪ್ಯಾನ್ ಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
  • ಕ್ಯಾಪ್ಸಿಕಂ ಹಾಕಿ ಬಾಡಿಸಿ ಟೊಮೊಟೊ ಹಾಕಿ 2 ನಿಮಿಷ ಫ್ರೈ ಮಾಡಿ ಇದಕ್ಕೆ ಗರಂಮಸಾಲ, ಧನಿಯಾಪುಡಿ, ಜೀರಪುಡಿ, ಅರಿಸಿನ, ಚಾಟ್ ಮಸಾಲ, ಖಾರಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ.
  • ಮಸಾಲ ಕುಡ್ದ ನಂತರ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ ಬೆಂದ ಹೆಸರು ಬೇಳೆ ಹಾಕಿ ಮಿಕ್ಸ್ ಮಾಡಿ ಪನೀರ್, ಉಪ್ಪು ಹಾಕಿ 5 ನಿಮಿಷ ಕುದಿಸಿ.
  • ನಂತರ ಕೊತ್ತಂಬರಿ ಕಸೂರಿ ಮೆತಿ ಹಾಕಿ ಮಿಕ್ಸ್ ಮಾಡಿ.

ಇದು ಪೂರಿ ಚಪಾತಿ ಜೊತೆ ತಿನ್ನಲು ತುಂಬಾ ರುಚಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

‘ಮೆಂತೆ ಸೊಪ್ಪಿನ ಪಲ್ಯ’ ಮಾಡೋದು ಹೀಗೆ ನೋಡಿ..!

Published

on

ಆರೋಗ್ಯಕರ ಮೆಂತೆ ಸೊಪ್ಪಿನ ಪಲ್ಯ ಮಾಡುವ ಸುಲಭ ವಿಧಾನ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

  1. ಮೆಂತೆ ಸೊಪ್ಪು -1ಕಟ್
  2. ಈರುಳ್ಳಿ -1
  3. ಹಸಿಮೆಣಸಿನಕಾಯಿ -2
  4. ಹುಣಸೇ ರಸ -2ಚಮಚ
  5. ಉಪ್ಪು,ಬೆಲ್ಲ‌-ರುಚಿಗೆ
  6. ಒಗ್ಗರಣೆಗೆ-ಕೊಬ್ಬರಿ
  7. ಎಣ್ಣೆ,ಕಡಲೇಬೇಳೆ,ಉದ್ದಿನಬೇಳೆ,ಸಾಸಿವೆ,ಇಂಗು

ಮಾಡುವ ವಿಧಾನ-ಮೊದಲು ಮೆಂತೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,ಈರುಳ್ಳಿ, ಕಡಲೇ ಬೇಳೆ,ಉದ್ದಿನ‌ಬೇಳೆ,,ಹಸಿಮೆಣಸಿನಕಾಯಿ ,ಇಂಗು ಹಾಕಿ ಬಾಡಿಸಿ ,ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ‌,ಸೇರಿಸಿ ಸ್ವಲ್ಪ ನೀರು,ಹುಣಸೇ ರಸ ಸೇರಿಸಿ ಚೆನ್ನಾಗಿ ಬೇಯಿಸಿ ಚಪಾತಿ ಪುರಿ ಅಥವಾ ದೋಸೆಯೊಂದಿಗೆ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಒಂದು ದಿನಾ ಇರುವೆ ಬಿಟ್ಕೊಳ್ಳಿ..!

Published

on

ಮಾರು 100-180ದಶಲಕ್ಷ ವರ್ಷಗಳ ಪ್ರಾಚೀನ ಕಾಲದಿಂದಲೂ ಒಂದೆಡೆ ಸಿಪಾಯಿ ಜೀವನ ನಡೆಸಿಕೊಂಡು ಬಂದಿರುವ,ಪ್ರಪಂಚದ ಪ್ರಾಣಿ ಸಂಕುಲದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿರುವ angiosperm ಎಂದ ಸಸ್ಯದ ಪ್ರಭಾವದಿಂದಾಗಿ ಕಣಜದಿಂದ ಬೇರ್ಪಟ್ಟು ವಿಶಿಷ್ಠವಾದ ಜೀವನ ನಡೆಸುತ್ತಿರುವ ಸಾಮಾಜ ಸೇವಕನನ್ನು ,ಸಿಹಿ ಭಕ್ಷಕ ದೊಡ್ಡ ಪ್ರಮಾಣ ಸಂಕುಲ ಹೊಂದಿರುವ Hymenoptera’s ಜಾತಿಯ ಕ್ರಿಮಿಗಳ ಬಗ್ಗೆ ಒಂದಷ್ಟು ತಿಳಿಯುವಾ,.

ಇವುಗಳಲ್ಲಿ ಸು12000 ಪ್ರಭೇದಗಳು ಬೆಳೆದಿವೆ ,ಅಂಟಾರ್ಕ್‍ಟಿಕಾ ,ಗ್ರೀನ್ ಲ್ಯಾಂಡ್ ,ಐಸ್ ಲ್ಯಾಂಡ್, ಹವಾಯ್, ಪಾಲಿನ ಏಷ್ಯಾ ಗಳಲ್ಲಿ ಹೊರತು ಪಡಿಸಿ ಉಳಿದ ಭೂಮಿಯ ಎಲ್ಲಾ ವಲಯಗಳಲ್ಲಿ ಕಂಡುಬರುವ ಇದು,ದೇಹದ ಒಳ ಭಾಗವನ್ನೆ ಹೃದಯ ಮಾಡಿಕೊಂಡಿರುವ ವಿಶೇಷ ಜಂತು.

ಇವುಗಳಲ್ಲಿ ಗಂಡಿರುವೆ, ರಾಣಿ ಇರುವೆ , ಸೇವಕ ಇರುವೆ ಸಹಾಯಕ ಇರುವೆಗಳು ಎಂದ ಸ್ಥರ ವಿನ್ಯಾಸ ಮಾಡಲಾಗಿದೆ. ಗಂಡಿರುವೆಗಳು ಮಿಲಿನಕ್ಕೆ ಮಾತ್ರ ಸೀಮಿತ, ಸಂಭೋಗಕಿಂತ ಪೂರ್ವದಲ್ಲಿ ಗಂಡಿರುವೆ ಮತ್ತು ರಾಣಿ ಇರುವೆ ಪುಕ್ಕಗಳನ್ನು ಹೊಂದಿರುತ್ತವೆ. ಸಂಭೋಗ ಪೂರ್ತಿ ಮುಗಿದ ತಕ್ಷಣ ಗಂಡಿರುವೆ ಸತ್ತರೆ ರಾಣಿರಾಜನನ್ನು ಕಳೆದುಕೊಂಡ ದುಃಖದಲ್ಲಿ ಸೇವಕರ ಗುಂಪು ಸೇರಿ ಅಲ್ಲೆ ಸುಮ್ಮನೆ ಇದ್ದು ಬಿಡುತ್ತದೆ.

ಇದನ್ನು ಪ್ರಸವ ಪೂರ್ವ ಎಂದು ಹೇಳಬಹುದು. ಗಂಡಿರುವೆ ಕೆಲವೇ ದಿನಗಳಲ್ಲಿ ಸತ್ತೆರೆ ರಾಣಿ ಇರುವೆ 45-50 ವರ್ಷ ಬದುಕುತ್ತವೆ ಎಂದು ಅಂದಾಜು ಮಾಡಲಾಗಿದೆ.ಸೇವಕ ಇರುವೆಗಳು 5-8ವರ್ಷ ಬದುಕಿದರೂ ಸಂತಾನೋತ್ಪತ್ತಿಯ ಭಾಗ್ಯ ಅವುಗಳಿಗೆ ಇಲ್ಲ. ಆದರೆ ವಿಜ್ಞಾನ ಸವಾಲು ಎನ್ನುವಂತೆ ಒಂದೊಂದು ಬಾರಿ ಸೇವಕ ಇರುವೆಗಳು ಮೊಟ್ಟೆಗಳನ್ನು ಹಾಕಿವೆ, ಇದು ಅಚಾತುರ್ಯ ಮಾತ್ರ. ಅವುಗಳ ನಿರಂತರವಾಗಿ ಮೊಟ್ಟೆಗಳು ಇಡಲಾರವು. ಸೇವಕ ಇರುವೆಗಳಿಂದಲೂ ಗಂಡಿರುವೆ ರಾಣಿ ಇರುವೆ ಹುಟ್ಟಿರುವ ಉದಾಹರಣೆಗಳಿವೆ.

ಸಾಮಾನ್ಯವಾಗಿ ಎರಡು ಮೊಟ್ಟೆಗಳನ್ನು ಹಾಕುವ ರಾಣಿ ಇರುವೆಗಳು ಶರತ್ಕಾಲದಲ್ಲಿ ಮರಿಮಾಡುತ್ತವೆ. ಇರುವೆ ಗಳಿಗೆ ಎರಡು ಹೊಟ್ಟೆಗಳಿದ್ದು ಒಂದು ಹೊಟ್ಟೆಯನ್ನು ದಿನಸಿಯ ಬಳಕೆಯಾಗಿ ಇನ್ನೊಂದು ಹೊಟ್ಟೆ ಗಂಡಿರುವೆ ಮತ್ತು ಮರಿ ಇರುವೆಗಳಿಗೆ ಸಲುವಲು ಬಳಕೆ ಮಾಡುವವು.

Escoscolitic ಎಂಬ ಬಿರುಸಾದ ಹೊರವಲಯದಿಂದ ನಮ್ಮನ್ನು ರಕ್ಷಣೆ ಮಾಡಿಕೊಂಡರೆ , forlic acid’sನಂತ ಉರಿತ ತರುವ ದ್ರವ ಹೊರಸೂಸುವಿಕೆಯಿಂದ ತಮ್ಮನ್ನು ತಾವು ವೈರಿಗಳಿಂದ ಅಥವಾ ಅನಾಹುತ ತಡೆಯಲು ಬಳಸಲಾಗುತ್ತದೆ. ಇವುಗಳಿಗೆ ಶ್ವಾಸಕೋಶದ ಕೊರತೆ ಇದೆಯಾದರೆ ಟುಪಿಲ್ಲರ್(Tover)ಗಳಿಂದ ವಾಸನೆಯನ್ನು ಶಬ್ದ ಮತ್ತು ಮಾರ್ಗವನ್ನು ಗ್ರಹಿಕೆಗೆ ಮಾಡುತ್ತವೆ.

ಲಾವಾ ಮತ್ತು ಪ್ಯೂಪಾ ವ್ಯವಸ್ಥೆಯಿಂದ ಹೊರಬರುವ ವರೆಗೆ ಅವುಗಳು ಸೇವಕ ಇರುವೆಗಳ ಸಹಾಯದಿಂದ ಬೆಳೆಯುತ್ತವೆ.ಒಂದು ಸತ್ಯ ಏನ ಗೊತ್ತಾ ? ಸೇವಕ ಇರುವೆಗಳೆ ಮರಿಗಳಿಗೆ ಆಹಾರ ಒದಗಿಸುವುದರಿಂದ ಬಹುತೇಕ ನಾಯಕ ಇರುವೆಯಾಗುವುದು, ರಾಣಿ ಇರುವೆಯಾಗುವುದು,ಸೇವಕ ಇರುವೆಯಾಗುವುದು ಸೇವಕ ಇರುವೆಯ ಮೇಲೆ ಡಿಪೆಂಡ್ ಆಗಿದೆ. ಯಾವ ರೀತಿಯ ಆಹಾರ ನೀಡುತ್ತವೆಯೋ ಅವುಗಳ ಸೃಷ್ಟಿ ಆಗುತ್ತದೆ.

ಇವುಗಳ ಕಾಲುಗಳು ಥೋರಾಕ್ಷ್ ಎನ್ನುವ ಮುಂಡ ಭಾಗದಿಂದ ಸೃಷ್ಟಿಯಾಗಿರುವುದರಿಂದ ಗಟ್ಟಿಯಾಗಿರುತ್ತವೆ. Pheromone aide ಸಂಪರ್ಕಾಮ್ಲವಾಗಿ ಬಳಕೆ ಮಾಡಿಕೊಳ್ಳುತ್ತವೆ.ಆಸ್ಟ್ರೇಲಿಯಾದ ‘ಜಾಕ್ ಜಂಪರ್’ ಎನ್ನುವ ಇರುವೆ ಜಾತಿ Pheromone aide ಸುರಿಸಿ ಮನುಷ್ಯನ ಸಾಯಿಸುವ ಮೂಲಕ ತನ್ನ ವಿಷದ ಪ್ರಬಲತೆ ದಿಕ್ಕುಸಂವೇದನೆ ಮಾಡಿದೆ.

ಸಾವು ಸಮೀಪಿಸಿದ ಸಂದರ್ಭದಲ್ಲಿ Oleic acid ದ್ರವಿಸುವ ಮೂಲಕ ತಮ್ಮ ಸಾವಿನ ಸುದ್ದಿಯನ್ನು ಮುದಿ ಇರುವೆಗಳು ಸಾರುತ್ತವೆ.ಇದರ ಗ್ರಹಿಕೆ ಸೇವಕ ಇರುವೆಗಳಿಗೆ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ ಎನ್ನುವುದೇ ವಿಜ್ಞಾನ ಲೋಕಕ್ಕೆ ಸಿಕ್ಕಿರುವ ವಿಚಿತ್ರ ಸತ್ಯ.

ಒಟ್ಟಾರೆ ಇರುವೆ ಬಿಟ್ಕೊಂಡು ಓದಿ ಇರುವೆಗಳ ಜೀವನ ಮತ್ತು ವಿಶಿಷ್ಟ ಲಕ್ಷಣಗಳನ್ನು ತಿಳಿಸುವುದರಲ್ಲಿ ನನಗೆ ಅತೀವ ಸಂತಸವಾಗಿದೆ..

ಪೂರ್ತಿ ಓದಿ ಅಭಿಪ್ರಾಯ ತಿಳಿಸಿ ಆತ್ಮೀಯರೆ..

ಸಹಾಯ:- ವಿಜ್ಞಾನ ಲೋಕದ ವಿಚಿತ್ರ ಸತ್ಯ, ಬಾಲ ವಿಜ್ಞಾನ ಮತ್ತು ಗೂಗಲ್ ಕೊಂಡಿ..

ವಾಯ್.ಜೆ.ಮಹಿಬೂಬ
ರಾಜ್ಯ ಉಪಾಧ್ಯಕ್ಷರು
ಕರುನಾಡ ಹಣತೆ ಕವಿ ಬಳಗ (ರಿ)
ಚಿತ್ರದುರ್ಗ ಜಿಲ್ಲೆ.
ಮೊ : 9535104785

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending