Connect with us

ಲೈಫ್ ಸ್ಟೈಲ್

ಯೋಗದ ಅನ್ವೇಷಣೆ | ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

 • ನಿತ್ಯತೃಪ್ತ

ಪುರಾತನರು, ನಾನು ಯರು? ಏಕೆ ಹುಟ್ಟಿದ್ದೇನೆ? ಯಾಕೆ ಸಾಯುತ್ತೇನೆ? ಯಾಕೆ ಬದುಕಿದ್ದೇನೆ? ನನ್ನ ಮುಂದಿರುವ ವೈವಿಧ್ಯಮಯ ಸೃಷ್ಟಿಗೆ ಕರ್ತ ಯಾರು? ಇದರ ಉದ್ದೇಶ ಏನು? ಈ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಮಾಡಿದ 6ಸಾವಿರ ವರ್ಷಗಳ ಪ್ರಯೋಗವೇ ನಾಲ್ಕು ವೇದಗಳು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ.

ಋಗ್ವೇದದ ಪ್ರಾಯೋಗಿಕ ಅಂತ್ಯ -ಪ್ರಙ್ಞನಂ ಬ್ರಹ್ಮ
ಯಜುರ್ವೇದದ ಪ್ರಾಯೋಗಿಕ ಅಂತ್ಯ – ಅಹಂ ಬ್ರಹ್ಮಾಸ್ಮಿ
ಸಾಮವೇದದ ಪ್ರಾಯೋಗಿಕ ಅಂತ್ಯ- ತತ್ವ ಮಸಿ
ಅಥರ್ವಣ ವೇದದ ಪ್ರಾಯೋಗಿಕ ಅಂತ್ಯ- ಅಯಂ ಆತ್ಮ ಬ್ರಹ್ಮ

ವೇದಾಂಗಗಳ ಅರಣ್ಯಕಗಳು ಸಂಹಿತೆಗಳು ಬ್ರಾಹ್ಮಣಕಗಳು ಕೊನೆಯದಾಗಿ ಉಪನಿಷತ್ತುಗಳಲ್ಲಿ ಹೇರಳವಾಗಿ ಯೋಗದ ಬಗೆ ವಿವರಿಸಲದಪಟ್ಟಿದೆ.

ನಾಲ್ಕು ವೇದಗಳಿಗೆ ಸೇರಿದ 108 ಉಪನಿಷತ್ತುಗಳಲ್ಲಿ ಕೆಳಕಂಡಂತೆ ಇವೆ.

 1. ಮುಖ್ಯವಾದ ಉಪನಿಷತ್ತುಗಳು (ಬೃಹತ್)-10
 2. ವೇದಾಂತಕ್ಕೆ ಸಂಬಂಧಪಟ್ಟ ಉಪಿಷತ್ತುಗಳು- 25
 3. ಶಾಕ್ತರಿಗೆ ಸಂಬಂಧಪಟ್ಟ ಉಪನಿಷತ್ತುಗಳು-08
 4. ವೈಷ್ಣವರಿಗೆ ಸಂಬಂಧಪಟ್ಟ ಉಪನಿಷತ್ತುಗಳು-14
 5. ಶೈವರಿಗೆ ಸಂಬಂಧಪಟ್ಟ ಉಪನಿಷತ್ತುಗಳು- 14
 6. ಸನ್ಯಾಸಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು- 17
 7. ಯೋಗಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು-20

ಈ ಮೇಲಿನ 108 ಉಪನಿಷತ್ತುಗಳು ಅರ್ಥವಾಗದಿದ್ದಕ್ಕೆ 6 ಶಾಸ್ತ್ರಗಳನ್ನು ಬರೆದರು. ಅವು ಸಾಂಖ್ಯ ಶಾಸ್ತ್ರ, ವೈಷೇಶಿಕ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ಉತ್ತರ ಮೀಮಾಂಸೆ ಮತ್ತು ಪೂರ್ವ ಮೀಮಾಂಸೆ.
ಇವುಗಳೂ ಕೂಡ ಅರ್ಥವಾಗದಿದ್ದಕ್ಕೆ 18 ಪುರಾಣಗಳನ್ನು ಬರೆದರು. ಅವು ಭಾಗವತ ಪುರಾಣ, ವಿಷ್ಣುಪುರಾಣ, ಮತ್ಸಯ ಪುರಾಣ, ಶಿವ ಪುರಾಣ, ಗರುಡ ಪುರಾಣ, ಬ್ರಹ್ಮ ಪುರಾಣ, ನಾರದೇಯ ಪುರಾಣ, ವಾಮನ ಪುರಾಣ, ಭವಿಷ್ಯ ಪುರಾಣ, ಬ್ರಹ್ಮ ಪುರಾಣ, ಲಿಂಗ ಪುರಾಣ, ವಿರಹ ಪುರಾಣ, ಅಗ್ನಿ ಪುರಾಣ, ಮಾರಖಂಡಯ್ಯ ಪುರಾಣ, ಕೂರ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ.

ಇವುಗಳ ಜೊತೆಗೆ ಎರಡು ಮಹಾ ಕಾವ್ಯಗಳನ್ನು ವ್ಯಾಸರು ಮತ್ತು ವಾಲ್ಮೀಕಿ ಬರೆದಿದ್ದಾರೆ. ಈ ಮಹಾನ್ ಕೃತಿಗಳೇ ರಾಮಾಯಣ ಮತ್ತು ಮಹಾಭಾರತ. ಇವುಗಳಲ್ಲಿ ರಾಜಯೋಗ, ಹಠಯೋಗ, ಙ್ನನಯೋ, ಭಕ್ತಿಯೋಗ, ಕರ್ಮಯೋಗ, ಕುಂಡಲಿನಿಯೋಗ, ಮಂತ್ರಯೋಗ, ಲಯ ಯೋಗ ಈ ರೀತಿ ಯೋಗದ ಬಗ್ಗೆ ಬರೆದ ಸವಿಸ್ತಾರವಾದ ಕೃತಿಗಳು.

ರಾಮಾಯಣದಲ್ಲಿ ವಾಲ್ಮೀಕಿಯು 32ಸಾವಿರ ಶ್ಲೋಕಗಳು ಬೃಹತ್ ಯೋಗ ವಾಷಿಷ್ಠ ಕೃತಿಯನ್ನು ರಚಿಸಿದ್ದಾರೆ. ಮಹ ಬಾರತದಲ್ಲಿ ವ್ಯಾರು 700 ಶ್ಲೋಕಗಳು ಭಗವದ್ಗೀತೆಯನ್ನು ಬರೆದು, 18 ರೀತಿ ಯೋಗಗಳನ್ನು ವಿವರಿಸಿದ್ದಾರೆ. ಕಾಲಗತಿಯಲ್ಲಿ ಇವುಗಳೆಲ್ಲ ಮಠ ಮತ್ತು ಗುಹೆಗಳಲ್ಲಿ ಸೇರಿಕೊಂಡು ಸಾಮಾನ್ಯ ಜನರಿಗರ ದೊರೆಯದೆ ಬರಿ ಕಂದಾಚರಗಳ ವೇದಾಂತವಾಗಿ ಮನೆ ಮನೆ ಹೊಕ್ಕಿವೆ.

ಪಾಶ್ಚಿಮಾತ್ಯ ವಿದ್ವಾಂಸರಾದ ಮ್ಯಾಕ್ಸ್ಮುಲ್ಲರ್ ಭಾರತಕ್ಕೆ ಬಂದು ಸಂಸ್ಕøತ ಕಲಿತು 4 ವೇದಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಮ್ಯಾಕ್ಸ್‍ಮುಲ್ಲರ್ ವಿಶ್ವವಿದ್ಯಾಲಯದಲ್ಲಿ ವೇದಗಳ ಅಧ್ಯಯನ ನಡೆಯುತ್ತಿದೆ. ಇದೇ ತರಹ Sarpent power ಎಂಬ ತತ್ವ ಙ್ಞನಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿ ಸಂಸ್ಕøತ ಕಲಿತು ಯೋಗದ 20 ಉಪನಿಷತ್ತುಗಳನ್ನು ಹಗೂ ಯಂತ್ರ, ತಂತ್ರ, ಮಂತ್ರ ಸ್ವರ ಮುಂತದ ಶಾಸ್ತ್ರಗಳನ್ನು ಇಂಗ್ಲಿಷ್‍ಗೆ ಭಾಷಾಂತರಿಸಿ  Sarpent power  ಎಂಬಕೃತಿ ಬರೆದರು. ಈ ಕೃತಿಯ ಮೂಲಕ ಯೋಗವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮಹತ್ಮ.

ಹಾಗೆಯೇ ಸ್ವಾಮಿ ವಿವೇಕಾನಂದರು, ಯೋಗನಂದರು, ಋಷಿಕೇಷದ ಸ್ವಾಮಿ ಶಿವಾನಂದರ ಶಿಷ್ಯರಾದ ಸ್ವಾಮಿ ಸತ್ಯಾನಂದರು ಪ್ರಪಂಚದಾದ್ಯಂತ ಉಪದೇಶಿಸಿದ್ದಾರೆ. ಪ್ರಪಂಚದಾದ್ಯಂತ ಯೋಗದ ಬಗೆಗಿನ ಸಾಹಿತ್ಯ ಹೇರಳವಾಗಿ ದೊರೆಯುವಂತೆ ಮಾಡಿದ್ದಾರೆ. ಬುದ್ದ ಹುಟ್ಟಿದ್ದು, ಬೌದ್ಧಧರ್ಮ ಹುಟ್ಟಿದ್ದು ಭಾರತವಾದರೆ ಬೆಳೆದದ್ದು ಮಾತ್ರ ಪರರಾಷ್ಟ್ರಗಳಲ್ಲಿ, ಯೋಗವೂ ಸಹ ಹಾಗೆಯೇ.

ಯೋಗ ಒಂದು ಅಮೂಲ್ಯವಾದ ಸಂಸ್ಕøತಿ. ಮನುಷ್ಯನಿಂದ ಹುಟ್ಟಿ ಮನುಷ್ಯನಿಗೋಸ್ಕರ ಮನುಷ್ಯ ಇರುವ ತನಕ ಇರುವುದೋ ಅದೇ ಸಂಸ್ಕøತಿ. ಯೋಗವು ಒಂದು ವಿಙ್ಞನವೂ ಹೌದು, ಅಂದರೆ ಐಕ್ಯತೆ ಅಥವಾ ವೃತ್ತಿ ನಿರೋಧವೇ ಯೋಗ. ಮಾತು ಮತ್ತು ಆಲೋಚನೆ ಮಾಡುವ ಕ್ರಿಯೆಯನ್ನು ಸಮನ್ವಯಗೊಳಿಸುವುದೇ ಯೋಗ. ಅಲ್ಲದೆ ಜನ್ಮ ಜನ್ಮಾಂತರ ಗಳಿಂದ ಬಂದ ಅಭ್ಯಸಗಳ ವವೃತ್ತಿಗಳನ್ನು ನಿಯಂತ್ರಿಸಿ, ನಿರೋಧಿಸಿ ಜೀವನದ ಉತ್ತುಂಗ ಕಲೆಯನ್ನು ಬೋಧಿಸುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ಇರುವ ಅಡಚಣೆತಳನ್ನು ತೆಗೆದು ಹಾಕುತ್ತದೆ. ಇದು ಪಶುತ್ವದಿಂದ ಪರಮಾತ್ಮನ ಕಡೆಗೆ ಕೊಂಡೊಯ್ಯುತ್ತದೆ.

ಯೋಗದ ಚರ್ಚೆ ಮಾಡುವುದರಿಂದ ವೇಷ ಭೂಷಣಗಳಿಂದ ಶಾಸ್ತ್ರ ಅಧ್ಯಯನದಿಂದ ದೊರೆಯುವುದಿಲ್ಲ. ಯೋಗಿ ಯಾಗಬೇಕಾದರೆ ಸಾಧನೆ ಮಾಡಬೇಕು. ಸಾಧನೆಯಿಂದ ಮಾತ್ರ ಸಿದ್ಧಿ ದೊರೆಯುತ್ತದೆ. ಯೋಗವನ್ನು ಹುಡುಗರು, ಮುದುಕರು, ತೀರಾ ಮುದುಕರು, ರೋಗಿಗಳು, ನಿತ್ರಾಣ ಹೊಂದಿರುವವರು ಅಭ್ಯಾಸ ಮಾಡಿ ಸಿದ್ಧಿ ಪಡೆಯಬಹುದು(ಹ.ಠ ಪ್ರದೀಪಿಕೆ 64.65.66 ಪ್ರಥಮ ಉಪದೇಶ).

ತಪಸ್ಸು ಸ್ಥಳೀಯ ಅದ್ಯಯನ, ಈಶ್ವರಿ ಪ್ರಣಿಧ್ಯಾನ ಇವೆ ಯೋಗ ಕ್ರಿಯೆಗಳು. ಇದೇ ಅಷ್ಟಾಂಗ ಯೋಗ, ಯಮ, ನಿಯಮ, ಆಸನ, ಪ್ರಾಣಯಾಮ ಪ್ರತ್ಯಾಹಾರ ಇವು ಹ.ಠ ಕ್ರಿಯೆಗಳು ಧರಣ ಧ್ಯಾನ ಸಮಾಧಿ ಇವು ರಾಜ ಯೋಗ(king of yoga).

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನಿತ್ಯ ಭವಿಷ್ಯ

ಕೆಲಸದಲ್ಲಿ ಅಭಿವೃದ್ಧಿ ಹೊಂದಬೇಕೇ? ಹೀಗೆ ಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150

ನೀವು ಮಾಡುವ ಕೆಲಸದಲ್ಲಿ ಆದಾಯ ಉತ್ಪನ್ನ ಹೆಚ್ಚಳವಾಗಬೇಕು ಹಾಗೂ ಲಾಭದಿಂದ ನಿಮ್ಮ ಬೊಕ್ಕಸ ತುಂಬಲು ಈ ತಂತ್ರ ಉಪಯುಕ್ತವಾಗಿದೆ.

ಪ್ರತಿಯೊಬ್ಬರೂ ಸಹ ಮಾಡುವ ಕೆಲಸದಲ್ಲಿ ಶ್ರಮ ಮತ್ತು ಆಸಕ್ತಿ ವಹಿಸುತ್ತಾರೆ ಇಂತಹ ಒಳ್ಳೆಯ ನಿರ್ಧಾರಗಳು ಇದ್ದರೂ ಸಹ ಅವಶ್ಯಕವಾದಂತಹ ಲಾಭ ಪ್ರಮಾಣ ಕಡಿಮೆ ಇರುತ್ತದೆ.

ನಿಮ್ಮ ಕೆಲಸದಲ್ಲಿ ಮೇಲಿನವರು ಗಮನಿಸಿ ಉನ್ನತ ಪದವಿಯನ್ನು ನೀಡಬೇಕು ಅಥವಾ ಗ್ರಾಹಕರು ನಿಮ್ಮ ಕಾರ್ಯಗಳಿಗೆ ಆಸಕ್ತಿ ತೋರಿಸಿ ಅವರ ಸಂಖ್ಯೆಯೂ ಹೆಚ್ಚಳವಾಗಬೇಕು ಇದು ನಡೆದರೆ ನಿಮ್ಮ ಅಭಿವೃದ್ಧಿ ಖಂಡಿತವಾಗಿಯೂ ಉನ್ನತಮಟ್ಟದಲ್ಲಿ ಆಗುತ್ತದೆ.

ಅಂಜೂರ ಗಿಡದ ಕಟ್ಟಿಗೆಯನ್ನು ನಿಮ್ಮ ಕೆಲಸದಲ್ಲಿ ಇಡಿ ಇದರಿಂದ ನಿಮ್ಮ ಕ್ಷೇತ್ರದಲ್ಲಿ ಕ್ರಮೇಣ ಗೆಲುವು ಸಾಗಿಸುತ್ತೀರಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ: 9945410150

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಕೆಂಪು ಕೊರಳಿನ ನೊಣಹಿಡುಕ

Published

on

 • ಭಗವತಿ ಎಂ.ಆರ್

ಒಂಟಿಯಾಗಿ ಕೊಂಬೆಯ ಮೇಲೆ ಕುಳಿತು, ಇಲ್ಲವೇ ನೆಲದಲ್ಲಿ ಹುಳು ಹೆರಕುತ್ತಾ ಕೂರುವ ಈ ನೀಲಿ ಮೈಯಿನ ಹಕ್ಕಿಯೇ ಕೆಂಪುಕೊರಳಿನ ನೊಣಹಿಡುಕ. ಕೀಟಗಳೇ ಪ್ರಧಾನ ಆಹಾರವಾಗಿರುವ ಇತರೆ ಹಕ್ಕಿಗಳ ಗುಂಪಿಗೆ  ಈ ಹಕ್ಕಿಯೂ ಸೇರಿದೆ. ಇದಕ್ಕೆ “ನೀಲಿ ರಾಜ ಪಕ್ಷಿ” ಎನ್ನುವ ಇನ್ನೊಂದು ಹೆಸರಿದೆ. ನೀಲಿ ಬಣ್ಣವೇ ಪ್ರಧಾನ ವಾಗಿರುವ ಇತರೆ ಹಕ್ಕಿಗಳಿದ್ದರೂ, ಬಾಲ ನಿಮಿರಿಸುತ್ತಾ ರಾಜ ಠೀವಿಯಲ್ಲಿ ಹೆಜ್ಜೆ ಹಾಕುತ್ತಾ ಓಡಾಡುವ ಇದಕ್ಕೆ ರಾಜಪಕ್ಷಿ ಎಂಬ ಹೆಸರು ಬಂದಿರಬಹುದು.

ಈ ಹಕ್ಕಿಯ ಕತ್ತು, ಎದೆಯ ಭಾಗ ಪೂರಾ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ. ಸಂತಾನ ಕಾಲದಲ್ಲಿ ಎದೆ, ಹೊಟ್ಟೆಯ ಭಾಗ ಪೂರಾ ಕಿತ್ತಳೆ ಬಣ್ಣದಾಗಿರುತ್ತದೆ. ಹೆಣ್ಣಿನದು ಸಾದಾ ನೀಲಿಯ ಬಣ್ಣ, ಸೌಮ್ಯ ಸ್ವಭಾವ. ಇತರೆ ಹೆಣ್ಣುಹಕ್ಕಿಗಳಂತೆ ಕಣ್ಣಿಗೆ ಬೀಳುವುದು ಕಡಿಮೆ. ಇವು ಮರದ ಹೊದರಿನಲ್ಲಿ, ಬೇಲಿಯ ಸಂದಿಯಲ್ಲಿ ಹೊಕ್ಕಿತೆಂದರೆ ಅದರ ಹಾಡಿನಿಂದಲೇ ಅವುಗಳ ಇರುವಿಕೆ ಗೊತ್ತಾಗುವುದು.

ಇವುಗಳ ಸಂತಾನಕಾಲ ಮಾರ್ಚ್ ನಿಂದ ಆಗಸ್ಟ್ ವರೆಗೆ. ಹುಲ್ಲು, ನಾರು, ಹಾವಸೆ, ಜರೀಗಿಡಗಳಂಥ ಪುಟ್ಟ ಸಸ್ಯಗಳನ್ನು ಕಿತ್ತು ತಂದು ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಹೆಣ್ಣು ಗೂಡುಕಟ್ಟುವ ಕೆಲಸದಲ್ಲಿ ನಿರತರಾದರೆ, ಗಂಡು ಹಕ್ಕಿ ಗೂಡಿನ ರಕ್ಷಣೆಗೆ ನಿಲ್ಲುತ್ತವೆ. ಮೂರರಿಂದ ಐದು ಮೊಟ್ಟೆಗಳನಿಡುತ್ತವೆ.

ಸಾಧಾರಣವಾಗಿ ಬೆಟ್ಟಗುಡ್ಡಗಳು, ಕಿರು ಅರಣ್ಯಗಳಂಥ ಜಾಗಗಳಲ್ಲಿ ಕಾಣಸಿಗುತ್ತಿದ್ದ ಈ ಹಕ್ಕಿಗಳು ಪಟ್ಟಣಗಳಲ್ಲೂ ಕಾಣಸಿಗುತ್ತಿವೆ.  ಕ್ಲಿಚ್ ಕ್ಲಿಚ್ ಸದ್ದು ಹೊರಡಿಸುವ ಇವು, ಅಪಾಯ ಎದುರಾದಾಗ ಚುರ್ ಚುರ್ ಸದ್ದು ಮಾಡುತ್ತವೆ. ನೋಡಲು ಮುದ್ದಾಗಿರುವ ಈ ಹಕ್ಕಿಗಳು ಪುಟುಪುಟು ಓಡಾಡಿಕೊಂಡು ಇರುವುದನ್ನು ನೋಡುವುದೇ ಚೆಂದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತಿ ಬೆಳೆಗಾರರಿಗೆ ಮಹತ್ವದ ಸಲಹೆಗಳು : ಮಿಸ್ ಮಾಡ್ದೆ ಓದಿ

Published

on

ಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯು ಒಂದಾಗಿದ್ದು, 2020ನೇ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 10,427 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ.

ಸುಧಾರಿತ ಕ್ರಮಗಳಾದ ಸುಧಾರಿತ ತಳಿಗಳು, ಬೇಸಾಯ ಪದ್ಧತಿಗಳು, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ನಿರೀಕ್ಷಿತ ಗುಣಮಟ್ಟದ ಇಳುವರಿಯ ಜೊತೆಗೆ ಉತ್ತಮ ಆದಾಯ ಗಳಿಸಬಹುದಾಗಿದೆ.

ಬಿತ್ತನೆ ಕಾಲ

ವಿಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜೂನ್ ತಿಂಗಳ ವರೆಗೆ (ಡಿ.ಹೆಚ್.ಬಿ-105, ಡಿ.ಸಿ.ಹೆಚ್ 32 ಮತ್ತು ವರಲಕ್ಷ್ಮಿ ತಳಿಗಳು) ಹಾಗೂ ಸ್ವಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜುಲೈ (ಎನ್.ಹೆಚ್.ಹೆಚ್44 ಮತ್ತು ಡಿ.ಹೆಚ್.ಹೆಚ್11 ತಳಿಗಳು) ತಿಂಗಳವರೆಗೆ ಬೆಳೆಯಬಹುದಾಗಿದೆ.

ಬೀಜ ಪ್ರಮಾಣ ಮತ್ತು ಅಂತರ

ಪ್ರತಿ ಎಕರೆಗೆ 0.5 ಕಿ.ಗ್ರಾಂ. ಗುಂಜು ರಹಿತ ಹತ್ತಿಯ ಬೀಜಗಳನ್ನು ಸಾಲಿನಿಂದ ಸಾಲಿಗೆ 3 ಅಡಿ ಅಂತರದಲಿ ಹಾಗೂ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ನೀಡಿ ಬಿತ್ತನೆ ಮಾಡುವುದು. ಪ್ರಮಾಣಿತ ಬಿಟಿ ಹತ್ತಿ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಬೆಳೆಯಬಹುದಾಗಿದೆ.

 • ಬಿಟಿ ಹತ್ತಿಯ ಜೊತೆಗೆ ಬಿಟಿ ಹತ್ತಿರಹಿತ ಹತ್ತಿಯನ್ನುಅಥವಾ ಬಿಟಿ ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
 • ಹೆಚ್ಚು ಗುಲಾಬಿ ಕಾಯಿ ಕೊರಕದ ಭಾಧೆಯಿದ್ಧಲ್ಲಿ ಅಲ್ಪ ಕಾಲಾವಧಿ ಬಿಟಿ ಹತ್ತಿ ಹೈಬ್ರಿಡನ್ನು ಬೆಳೆಯುವುದು.

ಬೀಜೋಪಚಾರ

ಪ್ರಾರಂಭದಲ್ಲಿ ಬರುವ ಹತ್ತಿ ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡಲು ಪ್ರತಿ ಕಿ.ಗ್ರಾಂ. ಹತ್ತಿ ಬೀಜವನ್ನು 10 ಗ್ರಾಂ ಇಮಿಡಾಕ್ಲೋಪ್ರಿಡ್-70 ಡಬ್ಲ್ಯೂ.ಎಸ್. ನಿಂದ ಉಪಚಾರ ಮಾಡಿ ಬಿತ್ತನೆ ಮಾಡುವುದು.

ಪೋಷಕಾಂಶಗಳ ನಿರ್ವಹಣೆ

ಬಿತ್ತನೆಗೆ 2-3 ವಾರಗಳ ಮೊದಲು 5 ಟನ್ ಕೊಟ್ಟಿಗೆ ಗೊಬ್ಬರ / ಸಾವಯವ ಗೊಬ್ಬರವನ್ನು ಪ್ರತಿ ಎಕರೆಗೆ ಬಳಸಬೇಕು. ಹಾಗೂ ಪ್ರತಿ ಎಕರೆಗೆ 60ಕಿ.ಗ್ರಾಂ. ಸಾರಜನಕ, 30 ಕಿ.ಗ್ರಾಂ. ರಂಜಕ, 30 ಕಿ.ಗ್ರಾಂ. ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳ ಶಿಪಾರಸಿದ್ದು, ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ & ಪೊಟ್ಯಾಶ್ ಗೊಬ್ಬರಗಳನ್ನು ಹಾಕಬೇಕು.

ಉಳಿದ ಶೇ.50ರ ಸಾರಜನಕವನ್ನು ಬಿತ್ತನೆಯಾದ 60 ದಿನಗಳ ನಂತರ ಮೇಲುಗೊಬ್ಬರವಾಗಿ ನೀಡುವುದು. ಬಿತ್ತನೆ ಸಮಯದಲ್ಲಿ 10ಕಿ.ಗ್ರಾಂ. ಮೆಗ್ನಿಷಿಯಂ ಸಲ್ಫೇಟ್ ಪ್ರತಿ ಎಕರೆಗೆ ಬಳಸುವುದು.
ಹತ್ತಿಯಲ್ಲಿ ಸಮತೋಲನ ಗೊಬ್ಬರಗಳ ಬಳಕೆ ಅತೀ ಅಗತ್ಯವಾಗಿದ್ದು, ಕೆಲವೊಂದು ರೈತರು ಪೊಟ್ಯಾಷ್ ಗೊಬ್ಬರಗಳನ್ನು ಬಳಸುತ್ತಿರುವುದಿಲ್ಲ.

ಇದರಿಂದಾಗಿ ಕಾಯಿಯ ಗಾತ್ರ ಕಡಿಮೆಯಾಗುವುದಲ್ಲದೆ ಇಳುವರಿಯು ಕಡಿಮೆಯಾಗುವುದು. ಪೊಟ್ಯಾಷ್ ಗೊಬ್ಬರದ ಬಳಕೆಯಿಂದಾಗಿ ಕಾಂಡ ಮತ್ತು ಕಾಯಿಯ ತೊಗಟೆ ದಪ್ಪನಾಗಿ ರೋಗ ಹಾಗೂ ಕೀಟದ ಹಾವಳಿ ಕಡಿಮೆಯಾಗುವುದು.

ಕಳೆ ನಿರ್ವಹಣೆ

ಬಿತ್ತನೆಯಾದ ದಿವಸ/ಮಾರನೆ ದಿವಸ ಎಕರೆಗೆ 400 ಗ್ರಾಂಡೈಯುರಾನ್ ಶೇ.80 ಅಥವಾ 800 ಮಿ.ಲೀ. ಫ್ಲೋಕ್ಲೋರಾಲಿನ್ 45ಇ.ಸಿ. ಅಥವಾ 1.3ಲೀ. ಪೆಂಡಿಮೆಥಾಲಿನ್ ಶೇ.30ಇ.ಸಿ. ಅಥವಾ 800ಮಿ.ಲೀ. ಬ್ಯೂಟಾಕ್ಲೋರ್ 50 ಇ.ಸಿ.ನ್ನು 300 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು. ಬಿತ್ತಿದ 30 ದಿವಸಗಳ ನಂತರ 3 ರಿಂದ 4 ಬಾರಿ ಅಳವಾಗಿ ಎಡೆಕುಂಟೆ ಹೊಡೆಯುವುದು.

ಅಂತರ ಬೆಳೆ

ಹತ್ತಿಯಜೊತೆಗೆ ಮೆಣಸಿನಕಾಯಿ, ಸೊಯಾ ಆವರೆ, ಬೀನ್ಸ್, ಅಲಸಂದೆ, ಉದ್ದು ಬೆಳೆಗಳನ್ನು 1:1 ಅನುಪಾತದಲ್ಲಿ ಬೆಳೆಯಬಹುದಾಗಿದೆ.

ಜೋಡಿ ಸಾಲು ಪದ್ಧತಿ

ಹತ್ತಿಯನ್ನು 120 ಸೆಂ.ಮೀ-60 ಸೆಂ.ಮೀ-120 ಸೆಂ.ಮೀ ಅಂತರz ಜೋಡಿ ಸಾಲುಗಳಲ್ಲಿ, ಗಿಡದಿಂದ ಗಿಡಕ್ಕೆ 60 ಸೆಂ.ಮೀ ಅಂತರ ನೀಡಿ ಬೆಳೆಯುವುದರಿಂದ ವಿವಿಧ ಅಂತರ ಬೆಳೆಗಳನ್ನು ಬೆಳೆಯಬಹುದಾಗಿದೆ.

ಪ್ರಮುಖ ಸಲಹೆಗಳು

 1. ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಹತ್ತಿಯು ನಂತರ ಹತ್ತಿ ಬೆಳೆಯದೆ ಬೆಳೆ ಪರಿವರ್ತನೆ ಮಾಡುವುದು.
 2. ಪ್ರಮಾಣಿತ ಹಾಗೂ ಶಿಫಾರಸ್ಸು ಮಾಡಿದ ಬಿತ್ತನೆ ಬೀಜಗಳನ್ನು ಬಳಸುವುದು.
 3. ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ಹತ್ತಿ ರಹಿತ ಹತ್ತಿಯನ್ನು ಅಥವಾ ಬಿ.ಟಿ. ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
 4. ಹೊಲದ ಸುತ್ತಲೂ ಪ್ರತಿ 20 ಸಾಲು ಹತ್ತಿಗೆ 1 ಸಾಲಿನಲ್ಲಿ ಬೆಂಡೆ ಬೀಜ ಹಾಕುವುದರಿಂದ ಕೀಟಗಳ ಹಾವಳಿ ಕಡಿಮೆಯಾಗುವುದು.
 5. ಶಿಫಾರಸ್ಸಿನ ರಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿಯೊಂದಿಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ.
 • ಹೆಸರು ಬೆಳೆಯ ಬೇಸಾಯ ಕ್ರಮಗಳು: ತಳಿಗಳು: ಪಿ.ಎಸ್.16

ಬೀಜ ಪ್ರಮಾಣ ಮತ್ತು ಅಂತರ

ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟುದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

 • ಎಕರೆಗೆ 3 ಟನ್ ಸಾವಯವ ಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
 • ಎಕರೆಗೆ 5 ಕೆ.ಜಿ. ಸಾರಜನಕ, 10 ಕೆ.ಜಿ. ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ ದಿವಸ/ ಮಾರನೆಯ ದಿವಸ ಪ್ರತಿ ಎಕರೆಗೆ 1.3 ಲೀ ಪೆಂಡಿಮಿಥಲಿನ್ 30ಇ.ಸಿ ಕಳೆನಾಶಕವನ್ನು 300 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

 • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
 • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
 • ಬೂದಿ ರೋಗದ ಹತೋಟಿಗೆ ಕಾರ್ಬೆನ್‍ಡೈಜಿಂ. 50 ಡಬ್ಲ್ಯೂಪಿನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಉದ್ದು ಬೆಳೆಯ ಬೇಸಾಯ ಕ್ರಮಗಳು

 • ತಳಿ:- ಕರಂಗಾವ್-3, ಟಿ-9, ರಶ್ಮಿ (ಎಲ್.ಬಿ.ಜಿ.625) ಬೀಜಗಳ ಪ್ರಮಾಣ 8-10 ಕೆ.ಜಿ. ಪ್ರತಿ ಎಕರೆಗೆ.
 • ಬೀಜ ಪ್ರಮಾಣ ಮತ್ತು ಅಂತರ
 • ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದ ಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಬಿತ್ತನೆಗೆ ಮುಂಚಿತವಾಗಿ ಬರ ನಿರೋಧಕ ಗುಣ ಹೆಚ್ಚಿಸಲು ಶೇ.2 ರಕ್ಯಾಲ್ಸಿಯಂಕ್ಲೋರೈಡ್ ದ್ರಾವಣದಲ್ಲಿ ಅರ್ಧತಾಸು ನೆನೆಸಿ, ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು ನಂತರ ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟು ದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

 • ಎಕರೆಗೆ 3 ಟನ್ ಸಾವಯವಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
 • ಎಕರೆಗೆ 5 ಕೆ.ಜಿ. ಸಾರಜಕನ, 10 ಕೆ.ಜಿ.ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ 2 ದಿನಗಳೊಳಗಾಗಿ ಪ್ರತಿ ಎಕರೆಗೆ 0.8 ಲೀ ಫ್ಲುಕ್ಲೋರಾಲಿನ್ 45ಇ.ಸಿ ಅಥವಾ 1.2 ಲೀ. ಅಲಾಕ್ಲೋರ್ 50 ಇ.ಸಿ ಕಳೆನಾಶಕಗಳನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

 • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗ ಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
 • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7 ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
 • ಬೂದಿ ರೋಗದ ಹತೋಟಿಗೆ ಕಾರ್ಬನ್‍ಡೈಜಿಂ. 50 ಡಬ್ಲ್ಯೂಪಿ ನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಆನ್ ಲೈನ್ ‌ತರಗತಿ | ಆಳುವ ನಾಯಕರಿಗೆ ಬೇಸಿಕ್ ನಾಲೆಡ್ಜ್ ಇಲ್ಲ : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು:ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾನಮಂತ್ರಿ ಅವರ ಪ್ರಸ್ತಾವ, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ! ಇದರಿಂದ ಸಮಾಜದ...

ದಿನದ ಸುದ್ದಿ5 hours ago

ಮಾಜಿ ಪ್ರಧಾನಿ ಇಂದಿರಾಗಾಂಧಿ ಭಾವಚಿತ್ರಕ್ಕೆ‌ ಮಸಿ; ಕಿಡಿಗೇಡಿಗಳ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕ ಶಾಂತನಗೌಡ

ಸುದ್ದಿದಿನ,ದಾವಣಗೆರೆ: ಚಿಗಟೇರಿ ಆಸ್ಪತ್ರೆ ಬಳಿಯ ಇಂದಿರಾಗಾಂಧಿ ಕ್ಯಾಂಟೀನ್ ನಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದು, ಮಾಜಿ ಶಾಸಕ ಜಿ.ಶಾಂತನಗೌಡ ತೀವ್ರ...

ದಿನದ ಸುದ್ದಿ6 hours ago

ದಾವಣಗೆರೆಯಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದ ಕಿಡಿಗೇಡಿಗಳು

ಸುದ್ದಿದಿನ,ದಾವಣಗೆರೆ: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಭಾವಚಿತ್ರಕ್ಕೆ ಇಂದು ಕಿಡಿಗೇಡಿಗಳು ಕಪ್ಪು ಮಸಿ ಎರಚಿದ ಘಟನೆ ನಗರದ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಜಿಲ್ಲಾಸ್ಪತ್ರೆ ಆವರಣದ ಇಂದಿರಾ ಕ್ಯಾಂಟೀನ್...

ಕ್ರೀಡೆ7 hours ago

ಜಿಮ್ನಾಸ್ಟಿಕ್ ನ ಸ್ಪ್ರಿಂಗ್ ಮ್ಯಾನ್..!

ಡಾ. ಗಿರೀಶ್ ಮೂಗ್ತಿಹಳ್ಳಿ ಕಲೆ ಸಾಹಿತ್ಯ ಸಂಸ್ಕೃತಿ ಗೆ ಹೆಸರುವಾಸಿ ಆದ ಮೈಸೂರು, ಹಲವಾರು ಸಾಧಕ ರ ತವರೂರಾಗಿದೆ. ತಾಯಿ ಚಾಮುಂಡೇಶ್ವರಿ ಯ ಆಶೀರ್ವಾದವಿರುವ ಈ ಊರಿನಲ್ಲಿ...

ರಾಜಕೀಯ7 hours ago

ಮಾಜಿ ಸಂಸದ ಉಗ್ರಪ್ಪಗೆ ಬೆದರಿಯೊಡ್ಡಿದ ದುಷ್ಕರ್ಮಿಯನ್ನು ಬಂಧಿಸಿ : ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್

ಸುದ್ದಿದಿನ,ಹಗರಿಬೊಮ್ಮನಹಳ್ಳಿ: ಬಳ್ಳಾರಿ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ವಿ ಎಸ್ ಉಗ್ರಪ್ಪನವರಿಗೆ ಹುಸಿಹಿಂದುತ್ವವಾದಿಗಳು ಮತ್ತು ಸಂಘ ಪರಿವಾರದವರ ವಿರುದ್ಧ ಮಾತನಾಡಬಾರದೆಂದು ಬೆದರಿಕೆಯೊಡ್ಡಿ ಪತ್ರ ಬರೆದ ದುಷ್ಕರ್ಮಿಯನ್ನು...

ದಿನದ ಸುದ್ದಿ12 hours ago

ದಾವಣಗೆರೆ ಜಿಲ್ಲೆಯಲ್ಲಿ ಸರಾಸರಿ 6.0 ಮಿ.ಮೀ ಮಳೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಮೇ 29ರಂದು 6.0 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಕೆಳಕಂಡಂತಿದೆ. ಮಳೆಯ ವಿವರ ಚನ್ನಗಿರಿ 3.0 ಮಿ.ಮೀ ವಾಡಿಕೆ ಮಳೆಗೆ...

ರಾಜಕೀಯ12 hours ago

“ವಿಶ್ವಗುರು ಕ್ಯೂಬಾ”ದಂತಾಗಬೇಕೇ ನಮ್ಮ ಭಾರತ ? ಜಗತ್ತನ್ನೇ ಕೊರೋನಾದಿಂದ ರಕ್ಷಿಸುತ್ತಿರೋ ಪುಟ್ಟ ಕಮ್ಯೂನಿಷ್ಟ್ ರಾಷ್ಟ್ರ !

ನವೀನ್ ಸೂರಿಂಜೆ ಕೊರೋನಾ ನಿಯಂತ್ರಣದಲ್ಲಿ ಭಾರತವೇ ವಿಶ್ವಗುರು ಎಂದ ಪ್ರಧಾನಿ ಮೋದಿ ಅನುಯಾಯಿಗಳು ಹೇಳುತ್ತಿರುವ ಸಂದರ್ಭದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ ಹತ್ತನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ....

ದಿನದ ಸುದ್ದಿ12 hours ago

ಅನಧಿಕೃತ ಲೂಸ್ ಮೆಕ್ಕೆಜೋಳ ಬಿತ್ತನೆ ಬೀಜಗಳ ಮಾರಾಟ-ಖರೀದಿ ಬಗ್ಗೆ ಎಚ್ಚರಿಕೆ..!

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಕಳೆದ ವಾರ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆ ಪೂರ್ವ ಭೂಮಿ ಸಿದ್ಧತೆ ಮಾಡುತ್ತಾ, ಬಿತ್ತನೆಗೆ ತಯಾರಿ ನಡೆಸುತ್ತಿದ್ದಾರೆ. ಉತ್ತಮ ಭೂಮಿ ಸಿದ್ಧತೆ ಸಮಗ್ರ...

ದಿನದ ಸುದ್ದಿ12 hours ago

ದಾವಣಗೆರೆ | ಕ್ವಿಂಟಾಲ್ ಗೆ 1815 ರೂರಂತೆ ಭತ್ತ ಖರೀದಿಸಲು ಜಿಲ್ಲಾಧಿಕಾರಿ ಮನವಿ

ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಭತ್ತಕ್ಕೆ ರೂ.1815 ನಿಗದಿಪಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಈ ದರಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರಿಂದ ಭತ್ತವನ್ನು ಖರೀದಿಸಲಾಗುತ್ತಿದೆ....

ದಿನದ ಸುದ್ದಿ12 hours ago

ಹಾವೇರಿ | ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಪಾಸಿಟಿವ್..!

ಸುದ್ದಿದಿನ,ಹಾವೇರಿ: ಜಿಲ್ಲೆಯಲ್ಲಿ ಇವತ್ತು ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಾಲ್ವರೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯಿಂದ ಬಂದಿದ್ದಾರೆ. ನಾಲ್ವರಲ್ಲಿ 11 ವರ್ಷದ ಬಾಲಕಿ, 19 ವರ್ಷದ ಯುವಕ, 13...

Trending