Connect with us

ಲೈಫ್ ಸ್ಟೈಲ್

ರೋಗ ನಿರೋಧಕ ಶಕ್ತಿ ಹೆಚ್ಚಿಸೋ ‘ವಿಟಮಿನ್-ಸಿ’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!   

Published

on

ಸುದ್ದಿದಿನ ಡೆಸ್ಕ್ : ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಕೂಡ ಇದೆ.

 1. ವಿಟಮಿನ್ -ಸಿ ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನುಹೆಚ್ಚಿಸುತ್ತದೆ ಮತ್ತು ರೋಗಣುಗಳಜೊತೆಹೋರಾಡುತ್ತದೆ,ಸೋಂಕನ್ನು ತಡೆಗಟ್ಟುತ್ತದೆ.
 2. ವಸಡಿನಿಂದ  ಉಂಟಾಗುವ ರಕ್ತಸ್ರಾವವನ್ನುಪೂರ್ತಿಯಾಗಿ ಕಡಿಮೆಮಾಡಿ ವಾಸಿ ಮಾಡುತ್ತದೆ.
 3. ಚರ್ಮದ ಸುಕ್ಕನ್ನು ತಡೆಗಟ್ಟಿ,ಚರ್ಮಕ್ಕೆಕಾಂತಿಯನ್ನುನೀಡುತ್ತದೆ,ಅಷ್ಟೆಅಲ್ಲದೆ ತುಂಬಾಅಧಿಕವಾಗಿ ಉತ್ಕರ್ಷಣಶಕ್ತಿಯನ್ನು ಹೊಂದಿದೆ.
 4. ನೆಗಡಿ,ಕೆಮ್ಮನ್ನು ಕೂಡ ಕಡಿಮೆ ಮಾಡುತ್ತದೆ.ಅವುಗಳಿಗೆಔಷಧಿಯಾಗಿ ಕೆಲಸ ಮಾಡುತ್ತದೆ.
 5. ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿರುವ ಬಿಳಿಯ ರಕ್ತಕಣಗಳನ್ನೂಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿ ಪ್ರತಿ ರಕ್ಷಣಾ ಶಕ್ತಿಯನ್ನುಹೆಚ್ಚಿಸುತ್ತದೆ.

ಕೊರತೆ

 • ವಿಟಮಿನ್ ಸಿ ದೇಹದಲ್ಲಿ ಉತ್ಪತ್ತಿಯಾಗದೆ ಇರುವ ಕಾರಣದಿಂದ ಹಲವಾರು ಮಂದಿಯಲ್ಲಿ ವಿಟಮಿನ್ ಸಿ ಕೊರತೆ ಕಂಡುಬರುವುದು. ವಿಟಮಿನ್ ಸಿ ಕೊರತೆಯಿಂದ ನಿಮಗೆ ಸ್ಕರ್ವಿ ಉಂಟಾಗಬಹುದು. ಇದರಿಂದಾಗಿ ನೀವು ತುಂಬಾ ನಿಶ್ಯಕ್ತಿಯಿಂದ ಬಳಲಬಹುದು.
 • ಈ ಕಾಯಿಲೆಯು ಮೂಳೆ, ಸ್ನಾಯುಗಳ ಬಲ ಮತ್ತು ರೋಗನಿರೋಧಕ ಕುಂದುವಂತೆ ಮಾಡುವುದು. ಅಧಿಕ ರಕ್ತದೊತ್ತಡ, ಮೂತ್ರಕೋಶಗಳ ಕಾಯಿಲೆ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್ ಗಳು ಅಪಧಮನಿ ಕಾಠಿಣ್ಯ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.

ವಿಟಮಿನ್ – ಸಿ  ಸಿಗುವ ಹಣ್ಣುಗಳು ಹಾಗೂ ತರಕಾರಿಗಳು  ಮತ್ತು ಅದರಲ್ಲಿ ಎಷ್ಟು ವಿಟಮಿನ್ – ಸಿ ಇದೆ ಎಂಬುದನ್ನು ತಿಳಿಯೋಣ

 1. ಕಳಿತ ಪೇರಳೆ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಒಂದು ಪೇರಳೆ ಹಣ್ಣಿನಲ್ಲಿ ದಿನಕ್ಕೆ ಬೇಕಾಗುವ 628 ಶೇ. ವಿಟಮಿನ್ ಸಿ ಇದೆ. ಇದರಿಂದ ಒಂದು ದಿನ ಪೇರಳೆ ಹಣ್ಣು ಸೇವಿಸಿದರೆ ಮರುದಿನ ವಿಟಮಿನ್ ಸಿ ಬಗ್ಗೆ ಚಿಂತೆ ಮಾಡಬೇಕಿಲ್ಲ.
 2. ಕಿತ್ತಳೆಯು ವಿಟಮಿನ್ ಸಿ ಸಮೃದ್ಧವಾಗಿರುವಂತಹ ಸಿಟ್ರಸ್ ಹಣ್ನಾಗಿದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 163 ಶೇ. ವಿಟಮಿನ್ ಸಿ ಇದೆ. 
 3. ಲಿಂಬೆಹಣ್ಣು ವಿಟಮಿನ್ ಸಿ ಇರುವ ಮತ್ತೊಂದು ಸಿಟ್ರಸ್ ಹಣ್ಣು. 100 ಗ್ರಾಂನಷ್ಟು ಲಿಂಬೆಹಣ್ಣಿನಲ್ಲಿ 53 ಗ್ರಾಂನಷ್ಟು ವಿಟಮಿನ್ ಸಿ ಇದೆ.
 4. ನೆಲ್ಲಿಕಾಯಿಯು ರುಚಿಯಲ್ಲಿ ಹುಳಿಯಾಗಿದ್ದರೂ ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ನೂರು ಗ್ರಾಂ ನೆಲ್ಲಿಕಾಯಿಯಲ್ಲಿ 27.7 ಮಿ.ಗ್ರಾಂ. ವಿಟಮಿನ್ ಸಿ ಇದೆ 
 5. ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ತಾಜಾ ಅನಾನಸ್ ನಲ್ಲಿ 131 ಶೇ. ವಿಟಮಿನ್ ಸಿ ಇದೆ.
 6. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ಸ್ಟ್ರಾಬೆರಿಯಲ್ಲಿ 149 ಶೇ. ವಿಟಮಿನ್ ಸಿ ಇದೆ. 
 7. ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಒಂದು ಕಪ್ ಕಚ್ಚಾ ಪಪ್ಪಾಯಿಯಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗುವ 144 ಶೇ. ವಿಟಮಿನ್ ಸಿ ಇದೆ.
 8. ಲಿಚೆಯಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ ಮತ್ತು ಇದು ತುಂಬಾ ಸಿಹಿಯಾಗಿದೆ. ಇದು ಅದ್ಭುತ ರುಚಿ ಮತ್ತು ಆರೋಗ್ಯಕಾರಿಯು ಹೌದು. 100 ಗ್ರಾಂ ಲಿಚೆಯಲ್ಲಿ 71.5 ಗ್ರಾಂನಷ್ಟು ವಿಟಮಿನ್ ಸಿ ಇದೆ 
 9. ಕೋಸುಗಡ್ಡೆಯು ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ ಮತ್ತು ಇದರಲ್ಲಿ ಅಧಿಕ ಮಟ್ಟದ ವಿಟಮಿನ್ ಸಿ ಇದೆ. ಒಂದು ಕಪ್ ಕಚ್ಚಾ ಕೋಸುಗಡ್ಡೆಯಲ್ಲಿ 135 ಶೇ. ವಿಟಮಿನ್ ಸಿ ಇದೆ. 
 10. ಕಿವಿಯು ಉನ್ನತ ಪ್ರಮಾಣದ ವಿಟಮಿನ್ ಸಿ ಇರುವಂತಹ ಹಣ್ಣು. ಒಂದು ತುಂಡು ಕಿವಿಯಲ್ಲಿ ದಿನಕ್ಕೆ ಸೂಚಿಸಲಾಗಿರುವ ವಿಟಮಿನ್ ಸಿಯ 273 ಮಿ.ಗ್ರಾಂ. ಇದೆ.
 11. ಕೆಂಪು ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಲಭ್ಯವಿದೆ. ಒಂದು ಕಪ್ ಕೆಂಪು ದೊಣ್ಣೆ ಮೆಣಸಿನಲ್ಲಿ 317 ಮಿ.ಗ್ರಾಂ ವಿಟಮಿನ್ ಸಿ ಇದೆ.
 12. ಪಾರ್ಸ್ಲಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಒಂದು ಕಪ್ ತಾಜಾ ಪಾರ್ಸ್ಲಿಯಲ್ಲಿ 133 ಶೇ. ವಿಟಮಿನ್ ಸಿ ಇದೆ.
 13. ಹಳದಿ ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಇದೆ. ಒಂದು ದೊಡ್ಡ ದೊಣ್ಣೆ ಮೆಣಸಿನಲ್ಲಿ 341 ಮಿ.ಗ್ರಾಂ ವಿಟಮಿನ್ ಸಿ ಇದೆ 
 14. ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿಯಾಗಿದೆ. ಒಂದು ಕಪ್ ಹಸಿ ಹೂಕೋಸಿನಲ್ಲಿ ಶೇ.77ರಷ್ಟು ವಿಟಮಿನ್ ಸಿ ಇದೆ. 

ಮಿಸ್ ಮಾಡ್ದೆ ಇದನ್ನೂ ಓದಿ

https://m.facebook.com/story.php?story_fbid=545041352689181&id=299499370576715

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಚಿತ್ರ ವಿಚಿತ್ರ ಕ್ರೇಜೀ ಹೇರ್ ಡೇ ಸಂಭ್ರಮ..!

Published

on

ಭಾರತದ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ದಿನವನ್ನು ಆಚರಿಸುವ ಹಾಗೆ, ಪಾಶ್ಚಾತ್ಯ ದೇಶಗಳಲ್ಲಿ ಚಿನ್ನರ ವಿಚಿತ್ರ ವಿಶಿಷ್ಟ ಕೇಶವಿನ್ಯಾಸಕ್ಕೆಂದೇ ಒಂದು ದಿನ ನಿಗದಿ ಮಾಡಿ, ಕ್ರೇಜಿ ಹೇರ್ ಸ್ಟೈಲ್ ಗಳಲ್ಲಿ ಮಕ್ಕಳು ಮಿಂಚುತ್ತಾರೆ. ಇಲ್ಲಿ ಪೋಷಕರ ಕ್ರಿಯಾಶೀಲತೆಗೆ ಹೆಚ್ಚಿನ ಮಣ್ಣನೆ ನೀಡಲಾಗುವುದು. ದಿ ಬೆಸ್ಟ್ ಕ್ರೇಜಿ ಹೇರ್ ಸ್ಟೈಲ್ ಎಂಬ ಪಾರಿತೋಷಕ ಪ್ರಶಸ್ತಿ ಕೂಡ ನೀಡಲಾಗುತ್ತದೆ.

ಮಕ್ಕಳು ಈ ವಿಶಿಷ್ಟ ದಿನದ ಸಂಭ್ರಮದಲ್ಲಿ ಖುಷಿ ಯಿಂದ ಪಾಲ್ಗೊಂಡು, ತಮ್ಮ ಕ್ರಿಯಾತ್ಮಕತೆ ಮೆರೆಯುತ್ತಾರೆ.ಯುನಿಕಾರ್ನ್, ಪಂಕಿನ್, ಸ್ಪೈಡರ್, ಗೋ ಗ್ರೀನ್, ಬಲೂನ್, ಡ್ರಾಗನ್ , ಬರಗರ್, ಪೀಜಾ, ಶೈಲಿಯ ವಿಚಿತ್ರ ಹಾಗೂ ಫಂಕೀ ಹೇರ್ ಸ್ಟೈಲ್ ಸದ್ಯ ಕ್ರೇಜಿ ಹೇರ್ ಡೇ ಸ್ಪೆಶಲ್ ಆಗಿತ್ತು.

ಕೋಕಾ ಕೋಲಾ ಬಾಟಲ್ ಬಳಸಿ ಮಾಡಲಾದ ಕೇಶವಿನ್ಯಾಸ ಹೆಚ್ಚು ಗಮನ ಸೆಳೆಯಿತು. ಅಂತೆಯೇ, ಪೈನಾಪಲ್ ಹೇರ್ ಸ್ಟೈಲ್ ಕೂಡ ಮಕ್ಕಳ ಫೇವರಿಟ್ ಎನಿಸಿಕೊಂಡಿತು.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ವೈರಲ್ ಆಯ್ತು ಎಂಗೇಜ್ಮೆಂಟ್ ಪಿಯರ್ಸಿಂಗ್ ರಿಂಗ್ ಫ್ಯಾಷನ್..!

Published

on

ಪ್ರೇಮಾಂಕುರ ವಾದೊಡನೆಯೇ ಸುಂದರಿಯ ಕೈ ಬೆರಳಿಗೆ ಉಂಗುರ ತೊಡಿಸಿ, ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ. ಆದರೆ ಇಂದಿನ ಹೈಟೆಕ್ ಯುಗದಲ್ಲಿ , ಚಿನ್ನದ ಆಭರಣಗಳ ಮೋಹ ಕಳೆದುಕೊಳ್ಳುತ್ತಿರುವ ಯುವ ಜನಾಂಗ, ಟ್ಯಾಟೂ ಕ್ರೇಜ್ ಮೈ ಗಿಟ್ಟಿಸಿಕೊಂಡಿದೆ. ಎಂಗೇಜ್ಮೆಂಟ್ ರಿಂಗ್ ಜಾಗವನ್ನ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಆಕ್ರಮಿಸಿಕೊಂಡಿದೆ. ರಿಂಗ್ ಬದಲಾಯಿಸಿಕೊಳ್ಳುವ ಬದಲು, ಹುಡುಗ-ಹುಡುಗಿಯರಿಬ್ಬರೂ ರಿಂಗ್ ಟ್ಯಾಟೂ ಮೊರೆ ಹೋಗುತ್ತಿದ್ದಾರೆ.

ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರೇಮಿಗಳು ಫಿಂಗರ್ ಪಿಯರ್ಸಿಂಗ್ ಎಂಗೇಜ್ಮೆಂಟ್ ರಿಂಗ್ ಎಂಬ ಹೊಸಾ ಫ್ಯಾಷನ್ ಸೃಷ್ಟಿಸಿದ್ದಾರೆ. ವಜ್ರ,ಚಿನ್ನದ ರಿಂಗ್ ಬದಲು, ವಜ್ರದ ಸ್ಟಡ್ , ಚಿನ್ನ-ಬೆಳ್ಳಿಯ ಸ್ಟಡ್ ಗಳನ್ನು ಬೆರಳಿಗೆ ಶಾಶ್ವತವಾಗಿ ಚುಚ್ಚಲಾಗುತ್ತದೆ. ಫಿಂಗರ್ ರಿಂಗ್ ಪಿಯರ್ಸಿಂಗ್ ಸದ್ಯ ಟ್ರೆಂಡಿಂಗ್ ಫ್ಯಾಷನ್ ಸಾಲಿಗೆ ಸೇರಿದ್ದು ನೂತನ ಶೈಲಿಯ ಎಂಗೇಜ್ಮೆಂಟ್ ರಿಂಗ್ ( ಪಿಯರ್ಸಿಂಗ್) ಯುವಪೀಳಿಗೆ ಯಲ್ಲಿ ಸಾಕಷ್ಟು ಫ್ಯಾಷನ್ ಸಂಚಲನ ಮೂಡಿಸಿದೆ.

ಈ ರೀತಿಯ ಫಿಂಗರ್ ಪಿಯರ್ಸಿಂಗ್, ಶಾಶ್ವತ ವಾಗಿದ್ದು, ಇದರ ಗಾಯ ಕೂಡಾ ಶಾಶ್ವತ ವಾಗಿರುತ್ತದೆ. ಬಹಳ ಸೂಕ್ಷ್ಮ ವಾದ ಚರ್ಮ ವಾಗಿರುವ ಕೈ ಬೆರಳಿನ ಮೇಲೆ ಚುಚ್ಚಿಸುವುದು ಅಷ್ಟು ಸುಲಭವಲ್ಲ. ಅತಿಯಾದ ನೋವಿನಿಂದ ಕೂಡಿರುವ ಈ ಫಿಂಗರ್ ಪಿಯರ್ಸಿಂಗ್ ಯುವಪೀಳಿಗೆಯ ಫ್ಯಾಷನ್ ಕ್ರೇಜ್ ಗೆ ಸಾಕ್ಷಿ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಸೆಕ್ಸೀ ಸ್ಟೆಂಸಿಲ್ ‘ಐ’ ಮೇಕಪ್

Published

on

ಮುದ್ದು ಮುಖದ ಸೌಂದರ್ಯ ಹೆಚ್ಚಿಸಲು ಮೇಕಪ್ ಮೊರೆ ಹೋಗುವುದುಂಟು. ಮೇಕಪ್ ದುನಿಯಾದಲ್ಲಿ ದಿನ ದಿನಕ್ಕೂ ಹೊಸ ಟ್ರೆಂಡ್ ಸೃಷ್ಟಿ ಆಗುತ್ತದೆ. ಸದಾ ಹೊಸದನ್ನು ಬಯಸುವ ಸೌಂದರ್ಯ ಪ್ರಿಯರ ಸ್ಟೈಲ್ ನ್ನ ಮನಸ್ಸಿನಲ್ಲಿಟ್ಟುಕೊಂಡು ಹೊಚ್ಚ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತವೆ. ಹಬ್ಬ ಹರಿದಿನ ಮದುವೆ ಸಂದರ್ಭದಲ್ಲಿ ಮುಖದ ಅಂದ ಹೆಚ್ಚಿಸುವ ಐ- ಮೆಕಪ್ ಗೆ ಬೇಡಿಕೆ ಹೆಚ್ಚುತ್ತಿದೆ. ಅಂತಹುದ್ದೇ ಒಂದು ಸ್ಟೈಲಿಶ್ ಲುಕ್ ಫ್ಯಾಷನ್ ಅಂಗಳಕ್ಕೆ ಎಂಟ್ರಿ ನೀಡಿದೆ.

ಕನ್ಯಾಮಣಿಯರ ಕಣ್ ಕಮಲಗಳ ಮೇಲೆ ಮೂಡಿದೆ ಹಾರ್ಟ್ ಐ-ಮೇಕಪ್. ಸ್ಟೆಂಸಿಲ್ ಆರ್ಟ್ ಬಳಸಿ ಕಣ್ಣು ರೆಪ್ಪೆಯ ಮೇಲೆ ಸುಂದರವಾಗಿ ಹಾರ್ಟ್ ಆಕಾರ ರಚಿಸಲಾಗಿದ್ದು, ಈ ಕ್ಯೂಟ್ ಲವ್ ಟ್ರೆಂಡ್ ಸೋಷಿಯಲ್ ಮೀಡಿಯಾ ದಿಲ್ಲಿ ಸುದ್ದಿ ಮಾಡುತ್ತಿದೆ. ಗೋಲ್ಡನ್ ಏಜ್ ಲೈನರ್ ಗೆ ಕೆಂಪು ಬಣ್ಣದ ಐ- ಮೆಕಪ್ ಕಾಂಬಿನೇಷನ್ ಸಖತ್ ಹಾಟ್ ಎನಿಸಿದೆ. ಹಾರ್ಟ್ ಸ್ಟೆಂಸಿಲ್ ಬೆಳಸಿ ಮಾಡಲಾಗುವ ಈ ಐದು ಮೇಕಪ್ ಸದ್ಯ ಫ್ಯಾಷನ್ ಪ್ರಿಯರ ನಿದ್ದೆ ಕೆಡಿಸಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending