Connect with us

ಲೈಫ್ ಸ್ಟೈಲ್

ಅರೆ ತಲೆನೋವು, ಮೂಲವ್ಯಾಧಿ ಗುಣಪಡಿಸುತ್ತೆ ಈ ‘ಹಿಪ್ಪಲಿ’..!

Published

on

ಹಿಪ್ಪಲಿ ಕಪ್ಪಾಗಿದರು, ರುಚಿಯಲ್ಲಿ ಸ್ವಲ್ಪ ಖಾರ ಸುವಾಸನೆಯಲ್ಲಿ ಮೆಣಸಿನ ಕಾಳಿನ ವಾಸನೆಯನ್ನೇ ಹೋಲುತ್ತದೆ. ಆದರೆ ನೋಡಲು ಸ್ವಲ್ಪ ಉದ್ದವಾಗಿದ್ದು ಇದು ಕೂಡ ಬಳ್ಳಿಯಲ್ಲೇ ಬಿಡುವ ಸಂಬಾರಿನ ವಸ್ತು ಇದಾಗಿದೆ. ಈ ಹಿಪ್ಪಲಿಯ ಕಾಯಿಗಳು ಗೊಂಚಲಾಗಿ ಉರುಳೆಯಾಕಾರವಾಗಿರುತ್ತದೆ. ಇದು ಕಾಯಾಗಿರುವಾಗ ಎಲೆಹಸಿರು ಬಣ್ಣದಿಂದ ಕೂಡಿದ್ದು. ಬೆಳೆದು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಹಿಪ್ಪಲಿಯ ಉಪಯೋಗ

  1. ಅರೆ ತಲೆನೋವು ನಿವಾರಿಸುವಲ್ಲಿ ಹಿಪ್ಪಲಿ ಪುಡಿ ಸಹಾಯಕಾರಿ.
  2. ಅರ್ಧ ಚಮಚ ಹಿಪ್ಪಲಿ ಪುಡಿಗೆ ಅರ್ಧ ಚಮಚ ಜೇನುತುಪ್ಪ ಕಲಸಿ ದಿನಕ್ಕೆ 3 ಬಾರಿ ಸೇವಿಸಿದರೆ ಬೊಜ್ಜು ಕರಗಲು ಸಹಾಯಕಾರಿ.
  3. ಹಿಪ್ಪಲಿಯನ್ನು ಗೋಮೂತ್ರದ ಜೊತೆ ಸೇವಿಸಿದರೆ ಸಂಧಿಗಳ ನೋವು-ಊತ ಕಡಿಮೆಯಾಗುವಲ್ಲಿ ಸಹಕಾರಿ.
  4. ಹಿಪ್ಪಲಿ , ಶುಂಠಿ , ಕರಿಮೆಣಸು ಹಾಗೂ ನಾಗಕೇಸರಗಳನ್ನು ಪುಡಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.
  5. ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ, ಸೇದರಲಾಣಿ ಉಪ್ಪು ಎಲ್ಲವನ್ನು ಸೇರಿಸಿ ಮಜ್ಜಿಗೆ ಜೊತೆ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗಲು ಸಹಕಾರಿ.
  6. ಹಿಪ್ಪಲಿ ಪುಡಿಯನ್ನು ಹಾಲು ಮತ್ತು ಅಡುಗೆಸೋಡ ರಸದಲ್ಲಿ ಬೆರೆಸಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುವಲ್ಲಿ ಸಹಕಾರಿ.
  7. ಹಿಪ್ಪಲಿಯ ಜೊತೆ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಜುಮ್ ಕಡಿಮೆ ಮಾಡುತ್ತದೆ.
  8. ಹಿಪ್ಪಲಿಯ ಬೇರನ್ನು ಅಕ್ಕಿಯಿಂದ ತಯಾರಿಸುವ ಬೀರ್‍ಗಳಲ್ಲಿ ಬುರುಗು ಬರಿಸಲು ಬಳಸುತ್ತಾರೆ.
  9. ಅಂಡಮಾನ್ ದ್ವೀಪಗಳಲ್ಲಿ ಹಿಪ್ಪಲಿಯ ಎಲೆಗಳನ್ನು ವೀಳ್ಯದೆಲೆಯಂತೆ ತಿನ್ನಲು ಬಳಸುತ್ತಾರೆ.

ನಿವೇದಿತಾ ಸುರೇಶ್ ಸೋಲಾಪುರ

ಇದನ್ನೂ ಓದಿ

‘ರೋಸ್ ವಾಟರ್’ ಇಷ್ಟೆಲ್ಲಾ ಉಪಯೋಗಕ್ಕೆ ಬರುತ್ತೆ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ದರ್ಜಿಹಕ್ಕಿ

Published

on

ಫೋಟೋ : ಭಗವತಿ‌ ಎಂ.ಅರ್
  • ಭಗವತಿ ಎಂ.ಆರ್

“ಟುವ್ವಿ! ಟುವ್ವಿ! ಟುವ್ವಿ! ಟುವ್ವಿ!
ಎಂದು ಹಕ್ಕಿ ಕೂಗಿತು
ಅದರ ಹಾಡು ಬಂದು
ಎನ್ನ ಎದೆಯ ಗೂಡು ತಾಗಿತು” ಕುವೆಂಪುರವರ ಟುವ್ವಿಹಕ್ಕಿಯ ಬಗೆಗಿನ ಕವನ ಪ್ರಸಿದ್ದವಾಗಿದೆ.

ಸದಾ ಚಟುವಟಿಕೆಯ ಹಕ್ಕಿಗಳಲ್ಲಿ ಈ ಸಿಂಪಿಗ ಕೂಡಾ ಒಂದು. ಇದರ ಇನ್ನೊಂದು ಹೆಸರು ದರ್ಜಿಹಕ್ಕಿ. ಕೆಂಪು ಕಣ್ಣು, ಕೆಂಪಿನ ಸುತ್ತ ಕಪ್ಪು ಉಂಗುರ ಮತ್ತು ಬಾಲ ಮತ್ತು ಬೆನ್ನಿನ ಭಾಗ ನಸು ಹಳದಿ, ಅಥವ ಪಾಚಿಯ ಬಣ್ಣ ಎಂದರೆ ಹೆಚ್ಚು ಸೂಕ್ತವಾದೀತು. ಹತ್ತಿರದಿಂದ ನೋಡಿದಾಗ ಇದು ದರ್ಜಿ ಹಕ್ಕಿ ಅಂತ ಕೂಡಲೇ ಗುರುತಿಸಬಹುದು.

ಇಲ್ಲವಾದರೆ ಅದು ಹಾರುವಾಗ, ಓಡಾಡುವಾಗ ಹೆಚ್ಚುಕಮ್ಮಿ ಸುವ್ವಿಯ (Ashy Prinia) ತರವೇ ಕಾಣುತ್ತದೆ. ದೂರದಿಂದ ನೋಡಿದಾಗ ಚಿಟ್ಟೆಯೊಂದು ಹಾರಾಡಿದಂತೆಯೇ ಕಾಣುತ್ತದೆ.  ಇದು ಎಲೆಗಳನ್ನು ಹೊಲಿದು ಜೋಳಿಗೆಯಂತೆ ಮಾಡಿ ಅದರೊಳಗೆ ಗೂಡು ಕಟ್ಟುತ್ತದೆ. ಗೂಡಿನ ಮೆತ್ತನೆಯ ಗಾದಿಯ ಮೇಲೆ ಸಮುದ್ರ ನೀಲಿಯ ಬಣ್ಣದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಂಥ ಮೊಟ್ಟೆಗಳನಿಡುತ್ತವೆ.

ಬಹು ಸಂಕೋಚದ ಹಕ್ಕಿ ಇದು. ಪೊದೆಗಳ, ಎಲೆಗಳ ನಡುವೆ ಸೇರಿಕೊಂಡರೆ ಕಾಣುವುದು ಕಷ್ಟ. ಹತ್ತಿರದಲ್ಲಿದ್ದಾಗ ಅದರ ದೇಹದ ಕಾಲುಭಾಗ ಮಾತ್ರ ಕಾಣುವುದು. ಎಲೆ ಅಲುಗಾಡಿದಂತಾದಾಗ ನೋಡುವಷ್ಟರಲ್ಲಿ ಹಾರಿ ಹೋಗಿರುತ್ತದೆ. ಮನುಷ್ಯ ಇದನ್ನು ನೋಡಿಯೇ ಹೊಲಿಗೆ ಕಲಿತಿರಬೇಕು.

ದರ್ಜಿಹಕ್ಕಿಯೆಂಬುದು ಇದರ ಅನ್ವರ್ಥನಾಮ. ಸಾಮಾನ್ಯವಾಗಿ ಜನವಸತಿ ಇರುವ ಕಡೆ, ಪೊದೆಗಳಲ್ಲಿ, ಉದ್ಯಾನವನಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. “ಸಂತೆಯೊಳಗೊಂದು ಮನೆಯ ಮಾಡಿ” ಅಕ್ಕಮಹಾದೇವಿಯ ವಚನವನ್ನು ನೆನೆಪಿಸುತ್ತದೆ ಈ ಪುಟ್ಟಹಕ್ಕಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಬೆರಳುಗಳ ಮೇಲೆ ಬ್ಲೋ ಮಾಡಿ ‘ಬರ್ತಡೇ ಕ್ಯಾಂಡಲ್’..!

Published

on

  • ಚಿತ್ರಶ್ರೀ ಹರ್ಷ

ಹುಟ್ಟಿದ ಹಬ್ಬಕ್ಕೆ  ಕೇಕ್ ಮೇಲೆ ಕ್ಯಾಂಡಲ್ ಅಂಟಿಸಿ, ಕೇಕ್ ಕತ್ತರಿಸಿ, ಸೆಲಿಬ್ರೇಟ್ ಮಾಡುವುದು ಸಾಮಾನ್ಯ. ಆದರೆ ಕೇಕ್ ಮೇಲಿರಬೇಕಿದ್ದ ಬರ್ತಡೇ ಕ್ಯಾಂಡಲ್,  ಮಾನಿನಿಯರ ಕೈಬೆರಳುಗಳಲ್ಲಿ “ಫ್ಲೇಮ್ ನೈಲ್ ಆರ್ಟ್ ” ರೂಪ ತಾಳಿದೆ! ವಿಚಿತ್ರ ಎನಿಸಿದರೂ ಇದು ನೂರರಷ್ಟು ಸತ್ಯ.  ಸದಾ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂಬ ಗೀಳು ಮೈಗೂಡಿಸಿಕೊಂಡಿರುವ ಯುವಪೀಳಿಗೆಯ ಅನ್ವೇಷಣೆಯೇ ಈ “ಫ್ಲೇಮ್ ನೈಲ್ ಆರ್ಟ್ “.

ಏನಿದು ಫ್ಲೇಮ್ ನೈಲ್ ಆರ್ಟ್? 

ನೋಡೋಕೆ ಒಮ್ಮೆಲೆ ಮೈ ಝಂ ಎನಿಸುವ ಈ ಕ್ರಿಯೇಟಿವ್ ಸ್ಟೈಲ್, ಈಗ ಯುವಪೀಳಿಗೆಯ ಮೋಜಿನ ಸ್ಟೈಲ್ ಸ್ಟೇಟ್ ಮೆಂಟ್ ಆಗಿದೆ. ಮೈ ರೋಮಾಂಚನ ಗೊಳಿಸುವ ಈ ವಿಶಿಷ್ಟ ಕಲೆ , ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಿಮ್ಮ ಪ್ರೀತಿ ಪಾತ್ರರ ಬರ್ತಡೇಯನ್ನು ವಿಶೇಷ ರೀತಿಯಲ್ಲಿ ಆಚರಿಸಬಯಸುವವರು ಈ ಫ್ಲೇಮ್ ನೈಲ್ ಆರ್ಟ್ ಟ್ರೆಂಡ್ ಫಾಲೋ ಆಗುತ್ತಿದ್ದಾರೆ.

ಉಗುರಿನ ಮೇಲೆ ನೇಲ್ ಬೇಸ್ ಕೊಟ್ ಹಚ್ಚಿ, ಆರಿದ ನಂತರ, ಸಣ್ಣ 3D ಮಿನಿಯೇಚರ್ ಮೇಣದಬತ್ತಿಯನ್ನ ಕೈ ಬೆರಳುಗಳ ಮೇಲೆ ಅಂಟಿಸುವ ಈ ಟ್ರೆಂಡ್ ಈಗ ಯುವಪೀಳಿಗೆಯ ಪ್ರಮುಖ ಆಕರ್ಷಣೆ ಆಗಿದೆ.

ಅಂತೆಯೇ ಇದೇ ರೀತಿಯ ಹಲವಾರು 3D ಬರ್ತಡೇ ನೈಲ್ ಆರ್ಟ್ ಟ್ರೆಂಡ್ ಆಗುತ್ತಿದ್ದು,  ಬೆರಳ ಮೇಲೆ, (ಎಕ್ಟೆಂಷನ್ ನೈಲ್) ಕೃತಕ ಉಗುರುಗಳು, 3D ಮಿನಿಯೇಚರ್  ಗಳನ್ನು ಬಳಸಿ, ತುದಿಯಲ್ಲಿ ಕ್ಯಾಂಡಲ್ ಸಿಕ್ಕಿಸಲಾಗುತ್ತದೆ.

“ಕೈ ಬೆರಳುಗಳು ಸುಡುವುದಿಲ್ಲವೇ” ? ಎಂಬ ಪ್ರಶ್ನೆಗೆ  ನೈಲ್ ಆರ್ಟ್ ಪ್ರಿಯರಿಗೆ ಉತ್ತರ ಹೀಗಿತ್ತು ನೋಡಿ!.

” ವಿಭಿನ್ನವಾಗಿರಬೇಕು ಅಂದ ಮೇಲೆ ರಿಸ್ಕ್ ತೆಗೆದುಕೊಳ್ಳಲೂ ಸಿದ್ದ ವಿರಬೇಕು”
|ರಿಚಾ ( ಫ್ಯಾಷನ್ ಪ್ರಿಯೆ)

ಇನ್ನು ದಿನದಿನಕ್ಕೂ ಅಫಾಡವಾಗಿ ಬೆಳೆಯುತ್ತಿರುವ ನೈಲ್ ಆರ್ಟ್ ಟ್ರೆಂಡ್ ತನ್ನ ಪುಟ್ಟ ಉಗುರಿನಲ್ಲಿ ಇನ್ನೇನ್ನೇನು ಅಡಗಿಸಿಟ್ಟಿದೆಯೋ ಕಾದು ನೋಡಬೇಕು ಅಷ್ಟೇ.

“ಸೆನ್ಸೇಷನಲ್ ಫ್ಯಾಷನ್  ಕ್ರೇಜ್” ಮತ್ತು  “ವಿಭಿನ್ನತೆ” ಎಂಬ ಮಾಯಾಮೃಗ ದ ಬೆನ್ನತ್ತಿರುವ ಫ್ಯಾಷನ್ ಲೋಕ ಇನ್ನೇನ್ನೇನು ಹೊಸ ಅನ್ವೇಷಣೆ ಹೊರತರುತ್ತದೆಯೋ  ಎಂಬ ಕುತೂಹಲ ಫ್ಯಾಷನ್ ಪ್ರಿಯರದ್ದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗುಮ್ಮಟನಗರಿಯಲ್ಲೊಂದು ಸುಂದರ ‘ಮತ್ಸ್ಯಲೋಕ’..!

Published

on

ಫೋಟೋ : ಕಾಂಚನಾ ಬಸವರಾಜ ಪೂಜಾರಿ

ನುಷ್ಯನ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವ ಮೀನುಗಳು ಇದೀಗ ಗುಮ್ಮಟನಗರಿಯ ಜನರನ್ನು ರಂಜಿಸುವ ಅಲಂಕಾರಿಕ ವಸ್ತುವಾಗಿಯು ಪರಿವರ್ತನೆಯಾಗಿವೆ. ಹೌದು ಮೀನು ಪ್ರೀಯರನ್ನು ಕೈ ಬೀಸಿ ಕರೆಯಲೆಂದೆ ಮತ್ಸ್ಯಲೊಂಕದಿಂದ ಮತ್ಸ್ಯಕನ್ಯೆಯರು ಧರೆಗಿಳಿದು ಬಂದು ಗುಮ್ಮಟನಗರಿಯಲ್ಲಿ ಮತ್ಸ್ಯಲೋಕವನ್ನೆ ಸೃಷ್ಠಿಸಿದ್ದಾರೆ.

ವಿಜಯಪುರದ ಡಾ. ಬಿ.ಆರ್.ಅಂಬೇಡ್ಕರ ಕ್ರಿಡಾಂಗಣ ಅಮೀಪದ ಆನ್-ಲೈನ್ ಟ್ರೇಂಡಿಂಗ್ ಸಂಕೀರ್ಣದ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ “ಬೃಹತ್ ಮತ್ಸ್ಯ ಮೇಳ 2020”ಯಲ್ಲಿ ನೋಡುಗರ ಕಣ್ಣಿಗೆ ಸಂಭ್ರಮವನ್ನು ಆನಂದಿಸುವಂತೆ ಹಬ್ಬವನ್ನುಂಟು ಮಾಡಿದ್ದವು.

ಮತ್ಸ್ಯ ಮೇಳಕ್ಕೆ ಕೊನೆಯದಿನವಾದ ಜ.14ರಂದು ಜನರಿಂದ ಉತ್ತಮವಾದ ರೀತಿಯಲ್ಲಿ ಸ್ಪಂದನೆ ದೊರೆತಿದೆ. ಹೌದು ಬೆಳಗಿನಿಂದಲೆ ಮತ್ಸ್ಯಕನ್ಯೆಯರನ್ನು ನೋಡಲೆಂದು ಜನರು ತಂಡೊಪ ತಂಡವಾಗಿ ಆಗಮಿಸಿದರು.

ತರಹೇವಾರಿ ಮೀನು

ಮಿಲ್ಕ್ ಮಾರ್ಫ್, ಗ್ರೀನ್‍ಸ್ಕೇಟ್, ರೋಜಿ ಬಾರ್ಬ್, ಪೆನ್ಸಿಲ್ ಟೆಟ್ರಾ, ಪಫರ್, ನಿಯೋನ್ ಟೆಟ್ರಾ, ಸಿಂಗಾಪುರ್ ಗಪ್ಪಿ, ಟೆಟ್ರಾ, ಚೆರ್ರಿ ಬಾರ್ಬ್, ವೆನಿಲ್ಲಾ ಕಾರ್ಫ್, ಹಾಕಿ ಸ್ಟಿಕ್ ಟೆಟ್ರಾ, ಸರ್ಪೆಟೆಟ್ರಾ, ಕೊಯಿಕಾರ್ಪ್, ಆರೆಂಜ್ ಕೊಯಿ, ಆಲ್‍ಬಿನೋ ಗೌರಾಮಿ ಹೆಡ್‍ಗೋಲ್ಡ್, ನಿಯೋನ್ ಟೆಟ್ರಾ, ಗಪ್ಪಿ ಮೀನು, ಆರೇಟಿಸ್, ತಿಲಾಪಿಯ್, ಕಪ್ಪು ಮೋಲಿ.

ಕ್ಲೌನ್ ಬಾರ್ಬ್, ಟೈಗರ್ ಶಾರ್ಕ್, ಸಿಲ್ವರ್ ಶಾರ್ಕ್, ಟೈಗರ್ ಬಾರ್ಬ್, ಕತ್ತಿ ಬಾಲದ ಮೀನು, ಆಲ್ಬಿನೋ ಕ್ಯಾಟ್ ಫಿಶ್, ಸಕ್ಕರ್ ಮೌತ್ ಕ್ಯಾಟ್ ಫಿಶ್, ನೀಲಿ ಮತ್ತು ಹಳದಿ ಮಾಫ, ಬಿಳಿ ಮೋಲಿ, ಗೋಲ್ಡ್ ಫಿಶ್, ಟೈಗರ್ ಬಾರ್ಬ, ಅಲ್ಬನೋ ಶಾರ್ಕ್, ಏಂಜಲ್ ಫಿಶ್(ಗಂಧರ್ವ ಮೀನು).

ಅಬ್ಬಾ ಈ ಮೀನುಗಳ ಹೆಸರು ಹೇಳುವಷ್ಟರಲ್ಲಿ ನನಗೆ ಸುಸ್ತಾಯಿತುರಿ. ಹೀಗೆ ಅನೇಕ ತಳಿಯ ನೂರಕ್ಕೂ ಹೆಚ್ಚು ಬಗೆಯ ದೇಶ-ವಿದೇಶಿಯ ಮೀನುಗಳು ಇಲ್ಲಿ ಒಂದೆ ಸೂರಿನ ಅಡಿಯಲ್ಲಿ ಸೇರಿ ಕಿರಿಯರಿಂದ ಹಿಡಿದು ಹಿರಿಯರವರೆಗೂ ಕೈಬೀಸಿ ಕರೆದು ರಂಜಿಸುತ್ತಿದ್ದವು. ಅಷ್ಟೇ ಅಲ್ಲದೆ ಇವುಗಳಲ್ಲಿ ಮನೆಯಲ್ಲಿ ಸಾಕುವಂತಹ ಮೀನುಗಳು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಸುಂದರ ಮೀನುಗಳುಗಳಲ್ಲಿ ವಿಶ್ವ ಪ್ರಸಿದ್ಧಿ ಹೊಂದಿರುವ, ಹಾಗೂ ಅಧಿಕ ಬೆಲೆ ಹೊಂದಿರುವ ಅರವಾನ ಮತ್ತು ಫ್ಲವರ್ ಹಾರನ್ ಮೀನುಗಳನ್ನು ಎಲ್ಲರ ಗಮನ ಸೆಳೆದವು. ಆದರೆ ಇನ್ನೂ ಕೆಲವು ಬೆಲೆಗಳ ಮೂಲಕ ಹುಬ್ಬೆರುಸುವಂತೆ ಮಾಡಿದ್ದವು. ಅವುಗಳಲ್ಲಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಒಂದು ಸೆ.ಮೀ ಅಳತೆಯ ‘ಡೈಮಂಡ್ ಸ್ಟ್ರಿಂಗ್ ರೆ’ಗೆ ಒಂದು ಲಕ್ಷ ರೂ.

ಇದೆ, ಅದೇ ಐದು ಸೆ.ಮೀ ಗೆ ಐದು ಲಕ್ಷ ರೂ ಇದೆ, ಅದೆ ಒಂದುವರೆ ಕೆ.ಜಿ 20ಲಕ್ಷ ರೂ ಇದೆ. ‘ಅಲಿಗೇಟರ್‍ಗಾರ್’ ಎಂಬ ಮೀನಿಗೆ 2 ಲಕ್ಷ ರೂ, ‘ಲಿಯೋ ಪಾರ್ಡ್ ಡಿಸ್ಕಸ್’ ಮೀನಿಗೆ 1ಲಕ್ಷ ರೂ, ಚೀನಾದ ವಾಸ್ತುಮೀನು ‘ಪ್ಲವರ್ ಹಾರ್ನ್’ ಬೆಲೆ 70 ಸಾವಿರ ರೂ, ಹೀಗೆ ಅನೇಕ ಮೀನುಗಳು ಬೆಲೆಗಳ ಮೂಲಕ ಜನರನ್ನು ಆಕರ್ಷಣೆ ಮಾಡಿದವು ಇನ್ನು ಕೆಲವು ರಂಗು ರಂಗಾದ ಬಣ್ಣದಿಂದ ಮಕ್ಕಳನ್ನು ಆಕರ್ಷಣೆ ಮಾಡಿದವು. ಇದರ ಜೊತೆಗೆ ಮಕ್ಕಳು ಆಟವಾಡುತ್ತಾ ನಕ್ಕು ನಲಿದರು, ಹಾಗೂ ಯುವಜನರು ಸೆಲ್ಫಿ ಕ್ಲಿಕಿಸಿ ಸಂಭ್ರಮಿಸಿದರು.

ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಯೋಜನೆಗಳು

  • ಮೀನುಗಾರಿಕೆ ಮೂಲಭೂತ ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆ.
  • ಸಾರ್ವಜನಿಕ ವೀಕ್ಷಣೆಗಾಗಿ ಮುದ್ದು ಮೀನು ಸಂಗ್ರಹಾಲಯ ನಿರ್ವಹಣೆ.
  • ಉಚಿತ ಮೀನುಮರಿಗಳ ಹಂಚಿಕೆಯಿಂದ ರೈತರ ಸ್ವಂತ ಜಮೀನುಗಳಲ್ಲಿ ಸಣ್ಣ ಪ್ರಮಾಣದ ಜಲ ಮೂಲಗಳಲ್ಲಿ ಮೀನು ಉತ್ಪಾದನೆಗೆ ಉತ್ತೇಜನೆ ಮಾಡುವುದು.
  • ಮೀನು ಬಲೆ ಮತ್ತು ಹರಿಗೋಲನ್ನು ಉಚಿತವಾಗಿ ನೀಡುವುದು.
  • ಮತ್ಸ್ಯವಾಹಿನಿ ಯೋಜನೆಯಡಿ ಸಹಾಯಧನ ರೂಪದಲ್ಲಿ ಮೀನು ಮಾರಾಟ ಸಲಕರಣೆ ವಿತರಣೆ
  • ಕೆರೆಗಳಲ್ಲಿ ಬಿತ್ತನೆ ಮಾಡುವ ಮೀನುಮರಿಗಳಿಗೆ ಸಹಾಯಧನ
  • ನಿರ್ವಸತಿ ಮೀನುಗಾರರಿಗೆ ಮತ್ಸ್ಯ ಆಶ್ರಯ ಯೋಜನೆಯ ಅಡಿಯಲ್ಲಿ ವಸತಿ ಹೊಂದಲು ಧನ ಸಹಾಯ ಕಲ್ಪಸುವುದು
  • ಜಲಾಶಯ ಮತ್ತು ನದಿ ಮೀನುಗಾರರಿಗೆ ಜೀವ ರಕ್ಷಕ ಸಾಧನಗಳ ವಿತರಣೆ
  • ಸ್ವಂತ ಜಮೀನಿನಲ್ಲಿ ದೊಡ್ಡ ಪ್ರಮಾಣದ ಕೃಷಿ ಹೊಂಡಗಳನ್ನು ನಿರ್ಮಿಸಿ ಸುಧಾರಿತ ಮೀನುಗಾರಿಕೆ ಮಾಡಲು ಸಹಾಯಧನ ಕಲ್ಪಿಸುವುದು
  • ರಾಷ್ಟ್ರೀ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ನೆರವಿಂದ ಜಲಾಶಯಗಳ ಮೀನುಗಾರಿಕೆ ಅಭಿವೃದ್ಧಿ ಹಾಗೂ ತರಬೇತಿ, ವಿಸ್ತರಣೆ ಮತ್ತು ಸಂಶೋಧನೆ ನಡೆಸುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08352-255734
ಮೀನುಗಾರಿಕೆ ಸಹಾಯಕ ನಿರ್ದೇಶಕ ವಿಜಯಪುರ: 9480822974
ಮೀನುಗಾರಿಕೆ ಸಹಾಯಕ ನಿರ್ದೇಶಕ ಮುದ್ದೇಬಿಹಾಳ: 9480822975

ಅಭಿಪ್ರಾಯಗಳು

  • ಈ ಮೀನುಗಳನ್ನು ದೇಶ ವಿದೇಶಗಳಿಂದ ತರಲಾಗಿದೆ. ಸಾರ್ವಜನಿಕರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರೀಯೆ ಸಿಕ್ಕಿದೆ. ಮೀನುಗಳನ್ನು ಶಿವಮೊಗ್ಗ, ಮೈಸುರು, ಬೆಂಗಳೂರು, ಮಂಗಳೂರು, ಅಮೇರಿಕಾ, ಆಸ್ಟ್ರೇಲಿಯಾ, ಹೀಗೆ ಅನೇಕ ದೇಶಗಳಿಂದ ಲಕ್ಷಾಂತರ ಹಣ ಬಂಡವಾಳ ಹಾಕಿ ಇವುಗಳನ್ನು ಇಲ್ಲಿವರೆಗೆ ಆಮ್ಲಜನಕದ ಸಹಾಯದಿಂದ ತಂದಿದ್ದೇವೆ.

| ದಯಾನಂದ ಬಜೆಂತ್ರಿ
ಕ್ಷೇತ್ರಪಾಲಕ ಮೀನುಗಾರಿಗೆ ಇಲಾಖೆ ವಿಜಯಪುರ

  • ನಾನು ಈ ರೀತಿಯ ಮೀನುಗಳನ್ನು ವಿದೇಶದಲ್ಲಿ ನೋಡಿದ್ದೆ. ಅಂಟ್ಲಾಟಿಕಾದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜಲವಿಹಾರಕ್ಕೆ ಹೋದಾಗ ಕೈಯಲ್ಲಿ ಹಿಡಿದ್ದು ಸಂಭ್ರಮ ಪಟ್ಟಿದೆ. ಈಗ ಅದೆ ಅನುಭವ ಇಲ್ಲಿ ಮತ್ತೊಂದು ಬಾರಿ ಅನುಭವಿಸಿದೆ. ಮೀನುಗಾರಿಕೆ ಇಲಾಖೆಯವರು ಇಂತಹ ದೊಡ್ಡ ಪ್ರಮಾಣದಲ್ಲಿ ಮತ್ಸ್ಯ ಮೇಳ ಏರ್ಪಡಿಸಿರುವುದರಿಂದ ಎಲ್ಲರ ಜ್ಞಾನವು ಹೆಚ್ಚಿಸಿಕೊಳ್ಳಬಹುದು, ಹಾಗೂ ಮೀನುಗಳಲ್ಲಿ ಎಷ್ಟು ವಿಧಗಳು ಇದೆ ಎಂಬುದು ತಿಳಿದು ತಮ್ಮ ಮಕ್ಕಳಿಗೆ ತಿಳಿಸುವಲ್ಲಿ ಅನುಕೂಲವಾಗಿದೆ.

|ಶೋಭಾ ನಾಯಕ (ಸಾರ್ವಜನಿಕರು)

ಕಾಂಚನಾ ಬಸವರಾಜ ಪೂಜಾರಿ
3ನೇ ಸೇಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending