Connect with us

ಲೈಫ್ ಸ್ಟೈಲ್

“ಲಿಪ್ ಆರ್ಟ್ ” , ಒಂದು ಅದ್ಭುತ ಕಲೆ..!

Published

on

ಲಿಪ್ಸ್ಟಿಕ್! ಯಾರಿಗೆ ತಾನೇ ಇಷ್ಟವಿಲ್ಲ! ಪ್ರತಿ ಮಹಿಳೆಯರ ಪರ್ಸ್ ನಲ್ಲಿ ಪೆನ್ನು ಇರುತ್ತದೆಯೋ ಇಲ್ವೋ.. ಲಿಪ್ಸ್ಟಿಕ್ ಇದ್ದೇ ಇರುತ್ತದೆ. ಇವತ್ತಿನ ಫ್ಯಾಷನ್ ಪ್ರಪಂಚದಲ್ಲಿ ತುಟಿಗಳ  ಲಿಪ್ಸ್ಟಿಕ್ ಒಂದು ಬಣ್ಣದ ಮಾಯಾ ಲೋಕವನ್ನು ಸೃಷ್ಟಿಸಿದೆ. ಲಿಪ್ಸ್ಟಿಕ್ ಮೋಹ ಯುವತಿಯರು ಆವರಿಸಿದೆ. 

ಹಿಂದಿನ ಸಾಂಪ್ರದಾಯಿಕ ಕೆಂಪು, ಪಿಂಕ್, ಮರೂನ್ , ಷೇಡ್ ನ ಲಿಪ್ಸ್ಟಿಕ್ ಗಳನ್ನು ಪಕ್ಕಕ್ಕೆ ಇಟ್ಟು “ಬೋಲ್ಡ್ ಮತ್ತು ಬ್ಯೂಟಿಫುಲ್ ” ಎನಿಸುವ ನೀಲಿ, ಹಳದಿ, ಹಸಿರು, ಪರ್ಪಲ್ , ಬಿಳಿ, ಕಪ್ಪು, ಕೇಸರಿ, ಲಿಪ್ಸ್ಟಿಕ್ ಗಳು ಫ್ಯಾಷನ್ ಪ್ರಪಂಚಕ್ಕೆ ಲಗ್ಗೆ ಇಟ್ಟಿವೆ.

 ಈ ಲಿಪ್ಸ್ಟಿಕ್ ಮೋಹ ಬರೀ ಬಣ್ಣಕ್ಕೆ ಸೀಮಿತವಾಗಿರದೆ, “ಲಿಪ್ ಆರ್ಟ್ ” ಎಂಬ ಅಧ್ಬುತ ಕಲೆ ಗೆ ನಾಂದಿ ಹಾಡಿದೆ. ಒಂದೇ ಬಣ್ಣದ ಲಿಪ್ಸ್ಟಿಕ್ ಹಚ್ಚಿ ಕೊಳ್ಳುವುದು ಸಾಮಾನ್ಯ. ಆದರೆ ಹಲವಾರು ಬಣ್ಣ ಗಳನ್ನು ಬಳಸಿ ತುಟಿಗಳ ಮೇಲೆ ಚಿತ್ರ ಬಿಡಿಸುವ ಒಂದು ಕಲೆ! ಹೌದು! ಫ್ಯಾಷನ್ ಬದಲಾದಂತೆ, ತನ್ನೊಂದಿಗೆ ನೂತನ ಕಲೆ ಯನ್ನು ಹೊತ್ತು ತರುತ್ತದೆ. ಅದರ ಒಂದು ತುಣುಕು ಈ ” “ಲಿಪ್ಸ್ಟಿಕ್ ಆರ್ಟ್ “.
ಲಿಪ್ಸ್ಟಿಕ್ ಆರ್ಟ್!
ಪುಟ್ಟ ತುಟಿಗಳ ಮೇಲೆ ವಿವಿಧ ಬಣ್ಣದ ಲಿಪ್ಸ್ಟಿಕ್ ಬಳಸಿ, ಪ್ರಾಣಿ, ಪಕ್ಷಿ, ಮನುಷ್ಯ, ಕಾರ್ಟೂನ್, ಗಿಡ-ಮರ, ಹೂ..ನಗರ, ಹೀಗೆ ವಿಭಿನ್ನ ಸನ್ನಿವೇಶ.. ವಸ್ತು ಗಳನ್ನು ನಾಜೂಕಾಗಿ ರಚಿಸುವ ಒಂದು ಅಧ್ಬುತ ಕಲೆ. 
1. ಅನಿಮಲ್ ಇನ್ಸ್ಪೈರ್ಡ್ ಲಿಪ್ಸ್ಟಿಕ್ ಆರ್ಟ್ 
ಸೌಂದರ್ಯ ಅನ್ನೋದು ಪ್ರತಿ ಜೀವಿಯಲ್ಲೂ ಅಡಕವಾಗಿರುತ್ತದೆ. ಅದಕ್ಕೆ ಕನ್ನಡಿ ಹಿಡಿದಂತಿದೆ ಈ “ಅನಿಮಲ್ ಇನ್ಸ್ಪೈರ್ಡ್ ಲಿಪ್ ಆರ್ಟ್ “!
ಝಿಬ್ರಾ, ಚಿರತೆ, ಹುಲಿ, ನವಿಲು, ಮೀನು, ಚಿಟ್ಟೆ .. ಹೀಗೆ ಪ್ರಾಣಿ-ಪಕ್ಷಿಗಳನ್ನು ಹೋಲುವಂತಹ ವಿನ್ಯಾಸ ಗಳನ್ನು ಲಿಪ್ಸ್ಟಿಕ್ ಬಣ್ಣ ಗಳನ್ನು ಬಳಸಿ ತುಟಿಗಳ ಮೇಲೆ ಚಿತ್ರ ಬಿಡಿಸುವ ಒಂದು ಕಲೆ ಈ ಅದ್ಭುತವಾದ “ಲಿಪ್ಸ್ಟಿಕ್ ಆರ್ಟ್ “!
2. ಕಾರ್ಟೂನ್ ಲಿಪ್ಸ್ಟಿಕ್ ಆರ್ಟ್ !
ಕಾರ್ಟೂನ್ ಮಕ್ಕಳಿಗೆಮಾತ್ರ ಅಲ್ಲ, ಎಲ್ಲರಿಗೂ ಮುದ ಕೊಡುವ ಚಿತ್ರ.. ಇಂತಹ ಜನಪ್ರಿಯ  ಕಾರ್ಟೂನ್ ಪಾತ್ರ ಗಳನ್ನು ತುಟಿಗಳ ಮೇಲೆ ಬಿಡಿಸುವ ಕಲೆ “ಕಾರ್ಟೂನ್ ಲಿಪ್ಸ್ಟಿಕ್ ಆರ್ಟ್ “.
3. ಫ್ಲೋರಲ್ ಲಿಪ್ಸ್ಟಿಕ್ ಆರ್ಟ್ !
ಬಣ್ಣ ಬಣ್ಣದ ಹೂ ಗಳನ್ನು ತುಟಿಗಳ ಮೇಲೆ ಕಲಾತ್ಮಕ ವಾಗಿ ಬಿಡಿಸಲಾಗುತ್ತದೆ.  ಇತ್ತೀಚೆಗೆ 2017ರ ನ್ಯೂಯಾರ್ಕ್ ಫ್ಯಾಷನ್ ಷೋ ನಲ್ಲಿ ಈ “ಫ್ಲೋರಲ್ ಲಿಪ್ ಆರ್ಟ್ ” ಫ್ಯಾಷನ್ ಪ್ರಪಂಚದಲ್ಲಿ ಕ್ರಯಾಶೀಲತೆಯ ಒಂದು ದೊಡ್ಡ ಅಲೆಯನ್ನು ಎಬ್ಬಿಸಿದೆ.
4.  ಮೆಸೇಜ್ ಲಿಪ್ಸ್ಟಿಕ್ ಆರ್ಟ್ 
ಲಿಪ್ ಆರ್ಟ್ ಕೇವಲ ಒಂದುಟ್ರೆಂಡ್ ಅಲ್ಲ. ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ದಲ್ಲಿ ಈ ಲಿಪ್ಸ್ಟಿಕ್ ಆರ್ಟ್ ದೊಡ್ಡ ಸದ್ದು ಮಾಡುತ್ತಿದೆ. ಹೌದು! ಪರಿಸರ ಸ್ನೇಹಿ ಚಿತ್ರ ಗಳನ್ನು ತುಟಿಗಳ ಮೇಲೆ ರಚಿಸಿ, ಅದರ ಮೂಲಕ ಜನರಿಗೆ ಒಂದು ಉತ್ತಮ ಸಂದೇಶ ನೀಡುವ ಪ್ರಯತ್ನ ದಲ್ಲಿ ಈ ಲಿಪ್ಸ್ಟಿಕ್ ಆರ್ಟ್ ಯಶಸ್ವಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ಕಲೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಲ್ಲಿದೆ. 
ಲಿಪ್ ಆರ್ಟ್ ಮಾಡುವುದು ಹೇಗೆ?
ಈ ಕಲೆಯನ್ನುಮಾಡಲು ನೀವು ಪರಿಣಿತರಾಗಿರಬೇಕೆಂದೇನಿಲ್ಲ. ಸ್ವಲ್ಪ ಮಟ್ಟಿಗೆ ಕ್ರಿಯಾಶೀಲತೆ ಹಾಗೂ ಭ್ರಷ್ ಬಳಕೆ ತಿಳಿದಿದ್ದರೆ ಸಾಕು. ನೀವೂ ಸಹ ಮನೆಯಲ್ಲೇ ಈ ಕರೆಯನ್ನು ಪ್ರಯತ್ನಿಸಬಹುದು. ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬಣ್ಣದ ಲಿಪ್ಸ್ಟಿಕ್ ಬಳಸಿ ತುಟಿಗಳ ಮೇಲೆ ಚಿತ್ರ ಬಿಬಡಿಸುವ ಕಲೆಯನ್ನು ನೀವೂ ಒಮ್ಮೆ ಪ್ರಯತ್ನಿಸಿ. ದಿನ ನಿತ್ಯದ ಬಳಕೆಗೆ ಸೂಕ್ತವಲ್ಲ ದಿದ್ದರೂ, ಪಾರ್ಟಿ, ಫ್ಯಾಷನ್ ಪ್ರಪಂಚದಲ್ಲಿ, ಫೋಟೋಶೂಟ್ ಗಳಿಗೆ ಹೆಚ್ಚು ಸೂಕ್ತ ಎನಿಸುತ್ತದೆ. ಬಹಳ ವಿಭಿನ್ನ ವಾದ ಈ ಕಲೆ ಸದ್ಯ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ  ಹಿಟ್ ಟ್ರೆಂಡ್ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಚಿತ್ರ ವಿಚಿತ್ರ ಕ್ರೇಜೀ ಹೇರ್ ಡೇ ಸಂಭ್ರಮ..!

Published

on

ಭಾರತದ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ದಿನವನ್ನು ಆಚರಿಸುವ ಹಾಗೆ, ಪಾಶ್ಚಾತ್ಯ ದೇಶಗಳಲ್ಲಿ ಚಿನ್ನರ ವಿಚಿತ್ರ ವಿಶಿಷ್ಟ ಕೇಶವಿನ್ಯಾಸಕ್ಕೆಂದೇ ಒಂದು ದಿನ ನಿಗದಿ ಮಾಡಿ, ಕ್ರೇಜಿ ಹೇರ್ ಸ್ಟೈಲ್ ಗಳಲ್ಲಿ ಮಕ್ಕಳು ಮಿಂಚುತ್ತಾರೆ. ಇಲ್ಲಿ ಪೋಷಕರ ಕ್ರಿಯಾಶೀಲತೆಗೆ ಹೆಚ್ಚಿನ ಮಣ್ಣನೆ ನೀಡಲಾಗುವುದು. ದಿ ಬೆಸ್ಟ್ ಕ್ರೇಜಿ ಹೇರ್ ಸ್ಟೈಲ್ ಎಂಬ ಪಾರಿತೋಷಕ ಪ್ರಶಸ್ತಿ ಕೂಡ ನೀಡಲಾಗುತ್ತದೆ.

ಮಕ್ಕಳು ಈ ವಿಶಿಷ್ಟ ದಿನದ ಸಂಭ್ರಮದಲ್ಲಿ ಖುಷಿ ಯಿಂದ ಪಾಲ್ಗೊಂಡು, ತಮ್ಮ ಕ್ರಿಯಾತ್ಮಕತೆ ಮೆರೆಯುತ್ತಾರೆ.ಯುನಿಕಾರ್ನ್, ಪಂಕಿನ್, ಸ್ಪೈಡರ್, ಗೋ ಗ್ರೀನ್, ಬಲೂನ್, ಡ್ರಾಗನ್ , ಬರಗರ್, ಪೀಜಾ, ಶೈಲಿಯ ವಿಚಿತ್ರ ಹಾಗೂ ಫಂಕೀ ಹೇರ್ ಸ್ಟೈಲ್ ಸದ್ಯ ಕ್ರೇಜಿ ಹೇರ್ ಡೇ ಸ್ಪೆಶಲ್ ಆಗಿತ್ತು.

ಕೋಕಾ ಕೋಲಾ ಬಾಟಲ್ ಬಳಸಿ ಮಾಡಲಾದ ಕೇಶವಿನ್ಯಾಸ ಹೆಚ್ಚು ಗಮನ ಸೆಳೆಯಿತು. ಅಂತೆಯೇ, ಪೈನಾಪಲ್ ಹೇರ್ ಸ್ಟೈಲ್ ಕೂಡ ಮಕ್ಕಳ ಫೇವರಿಟ್ ಎನಿಸಿಕೊಂಡಿತು.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ವೈರಲ್ ಆಯ್ತು ಎಂಗೇಜ್ಮೆಂಟ್ ಪಿಯರ್ಸಿಂಗ್ ರಿಂಗ್ ಫ್ಯಾಷನ್..!

Published

on

ಪ್ರೇಮಾಂಕುರ ವಾದೊಡನೆಯೇ ಸುಂದರಿಯ ಕೈ ಬೆರಳಿಗೆ ಉಂಗುರ ತೊಡಿಸಿ, ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ. ಆದರೆ ಇಂದಿನ ಹೈಟೆಕ್ ಯುಗದಲ್ಲಿ , ಚಿನ್ನದ ಆಭರಣಗಳ ಮೋಹ ಕಳೆದುಕೊಳ್ಳುತ್ತಿರುವ ಯುವ ಜನಾಂಗ, ಟ್ಯಾಟೂ ಕ್ರೇಜ್ ಮೈ ಗಿಟ್ಟಿಸಿಕೊಂಡಿದೆ. ಎಂಗೇಜ್ಮೆಂಟ್ ರಿಂಗ್ ಜಾಗವನ್ನ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಆಕ್ರಮಿಸಿಕೊಂಡಿದೆ. ರಿಂಗ್ ಬದಲಾಯಿಸಿಕೊಳ್ಳುವ ಬದಲು, ಹುಡುಗ-ಹುಡುಗಿಯರಿಬ್ಬರೂ ರಿಂಗ್ ಟ್ಯಾಟೂ ಮೊರೆ ಹೋಗುತ್ತಿದ್ದಾರೆ.

ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರೇಮಿಗಳು ಫಿಂಗರ್ ಪಿಯರ್ಸಿಂಗ್ ಎಂಗೇಜ್ಮೆಂಟ್ ರಿಂಗ್ ಎಂಬ ಹೊಸಾ ಫ್ಯಾಷನ್ ಸೃಷ್ಟಿಸಿದ್ದಾರೆ. ವಜ್ರ,ಚಿನ್ನದ ರಿಂಗ್ ಬದಲು, ವಜ್ರದ ಸ್ಟಡ್ , ಚಿನ್ನ-ಬೆಳ್ಳಿಯ ಸ್ಟಡ್ ಗಳನ್ನು ಬೆರಳಿಗೆ ಶಾಶ್ವತವಾಗಿ ಚುಚ್ಚಲಾಗುತ್ತದೆ. ಫಿಂಗರ್ ರಿಂಗ್ ಪಿಯರ್ಸಿಂಗ್ ಸದ್ಯ ಟ್ರೆಂಡಿಂಗ್ ಫ್ಯಾಷನ್ ಸಾಲಿಗೆ ಸೇರಿದ್ದು ನೂತನ ಶೈಲಿಯ ಎಂಗೇಜ್ಮೆಂಟ್ ರಿಂಗ್ ( ಪಿಯರ್ಸಿಂಗ್) ಯುವಪೀಳಿಗೆ ಯಲ್ಲಿ ಸಾಕಷ್ಟು ಫ್ಯಾಷನ್ ಸಂಚಲನ ಮೂಡಿಸಿದೆ.

ಈ ರೀತಿಯ ಫಿಂಗರ್ ಪಿಯರ್ಸಿಂಗ್, ಶಾಶ್ವತ ವಾಗಿದ್ದು, ಇದರ ಗಾಯ ಕೂಡಾ ಶಾಶ್ವತ ವಾಗಿರುತ್ತದೆ. ಬಹಳ ಸೂಕ್ಷ್ಮ ವಾದ ಚರ್ಮ ವಾಗಿರುವ ಕೈ ಬೆರಳಿನ ಮೇಲೆ ಚುಚ್ಚಿಸುವುದು ಅಷ್ಟು ಸುಲಭವಲ್ಲ. ಅತಿಯಾದ ನೋವಿನಿಂದ ಕೂಡಿರುವ ಈ ಫಿಂಗರ್ ಪಿಯರ್ಸಿಂಗ್ ಯುವಪೀಳಿಗೆಯ ಫ್ಯಾಷನ್ ಕ್ರೇಜ್ ಗೆ ಸಾಕ್ಷಿ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಸೆಕ್ಸೀ ಸ್ಟೆಂಸಿಲ್ ‘ಐ’ ಮೇಕಪ್

Published

on

ಮುದ್ದು ಮುಖದ ಸೌಂದರ್ಯ ಹೆಚ್ಚಿಸಲು ಮೇಕಪ್ ಮೊರೆ ಹೋಗುವುದುಂಟು. ಮೇಕಪ್ ದುನಿಯಾದಲ್ಲಿ ದಿನ ದಿನಕ್ಕೂ ಹೊಸ ಟ್ರೆಂಡ್ ಸೃಷ್ಟಿ ಆಗುತ್ತದೆ. ಸದಾ ಹೊಸದನ್ನು ಬಯಸುವ ಸೌಂದರ್ಯ ಪ್ರಿಯರ ಸ್ಟೈಲ್ ನ್ನ ಮನಸ್ಸಿನಲ್ಲಿಟ್ಟುಕೊಂಡು ಹೊಚ್ಚ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತವೆ. ಹಬ್ಬ ಹರಿದಿನ ಮದುವೆ ಸಂದರ್ಭದಲ್ಲಿ ಮುಖದ ಅಂದ ಹೆಚ್ಚಿಸುವ ಐ- ಮೆಕಪ್ ಗೆ ಬೇಡಿಕೆ ಹೆಚ್ಚುತ್ತಿದೆ. ಅಂತಹುದ್ದೇ ಒಂದು ಸ್ಟೈಲಿಶ್ ಲುಕ್ ಫ್ಯಾಷನ್ ಅಂಗಳಕ್ಕೆ ಎಂಟ್ರಿ ನೀಡಿದೆ.

ಕನ್ಯಾಮಣಿಯರ ಕಣ್ ಕಮಲಗಳ ಮೇಲೆ ಮೂಡಿದೆ ಹಾರ್ಟ್ ಐ-ಮೇಕಪ್. ಸ್ಟೆಂಸಿಲ್ ಆರ್ಟ್ ಬಳಸಿ ಕಣ್ಣು ರೆಪ್ಪೆಯ ಮೇಲೆ ಸುಂದರವಾಗಿ ಹಾರ್ಟ್ ಆಕಾರ ರಚಿಸಲಾಗಿದ್ದು, ಈ ಕ್ಯೂಟ್ ಲವ್ ಟ್ರೆಂಡ್ ಸೋಷಿಯಲ್ ಮೀಡಿಯಾ ದಿಲ್ಲಿ ಸುದ್ದಿ ಮಾಡುತ್ತಿದೆ. ಗೋಲ್ಡನ್ ಏಜ್ ಲೈನರ್ ಗೆ ಕೆಂಪು ಬಣ್ಣದ ಐ- ಮೆಕಪ್ ಕಾಂಬಿನೇಷನ್ ಸಖತ್ ಹಾಟ್ ಎನಿಸಿದೆ. ಹಾರ್ಟ್ ಸ್ಟೆಂಸಿಲ್ ಬೆಳಸಿ ಮಾಡಲಾಗುವ ಈ ಐದು ಮೇಕಪ್ ಸದ್ಯ ಫ್ಯಾಷನ್ ಪ್ರಿಯರ ನಿದ್ದೆ ಕೆಡಿಸಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending