Connect with us

ಲೈಫ್ ಸ್ಟೈಲ್

ಮಹಿಳೆಯರಲ್ಲಿ ಹೃದಯಾಘಾತ..!

Published

on

ಧುನಿಕ ಸಮಾಜದಲ್ಲಿ ಮಹಿಳೆಯರು ಪುರುಷರಿಗಿಂತ ಹತ್ತು ವರ್ಷ (ವಯಸ್ಸಿನಲ್ಲಿ) ಹೆಚ್ಚು ಕಾಲ ಬದುಕುತ್ತಿದ್ದಾರೆ. ಆದರೆ ವಯಸ್ಸು ಮುಂದುವರಿದಂತೆಲ್ಲಾ ಹೃದಯಾಘಾತಗಳು ಸ್ತ್ರೀ ಪುರುಷರಿಬ್ಬರಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದಾದರೂ, ಮಹಿಳೆಯರಲ್ಲಿ ಪುರುಷರಿಗಿಂತ 10 ವರ್ಷಗಳ ವಯಸ್ಸಿನ ನಂತರ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವುವು. ಇದಕ್ಕೆ ಕಾರಣ ಮಹಿಳೆಯರಲ್ಲಿನ ಸ್ತ್ರೀ ಹಾರ್ಮೋನುಗಳು ಹೃದಯಾಘಾತಗಳು ಉಂಟಾಗದಂತೆ ಮಾಡುವವು. ಮಹಿಳೆಯರು ಮಧುಮೇಹ ರೋಗ ಮತ್ತು ಮುಟ್ಟು ನಿಲ್ಲುವಿಕೆಯಂತಹ ನೈಸರ್ಗಿಕ ಕಾರಣಗಳಿಂದಲೂ, ಈ ಪ್ರಕೃತಿ ದತ್ತವಾದ ರಕ್ಷಣೆಯನ್ನು ಕಳೆದುಲಲಕೊಳ್ಳುವರು.

ಮಹಿಳೆಯರಲ್ಲಿಯೂ ಉದರ ಭಾಗದಲ್ಲಿ ಕೊಬ್ಬಿನ ಶೇಕರಣೆಯು ಹೃದಯಾಘಾತಗಳಿಗೆ ಮುಖ್ಯ ಕಾರಣವಾಗುವುದು 18 ರಿಂದ 20 ವರ್ಷವಯಸ್ಸು ದಾಟಿದ ಮಹಿಳೆಯರಲ್ಲಿ ದೇಹದ ತೂಕವು 7 ರಿಂದ 11 ರಷ್ಟು ಕಿಲೋಗ್ರಾಂ ಹೆಚ್ಚಿದಲ್ಲಿ ಅವರ ಮಧ್ಯವಯಸ್ಸಿನಲ್ಲಿ ಹೃದಯಾಘಾತಗಳು ಸಂಭವಿಸುವುದು ಅಂಜಿಕೆ ಸ್ವಭಾವದ ಖಿನ್ನ ಮಾನಸಿಕ ರೋಗದ ಮಹಿಳೆಯರಲ್ಲಿ ಮತ್ತು ಸಾಮಾಜಿಕ ಬೆಂಬಲ ದೊರಕದಿರುವ ಮಹಿಳೆಯರಲ್ಲಿ ಹೃದಯಾಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು ಎಂದು ಇನ್ನೊಂದು ಅಧ್ಯಯನದಿಂದ ತಿಳಿದಿಬಂದದೆ.

45 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ರಕ್ತದೊತ್ತಡವು ಪುರುಷರಿಗಿಂತ ಹೆಚ್ಚು ತ್ವರಿತವಾಗಿ ಮೇಲಕ್ಕೇರುವುದು. ಅಧಿಕ ರಕ್ತದೊತ್ತಡವು ಪುರುಷರಲ್ಲಿ ಹೃದಯಾಘಾತಗಳನ್ನು 3 ಪಾಲು ಹೆಚ್ಚಿಸುವುದಾದರೆ ಮಹಿಳೆಯರಲ್ಲಿ 4 ಪಾಲು ಹೆಚ್ಚಿಸುವುದು, ಮಧುಮೇಹ ರೋಗವು ಪುರುಷರಲ್ಲಿ ಹೃದಯಾಘಾತಗಳನ್ನು 2 ರಿಂದ 3 ರಷ್ಟು ಹೆಚ್ಚಿಸುವುದಾದರೆ ಮಹಿಳೆಯರಲ್ಲಿ 3 ರಿಂದ 7ರಷ್ಟು ಹೃದಯಾಘಾತಗಳು ಮರುಕಳಿಸುವ ಸಂಭವಗಳೂ ಹೆಚ್ಚಾಗಿರುವುದು. 45 ವರ್ಷಗಳಿಗೂ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ರಕ್ತದ ಕೊಲೆಸ್ಟ್ರಾಲ್ ಕೊಬ್ಬಿನ ಮಟ್ಟವು ಅದೇ ವಯಸ್ಸಿನ ಪುರುಷರಿಗಿಂತ ಶೇಕಡ 10 ಮಿ.ಗ್ರಾಂ.ನಷ್ಟು ಕಡಿಮೆಯಾಗಿಯೂ, 65 ವರ್ಷ ವಯಸ್ಸಿನ ನಂತರ ಶೇಕಡ 10 ಮಿ.ಗ್ರಾಂ.ನಷ್ಟು ಹೆಚ್ಚಾಗಿಯೂ ಇರುವುದಾಗಿ ಕಂಡುಬಂದಿದೆ.

ರಕ್ತದಲ್ಲಿ ಹೆಚ್ಚಿನ ಮಟ್ಟದ ಎಲ್ ಡಿಎಲ್ ಕೊಲೆಸ್ಟ್ರಾಲ್ ಹೃದಯಾಘಾತಕ್ಕೊಂದು ಮುಖ್ಯ ಕಾರಣ. ಮಹಿಳೆಯರಲ್ಲಿ 40 ವರ್ಷ ವಯಸ್ಸಿನ ನಂತರ ಪ್ರತಿ ವರ್ಷವೊಂದರಲ್ಲಿ ಎಲ್ ಡಿಎಲ್ ಕೊಲೆಸ್ಟರಾಲ್ ಶೇಕಡ 2 ಮಿ.ಗ್ರಾಂ. ನಂತೆ 60 ವರ್ಷ ವಯಸ್ಸಿನವರೆಗೂ ಮೇಲೇರುವುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಮುನ್ನ ಎಚ್ ಡಿಎಲ್ ಕೊಲೆಸ್ಟ್ರಾಲ್ (ಉತ್ತಮ ಕೊಲೆಸ್ಟ್ರಾಲ್) ಮಟ್ಟವು ಪುರುಷರಿಗಿಂತ 10ಮಿ.ಗ್ರಾಂ. ಹೆಚ್ಚಾಗಿರುವುದು. ರಕ್ತದ ಎಚ್ ಡಿಎಲ್ ಮಟ್ಟವು ಒಂದು ಜನಾಂಗದಿಂದ ಇನ್ನೊಂದು ಜನಾಂಗದಲ್ಲಿ ಬಹಳಷ್ಟು ಭಿನ್ನವಾಗಿರುವುದು. ಭಾರತದೇಶದ ಬುಡಕಟ್ಟಿನ ಮಹಿಳೆಯರಲ್ಲಿ ಎಚ್ ಡಿಎಲ್ ಮಟ್ಟವು ಚೀನಾ ಮತ್ತು ಜಪಾನ್ ದೇಶದ ಜನರಿಗಿಂತ ಕಡಿಮೆ ಮಟ್ಟದಲ್ಲಿರುವುದು.

ಭಾರತೀಯ ಮಹಿಳೆಯರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಹೃದಯಾಘಾತಗಳಿಗೆ ಇದೂ ಒಂದು ಕಾರಣವೆಂದು ಹೇಳಲಾಗಿದೆ. ರಕ್ತದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತಗಳಿಗೆ ಕಾರಣವಾಗುವುದಾದರೂ ಕೊಲೆಸ್ಟ್ರಾಲ್ ಮತ್ತು ಎಚ್ ಡಿಎಲ್ ಅನುಪಾತದ ಸೂಚ್ಯಂಕವು ಹೆಚ್ಚು ಅರ್ಥಗರ್ಭಿತವಾದುದು. ಈ ಸೂಚ್ಯಂಕ ಸಂಖ್ಯೆಗೆ ಅನುಗುಣವಾಗಿ (ಹೆಚ್ಚಿದಂತೆ) ಹೃದಯಾಘಾತಗಳು ಮೇಲೇರುವುವು. ಭಾರತ ದೇಶದ ಮಹಿಳೆಯರಲ್ಲಿ ರಕ್ತದಲ್ಲಿ ಎಚ್ ಡಿಎಲ್ ಮಟ್ಟವು ಕಡಿಮೆಯಾಗಿರುವುದರಿಂದ ಈ ಅನುಪಾತದ ಸೂಚ್ಯಂಕವು ಹೆಚ್ಚಿರುವುದು. ಸಾಮಾನ್ಯವಾಗಿರಬೇಕಾದ ಕೊಲೆಸ್ಟ್ರಾಲ್ ಎಚ್ ಡಿಎಲ್ ಅನುಪಾತದ ಸೂಚ್ಯಂಕ 4. ಈ ಸಂಖ್ಯೆಗೂ ಕಡಿಮೆಯಿರುವುದು ಉತ್ತಮ.

ಮಹಿಳೆಯರಲ್ಲಿ ಹೃದಯಾಘಾತಗಳಿಗೆ ದೇಹದಲ್ಲಿನ ಲೈಪೊಪ್ರೋಟೀನ್-ಎ ಒಂದು ಮುಖ್ಯ ಕಾರಣವಾಗಿರುವುದು. ಸ್ತ್ರೀ ಹಾರ್ಮೋನ್ ಗಳು ದೇಹದಲ್ಲಿನ ಲೈಪೊಪ್ರೋಟೀನ್-ಎ ಮಟ್ಟವನ್ನು ತಗ್ಗಿಸುವುವು. ಮುಟ್ಟು ನಿಂತ ನಂತರ ದೇಹದಲ್ಲಿ ಲೈಪೊಪ್ರೋಟೀನ್-ಎ ಶೇಕಡ 10 ರಷ್ಟು ಹೆಚ್ಚುವುದು. ದೇಹದಲ್ಲಿ ಮೇಲಕ್ಕೇರಿದ ಹೋಮೊಸಿಸ್ಟೀನ್ ಹೃದಯಾಘಾತಗಳಿಗೆ ಕಾರಣವಾಗುವುದು. ಇದರ ಜೊತೆಗೆ ಲೈಪೊಪ್ರೋಟೀನ್-ಎ ಅಂಶವೂ ಜಾಸ್ತಿಯಾಗಿದ್ದಲ್ಲಿ ಹೃದಯಾಘಾತಗಳು ಅನೇಕ ಪುಟ್ಟು ಹೆಚ್ಚುವುವು.
ಮಹಿಳೆಯರಲ್ಲಿ ಹೃದಯಬೇನೆ ಮತ್ತು ಹೃದಯಾಘಾತಗಳಿಗೆ ಅಧಿಕ ರಕ್ತದೊತ್ತಡ, ಮಧುಮೇಹ ರೋಗ, ರಕ್ತದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್, ಕುಗ್ಗಿದ ಎಚ್ ಡಿಎಲ್ ಮಟ್ಟಗಳು ಮತ್ತು ಲೈಪೊಪ್ರೋಟೀನ್-ಎ ಕಾರಣವಾಗಿರುವುದಾದರೂ, ಭಾರತ ದೇಶದ ಮಹಿಳೆಯರಲ್ಲಿ ಪಾಶ್ಚಿಮಾತ್ಯ ದೇಶದ ಮಹಿಳೆಯರಿಗಿಂತ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಹೆಚ್ಚದ ಕೊಲೆಸ್ಟ್ರಾಲ್ ಕೊಬ್ಬು ಅವರಲ್ಲಿ ಧೂಮಪಾನ ಚಟ ಇಲ್ಲದಿದ್ದರೂ, ಮಧುಮೇಹ ರೋಗ, ಬೊಜ್ಜುದೇಹ,ರಕ್ತದಲ್ಲಿ ಹೆಚ್ಚಿದ ಟ್ರೈಗ್ಲಿಸರೈಡ್ ಮಟ್ಟ ಮತ್ತು ತಗ್ಗಿದ ಎಚ್ ಡಿಎಲ್ ಮಟ್ಟ ಭಾರತ ದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುವು. ಹೀಗಾಗಿ ಭಾರತೀಯರಾಗಿರುವುದೇ (ಅನುವಂಶೀಯತೆ) ಹೃದಯಾಘಾತಗಳಿಗೆ ಒಂದು ಮುಖ್ಯ ಕಾರಣ ಎಂದು ಹೇಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಸುದ್ದಿ ಪತ್ರಿಕಗಳೇ ಸುದ್ದಿಯಾಗುತ್ತಿವೆ..! ಕಾರಣ ?

Published

on

ಪ್ರತಿ ದಿನ ಬೆಳಿಗ್ಗೆ ಎದ್ದೊಡನೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ದೇಶದ ಆಗುಹೋಗುಗಳ ಬಗ್ಗೆ ತಿಳಿಯಲು ನ್ಯೂಸ್ ಪೇಪರ್ ಓದುವ ಹವ್ಯಾಸ ನಮ್ಮಲ್ಲಿ ಹಲವರಿಗಿದೆ. ವಿಶೇಷ ಅಂದರೆ, ಸುದ್ದಿ ನೀಡುವ ಸುದ್ದಿ ಪತ್ರಿಕೆಗಳೇ ಸುದ್ದಿ ಆಗುತ್ತಿದೆ! ಇದೇನಪ್ಪಾ! ಎಂದು ಹುಬ್ಬೇರಿಸಬೇಡಿ, ನಾನು ಹೇಳುತ್ತಿರುವುದು , ಫ್ಯಾಷನ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ನ್ಯೂಸ್ ಪ್ರಿಂಟ್ ಫ್ಯಾಷನ್ ಕುರಿತು.

ಗಾಬರಿ ಆಗಬೇಡಿ, ಇದು ಪರಿಸರ ಸ್ನೇಹಿ ಪೇಪರ್ ಉಡುಪುಗಳಲ್ಲ. ಅಪ್ಪಟ ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ಗಳು. ರೆಯಾನ್, ನೈಲಾನ್, ವಿನಿಲ್ , ಸಿಂಥೆಟಿಕ್, ಹೀಗೆ ಹಲವಾರು ಫ್ಯಾಬ್ರಿಕ್ ಗಳಲ್ಲಿ ನ್ಯೂಸ್ ಪ್ರಿಂಟ್ ಫ್ಯಾಷನ್ ಯುವಪೀಳಿಗೆಯ ಫೇವರಿಟ್ ಫಂಕೀ ಲುಕ್ ಎನಿಸಿಕೊಂಡಿದೆ.

ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಯಲು , ಸದಾ ಬ್ಯಾಗ್ ನಲ್ಲಿರುತ್ತಿದ್ದ , ನ್ಯೂಸ್ ಪೇಪರ್, ಇಂದು ನ್ಯೂಸ್ ಪ್ರಿಂಟ್ ಫ್ಯಾಷನ್ ಹೆಸರಲ್ಲಿ ಯೂವಪೀಳಿಗೆಯ ಉಡುಪನ್ನಾವರಿಸಿದೆ. ಟಾಪ್, ಟ್ಯೂನಿಕ್, ಫ್ರಾಕ್, ಸಿಂಗಲ್ ಸ್ಟ್ರಾಪ್ ಡ್ರೆಸ್, ಲಾಂಗ್ ಗೌನ್, ಶೈಲಿಯ ನ್ಯೂಸ್ ಪ್ರಿಂಟ್ ಫ್ಯಾಷನ್ ಕಾಲೇಜು ಕ್ಯಾಂಪಸ್ ಗಳಲ್ಲಿ ಸುದ್ದಿ ಮಾಡುತ್ತಿದೆ.

ಈ ನ್ಯೂಸ್ ಪ್ರಿಂಟ್ ಖ್ಯಾತಿ ಕೇವಲ ಪಾಶ್ಚಾತ್ಯ ಉಡುಪುಗಳಿಗೆ ಮಾತ್ರ ಸೀಮಿತವಾಗಿರದೆ, ಭಾರತೀಯ ಸೊಗಡಿನ ಸೀರೆಗೂ ಲಗ್ಗೆ ಇಟ್ಟಿದೆ. ಹಲವಾರು ಫ್ಯಾಷನ್ ವಿನ್ಯಾಸಕರು ಈ ವಿಶಿಷ್ಟ ಟ್ರೆಂಡ್ ಸೃಷ್ಟಿಸುವಲ್ಲಿ ಯಶಸ್ವೀ ಆಗಿದ್ದಾರೆ. ಸುದ್ದಿ ಸಮಾಚಾರ ಸೀರೆಯ ಮೇಲೆ ಸುಂದರವಾಗಿ ಮುದ್ರಿಸಲಾಗಿದ್ದು, ಮಹಿಳಾಮಣಿಯರ ಕಿಟ್ಟಿ ಪಾರ್ಟಿ, ಗಳಲ್ಲಿ ಈ ಟ್ರೆಂಡ್ ಸೆಟ್ಟರ್ ಸೀರೆ ವೈರಲ್ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕಾರ್ನ್ ಉಪ್ಪಿಟ್ಟು : ರೆಸ್ಟೋರೆಂಟ್ ಸ್ಟೈಲ್

Published

on

 

ಚಾತುರ್ಮಾಸ ವ್ರತ ಅಡಿಗೆ
ವ್ರತದ ಅಡಿಗೆ – 1

ನಮಸ್ಕಾರ ರಿ ಎಲ್ಲರಿಗೂ, ಇದು ಪರಮ ಸಾತ್ವಿಕ್ ತಿಂಡಿ, ಚಾತುರ್ಮಾಸ ಅಡಿಗೆ ಹೇಳಿಕೊಡಿ ಅಂತ ಭಾಳ ಜನ ಕೆಳಿದಕ್ಕ ಹಾಕಾಕತಿನಿ,ಶಾಕ ವ್ರತ ಮಾಡೋರಿಗೆ ಬಹಳ ಅನುಕೂಲ ಇದು, ಯಾವುದೇ ಖಾರ ಹುಳಿ ಮಸಾಲೆ ತರಕಾರಿ ನಿಷೇದ ಇರೋ ವ್ರತಕ್ಕೆ ಹಿಂಗೆ ಮಾಡ್ಕೋ ಬಹುದು, ಬ್ಯಾರೆ ಅವರು ನಿಮಗ ತಿಳಿದ ತರಕಾರಿ ಹಾಕಿ ಮಾಡ್ರಿ ಅಡ್ಡಿ ಇಲ್ಲ

ಬರ್ರಿ ವ್ರತದ ಕಾರ್ನ್ ಉಪ್ಪಿಟ್ಟು ಹೆಂಗ ಅಂತ ನೊಡೋಣ.

ಮೊದಲು ಅಮೇರಿಕನ್ ಕಾರ್ನ್/ಮೆಕ್ಕೆ ಜೋಳ ತೊಳೆದು ಕುಕ್ಕರ್ ಅಲ್ಲಿ ನೀರು ಹಾಕಿ ಚಂದ್ ಬೇಯಿಸಿ ಇಡಿರಿ.

ತಣ್ಣಗ ಆದ ಮ್ಯಾಲ ಜೋಳ ಬಿಡಿಸಿ ಇಡಿರಿ, ಅದರ ಕಟ್ಟು(ಸ್ಟಾಕ್) ತೆಗೆದು ಇದ ರಿ ಸಾರು,ಮಾಡ್ಕೊಳಿಕ್ಕೆ ಬರ್ತದ

ಪಾತ್ರೆ ಬಿಸಿ ಮಾಡಿ ಒಂದು ಕಪ್ ಶುದ್ದ ಬೊಂಬಾಯಿ ರವ 1 ಸ್ಪೂನ್ ಜೀರಿಗೆ, 2ಸ್ಪೂನ್ ಎಣ್ಣೆ ಹಾಕಿ ಚಂದ್ ಹೂರಿರಿ (ಐತಲಗ ಜೀರಿಗೆ ಯಾಕ ಹಾಕೋದು ಗೊತ್ತಾತು ಅಲ್ಲ, ಹೌದ್ರಿ ರವ ಜೊತೆ ಜೀರಿಗೆ ಹುರಿದ್ರ ಮಸ್ತ್ ವಾಸನಿ ಕೊಡ್ತದ ಉಪ್ಪಿಟ್ಟು ಗ)ಘಮ ಬಂದಾಗ ತೆಗೆದು ಬಿಡ್ರಿ

ಸಣ್ಣ ಗುಂಡು ಕಲ್ಲಿನಾಗ ಚೂರು ಒಣಗಿದ ಮಾವಿನ ಕಾಯಿ ತೊಗತಿ (ಸಿಪ್ಪೆ) ಇಲ್ಲ ಅಂದ್ರ ಬಿಡ್ರಿ ಅಮ್ಚೂರ್ ಪೌಡರ್ ಹಾಕಿ, 1/4 ಸ್ಪೂನ್ ಜೀರಿಗೆ, 1/4 ಸ್ಪೂನ್ ಕರಿ ಮೆಣಸು ಹಾಕಿ ಚಂದ್ ಕುಟ್ಟಿ ಇದ ರಿ,

ಪಾತ್ರೆ ಬಿಸಿ ಮಾಡಿ ಚಂದ್ ಎಣ್ಣಿ ಹಾಕಿ ಉದ್ದಿನಬೇಳೆ, ಕಡಲೆಬೇಳೆ(ಸಾಸಿವೆ ನಿಷೇದ ವ್ರತಕ್ಕ) ಹಾಕಿ ಕೆಂಪಗೆ ಹುರಿದು ಕರಿಬೇವು ಹಾಕಿ ಸಿಡಿಸಿ, ಕುಟ್ಟಿದ ಮಸಾಲೆ ಹಾಕಿ ಹುರಿದು 2 ಕಪ್ ನೀರು, ಕುದಿಸಿದ ಮೆಕ್ಕೆ ಜೋಳ/ಕಾರ್ನ್ ರುಚಿಗೆ ಉಪ್ಪು ಹಾಕಿ ಕುದಿಯಲು ಬಿಡಿ ರಿ

ಚಂದ್ ಕುದಿ ಮುಂದ ಹುರಿದ ರವ ಹಾಕಿ ಚಂದ ಗಂಟು ಇಲ್ಲದಾಂಗ ಕಲಸಿ, ಈಗ ಇದಕ್ಕ ಅರ್ಧ ಲೋಟ ಹಾಲು ಹಾಕಿ ಇನ್ನೊಮ್ಮೆ ಚಂದ್ ಕಲಸ್ರಿ (ಹಾಲು ಹಾಕಿದ್ರಿಂದ ಒಳ್ಳೆ ಬಣ್ಣ ಸುವಾಸನೆ, ಮೃದು ಬರುತ್ತಾ ಅದಕ್ಕ ಅಂದಿದ್ದು ರಿ ಪ restaurant style anta) 1 spoon tuppa ಸುತ್ತು ಲೂ ಚಂದ್ ಹಾಕಿ, ತಟ್ಟಿ ಮುಚ್ಚಿ ಬೆಯಲ್ ಬಿಡ್ ರಿ. ನಂತ್ರ ತಟ್ಟಿ ತೆಗೆದು ಚಂದ್ ಕಲಸಿ ಸರ್ವ್ ಮಾಡ್ರಿ,ಬಿಸಿ ಬಿಸಿ ಕಾರ್ನ್ ಉಪ್ಪಿಟ್ಟು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಹುಬ್ಬೇರಿಸುವಂತೆ ಮಾಡಿದೆ, ಸುಂದರಿಯ ಬೇಬಿ ಬಂಪ್..!

Published

on

ರಡನೇ ಬಾರಿಗೆ ತಾಯಿ ಆಗುತ್ತಿರುವ ಬಾಲಿವುಡ್ ಬೆಡಗಿ ಸಮೀರಾ ರೆಡ್ಡಿ, ತಮ್ಮ ತಾಯ್ತನದ ಸೊಬಗನ್ನು ವ್ಯಕ್ತಪಡಿಸಿದ ಪರಿಚರ್ಚೆಗೆ ಕಾರಣವಾಗಿದೆ. ಈ ತುಂಬು ಗರ್ಭಿಣಯ ಅಂಡರ್ ವಾಟರ್ ಫೋಟೋ ಶೂಟ್!

https://www.instagram.com/p/BzfEeQ7nGyt/?utm_source=ig_web_button_share_sheet

ತಾಯ್ತನದ ಅತ್ಯಮೂಲ್ಯ ಕ್ಷಣಗಳನ್ನು ಮೆಲುಕು ಹಾಕಲು, ಬೇಬಿ ಬಂಪ್ ಪೋಟೋ ಶೂಟ್ ಮಾಡಿಸಲಾಗುತ್ತದೆ. ತಾಯ್ತನದ ಮೆಟ್ಟಿಲೇರಿ ನಿಂತಿರುವ ಹೆಣ್ಣಿಗೆ ಸೀಮಂತ ಶಾಸ್ತ್ರ ಮಾಡಿ ಹಾರೈಸುವುದು ಪ್ರತೀತಿ. ಆದರೆ ಇಂದಿನ ಹೈಟೆಕ್ ಯುಗದಲ್ಲಿ, “ಬೇಬಿ ಮೂನ್”, ಬೇಬಿ ಬಂಪ್ ಪೋಟೋ ಶೂಟ್, ವಿಡಿಯೋ ಆಲ್ಬಂಗಳು ಹೆಚ್ಚು ಜನಪ್ರಿಯ ಗೊಳ್ಳುತ್ತಿದೆ. ಸಿನಿ ತಾರೆಯರು, ಸೆಲಿಬ್ರಿಟಿಗಳು, ಸೇರಿದಂತೆ ಹಲವಾರು ಗರ್ಭಿಣಿಯರು ಈ ಟ್ರೆಂಡ್ ಗೆ ಆಕರ್ಷಿತರಾಗುತ್ತಿದ್ದಾರೆ.

https://www.instagram.com/p/BzfBZX-HRYn/?utm_source=ig_web_button_share_sheet

ಸಮೀರಾ ರೆಡ್ಡಿಯ ಈ ಡೇರಿಂಗ್ ಪೋಟೋ ಶೂಟ್ ಗೆ ಹಲವಾರು ಫ್ಯಾಷನ್ ಮತ್ತು ಬಾಲಿವುಡ್ ಮಂದಿ ಭೇಷ್ ಎಂದಿದ್ದಾರೆ. ಇನ್ನು ಹಲವರು ಹುಬ್ಬೇರಿಸಿ ಆಶ್ಚರ್ಯಚಕಿತರಾಗಿದ್ದಾರೆ. ವೈಬ್ರಂಟ್  ನಿಯಾನ್ ಗ್ರೀನ್, ಪಿಂಕ್ ಬಣ್ಣದ ಬಿಕಿನಿ ಯಲ್ಲಿ ತಮ್ಮ ತಾಯ್ತನವನ್ನು ಆಸ್ವಾದಿಸುವ ಸುಂದರ ಪೋಟೋಗಳು ಸೋಷಿಯಲ್ ಮೀಡಿಯಾ ದಲ್ಲಿ ಕಿಚ್ಚು ಹಚ್ಚಿದೆ. ಸಾಕ್ಷಾತ್ ಮತ್ಸ್ಯಕನ್ಯೆ ಯಂತೆ ಕಾಣುವ ಸಮೀರಾ ರೆಡ್ಡಿ ಹಸಿರು ಮತ್ತು ಕೆಂಪು ಕಾಂಬಿನೇಷನ್ ಪೋಟೋ ಆಲ್ಬಂ ಎಲ್ಲೆಲ್ಲೂ ವೈರಲ್ ಆಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending