Connect with us

ಲೈಫ್ ಸ್ಟೈಲ್

‘ಗುಲ್ಕನ್’ ಮಹಿಮೆ ಅಪಾರ..!

Published

on

ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್. ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.ಇದರಲ್ಲಿ ವಿವಿಧ ಬಗ್ಗೆಯ ಗುಲ್ಕನ್ ಇದೇ.

ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು

 • ಕೆಲವರು ಇದನ್ನು ಬಾಯಿಯ ಅಲ್ಸರ್ ನಿವಾರಿಸಲು ಬಳಸುತ್ತಾರೆ.
 • ರಕ್ತ ಶುದ್ಧಿ ಮಾಡಿ, ಚರ್ಮದಲ್ಲಿ ಸುಕ್ಕು, ಮೊಡವೆ ಮತ್ತು ಕಪ್ಪು ಕಲೆಗಳು ಮೂಡದ ಹಾಗೆ ನೋಡಿಕೊಳ್ಳುತ್ತೆ.
 • ಆರಿಸಿದ ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸುತ್ತಾರೆ. ಗುಲ್ಕನ್ ತಯಾರಿಕೆಯಲ್ಲಿ ಶುಂಠಿಯನ್ನು ಬಳಸುತ್ತಾರೆ.
 • ಇಂತಹ ಗುಲ್ಕನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಜೊತೆಗೆ ದೇಹವನ್ನು ತಂಪಾಗಿಸುತ್ತದೆ.
 • ಇದೊಂದು ಒಳ್ಳೆ ಆಂಟಿಆಕ್ಸಿಡೆಂಟ್. ಹಾಗಾಗಿ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡೋಕೆ ಸಹಾಯ ಮಾಡುತ್ತದೆ.
 • ಗುಲ್ಕನ್ ಶೀತ ಪದಾರ್ಥ, ಆದುದರಿಂದ ಇದು ಕೈಕಾಲು ಉರಿ,ನಿಶ್ಯಕ್ತಿ, ಇತರೆ ನೋವನ್ನು ಕಮ್ಮಿ ಮಾಡುತ್ತೆ.
 • ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆನೋವನ್ನು ಶಮನ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ.
 • ಗುಲ್ಕನ್ ದೇಹದ ರಕ್ತವನ್ನು ಶುದ್ದೀಕರಿಸುತ್ತದೆ. ನಿಶಕ್ತಿಯನ್ನು ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
 • ಬೇಸಿಗೆ ಕಾಲದಲ್ಲಿ ಗುಲ್ಕನ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಉಷ್ಣಾಘಾತ ಮತ್ತು ಮೂಗಿನಲ್ಲಿ ರಕ್ತ ಬರುವುದನ್ನು ತಡೆಗಟ್ಟುತ್ತದೆ.
 • ಫೈಬರ್ ಅಂಶ ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ.
 • ನರಮಂಡಲಾನ ಒಳ್ಳೆಯ ಸ್ಥಿತೀಲಿಟ್ಟು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
 • ಮನೆಯಿಂದ ಹೊರಗೆ ಹೋಗುವ ಮುಂಚೆ 2 ಚಮಚ ಗುಲ್ಕನ್ ತಿಂದು ಹೊರಟರೆ ಸನ್ ಸ್ಟ್ರೋಕ್ ಆಗೋದನ್ನೂ ತಪ್ಪಿಸಬಹುದು.

ಒಟ್ಟಿನಲ್ಲಿ ದೇಹವನ್ನು ತಂಪಾಗಿಡುವ ಗುಲ್ಕನ್ ಹಲವು ರೀತಿಯಲ್ಲಿ ಆರೋಗ್ಯಕ್ಕೆ‌‌‌‌ ಉಪಯೋಗವಾಗಿದೆ.

ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಒಣಗಿದ ಗುಲಾಬಿಯ ಪಕಳೆಗಳು 500 ಗ್ರಾಂ ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ * 500 ಗ್ರಾಂ ಸಕ್ಕರೆ ಮತ್ತು 1/2 ಲೋಟ ನೀರು (100ml)

ತಯಾರಿಸುವ ವಿಧಾನ

 • ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವರೆಗೆ ಕುದಿಸಬೇಕು.
 • ನಂತರ ಈ ಸಕ್ಕರೆ ಪಾನಕವನ್ನು ತಣ್ಣಗಾಗಲು ಬಿಡಬೇಕು. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು. 
 • ಈ ಗುಲ್ಕನ್ ತುಂಬಾ ಗಟ್ಟಿಯಾಗುವುದನ್ನು ತಡೆಯಲು ಫ್ರಿಜ್‌ನಲ್ಲಿ ಇಡಬಾರದು. ಇದನ್ನು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.

ಪ್ರತಿದಿನ ಹಾಗೇ ತಿನ್ನಬಹುದು, ದೋಸೆ ,ಚಪಾತಿ,ರೋಟಿ, ಮುಖ್ಯವಾಗಿ ಬ್ರೆಡ್, ಬನ್ ಗಳಿಗೆ ಬೆಣ್ಣೆ ಗುಲ್ಕನ್ ಸೇರಿಸಿ ಜೊತೆ ತಿನ್ನಬಹುದು ಅಥವಾ ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.

ಸೌಮ್ಯ ಅಶೋಕ್
ಬೆಂಗಳೂರು

ಲೈಫ್ ಸ್ಟೈಲ್

ರೆಸಿಪಿ | ಸೌತೆಕಾಯಿ ರೊಟ್ಟಿ, ಬಲು‌ ರುಚಿ..!

Published

on

ಸೌತೆಕಾಯಿಯನ್ನು ನಾವು ಕೋಸಂಬರಿ ಮಾಡಿ ಇಲ್ಲವೇ ಹಾಗೆ ಸಲಾಡ್ ಮಾಡಿ ತಿನ್ನುತ್ತೇವೆ. ಸೌತೆಕಾಯಿಯ ಉಪಯೋಗಗಳು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಸೌತೆಕಾಯಿಯನ್ನು ಇನ್ನೂ ಹಲವು ಬಗ್ಗೆಯಾಗಿ ಉಪಯೋಗ ಮಾಡ ಬಹುದು. ಅದರಲ್ಲಿ ಸೌತೆಕಾಯಿ ರೊಟ್ಟಿ ಕೂಡ ಒಂದು. ಸೌತೆಕಾಯಿ ಬಳಸಿ ರೊಟ್ಟಿ ಮಾಡುತ್ತಾರ ಅನ್ನುತ್ತಾರೆ ಎಲ್ಲಾ. ಹೌದು ಅದು ರುಚುಯಾಗಿಯೂ ಕೂಡ ಇರುತ್ತದೆ. ಅರೋಗ್ಯವಾದ, ರುಚಿಕರವಾದ, ಸುಲಭವಾಗಿ ರೊಟ್ಟಿ ಹೇಗೆ ಮಾಡುವುದು ಮುಂದೆ ತಿಳಿಯೋಣ.

ಸೌತೆಕಾಯಿ ರೊಟ್ಟಿ ಮಾಡಲು ಬೇಕಾದ ಸಾಮಗ್ರಿಗಳು

 • ಅಕ್ಕಿ ಹಿಟ್ಟು-2 ಬಟಲು
 • ದೊಡ್ಡ ಈರುಳ್ಳಿ-2
 • ಹಸಿರು ಮೆಣಸಿನಕಾಯಿ
 • ಸೌತೆಕಾಯಿ-1
 • ನೆನೆಸಿದ ಕಡಲೆ ಬೆಳೆ ಸ್ವಲ್ಪ
 • ಜಿರಿಗೆ ಸ್ವಲ್ಪ
 • ರುಚಿಗೆ ಉಪ್ಪು

ಮಾಡುವ ವಿಧಾನ

ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಕೊಳ್ಳಬೇಕು. ಈರುಳ್ಳಿ ಹಾಗು ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು. ನೆನೆಸಿದ ಕಡಲೆ ಬೇಳೆ, ಜೀರಿಗೆ ಮತ್ತು ಉಪ್ಪು, ಎಲ್ಲವನ್ನೂ ಅಕ್ಕಿ ಹಿಟ್ಟಿನೊಂದಿಗೆ ಸೇರಿಸಿ ರೊಟ್ಟಿಯ ಹದಕ್ಕೆ ಕಲಸ ಬೇಕು. ನಂತರ ರೊಟ್ಟಿಯನ್ನು ಲಟ್ಟಿಸಿ ಕಾದ ಹಂಚಿನ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಇದನ್ನು ಬಿಸಿಯಾಗಿ ಕಾಯಿ ಚಟ್ನಿ ಜೊತೆ ಸವಿಯಲು ಚಂದ.

Continue Reading

ಲೈಫ್ ಸ್ಟೈಲ್

ರೆಸಿಪಿ | ಪಾಲಕ್ ರೈಸ್ ಹೀಗೆ ಮಾಡ್ಕೊಳಿ, ತಿನ್ಕೊಳಿ

Published

on

ಪಾಲಕ್ ಸೊಪ್ಪು ಎಲ್ಲರ ಆರೋಗ್ಯಕ್ಕೂ ಬಹಳ ಮುಖ್ಯ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ಪಾಲಕ್ ಸೊಪ್ಪನ್ನ ಬಳಸಿ ವಿವಿಧ ಬಗೆಯ ಅಡುಗೆಗಳನ್ನ ಮಾಡುತ್ತೇವೆ . ಇದರಲ್ಲಿ ಹೆಚ್ಚಿನ ಕಬ್ಬಿನಾಂಶ ಮತ್ತು ಪ್ರೊಟೀನ್ ಗಳಿದ್ದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾಗಾದರೆ ಬನ್ನಿ ಪಾಲಕ್ ಸೊಪ್ಪನ್ನ ಬಳಸಿ ಪಾಲಕ್ ರೈಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

 • ಅನ್ನ – 2 ಕಪ್
 • ಪಾಲಕ್ ಸೊಪ್ಪು – ಒಂದು ದೊಡ್ಡ ಕಪ್
 • ಈರುಳ್ಳಿ – 1
 • ಹಸಿ ಮೆಣಸಿನ ಕಾಯಿ – 3/೪
 • ಚಕ್ಕೆ – ಒಂದು ತುಂಡು
 • ಕರಿಮೆಣಸು -2/3
 • ಲವಂಗ – 2
 • ಸಾಸಿವೆ, ಜೀರಿಗೆ – ಒಂದೊಂದು ಚಮಚ
 • ಗೋಡಂಬಿ – ಅರ್ಧ ಕಪ್
 • ನಿಂಬೆ ಹಣ್ಣು – 1
 • ಉಪ್ಪು – ರುಚಿಗೆ ತಕಸ್ತು
 • ಎಣ್ಣೆ – ಸ್ವಲ್ಪ

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕೆ ಸಾಸಿವೆ, ಜೀರಿಗೆ, ಕತ್ತರಿಸಿನ ಮೆಣಸಿನ ಕಾಯಿ, ಈರುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿಕೊಂಡ ಪಾಲಕ್ ಸೊಪ್ಪನ್ನು ಹಾಕಿ ಹುರಿಯಬೇಕು. ಅದಕ್ಕೆ ಅರ್ಧ ಕಪ್ ನಿರಿ ಸೇರಿಸಿ ಕುದಿಯಲು ಬಿಡಿ. ಇನ್ನೊಂದೆಡೆ ಮಿಕ್ಸಿ ಜಾರ್ ಗೆ ಕರಿಮೆಣಸು, ಲವಂಗ ಚಕ್ಕೆ ಗೋಡಂಬಿಯನ್ನ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ.

ನಂತರ ಪಾಲಕ್ ಸೊಪ್ಪಿನ ಮಿಶ್ರಣ ಹಾಗು ರುಬ್ಬಿದ ಮಿಶ್ರಣವನ್ನ ಒಟ್ಟಿಗೆ ಸೇರಿಸಿ ಸ್ವಲ್ಪ ಉಪ್ಪನ್ನ ಹಾಕಿ ಒಂದೆರಡು ನಿಮಿಷದ ನಂತರ ವಾಲೆಯನ್ನು ಆರಿಸಿ. ತಯಾರಿರುವ ಅನ್ನಕ್ಕೆ ಈ ಮಿಶ್ರಣವನ್ನ ಕಲಸಿ ಅದಕ್ಕೆ ನಿಂಬೆ ಹುಲಿಯನ್ನು ಹಿಂಡಿಕೊಂಡರೆ ಪಾಲಕ್ ರೈಸ್ ಸವಿಯಲು ಸಿದ್ದ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ರೆಸಿಪಿ | ಮನೇಲೇ ಮಾಡ್ಕೊಳಿ‌ ‘ರಸಂ ಪೌಡರ್’

Published

on

ನೀವು ಮನೆಯಲ್ಲಿ ಸಿಂಪಲ್ಲಾಗಿ ‘ರಸಂ ಪೌಡರ್’ ಮಾಡಲು ಈ ಸಾಮಗ್ರಿಗಳು ಬೇಕು

 • 1/4 ಕೆಜಿ ದನಿಯಾ
 • 50 ಗ್ರಾಂ ಜಿರಿಗೆ
 • 50 ಗ್ರಾಂ ಮೆಣಸು
 • 50 ಗ್ರಾಂ ಮೆಂತ್ಯೆ ಕಾಳು
 • 50 ಗ್ರಾಂ ಸಾಸಿವೆ
 • ಒಂದು ಬಟ್ಟಲು ಕರಿಬೇವು ಸೊಪ್ಪು
  1/4 ಕೆಜಿ ಒಣ ಮೆಣಸಿನ ಕಾಯಿ (150_ ಗ್ರಾಂ ಬ್ಯಾಡಗಿ ಮೆಣಸಿನ ಕಾಯಿ, 100 ಗ್ರಾಂ ಗುಂಟೂರು ಮೆಣಸಿನ ಕಾಯಿ )

ಮಾಡುವ ವಿಧಾನ

ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಎಲ್ಲವನ್ನು ಬೇರೆ ಬೇರೆಯಾಗಿ ಮಂದ ಉರಿಯಲ್ಲಿ ಹುರಿದು ಕೊಳ್ಳ ಬೇಕು.ಆರಿ ತಣ್ಣಗಾದ ಮೇಲೆ ಎಲ್ಲವನ್ನು ಸೇರಿಸಿ ಮನೆಯಲ್ಲಿಯೆ ಮಿಕ್ಸಿಮಾಡಬಹುದು. ಒಂದೆರಡು ತಿಂಗಳು ಬರುತ್ತೆ.ಪೌಡರ ಫ್ರೆಶ್ ಆಗಿದ್ದರೆ ರಸಂ ಚನ್ನಾಗಿರುತ್ತದೆ. ರಸಂ ಮಾಡುವಾಗ ರಸಂ ಪೌಡರಿಗೆ ಸ್ವಲ್ಪ ಕಾಯಿ ತುರಿ ಕೊತ್ತಂಬರಿ ಸೊಪ್ಪು ಮಿಕ್ಸಿಯಲ್ಲಿ ನುಣ್ಣಗೆ ಮಾಡಿ ಟಮೊಟೊ ರಸಂ,ಬೇಳೆ ರಸಂಗೆ ಹಾಕಿ ಇಂಗು ಜಿರಿಗೆ ಒಗ್ಗರಣೆ ಅಥವಾ ಬೆಳುಳ್ಳಿಯ ಒಗ್ಗರಣೆ ಕೊಡ ಬೇಕು.

Continue Reading
Advertisement

Trending