Connect with us

ಲೈಫ್ ಸ್ಟೈಲ್

‘ಮೆಂತ್ಯ’ ದ ಮಹಿಮೆ ಬಗ್ಗೆ ನೀವೂ ತಿಳಿಯಿರಿ..!

Published

on

ನಾವು ಪ್ರತಿ ದಿನ ಮೆಂತ್ಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತೇವೆ ,ಏಕೆಂದರೆ ಅದರಿಂದ ನಮ್ಮ ದೇಹಕ್ಕೆ ತುಂಬಾನೆ ಉಪಯೋಗಗಳಿದೆ. ಮೆಂತ್ಯವನ್ನು ಸೊಪ್ಪಿನ ರೂಪದಲ್ಲಿ ಅಥವಾ ಮೆಂತ್ಯ ಕಾಳಿನ ರೂಪದಲ್ಲಿ ಬಳಸುತ್ತೇವೆ. ಇದು ನಮ್ಮ ದೇಹಕ್ಕೆ ತಂಪು ಕೊಡುತ್ತದೆ. ಇನ್ನೂ ಕೆಲವು ಉಪಯೋಗಗಳು ಮುಂದಿದೆ.

  1. ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಮತ್ತು ರಕ್ತಭೇದಿ ಕಡಿಮೆಯಾಗುತ್ತದೆ.
  2. ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
  3. ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಕ್ಷದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
  4. ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಈ ಅವಧಿಯಲ್ಲಿ ಪ್ರತಿದಿನ ಬಿಸಿನೀರನ ಬದಲು ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಬೇಕು.
  5. ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸಲು ಇದು ಸುಲಭ ಮಾರ್ಗ.
  6. ಮೆಂತ್ಯದ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ ಮೈಕೈನೋವು, ಬೆನ್ನು ನೋವು, ಸೊಂಟ ನೋವು ಗುಣವಾಗುತ್ತದೆ.
  7. ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಅಂಗೈ ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು ಅಂಗೈ ಉರಿ ಉಪಶಮನವಾಗುವುದು.
  8. ನೆನೆಸಿದ ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ಅರೆದು ಸ್ವಲ್ಪ ನಿಂಬೆ ರಸ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ತಲೆಯಲ್ಲಿ ಹೊಟ್ಟು ಏಳುವುದಿಲ್ಲ ಹಾಗೂ ಕೂದಲು ಬೆಳವಣಿಗೆಗೆ ಬಹು ಸಹಕಾರಿಯಾಗಿರುತ್ತದೆ.
  9. ಒಂದು ಕಪ್ಪು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ರಸ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ಶೀಘ್ರವೇ ನಿವಾರಣೆಯಾಗುತ್ತದೆ.
  10. ಮೆಂತ್ಯದ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿಂದರೆ ಸಂಧಿವಾತ ರೋಗಗಳ ನೋವು ಗುಣ ಕಾಣುವುದು.
  11. ಮೆಂತ್ಯದ ಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ, ಸಾಕಷ್ಟು ಉಪ್ಪು ಬೆರೆಸಿ ಮೆಣಸು ಮತ್ತು ಜೀರಿಗೆಯ ತುಪ್ಪದ ಒಗ್ಗರಣೆ ಹಾಕಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ.
  12. ಮೆಂತ್ಯದ ಸೊಪ್ಪನ್ನು ಹೆಚ್ಚಿ ಬೇಳೆಯೊಂದಿಗೆ ಬೇಯಿಸಿ ಹುಳಿ ಮಾಡಿಕೊಂಡು ಕ್ರಮವಾಗಿ ಸೇವಿಸುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಿಗಳು ದೂರವಾಗುವುದು.
  13. ಮೆಂತ್ಯದ ಪುಡಿಯನ್ನು ಮಿತವಾಗಿ ಬೆಳಿಗ್ಗೆ ಮಜ್ಜಿಗೆಯಲ್ಲಿ ಸೇವಿಸಿದರೆ ಮಧುಮೇಹ ರೋಗಕ್ಕೆ ಒಳ್ಳೆಯದು. ಅದು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

ಲೈಫ್ ಸ್ಟೈಲ್

ಪರಿಸರ ಪಾಠ

Published

on

ಸಾಂದರ್ಭಿಕ ಚಿತ್ರ

ಅಂದು ಮುಂಜಾನೆ ಬೇಗನೆ ಎದ್ದು , ಪರಿಸರ ಅಧ್ಯಯನ ಶಿಬಿರಕ್ಕೆ ಹೋಗಲು ತಯಾರಾದೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ನಮ್ಮನ್ನು ಬಂಡಿಪುರ ಅರಣ್ಯಕ್ಕೆ ಕರೆದೊಯ್ದಿದ್ದರು . ಈ ಭಾರಿ ಭದ್ರಾ ಅಭಯಾರಣ್ಯಕ್ಕೆ ಹೊರಟಿದ್ದೆವು. ಅಂದು ಮಂಜಿನ ಬೆಳಗ್ಗೆ ಸುಮಾರು ಒಂದು ತಾಸು ನಗರದ ಬೀದಿ ಬೀದಿಗಳಲ್ಲಿ ನನ್ನ ಸ್ನೇಹಿತರು ತಂಗಿದ್ದ ತಾಣವನ್ನೇ ಹುಡುಕಿದೆ. ಹಲವು ಕಟ್ಟಡಗಳ ನಡುವೆ ಅವರಿದ್ದ ಕಟ್ಟಡ ಮರೆಯಾಗಿತ್ತು.

ಹೇಗೋ ನಮ್ಮ ವಿಭಾಗದ ಮೇಷ್ಟ್ರಿಗೆ ಕರೆ ಮಾಡಿ ಶಿಬಿರಕ್ಕೆ ಹೋಗಲೆಂದು ಹೊರಟ್ಟಿದ್ದ ಬಸ್ ಬಳಿ ತಲುಪಿದೆ. ಸಮಯ ಐದಕ್ಕೆ ಸರಿಯಾಗಿ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ನಮ್ಮ ಬಂಡಿ ಸಾಗಿತು. ಇನ್ನು ಚಂದಿರ ಸರಿದಿರದ ಕಾರಣ ನಾವೆಲ್ಲರೂ ನಿದ್ದೆಗೆ ಜಾರಿದೆವು. ದಾರಿ ಹರಿದಂತೆ ಪಯಣದ ಹುಮ್ಮಸ್ಸಿಗಾಗಿ ಡಿ.ಜೆ. ಹಾಡಿಗೆ ಹೆಜ್ಜೆ ಹಾಕ ತೊಡಗಿದೆವು., ಸಮಯ-ಹಾದಿ ಕಳದದ್ದೆ ತಿಳಿಯಲಿಲ್ಲ….!ಸುಮಾರು ಒಂಬತ್ತು ಮೂವತಕ್ಕೆ ಸರಿಯಾಗಿ ಲಕ್ಕವಳ್ಳಿ ತಲುಪಿದೆವು .

ಅರಣ್ಯಕ್ಕೆ ಹೋದಾಕ್ಷಣ ನಮ್ಮೊಳಗೆ ಮೌನ ಆವರಿಸಿತು. ಪರಿಸರದ ಬಗ್ಗೆ , ಕುತೂಹಲ , ಏಕಾಗ್ರತೆ ಹೆಚ್ಚಾಯಿತು, ನಾವೆಲ್ಲರೂ ನಮ್ಮ ಜಂಗಮವಾಣಿಗಳನ್ನು ಬಂದ್ ಮಾಡಿ ಶಿಬಿರದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗಿಯಾದೆವು . ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಸರ್ವೆ ಸಾಮಾನ್ಯ ಅದೇ ನೈಜ್ಯ ಶಾಲೆಯಾದ ಪರಿಸರದೊಂದಿಗೆ ಕಲಿಯುವುದು ಸಾಕಷ್ಟಿದೆ ಎಂಬುದು ನನಗರಿವಾಯಿತು. ಅಲ್ಲಿನ ಸ್ಥಳೀಯ ಪರಿಸರ ತಜ್ಞರೊಬ್ಬರು ಶಿಬಿರವನ್ನು ಉದ್ಘಾಟಿಸಿ ಭದ್ರಾ ಅಭಯಾರಣ್ಯದಲ್ಲಿರುವ ಸಸ್ಯ ಸಂಕುಲದ ಬಗ್ಗೆ ಪರಿಚಯಿಸಿದರು. ವಿಧ ವಿಧ ಬಗೆಯ ಕೀಟ , ಪ್ರಾಣಿ , ಪಕ್ಷಿ , ಹೂಗಳ ಬಗ್ಗೆ ಮಾಹಿತಿ ನೀಡಿದರು. ಬರೀ ಪಠ್ಯಕ್ರಮಕ್ಕೆ ಸೀಮಿತವಾಗಿ ಕಲಿತುತ್ತಿರುವ ನಮಗೆ ಪಠ್ಯೇತ್ತರ ಪಾಠಗಳನ್ನು ಆಲಿಸುವುದು ಬಹಳ ಹಿತಕರವೆನ್ನಿಸಿತು.

ನಂತರ ಅರಣ್ಯದ ವೈಶಿಷ್ಟ್ಯತೆಯ ಕುರಿತು ವಿಡಿಯೋ ತೋರಿಸುತ್ತಾ ಸಿಗ್ನೇಚರ್ ಎಂಬ ಜೇಡರ ಹುಳಿವಿನ ಬಗ್ಗೆ ವಿವರಿಸಿದರು. ಈ ಜೇಡ ಬಲೆಯಲ್ಲಿ ಒಂದು ರೀತಿಯ ಬಿಳಿ ಗೆರೆ ಹೆಣೆದಿರುತ್ತದೆ ಎಂದು ತಿಳಿಸಿದರು. ಅದಾದ ಮೇಲೆ ಹೀಗೆ ಸಫಾರಿ ಹೋಗಲು ಹೊರಡುವ ಮುನ್ನ ಅತ್ತಿತ್ತ ಸುತ್ತಾಡುತ್ತಾ ಇದ್ದಾಗ ಅಲ್ಲಿಯೇ ಲೈಟು ಕಂಬಕ್ಕೆ ಬಲೆಯೊಂದು ಹೆಣೆದಿತ್ತು . ಅದು ತಜ್ಞರು ವಿವರಿಸಿದ ಸಿಗ್ನೇಚರ್ ಜೇಡ ಒಂದು ರೀತಿಯ ಅಪರೂಪದ ಕೀಟವಾಗಿತ್ತು.ಅದರ ವೈಶಿಷ್ಟ್ಯತೆ ಹಾಗು ಕುಶಲತೆಯನ್ನು ಕಂಡು ಅಚ್ಚರಿಯಾಯಿತು.

ನಮ್ಮನ್ನು ಸಫಾರಿ ಕರೆದುಕೊಂಡು ಹೋದರು. ಸಫಾರಿಯಲ್ಲಿ ಮೊದಮೊದಲು ಖಾಲಿ ಕಾಡು ಕಾಣಿಸಿತಾದರೂ ಮುಂದೆ ದಾರಿ ಸವೆದಂತೆ ಲಂಗೂರ್, ಸಾಂಬಾರ್, ಕಾಡು ಎಮ್ಮೆ- ಕೋಣ , ಗುಳ್ಳೇ ನರಿ , ವಿಶಿಷ್ಟ ಕೆಂಪು ಬಾಲದ ಅಳಿಲು , ಉಲಿವ ನವಿಲು , ಉಡ, ಕಾಡು ಹಂದಿ ಎಲ್ಲವೂ ನೋಡಲು ಸಿಕ್ಕವು. ಆ ರಾತ್ರಿ ಸಫಾರಿಯಿಂದ ವಾಪ್ಪಸ್ಸಾದಾಗ ಮೇಷ್ಟ್ರು ಹೇಳಿದ ಮಾತಿನಂತೆ ಇಡೀ ರಾತ್ರಿ ಅನುಭವ ಲೇಖನ ವನ್ನು ಬರೆಯುತ್ತಿದ್ದವು.ಅಲ್ಲಿನ ಚಳಿಗೆ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ. ಬೆಳಗಾದಾಗ ಭದ್ರಾ ನದಿಯ ಹಿನ್ನೋಟ ನಮ್ಮೆಲ್ಲರ ಕಣ್ ಸೆಳೆಯಿತು . ಬಂದ್ ಮಾಡಿದ್ದ ಮೊಬೈಲ್ ಗಳ ತೆಗೆದುಕೊಂಡು ಸುಂದರ ಪಟಗಳ ತೆಗೆಯುವಲ್ಲಿ-ತೆಗೆದುಕೊಳ್ಲುವಲ್ಲಿ ನಿರತರಾದೆವು . ಮುಂದೆ ನಮ್ಮ ಪಯಣ ಹತ್ತಿರದ ಸಕ್ಕರೆಬೈಲು ಆನೆ ಶಿಬಿರಕ್ಕೆ ಭೇಟಿ ನೀಡಿದೆವು . ಅಲ್ಲಿ ಆನೆಗಳಿಗೆ ತಾಲೀಮು ಮಾಡುತ್ತಿದ್ದದ್ದನ್ನು ಹತ್ತಿರದಿಂದ ಗಮನಿಸಿದೆವು.

ಮಾವುತರ ಆದೇಶದಂತೆ ಆನೆಗಳು ಶಿಸ್ತು ಭದ್ದವಾಗಿ ವರ್ತಿಸುತ್ತಿದ್ದವು, ಮಕ್ಕಳಂತೆ ಚೆಂಡಾಟ ಆಡುತ್ತಾ, ಪ್ರವಾಸಿಗರಿಗೆ ಸೊಂಡಿಲಲ್ಲಿ ನಮಿಸುತ್ತಾ ಲವಲವಿಕೆಯಿಂದ ಇದ್ದವು. ಮನುಷ್ಯನ ದುರಾಸೆಯಿಂದಾಗಿಯೇ ಎಷ್ಟೋ ಕಾಡು ನಾಶವಾಗುತ್ತದೆ. ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡಲು ಕೆಲವೊಮ್ಮೆ ಮಾನವನೇ ಕಾರಣಕರ್ತರಾಗಿದ್ದಾನೆ. ಇಂತಹ ವಿಚಾರಗಳನ್ನು ನಾವೂ ಪರಿಸರದೊಳಗೆ ಪರಿಸರ ಜೀವಿಯಾದಾಗ ಮಾತ್ರ ಅರಿವಾಗುತ್ತದೆ ಹೊರತು ಕಾಂಕ್ರೀಟ್ ಕಾಡೊಳಗೆ ಬಾವಿ ಕಪ್ಪೆಗಳಂತೆ ಇದ್ದರೆ ಪ್ರಕೃತಿಯ ಬಗ್ಗೆ ಕಿಂಚಿತ್ತು ತಿಳಿಯಲಾಗುವುದಿಲ್ಲ.

ಸಕ್ಕರೆಬೈಲಿನಲ್ಲಿ ಸಂವೇದನೀಯ ವಿಚಾರಗಳು ಮಸ್ತಕದಲ್ಲಿ ಮೂಡಿದವು. ಮಧ್ಯಾಹ್ನ ನಮ್ಮ ನಾಡಿನ ಹೆಮ್ಮೆಯ ಕವಿ ಮನೆಗೆ (ಕುಪ್ಪಳಿಯ ಕವಿಶೈಲಕ್ಕೆ) ಭೇಟಿ ನೀಡಿದೆವು . ಮನೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಪುರಾತನ ಬದುಕಿನ ಶೈಲಿಯ ಬಗ್ಗೆ ಕುತೂಹಲ ಮೂಡಿತು. ಹೇಮಾವತಿ ಅಮ್ಮನವರ ಅಡುಗೆ ಮನೆಯ ಸಾಮಗ್ರಿಗಳನ್ನು ಕಂಡು ಅವರು ಪಡುತ್ತಿದ್ದ ಶ್ರಮ ಕಾಯಕ ಕಣ್ಮುಂದೆ ಗೋಚರಿಸಿತು. ಅಂದಿನ ಬದುಕಿನ ಶೈಲಿ , ಸಂಸ್ಕøತಿಯನ್ನು ಗಮನಿಸಿ ಕನಿಷ್ಟ ಪದ್ಧತಿ, ಬದುಕಿನ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳಬೇಕಿನಿಸಿತು. ನಂತರ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ಕವಿಮನೆ ನನ್ನ ಕನಸು ಎಂದು ಬರೆದೆ. ತೇಜಸ್ವಿಯವರ ಸಮಾಧಿಯ ಬಳಿ ಹೋಗುವ ಮುನ್ನ ಕವಿ ಶೈಲದ ಗುಡ್ಡದಲ್ಲಿ ಕುಳಿತು ಕುವೆಂಪುರವರ ಒಂದೆರಡು ಭಾವಗೀತೆಗಳನ್ನು ಧ್ಯಾನಸ್ತಳಾಗಿ ಹಾಡಿದೆ. ಮನಸ್ಸಿಗೆ ನೆಮ್ಮದಿಯಾಯಿತು, ಮನ ನಿರಾಳವಾಯಿತು.

ತೇಜಸ್ವಿಯವರು ಗತಿಸಿದ ದಿನ ನಾನು ಚಿಕ್ಕವಳಿದ್ದೆ ನನ್ನಪ್ಪ(ಎನ್ಕೆ),ಅಪ್ಪನ ಸ್ನೇಹಿತರಾದ ಎಸ್. ಗಂಗಾಧರಯ್ಯ ಮತ್ತು ಇನ್ನಿತ್ತರ ಜೊತೆ ಅವರ ಕೊನೆ ಭಾರಿ ನೋಡಲು ಹೋಗಿದ್ದೆವು . ಅದು ಮುಸುಕು ಮುಸುಕು ನೆನಪು ಅದಾದ ಬಳಿಕ ಅವರ ಸಮಾಧಿಯ ನೋಡುವ ಅವಕಾಶ ಒದಗಿರಲಿಲ್ಲ…..ಜಾತಿ – ಧರ್ಮವ ಮೀರಿದ ಮನುಜರಾಗಿದ್ದ ತೇಜಸ್ವಿಯವರು ಪ್ರಕೃತಿಯ ಒಡಲಿನಲ್ಲಿ ದೀರ್ಘಕಾಲ ವಿಶ್ರಮಿಸುತ್ತಿರುವುದ ಕಂಡ ಒಂದು ರೀತಿಯ ಸಾತ್ವಿಕ ಭಾವ ಮೂಡಿತು. ಬದುಕಿದರೆ
ಕುವೆಂಪು,ತೇಜಸ್ವಿಯವರಂತೆ ಆದರ್ಶ ಬದುಕನ್ನು ಜೀವಿಸಬೇಕೆಂದು ನಿರ್ಧರಿಸಿದೆ.ಮಾನವ ನಿರ್ಮಿತ ಕಟ್ಟುಪಾಡುಗಳನ್ನು ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಇರುವ ಕಾಲ ಒಳಿತು ಮಾಡುವತ್ತ ಸಾಗೋಣ ಎನಿಸಿತು.

-ಸಂಘಮಿತ್ರೆ ಹೆಚ್.ಎಸ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

‘ಬಾರ್ಲಿ ಬಿಸಿಬೇಳೆ ಬಾತ್’ ಮಾಡೋದು ಹೇಗೆ ಗೊತ್ತಾ..?

Published

on

ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನುಆಹಾರವಾಗಿಬಳಸುತ್ತಾರೆ.ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು. ಅಂದಹಾಗೆ ಈ ಬಾರ್ಲಿಯಿಂದ ರುಚಿ ರುಚಿಯಾದ ಬಿಸಿ ಬೇಳೆಬಾತ್ ಕೂಡ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು

  1. ಬಾರ್ಲಿ 100ಗ್ರಾಂ
  2. ತೊಗರಿ ಬೇಳೆ ಅರ್ಧ ಕಪ್
  3. ತರಕಾರಿಗಳು ಎಲ್ಲವನ್ನು ಒಂದಿಂಚು ಹೆಚ್ಚಿಕೊಳ್ಳಿ.
  4. ಕ್ಯಾರೆಟ್ 2
  5. ಹುರುಳಿ ಕಾಳಿ 7-8
  6. ಬಟಾಣಿ ಸ್ವಲ್ಪ
  7. ಆಲೂಗಡ್ಡೆ 1
  8. ಕ್ಯಾಪ್ಸಿಕಂ 1/2
  9. ಕರಿಬೇವು ಸ್ವಲ್ಪ

ಹುರಿದು ಕೊಳ್ಳಲು

  1. ಕಡಲೆಬೇಳೆ ಒಂದು ಟೀ ಚಮಚ
  2. ಉದ್ದಿನ ಬೇಳೆ ಒಂದು ಟೀ ಚಮಚ
  3. ಜೀರಿಗೆ ಅರ್ಧ ಟೀ ಚಮಚ
  4. ಸಾಸಿವೆ ಅರ್ಧ ಟೀ ಚಮಚ
  5. ಧನಿಯಾ ಎರಡು ಟೀ ಚಮಚ
  6. ಗಸಗಸೆ ಒಂದು ಟೀ ಚಮಚ
  7. ಮೆಂತ್ಯ ಕಾಲು ಟೀ ಚಮಚ.
  8. ಒಣಮೆಣಸಿನ ಕಾಯಿ ನಾಲ್ಕು/ಖಾರ ಎಷ್ಟು
  9. ಬೇಕು ಅಷ್ಟು
  10. ಕರಿಬೇವು ಸ್ವಲ್ಪ
  11. ಲವಂಗ ಎರಡು
  12. ಕಾಳುಮೆಣಸು ಹತ್ತು
  13. ಚಕ್ಕೆ ಅರ್ಧ ಇಂಚು
  14. ತೆಂಗಿನ ತುರಿ ಅರ್ಧ ಕಪ್
  15. ಹುರಿಯಲು ಎಣ್ಣೆ ಒಂದು ಟೀ ಚಮಚ
  16. ಉಪ್ಪು ರುಚಿಗೆ ತಕ್ಕಷ್ಟು
  17. ಹುಣಸೆ ಹಣ್ಣು ಸ್ವಲ್ಪ
  18. ಬೆಲ್ಲ ಚಿಕ್ಕ ತುಂಡು

ಒಗ್ಗರಣೆಗೆ

  1. ತುಪ್ಪ 3-4ಚಮಚ
  2. ಸಾಸಿವೆ ಅರ್ಧ ಟೀ ಚಮಚ
  3. ಕರಿಬೇವು ಸ್ವಲ್ಪ
  4. ಗೋಡಂಬಿ ಸ್ವಲ್ಪ
  5. ಇಂಗು ಚಿಟಿಕೆ‌

ಮಾಡುವ ವಿಧಾನ

  1. ಮೊದಲು ಕುಕ್ಕರಿನ ಪಾತ್ರೆಯಲ್ಲಿ ಬೇಳೆ ತರಕಾರಿಯನ್ನು ಒಂದು ಪಾತ್ರೆಯಲ್ಲಿ ಮತ್ತು ಬಾರ್ಲಿಯನ್ನು ಒಂದು ಪಾತ್ರೆಯಲ್ಲಿ ಹಾಕಿ 2-3ಕಪ್ ನೀರು(ಅರ್ಧ ಲೀಟರ್ ನೀರು)ಹಾಕಿ, 5-6ವಿಷಲ್ ಬರುವರೆಗೆ ಬೇಯಿಸಿ.
  2. ನಂತರ ಮಸಾಲೆ ಪದಾರ್ಥಗಳನ್ನು ಹುರಿದು ಅರ್ಧ ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ.
  3. ಅದಕ್ಕೆ ಸಾಸಿವೆ, ಕರಿಬೇವು, ಇಂಗು ಮತ್ತು ಗೋಡಂಬಿಯನ್ನು ಹಾಕಿ ಒಗ್ಗರಣೆ ಮಾಡಿ ಕೊಳ್ಳಿ.
    ಇದಕ್ಕೆ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ.
  4. ನಂತರ ರುಬ್ಬಿಕೊಂಡ ಮಸಾಲೆ ಪದಾರ್ಥಗಳನ್ನು ಹಾಕಿ ಎಷ್ಟು ತಳ್ಳಗೆ ಬೇಕೋ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ.
  5. ಕುದಿಯುವಾಗ ಬೆಲ್ಲವನ್ನು ಸೇರಿಸಿ.ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಇಳಿಸಿ.‌ರುಚಿಯಾದ ಆರೋಗ್ಯಕರವಾದ ಬಾರ್ಲಿ ಬಿಸಿಬೇಳೆ ಬಾತ್ ತಯಾರಿಸಿ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ಹಲವು ಔಷದೀಯ ಗುಣವುಳ್ಳ ‘ಬಾರ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು..?

Published

on

ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನು ಆಹಾರವಾಗಿ ಬಳಸುತ್ತಾರೆ. ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು.

ಬಾರ್ಲಿಯ ಉಪಯೋಗ

  1. ಬಾರ್ಲಿಯಲ್ಲಿ ವಿಟಮಿನ್ ‘ಎ’ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
  2. ಬಾರ್ಲಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ.ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.
  3. ಇದರಲ್ಲಿ ನಾರಿನಂಶ ಜಾಸ್ತಿಯಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
  4. ಬಾರ್ಲಿಯಲ್ಲಿರುವ ನಾರಿನಂಶದಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆ ಮಾಡಿ, ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.
  5. ಮಧುಮೇಹ ಇದ್ದವರಿಗೆ ಬಾರ್ಲಿ ಉಪಯೋಗಿಸುವುದರಿಂದ ಲಾಭ ಪಡೆಯಬಹುದು.
  6. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.ಬಾರ್ಲಿಯು ರಕ್ತದೊತ್ತಡದೊಂದಿಗೆ ಕೊಲೆಸ್ಟ್ರಾಲ್ನ್ನು ತಡೆಹಿಡಿಯುವ ಗುಣವನ್ನು ಹೊಂದಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವಲ್ಲಿ ಸಹಕಾರಿಯಾಗಿದೆ.
  7. ಬಾರ್ಲಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ.ಇದರಿಂದ ರಕ್ತಹೀನತೆಯನ್ನು ನಿಯಂತ್ರಣ ಮಾಡಲು ಸಾಧ್ಯ.
  8. ಇದರಲ್ಲಿರುವ ಕ್ಯಾಲ್ಸಿಯಂ ಫಾಸ್ಪರಸ್ ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  9. ಇದರಲ್ಲಿರುವ ಮೆಗ್ನಿಷಿಯಂ ಜಿಂಕ್ ಎಂಬ ಖನಿಜಗಳು ಚರ್ಮಕ್ಕೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ.
  10. ಬಾರ್ಲಿಯಲ್ಲಿ ವಿಟಮಿನ್ ‘ಬಿ’ಕಾಂಪ್ಲೆಕ್ಸ್ ಜೊತೆಗೆ ವಿಟಮಿನ್ ‘ಸಿ’ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending