Connect with us

ಲೈಫ್ ಸ್ಟೈಲ್

ನನಗೊಬ್ಬ ಸಹೋದರ ಇರಬೇಕಿತ್ತು..!

Published

on

ನ್ನದೊಂದು ಬೇಸರದ ಕಥೆಯ ವ್ಯಥೆ!!
ಪ್ರತಿಯೊಂದು ಹೆಣ್ಣಿಗೆ ಮೊದಲ ಬಾಯ್‍ಪ್ರೇಂಡ್ ಅಂದರೆ ಅವಳ ಅಣ್ಣನೆ. ಪ್ರೀತಿಯಿಂದ ಮುದ್ದಿಸಲು, ತರಲೆ-ತುಂಟಾಟ, ಚೆಷ್ಟೆ ಮಾಡಲು, ಅಮ್ಮನೆದುರಿಗೆ ದೂರು ಹೇಳಿ ಬೈಯಿಸಲು, ರಸ್ತೆಯಲ್ಲಿ ಹೋಗುವಾಗ ವಯಸ್ಸಿನ ಹುಡುಗರು ರೆಗಿಸುತ್ತಾರೆ ಎಂದು ಹೇಳಿದಾಗ ರಕ್ಷಣೆಗೆ ಧಾವಿಸುವ ಮನಸ್ಸು, ಅತ್ತಾಗ ಕಣ್ಣಿರು ಒರೆಸಿ ತನ್ನ ಎದೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುವ ಮನಸ್ಸು, ಕಷ್ಟ ಕಾಲದಲ್ಲಿ ನಾನು ನಿನ್ನ ಜೊತೆಗೆ ಇದ್ದೇನೆ ಹೇದರದೆ ಮುನ್ನಡೆ, ಹೆಗಲಿಗೆ ಹೆಗಲು ನೀಡುತ್ತೇನೆ ಎಂದು ಹೇಳುವ ಮನಸ್ಸು, ಕೆಲವು ವಿಷಯಗಳನ್ನು ಅಪ್ಪಾ-ಅಮ್ಮ, ಹಾಗೂ ಗೆಳತಿಯರ ಎದುರು ಹೇಳಲು ಸಾಧ್ಯವಾಗದ ವಿಷಯಗಳನ್ನು ಹಂಚಿಕೊಳ್ಳಲು ಮುಕ್ತ ಮನಸ್ಸು ಬೇಕು ಅಂಥ ಸಹೋದರನ ಪ್ರೀತಿ ತಿಳಿಯದ ಪ್ರತಿಯೊಂದು ಹುಡುಗಿಯರು ಭಾವಿಸುತ್ತಾರೆ. ನನಗೂ ಕೂಡಾ ಅನಿಸುತ್ತಿತ್ತು. ಹಾಗೂ ಇಂದಿಗೂ ಅನಿಸುತ್ತದೆ.

ಬೇಕು ಅಂದಾಕ್ಷಣ ಸಿಗಲು ಈ ಸಂಭಂದ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಯಲ್ಲ. ಸಹೋದರರ ಪ್ರೀತಿ ಪಡೆಯಲು ಬ್ರಹ್ಮನಲ್ಲಿ ಕೇಳಿಕೊಂಡು ಬಂದಿರಬೇಕು. ಅಣ್ಣ ತಂಗಿಯರ ಭಾಂದವ್ಯ ಕೇವಲ ತೋರಿಕೆಗೆ ರೂಪದಲ್ಲಿ ಮಾತ್ರವಾಗಿರ ಬಾರದು. ಪ್ರತಿಯೊಬ್ಬ ತಂಗಿಯು ಬಯಸುವುದೊಂದೆ ಅಣ್ಣನ ಪ್ರೀತಿ ಬೇಕು. ಹಾಲುಂಡ ತವರಲ್ಲಿ ಸದಾಕಾಲ ಸಮೃದ್ಧಿ ತುಂಬಿರಲಿ ಎಂದು ಆ ಶಿವನಲ್ಲಿ ಪ್ರತಿದಿನ, ಪ್ರತಿ ಕ್ಷಣ ಕೇಳಿಕೊಳ್ಳುತ್ತಾಳೆ.

ಅಣ್ಣ ತಂಗಿ ಭಾಂದವ್ಯ ಚಿರಕಾಲ ಉಳಿಯಲಿ ಎಂದು ಎಂದು ಶ್ರಾವಣ ಮಾಸದಲ್ಲಿ ಬರುವ ನೂಲ ಹುಣ್ಣಿಮೆಯ ದಿನದಂದು ಸಾಂಕೇತಿಕವಾಗಿ ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟಿ, ಆರತಿ ಮಾಡುತ್ತಾರೆ. ನಂತರದಲ್ಲಿ ರಾಖಿ ಕಟ್ಟಿಸಿಕೊಂಡ ಖುಷಿಗೆ ಸಹೋದರಿಗೆ ಪ್ರೀತಿಯ ಉಡುಗೋರೆಯನ್ನು ಸಹೋದರರು ನೀಡುತ್ತಾರೆ.

ನನ್ನ ಸ್ನೇಹಿತರು ರಾಖಿ ಹಬ್ಬದಂದು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅವರಿಂದ ಉಡುಗೋರೆ ಪಡೆದುಕೊಂಡ ಸಂರ್ಭಮವನ್ನು ನನ್ನ ಹತ್ತಿರ ಹೇಳಿಕೊಂಡಾಗ ದುಃಖವಾಗುತ್ತಿತ್ತು. ಆದರೆ ನಾನು ಈ ದುಃಖವನ್ನು ಮರೆಯಲು ನನ್ನ ಅಪ್ಪ ಹಾಗೂ ದೊಟ್ಟಣ್ಣನಿಗೆ (ದೊಡ್ಡಪ್ಪನ ಮಗ) ರಾಖಿ ಕಟ್ಟಿ ಸಂರ್ಭಮಿಸುತ್ತಿದೆ. ಹಾಗೂ ಇಂದಿಗೂ ಸಂರ್ಭಮಿಸುತ್ತಿದ್ದೇನೆ.

ರಕ್ಷಾ ಬಂದನಕ್ಕೆ ಹಿಂದೂ ಗ್ರಂಥಗಳಲ್ಲಿನ ಆದ್ಯತೆ
ಮಹಾ ಸಂಪ್ರದಾಯದಲ್ಲಿ ಮುಖ್ಯವಾದುದು ಭವಿಷ್ಯ ಪುರಾಣದ ಉತ್ತರ ಪರ್ವತದ 137 ನೇ ಅಧ್ಯಾಯ , ಇದರಲ್ಲಿ ಭಗವಾನ್ ಕೃಷ್ಣನು ಯುಧಿಷ್ಠಿರನಿಗೆ ತನ್ನ ಬಲ ಮಣಿಕಟ್ಟಿನೊಂದಿಗೆ ರಕ್ಷಾ (ರಕ್ಷಣೆ) ಯನ್ನು ರಾಯಲ್ ಪಾದ್ರಿ (ರಾಜಪುರೋಹಿತ್) ಕಟ್ಟಿರುವ ಆಚರಣೆಯನ್ನು ವಿವರಿಸುತ್ತಾನೆ. ಪೂರ್ಣಿಮೆ (ಹುಣ್ಣಿಮೆಯವರೆಗೆ) ಶ್ರವಣ ಹಿಂದೂ ಚಂದ್ರಮಾನ ಕ್ಯಾಲೆಂಡರ್ ತಿಂಗಳ). ನಿರ್ಣಾಯಕ ಹಾದಿಯಲ್ಲಿ, ಶ್ರೀಕೃಷ್ಣ ಹೇಳುತ್ತಾರೆ,
“ಪಾರ್ಥ ಭಾನಂಗಳವು ಮೋಡಗಳಿಂದ ಅವೃತವಾದಾಗ ಮತ್ತು ಹೊಸ ಚೀಗುರಿನ, ಕೋಮಲವಾದ ಹುಲ್ಲಿನಿಂದ ಭೂಮಿಯು ಶೃಂಗಾರಗೊಂಡಾಗ, ಶ್ರಾವಣ ತಿಂಗಳಲ್ಲಿ ಬರುವ ಹುಣ್ಣಿಮೆಯ ದಿನದಂದು, ಸೂರ್ಯೋದಯದ ಸಮಯದಲ್ಲಿ, ನೆನಪಿನಲ್ಲಿರುವ ಸಮಾವೇಶದ ಪ್ರಕಾರ, ಒಬ್ಬ ಬ್ರಾಹ್ಮಣನು ಸಂಪೂರ್ಣವಾಗಿ ಶುದ್ಧ ನೀರಿನಿಂದ ಅಭ್ಯಂಜನ ಮಾಡಿ, ಅವನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ, ದೇವರಿಗೆ, ಪಿತೃ ಪೂರ್ವಜರಿಗೆ, ವೇದ, ಮಂತ್ರಗಳಿಂದ ಪ್ರಾರ್ಥಿನೆಯನ್ನು ಸಲ್ಲಿಸಬೇಕು. ಋಷಿ-ಮುನಿಗಳಿಗೆ ಮತ್ತು ದೇವತೆಗಳ ನಿರ್ದೇಶನದಂತೆ ನೆರವೇರಬೇಕಾದ ಕಾರ್ಯವನ್ನು ಧೈವಾದಿನವಾದವರನ್ನು ಗೌರವಿಸುವ ಶ್ರದ್ಧಾ ಸಮಾರಂಭವನ್ನು ಕೈಗೊಳ್ಳಿ ತೃಪ್ತಿಕರವಾದ ತೀರ್ಮಾನಕ್ಕೆ ತರುವುದು. ಶುದ್ರಾ ಎಂದು ಪ್ರಶಂಸಿಸಲಾಗಿದೆ.

ದತ್ತಿ ಅರ್ಪಣೆ ಮಾಡಬೇಕು, ಮತ್ತು ಮಂತ್ರಗಳೊಂದಿಗೆ ಸ್ನಾನ ಮಾಡಬೇಕು. ಆ ದಿನ, ಮಧ್ಯಾಹ್ನದ ಸಮಯಕ್ಕೆ ಹೊಸ ಹತ್ತಿ ಅಥವಾ ರೇಷ್ಮೆ ಬಟ್ಟೆಯಿಂದ ಸಣ್ಣ ಪಾರ್ಸಲ್ (ಬಂಡಲ್ ಅಥವಾ ಪ್ಯಾಕೆಟ್) ತಯಾರಿಸಿ ಅಕ್ಕಿ ಅಥವಾ ಬಾರ್ಲಿಯ ಧಾನ್ಯಗಳಿಂದ ಅಲಂಕರಿಸಿ, ಸಣ್ಣ ಸಾಸಿವೆ ಬೀಜಗಳು, ಮತ್ತು ಕೆಂಪು ಓಚರ್ ಪುಡಿ, ಮತ್ತು ಹೆಚ್ಚು ಅದ್ಭುತವಾಗಿಸಿ, ಸೂಕ್ತವಾದ ಭಕ್ಷ್ಯ ಅಥವಾ ರೆಸೆಪ್ಟಾಕಲ್‍ನಲ್ಲಿ ಇರಿಸಿ,ವಪುರೋಹಿತ್ ಈ ಪ್ಯಾಕೆಟ್‍ನ್ನು ರಾಜನ ಮಣಿಕಟ್ಟಿನಲ್ಲಿ ಕಟ್ಟಿ, ‘ನಾನು ಅಸುರರ ಮಹಾಬಲಿ ರಾಜನನ್ನು ಬಂಧಿಸಿದೆ, ಅದೇ ನಿಜವಾದ ಪದಗಳಿಂದ ನಾನು ನಿಮಗೆ ರಕ್ಷಾದಲ್ಲಿ (ರಕ್ಷಣೆ) ಬಂಧಿಸುತ್ತಿದ್ದೇನೆ.. ಯಾವಾಗಲೂ ನೀಮ್ಮ ಸಂಕಲ್ಪದಲ್ಲಿ ದೃಡವಾಗಿರಿ.
‘ರಾಜನಂತೆಯೇ, ಬ್ರಾಹ್ಮಣರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ತಮ್ಮ ರಕ್ಷಾ ಬಂಧನ ಸಮಾರಂಭವನ್ನು ಮುಕ್ತಾಯಗೊಳಿಸಬೇಕು.” ಎಂದು ಗ್ರಂಥದಲ್ಲಿ ಉಲ್ಲೆಖಿಸಲಾಗಿದೆ.

-ಕಾಂಚನಾ. ಬಸವರಜ. ಪೂಜಾರಿ
2ನೇ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ತೋರವಿ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಕಿವಿಯಲ್ಲಿ ಫ್ಲವರ್ ; ಟ್ಯಾಟೂ ಜಿವಲ್ಲೆರೀ ಟ್ರೆಂಡಿಂಗ್..!

Published

on

ತ್ತೀಚಿನ ಗ್ಲಾಮರ್ ಯುಗದಲ್ಲಿ,  ಇಂಸ್ಟಂಟ್ ಮತ್ತು ಅಚ್ಚರಿ ಹುಟ್ಟಿಸುವಂತಹ ಚಿತ್ರ ವಿಚಿತ್ರ ಟ್ರೆಂಡ್ ಗಳು ಇಂಸ್ಟಾಗ್ರಾಂ ಟ್ವಿಟ್ಟರ್, ಗಳಲ್ಲಿ ಸುದ್ದಿ ಮಾಡುತ್ತಿದೆ. ಹೆಣ್ಣು ಮಕ್ಕಳ ಆಭರಣ ಪ್ರೇಮ ಇಂದು ನಿನ್ನೆಯದಲ್ಲ. ಆಭರಣಕ್ಕೆ ಪರ್ಯಾಯ ಪದವೇ ಹೆಣ್ಣು ಅನ್ನುವಷ್ಟರ ಮಟ್ಟಿಗೆ ಹೆಂಗಳೆಯರ ಆಭರಣ ಪ್ರೀತಿ ಲೋಕಾರೂಢಿಯಲ್ಲಿ ಕಂಡು ಬರುತ್ತದೆ.

ಆದರೆ ಇತ್ತೀಚೆಗೆ ಕಂಡು ಬರುತ್ತಿರುವ ಫ್ಯಾಷನ್ ಟ್ರೆಂಡ್ ಗಳು ಈ ಲೋಕಾರೂಢಿಯ ನಾನ್ನುಡಿಯನ್ನು ಸುಳ್ಳಾಗಿಸಿದೆ. ಆಧುನಿಕ ಫ್ಯಾಷನ್ ಯುಗದಲ್ಲಿ, ಟ್ಯಾಟೂ ಕ್ರೇಜ್ ಹೆಚ್ಚಿದ್ದು, ದುಬಾರಿ
ಆಭರಣಗಳನ್ನು ಸೈಡಿಗೆ ಸೇರಿಸಿದೆ.

ಟ್ಯಾಟೂ ಜಿವಲ್ಲೆರೀ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಹಾಗೂ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದೆ. ಚಿನ್ನ ಬೆಳ್ಳಿ ವಜ್ರದ ಆಭರಣಗಳಿಗೆ ಸೆಡ್ಡು ಹೊಡೆದು ನಿಂತಿದೆ ಈ ನೂತನ ಟ್ಯಾಟೂ ಜಿವಲ್ಲೆರೀ ಟ್ರೆಂಡ್ !

ಕಿವಿಯಲ್ಲಿ ಮಿಂಚುವ ಕಿವಿ ಓಲೆಗಳು ಈ ಟ್ರೆಂಡ್ ಗೆ ವಾಶ್ ಔಟ್ ಆಗಿವೆ! ಕಿವಿಯ ಮೇಲೆ ಸುಂದರ ವಾಗಿ ಮೂಡಿ ಬರುತ್ತಿದೆ ಕಲರ್ಫುಲ್ ಫ್ಲವರ್ ಟ್ಯಾಟೂ.. ಬಣ್ಣದ ಹೂಗಳು, ಚಿಟ್ಟೆ, ಎಲೆ-ಬಳ್ಳಿ ಗಳು ಟ್ಯಾಟೂ ಇಯರ್ ಖಫ್ ಮತ್ತು ಇಯರ್ ರಿಂಗ್ ಗಳನ್ನು ರೀಪ್ಲೇಸ್ ಮಾಡಿರುವುದಂತೂ ಸತ್ಯ.

ಅಂತೆಯೇ, ಮೇಲ್ಕುತ್ತಿಗೆ, ಕೈ ತೋಳು, ಕಾಲ್ಗೆಜ್ಜೆ, ಕೈ ಬಳೆ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೇಲಿ ಚಟಕ

Published

on

ಫೋಟೋ : ಭಗವತಿ‌ ಎಂ.ಅರ್ / ಗಂಡು ಬೇಲಿ ಚಟಕ

ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.

ಹೆಣ್ಣು ಬೇಲಿ ಚಟಕ

ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!

ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!

Published

on

ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.

ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.

ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ  ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending