Connect with us
http://www.suddidina.com/category/political-news

ಸಿನಿ ಸುದ್ದಿ

ಶೃತಿ ಹರಿಹರನ್ ದೂರಿನಲ್ಲಿ ಏನಿದೆ ಗೊತ್ತಾ?

Published

on

ಸುದ್ದಿದಿನ ದಾವಣಗೆರೆ: ಪ್ರಶಾಂತ್ ನಿಂಬರಗಿ, ಈ ನಟಿಗೆ ಮಾಡಿದ್ದಾದರೂ ಏನು? ಶೃತಿ ಹರಿಹರನ್ ಹಿಂದೂ ಧರ್ಮದ ವಿರೋಧಿ ಎಂದಿದ್ದ ಪ್ರಶಾಂತ್ ನಿಂಬರಗಿ ಅವರ ಆರೋಪಕ್ಕೆ ಇದು ಧರ್ಮವನ್ನು ಎತ್ತಿಕಟ್ಟುವ ಕೃತ್ಯ ಎಂದು ನಟಿ ಶೃತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಾಗೇ ಶೃತಿಯ ಫೇಸ್ ಬುಕ್ ಖಾತೆ ಮೂರು ಕಡೆಗಳಲ್ಲಿ ನಿರ್ವಹಿಸಲ್ಪಡುತ್ತಿದ್ದು, ಐಪಿ ವಿಳಾಸವೂ ತಿಳಿದಿದೆ ಎಂದ ಸಂಬರಗಿ ಅವರ ಹೇಳಿದ್ದ ಹಿನ್ನೆಲೆ ಫೇಸ್ ಬುಕ್ ಮಾಹಿತಿ ಹ್ಯಾಕ್ ಮಾಡುವ ಮೂಲಕ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ದೂರಿದ್ದಾರೆ.

ವಿದೇಶಿ ಹಣವನ್ನು ಮಾಧ್ಯಮಗಳಿಗೆ ನೀಡಿ ಮಹಿಳಾ ಪರ ಸುದ್ದಿ ಮಾಡಿಸುತ್ತಿದ್ದಾಳೆ ಎಂದಿದ್ದ ಸಂಬರಗಿ ಅವರಿಗೆ ವಿದೇಶಿ ಹಣ ನನ್ನ ಖಾತೆಯಲ್ಲಿ ಇಲ್ಲವಾಗಿದ್ದು ಸುಳ್ಳು ಆರೋಪದ ಮೂಲಕ ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಎಂದು ಶೃತಿ ದೂರಿದ್ದಾರೆ.

ನಾನು ಶೃತಿ ಹರಿಹರನ್ ಳನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದ ಪ್ರಶಾಂತ್ ಸಂಬರಗಿ ಅವರ ‘ನಾನು ಬಿಡುವುದಿಲ್ಲ ಎನ್ನುವುದು: ಕೊಲೆ ಬೆದರಿಕೆಯಾಗಿದೆ ಎಂದು ನಟಿ ಶೃತಿ ಹರಿಹರನ್ ದೂರು ನೀಡಿದ್ದಾರೆ.

ಸಿನಿ ಸುದ್ದಿ

‘ಹಸುವಿನ ಹಾಲು ಕರೆದ’ ಡಿ ಬಾಸ್, ಗ್ರಾಮದ ಜನತೆಯ ಖುಷಿಗೆ ಕಾರಣವಾದ್ರು..!

Published

on

ಸುದ್ದಿದಿನ, ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಪರ ಪ್ರಚಾರಕ್ಕೆ ಇಂದು (ಗುರುವಾರ) ಕೆ.ಆರ್.ಪೇಟೆ ತಾಲೂಕಿನ ಸೋಮನ ಹಳ್ಳಿಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹಸುವಿನ ಹಾಲು ಕರೆದು ಅಭಿಮಾನಿಗಳಿಗೆ ಸಂತಸ ಮೂಡಿಸಿದರು.

ದರ್ಶನ್ ಮತ್ತು ಯಶ್ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವು ಜೋಡೆತ್ತುಗಳಲ್ಲ, ರಾತ್ರಿ ಬಂದು ಮೇದು ಹೋಗುವ ಕಳ್ಳೆತ್ತುಗಳು ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಕೂಡ ಅಪ್ಪನ ಮಾತಿಗೆ ತಕ್ಕನಾಗೆ ಪ್ರಚಾರದ ವೇಳೆ ಇವರಿಬ್ಬರ ವೈಯಕ್ತಿಕ ವಿಷಯವಾಗಿ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ರೈತರ ಕಷ್ಟಗಳ ಬಗ್ಗೆ ಅರಿವಿರುವ ದರ್ಶನ್ ಸೋಮನಹಳ್ಳಿಯ ಗ್ರಾಮದ ಕುಮಾರ್ ಎಂಬುವವರ ಹಸುವಿನ ಹಾಲು‌ಕರೆದು ನಾನೂ ಕೂಡ ರೈತನೇ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಸಿನೆಮಾಗೆ ಬರುವುದುಕ್ಕಿಂತ ಮುಂಚೆ ದರ್ಶನ್ ಹೈನುಗಾರಿಕೆ ಮಾಡುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ. ಹಾಗೇ ದರ್ಶನ್ ಪಾರ್ಮ್ ಹೌಸ್ ನಲ್ಲಿ ಇಂದಿಗೂ ಹಲವು ಹಸುಗಳು ಇವೆ.

ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ …

Posted by Sumalatha Ambareesh on Thursday, 11 April 2019

 

Continue Reading

ಸಿನಿ ಸುದ್ದಿ

ನಾಳೆ ‘ಕವಚ’ ಸಿನೆಮಾ ರಿಲೀಸ್ ; ಸಿನೆಮಾ ನೋಡಲು ಥಿಯೇಟರ್ ಗೆ ಶಿವಣ್ಣ..!

Published

on

ಸುದ್ದಿದಿನ ಡೆಸ್ಕ್ : ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ” ಕವಚ. ಇದು ಮಲಯಾಳಂ ‌ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನೆಮಾ’ಒಪ್ಪಂ’‌ನ‌ ರೀಮೇಕ್ ಆಗಿದ್ದು, ಶಿವಣ್ಣ ಸಿನೆಮಾದಲ್ಲಿ ಕುರುಡನ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ‌ ಸಿನೆಮಾದ ಹಾಡುಗಳು‌ ಈಗಾಗಲೇ ಜನತೆಯ ಮೆಚ್ಚುಗೆಯನ್ನು ಪಡೆದಿವೆ. ಕಾರಣ ಈ ಹಾಡುಗಳ ಅರ್ಥಪೂರ್ಣ ಸಾಹಿತ್ಯ ಹಾಗೂ ಸಂಗೀತ. ಸಿನೆಮಾಗೆ ಅರ್ಜುನ್ ಜನ್ಯ ಸಂಗೀತವಿದ್ದು, ಜಿ.ವಿ.ಆರ್.ವಾಸು ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಈ ಸಿನೆಮಾ ನೋಡಲು ಖುದ್ದಾಗಿ ಶಿವಣ್ಣನೇ ಸಂತೋಷ್ ಥಿಯೇಟರ್ ಗೆ 1.30ರ ಪ್ರದರ್ಶನಕ್ಕೆ ಚಿತ್ರತಂಡ ಹಾಗೂ ಕೆಲವು ಸ್ಯಾಂಡಲ್ ವುಡ್ ನಿರ್ದೇಶಕರೊಂದಿಗೆ ಬರಲಿದ್ದಾರೆ.ಇಷಾಕೊಪ್ಪಿಕರ್, ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

#Kavacha #ReleasingTomorrowWorldwide #HMACinema #Shivanna #VasishtaNSimha #GvrVasu•

Continue Reading

ಸಿನಿ ಸುದ್ದಿ

ಅಭಿಮಾನಿಯ ಕಲೆಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ‌ ಕಿಚ್ಚ..!

Published

on

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ,‌ ಸ್ಯಾಂಡಲ್ ವುಡ್ ನ ಬಾದ್ ಷಾ ಅಭಿಮಾನಿಗಳ ಕ್ರೇಜ್ ಅಷ್ಟಿಷ್ಟಲ್ಲ. ಕಿಚ್ಚನ ಟ್ಯಾಟೋ, ಫೋಟೋ, ವಿಡಿಯೋಗಳನ್ನು ತಮಗಿಷ್ಟ ಬಂದಹಾಗೆ ಕ್ರಿಯೇಟಿವಿಟಿ ಮೂಲಕ ತಮ್ಮದೇ ರೀತಿಯಲ್ಲಿ ಆಗಾಗ ಕಿಚ್ಚನ ಅಭಿಮಾನಿಗಳು‌ ಪ್ರಸ್ತುತ ಪಡಿಸುತ್ತಾರೆ.

ಅಂದಹಾಗೆ ಇಲ್ಲೊಬ್ಬ ಕಿಚ್ಚನ ಅಭಿಮಾನಿ ಕಿಚ್ಚನ ಚಿತ್ರವನ್ನು ‘ ಪೆನ್ಸಿಲ್’ ಬಳಸಿ ಸ್ಕೆಚ್ ಹಾಕಿದ್ದಾರೆ. ಅಭಿಮಾನಿಯ ಈ ಚಿತ್ರಕಲೆ ತುಂಬಾಚೆನ್ನಾಗಿದ್ದು, ಕಲಾಕಾರನಿಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending