Connect with us

ಸಿನಿ ಸುದ್ದಿ

ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು? ವೀಕ್ಷಿಸಿ ಇಂದು ರಾತ್ರಿ 8ಕ್ಕೆ ನಿಮ್ಮ ಉದಯ ಟಿವಿಯಲ್ಲಿ

Published

on

ಸುದ್ದಿದಿನ ಡೆಸ್ಕ್ : ಪ್ರೀತಿಸ್ತಿರೋ ಶಿವರಂಜಿನಿಗಾಗಿ ಮನೆಗೆಲಸದವನಾಗಿ ಬಂದು, ಎಲ್ಲರ ಮನವೊಲಿಸಿ ಹಲವಾರು ಕಥೆಕಟ್ಟಿ, ಸಂತು ಕೊನೆಗೂ ಅವಳನ್ನ ಮದುವೆಯಾಗುವಲ್ಲಿ ಸಫಲನಾಗುತ್ತಾನೆ. ಆದರೆ ಅಷ್ಟರಲ್ಲೇ ತಂಗಿ ಖುಷಿಯ ಕಿಡ್ನ್ಯಾಪ್ ಆಗಿ ಸಂಭ್ರಮವನ್ನ ಸಂಭ್ರಮಿಸಲಾಗದೇ ಒದ್ದಾಡುತ್ತಿರುತ್ತಾನೆ. ಮದುವೆ ಮನೆಯಂತೆ ಅಲಂಕಾರಗೊಂಡಿರೋ ರೂಮು, ಒಬ್ಬ ಪುರೋಹಿತ, ಹೋಮಕುಂಡ ಇವೆಲ್ಲವನ್ನ ನೋಡಿ ಬಂಧಿಯಾಗಿರುವ ಖುಷಿ ಗಾಬರಿಯಾಗುತ್ತಾಳೆ. ತಾನೆಲ್ಲಿರುವೆ ಎಂಬ ಗೊಂದಲದ ನಡುವೆ ಮಂತ್ರ ಹೇಳುತ್ತಿರೋ ಪುರೋಹಿತನಲ್ಲಿ ಕೇಳಿದಾಗ ಇದು ತನ್ನದೇ ಮದುವೆ ಎಂಬ ಆಘಾತ ಅವಳಿಗೆ ಆಗುವುದು. ಅವಳನ್ನ ಅಪಹರಿಸಿರುವುದು ಯಾರು? ಅವಳು ಎಲ್ಲಿರುವಳೆಂದು ಗೊಂದಲದಲ್ಲಿರುವ ಸಂತು ಕಂಗಾಲಾಗಿದ್ದಾನೆ.

ಅವನ ದುಗುಡ ಬೇಸಾರವನ್ನ ಕಂಡ ವೀರ ಪ್ರತಾಪನಿಗೆ ಈ ಮದುವೆ ನಿಂತು ಹೋಗಿ ಅಲಮೇಲಮ್ಮನ ಮಾನ ವiರ್ಯಾದೆ ಹೋಗುವುದೆಂಬ ಆತಂಕ. ಹಾಗಾಗಿ ಸಂತು ಬಳಿ ಬಂದು ಮದುವೆ ನಡೆಯದೇ ಹೋದರೆ ಕೊಲೆ ಮಾಡುವುದಾಗಿ ಅವನನ್ನ ಅಲಮೇಲಮ್ಮ ಬೆದರಿಸುತ್ತಾಳೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ ಇಲ್ಲಿ ಸಂತು ಹಲವಾರು ಕಥೆಕಟ್ಟಿ ಇವಾಗ ಫಜೀತಿಗೆ ಸಿಕ್ಕಿಬಿದ್ದಿದ್ದಾನೆ. ಈ ಎಲ್ಲ ಆಘಾತಕಾರಿ ಬೆಳವಣಿಗೆ ಕಂಡು, ಇಲ್ಲಿಯವರೆಗೂ ಆಡಿದ ನಾಟಕವನ್ನೆಲ್ಲ ಅಲಮೇಲಮ್ಮನಿಗೆ ಹೇಳಿ ಈ ಮದುವೆ ಮುರಿದು ತಂಗಿನ ಹುಡುಕೋ ನಿರ್ಧಾರ ಮಾಡುತ್ತಾನೆ ಸಂತು. ತನ್ನ ಬದ್ಧ ವೈರಿ ಕೃಷ್ಣವೇಣಿಯ ಮಗ ಸಂತು ಎಂದು ಗೊತ್ತಾದರೇ ಅಲಮೇಲಮ್ಮ ಅವನನ್ನ ಸುಮ್ಮನೆ ಬಿಡುವಳೇ? ಸಂತು ಈ ಇಲ್ಲ ಚಕ್ರವ್ಯೂಹದಿಂದ ಹೇಗೆ ಹೊರಬರುತ್ತಾನೆ ಅನ್ನೋ ಕುತೂಹಲ ಉದಯಟಿವಿಯಲ್ಲಿ ಪ್ರಸಾರವಾಗ್ತಿರೋ ಇಂದಿನ ಬ್ರಹ್ಮಾಸ್ತ್ರ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ವೀಕ್ಷಿಸಿ ‘ಬ್ರಹ್ಮಾಸ್ತ್ರ’ ಇಂದು (12.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ.

ಸಿನಿ ಸುದ್ದಿ

ರಜನಿಕಾಂತ್ ‘ಎಂದಿರನ್ 2.0’ ಸಿನೆಮಾ ಟೀಸರ್ ಮಿಲಿಯನ್ ವೀವ್ಸ್ ನತ್ತ..! ಟೀಸರ್ ನೋಡಿ

Published

on

ಸುದ್ದಿದಿನ ಡೆಸ್ಕ್ : ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸುವ ಬಹುನಿರೀಕ್ಷಿತ ಸಿನೆಮಾ ‘ಎಂದಿರನ್ 2.0’ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅಭಿಮಾನಿಗಳು ಹುಚ್ಚೆದ್ದು ಯೂಟ್ಯೂಬ್ ನಲ್ಲಿ ವೀಕ್ಷಿಸುತ್ತಿದ್ದಾರೆ. ಭಾರೀ ಬಜೆಟ್ ನಲ್ಲಿ ತಯಾರಾಗಿರೋ ಈ ಸಿನೆಮಾದ ಟ್ರೇಲರ್ ರಿಲೀಸ್ ಆಗಿ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಕಂಡಿತ್ತು. ಇದೀಗ ಮಿಲಿಯನ್ ವೀವ್ಸ್ ನತ್ತ ಮುನ್ನುಗ್ಗುತ್ತಿದೆ.

ಟೀಸರ್ ನೋಡಿ

Continue Reading

ಸಿನಿ ಸುದ್ದಿ

ಕೊಡಗು ಸಂತ್ರಸ್ತರಿಗೆ ನೆರವಾಗೋಣ: ಕ್ರೇಜಿಸ್ಟಾರ್ ರವಿಚಂದ್ರನ್

Published

on

ಸುದ್ದಿದಿನ ಡೆಸ್ಕ್: ಸಿನಿಮಾ ನಟರ ಅಭಿಮಾನಿಗಳ ಸಂಘಟನೆಗಳು ರಾಜ್ಯದಲ್ಲಿ ನೂರಾರಿವೆ. ಅವುಗಳು ಕೇವಲ ಸಿನಿಮಾ ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ ಅತಿವೃಷ್ಠಿ ಅನಾವೃಷ್ಟಿ, ಬರಗಾಲದಿಂದ ತತ್ತರಿಸಿದ ಪ್ರದೇಶಗಳ ದತ್ತು ಪಡೆದು ಸೇವಾ ಕಾರ್ಯ ಮಾಡಬೇಕು ಎಂದು ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಮನು ಹೇಳಿದರು.

ಚಿತ್ರದುರ್ಗ ನಗರದ ದುರ್ಗದ ಸಿರಿ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ಅಭಿಮಾನಿಗಳ ಸಂಘದ ಸಭೆಯಲ್ಲಿ ಮಾತನಾಡಿ ಕೊಡಗು ಜಿಲ್ಲೆ ಜಲಪ್ರಳಯಕ್ಕೆ ಸಿಲುಕಿದಾಗ ರವಿಚಂದ್ರನ್ ಅಭಿಮಾನಿಗಳು ತೆರಳಿ ಅವರಿಗೆ ಬೇಕಾದ ಮೂಲಸೌಲಭ್ಯಗಳನ್ನು ನೀಡಿದ್ದೆವು. ಅದು ನಮ್ಮ ಸಂಘಟನೆ ಹೆಮ್ಮೆ. ನಾವು ಕೇವಲ ಖುಷಿಯನ್ನಷ್ಟೇ ಅನುಭವಿಸದೆ ಕಷ್ಟದಲ್ಲಿರುವವರನ್ನು ಕೈ ಹಿಡಿಯಬೇಕಾದುದು ನಮ್ಮ ಕರ್ತವ್ಯ ಎಂದರು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಂದೆಡೆ ಹಿರಿಯ ನಟರಾಗಿದ್ದರೇ ಇನ್ನೊಂದೆಡೆ ಸದಾ ಪರಿಸರ ಜಾಗೃತಿ ಮೂಡಿಸುವ ಆಲೋಚನೆ ಹೊಂದಿದ್ಧಾರೆ, ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ಹೊಂದಿದ್ದು ಅವರ ಆಶಯದಂತೆ ನಾವು ನಡೆಯೋಣ. ನಮ್ಮ ಸಂಘಟನೆಗಳ ಮೂಲದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅದು ಸಾಮಾಜಿಕವಾಗಿ ಬೆಳೆಯಬೇಕು ಎಂದರು.

ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ.ಎಸ್. ಶಂಭು ಮಾತನಾಡಿ ಚಿತ್ರದುರ್ಗ ಕೋಟೆ ಐತಿಹಾಸಿಕವಾಗಿದ್ದು ಇಲ್ಲಿ ಅನೇಕ ಸಿನಿಮಾಗಳು ಚಿತ್ರೀಕರಣವಾಗಿವೆ ರವಿಚಂದ್ರನ್ ಸಾರಥ್ಯದಲ್ಲಿ ಪಡ್ಡೆಹುಲಿ ಸಿನಿಮಾ ಚಿತ್ರಿಕರಣವಾಗತ್ತಿದ್ದು ಮತ್ತು ಇದಕ್ಕಾಗಿ ಕೋಟೆಯನ್ನು ಕನ್ನಡದ ಬಾವುಟಗಳಿಂದ ಸಿಂಗಾರ ಮಾಡಿದ್ದು ಈ ಮೂಲಕ ಚಿತ್ರದುರ್ಗದ ಕೋಟೆ ನಾಡಿನ ಜನ ನೋಡುವಂತಾಗುತ್ತಿದೆ ಎಂದರು.

ಕರ್ನಾಟಕ ಯುವ ಪರಿಷತ್ತು ಅಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರ ಎದ್ದು ಕಾಣುತ್ತಿದೆ, ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. 4 ತಾಲೂಕುಗಳನ್ನ ಮಾತ್ರ ಬರಕ್ಕೆ ಸೇರ್ಪಡೆ ಮಾಡಿದ್ದು ಇಂತಹ ವೇಳೆ ಜಿಲ್ಲೆಯ ಎಲ್ಲಾ ಸಂಘಟನೆಗಳು ಅದರಲ್ಲೂ ಸಿನಿಮಾ ನಟರ ಅಭಿಮಾನಿ ಸಂಘಟನೆಗಳು ಚಿತ್ರದುರ್ಗ ಜಿಲ್ಲೆಯನ್ನು ಪೂರ್ಣ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಖ್ಯಾತನಟ ರವಿಚಂದ್ರನ್ ಅವರನ್ನು ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಪಡ್ಡೆಹುಲಿ ಸಿನಿಮಾ ನಿರ್ಮಾಪಕ ಕೆ.ಮಂಜು, ಚಿತ್ರದುರ್ಗ ಸದಸ್ಯರಾದ ಸಂದೀಪ್, ಕುಮಾರ್, ದಾವಣಗೆರೆ ಮಾಲಾ ಹನುಮಂತಪ್ಪ, ಮಂಜುಳ, ಗೀತಾ, ಕರ್ನಾಟಕ ಯುವ ಪರಿಷತ್ತು ಪಧಾದಿಕಾರಿಗಳು ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪೊಟೋ: ಖ್ಯಾತನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರನ್ನು ಚಿತ್ರದುರ್ಗ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಪಡ್ಡೆಹುಲಿ ಸಿನಿಮಾ ನಿರ್ಮಾಪಕ ಕೆ.ಮಂಜು, ದಾವಣಗೆರೆ ಜಿಲ್ಲಾಧ್ಯಕ್ಷ ಮನು, ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ.ಎಸ್. ಶಂಭು, ಕರ್ನಾಟಕ ಯುವ ಪರಿಷತ್ತು ಅಧ್ಯಕ್ಷ ಮಾಲತೇಶ್ ಅರಸ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ನಿವೇದಿತಾ ಗೌಡ ಜತೆ ಬರ್ತ್‍ಡೇ ಆಚರಿಸಿಕೊಂಡ ಚಂದನ್ ಶೆಟ್ಟಿ

Published

on

ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ನಿವೇದಿತಾ ಗೌಡ ಕುಟುಂಬದ ಜತೆ ಭಾನುವಾರ ತಡರಾತ್ರಿ ಆಚರಿಸಿಕೊಂಡರು.

29ನೇ ವರ್ಷಕ್ಕೆ ಕಾಲಿಡುತ್ತಿರುವ ಚಂದನ್ ಶೆಟ್ಟಿ ಅವರ ನಾಗರಬಾವಿಯಲ್ಲಿರುವ ನಿವಾಸಕ್ಕೆ ನಿವೇದಿತಾ ಗೌಡ ಹಾಗೂ ಅವರ ತಾಯಿ ಭೇಟಿ ನೀಡಿದ್ದರು. ಈ ವೇಳೆ ಕೇಕ್ ಕತ್ತರಿಸಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ತಿನ್ನಿಸಿದರು.

ಕೇಕ್‍ಅನ್ನು ಸಿಎಸ್ ಎಂದು ಡಿಸೈನ್ ಮಾಡಲಾಗಿತ್ತು. ಅಭಿಮಾನಿಗಳೂ ಕೂಡ ತಡರಾತ್ರಿಯಲ್ಲಿ ಚಂದನ್ ಶೆಟ್ಟಿ ಅವರನ್ನು ಭೇಟಿಯಾದರು.

Continue Reading
Advertisement

Trending