Connect with us

ಸಿನಿ ಸುದ್ದಿ

‘ದಿ ವಿಲನ್’ ಸಿನೆಮಾಗೆ U/A ಸರ್ಟಿಫಿಕೇಟ್..!

Published

on

ಸುದ್ದಿದಿನ ಡೆಸ್ಕ್ : ಬಹುನಿರೀಕ್ಷಿತ ದಿ ವಿಲನ್ ಸಿನಿಮಾದ ರಿಲೀಸ್​ ಡೇಟ್​ ಫೈನಲಿ ಅನೌನ್ಸ್​ ಆಗಿದೆ. ಡಾ.ಶಿವರಾಜ್​ಕುಮಾರ್​ ಹಾಗೂ ಕಿಚ್ಚ ಸುದೀಪ್​ ಅಭಿನಯದ ದಿ ವಿಲನ್ ಸಿನಿಮಾ ಮುಂದಿನ ತಿಂಗಳು ಅಕ್ಟೋಬರ್​​ 18ಕ್ಕೆ ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆಗೆ ಬರಲಿದೆ.

ಸಿ.ಆರ್​ ಮನೋಹರ್​ ನಿರ್ಮಾಣದ, ಜೋಗಿ ಪ್ರೇಮ್​ ನಿರ್ದೇಶನದ ದಿ ವಿಲನ್​ ಸಿನಿಮಾ ಇದೇ ಅಕ್ಟೋಬರ್​​ 18ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ರಿಲೀಸ್​ ಕುರಿತಾದ ಅಧಿಕೃತ ಮಾಹಿತಿಯನ್ನ, ಗಣೇಶ ಹಬ್ಬದ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ ಹೊರಹಾಕಿದ್ದಾರೆ. ಈಗಾಗ್ಲೆ ಸಿನಿಮಾದ ಸೆನ್ಸಾರ್​ ಮುಗಿದಿದ್ದು, ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್​ ಸಿಕ್ಕಿದೆ. ಈಗ ಸಿನಿಮಾದ ರಿಲೀಸ್​ ಡೇಟ್​ ಕೂಡ ಅನೌನ್ಸ್​ ಮಾಡಲಾಗಿದೆ.

ಮೋಸ್ಟ್ ಎಕ್ಸ್​ಪೆಕ್ಟೆಡ್​ ಸಿನಿಮಾ ದಿ ವಿಲನ್​ ಮೂರು ಭಾಷೆಗಳಲ್ಲಿ ತೆರೆಗೆ ಬರ್ತಾ ಇದೆ. ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ದಿ ವಿಲನ್​ ಸಿನಿಮಾ ರಿಲೀಸ್​ ಆಗ್ತಾ ಇದೆ. ತೆಲುಗು ಹಾಗು ತಮಿಳಿನಲ್ಲಿ ಕಿಚ್ಚ ಸುದೀಪ್​ಗೆ ದೊಡ್ಡ ಫ್ಯಾನ್​ ಬೇಸ್​ ಇದ್ದು, ಶಿವಣ್ಣ ಮಾಸ್​ ಹೀರೋ ಆಗಿ ತಮಿಳು, ತೆಲುಗಿನಲ್ಲೂ ದಿ ವಿಲನ್ ಮೂಲಕ ಅಬ್ಬರಿಸಲಿದ್ದಾರೆ. ಈಗಾಗ್ಲೆ ಸಿನಿಮಾದ ಹಾಡುಗಳು ರಿಲೀಸ್​ ಆಗಿ ಭರ್ಜರಿ ರೆಸ್ಪಾನ್ಸ್​ ಪಡೆದಿದ್ದು, ಸಿನಿಮಾಕ್ಕಾಗಿ ಕಾಯ್ತಾ ಇದ್ದ ಫ್ಯಾನ್ಸ್​ಗೆ ಹಬ್ಬದ ದಿನ ಭರ್ಜರಿ ಉಡುಗೊರೆ ಸಿಕ್ಕಿದೆ.

ಸಿನಿ ಸುದ್ದಿ

ವಿಡಿಯೋ | ಹಾಡು ಹೇಳಿ ಭಿಕ್ಷೆ ಬೇಡುತ್ತಿದ್ದ ‘ರಾನು ಮಂಡಲ್’ ಈಗ ಬಾಲಿವುಡ್ ನ ಹಾಡುಗಾರ್ತಿ..!

Published

on

ಸುದ್ದಿದಿನ ಡೆಸ್ಕ್ : ಪಶ್ಚಿಮ ಬಂಗಾಳದ ರಾನು ಮಂಡಲ್ ತನ್ನ ಹೊಟ್ಟೆ ಪಾಡಿಗಾಗಿ ಹಾಡು ಹೇಳಿ ಭಿಕ್ಷೆ ಬೇಡುವ ಹೆಣ್ಣು ಮಕ್ಕಳು, ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ವೇಳೆ ಇವರ ಒಂದು ಹಾಡನ್ನು ಯಾರೂ ಒಬ್ಬ ಚಿತ್ರಿಸಿ ವೈರಲ್ ಮಾಡಿದ ಬಳಿಕ ಇವತ್ತು ಮಂಡಲ್ ಅವರನ್ನು ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ಕರೆದು ತಮ್ಮ ಮುಂದಿನ ಚಿತ್ರಕ್ಕೆ ಹಾಡು ಹಾಡಿಸಿದ್ದಾರೆ.

ನಿಜವಾದ ಪ್ರತಿಭೆಗೆ ಗುರುತಿಸಿ ಪ್ರೋತ್ಸಾಹ ನೀಡಿ ರೇಶಮಿಯಾ ಗೆ ಧನ್ಯವಾದಗಳು ಹೇಳಲೇ ಬೇಕು, ರಾನು ಮಂಡಲ್ ಬಡ ಕುಟುಂಬದಿಂದ ಬಂದ ಆದಿವಾಸಿ ಆಗಿದ್ದು ಇವತ್ತು ತಮ್ಮ ಧ್ವನಿಯಿಂದ ಬಾಲಿವುಡ್ ನಲ್ಲಿ ಮಾತಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಸಂತ್ರಸ್ತರಿಗೆ ‘ಕುರುಕ್ಷೇತ್ರ’ದ ಸಂಭಾವನೆ ನೀಡಿದ ನಿಖಿಲ್ ಕುಮಾರಸ್ವಾಮಿ..!

Published

on

ಸುದ್ದಿದಿನ ಡೆಸ್ಕ್ : ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದ ನಿಖಿಲ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನಿಖಿಲ್ ಪಾತ್ರ ಅದ್ಭುತವಾಗಿ ಬಂದಿದೆ. ಇದೀಗ, ಈ ಚಿತ್ರದಿಂದ ಬಂದ ಸಂಭಾವನೆಯನ್ನ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ಥರಿಗೆ ನೀಡಲು ನಿಖಿಲ್ ಮುಂದಾಗಿದ್ದಾರೆ. ಮಾನವೀಯತೆ ದೃಷ್ಠಿಯಿಂದ ಆ ಮೊತ್ತವನ್ನ ನೆರೆ ಸಂತ್ರಸ್ಥರಿಗೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಸಿನಿ ಸುದ್ದಿ

“ಗಂಡಸು ಎಂದು ಸಾಬೀತು ಪಡಿಸಲು ಮದ್ಯಪಾನ ಮಾಡಬೇಕಿಲ್ಲ, ಕತ್ತಲೂ ಆಗ ಬೇಕಿಲ್ಲ” : ಕಿಚ್ಚ ಸುದೀಪ್ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : ಇನ್ನೇನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ‘ಪೈಲ್ವಾನ್’ ಸಿನೆಮಾ ಬಿಡುಗಡೆಯ ತಯಾರಿಯಲ್ಲಿದೆ. ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಪೈಲ್ವಾನ್ ಚಿತ್ರದ ಕೆಲವು ಹಾಡುಗಳನ್ನು ಚಿತ್ರ ತಂಡ ಬಿಡುಗಡೆ ಸಿದ್ದತೆ ಮಾಡಿಕೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಬಿಡುಗಡೆ ಗೊಳಿಸಲು ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಎಂದೆಂದೂ ಕಂಡರಿಯದ ಪ್ರವಾಹದಿಂದ ಅಲ್ಲಿನ ಜನತೆ ಸಂಕಷ್ಟದಲ್ಲಿ ಸಿಲುಕಿದರು. ಈ ಕಾರಣದಿಂದಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮುಂದೂಡಲಾಯಿತು.

ಅಂದಹಾಗೆ ಕಿ್ಚ್ಚ್ಚ್ಚಚ್ಚ ಸುದೀಪ್ ಇಂದು ಮಾಡಿರುವ ಟ್ವೀಟ್ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾರಣ ಇಷ್ಟೆ ಅವರು ಮಾಡಿರುವ ಟ್ವೀಟ್, ಹೀಗಿದೆ ” ನಾನು ಎಲ್ಲೋ‌ ಓದಿದ ಸಾಲುಗಳಿವು, ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಿಲ್ಲ, ಕತ್ತಲು ಆಗಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ‌. ಇದು ಯಾರಿಗೆ ಟಾಂಗ್ ಕೊಡಲು ಮಾಡಿದ್ದಾರೆ ಎಂಬುದು ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಹಾಗೆ “ಏನನ್ನೋ ಸಾಬೀತು ಪಡಿಸಲು ನಾನು ಪೈಟ್ ಮಾಡುವುದಿಲ್ಲ, ಯೋಗ್ಯತೆ ಇರುವವರೊಂದಿಗೆ ಅಷ್ಟೆ ನನ್ನ ಪೈಟ್” ಎಂಬ ಪೋಟೋ ಪೋಸ್ಟರ್ ಅನ್ನು ಕೂಡ ಟ್ವೀಟ್ ಮಾಡಿದ್ದಾರೆ‌.

 

Continue Reading
Advertisement

Trending