Connect with us

ಸಿನಿ ಸುದ್ದಿ

ನಿವೇದಿತಾ ಗೌಡ ಜತೆ ಬರ್ತ್‍ಡೇ ಆಚರಿಸಿಕೊಂಡ ಚಂದನ್ ಶೆಟ್ಟಿ

Published

on

ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ನಿವೇದಿತಾ ಗೌಡ ಕುಟುಂಬದ ಜತೆ ಭಾನುವಾರ ತಡರಾತ್ರಿ ಆಚರಿಸಿಕೊಂಡರು.

29ನೇ ವರ್ಷಕ್ಕೆ ಕಾಲಿಡುತ್ತಿರುವ ಚಂದನ್ ಶೆಟ್ಟಿ ಅವರ ನಾಗರಬಾವಿಯಲ್ಲಿರುವ ನಿವಾಸಕ್ಕೆ ನಿವೇದಿತಾ ಗೌಡ ಹಾಗೂ ಅವರ ತಾಯಿ ಭೇಟಿ ನೀಡಿದ್ದರು. ಈ ವೇಳೆ ಕೇಕ್ ಕತ್ತರಿಸಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ತಿನ್ನಿಸಿದರು.

ಕೇಕ್‍ಅನ್ನು ಸಿಎಸ್ ಎಂದು ಡಿಸೈನ್ ಮಾಡಲಾಗಿತ್ತು. ಅಭಿಮಾನಿಗಳೂ ಕೂಡ ತಡರಾತ್ರಿಯಲ್ಲಿ ಚಂದನ್ ಶೆಟ್ಟಿ ಅವರನ್ನು ಭೇಟಿಯಾದರು.

ಸಿನಿ ಸುದ್ದಿ

ದಾವಣಗೆರೆ : ವಾಲ್ಮೀಕಿ‌ ಸ್ವಾಮೀಜಿ ಆಶೀರ್ವಾದ ಪಡೆದ ಕಿಚ್ಚ

Published

on

ಸುದ್ದಿದಿನ ಡೆಸ್ಕ್ : ದಾವಣಗೆರೆ ನಗರಕ್ಕೆ ಇಂದು ಖ್ಯಾತ ಕನ್ನಡ ಚಿತ್ರರಂಗದ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬೆಂಗಳೂರಿನ‌ ಎಚ್.ಎ.ಎಲ್ ಎಲಿಪ್ಯಾಡ್ ನಿಂದ ಎಲಿ ಕ್ಯಾಪ್ಟರನಲ್ಲಿ ದಾವಣಗೆರೆ ನಗರದ ಎಂಬಿಎಕಾಲೇಜ್ ನಲ್ಲಿ ನಿಲ್ದಾಣದಲ್ಲಿ ಬಂದು ಇಳಿದರು.

ನಂತರ ಹರಿಹರ ತಾಲ್ಲೂಕಿನ ಶ್ರೀ ಶ್ರೀ ವಾಲ್ಮೀಕಿ ಗುರುಪಿಠ ರಾಜನಹಳ್ಳಿ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮಿಜೀಯವರ ಆರ್ಶಿವಾದ ಪಡೆದು ಕನ್ನಡ ಚಿತ್ರರಂಗದ ಹಾಗೂ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮಿಜೀಯವರ ಜೋತೆ ಕೆಲವು ವಿಚಾರಗಳನ್ನು ಚರ್ಚಿಸಿದರು.

ನಂತರ ನಗರದ ಬಾಯ್ಸ್ ಹಾಸ್ಟೆಲ್ ರೋಡ್ ನಲ್ಲಿರಿವ ಕಿಚ್ಚ ಸುದೀಪ್ ದೊನ್ನೆ ಬಿರಿಯಾನಿ ದಾವಣಗೆರೆ ಮಂಜುನಾಥ ಮಾಲಿಕತ್ವದ ಹೊಟೇಲ್ ಉದ್ಘಾಟನೆ ಕಾರ್ಯಕ್ರಮವನ್ನು ನೆರೆವೆರಿಸಿದರು ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಹಾಗೂ ನಂಧಕಿಶೋರ್ ಸರ್. ಆರ್,ಎಸ್, ರಾಕೇಶ್. ಶ್ರೀ ನಿವಾಸ ದಾಸಕರಿಯಪ್ಪ. ರಮೇಶ. ಶಾಮನೂರು ಪ್ರವೀಣ್ ಲಿಂಗರಾಜ್ ಪಣಿಯಾಪುರ ಇತರರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ಮೈಸೂರು ದಸರಾ : ಉತ್ಸವ ಕಣ್ತುಂಬಿ ಕೊಂಡ ಶಿವಣ್ಣ ದಂಪತಿ

Published

on

ಸುದ್ದಿದಿನ ಡೆಸ್ಕ್ : ವಕರುನಾಡ ಚಕ್ರವರ್ತಿ ನಟ ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​​ಕುಮಾರ್​​ ಕುಟುಂಬ ಸಮೇತರಾಗಿ ಮೈಸೂರು ದಸರಾ ವೀಕ್ಷಣೆ ಮಾಡಿದರು.

ಒಂದೆಡೆ ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಶಿವಣ್ಣ ಹಾಗೂ ಸುದೀಪ್​ ಫ್ಯಾನ್ಸ್​ ಮಧ್ಯೆ ಚಟಾಪಟಿ ನಡೆಯುತ್ತಿದೆ. ಇನ್ನೊಂದೆಡೆ, ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಶಿವಣ್ಣ ಮಾತ್ರ, ಇದ್ಯಾವುದರ ಕುರಿತು ಹೆಚ್ಚು ತಲೆಕೆಡೆಸಿಕೊಳ್ಳದೇ ಮೈಸೂರಿನಲ್ಲಿ ಕುಟುಂಬದ ಜೊತೆ ಜಂಬೂ ಸವಾರಿ ವೀಕ್ಷಣೆ ಮಾಡುತ್ತಿದ್ದಾರೆ. ಅತ್ಯಂತ ಪ್ರಭುದ್ಧ ನಟರಾಗಿರುವ ಶಿವಣ್ಣ, ಈ ಮೊದಲು ಕೂಡ ಈ ಸಿನಿಮಾವನ್ನು ಕೇವಲ ಸಿನಿಮಾವನ್ನಾಗಿ ಮಾತ್ರ ನೋಡಿ ಅಂತಾ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

#Me_too | ನಿರ್ದೇಶಕ ರವಿ ಶ್ರೀವತ್ಸ ಮೇಲೆ ನಟಿ ಸಂಜನಾ ಆರೋಪ..!

Published

on

ಸುದ್ದಿದಿನ ಡೆಸ್ಕ್ | ನಟಿ ಸಂಜನಾ ಗಲ್ರಾನಿ‌ #Me Too ಅಭಿಯಾನದಡಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮೀಟು ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗಿ ಬಿಟ್ಟಿದೆ. ಕೇಂದ್ರದ ಸಚಿವರೊಬ್ಬರು ಇದೇ ಕಾರಣಕ್ಕೆ ರಾಜೀನಾಮೆಯನ್ನು ಕೂಡ ಕೊಟ್ಟಿದ್ದಾರೆ.

ಅಂದಹಾಗೆ ಸಂಜನಾ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನೆಮಾ ‘ಗಂಡ ಹೆಂಡತಿ’ ಸಿನೆಮಾದ ನಿರ್ದೇಶಕ ರವಿ ಶ್ರೀವತ್ಸ ಅವರ ಮೇಲೆ ಆರೋಪ ಹೊರಿಸಿದ್ದಾರೆ. ಅದೇನು ಅಂದ್ರೆ, “ಸಿನೆಮಾ ಶೂಟಿಂಗ್ ಸಮಯದಲ್ಲಿ ಲಿಪ್ ಲಾಕ್ ಅಥವಾ ಕಿಸ್ಸಿಂಗ್ ಸೀನ್ ಒಂದೇ ಇರುತ್ತೆ ಅಂತ ಹೇಳಿದ ನಿರ್ದೇಶಕ ರವಿ ಅವರು ಸುಮಾರು 50 ಕಿಸ್ ಸೀನ್ ಗಳನ್ನ ಚಿತ್ರ ವಿಚಿತ್ರವಾಗಿ ಚಿತ್ರೀಕರಿಸಿ ಕೊಂಡರು ಇಡೀ ಸಿನೆಮಾದಲ್ಲಿ ನನ್ನನ್ನು ಯಾವ್ ಯಾವ್ದೋ ಆಂಗಲ್ ನಲ್ಲಿ ನನ್ನ ಶೂಟ್ ಮಾಡಿದ್ರು. ಸೆನ್ಸಾರ್ ನವರು ತುಂಬಾ ದೃಶ್ಯಗಳನ್ನು ಕಟ್ ಮಾಡಿದ್ದಾರೆ‌. ಆದರೆ ಉಳಿದ ದೃಶ್ಯಗಳು ತುಂಬಾ ಇದಾವೆ‌” ಎಂದಿದ್ದಾರೆ.

ಹಾಗೆ ನನಗೆ ಆ ಸಿನೆಮಾ ಮಾಡುವಾಗ ಕೇವಲ ಹದಿನಾರುವರ್ಷ. ಹಾಗಾಗಿ ಯಾವುದೇ ರೀತಿಯ ಪ್ರತಿರೋಧವನ್ನೊಡ್ಡಲು ಆಗ ನನಗೆ ಆಗಲಿಲ್ಲ. ಆದರೆ ಈ #Me Too ಅಭಿಯಾನ ನನ್ನಲ್ಲಿ ಧೈರ್ಯ ತುಂಬಿದ್ದರಿಂದ ನಾನು ಈ ವಿಷಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

Trending