Connect with us

ಸಿನಿ ಸುದ್ದಿ

ವೀಡಿಯೋ | ‘ಈ ವಯಸಲ್ಲೇನ್ ಮಾಡೋದು’ ಅಂತ ಭಟ್ಟ್ರು ಹೇಳಿದಾರೆ ನೀವೂ ಕೇಳಿ..!

Published

on

ಸುದ್ದಿದಿನ ಡೆಸ್ಕ್ : ಸೃಜನಶೀಲ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ ಸಿನೆಮಾ ‘ಪಂಚತಂತ್ರ’ ಫೆ.14 ರ ಪ್ರೇಮಿಗಳ ದಿನಾಚರಣೆಯಂದು ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೆ ಈ ಸಿನೆಮಾದ ‘ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ’ ಹಾಡು ಎಲ್ಲರ ಮನಗೆದ್ದಿದೆ.

ಇಂದು ಇದೇ ಸಿನೆಮಾದ ‘ಈ ವಸ್ಸಲ್ಲೇನ್ ಮಾಡೋದು ‘ ಎಂಬ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹದಿಹರೆಯದ ಹುಡುಗರ ಹಲವು ಪ್ರಶ್ನೆಗಳನ್ನೇ ಮುಂದಿಟ್ಟು ಕೊಂಡು ಹೊಸ‌ ಮಂತ್ರ ಜಪಿಸುವಂತೆ ಮಾಡಿದ್ದಾರೆ ಭಟ್ರು. ಅಂದ ಹಾಗೆ ಈ ಹಾಡು ಸಖತ್ ಆಗಿದೆ ನೀವೂ ಕೇಳಿ.

ಈ ವಯಸ್ಸಲ್ ಏನ್ ಮಾಡೋದೋ?…ಪಂಚತಂತ್ರದ ಎರಡನೆ ಹಾಡು, ಕೇಳಿ, ನೋಡಿ, ಆನಂದಿಸಿ… https://youtu.be/euZT4i-7WKE#Panchatantra #Audio #Song2 #YogarajBhat #VHarikrishna #VijayPrakash

Posted by Yograj Cinemas – ಯೋಗರಾಜ್ ಸಿನಿಮಾಸ್ on Sunday, 6 January 2019

"ಈ ವಯಸಲ್ ಏನ್ಮಾಡೋದು" ಅಂತ ಗೊತ್ತಿಲ್ಲದೇ ದಿನಾ ವಿಪರೀತವಾಗಿ ಚಿಕನ್ ಡಿನ್ನರ್ ತಿಂತಿರೋ ಯುವಪೀಳಿಗೆಗೆ ಈ ವೀಡಿಯೊ…

Posted by Yograj Cinemas – ಯೋಗರಾಜ್ ಸಿನಿಮಾಸ್ on Monday, 7 January 2019

ಈ ವಯಸಲ್ ಏನ್ಮಾಡೋದು ಅಂತ ಇವರಿಬ್ಬರಿಗೂ ಗೊತ್ತಾಗಿದೆ ಅನ್ಸುತ್ತೆ. 🤔🤔 Benaka Sagar Dimpu & Nandu Kumar ಅವರಿಂದ ಒಂದು "ಯಬಾಸ್"…

Posted by Yograj Cinemas – ಯೋಗರಾಜ್ ಸಿನಿಮಾಸ್ on Monday, 7 January 2019

ಯಾರಪ್ಪಾ ಈ ವೀಡಿಯೊ ಮಾಡಿದ್ದು? 🤣🤣🤣ಪೂರ್ತಿ ಹಾಡನ್ನು ಕೇಳೋಕ್ಕೆ ಈ ಲಿಂಕ್ ಕ್ಲಿಕ್ ಮಾಡಿ: https://youtu.be/euZT4i-7WKE#Sandalwood #Yabassss #Panchatantra #YogarajBhat #Harikrishna #VijayPrakash #Vihan #Sonal

Posted by Yograj Cinemas – ಯೋಗರಾಜ್ ಸಿನಿಮಾಸ್ on Monday, 7 January 2019

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ

‘ಮಲೈಕಾ v/s ದೀಪಿಕಾ’ ಯಾರು ಹಿತವರು ನಮಗೆ..?

Published

on

ಟೈಟಲ್ ನೋಡಿ ಯಾಮಾರಬೇಡಿ ಸ್ವಾಮಿ. ಇದು ಬಾಲಿವುಡ್ ಬೆಡಗಿಯರ ಕ್ಯಾಟ್ ಫೈಟ್ ಗೆ ಸಂಬಂಧಿಸಿದ ಲೇಖನ ಅಲ್ಲ. ಮುಂಬೈ ನಾ ಸೋನಮ್ ಕಪೂರ್ ರ ಬರ್ತಡೇ ಪಾರ್ಟಿ ಗೆ ತನ್ನ ಗೆಳೆಯ ಅರ್ಜುನ್ ಕಪೂರ್ ರೊಂದಿಗೆ ಬಂದ ಮಲೈಕ  ಕಂಗೊಳಿಸಿದ್ದು, ಪ್ರಸಿದ್ಧ ಬಾಲಿವುಡ್ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ರವರ ಆರು ಗಜದ ಶ್ವೇತಾ ವರ್ಣದ  ಸುವರ್ಣ ಗುಲ್ದಸ್ಥಾ ಸೀರೆ ಯಲ್ಲಿ. ರೆಡ್ಲಿಪ್ಸ್, ಲೂಸ್ ಹೇರ್ ಬನ್, ರೆಡ್ ಕ್ಲಚ್ನ ಕಾಂಬಿನೇಷನ್ ನಲ್ಲಿ  ವಜ್ರದ ಪುತ್ಥಳಿ ಯಂತೆ ಮಿಂಚಿದರು ಮಲೈಕಾ.

ವಿಷಯ ಇಷ್ಟೇ ಆಗಿದ್ದರೆ, ಫ್ಯಾಷನ್ ಕ್ರಿಟಿಕ್ಸ್ ಗಳ ಬಾಯಿಗೆ ಆಹಾರ ವಾಗುತ್ತಿರಲಿಲ್ಲ.. ಈ ಹಿಂದೆ ದಿಪಿಕಾ ಪಡುಕೋಣೆ ಸಹ ರೋಹಿತ್ ಬಾಲ್ ರ ಇದೇ ಶ್ವೇತ ವರ್ಣದ ಗುಲ್ದಸ್ಥಾ ಸೀರೆಯನ್ನು ರಣವೀರ್ ಸಿಂಗ್ ರ ಸಂಬಂಧಿಕರ ಮದುವೆಗೆ ಧರಿಸಿದ್ದು, ದೀಪಿಕಾ ರ ಸ್ಟೈಲ್ ಕಾಪಿ ಮಾಡಿದರಾ ಮಲೈಕಾ ಎಂಬ ಗುಸುಗುಸು ಫ್ಯಾಷನ್ ಲೋಕದಲ್ಲಿ ಎದ್ದಿದೆ.

ಅಂದಹಾಗೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಸೀರೆಯ ಬೆಲೆ ಬರೋಬ್ಬರಿ ಒಂದುವರೆ ಲಕ್ಷ! ಇಬ್ಬರೂ ಶ್ವೇತಾಂಬರಿಯರಲ್ಲಿ ಯಾರು ಈ ದುಬಾರಿ ಸೀರೆಯಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡರು ಎಂಬುದನ್ನು ಕಾಮೆಂಟ್ ಮಾಡಿ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಸಲ್ಲು ಭಾಯ್ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ‘ಭಾರತ್’..!

Published

on

ಕಳೆದ ವಾರ ಈದ್ ಗೆ ಬಿಡುಗಡೆ ಗೊಂದ ಸಲ್ಲು ಭಾಯ್ ರ ಬಹುನಿರೀಕ್ಷಿತ ಚಿತ್ರ “ಭಾರತ್” , ಬಿಡುಗಡೆಯಾದ ಮೂರೇ ದಿನಕ್ಕೆ ನೂರರ ಕ್ಲಬ್ ಸೇರಿದೆ. ಮೂರನೇ ದಿನವೇ 103 ಕೋಟಿ ರೂಗಳನ್ನುಗಳಿಸಿದ್ದು ಭರ್ಜರಿ ಓಪನಿಂಗ್ ಪಡೆದಿದೆ‌. ಸಲ್ಮಾನ್ ಖಾನ್, ಕತ್ರಿನಾ ಕೈಫ್ ರ ಪ್ರೇಮ ಕಹಾನಿ ದಿಲ್ ಖುಷ್ ಮಾಡಿದರೆ,  ಸುನೀಲ್ ಗ್ರೋವರ್ ರ ಅಧ್ಬುತ ಕಾಮಿಡಿ ಮತ್ತು ಸಲ್ಲು-ಸುನೀಲ್ ರ ಜುಗಲ್ ಬಂದಿ ಸೂಪರ್ ಕೂಲ್ ಎನಿಸುತ್ತದೆ.

ಅಲಿ  ಅಬ್ಬಾಸ್ ಜಾಫರ್  ನಿರ್ದೇಶಿಸಿರುವ, ದೊಡ್ಡ ತಾರಾಗಣ ಒಳಗೊಂಡಿರುವ ಈ ಚಿತ್ರದಲ್ಲಿ ಜಾಕಿ ಶ್ರಾಫ್, ವಿದ್ಯಾ ಬಾಲನ್, ನೂರ್ ಫತೇಹಲಿ ಖಾನ್, ದಿಶಾ ಪಟಾಣಿ, ಸೇರಿದಂತೆ ಹಲವಾರು ತಾರೆಯರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ತಂದೆ ಗೆ ತಕ್ಕ ಜವಾಬ್ದಾರಿ ಯುತ ಮಗನಾಗಿ, ಸಲ್ಮಾನ್ ಖಾನ್ ರ ಅಮೋಘ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ.70 ರ ವೃದ್ಧನಾಗಿ ತನ್ನ ಜೀವನಗಾಥೆಯನ್ನ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುವುದರಿಂದ ಶುರುವಾಗುವ ಚಿತ್ರ, ಮುಂದೆ  ಭಾರತ-ಪಾಕ್ ಗಡಿಯ ವಿಭಜನೆ ಸಮಯದ ಜನರ ನೋವು, ಕುಟುಂಬಗಳ ಮಾರಣ ಹೋಮ, ಇವೆಲ್ಲವೂ ಮನಸ್ಸಿಗೆ ನೇರವಾಗಿ ನಾಟುವಂತೆ ಚಿತ್ರಿಸಲಾಗಿದೆ.

ಹಿಂದ್ ರಾಷನ್ ಶಾಪ್ ಗಾಡಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುವ ನಾಯಕ ಭಾರತ್,  ಕೂದಲೆಳೆಯ ಮೇಲೆ ಸಾಗುವ ಕಥಾಹಂದರ ಕ್ಕೆ ಸಲ್ಮಾನ್ ಖಾನ್ ರ ಅಭಿನಯವೇ ಕಥಾನಾಯಕ. 2010ರಲ್ಲಿ ಶುರುವಾಗುವ ಕಥೆ,1947,  1960 ಮತ್ತು 90ರ ದಶಕಕ್ಕೆ ಕೊಂಡೊಯ್ಯುತ್ತದೆ.

ಆಕ್ಷನ್ ಸೆಂಟಿಮೆಂಟ್ ರೊಮ್ಯಾನ್ಸ್,  ಭರಿತ ಭಾರತ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು,ಸಲ್ಲು ಫಾನ್ಸ್ ಗೆ ರಸದೌತಣ ಉಣಬಡಿಸಿದೆ ಭಾರತ್. ನೂರ್ ಮತ್ತು ದಿಶಾ ರ ಎಂಟ್ರಿ ಪಡ್ಡೆ ಗಳ ಹಾರ್ಟಿಗೆ ಕಿಚ್ಚು ಹೆಚ್ಚಿಸಿದರೆ, ಕತ್ರಿನಾ ತಮ್ಮ ಎಂದಿನ ಅಭಿನಯದಿಂದ”ಮೇಡಮ್ ಸಾರ್” ಆಗಿ ನೆನಪಿನಲ್ಲಿ ಉಳಿಯುತ್ತಾರೆ. ದಿಶಾ ಪಟಾಣಿ ಯು “ಸ್ಲೋ ಮೋಷನ್” ಹಾಡು ಈ ವರ್ಷದ ಸೂಪರ್ ಹಿಟ್ ಹಾಡುಗಳ ಪಟ್ಟಿ ಸೇರಿದೆ.

ವಿಶಾಲ್-ಶೇಖರ್ ರೈ ಸಂಗೀತ ನಿರ್ದೇಶನ ದಿಲ್ಲಿ ಮೂಡಿಬಂದಿರುವ ಭಾರತ್ ಚಿತ್ರ ದ ಹಾಡುಗಳು ಈಗಾಗಲೇ ಬಾಲಿವುಡ್ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಸಲ್ಮಾನ್ ಖಾನ್ ರ ಯಶಸ್ಸಿನ ಕಿರೀಟಕ್ಕೆ ಭಾರತ್ ಮತ್ತೊಂದು ಗರಿ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

‘ಪೈಲ್ವಾನ್’​ ಪೋಸ್ಟರ್ ರಿಲೀಸ್ ; ಕಿಚ್ಚನ ರಗಡ್ ಲುಕ್‌ಗೆ ಅಭಿಮಾನಿಗಳು ಫಿದಾ..!

Published

on

ಸುದ್ದಿದಿನ, ಬೆಂಗಳೂರು : ಕಿಚ್ಚ ಸುದೀಪ್​ ನಟನೆಯ ಬಹು ನಿರೀಕ್ಷಿತ ‘ಪೈಲ್ವಾನ್’​ ಚಿತ್ರದ ಪೋಸ್ಟರ್​ ರಿಲೀಸ್​ ಆಗಿದೆ. ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ​ಸದ್ಯ ಚಿತ್ರತಂಡ, ಚಿತ್ರದ ಮತ್ತೊಂದು ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶೇಷ ಅಂದ್ರೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿವೆ. ಇನ್ನೂ ಚಿರಂಜೀವಿ, ವಿಜಯ್​ ಸೇತುಪತಿ, ಮೋಹನ್​ಲಾಲ್​, ಸುನೀಲ್​ ಶೆಟ್ಟಿ ಚಿತ್ರದ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ವಿಶ್​ ಮಾಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಕೃಷ್ಣ ನಿರ್ದೇಶನವಿದ್ದು, ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending