Connect with us

ಸಿನಿ ಸುದ್ದಿ

ಮರಾಠರನ್ನು ಕೆಣಕಿದ‌ ನಿರ್ಮಾ ಜಾಹೀರಾತು : ನಟ ಅಕ್ಷಯ್ ಕುಮಾರ್ ವಿರುದ್ಧ ದೂರು ದಾಖಲು

Published

on

ಸುದ್ದಿದಿನ,ಮುಂಬೈ: ನಿರ್ಮಾ ಡಿಟರ್ಜಂಟ್ ಜಾಹೀರಾತಿನಲ್ಲಿ ಮರಾಠಾ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅಕ್ಷಯ್ ಕುಮಾರ್ ವಿರುದ್ಧ ಇಬ್ಬರು ವ್ಯಕ್ತಿಗಳು ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಅಕ್ಷಯ್ ಕುಮಾರ್ ಮರಾಠಾ ಯೋಧ ಎಂದು ತೋರಿಸಿದ ನಿರ್ಮಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಮರಾಠಿ ಸಂಸ್ಕೃತಿಯನ್ನು ಕೆಣಕಿದ್ದಾರೆ. ಶಿವಾಜಿ ಮಹಾರಾಜರ ಅನುಯಾಯಿಗಳ ಭಾವನೆಗಳನ್ನು ನೋಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಾಹೀರಾತು ಚಿತ್ರದಲ್ಲಿ ಕುಮಾರ್ ಅವರನ್ನು ಮರಾಠಾ ಯೋಧ ಎಂದು ಚಿತ್ರಿಸಲಾಗಿದೆ.

ಜಾಹೀರಾತಿನಲ್ಲಿ, ಅಕ್ಷಯ್ ಯುದ್ಧದಿಂದ ಹಿಂತಿರುಗಿರುವುದನ್ನು ಕಾಣಬಹುದು ಮತ್ತು ತಕ್ಷಣವೇ ಅವನ ಹೆಂಡತಿಯು ಕೊಳಕು ಬಟ್ಟೆಗಳಿಗಾಗಿ ದೂಷಿಸುತ್ತಾಳೆ. ನಂತರ ಅವನು ತನ್ನ ಬಟ್ಟೆಗಳನ್ನು ಒಗೆಯಲು ಡಿಟರ್ಜೆಂಟ್ ಅನ್ನು ಹೊರತೆಗೆಯುತ್ತಾನೆ. ಇದು ಮರಾಠಾ ಸಮುದಾಯವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಖಿಲಾಡಿ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.

ನಿರ್ಮಾ ಜಾಹೀರಾತು

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಕನ್ನಡದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ್ ಇನ್ನಿಲ್ಲ..!

Published

on

ಸುದ್ದಿದಿನ,ಬೆಂಗಳೂರು : ಸ್ಯಾಂಡಲ್ ವುಡ್ ನ ಹಾಸ್ಯ ನಟ ಬುಲೆಟ್ ಪ್ರಕಾಶ್ (45)ಇಂದು ಕಿಡ್ನಿ ವೈಫಲ್ಯದಿಂದ ಮೃತರಾಗಿದ್ದಾರೆ.

ಇತ್ತೀಚೆಗೆ ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಮೂಲಕ ಸ್ವಲ್ಪ ಚೇತರಿಸಿಕೊಂಡಿದ್ದರು. ಇವರು ಚಾಲೆಂಚಿಂಗ್ ಸ್ಟಾರ್ ದರ್ಶನ್ ಅಭಿನಯದ ಸುಂಟರಗಾಳಿ ಸಿನೆಮಾ ಸೇರಿದಂತೆ ಬಹುತೇಕ ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಸಾಧು ಕೂಕಿಲಾ ಹಾಗೂ ಬುಲೆಟ್ ಪ್ರಕಾಶ್ ಅವರ ಹಾಸ್ಯ ಜೋಡಿ ಜನಮೆಚ್ಚುಗೆ ಪಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಕೊರೋನಾ ವೈರಸ್ | ಸ್ಟಾರ್ ಗಾಯಕಿಗೆ ವೈದ್ಯರಿಂದ ಕ್ಲಾಸ್

Published

on

ಸುದ್ದಿದಿನ ಡೆಸ್ಕ್ : ಕೊರೊನಾ ವೈರಸ್ ವಿಚಾರದಲ್ಲಿ ಮೂರ್ಖತನದಿಂದ ವರ್ತಿಸಿ ಟೀಕೆಗೆ ಒಳಗಾಗಿರುವ ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ತಪರಾಕಿ ನೀಡಿದೆ. ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ತಾವು ಪಾರ್ಟಿಗಳಲ್ಲಿ ಭಾಗವಹಿಸಿಲ್ಲ, ತಮಗೆ ಯಾರೂ ಪಾರ್ಟಿಗಳಲ್ಲಿ ಭಾಗವಹಿಬಾರದು ಎಂದು ಸಲಹೆ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದ್ದ ಕನಿಕಾ, ಈಗ ಆಸ್ಪತ್ರೆ ವಿರುದ್ಧ ವರಾತ ಆರಂಭಿಸಿದ್ದಾರೆ.

ಆಸ್ಪತ್ರೆಯಲ್ಲಿ ದೂಳು ಇದೆ, ಇಲ್ಲಿ ಸೌಲಭ್ಯ ಇಲ್ಲ, ಜ್ವರ ಇದೆ ಎಂದರೆ ವೈದ್ಯರು ನೋಡುತ್ತಿಲ್ಲ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ಆಸ್ಪತ್ರೆ, ಕನಿಕಾ ಅವರಿಗೆ ಆಸ್ಪತ್ರೆಯಲ್ಲಿನ ಅತ್ಯುತ್ತಮ ಸೌಲಭ್ಯವನ್ನು ಒದಗಿಸಲಾಗಿದೆ. ಅವರು ರೋಗಿಯಂತೆ ವರ್ತಿಸಬೇಕೇ ವಿನಾ ಸ್ಟಾರ್‌ ರೀತಿ ಅಲ್ಲ ಎಂದು ಹೇಳಿದೆ.

Continue Reading

ಸಿನಿ ಸುದ್ದಿ

ವಿಡಿಯೋ | ಅಪ್ಪು-ಡಾಲಿಯ ‘ಯುವರತ್ನ’ ಪಂಚಿಗ್ ಡೈಲಾಗ್ ಟೀಸರ್ ರಿಲೀಸ್..!

Published

on

ಸುದ್ದಿದಿನ, ಡೆಸ್ಕ್ : ಪುನೀತ್ ರಾಜ್‍ಕುಮಾರ್ ಅಭಿನಯದ, ಬಹು ನಿರೀಕ್ಷಿಯ ‘ಯುವರತ್ನ’. ಸಿನೆಮಾದ ಟೀಸರ್ ರಿಲೀಸ್ ಆಗಿದೆ. ಪುನೀತ್ ರ ಆ್ಯಕ್ಷನ್ ಲುಕ್, ಫೈಟಿಂಗ್ ಸೀನ್ ಚೆನ್ನಾಗಿ ಮೂಡಿಬಂದಿದ್ದು, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಈ ಸಿನೆಮಾದ ಇನ್ನೊಂದು ವಿಶೇಷ ಟಗರು ಡಾಲಿ ಧನಂಜಯ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಟೀಸರ್ ನ ಆರಂಭದಲ್ಲೇ ಡಾಲಿಯ ಡೈಲಾಗ್ ರೋಮಾಂಚನಗೊಳಿಸುವಂತಿದೆ. ಸಿನೆಮಾಗೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದು, ತಮನ್ ಸಂಗೀತ ನೀಡಿದ್ದಾರೆ.

ಟೀಸರ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/tC1U5wGSIm8

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending