Connect with us

ಸಿನಿ ಸುದ್ದಿ

ನಟಸಾರ್ವಭೌಮ ವಿಜಯೋತ್ಸವ | ದಾವಣಗೆರೆ ನನ್ನ ಫೇವರೆಟ್ ಪ್ಲೇಸ್ ಗಳಲ್ಲೊಂದು ಎಂದ್ರು ಅಪ್ಪು..!

Published

on

ಸುದ್ದಿದನ, ದಾವಣಗೆರೆ: ನಟಸಾರ್ವಭೌಮ ಚಿತ್ರ 25 ದಿನ ಪೂರೈಸಿದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಮೂವರು ಒಟ್ಟಾಗಿ ಸಿನಿಮಾ ಮಾಡುತ್ತೇವೆ ಎಂದ ಅವರು, ನಟಸಾರ್ವಭೌಮ 25 ದಿನ ಪೂರೈಸಿದೆ. ಅದಕ್ಕಾಗಿ ದಾವಣಗೆರೆಗೆ ಭೇಟಿ ನೀಡಿದ್ದೇನೆ. ಅಲ್ಲದೆ, ದಾವಣಗೆರೆ ನನ್ನ ಪೇವರೆಟ್‌ ಪ್ಲೇಸ್‌ ನನಗೆ ಸಖತ್‌ ಇಷ್ಟ ಎಂದು ಹೇಳಿದರು.

ನಟ ಶಿವಣ್ಣ, ರಾಘಣ್ಣ ಹಾಗೂ ನಾನು ಒಟ್ಟಾಗಿ ಸಿನಿಮಾ ಮಾಡಬೇಕೆಂಬ ಆಸೆ ಬಹುದಿನಗಳದ್ದು. ಆದರೆ, ಅದಕ್ಕೆ ಟೈಮ್‌ ಇನ್ನೂ ಕೂಡಿ ಬಂದಿಲ್ಲ. ಮೂವರಿಗೂ ಒಪ್ಪುವ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇವೆ ಎಂದು ನಟ ಪುನೀತ್‌ ರಾಜ್‌ಕುಮಾರ್‌ ತಿಳಿಸಿದರು.

ಮಂಡ್ಯದಲ್ಲಿ ಚುನಾವಣೆಗೆ ಯಾರು ಸ್ಪರ್ಧಿಸಬೇಕು? ನಟಿ ಸುಮಲತ ಅವರಿಗೆ ಬೆಂಬಲ ನೀಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುನೀತ್‌, ನಟ, ನಟಿಯರ ರಾಜಕೀಯದ ಪ್ರವೇಶದ ಬಗ್ಗೆ ನಾನು ಏನೂ ಹೇಳೋಲ್ಲ, ನಾನೊಬ್ಬ ನಟ ಅಷ್ಟೆ, ನಮ್ಮ ಕುಟುಂಬ ಯಾವೂದೇ ಕಾರಣಕ್ಕೂ ರಾಜಕೀಯ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಯುವರತ್ನ ಚಿತ್ರೀಕರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಎಂದರು.

ರೋಡ್ ಶೋ

ನಟ ಸಾರ್ವಭೌಮ ಚಿತ್ರ 25 ದಿನ ಪೂರೈಸಿದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ನಟ ಪುನಿತ್‌ ರಾಜಕುಮಾರ್‌ ಆಗಮಿಸಿ ಕೇಂದ್ರ ಬಸ್‌ ನಿಲ್ದಾಣದಿಂದ ಚಿತ್ರಮಂದಿರದವರೆಗೆ ರೋಡ್‌ ಮಾಡಬೇಕೆಂದಿದ್ದರು. ಆದರೆ, ಹೊಸಬಸ್‌ ನಿಲ್ದಾಣದೆದುರು ರೋಡ್‌ ಶೋ ವಾಹನ ಏರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡು, ತಳ್ಳಾಟ, ನೂಕಾಟ ಆರಂಭಿಸಿದರು. ಇದರಿಂದ ಅನಿವಾರ್ಯವಾಗಿ ಪೊಲೀಸರು ಲಾಠಿ ಬೀಸಿ, ಅಭಿಮಾನಿಗಳನ್ನು ಚದುರಿಸಿದರು. ನಂತರ ತುಸುಕಾಲ ರೋಡ್‌ ಶೋ ನಡೆಸಿ, ನೇರವಾಗಿ ಗೀತಾಂಜಲಿ ಚಿತ್ರಮಂದಿರಕ್ಕೆ ಆಗಮಿಸಿದರು. ಆದರೆ, ಅದಾಗಲೇ ಮೂರ್ನಾಲ್ಕು ಗಂಟೆಗಳ ಕಾಲ ಕಾದಿದ್ದ ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ ಕಾರಿನಿಂದ ಇಳಿಯುತ್ತಿದ್ದಂತೆ ಮತ್ತೆ ಮುತ್ತಿಗೆ ಹಾಕಿದರು.

ನೂಕಾಟ, ತಳ್ಳಾಟ ಹೆಚ್ಚಾಯಿತು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲಾಗದೇ ಲಾಠಿ ಜಾರ್ಜ್‌ ನಡೆಸಿದರೂ ಅಭಿಮಾನಿಗಳು ನಿಯಂತ್ರಣಕ್ಕೆ ಬರಲಿಲ್ಲ. ಇದರಿಂದ ಬೇಸತ್ತ ನಟ ಪುನೀತ್‌ರಾಜ್‌ಕುಮಾರ್‌ ಚಿತ್ರಮಂದಿರದ ಒಳಕ್ಕೂ ಹೋಗದೇ, ಅಭಿಮಾನಿಗಳೊಂದಿಗೆ ಮಾತೂ ಆಡದೇ ಕಾರ್‌ ಏರಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.

ಈ ಸಂದರ್ಭ ನಿರ್ಮಾಪಕ ಪವನ್‌ ಒಡೆಯರ್‌, ಶಿವರಾಜ್‌ಕುಮಾರ್‌ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಯೋಗೀಶ್‌, ಗೌರವಾಧ್ಯಕ್ಷ ಬಿ. ವಾಸುದೇವ್‌, ಕಾರ್ಯದರ್ಶಿ ಪ್ರಕಾಶ್‌, ದುರ್ಗೇಶ್‌ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ

ವಿಡಿಯೋ | ‘ಯಜಮಾನ’ ನ ‘ಒಂದು ಮುಂಜಾನೆ’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ..!

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನೆಮಾ ತೆರೆಕಂಡ ಅಷ್ಟೂ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿರುವ ಈ ಸಿನೆಮಾದ ಹಾಡುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶಿವನಂದಿ ಹಾಡನ್ನು ಪ್ರೇಕ್ಷಕರು ಮೆಚ್ಚಿ ಹಾರೈಸಿದ್ದಾಯಿತು. ಈಗ ‘ ಒಂದು ಮುಂಜಾನೆ’ ವಿಡಿಯೋ ಸಾಂಗ್ ಇಂದು ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಐದು ಲಕ್ಷ ವೀಕ್ಷಣೆಯತ್ತ ಮುನ್ನುಗ್ಗುತ್ತಿದೆ.

ಒಂದು ಮುಂಜಾನೆ ಹಾಡು ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ..!

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಕಾಮಿಡಿ ಕಿಲಾಡಿ ನಟ ಚಿಕ್ಕಣ್ಣ ಅವರು ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಮೈಸೂರು ಮೃಗಾಲಯದಲ್ಲಿ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.

ಈ ಚಿರತೆಯನ್ನು ಒಂದು ವರ್ಷದ ಅವಧಿಗೆ 35ಸಾವಿರ ರೂ ನೀಡಿ ದತ್ತು ಪಡೆದಿದ್ದಾರೆ ಚಿಕ್ಕಣ್ಣ. ಅಂದಹಾಗೆ ಚಿಕ್ಕಣ್ಣ ದತ್ತು ಪಡೆದ ಚಿರತೆಗೆ ‘ ಭೈರ’ ಎಂದು ನಾಮಕರಣ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ವಿಡಿಯೋ | ಅಭಿಮಾನಿಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ : ಪುನೀತ್ ರಾಜ್‍ಕುಮಾರ್

Published

on

ಸುದ್ದಿದಿನ,ಬೆಂಗಳೂರು: ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ.ಫ್ಯಾನ್ಸ್ ತರುವ ಹಲವು ಗಿಫ್ಟ್ ಗಳು ಖುಷಿ ಕೊಡುತ್ತೆ ಎಂದು ಬರ್ತಡೇ ಬಾಯ್ ಪುನೀತ್ ರಾಜಕುಮಾರ್ ಹೇಳಿದರು.

ಈ ವರ್ಷ ಯುವರತ್ನ ಬಿಡುಗಡೆಯಾಗುತ್ತದೆ. ಜೇಮ್ಸ್ ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೇಮ್ಸ್ ಮೊದಲ ಪೋಸ್ಟರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್ ಇಲ್ಲ. ಅಭಿಮಾನಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ ನನಗೆ ಹಾಗೆ‌ ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ದೊರಕಿರುವುದು ಖುಷಿ ಕೊಟ್ಟಿದೆ ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ ಎಂದರು.

ನಂತರ ಅಭಿಮಾನಿಗಳನ್ನ ಭೇಟಿ ಮಾಡಿದ ಅಪ್ಪು ಸಂತಹ ಹಂಚಿಕೊಂಡರು. ಅಭಿಮಾಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ.ಪ್ರತೀ ಬಾರಿ ರಾತ್ರಿ ಮನೆಹತ್ರ ಬಂದು ಕಷ್ಟ ಪಡ್ತಿದ್ರು ಹಾಗಾಗಿ ರಾತ್ರಿ ಸೆಲೆಬ್ರೇಷನ್ ಬೇಡ ಅಂದುಕೊಂಡೆ. ಅದಕ್ಕೆ ಅಭಿಮಾನಿಗಳು ಸಹಕರಿಸಿದ್ದಾರೆ ಎಂದರು.

ಯುವರತ್ನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಪಾತ್ರ. ಧಾರವಾಡ ಕಾಲೇಜ್ ನಲ್ಲಿ ಶೂಟಿಂಗ್ ಮಾಡಿದ್ವಿ ಸಾಕಷ್ಟು ಕಲಿತಿದ್ದೇನೆ. ಇನ್ನೂ ಇವತ್ತು ಜೇಮ್ಸ್ ಚಿತ್ರದ ಟೀಸರ್ ಕೂಡ ರಿಲೀಸ್ ಆಗ್ತಿದೆ.ಚಿಕ್ಕ ವಯಸ್ಸಿಂದಲೂ ಗಿಫ್ಟ್ ಅಂದ್ರೆ ಇಷ್ಟ. 18 ವರ್ಷದವನಿದ್ದಾಗ ಅಪ್ಪ ಅಮ್ಮ ನನಗೆ ಕಾರ್ ಗಿಫ್ಟ್ ಕೊಟ್ಟಿದ್ರು ಅದೇ ನಾನು ಮರೆಯಲಾಗದ ಗಿಫ್ಟ್ ಎಂದರು.

ಇನ್ನೂ ಈಗ ಬೇಸಿಗೆ ಬಂದಿದೆ ನಾವುಗಳೆಲ್ಲಾ ಕಾಡು ಕಡಿದು ಮನೆ ಮಾಡಿಕೊಂಡಿದ್ದೇ
ಎಲ್ಲರೂ ಮನೆ ಮುಂದೆ ನೀರಿಟ್ಟು ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಿ ಎಂದರು ಪುನೀತ್ ರಾಜ್ ಕುಮಾರ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending