Connect with us

ಸಿನಿ ಸುದ್ದಿ

ಕಿಚ್ಚನ ಹುಟ್ಟುಹಬ್ಬಕ್ಕೆ ‘ಕೊಟಿಗೊಬ್ಬ3’ ಟೀಸರ್ ರಿಲೀಸ್ ಆಯ್ತು ; ವಿಡಿಯೋ ನೋಡಿ..!

Published

on

ಕಿಚ್ಚ ಸುದೀಪ್ ಅಭಿನಯದ ಬಹು‌ನಿರೀಕ್ಷಿತ ಸಿನೆಮಾ ‘ಕೋಟಿಗೊಬ್ಬ3’. ಇಂದು ಕಿಚ್ಚನ ಹುಟ್ಟು ಹಬ್ಬಕ್ಕೆ ಚಿತ್ರ ತಂಡ‌ ಈ ಸಿನೆಮಾದ ಟೀಸರ್ ಲಾಂಚ್ ಮಾಡಿದೆ. ಕಿಚ್ಚನ ಖಡಕ್ ಲುಕ್ ಈ ಸಿನೆಮಾದಲ್ಲೂ ಅಭಿಮಾನಿಗಳ ಮನಗೆಲ್ಲುವುದರಲ್ಲಿ‌ ಅನುಮಾನ ವಿಲ್ಲ.

ಟೀಸರ್ ನೋಡಿ..!

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ

ಬೆಂಗಳೂರಿಗೆ ಬಂದಿಳಿದ ‘ನವಜೋಡಿ‌‌ ದೀಪಿಕಾ ರಣವೀರ್’

Published

on

ಸುದ್ದಿದಿನ,ಬೆಂಗಳೂರು : ಸಿನಿ ಪ್ರಿಯರ ರಸಿಕತೆಯ ಬಾಲಿವುಡ್‌ನ ಜನಪ್ರಿಯ ತಾರಾ ಜೋಡಿ ಕೆಎಐಎಲ್ ಗೆ ದೀಪಿಕಾ ರಣವೀರ್ ಬೆಂಗಳೂರಿಗೆ ಆಗಮಿಸಿದ್ದಾರೆ.

ಇಟಲಿಯಲ್ಲಿ ಸಪ್ತಪದಿತುಳಿದ ದಂಪತಿಗಳಿಗೆ ಈಗ ಬೆಂಗಳೂರಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕುಟುಂಬದವರು ಹಮ್ಮಿಕೊಂಡಿದ್ದಾರೆ. ಮದುವೆಯ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಜೋಡಿಗೆ, ಕರ್ನಾಟಕದ ಅಳಿಯನಿಗೆ ಏರ್ ಪೋರ್ಟನಲ್ಲಿ ಅಭಿಮಾನಿಗಳ ಅದ್ದೂರಿ ಸ್ವಾಗತಕೋರಲಾಯಿತು.

ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವ ಜೋಡಿ ಕುಟುಂಬದೊಂದಿಗೆ ಬಂದಿಳಿದರು. ಇವರನ್ನು ಹಾಗೂ ಬಾಲಿವುಡ್ ಸ್ಟಾರ್ ನಟರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

ನವೆಂಬರ್ 21ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನವ ದಂಪತಿಗಳ ಅರತಕ್ಷತೆ ಕಾರ್ಯಕ್ರಮಕ್ಕೆಬಾಲಿವುಡ್‌ ಮತ್ತು ದಕ್ಷಿಣ ಭಾರತದ ಸಿನಿಮಾ ತಾರೆಯರು ಮತ್ತು ಗಣ್ಯರು ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ‘ಆರೆಂಜ್’ ಸಿನೆಮಾ ರಿಲೀಸ್ ಗೆ ರೆಡಿ..!

Published

on

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಆರೆಂಜ್’ ಸಿನೆಮಾ ಇನ್ನೇನು ತೆರೆಕಾಣಲು ಸಜ್ಜಾಗಿದೆ. ‘ಝೂಮ್’ ಸಿನೆಮಾ ನಿರ್ದೇಶನ ಮಾಡಿದ್ದ ಪ್ರಶಾಂತ್ ರಾಜ್ ಈ ಸಿನೆಮಾಗೂ ಆಕ್ಷನ್ ಕಟ್ ಹೇಳಿದ್ದಾರೆ.

ಝೂಮ್ ಸಿನೆಮಾದಲ್ಲಿ ಗಣೇಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಮೋಡಿ ಮಾಡಿತ್ತು. ಹಾಗೇ ಆ ಸಿನೆಮಾದ ಕಾಮಿಡಿಯೂ ತುಂಬಾನೆ ವರ್ಕೌಟ್ ಆಗಿತ್ತು. ಅಭಿಮಾನಿಗಳು ಈ ಸಿನೆಮಾದಿಂದಲೂ ಗಣೇಶ್ ಕಾಮಿಡಿಯನ್ನ ತುಂಬಾ ನಿರೀಕ್ಷಿಸಿದ್ದಾರೆ.

ಅಂದಹಾಗೆ ಈ ಸಿನೆಮಾದ ಟ್ರೇಲರ್ ನ.24 ರಂದು ಹಾಗೂ ಸಿನೆಮಾ ಡಿ.7 ಕ್ಕೆ ರಿಲೀಸ್ ಆಗಲಿದೆ.

Continue Reading

ದಿನದ ಸುದ್ದಿ

ಕಿಚ್ಚ ಸುದೀಪ್’ಗೆ ‘ಸ್ಯಾಂಡಲ್’ವುಡ್ ಬಾದಶಾಷ್’ ಹೊಸ ಬಿರುದು; ಅಭಿಮಾನಿಗಳು ಫುಲ್ ಖುಷ್

Published

on

ಸುದ್ದಿದಿನ ಬೆಂಗಳೂರು: ಅಭಿನವ ಚಕ್ರವರ್ತಿ, ಕಿಚ್ಚ, ಮಾಣಿಕ್ಯ ಎಂಬ್ಯಾದಿ ಅನೇಕ ಬಿರುದುಗಳಿಂದ ಕರೆಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರಿಗ ಪೈಲ್ವಾನ್ ಚಿತ್ರತಂಡ ಮತ್ತೊಂದು ಬಿರುದು ನೀಡಿದ್ದು ಅಭಿಮಾನಿಗಳ ಪ್ರೀತಿ ಪಾತ್ರವಾಗಿದೆ. ಅಲ್ಲದೇ ಈವರೆಗೂ ಬಾಡಿ ಬಿಲ್ಡಿಂಗ್ ಬಗ್ಗೆ ತಲೆಕೆಡಿಸಿಕೊಳ್ಳದ ಕಿಚ್ಚ ಸುದೀಪ್, ಪೈಲ್ವಾನ್’ಗಾಗಿ ದೇಹ ದಂಡಿಸಿ ಹುರಿಗೊಳಿಸಿದ್ದು, ಈಗ ಅದರ ಪೋಸ್ಟರ್ ಬಿಡುಗಡೆಯಾಗಿ ಸಖತ್ ವೈರಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ

ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒದಗಿಸುವ ಸುದೀಪ್, ಪೈಲ್ವಾನ್ ಚಿತ್ರಕ್ಕಾಗಿ ಸುಮಾರು ಐದಾರು ತಿಂಗಳು ಬಾಡಿ ಬಿಲ್ಡಪ್ ಮಾಡಿ ದೇಹವನ್ನು ದಂಡಿಸಿ ಥೇಟ್ ಪೈಲ್ವಾನ್ ಆಗಿ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲಿ ಶಾರೂಕ್ ಖಾನ್‌ಗೆ ಮಾತ್ರ ಬಾದಶಾಷ್ ಕರೆಯುತ್ತಾರೆ. ಬಾಡಿ ಬಿಲ್ಡ್ ಮಾಡಿ ಪೈಲ್ವಾನ್ ಆಗಿರುವ ಕಿಚ್ಚ ಸುದೀಪ್ ಗೆ ಸ್ವತಃ ಚಿತ್ರತಂಡವೇ ಬಾದಶಾಷ್ ಎಂದು ಬಿರುದು ನೀಡಿ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ.

ಇದುವರೆಗೂ ಸುದೀಪ್ ಮಾಡಿರುವ ಚಿತ್ರಗಳಲ್ಲಿ ವಿಭಿನ್ನ ಚಿತ್ರ ಇದಾಗಲಿದ್ದು, ಸುದೀಪ್ ರ ಹೊಸ ಗೆಟಪ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಪೈಲ್ವಾನ್ ನನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೆಬ್ಬುಲಿ ನಿರ್ದೇಶಿಸಿದ್ದ ಕೃಷ್ಣ ಅವರಿಗೆ ಸುದೀಪರೊಂದಿಗಿನ ಎರಡನೇ ಚಿತ್ರವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕರುಣಾಕರ್ ಕ್ಯಾಮೆರಾ ಹಿಡಿದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending