Connect with us

ಸಿನಿ ಸುದ್ದಿ

‘ಪುಟ್ಟಣ್ಣ ಕಣಗಾಲ್’ ನಮ್ಮ ನಾಡು ಕಂಡ ಸಾಮಾಜಿಕ ಕಳಕಳಿಯುಳ್ಳ ಶ್ರೇಷ್ಠ ಚಲನಚಿತ್ರ ನಿರ್ದೇಶಕ

Published

on

  • ಕ್ರಾಂತಿರಾಜ್ ಒಡೆಯರ್ ಎಂ,ಪ್ರಾಧ್ಯಾಪಕರು, ಮೈಸೂರು

1970 ರ ಸಂದರ್ಭದಲ್ಲಿ, ಕನ್ನಡ ಚಿತ್ರರಂಗದಲ್ಲಿ, ಬರೀ ಪೌರಾಣಿಕ ಚಲನಚಿತ್ರಗಳು ತಯಾರಾಗುತ್ತಿದ್ದುದ್ದು ಒಂದೆಡೆಯಾದರೆ, ಮತ್ತೊಂದೆಡೆ ಸಾಮಾಜಿಕ ಪಿಡುಗುಗಳ ಆಚರಣೆಯಲ್ಲಿ ತಲ್ಲೀನವಾಗಿ, ಬುದ್ದಿಗೆ ಜಡ್ಡು ಹಿಡಿಸಿಕೊಂಡಿದ್ದ ಸಮಾಜ. ಈ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಥೆಗಳನ್ನು ಹುಡುಕಿ, ಚಿತ್ರಗಳನ್ನು ಮಾಡಿ, ಚಿತ್ರರಂಗಕ್ಕೆ ಹೊಸತನ್ನು ಕಲಿಸಿಕೊಟ್ಟದ್ದೂ ಅಲ್ಲದೇ, ತಮ್ಮ ಚಿತ್ರಗಳನ್ನೇ ಸಮಾಜಕ್ಕೆ ಕನ್ನಡಿಯ ಹಾಗೆ ಹಿಡಿದು, ಸಮಾಜವೇ ತನ್ನ ಬಗ್ಗೆ ಅಸಯ್ಯ ಪಡುವಂತೆ ಮಾಡಿದ ಶ್ರೇಯಸ್ಸು ಚಲನಚಿತ್ರ ಇತಿಹಾಸ ಕಂಡ ಶ್ರೇಷ್ಠ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ.

ಅಂದಿನ ವಸಾಹತುಶಾಯಿ ಮನಸ್ಥಿತಿಯ, ಸಾಮಾಜಿಕ ಬದಲಾವಣೆಯನ್ನೇ ಒಪ್ಪಿಕೊಳ್ಳದ ಸಾಮಾಜಿಕ ವ್ಯವಸ್ಥೆಯಲ್ಲಿ, ಸಾಮಾಜಿಕ ಕ್ರಾಂತಿ ಆಧಾರಿತ ಚಿತ್ರಗಳನ್ನು ತಯಾರಿಸಿ, ಹೆಚ್ಚು ಹೆಚ್ಚು ಜನ ಆ ಚಿತ್ರಗಳನ್ನು ನೋಡುವಂತೆ ಮಾಡಿದವರು ಪುಟ್ಟಣ್ಣ ಕಣಗಾಲ್. ತುಂಬ ಚಿಕ್ಕ ವಯಸ್ಸಿಗೆ ಸಾವಿಗೀಡಾದ ಪುಟ್ಟಣ್ಣ, ಹಲವಾರು ಪ್ರಯೋಗಗಳ ಮೂಲಕ ಕನ್ನಡ ಚಲನಚಿತ್ರ ಇತಿಹಾಸದಲ್ಲೇ ಅದ್ಬುತ ಹೆಸರನ್ನು ಮಾಡಿ ತಮ್ಮ ಛಾಪನ್ನು ಮೂಡಿಸಿದರು.

ಜಾತಿ ಧರ್ಮಗಳೇ ಉಸಿರಾಗಿದ್ದ 70 ರ ದಶಕದಲ್ಲಿ, ಅಂತರಧರ್ಮೀಯ ಪ್ರೀತಿಯನ್ನು ಸಾರುವ ನಾಗರಹಾವು ಚಿತ್ರವನ್ನು ಸಮಾಜಕ್ಕೆ ಕೊಟ್ಟವರು ಪುಟ್ಟಣ್ಣ.

ತಮ್ಮ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ, ಜಮೀನ್ದಾರಿ ಪದ್ಧತಿ ಹಾಗು ಸಾಮಾಜಿಕ ಅನ್ಯಾಯಗಳ ವಿರುದ್ಧ ಗ್ರಾಮದ ಯುವಕರು ಸಿಡಿದು ಬೀಳುವ ವಿಷಯವನ್ನು ತೆಗೆದುಕೊಂಡು, ಅಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸಮಾಜವಾದಿ ಸಿದ್ದಾಂತದ ಕಡೆಗೆ ಯುವಕರು ವಾಲುವಂತೆ ಮಾಡಿದವರು ಪುಟ್ಟಣ್ಣ.

1981 ರಲ್ಲಿ ಅಷ್ಟು ಯಶಸ್ಸು ಕಾಣದ ರಂಗನಾಯಕಿ ಚಿತ್ರದಲ್ಲಿ, ಮಗನೇ ತಾಯಿಯನ್ನು ಬಯಸುವ ಕಥೆಯುಳ್ಳ ಚಿತ್ರವನ್ನು ನೋಡಿದರೆ, “ಈಡಿಪಸ್” ಕಥೆ ನೆನಪಾಗುತ್ತದೆ. ಇಂದಿಗೂ ಕೂಡ ರಂಗನಾಯಕಿ ಚಿತ್ರವನ್ನು ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಹೆಣ್ಣು ತನ್ನ ಸ್ವತಂತ್ರ ಚಿಂತನೆಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವುದನ್ನು ಎಂದಿಗೂ ಬಯಸದ ಸಮಾಜಕ್ಕೆ, ಒಂದು ಗಂಡು, ಹೆಣ್ಣಿನ ಸ್ವಾತಂತ್ರ ಹಾಗು ಸ್ವಾವಲಂಬನೆಯನ್ನು ಇಷ್ಟಪಡುವುದೂ ಅಲ್ಲದೇ, ಅದನ್ನು ಪ್ರೇರೇಪಿಸುವ ವಿಷಯವನ್ನು ಇಟ್ಟುಕೊಂಡು ಶುಭಮಂಗಳ ಚಿತ್ರವನ್ನ ಕೊಟ್ಟವರು ಪುಟ್ಟಣ್ಣ ಕಣಗಾಲ್.

ಹಣ ಹಾಗು ಅಧಿಕಾರದ ಮದದಲ್ಲಿ ಬದುಕುವ ಶ್ರೀಮಂತ ಮನೆತನದ ಮಕ್ಕಳು, ಕಷ್ಟ ಪಟ್ಟು ದುಡಿದು ತಿನ್ನುವುದನ್ನ ಮೈಗೂಡಿಸಿಕೊಳ್ಳುವುದೂ ಅಲ್ಲದೇ, ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವ ವಿಭಿನ್ನ ಚಿಂತನೆಯ ಕಥೆಯನ್ನು ಧರಣಿಮಂಡಲ ಮಧ್ಯದೊಳಗೆ ಚಿತ್ರದ ಮೂಲಕ ಕೊಟ್ಟವರು ಪುಟ್ಟಣ್ಣ.

ಶ್ರೀಮಂತ ಸ್ನೇಹಿತನಿಂದ ಶೋಷಣೆಗೆ ಒಳಗಾಗಿದ್ದ ಒಂದು ಹೆಣ್ಣನ್ನು, ಅವಳಿಗೆ ಸಮಾಜದಲ್ಲಿ ಕೆಟ್ಟ ಹೆಸರು ಬರಬಾರದೆಂದು, ಅವಳನ್ನು ಮದುವೆಯಾಗಿ, ಶ್ರೇಷ್ಠ ಬಾಂಧವ್ಯವನ್ನು ತೋರಿಸುವ ಯುವಕನ ಕತೆಯುಳ್ಳ ಅಮೃತ ಗಳಿಗೆಯಂತಹ ಚಿತ್ರ ಕೊಟ್ಟರು ಪುಟ್ಟಣ್ಣ. ಅವರ ಮಾನಸ ಸರೋವರ ಚಿತ್ರವಂತೂ, ಎಲ್ಲ ಪೀಳಿಗೆಯ ಭಗ್ನ ಪ್ರೇಮಿಗಳು ನೋಡಿ ಕಣ್ಣೀರಾಕುವ ಚಿತ್ರ.

ಹೀಗೆ ತಮ್ಮ ಚಿತ್ರಗಳ ಮೂಲಕ ಚಲನಚಿತ್ರ ರಂಗಕ್ಕೆ ಹೊಸ ಹೊಸ ನಟ ನಟಿಯರನ್ನು ಪರಿಚಯಿಸುವುದೂ ಅಲ್ಲದೇ, ಚಲನಚಿತ್ರಗಳ ಮೂಲಕ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾದ ಪುಟ್ಟಣ್ಣನವರು, ಹಲವು ಹಳೆ ಹಾಗು ಹೊಸ ತಲೆಮಾರಿನ ಚಿತ್ರ ನಿರ್ದೇಶಕರಿಗೆ ಒಂಥರಾ ಮೇಷ್ಟ್ರು. ಇವರ ಚಿತ್ರಗಳು ಹಲವು ಭಾಷೆಗಳಿಗೆ ರಿಮೇಕ್ ಆಗಿದ್ದು, ಇವರನ್ನು ಪಡೆದ ಕನ್ನಡ ಚಲನಚಿತ್ರ ರಂಗ ಹಾಗು ನಮ್ಮ ನಾಡು ಧನ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಕರುನಾಡ ಚಕ್ರವರ್ತಿಯ ‘ಆನಂದ್’ ಗೆ 34 ವರ್ಷಗಳ ಸಂಭ್ರಮ

Published

on

ಸುದ್ದಿದಿನ ಡೆಸ್ಕ್ : ಮೊದಲ ಚಿತ್ರದಲ್ಲೇ ಕರ್ನಾಟಕ ಜನಮನಗೆದ್ದು ಅಣ್ಣಾವ್ರ ಮಗನಾದರೂ ಸಹ ಅದರ ಹಂಗಿಲ್ಲದೆ ತನ್ನದೇ ಆದ ಛಾಪು ಮೂಡಿಸಿ ಅಂದಿನ ಕಾಲದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿಸಿಕೊಂಡು ಹೆಣ್ಣು ಮಕ್ಕಳ ಹೃದಯ ಕದ್ದು ಗಂಡೈಕ್ಳ ಎದೆಯೊಳಗೆ ಅಚ್ಚೆ ಹಾಕಿಸಿಕೊಂಡ ನಾಟ್ಯ ಚಕ್ರವರ್ತಿ ,ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಎಂಬ ಅಪ್ಪಟ ದೇಶೀ ಪ್ರತಿಭೆ ಅಭಿನಯಿಸಿದ ಪ್ರಪ್ರಥಮ ಚಿತ್ರ ಆನಂದ್ ಗೆ 34 ವರ್ಷಗಳ ಸಂಭ್ರಮ. ಮನೆಲಿ ,ಆಫೀಸಲ್ಲಿ ಫ್ರೀ ಇದ್ರೆ ಈ ಸಿನಿಮಾನ ಹಾಕೊಂಡ್ ನೋಡಿ ಮುಲಾಜಿಲ್ದೆ ಫ್ಯಾನಾಗೋಯ್ತೀರ.!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಸುಶಾಂತ್ ದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ : ನಟಿ ಕಂಗನಾ ರಣಾವತ್

Published

on

ಸುದ್ದಿದಿನ,ಮುಂಬೈ: ಭಾನುವಾರ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ ಯೋಜಿತ ಕೊಲೆ ಎಂದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ಆರೋಪ ಮಾಡಿದ್ದಾರೆ.

ಬಾಲಿವುಡ್‍ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಬಯೋಗ್ರಾಪಿ ‘ಧೋನಿ’ ಸಿನಿಮಾದಲ್ಲಿ ಅಭಿನಯಿಸಿ ಭಾರತ ಕಲಾರಸಿಕರ ಮನಗೆದ್ದಿದ್ದ ಸುಶಾಂತ್ ಸಿಂಗ್ ರಜಪೂತ್, ಭಾನುವಾರ ತಮ್ಮ ನಿಸವಾದಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈಗ ಈ ವಿಚಾರವಾಗಿ ಮಾತನಾಡಿರುವ ಕಂಗನಾ ಬಾಲಿವುಡ್‍ನಲ್ಲಿ ಇರುವ ತಾರತಮ್ಯದ ಬಗ್ಗೆ ಕಿಡಿಕಾರಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ಕಂಗನಾ, ಸುಶಾಂತ್ ಸಾವಿನಿಂದ ನಮಗೆ ಬಹಳ ದುಃಖವಾಗಿದೆ. ಆದರೆ ಕೆಲವರು ಅವನ ಸಾವಲ್ಲೂ ಕೂಡ ಆಟವಾಡುತ್ತಿದ್ದಾರೆ. ಎಂಜಿನಿಯರಿಂಗ್ ನಲ್ಲಿ ಟಾಪ್ ಮಾಡಿ, ರಾಂಕ್ ಹೋಲ್ಡರ್ ಆಗಿದ್ದ ವ್ಯಕ್ತಿ ಖಿನ್ನತೆಯಿಂದ ಬಳಲಲು ಸಾಧ್ಯನಾ? ಸುಶಾಂತ್ ಲಾಸ್ಟ್ ಪೋಸ್ಟ್ ಅನ್ನು ನೋಡಿ, ಅದರಲ್ಲಿ ಸುಶಾಂತ್ ಜನರಿಗೆ ತನ್ನ ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ. ನನಗೆ ಗಾಡ್ ಫಾದರ್ ಇಲ್ಲ, ನನ್ನನ್ನು ಸಿನಿಮಾದಿಂದ ತೆಗೆದು ಹಾಕುತ್ತಾರೆ ಎಂದು ಬೇಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಸುಶಾಂತ್ ಸಿನಿಮಾ ರಂಗಕ್ಕೆ ಬಂದು ಕಾಯ್ ಪೋಚೆನಂತಹ ಸಿನಿಮಾ ಮಾಡಿದ್ದಾರೆ. ಸ್ಟಾರ್ ಕಿಡ್‍ಗಳ ಡೆಬ್ಯು ಅವಾರ್ಡ್ ನೀಡುವವರು, ಸುಶಾಂತ್‍ಗೆ ಅವಾರ್ಡ್ ಯಾಕೆ ನೀಡಿಲಿಲ್ಲ. ಕೇದರ್ ನಾಥ್, ಧೋನಿ, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಗಲ್ಲಿಬಾಯ್ ರೀತಿಯ ಕೆಟ್ಟ ಸಿನಿಮಾಗಳಿಗೆ ಅವಾರ್ಡ್ ನೀಡುವ ನೀವು, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಗುಡ್ ಡೈರೆಕ್ಟರ್ ಗೆ ಯಾಕೆ ಪ್ರಶಸ್ತಿ ನೀಡುವುದಿಲ್ಲ ಎಂದು ನೇರವಾಗಿಯೇ ನೆಪ್ಟೋಯಿಸಂ ಬಗ್ಗೆ ಮಾತನಾಡಿದ್ದಾರೆ.

ನಾವು ಏನೇ ಮಾಡಿದರೂ ನೀವು ಒಪ್ಪುವುದಿಲ್ಲ. ನಾನು ಕೂಡ ಒಳ್ಳೆಯ ಸಿನಿಮಾ ಮಾಡಿದ್ದೇನೆ. ನಿರ್ಮಾಣ, ನಿರ್ದೇಶನ ಮಾಡಿದ್ದೇನೆ. ನಮ್ಮ ಸಿನಿಮಾವನ್ನು ನೀವು ಯಾಕೆ ಒಪ್ಪುವುದಿಲ್ಲ. ನನ್ನ ಮೇಲೆ ಯಾಕೆ 6 ದೂರುಗಳನ್ನು ದಾಖಲಿಸಿದ್ದೀರಾ? ಒಬ್ಬ ಪತ್ರಕರ್ತ ಸುಶಾಂತ್ ಬಗ್ಗೆ ಬಹಳ ಕೆಟ್ಟದಾಗಿ ಬರೆಯುತ್ತಾನೆ. ಆತ ಖಿನ್ನತೆಗೆ ಒಳಗಾಗಿದ್ದ, ಡ್ರಗ್ಸ್ ಅಡಿಕ್ಟ್ ಎಂದು ಬರೆಯುತ್ತಾರೆ. ಯಾಕೆ ನಿಮಗೆ ಸಂಜಯ್ ದತ್ ಅವರ ಅಡಿಕ್ಷನ್ ಕ್ಯೂಟ್ ಆಗಿ ಇತ್ತಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

#KanganaRanaut exposes the propaganda by industry arnd #SushantSinghRajput's tragic death &how the narrative is spun to…

Posted by Team Kangana Ranaut on Monday, June 15, 2020

ಕೆಲವರು ನನಗೂ ಸಂದೇಶ ಕಳುಹಿಸುತ್ತಾರೆ. ನಿನ್ನ ಟೈಮ್ ಸರಿಯಿಲ್ಲ ಎಂದರೆ ನೀನು ಕೂಡ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡ ಎಂದು, ನೀವು ಯಾಕೆ ಆತ್ಮಹತ್ಯೆ ಎಂಬುದನ್ನು ನಮ್ಮ ತಲೆಗೆ ತುಂಬುತ್ತೀರಾ? ಸಮಾಜ ಸುಶಾಂತ್ ನನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ. ಆದರೆ ಆತ ದಡ್ಡ, ಸಮಾಜ ಹೇಳಿದ್ದೇಲ್ಲವನ್ನು ನಂಬಿದ್ದ. ಸಮಾಜ ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದರೆ ಅದನ್ನು ಎದುರಿಸದೆ ಒಪ್ಪಿಕೊಂಡಿದ್ದ. ಅದೂ ಅವನು ಮಾಡಿದ ದೊಡ್ಡ ತಪ್ಪು ಎಂದು ಕಂಗನಾ ಹೇಳಿದ್ದಾರೆ.

ಸುಶಾಂತ್ ತನ್ನ ತಾಯಿ ಹೇಳಿದ್ದನ್ನು ಕೇಳಬೇಕಿತ್ತು. ಆತ ಸಮಾಜದ ಮಾತು ಕೇಳಿದ. ಸಮಾಜ ನೀನು ಕೆಲಸಕ್ಕ ಬಾರದವ, ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದು ದೂರಿತ್ತು. ಅದನ್ನು ಮನಸ್ಸಿಗೆ ತೆಗೆದುಕೊಂಡು ಸುಶಾಂತ್ ಹೀಗೆ ಮಾಡಿಕೊಂಡಿದ್ದಾನೆ. ಇತಿಹಾಸವನ್ನು ಯಾರು ಬರೆಯಲಿದ್ದಾರೆ ಎಂಬುದನ್ನು ನಾವು ತೀರ್ಮಾನ ಮಾಡಬೇಕು. ಗೂಗಲ್ ಅದನ್ನು ಬರೆದು ಇಡುತ್ತದೆ ಎಂದು ಕಂಗನಾ ಬಾಲಿವುಡ್ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಗನಾ ಈ ರೀತಿ ಬಾಲಿವುಡ್‍ನಲ್ಲಿರುವ ನೆಪ್ಟೋಯಿಸಂ ಮತ್ತು ತಾರತಮ್ಯದ ದನಿ ಎತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವಾರು ಬಾರಿ ಮಾತನಾಡಿದ್ದಾರೆ. ಈ ವಿಚಾರವಾಗಿ ಈ ಹಿಂದೆ ಕರಣ್ ಜೋಹರ್ ಅವರನ್ನು ಅವರದ್ದೇ ಶೋನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಂಗನಾ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ತೀಕ್ಷ್ಣವಾಗಿ ಮಾತನಾಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

‘ಮೊಗ್ಗಿನ ಮನಸು’ ಚೆಲುವೆ ಶುಭಾ ಪೂಂಜಾಗೆ ಕಂಕಣಕೂಡಿಬಂತು..!

Published

on

ಸುದ್ದಿದಿನ,ಬೆಂಗಳೂರು:ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. ಮಂಗಳೂರು ಮೂಲದ ಉದ್ಯಮಿ ಸುಮಂತ್ ಮಹಾಬಲ ಜೊತೆ ಶುಭಾ ಪೂಂಜಾ ಮದುವೆಯಾಗುತ್ತಿದ್ದಾರೆ.

ಡಿಸೆಂಬರ್ ಅಲ್ಲಿ ಪ್ಲಾನ್ ಆಗಿದೆ ಶುಭಾ ಮತ್ತು ಸುಮಂತ್ ಮಹಾಬಲ ಮ್ಯಾರೇಜ್ ಪ್ಲಾನ್ ಆಗಿದೆ. ಸುಮಂತ್ ಮಹಾಬಲ ಜಯ ಕರ್ನಾಟಕದ ಸೌಥ್ ವೈಸ್ ಪ್ರೆಸಿಡೆಂಟ್ ಆಗಿದ್ದು, ಮದುವೆ ಸುದ್ದಿಯನ್ನು ಶುಭಾ ಪೂಂಜಾ ಖಚಿತ ಪಡಿಸಿದ್ದಾರೆ.

ಲವ್ ಕಂ ಅರೇಂಜ್ ಮ್ಯಾರೇಜ್. ಒಂದು ವರ್ಷದ ಪ್ರೀತಿಗೆ ಕುಟುಂಬದಿಂದ ಸಮ್ಮತಿ ಸಿಕ್ಕಿದೆ. ಮಚ್ಚಿ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶುಭಾ ಪೂಂಜಾಗೆ ಹೆಸರು, ಖ್ಯಾತಿ ತಂದುಕೊಟ್ಟಿದ್ದು ಮೊಗ್ಗಿನ ಮನಸ್ಸು ಸಿನಿಮಾ.

ಚಂಡ, ತಾಕತ್, ಸ್ಲಮ್ ಬಾಲಾ, ಕಂಠೀರವ, ಗೂಗಲ್, ಜೈಮಾರುತಿ 800, ಕೋಟಿಗೊಂದ್ ಲವ್ ಸ್ಟೋರಿ, ತರ್ಲೆ ನನ್ಮಕ್ಳು, ಸಿಗಂಧೂರು ಚೌಡೇಶ್ವರಿ ಮಹಿಮೆ ಸೇರಿದಂತೆ ಹಲವು ಚಿತ್ರಗಳಲ್ಲಿ ಶುಭಾ ನಟಿಸಿದ್ಧಾರೆ. ತಮಿಳಿನಲ್ಲೂ ಕೆಲವು ಚಿತ್ರಗಳಲ್ಲಿ ನಟಿಸಿರುವ ಶುಭಾ ಪೂಂಜಾ, ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending