Connect with us
http://www.suddidina.com/category/political-news

ಸಿನಿ ಸುದ್ದಿ

ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ..!

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಕಾಮಿಡಿ ಕಿಲಾಡಿ ನಟ ಚಿಕ್ಕಣ್ಣ ಅವರು ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಮೈಸೂರು ಮೃಗಾಲಯದಲ್ಲಿ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.

ಈ ಚಿರತೆಯನ್ನು ಒಂದು ವರ್ಷದ ಅವಧಿಗೆ 35ಸಾವಿರ ರೂ ನೀಡಿ ದತ್ತು ಪಡೆದಿದ್ದಾರೆ ಚಿಕ್ಕಣ್ಣ. ಅಂದಹಾಗೆ ಚಿಕ್ಕಣ್ಣ ದತ್ತು ಪಡೆದ ಚಿರತೆಗೆ ‘ ಭೈರ’ ಎಂದು ನಾಮಕರಣ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ

ಇವಳು ಬರೋವರ್ಗು ಮಾತ್ರ ನನ್ ಹವಾ : ಯಶ್

Published

on

ಯಶ್, ರಾಧಿಕಾ ಮತ್ತು ಮಗಳು

ಸುದ್ದಿದಿನ ಡೆಸ್ಕ್ : ನಟ ಯಶ್ ಮತ್ತು ರಾಧಿಕಾ‌ ತಮ್ಮ ಮಗಳ ಫೋಟೋವನ್ನ ಮೊದಲ ಬಾರಿಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಪ್ರೀತಿಯ ಮಗಳ ಕುರಿತಾಗಿ ಪ್ರೀತಿಯ ಮಾತುಗಳನ್ನಾಡಿರುವ ಯಶ್,”ನೀವು ಹೇಳಿದ್ದೇ ಸರಿ….
ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ .. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ.” ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ 

https://www.facebook.com/1579757015585037/posts/2586858498208212/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

‘ಕವಲುದಾರಿ’ಯ 3ನೇ ವಾರದ ಕಲೆಕ್ಷನ್ 6 ಕೋಟಿ..!

Published

on

ಸುದ್ದಿದಿನ, ಡೆಸ್ಕ್ : ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ, ಗೆಲುವಿನ ನಗಾರಿ ಬಾರಿಸಿದೆ. ಚಿತ್ರ 2 ವಾರ ಪೂರೈಸಿ, 3ನೇ ವಾರಕ್ಕೆ ಕಾಲಿಟ್ಟಿದೆ. ದೇಶ ವಿದೇಶದಲ್ಲೂ ಸದ್ದು ಮಾಡುತ್ತಿರುವ ಚಿತ್ರ ಈಗಾಗಲೇ 6 ಕೋಟಿ ಲಾಭ ಗಳಿಸಿದೆಯಂತೆ.

ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರೋದು ವಿಶೇಷ. ಕವಲುದಾರಿ ರಾಜ್ಯಾದ್ಯಂತ 180 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ಈ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನೆಮಾ ನಿರ್ದೇಶಕ ‘ ಹೇಮಂತ್’. ನಾಯಕ ನಟನಾಗಿ ರಿಷಿ, ಅನಂತ ನಾಗ್, ಸುಮನ್ ರಂಗನಾಥ್ ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಡಾ.ರಾಜ್ ನನ್ನ ಪಾಲಿಗೆ ‘ನನ್ನ ಕಾಡಿನವರು’ : ಸಿದ್ದರಾಮಯ್ಯ ಸ್ಮರಣೆ

Published

on

ಸುದ್ದಿದಿನ ಡೆಸ್ಕ್ : ಇಂದು (ಏಪ್ರಿಲ್ 24) ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ದಿನ. ಅಭಿಮಾನಿಗಳೇ ನನ್ನ ದೇವರು ಎಂದು ಕರೆದ ಈ ಸರಳ, ಮಾನವೀಯ ನಟ. ಇವರ ಹುಟ್ಟು ಹಬ್ಬವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಟಸಾರ್ವಭೌಮ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕನ್ನಡದ ಅನರ್ಘ್ಯ ರತ್ನ ಎಲ್ಲವೂ ಆಗಿರುವ ಡಾ.ರಾಜಕುಮಾರ್ ಅವರು ನನ್ನ ಪಾಲಿಗೆ ‘ನನ್ನ ಕಾಡಿನವರು’. ಅವರ ನಾಡು ನುಡಿಯ ಬಗೆಗಿನ ಪ್ರೀತಿ- ಬದ್ಧತೆ ನನಗೆ ಸದಾ ಸ್ಪೂರ್ತಿ. ರಾಜ್ ಕುಮಾರ್ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಗೌರವದಿಂದ ಸ್ಮರಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending