Connect with us

ಸಿನಿ ಸುದ್ದಿ

ಕ್ಯಾಸ್ಟಿಂಗ್ ಕೌಚ್ ವಿರುದ್ಧ ಹೋರಾಡಲು ಸಿದ್ಧ: ನಟ ಚೇತನ್

Published

on

ಸುದ್ದಿದಿನ, ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾದ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಚಿತ್ರರಂಗ ಹಿರಿಯರು ಮಾತನಾಡಬೇಕು ಎಂದು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದ್ದಾರೆ.
ನಗರದಲ್ಲಿ` ಭಾನುವಾರ ಜಿಲ್ಲಾ ವರದಿಗಾರರ ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿನೆಮಾ ರಂಗ ಆರಂಭವಾದ ದಿನದಿಂದಲೂ ಈ ಕ್ಯಾಸ್ಟಿಂಗ್ ಕೌಚ್ ಎಂಬ ಪದ್ಧತಿ ಇದೆ. ಈ ಕುರಿತು ಕನ್ನಡ ಚಿತ್ರರಂಗದ ಗಣ್ಯರು ಮಾತನಾಡಬೇಕು. ಇಲ್ಲದಿದ್ದರೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಸಹಮತವಿದೆ ಎಂದು ಜನನಂಬುವ ಸಾಧ್ಯತೆಯಿದೆ. ಆದ್ದರಿಂದ ಹಿರಿಯ ನಟಿಯರು ತಮಗಾದ ಕೆಟ್ಟ ಅನುಭವವನ್ನು ಜನರ ಮುಂದಿಡಬೇಕು ಎಂದರು. ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ. ಇದಕ್ಕಾಗಿ ಸಮಾನ ಸಮನಸಿನವರು ಸೇರಿ ಫೈರ್ ಎಂಬ ಸಂಘಟನೆ ಸ್ಥಾಪಿಸಿದ್ದೇವೆ. ಚಿತ್ರರಂಗ ನಟಿಯರು ಇಲ್ಲಿ ದೂರು ನೀಡಬಹುದು. ಕೆಟ್ಟ ವ್ಯವಸ್ಥೆ ವಿರುದ್ಧ ಕಾನೂನು ಮೂಲಕ ಹೋರಾಟ ನಡೆಸುತ್ತೇವೆ ಎಂದರು.

Read Also: ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಗೆ ವೋಟು ಹಾಕಿ ಎಂದು ಹೇಳುವುದು ಸರಿಯಲ್ಲ

ಹಿಮೋಫಿಲಿಯಾ ರೋಗಿಗಳಿಗೆ ಅಭಯ

ಶನಿವಾರ ನಗರದಲ್ಲಿ ನಡೆದ ಹಿಮೋಫಿಲಿಯಾ ರೋಗಿಗಳ ದಿನಾಚರಣೆಯಲ್ಲಿ ಭಾಗವಹಿಸಿದ್ದ ಆ ದಿನಗಳು ಸಿನೆಮಾ ಖ್ಯಾತಿಯ ನಟ ಚೇತನ್ ಹಿಮೋಫಿಲಿಯಾ ರೋಗಿಗಳಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರು. ರೋಗದ ಲಕ್ಷಣ ಹಾಗೂ ರೋಗಿಗಳು ಅನುಭವಿಸುವ ಸಂಕಷ್ಟದ ಕುರಿತು ಮಾತನಾಡಿದರು. ರೋಗಿಗಳ ಜತೆ ಆತ್ಮಿಕವಾಗಿ ಮಾತನಾಡಿದ ನಟ ಚೇತನ್ ಅವರಲ್ಲಿ ಭರವಸೆ ಮಾತುಗಳನ್ನು ಆಡಿದರು.

English summary: chetan kannada actor speaks about casting couch

Dont Miss:  ಹಿಮೋಫಿಲಿಯಾ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕೋಸ್ಕರ ಬಂದಿದ್ದೇನೆ : ನಟ ಚೇತನ್

ಸಿನಿ ಸುದ್ದಿ

ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ..!

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಕಾಮಿಡಿ ಕಿಲಾಡಿ ನಟ ಚಿಕ್ಕಣ್ಣ ಅವರು ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಮೈಸೂರು ಮೃಗಾಲಯದಲ್ಲಿ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.

ಈ ಚಿರತೆಯನ್ನು ಒಂದು ವರ್ಷದ ಅವಧಿಗೆ 35ಸಾವಿರ ರೂ ನೀಡಿ ದತ್ತು ಪಡೆದಿದ್ದಾರೆ ಚಿಕ್ಕಣ್ಣ. ಅಂದಹಾಗೆ ಚಿಕ್ಕಣ್ಣ ದತ್ತು ಪಡೆದ ಚಿರತೆಗೆ ‘ ಭೈರ’ ಎಂದು ನಾಮಕರಣ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ವಿಡಿಯೋ | ಅಭಿಮಾನಿಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ : ಪುನೀತ್ ರಾಜ್‍ಕುಮಾರ್

Published

on

ಸುದ್ದಿದಿನ,ಬೆಂಗಳೂರು: ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ.ಫ್ಯಾನ್ಸ್ ತರುವ ಹಲವು ಗಿಫ್ಟ್ ಗಳು ಖುಷಿ ಕೊಡುತ್ತೆ ಎಂದು ಬರ್ತಡೇ ಬಾಯ್ ಪುನೀತ್ ರಾಜಕುಮಾರ್ ಹೇಳಿದರು.

ಈ ವರ್ಷ ಯುವರತ್ನ ಬಿಡುಗಡೆಯಾಗುತ್ತದೆ. ಜೇಮ್ಸ್ ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೇಮ್ಸ್ ಮೊದಲ ಪೋಸ್ಟರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್ ಇಲ್ಲ. ಅಭಿಮಾನಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ ನನಗೆ ಹಾಗೆ‌ ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ದೊರಕಿರುವುದು ಖುಷಿ ಕೊಟ್ಟಿದೆ ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ ಎಂದರು.

ನಂತರ ಅಭಿಮಾನಿಗಳನ್ನ ಭೇಟಿ ಮಾಡಿದ ಅಪ್ಪು ಸಂತಹ ಹಂಚಿಕೊಂಡರು. ಅಭಿಮಾಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ.ಪ್ರತೀ ಬಾರಿ ರಾತ್ರಿ ಮನೆಹತ್ರ ಬಂದು ಕಷ್ಟ ಪಡ್ತಿದ್ರು ಹಾಗಾಗಿ ರಾತ್ರಿ ಸೆಲೆಬ್ರೇಷನ್ ಬೇಡ ಅಂದುಕೊಂಡೆ. ಅದಕ್ಕೆ ಅಭಿಮಾನಿಗಳು ಸಹಕರಿಸಿದ್ದಾರೆ ಎಂದರು.

ಯುವರತ್ನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಪಾತ್ರ. ಧಾರವಾಡ ಕಾಲೇಜ್ ನಲ್ಲಿ ಶೂಟಿಂಗ್ ಮಾಡಿದ್ವಿ ಸಾಕಷ್ಟು ಕಲಿತಿದ್ದೇನೆ. ಇನ್ನೂ ಇವತ್ತು ಜೇಮ್ಸ್ ಚಿತ್ರದ ಟೀಸರ್ ಕೂಡ ರಿಲೀಸ್ ಆಗ್ತಿದೆ.ಚಿಕ್ಕ ವಯಸ್ಸಿಂದಲೂ ಗಿಫ್ಟ್ ಅಂದ್ರೆ ಇಷ್ಟ. 18 ವರ್ಷದವನಿದ್ದಾಗ ಅಪ್ಪ ಅಮ್ಮ ನನಗೆ ಕಾರ್ ಗಿಫ್ಟ್ ಕೊಟ್ಟಿದ್ರು ಅದೇ ನಾನು ಮರೆಯಲಾಗದ ಗಿಫ್ಟ್ ಎಂದರು.

ಇನ್ನೂ ಈಗ ಬೇಸಿಗೆ ಬಂದಿದೆ ನಾವುಗಳೆಲ್ಲಾ ಕಾಡು ಕಡಿದು ಮನೆ ಮಾಡಿಕೊಂಡಿದ್ದೇ
ಎಲ್ಲರೂ ಮನೆ ಮುಂದೆ ನೀರಿಟ್ಟು ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಿ ಎಂದರು ಪುನೀತ್ ರಾಜ್ ಕುಮಾರ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಸಿನಿ ಸುದ್ದಿ

ಲಂಡನ್‌ ನಲ್ಲಿ ದೀಪಿಕಾ ಪಡುಕೋಣೆ ಮೇಣದ ಪ್ರತಿಮೆ..!

Published

on

ಮೇಣದ ಪ್ರತಿಮೆಯೊಂದಿಗೆ ದೀಪಿಕಾ ಪಡುಕೋಣೆ

ಸುದ್ದಿದಿನ ಡೆಸ್ಕ್ : ಲಂಡನ್‌ನ ಮೇಡಂ ಟುಸ್ಸಾಡ್ಸ್‌ ಹಲವು ಗಣ್ಯಾತಿಗಣ್ಯರ ಮೇಣದ ಪ್ರತಿಮೆಗೆ ಹೆಸರುವಾಸಿಯಾದ ಮ್ಯೂಸಿಯಂ. ಇದೀಗ ಇಲ್ಲಿ ಬಾಲಿವುಡ್‌ ಡಿಂಪಲ್‌ ಕ್ವೀನ್‌ ದೀಪಿಕಾ ಪಡುಕೋಣೆ ಮೇಣದ ಪ್ರತಿಮೆ ಅನಾವರಣಗೊಂಡಿದೆ.

ಸ್ವತಃ ದೀಪಿಕಾ ಪಡಿಕೋಣೆ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಪ್ರತಿಮೆಗೆ ಸಭ್ಯಸಾಚಿ ಕೈಚಳಕದಿಂದ ತಯಾರಾದ ಬಟ್ಟೆ ತೊಡಿಸಿದ್ದು, ತಮ್ಮ ಮೇಣದ ಪ್ರತಿಮೆ ಕಂಡು ದೀಪಿಕಾ ಫುಲ್‌ ಖುಷ್‌ ಆಗಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ವೇಳೆ ಪತಿ ರಣವೀರ್‌ ಸಿಂಗ್‌ ಕೂಡಾ ಸಾಥ್‌ ನೀಡಿದ್ರು.

 

 

View this post on Instagram

 

❤️ @madametussauds

A post shared by Deepika Padukone (@deepikapadukone) on

 

 

View this post on Instagram

 

😝 @madametussauds

A post shared by Deepika Padukone (@deepikapadukone) on

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending