Connect with us

ಸಿನಿ ಸುದ್ದಿ

ಹಿಟ್ಲರನ ಸರ್ವಾಧಿಕಾರದ ವಿರುದ್ಧ ‘ಚಾರ್ಲಿ ಚಾಪ್ಲಿನ್’ ಭಾಷಣ

Published

on

“ಕ್ಷಮಿಸಿ! ನಾನು ಸರ್ವಾಧಿಕಾರಿಯಾಗಲು ಬಯಸಲಾರೆ, ಅದು ನನ್ನ ಕೆಲಸವೂ ಅಲ್ಲ. ನಾನು ಯಾರನ್ನೂ ಕೂಡಾ ಗೆಲ್ಲಲು ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ನಾವು ಯಹೂದಿ, ನಾಝಿ, ಕರಿಯರು, ಬಿಳಿಯರು ಹೀಗೆ ಎಲ್ಲರಿಗೂ ಸಹಾಯ ಮಾಡುವಂತಾಗಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಮನುಷ್ಯರೆಂದರೆ ಹಾಗೆ. ನಾವು ಪರಸ್ಪರ ಸಂತೋಷದಿಂದ ಬದುಕಬೇಕೇ ಹೊರತು ಇತರರ ದುಃಖಕ್ಕಾಗಿ ಅಲ್ಲ. ಯಾರನ್ನೂ ದ್ವೇಷಿಸಲೇ ಕೂಡದು. ಈ ಭೂಮಿಯಲ್ಲಿ ಎಲ್ಲರಿಗೂ ಜಾಗವಿದೆ. ಮತ್ತೆ ಈ ಭೂಮಿಯು ಎಲ್ಲರ ಅಗತ್ಯಗಳನ್ನೂ ಪೂರೈಸುವಷ್ಟು ಸಮೃದ್ಧವಾಗಿದೆ. ಜೀವನದ ಹಾದಿ ಸುಂದರವೂ ಮುಕ್ತವೂ ಆಗಿರಲು ಸಾಧ್ಯ. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.

ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ, ಜಗತ್ತನ್ನು ದ್ವೇಷವೆಂಬ ಬೇಲಿಯಿಂದ ಬಂಧಿಸಿದೆ, ದುಃಖ ಮತ್ತು ರಕ್ತಪಾತದೆಡೆಗೆ ಸಾಗಿಸುತ್ತಿದೆ. ನಾವು ವೇಗವನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೆ ನಮ್ಮನ್ನು ನಾವು ಬಂಧಿಸಿದ್ದೇವೆ. ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ. ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ದಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ.
ಯಂತ್ರಗಳಿಗಿಂತ ನಮಗೆ ಹೆಚ್ಚು ಮಾನವೀಯತೆಯ ಅಗತ್ಯವಿದೆ. ಜಾಣ್ಮೆಗಿಂತ ಹೆಚ್ಚು ದಯೆ , ಸಭ್ಯತೆಯ ಅವಶ್ಯಕತೆಯಿದೆ. ಈ ಗುಣಗಳಿಲ್ಲದೆ ಹೋದರೆ, ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು.

ವಿಮಾನ ಮತ್ತು ರೇಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ, ನಮ್ಮೆಲ್ಲರ ಸಹೋದರೆತೆಗಾಗಿ, ಒಗ್ಗಟ್ಟಿಗಾಗಿ ಮೊರೆಯಿಡುತ್ತಿದೆ. ಈಗಲೂ ಸಹ ನನ್ನ ಧ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು – ವ್ಯವಸ್ಥೆಯ ಬಲಿ ಪಶುಗಳು, ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ!

ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ
ಕೇಳಿರಿ. ಧೃತಿಗೆಡದಿರಿ
ನಮ್ಮ ಮೇಲಿರುವ ಈ ವಿಷಾದ ಸ್ವಾರ್ಥ ಸಾಗುತ್ತಿರುವ ಈ ಹೊತ್ತು
ಮಾನವ ಪ್ರಗತಿಯ ಬಗ್ಗೆ ಭಯ ಪಟ್ಟ ಮನುಷ್ಯರ ಕಹಿ ಭಾವನೆಗಳಿವು

ಮಾನವ ದ್ವೇಷವು ಕೊನೆಗೊಳ್ಳಲಿದೆ.
ಸರ್ವಾಧಿಕಾರಿಯ ಅಂತ್ಯವಾಗಲಿದೆ
ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು
ಮರಳಿ ಜನರ ಕೈಗಳಿಗೆ ಮರಳಲಿದೆ
ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ
ಸ್ವಾತಂತ್ರ್ಯವೆಂದೂ ನಾಶವಾಗದು…

ಸೈನಿಕರೇ! ನಿಮ್ಮತನವನ್ನು ದುಷ್ಟರಿಗೆ ಬಿಟ್ಟು ಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ
ನಿಮ್ಮನ್ನು ದಾಸ್ಯಕ್ಕೆ ದೂಡಿದವರಿಗೆ
ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ
ನೀವು ಯಾವುದನ್ನು ಯೋಚಿಸಬೇಕು
ಯಾವುದನ್ನು ಪ್ರೀತಿಸಬೇಕು
ನಿಮ್ಮನ್ನು ದುಡಿಸಿದವರಿಗೆ
ನಿಮ್ಮನ್ನು ಪಶುಗಳಂತೆ ನಡೆಸಿಕೊಂಡವರಿಗೆ
ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ
ಮನುಷ್ಯರಲ್ಲದವರಿಗೆ
ನಿಮ್ಮತನವನ್ನು ಬಿಟ್ಟು ಕೊಡದಿರಿ

ಯಾಂತ್ರಿಕ ಮನುಷ್ಯರಿಗೆ
ಯಾಂತ್ರಿಕ ಮನಸ್ಸುಗಳಿಗೆ
ಯಾಂತ್ರಿಕ ಹೃದಯಗಳಿಗೆ
ನೀವು ಯಂತ್ರಗಳಲ್ಲ!
ನೀವು ದನಗಳಲ್ಲ!!
ನೀವು ಮನುಷ್ಯರು!!
ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ!
ನೀವು ದ್ವೇಷಿಸಲಾರಿರಿ!
ಕೇವಲ ಪ್ರೀತಿಸಲ್ಪಡವನು ಮಾತ್ರ ದ್ವೇಷಿಸುತ್ತಾನೆ.
ಪ್ರೀತಿಸಲ್ಪಡದ ಅಸಹಜ ವ್ಯಕ್ತಿ!!
ಸೈನಿಕರೆ! ದಾಸ್ಯಕ್ಕಾಗಿ ಹೋರಾಡಬೇಡಿ!
ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ!
ಸಂತ ಲೂಕ ನ 17 ನೆಯ ಅಧ್ಯಾಯದಲ್ಲಿ ಹೀಗಿದೆ
” ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ”
ಒಬ್ಬನ ಹೃದಯದಲ್ಲಲ್ಲ
ಯಾವುದೋ ಗುಂಪಿನ ಹೃದಯದಲ್ಲಲ್ಲ
ಎಲ್ಲರ ಹೃದಯದಲ್ಲಿಯೂ..

ನಿಮ್ಮ ಹೃದಯದಲ್ಲಿಯೂ
ನಿಮ್ಮಲ್ಲಿ ಶಕ್ತಿಯಿದೆ
ಯಂತ್ರಗಳನ್ನು ತಯಾರಿಸುವ ಶಕ್ತಿ
ಸಂತೋಷಗಳನ್ನು ತಯಾರಿಸುವ ಶಕ್ತಿ
ಈ ಬದುಕನ್ನು ಮುಕ್ತವೂ ಸುಂದರವೂ ಆಗಿಸುವ ಶಕ್ತಿ ನಿಮಗಿದೆ.
ಈ ಬದುಕನ್ನೊಂದು ಅದ್ಭುತ ಸಾಹಸವನ್ನಾಗಿಸಿ.

ಆಮೇಲೆ – ಪ್ರಜಾ ಪ್ರಭುತ್ವದ ಹೆಸರಿನಲ್ಲಿ
ಆ ಶಕ್ತಿಯನ್ನು ಬಳಸೋಣ
ಒಗ್ಗಟ್ಟಾಗೋಣ
ಹೊಸ ವಿಶ್ವಕ್ಕಾಗಿ ಹೋರಾಡೋಣ.

ಸಭ್ಯ ಜಗತ್ತಿಗಾಗಿ…
ಎಲ್ಲಾ ಜನರಿಗೆ ಉದ್ಯೋಗ ನೀಡುವ
ಯುವ ಜನರಿಗೆ ಭವಿಷ್ಯವನ್ನೂ
ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!
ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭೃಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಅವರು ಆ ಆಶ್ವಾಸನೆಗಳನ್ನು ಈಡೇರಿಸಲಾರರು. ಎಂದೆಂದಿಗೂ!!

ಸರ್ವಾಧಿಕಾರಿಯು ತನ್ನನ್ನು ತಾನು ಮುಕ್ತಗೊಳಿಸಿ ಜನರನ್ನು ಗುಲಾಮರನ್ನಾಗಿಸುತ್ತಾನೆ. ನಾವು ಆ ಆಶ್ವಾಸನೆಗಳಿಗೋಸ್ಕರ ಹೋರಾಡೋಣ.
ಮುಕ್ತ ಜಗತ್ತಿಗೋಸ್ಕರ!
ರಾಷ್ಟ್ರಬಂಧಗಳ ವಿಮುಕ್ತಿಗೋಸ್ಕರ!!
ಸ್ವಾರ್ಥ, ದ್ವೇಷ, ಅಸಹನೆಗಳ ಅಳಿವಿಗೋಸ್ಕರ!!
ವೈಚಾರಿಕ ಜಗತ್ತಿಗಾಗಿ ಹೋರಾಡೋಣ
ಎಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರ ಸಂತೋಷದೆಡೆಗೆ ಸಾಗಿಸುವುದೋ ಆ ಜಗತ್ತಿಗಾಗಿ
ಸಂಗಾತಿಗಳೇ ! ಪ್ರಜಾಪ್ರಭುತ್ವದ ಹೆಸರಿನಲ್ಲಿ ! ನಾವೆಲ್ಲರೂ ಒಂದಾಗೋಣ!

ಚಾರ್ಲಿ ಚಾಪ್ಲಿನ್ ನಟಿಸಿದ ‘ದ ಗ್ರೇಟ್ ಡಿಕ್ಟೇಟರ್’ ನ ಭಾಷಣ

-ಅನುವಾದ: ಪುನೀತ್ ಅಪ್ಪು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಸಂತ್ರಸ್ತರಿಗೆ ‘ಕುರುಕ್ಷೇತ್ರ’ದ ಸಂಭಾವನೆ ನೀಡಿದ ನಿಖಿಲ್ ಕುಮಾರಸ್ವಾಮಿ..!

Published

on

ಸುದ್ದಿದಿನ ಡೆಸ್ಕ್ : ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದ ನಿಖಿಲ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನಿಖಿಲ್ ಪಾತ್ರ ಅದ್ಭುತವಾಗಿ ಬಂದಿದೆ. ಇದೀಗ, ಈ ಚಿತ್ರದಿಂದ ಬಂದ ಸಂಭಾವನೆಯನ್ನ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ಥರಿಗೆ ನೀಡಲು ನಿಖಿಲ್ ಮುಂದಾಗಿದ್ದಾರೆ. ಮಾನವೀಯತೆ ದೃಷ್ಠಿಯಿಂದ ಆ ಮೊತ್ತವನ್ನ ನೆರೆ ಸಂತ್ರಸ್ಥರಿಗೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಸಿನಿ ಸುದ್ದಿ

“ಗಂಡಸು ಎಂದು ಸಾಬೀತು ಪಡಿಸಲು ಮದ್ಯಪಾನ ಮಾಡಬೇಕಿಲ್ಲ, ಕತ್ತಲೂ ಆಗ ಬೇಕಿಲ್ಲ” : ಕಿಚ್ಚ ಸುದೀಪ್ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : ಇನ್ನೇನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ‘ಪೈಲ್ವಾನ್’ ಸಿನೆಮಾ ಬಿಡುಗಡೆಯ ತಯಾರಿಯಲ್ಲಿದೆ. ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಪೈಲ್ವಾನ್ ಚಿತ್ರದ ಕೆಲವು ಹಾಡುಗಳನ್ನು ಚಿತ್ರ ತಂಡ ಬಿಡುಗಡೆ ಸಿದ್ದತೆ ಮಾಡಿಕೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಬಿಡುಗಡೆ ಗೊಳಿಸಲು ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಎಂದೆಂದೂ ಕಂಡರಿಯದ ಪ್ರವಾಹದಿಂದ ಅಲ್ಲಿನ ಜನತೆ ಸಂಕಷ್ಟದಲ್ಲಿ ಸಿಲುಕಿದರು. ಈ ಕಾರಣದಿಂದಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮುಂದೂಡಲಾಯಿತು.

ಅಂದಹಾಗೆ ಕಿ್ಚ್ಚ್ಚ್ಚಚ್ಚ ಸುದೀಪ್ ಇಂದು ಮಾಡಿರುವ ಟ್ವೀಟ್ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾರಣ ಇಷ್ಟೆ ಅವರು ಮಾಡಿರುವ ಟ್ವೀಟ್, ಹೀಗಿದೆ ” ನಾನು ಎಲ್ಲೋ‌ ಓದಿದ ಸಾಲುಗಳಿವು, ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಿಲ್ಲ, ಕತ್ತಲು ಆಗಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ‌. ಇದು ಯಾರಿಗೆ ಟಾಂಗ್ ಕೊಡಲು ಮಾಡಿದ್ದಾರೆ ಎಂಬುದು ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಹಾಗೆ “ಏನನ್ನೋ ಸಾಬೀತು ಪಡಿಸಲು ನಾನು ಪೈಟ್ ಮಾಡುವುದಿಲ್ಲ, ಯೋಗ್ಯತೆ ಇರುವವರೊಂದಿಗೆ ಅಷ್ಟೆ ನನ್ನ ಪೈಟ್” ಎಂಬ ಪೋಟೋ ಪೋಸ್ಟರ್ ಅನ್ನು ಕೂಡ ಟ್ವೀಟ್ ಮಾಡಿದ್ದಾರೆ‌.

 

Continue Reading

ಸಿನಿ ಸುದ್ದಿ

ಫಸ್ಟ್ ಲುಕ್ ರಿಲೀಸ್ ಮಾಡಿದ ‘ರಾಂಚಿ’ ಸಿನಿಮಾ

Published

on

ಸುದ್ದಿದಿನ, ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಂಚಿ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇಡುಗಡೆ ಮಾಡಿದೆ. ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ಇದೀಗ ನಿರ್ದೇಶಕರಾಗಿ ಬದಲಾಗಿದ್ದಾರೆ. ಅರ್ರೆ ಶಾಕ್ ಹಾಗಬೇಕು ಅದ್ಹೇಗಪ್ಪಾ ಒಬ್ಬ ನಟ ಡೈರೆಕ್ಟರ್ ಆದ್ರೂ ಅನ್ಕೊಂಡ್ರಾ ಮುಂದೆ ಓದ್ರಿ..

‘ರಾಂಚಿ’ ಚಿತ್ರದಲ್ಲಿ ನಾಯಕನಾಗಿ ಡೈರೆಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆಯಾದರಿತ ಚಿತ್ರವಾಗಿದೆ. ‘‘ರಾಂಚಿ’ ಚಿತ್ರದಲ್ಲಿ ನಾನು ಚಿತ್ರದ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಒಳಗೊಂಡಿದೆ. ಹಾಗಾಗಿಯೇ ಪಾತ್ರವೂ ತುಂಬಾ ಜವಬ್ದಾರಿಯುತವಾಗಿದೆ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಆಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ರಾಂಚಿ ಎಂದು ಹೆಸರಿಡಲಾಗಿದೆ.

‘ನಾನು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೂ, ಚಿತ್ರದ ಪೋಸ್ಟರ್‌ಗೆ ಈಗಾಗಲೇ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗ ನನ್ನ ಅಭಿನಯದ ‘ರಿಲ್ಯಾಕ್ಸ್ ಸತ್ಯ’ ಮತ್ತು ‘ಮಾಯಾ ಕನ್ನಡಿ’ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದೇನೆ. ನಾನು ಮುಂದಿನ ಸಿನಿಮಾಕ್ಕಾಗಿ ಸಿಕ್ಸ್‌ಪ್ಯಾಕ್ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಕಟ್ಟುನಿಟ್ಟಿನ ವರ್ಕೌಟ್ ಆರಂಭಿಸಿದ್ದೇನೆ. ಹೊಸ ಸಿನಿಮಾದ ಆಯ್ಕೆಯಲ್ಲಿ ನಾನು ತುಂಬಾ ಚೂಸಿಯಾಗಿದ್ದೇನೆ.

ನಿರ್ದೇಶಕರ ಪಾತ್ರ ಮಾಡುವುದು ಒಂದು ಜವಬ್ದಾರಿಯುವಾದ ವೃತ್ತಿ ಎಂದು ನನಗೆ ರಾಂಚಿ ಸಿನಿಮಾದಲ್ಲಿ ತಿಳಿಯಿತು. ಈ ಸಿನಿಮಾವನ್ನು ಆನಂದ್ ಹಾಗೆ ಅರುಣ್ ನಿರ್ಮಿಸುತ್ತಿದ್ದು. ರುದ್ರ ಫಿಲಂ ಹಾಗಿ ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಪ್ರಭು ಮುಂಡ್ಕುರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending