Connect with us
http://www.suddidina.com/category/political-news

ಸಿನಿ ಸುದ್ದಿ

ಎಫ್ಐಆರ್ ರದ್ದು ಕೋರಿ ಸರ್ಜಾ ಅರ್ಜಿ ; ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ..?

Published

on

ಸುದ್ದಿದಿನ ಡೆಸ್ಕ್ : ಎಫ್.ಐ.ಆರ್ ರದ್ದುಗೊಳಿಸುವಂತೆ ಅರ್ಜುನ್ ಸರ್ಜಾ ಅರ್ಜಿ ಸಲ್ಲಿಸಿದ್ದಾರೆ. ಯಾವ ಕಾರಣ ನೀಡಿ ಎಫ್ಐಆರ್ ರದ್ದು ಕೋರಿದ್ದಾರೆ ಅರ್ಜು ಸರ್ಜಾ..? ಎಂಬ ಪ್ರಶ್ನೆ ಉತ್ತರ ಇಲ್ಲಿದೆ ಓದಿ.

  1. ಅರ್ಜುನ್ ಸರ್ಜಾ 36 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲ.
  2. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ನಾಲ್ಕು ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
  3. 37ವರ್ಷಗಳ ಸಿನಿಮಾ ಇತಿಹಾಸದಲ್ಲಿ ಗಾಜಿನಷ್ಟು ಶುದ್ದವಾಗಿದ್ದಾರೆ ಸರ್ಜಾ.
  4. ಅರ್ಜುನ್ ಸರ್ಜಾ ಹನುಮನ್ ದೇವರ ಭಕ್ತರಾಗಿದ್ದಾರೆ.
  5. ಚೈನೈನಲ್ಲಿ 32ಅಡಿ ಉದ್ದ 17ಅಡಿ ಅಗಲದ ಅಜಂನೇಯ ಮೂರ್ತಿ ನಿರ್ಮಾಣ ಮಾಡ್ತಿದ್ದಾರೆ.
  6. ಸಿನಿಮಾ ರಂಗದ ಚಿಕ್ಕ ಕಾರ್ಮಿಕರಿಂದ ಹಿಡಿದು ದೊಡ್ಡ ಸಿನಿ ರಂಗದವರು ಗೌರವ ನೀಡುತ್ತಾರೆ.
  7. ಶ್ರುತಿ ಆರೋಪ ಅಷ್ಟೋಂದು ಮಹತ್ವ ಇಲ್ಲ, ಸುಳ್ಳು ಆರೋಪ ಮಾಡಿದ್ದಾರೆ.
  8. ಕೇವಲ ಪ್ರಚಾರಕ್ಕಾಗಿ ಅರ್ಜುನ್ ಸರ್ಜಾ ವಿರುದ್ದ ಆರೋಪ ಮಾಡುತ್ತಿದ್ದಾರೆ.
  9. ಅರ್ಜುನ್ ಸರ್ಜಾ ಮಾತ್ರವಲ್ಲ ಇಡೀ ಕುಟುಂಬ ಮುಜುಗರಕ್ಕೆ ಈಡಾಗಿದ್ದಾರೆ.
  10. ಸಮಾಜದಲ್ಲಿ ಕೆಟ್ಟ‌ಹೆಸರು ಬರುವಂತೆ ಮಾಡಿದ್ದಾರೆ ಶ್ರುತಿ ಹುನ್ನಾರ ಮಾಡಿದ್ದಾರೆ.
  11. ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಗಂಡ ಹೆಂಡತಿ ರೋಮ್ಯಾಂಟಿಕ್ ಸೀನ್ ಮಾಡಲಾಗಿದೆ.
  12. ಆ ಸಿನಿಮಾ ರೀಲಿಜ್ ಆಗಿ ಸಕ್ಸಸ್ ಆದಾಗ ಶ್ರುತಿ ಏನ್ ಮಾತನಾಡಿಲ್ಲ.
  13. ಮೂರು ವರ್ಷದ ನಂತರ ಸುಖಾ ಸುಮ್ಮನೆ ಮಾನಹರಣ ಮಾಡ್ತಿದ್ದಾರೆ.
  14. ಸುಳ್ಳು ಆರೋಪದಿಂದ ಅರ್ಜುನ್ ಸರ್ಜಾ ಕುಟುಂಬ ಮುಜುಗರಕ್ಕೆ ಈಡಾಗಿದೆ.
  15. ಸಮಾಜದಲ್ಲಿ ಕೆಟ್ಟ‌ ಹೆಸರು ಬರುವಂತೆ ಮಾಡಿದ್ದಾರೆ ಶ್ರುತಿ ಒಳಸಂಚು ಮಾಡಿದ್ದಾರೆ.
  16. ದುರುದ್ದೇಶಪೂರಿತವಾಗಿ ವಿದೇಶದಿಂದಲೂ ಸಮಾಜಿಕ ಜಾಲತಾಣಗಳ ಮೂಲಕ ಮಾನಹಾನಿಕರ ಪೋಸ್ಟ್ ಮಾಡಲಾಗಿದೆ.
  17. ಶೃತಿ ಮಾಡಿದ ಸುಳ್ಳು ಆರೋಪದಿಂದ ದೇಶ ವಿದೇಶಗಳಲ್ಲಿ ಮಾನಹಾನಿಯಾಗಿದೆ.

ಈ ಅಂಶಗಳ ಹಿನ್ನೆಲೆಯಲ್ಲಿ ಸುಳ್ಳು ದೂರಿನ ತನಿಖೆ ನಡೆಯುತ್ತಿದ್ದು ತಾತ್ಕಾಲಿಕ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ

‘ಹಸುವಿನ ಹಾಲು ಕರೆದ’ ಡಿ ಬಾಸ್, ಗ್ರಾಮದ ಜನತೆಯ ಖುಷಿಗೆ ಕಾರಣವಾದ್ರು..!

Published

on

ಸುದ್ದಿದಿನ, ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಪರ ಪ್ರಚಾರಕ್ಕೆ ಇಂದು (ಗುರುವಾರ) ಕೆ.ಆರ್.ಪೇಟೆ ತಾಲೂಕಿನ ಸೋಮನ ಹಳ್ಳಿಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹಸುವಿನ ಹಾಲು ಕರೆದು ಅಭಿಮಾನಿಗಳಿಗೆ ಸಂತಸ ಮೂಡಿಸಿದರು.

ದರ್ಶನ್ ಮತ್ತು ಯಶ್ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವು ಜೋಡೆತ್ತುಗಳಲ್ಲ, ರಾತ್ರಿ ಬಂದು ಮೇದು ಹೋಗುವ ಕಳ್ಳೆತ್ತುಗಳು ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಕೂಡ ಅಪ್ಪನ ಮಾತಿಗೆ ತಕ್ಕನಾಗೆ ಪ್ರಚಾರದ ವೇಳೆ ಇವರಿಬ್ಬರ ವೈಯಕ್ತಿಕ ವಿಷಯವಾಗಿ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ರೈತರ ಕಷ್ಟಗಳ ಬಗ್ಗೆ ಅರಿವಿರುವ ದರ್ಶನ್ ಸೋಮನಹಳ್ಳಿಯ ಗ್ರಾಮದ ಕುಮಾರ್ ಎಂಬುವವರ ಹಸುವಿನ ಹಾಲು‌ಕರೆದು ನಾನೂ ಕೂಡ ರೈತನೇ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಸಿನೆಮಾಗೆ ಬರುವುದುಕ್ಕಿಂತ ಮುಂಚೆ ದರ್ಶನ್ ಹೈನುಗಾರಿಕೆ ಮಾಡುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ. ಹಾಗೇ ದರ್ಶನ್ ಪಾರ್ಮ್ ಹೌಸ್ ನಲ್ಲಿ ಇಂದಿಗೂ ಹಲವು ಹಸುಗಳು ಇವೆ.

ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ …

Posted by Sumalatha Ambareesh on Thursday, 11 April 2019

 

Continue Reading

ಸಿನಿ ಸುದ್ದಿ

ನಾಳೆ ‘ಕವಚ’ ಸಿನೆಮಾ ರಿಲೀಸ್ ; ಸಿನೆಮಾ ನೋಡಲು ಥಿಯೇಟರ್ ಗೆ ಶಿವಣ್ಣ..!

Published

on

ಸುದ್ದಿದಿನ ಡೆಸ್ಕ್ : ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ” ಕವಚ. ಇದು ಮಲಯಾಳಂ ‌ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನೆಮಾ’ಒಪ್ಪಂ’‌ನ‌ ರೀಮೇಕ್ ಆಗಿದ್ದು, ಶಿವಣ್ಣ ಸಿನೆಮಾದಲ್ಲಿ ಕುರುಡನ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ‌ ಸಿನೆಮಾದ ಹಾಡುಗಳು‌ ಈಗಾಗಲೇ ಜನತೆಯ ಮೆಚ್ಚುಗೆಯನ್ನು ಪಡೆದಿವೆ. ಕಾರಣ ಈ ಹಾಡುಗಳ ಅರ್ಥಪೂರ್ಣ ಸಾಹಿತ್ಯ ಹಾಗೂ ಸಂಗೀತ. ಸಿನೆಮಾಗೆ ಅರ್ಜುನ್ ಜನ್ಯ ಸಂಗೀತವಿದ್ದು, ಜಿ.ವಿ.ಆರ್.ವಾಸು ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಈ ಸಿನೆಮಾ ನೋಡಲು ಖುದ್ದಾಗಿ ಶಿವಣ್ಣನೇ ಸಂತೋಷ್ ಥಿಯೇಟರ್ ಗೆ 1.30ರ ಪ್ರದರ್ಶನಕ್ಕೆ ಚಿತ್ರತಂಡ ಹಾಗೂ ಕೆಲವು ಸ್ಯಾಂಡಲ್ ವುಡ್ ನಿರ್ದೇಶಕರೊಂದಿಗೆ ಬರಲಿದ್ದಾರೆ.ಇಷಾಕೊಪ್ಪಿಕರ್, ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

#Kavacha #ReleasingTomorrowWorldwide #HMACinema #Shivanna #VasishtaNSimha #GvrVasu•

Continue Reading

ಸಿನಿ ಸುದ್ದಿ

ಅಭಿಮಾನಿಯ ಕಲೆಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ‌ ಕಿಚ್ಚ..!

Published

on

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ,‌ ಸ್ಯಾಂಡಲ್ ವುಡ್ ನ ಬಾದ್ ಷಾ ಅಭಿಮಾನಿಗಳ ಕ್ರೇಜ್ ಅಷ್ಟಿಷ್ಟಲ್ಲ. ಕಿಚ್ಚನ ಟ್ಯಾಟೋ, ಫೋಟೋ, ವಿಡಿಯೋಗಳನ್ನು ತಮಗಿಷ್ಟ ಬಂದಹಾಗೆ ಕ್ರಿಯೇಟಿವಿಟಿ ಮೂಲಕ ತಮ್ಮದೇ ರೀತಿಯಲ್ಲಿ ಆಗಾಗ ಕಿಚ್ಚನ ಅಭಿಮಾನಿಗಳು‌ ಪ್ರಸ್ತುತ ಪಡಿಸುತ್ತಾರೆ.

ಅಂದಹಾಗೆ ಇಲ್ಲೊಬ್ಬ ಕಿಚ್ಚನ ಅಭಿಮಾನಿ ಕಿಚ್ಚನ ಚಿತ್ರವನ್ನು ‘ ಪೆನ್ಸಿಲ್’ ಬಳಸಿ ಸ್ಕೆಚ್ ಹಾಕಿದ್ದಾರೆ. ಅಭಿಮಾನಿಯ ಈ ಚಿತ್ರಕಲೆ ತುಂಬಾಚೆನ್ನಾಗಿದ್ದು, ಕಲಾಕಾರನಿಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending