Connect with us

ಸಿನಿ ಸುದ್ದಿ

ದಾವಣಗೆರೆಯಲ್ಲಿ ‘ಟಗರು’ ‘ಡಾಲಿ’ ರೋಡ್ ಶೋ ಹವಾ!

Published

on

ಸುದ್ದಿದಿನ,ದಾವಣಗೆರೆ: ಗರು ಸಿನಿಮ ವಿಜಯೋತ್ಸವದ ಹಿನ್ನಲೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟ ಧನಂಜಯ್ ರೋಡ್ ಶೋ ನಲ್ಲಿ ಭಾಗಿಯಾದರು.

ತೆರೆದ ವಾಹನದಲ್ಲಿ  ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದವರೆಗೂ ರೋಡ್ ಶೋ ನಡೆದಿದ್ದು, ಮೆಚ್ಚನ ನಟರನನ್ನು ನೋಡಲು ನೂರಾರು ಅಭಿಮಾನಿಗಳು ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಅಭಿಮಾನಿಗಳತ್ತ ಕೂಗಿದ ಶಿವಣ್ಣ

ಈ ಗಳಿಗೆಯಲ್ಲಿ ರೈಲು ಬಂದದ್ದರಿಂದ ಗೇಟ್ ಹಾಕಲಾಯಿತು.ಗೇಟ್ ತೆರೆಯುವ ವರೆಗು ಶಿವಣ್ಣ ಮತ್ತು ಇತರ ನಟರು ಬಿಸಿಲಿನಲ್ಲೆ ನಿಂತು ರೈಲು ಹೋಗುವವರೆಗೂ ಕಾದರು. ಈ  ಸಮಯ “ರೈಲು ಬರ್ತಿದೆ ಯಾರು ಹಳಿಯ ಹತ್ತಿರ ಹೋಗಬೇಡಿ” ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳತ್ತ ನೋಡಿ ಕೂಗಿದರು.

ನನ್ನ ಪತ್ನಿ ರಾಜಕೀಯಕ್ಕೆ ಹೋಗ್ತಾರೆ

ನಂತರ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  “ರಾಜಕೀಯದಲ್ಲಿ ನಾನು ಸ್ಪರ್ಧೆ ಇಲ್ಲ. ನನ್ನ ಪತ್ನಿ ಮಾತ್ರ ಹೋಗ್ತಾರೆ. ಉಪೇಂದ್ರ ರವರ ರಾಜಕೀಯ ಎಂಟ್ರಿ ನಾನು ಸ್ವಾಗತ ಮಾಡುತ್ತೇನೆ, ನಾನು ಅವರಿಗೆ ಯಾವಾಗ್ಲು ಸಪೋರ್ಟ್ ಮಾಡುತ್ತೇನೆ. ಉಪೇಂದ್ರ ಯಾವಾಗ್ಲೂ ಒಂದು ಚೇಂಜ್ ಮಾಡೋಕೆ ಹೊರಟಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು

ಮಂಡ್ಯ ರಮೇಶ್ ಹೇಳಿಕೆಗೆ ಪ್ರತಿಮಾತು

ಇತ್ತೀಚೆಗೆ ಚಂದನವನದಲ್ಲೂ ನಟಿಯರನ್ನುಸಿನೆಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಅವರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತದೆ ಎಂಬ ಮಾತನ್ನು ಹೇಳಿದ್ದ ಮಂಡ್ಯ ರಮೇಶ್    ಅರವರ ಮಾತಿಗೆ, “ಮಂಡ್ಯ ರಮೇಶ್ ಅದ್ಯಾಕೆ  ಯಾಕೇ ಈ ರೀತಿ ಸ್ಟೇಟ್ ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಚಿತ್ರರಂಗದಲ್ಲಿ ಇದುವರೆಗೂ ಯಾವುದೇ ಆ ರೀತಿಯ ಘಟನೆಗಳು ನಡೆದಿಲ್ಲ “ಎಂದರು.

ದಾರಿಯುದ್ದಕ್ಕು ಶಿವಣ್ಣನಿಗೆ ಅಭಿನಂದನೆ ಸಲ್ಲಿಸುತ್ತ ಕುಣಿದು ಕುಪ್ಪಳಿಸಿದ ಅಭಿಮಾನಿಗಳು‌. ಸೆಲ್ಪಿ ತೆಗೆದುಕೊಳ್ಳುತ್ತ ಶಿವಣ್ಣನಿಗೆ ಸ್ವಾಗತಿಸಿದ ಅಭಿಮಾನಿಗಳು.

ಲಘು ಲಾಠಿ ಚಾರ್ಜ್

ಕಿಕ್ಕಿರಿದ ಅಭಿಮಾನಿಗಳನ್ನು ನಿಯಂತ್ರಿಸಲು ಲಘು ಲಾಠಿ ಚಾರ್ಜ್ ಮಾಡಲಾಯಿತು. ಲಾಟಿ ಚಾರ್ಜ್ ಮಾಡುತ್ತಿದ್ದಂತೆ ಚಲ್ಲಾಪಿಲ್ಲಿಯಾಗಿ ಅಭಿಮಾನಿಗಳು ಓಡಿದರು.

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401

ಸಿನಿ ಸುದ್ದಿ

ಸಂತ್ರಸ್ತರಿಗೆ ‘ಕುರುಕ್ಷೇತ್ರ’ದ ಸಂಭಾವನೆ ನೀಡಿದ ನಿಖಿಲ್ ಕುಮಾರಸ್ವಾಮಿ..!

Published

on

ಸುದ್ದಿದಿನ ಡೆಸ್ಕ್ : ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದ ನಿಖಿಲ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನಿಖಿಲ್ ಪಾತ್ರ ಅದ್ಭುತವಾಗಿ ಬಂದಿದೆ. ಇದೀಗ, ಈ ಚಿತ್ರದಿಂದ ಬಂದ ಸಂಭಾವನೆಯನ್ನ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ಥರಿಗೆ ನೀಡಲು ನಿಖಿಲ್ ಮುಂದಾಗಿದ್ದಾರೆ. ಮಾನವೀಯತೆ ದೃಷ್ಠಿಯಿಂದ ಆ ಮೊತ್ತವನ್ನ ನೆರೆ ಸಂತ್ರಸ್ಥರಿಗೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಸಿನಿ ಸುದ್ದಿ

“ಗಂಡಸು ಎಂದು ಸಾಬೀತು ಪಡಿಸಲು ಮದ್ಯಪಾನ ಮಾಡಬೇಕಿಲ್ಲ, ಕತ್ತಲೂ ಆಗ ಬೇಕಿಲ್ಲ” : ಕಿಚ್ಚ ಸುದೀಪ್ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : ಇನ್ನೇನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ‘ಪೈಲ್ವಾನ್’ ಸಿನೆಮಾ ಬಿಡುಗಡೆಯ ತಯಾರಿಯಲ್ಲಿದೆ. ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಪೈಲ್ವಾನ್ ಚಿತ್ರದ ಕೆಲವು ಹಾಡುಗಳನ್ನು ಚಿತ್ರ ತಂಡ ಬಿಡುಗಡೆ ಸಿದ್ದತೆ ಮಾಡಿಕೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಬಿಡುಗಡೆ ಗೊಳಿಸಲು ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಎಂದೆಂದೂ ಕಂಡರಿಯದ ಪ್ರವಾಹದಿಂದ ಅಲ್ಲಿನ ಜನತೆ ಸಂಕಷ್ಟದಲ್ಲಿ ಸಿಲುಕಿದರು. ಈ ಕಾರಣದಿಂದಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮುಂದೂಡಲಾಯಿತು.

ಅಂದಹಾಗೆ ಕಿ್ಚ್ಚ್ಚ್ಚಚ್ಚ ಸುದೀಪ್ ಇಂದು ಮಾಡಿರುವ ಟ್ವೀಟ್ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾರಣ ಇಷ್ಟೆ ಅವರು ಮಾಡಿರುವ ಟ್ವೀಟ್, ಹೀಗಿದೆ ” ನಾನು ಎಲ್ಲೋ‌ ಓದಿದ ಸಾಲುಗಳಿವು, ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಿಲ್ಲ, ಕತ್ತಲು ಆಗಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ‌. ಇದು ಯಾರಿಗೆ ಟಾಂಗ್ ಕೊಡಲು ಮಾಡಿದ್ದಾರೆ ಎಂಬುದು ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಹಾಗೆ “ಏನನ್ನೋ ಸಾಬೀತು ಪಡಿಸಲು ನಾನು ಪೈಟ್ ಮಾಡುವುದಿಲ್ಲ, ಯೋಗ್ಯತೆ ಇರುವವರೊಂದಿಗೆ ಅಷ್ಟೆ ನನ್ನ ಪೈಟ್” ಎಂಬ ಪೋಟೋ ಪೋಸ್ಟರ್ ಅನ್ನು ಕೂಡ ಟ್ವೀಟ್ ಮಾಡಿದ್ದಾರೆ‌.

 

Continue Reading

ಸಿನಿ ಸುದ್ದಿ

ಫಸ್ಟ್ ಲುಕ್ ರಿಲೀಸ್ ಮಾಡಿದ ‘ರಾಂಚಿ’ ಸಿನಿಮಾ

Published

on

ಸುದ್ದಿದಿನ, ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಂಚಿ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇಡುಗಡೆ ಮಾಡಿದೆ. ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ಇದೀಗ ನಿರ್ದೇಶಕರಾಗಿ ಬದಲಾಗಿದ್ದಾರೆ. ಅರ್ರೆ ಶಾಕ್ ಹಾಗಬೇಕು ಅದ್ಹೇಗಪ್ಪಾ ಒಬ್ಬ ನಟ ಡೈರೆಕ್ಟರ್ ಆದ್ರೂ ಅನ್ಕೊಂಡ್ರಾ ಮುಂದೆ ಓದ್ರಿ..

‘ರಾಂಚಿ’ ಚಿತ್ರದಲ್ಲಿ ನಾಯಕನಾಗಿ ಡೈರೆಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆಯಾದರಿತ ಚಿತ್ರವಾಗಿದೆ. ‘‘ರಾಂಚಿ’ ಚಿತ್ರದಲ್ಲಿ ನಾನು ಚಿತ್ರದ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಒಳಗೊಂಡಿದೆ. ಹಾಗಾಗಿಯೇ ಪಾತ್ರವೂ ತುಂಬಾ ಜವಬ್ದಾರಿಯುತವಾಗಿದೆ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಆಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ರಾಂಚಿ ಎಂದು ಹೆಸರಿಡಲಾಗಿದೆ.

‘ನಾನು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೂ, ಚಿತ್ರದ ಪೋಸ್ಟರ್‌ಗೆ ಈಗಾಗಲೇ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗ ನನ್ನ ಅಭಿನಯದ ‘ರಿಲ್ಯಾಕ್ಸ್ ಸತ್ಯ’ ಮತ್ತು ‘ಮಾಯಾ ಕನ್ನಡಿ’ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದೇನೆ. ನಾನು ಮುಂದಿನ ಸಿನಿಮಾಕ್ಕಾಗಿ ಸಿಕ್ಸ್‌ಪ್ಯಾಕ್ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಕಟ್ಟುನಿಟ್ಟಿನ ವರ್ಕೌಟ್ ಆರಂಭಿಸಿದ್ದೇನೆ. ಹೊಸ ಸಿನಿಮಾದ ಆಯ್ಕೆಯಲ್ಲಿ ನಾನು ತುಂಬಾ ಚೂಸಿಯಾಗಿದ್ದೇನೆ.

ನಿರ್ದೇಶಕರ ಪಾತ್ರ ಮಾಡುವುದು ಒಂದು ಜವಬ್ದಾರಿಯುವಾದ ವೃತ್ತಿ ಎಂದು ನನಗೆ ರಾಂಚಿ ಸಿನಿಮಾದಲ್ಲಿ ತಿಳಿಯಿತು. ಈ ಸಿನಿಮಾವನ್ನು ಆನಂದ್ ಹಾಗೆ ಅರುಣ್ ನಿರ್ಮಿಸುತ್ತಿದ್ದು. ರುದ್ರ ಫಿಲಂ ಹಾಗಿ ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಪ್ರಭು ಮುಂಡ್ಕುರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending