Connect with us

ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರಯತ್ನ : ಬಿಡಗುಡಗೆಯೂ ಮುನ್ನವೇ ‘ನವರಾತ್ರಿ’ ಚಿತ್ರ ವೀಕ್ಷಿಸಿ

Published

on

ಸುದ್ದಿದಿನ,ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರು ಉಚಿತವಾಗಿ ಚಿತ್ರವನ್ನು ವೀಕ್ಷಿಸುವ ಅವಕಾಶ ಕಲ್ಪಸಿದೆ ನವರಾತ್ರಿ ಚಿತ್ರತಂಡ. ಅದಕ್ಕಾಗಿಯೇ ಭರದಿಂದ ಸಿದ್ಧತೆ ಮಾಡಿಕೊಂಡಿಕೊಳ್ಳುತ್ತಿದ್ದೆ.

ಹೌದು ಲಕ್ಷ್ಮೇಕಾಂತ್‌ ಚೆನ್ನ ನಿರ್ದೆಶನದಲ್ಲಿ ಮೂಡಿಬಂದಿರುವ ಈ ಚಿತ್ರವೂ ಇದೆ ದಸರಾ ಸಮಯದಲ್ಲಿ ರಾಜ್ಯದಾದ್ಯಂತ ತೆರೆಕಾಣಲಿದೆ. ಕಾಫಿಸ್‌ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ಬಂಡವಾಳ ಹೂಡಿದ್ದಾರೆ.
‘ಯೂಟ್ಯೂಬ್‌ನಲ್ಲಿ ಸಿನಿಮಾವನ್ನು 10 ನಿಮಿಷಗಳ ಸಮಯದಲ್ಲಿಯೇ ಬಿಡುಗಡೆಗೂ ಮುನ್ನವೇ ಬಿಡಲಾಗುತ್ತದೆ. ಇದನ್ನು ಎಲ್ಲರೂ ಉಚಿತವಾಗಿಯೇ ವೀಕ್ಷಿಸಬಹುದು, ಇಷ್ಟವಾದರೆ ಬಿಡುಗಡೆಯಾದ ನಂತರ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ವೀಕ್ಷಿಸಲಿ, ಇಲ್ಲವಾದರೆ ಅವರ ಅಭಿಪ್ರಾಯವನ್ನು ತಿಳಿಸಲಿ. ಕನ್ನಡದಲ್ಲಿಯೇ ಮೊದಲನೇ ಸಲ ಇಂತಹ ಪ್ರಯೋಗಕ್ಕೆ ನಾವು ಮುಂದಾಗಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಸಮನ್ಯ ರೆಡ್ಡಿ.
ಥ್ರಿಲ್ಲರ್‌ ಜಾನರ್‌ ಹೊಂದಿರುವ ಈ ಚಿತ್ರದಲ್ಲಿ ಪ್ರಮುಖ ತಾರಾಬಳಗದಿಂದ ಕೂಡಿದೆ. ‘ಒರಟ ಐ ಲವ್ ಯೂ’ ಹಾಗೂ ‘ತ್ರಾಟಕ’ ಚಿತ್ರದ ಖ್ಯಾತಿಯ ಹೃದಯ ಅವಂತಿ ನಾಯಕಿಯಾಗಿದ್ದೂ, ನಾಯಕನಾಗಿ ಪದ್ಮವಾತಿ ಸೀರಿಯಲ್ ಖ್ಯಾತಿಯ ‘ತ್ರಿವಿಕ್ರಮ್’ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಒಂದು ಫೈಟ್ ಹೊಂದಿದ್ದೂ, ಯಾವುದೇ ರೀತಿಯ ಹಾಡಿಲ್ಲದಿರುವುದೇ ಚಿತ್ರದ ವಿಶೇಷವಾಗಿದೆ. ಸಂಗೀತ ನಿರ್ದೇಶಕರಾಗಿ ತೆಲುಗು ಸಿನಿಮಾ ‘ಛೋಟಾ ಭೀಮ್’ ಹಾಗೂ ‘ಮನು’ ಖ್ಯಾತಿಯ ನರೇಶ್ ಕುಮಾರನ್ ಸಂಯೋಜನೆ ಮಾಡಿದ್ದಾರೆ.

ಚಿತ್ರವೂ 1. 55 ನಿಮಿಷಗಳನ್ನು ಒಳಗೊಂಡಿದ್ದೂ, ಸಂಕಲನವು ಲೋಕೇಶ್ ಚೆನ್ನ ಹಾಗೂ ಛಾಯಾಗ್ರಹಣ ಸಂಕಲನವನ್ನು ಅನ್ನಪೂರ್ಣ ಸ್ಟುಡಿಯೋಸ್ ಮಾಡಿದೆ. ಶೀಘ್ರದಲ್ಲಿಯೇ ಈ ಚಿತ್ರವೂ ಪ್ರೇಕ್ಷಕರ ಮುಂದೆ ಬರಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

‘ರಂಗಸಮುದ್ರ’ ಫಸ್ಟ್ ಲುಕ್ ಅನಾವರಣಗೊಳಿಸಿದ ಕಿಚ್ಚ ಸುದೀಪ್

Published

on

ಸುದ್ದಿದಿನ ಡೆಸ್ಕ್ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು, ಇಂದು ಜ.18 ಶನಿವಾರ ಹೊಯ್ಸಳ ಕ್ರಿಯೇಷನ್ಸ್ ರವರ ನೂತನ ಚಿತ್ರ ‘ರಂಗಸಮುದ್ರ’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.

ರೆಟ್ರೋ ಕಥಾನಕವುಳ್ಳ ಚಿತ್ರದ ವಿವರಗಳು ಬಹಿರಂಗವಾಗಿಲ್ಲ, ಆದರೆ ಬಿಡುಗಡೆಯಾದ ಪೋಸ್ಟರ್ ನಲ್ಲಿ ಕಹಳೆಯನ್ನು ಎತ್ತಿ ಹಿಡಿದಿರುವ ಚಿತ್ರ ಗಮನ ಸೆಳೆಯುತ್ತಿದೆ. ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಸುದೀಪ್ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸುದೀಪ್ ಅವರು ಬಿಡುಗಡೆಗೊಳಿಸಿದ ಫಸ್ಟ್ ಲುಕ್ ವಿಡಿಯೋ ಹೊಯ್ಸಳ ಕ್ರಿಯೇಷನ್ಸ್ ಅವರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ

twitter.com/hoysalacreatio1

https://fb.me/HoysalaCreations1

https://m.me/HoysalaCreations1

ಲಿಂಕ್ ನಲ್ಲಿ ವೀಕ್ಷಿಸ ಬಹುದಾಗಿದೆ.

ಈಗಾಗಲೇ ಶೇ.90 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ತಂಡಕ್ಕೆ ಸುದೀಪ್ ಅವರು, ಚಿತ್ರದ ಶೀರ್ಷಿಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವುದು ತಂಡಕ್ಕೆ ಎಕ್ಸೈಟ್ ಮೆಂಟ್ ಉಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ‘ರಂಗಸಮುದ್ರ’ ಚಿತ್ರ ಸಂಚಲನ ಮೂಡಿಸಿದೆ.

ರಂಗಸಮುದ್ರ ಪೋಸ್ಟರ್

ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಹೊಯ್ಸಳ, ಕಾರ್ಯಕಾರಿ ನಿರ್ವಾಹಕ ನಿತಿನ್ ಪಟೇಲ್ , ನಿರ್ದೇಶಕ ರಾಜಕುಮಾರ್ ಅಸ್ಕಿ, ಸಂಕಲನಕಾರ ಉದಯ್ ಜಗಳೂರು ಮತ್ತು ಚಿತ್ರಕ್ಕೆ ಸಾಹಿತ್ಯ ರಚಿಸಿರುವ ವಾಗೀಶ್ ಚನ್ನಗಿರಿ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ವಿಡಿಯೊ | ಪಾಪ್ ಕಾರ್ನ್ ಮಂಕಿ‌ ಟೈಗರ್ ‘ಮಾದೇವ’ ಹಾಡಿಗೆ ಫಿದಾ ಆದ್ರು ಅಭಿಮಾನಿಗಳು : ಮಿಸ್ ಮಾಡ್ದೆ ನೀವೂ ನೋಡಿ..!

Published

on

ಸುದ್ದಿದಿನ, ಡೆಸ್ಕ್ : ಟಗರು ಸೂರಿ‌ ನಿರ್ದೇಶನದ, ಡಾಲಿ‌-ಮಂಕಿ ಸೀನ ಧನಂಜಯ್ ಅಭಿನಯದ, ಸಂಗೀತ ಮಾಂತ್ರಕ ಚರಣ್ ರಾಜ್ ಅವರ ಸ್ವರ‌ಸಂಯೋಜನೆಯಲ್ಲಿ ಮೂಡಿ ಬಂದಿರುವ ‌’ಪಾಪ್ ಕಾರ್ನ್ ಮಂಕಿ‌ ಟೈಗರ್’ ಸಿನೆಮಾದ ‘ಮಾದೇವ’ ಹಾಡು ಶುಕ್ರವಾರ ಬೆಳಗ್ಗೆ 10:30 ಕ್ಕೆ ಯೂಟ್ಯೂಬ್ ನಲ್ಲಿ ರಬಿಡುಗಡೆಯಾಗಿದೆ.

ಪಾಪ್ ಶೈಲಿಯ ಈ ಹಾಡಿಗೆ ಇಂಗ್ಲಿಷ್ ನಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಮಗ ಹೃತ್ವಿಕ್ ಕಾಯ್ಕಿಣಿ ಮತ್ತು ಹ‌ನು ಮ್ಯಾನ್ ಕೈಂಡ್ ಅವರು ಸಾಹಿತ್ಯ ರಚಿಸಿದಿದ್ದಾರೆ. ಮಾದೇವ, ಮಕ್ಳು ಜೋಪಾನ, ದಗಾ, ಸಜಾ ಎಂಬ ನಾಲ್ಕು ಕನ್ನಡ ಪದಗಳನ್ನು ಈ ಹಾಡಿನಲ್ಲಿ ಬಳಸಲಾಗಿದೆ.

ಈ ಹಾಡಿಗೆ ದನಿಯಾಗಿರುವವರು ಸಂಚಿತ್ ಶೆಟ್ಟಿ, ಹನು ಮ್ಯಾನ್ ಕೈಂಡ್ ಮತ್ತು ಚರಣ್ ರಾಜ್. ಒಟ್ಟಾರೆ ಈ ಹಾಡು ಕೇಳುಗರಲ್ಲಿ ಹೊಸ ಕ್ರೇಝ್ ಹುಟ್ಟು ಹಾಕಿರುವವುದು, ಏಕೆಂದರೆ ಪದೇ ಪದೇ ಕೇಳಬೇಕೆನ್ನಿಸುವ ಈ ಹಾಡು ಜನಮಾನಸದಲ್ಲಿ ಸದಾ ಉಳಿಯುವುದಂತೂ ಸತ್ಯ.

ಎಲ್ಲವನ್ನೂ ಕುತೂಹಲದ ಕಣ್ಣಿನಿಂದ ನೋಡುವ ಸೂರಿ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ತಂಡದ ಸದಸ್ಯರನ್ನೂ ಕೂಡ ಅದೇ ಹಾದಿಯಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಈ ಸಿನೆಮಾದ ‘ಟೀಸರ್’ ಮತ್ತು ಲಿರಕಲ್ ಹಾಡು ಸಾಕ್ಷಿಯಾಗಿದೆ. ಯೂಟ್ಯೂಬ್ ನಲ್ಲಿ ಈ ಹಾಡನ್ನು ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ನೋಡುಗರು ವೀಕ್ಷಿಸಿದ್ದಾರೆ.

ಮಾದೇವ ಹಾಡು ಕೇಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ಟೀಸರ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಟಾಕೀಸ್ ಸಿನಿವಾರದಲ್ಲಿ : ಆ ಕರಾಳ ರಾತ್ರಿ ‌ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ

Published

on

ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2019ರ ಅಂತ್ಯದಲ್ಲಿ ತೆರೆಕಂಡು ಉತ್ತಮ ವಿಮರ್ಶೆಗಳನ್ನು ಜೊತೆಗೆ ಈ ಸಾಲಿನ 3 ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ದಯಾಳ್ ಪದ್ಮನಾಭ್ ರವರ ನಿರ್ದೇಶನದ ಕನ್ನಡ ಚಿತ್ರ ‘ಆ ಕರಾಳ ರಾತ್ರಿ ’ ಚಿತ್ರದ ಉಚಿತ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 18-01-2020ರ ಶನಿವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ಆ ಕರಾಳರಾತ್ರಿ ಚಿತ್ರವು ಪಕ್ಕಾ ಕ್ರೈಂ ಥ್ರಿಲರ್ ಚಿತ್ರವಾಗಿದ್ದು, ಮೋಹನ್ ಹಬ್ಬುರವರ ನಾಟಕವನ್ನಾಧರಿಸಿದೆ. ಚಿತ್ರದ ಇಡೀ ಕಥೆ 1980ಯಲ್ಲಿ ನಡೆಯುತ್ತದೆ. ಗುಡ್ಡಗಾಡಿನ ಪ್ರದೇಶವದು, ಬಡತನವನ್ನು ಅಲ್ಲಿನ ಒಂಟಿ ಮನೆ ಅಪ್ಪಿಕೊಂಡಿದೆ. ಬದುಕಿನ ಭರವಸೆಗಳೇ ಇಲ್ಲದೇ ಬದುಕುತ್ತಿರುವ ಮೂರು ಜೀವಿಗಳ ಪೈಕಿ, ಒಬ್ಬಬ್ಬೊರದು ಒಂದೊಂದು ಕನಸು.

ಅಂತಹ ಮನೆಗೆ ಲಕ್ಷ್ಮಿ ತಾನಾಗಿಯೇ ಬಂದರೆ ಏನಾಗುತ್ತದೆ? ಎನ್ನುವುದು ಚಿತ್ರದ ಸಾರಾಂಶ. ಚಿತ್ರವು ಈ ಭಾರಿಯ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ನಿರ್ದೇಶಕ ಸಾಲಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದೆ.

ಚಿತ್ರದಲ್ಲಿ ಜೆ.ಕೆ. ಅನುಪಮ ಗೌಡ, ವೀಣಾ ಸುಂದರ್, ಸಿಹಿ ಕಹಿ ಚಂದ್ರು, ನವೀನ್ ಕೃಷ್ಣ ಮುಂತಾದವರಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ಸಂಭಾಷಣೆ, ಪಿ.ಕೆ.ಎಚ್.ದಾಸ್‍ರವರ ಛಾಯಾಗ್ರಹಣವಿದೆ. ಚಿತ್ರದ ಒಟ್ಟು ಅವಧಿ 98 ನಿಮಿಷಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending