Connect with us

ಸಿನಿ ಸುದ್ದಿ

‘ಖುಷಿ’ಯ ಸಾರ ಹೇಳಿದ ಸಂಜನಾ ಪ್ರಕಾಶ್

Published

on

ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ಖುಷಿನಟಿ ಸಂಜನಾ ಪ್ರಕಾಶ್ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡಿಗ್ನಲ್ಲಿದ್ದಾರೆ. ತಾವೇ ಮೊದಲ ಬಾರಿಗೆ ನಟಿಸಿ, ನಿದೇರ್ಶನ ಮಾಡಿರುವ ‘ಖುಷಿ’ ಎಂಬ ವೀಡಿಯೋ ಆಲ್ಬಮ್ ಹಾಡಿಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡದ ಹಾಗೂ ಹಿಂದಿ ಎರಡು ಭಾಷೆಯಲ್ಲಿಯೂ ಮೂಡಿಬಂದಿರುವ ಈ ಹಾಡು ಖುಷಿ ಎಂಬುದು ನಮ್ಮೊಳಗೆ ಇದೆ. ಅದನ್ನು ಹುಡುಕಿಕೊಂಡು ಹೋಗುವ ಸಾರವಿಲ್ಲ ಎಂಬ ಅಂಶವನ್ನು ಸಾರಿ ಹೇಳುತ್ತದೆ.
ಸಂಜನಾ ಹೇಳುವಂತೆ, ಸದಾ ಸಂತೋಷದಿಂದ ಇರುವ ನನ್ನ ಹ್ಯಾಪಿನೆಸ್ ಬಗ್ಗೆ ಎಲ್ಲರೂ ಕುತೂಹಲತೆಯನ್ನು ಹೊಂದಿದಾಗ, ಖುಷಿಯ ಕುರಿತು ಹಾಡಿನ ಮೂಲಕ ಕೆಲವೇ ಕ್ಷಣದಲ್ಲಿ ಜನರಿಗೆ ಹೇಳಬೇಕೆನಿಸಿತು. ಅದಕ್ಕಾಗಿಯೇ ನಾನೇ ನಿರ್ದೇಶನ ಮಾಡಿ, ನಟಿಸಿದೆ ಎಂದಿದ್ದಾರೆ.

ಹಾಡಿನಲ್ಲಿ ನನ್ನ ಜತೆ ಇನಮ್ ಕಾಣಿಸಿಕೊಂಡಿದ್ದೂ, ಅದರ ಜತೆಗೆ ನನ್ನ ತಂಗಿಯೂ ಅಭಿನಯಿಸಿದ್ದಾರೆ. ಮುಲ್ಕಿ ಬೀಚ್, ಬೆಂಗಳೂರಿನ ಬ್ರಿಗೇಡ್ , ಎಂಜಿ ರಸ್ತೆ ಸುತ್ತಮುತ್ತ ಸೇರಿದಂತೆ ನಾಲ್ಕು ದಿನ ಶೂಟಿಂಗ್ ಮಾಡಿದರಂತೆ. ಈ ಹಾಡಿಗೆ ಕನ್ನಡದಲ್ಲಿ ಪ್ರಶಾಂತ್, ಹಿಂದಿಯಲ್ಲಿ ಪವನ್ ಉಪಾಧ್ಯಾಯ ಸಾಹಿತ್ಯ ಬರೆದಿದ್ದೂ, ಇದಕ್ಕೆ ಸ್ಟೀಫನ್ ಪ್ರತೀಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಎನ್ಕೆಎಂ ಬಂಡವಾಳ ಹೂಡಿದ್ದಾರೆ.ಈಗಾಗಲೇ  10,000ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿರುವುದರಿಂದ ಇಡೀ ತಂಡವೂ ಖುಷಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ವಿಡಿಯೊ | ಪಾಪ್ ಕಾರ್ನ್ ಮಂಕಿ‌ ಟೈಗರ್ ‘ಮಾದೇವ’ ಹಾಡಿಗೆ ಫಿದಾ ಆದ್ರು ಅಭಿಮಾನಿಗಳು : ಮಿಸ್ ಮಾಡ್ದೆ ನೀವೂ ನೋಡಿ..!

Published

on

ಸುದ್ದಿದಿನ, ಡೆಸ್ಕ್ : ಟಗರು ಸೂರಿ‌ ನಿರ್ದೇಶನದ, ಡಾಲಿ‌-ಮಂಕಿ ಸೀನ ಧನಂಜಯ್ ಅಭಿನಯದ, ಸಂಗೀತ ಮಾಂತ್ರಕ ಚರಣ್ ರಾಜ್ ಅವರ ಸ್ವರ‌ಸಂಯೋಜನೆಯಲ್ಲಿ ಮೂಡಿ ಬಂದಿರುವ ‌’ಪಾಪ್ ಕಾರ್ನ್ ಮಂಕಿ‌ ಟೈಗರ್’ ಸಿನೆಮಾದ ‘ಮಾದೇವ’ ಹಾಡು ಶುಕ್ರವಾರ ಬೆಳಗ್ಗೆ 10:30 ಕ್ಕೆ ಯೂಟ್ಯೂಬ್ ನಲ್ಲಿ ರಬಿಡುಗಡೆಯಾಗಿದೆ.

ಪಾಪ್ ಶೈಲಿಯ ಈ ಹಾಡಿಗೆ ಇಂಗ್ಲಿಷ್ ನಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಮಗ ಹೃತ್ವಿಕ್ ಕಾಯ್ಕಿಣಿ ಮತ್ತು ಹ‌ನು ಮ್ಯಾನ್ ಕೈಂಡ್ ಅವರು ಸಾಹಿತ್ಯ ರಚಿಸಿದಿದ್ದಾರೆ. ಮಾದೇವ, ಮಕ್ಳು ಜೋಪಾನ, ದಗಾ, ಸಜಾ ಎಂಬ ನಾಲ್ಕು ಕನ್ನಡ ಪದಗಳನ್ನು ಈ ಹಾಡಿನಲ್ಲಿ ಬಳಸಲಾಗಿದೆ.

ಈ ಹಾಡಿಗೆ ದನಿಯಾಗಿರುವವರು ಸಂಚಿತ್ ಶೆಟ್ಟಿ, ಹನು ಮ್ಯಾನ್ ಕೈಂಡ್ ಮತ್ತು ಚರಣ್ ರಾಜ್. ಒಟ್ಟಾರೆ ಈ ಹಾಡು ಕೇಳುಗರಲ್ಲಿ ಹೊಸ ಕ್ರೇಝ್ ಹುಟ್ಟು ಹಾಕಿರುವವುದು, ಏಕೆಂದರೆ ಪದೇ ಪದೇ ಕೇಳಬೇಕೆನ್ನಿಸುವ ಈ ಹಾಡು ಜನಮಾನಸದಲ್ಲಿ ಸದಾ ಉಳಿಯುವುದಂತೂ ಸತ್ಯ.

ಎಲ್ಲವನ್ನೂ ಕುತೂಹಲದ ಕಣ್ಣಿನಿಂದ ನೋಡುವ ಸೂರಿ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ತಂಡದ ಸದಸ್ಯರನ್ನೂ ಕೂಡ ಅದೇ ಹಾದಿಯಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಈ ಸಿನೆಮಾದ ‘ಟೀಸರ್’ ಮತ್ತು ಲಿರಕಲ್ ಹಾಡು ಸಾಕ್ಷಿಯಾಗಿದೆ. ಯೂಟ್ಯೂಬ್ ನಲ್ಲಿ ಈ ಹಾಡನ್ನು ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ನೋಡುಗರು ವೀಕ್ಷಿಸಿದ್ದಾರೆ.

ಮಾದೇವ ಹಾಡು ಕೇಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ಟೀಸರ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಟಾಕೀಸ್ ಸಿನಿವಾರದಲ್ಲಿ : ಆ ಕರಾಳ ರಾತ್ರಿ ‌ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ

Published

on

ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2019ರ ಅಂತ್ಯದಲ್ಲಿ ತೆರೆಕಂಡು ಉತ್ತಮ ವಿಮರ್ಶೆಗಳನ್ನು ಜೊತೆಗೆ ಈ ಸಾಲಿನ 3 ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ದಯಾಳ್ ಪದ್ಮನಾಭ್ ರವರ ನಿರ್ದೇಶನದ ಕನ್ನಡ ಚಿತ್ರ ‘ಆ ಕರಾಳ ರಾತ್ರಿ ’ ಚಿತ್ರದ ಉಚಿತ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 18-01-2020ರ ಶನಿವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ಆ ಕರಾಳರಾತ್ರಿ ಚಿತ್ರವು ಪಕ್ಕಾ ಕ್ರೈಂ ಥ್ರಿಲರ್ ಚಿತ್ರವಾಗಿದ್ದು, ಮೋಹನ್ ಹಬ್ಬುರವರ ನಾಟಕವನ್ನಾಧರಿಸಿದೆ. ಚಿತ್ರದ ಇಡೀ ಕಥೆ 1980ಯಲ್ಲಿ ನಡೆಯುತ್ತದೆ. ಗುಡ್ಡಗಾಡಿನ ಪ್ರದೇಶವದು, ಬಡತನವನ್ನು ಅಲ್ಲಿನ ಒಂಟಿ ಮನೆ ಅಪ್ಪಿಕೊಂಡಿದೆ. ಬದುಕಿನ ಭರವಸೆಗಳೇ ಇಲ್ಲದೇ ಬದುಕುತ್ತಿರುವ ಮೂರು ಜೀವಿಗಳ ಪೈಕಿ, ಒಬ್ಬಬ್ಬೊರದು ಒಂದೊಂದು ಕನಸು.

ಅಂತಹ ಮನೆಗೆ ಲಕ್ಷ್ಮಿ ತಾನಾಗಿಯೇ ಬಂದರೆ ಏನಾಗುತ್ತದೆ? ಎನ್ನುವುದು ಚಿತ್ರದ ಸಾರಾಂಶ. ಚಿತ್ರವು ಈ ಭಾರಿಯ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ನಿರ್ದೇಶಕ ಸಾಲಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದೆ.

ಚಿತ್ರದಲ್ಲಿ ಜೆ.ಕೆ. ಅನುಪಮ ಗೌಡ, ವೀಣಾ ಸುಂದರ್, ಸಿಹಿ ಕಹಿ ಚಂದ್ರು, ನವೀನ್ ಕೃಷ್ಣ ಮುಂತಾದವರಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ಸಂಭಾಷಣೆ, ಪಿ.ಕೆ.ಎಚ್.ದಾಸ್‍ರವರ ಛಾಯಾಗ್ರಹಣವಿದೆ. ಚಿತ್ರದ ಒಟ್ಟು ಅವಧಿ 98 ನಿಮಿಷಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಮರಾಠರನ್ನು ಕೆಣಕಿದ‌ ನಿರ್ಮಾ ಜಾಹೀರಾತು : ನಟ ಅಕ್ಷಯ್ ಕುಮಾರ್ ವಿರುದ್ಧ ದೂರು ದಾಖಲು

Published

on

ಸುದ್ದಿದಿನ,ಮುಂಬೈ: ನಿರ್ಮಾ ಡಿಟರ್ಜಂಟ್ ಜಾಹೀರಾತಿನಲ್ಲಿ ಮರಾಠಾ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅಕ್ಷಯ್ ಕುಮಾರ್ ವಿರುದ್ಧ ಇಬ್ಬರು ವ್ಯಕ್ತಿಗಳು ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಅಕ್ಷಯ್ ಕುಮಾರ್ ಮರಾಠಾ ಯೋಧ ಎಂದು ತೋರಿಸಿದ ನಿರ್ಮಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಮರಾಠಿ ಸಂಸ್ಕೃತಿಯನ್ನು ಕೆಣಕಿದ್ದಾರೆ. ಶಿವಾಜಿ ಮಹಾರಾಜರ ಅನುಯಾಯಿಗಳ ಭಾವನೆಗಳನ್ನು ನೋಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಾಹೀರಾತು ಚಿತ್ರದಲ್ಲಿ ಕುಮಾರ್ ಅವರನ್ನು ಮರಾಠಾ ಯೋಧ ಎಂದು ಚಿತ್ರಿಸಲಾಗಿದೆ.

ಜಾಹೀರಾತಿನಲ್ಲಿ, ಅಕ್ಷಯ್ ಯುದ್ಧದಿಂದ ಹಿಂತಿರುಗಿರುವುದನ್ನು ಕಾಣಬಹುದು ಮತ್ತು ತಕ್ಷಣವೇ ಅವನ ಹೆಂಡತಿಯು ಕೊಳಕು ಬಟ್ಟೆಗಳಿಗಾಗಿ ದೂಷಿಸುತ್ತಾಳೆ. ನಂತರ ಅವನು ತನ್ನ ಬಟ್ಟೆಗಳನ್ನು ಒಗೆಯಲು ಡಿಟರ್ಜೆಂಟ್ ಅನ್ನು ಹೊರತೆಗೆಯುತ್ತಾನೆ. ಇದು ಮರಾಠಾ ಸಮುದಾಯವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಖಿಲಾಡಿ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.

ನಿರ್ಮಾ ಜಾಹೀರಾತು

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending