Connect with us

ಸಿನಿ ಸುದ್ದಿ

“ಹೋದ ಉಸಿರು”ಬಹುಭಾಷೆಯ ಕಿರುಚಿತ್ರ ನೋಡಿ,ತಬ್ಬಲಿ ಜಾತಿಯ ಅಲೆಮಾರಿಯಾದ ಚಂದ್ರು ಯಡವಲ್ ರವರ ವಿಲನ್ ಪಾತ್ರವನ್ನು ನೋಡಿ ಅಭಿನಂದಿಸಿ ಪ್ರೋತ್ಸಾಹಿಸಿ..!

Published

on

ಸಿನಿಮಾ ಅಂದರೆ ಸಾಕು ಎಲ್ಲ ಭಾಗದಿಂದಲೂ ಹೆಚ್ಚಾಗಿ ಕೇಳಿ ಬರುವ ಹೆಸರು ಬೆಂಗಳೂರು-ಮೈಸೂರಿನ ಮಂಡ್ಯ ಕಡೆಯವರು,ಬಲ್ಯಾಡರು,ದುಡ್ಡಿದ್ದ ಶ್ರೀಮಂತರೆ ಸಿನಿಮಾ ಮಾಡುತ್ತಾರೆ,ಅದರಲ್ಲೂ ಕಿರುಚಿತ್ರವೆಂದರೆ ಸಾಕು ಬೆಂಗಳೂರು-ಮೈಸೂರು,ಹುಬ್ಬಳ್ಳಿ-ಧಾರವಾಡದ ಜನತೆಯೆ ಮುಂದು ಹಾಗೂ ಪರಿಣಿತರೂ ಸಹ ಹೌದು ಎಂಬ ಭಾವನೆ ನಮ್ಮ ಭಾಗದವರ ಸರ್ವೇಸಾಮಾನ್ಯವಾದ ಮನೋಭಾವನೆ.ಆದರೆ ಇದರ ಮಧ್ಯೆಯೂ ಪಕ್ಕಾ ಅಲೆಮಾರಿಯೊಬ್ಬನ ಪ್ರತಿಭೆಯೊಂದು ಯಾವ ರಂಗಭೂಮಿಯ ತರಬೇತಿಯಿಲ್ಲದೆ

(ಒಂಥರಾ ಅಲೆಮಾರಿಗಳೆಲ್ಲ ಕಲಾವಿದರೇ)
ಇವರು ಚಿಕ್ಕಂದಿನಲ್ಲಿ ಹಗಲುವೇಷಗಾರನಾಗಿ ತಂದೆಯ ಜೊತೆ ಹಗಲುವೇಷಗಾರಿಕೆಯ ಪಾತ್ರದ ಮುಖಾಂತರ ತಮಿಳುನಾಡು,ಆಂಧ್ರಪ್ರದೇಶ,ಕರ್ನಾಟಕದ ಕೆಲವು ಭಾಗದಲ್ಲಿಯೂ ಕುಟುಂಬದ ಜೀವನೋಪಯಕ್ಕಾಗಿ ಹಿರಿಯರಿಂದ ಬಂದ ಬಳುವಳಿಯ ವೃತ್ತಿಯಾದ ವೇಷಗಾರಿಕೆಯನ್ನು ಮಾಡಿರುತ್ತಾರೆ.

ಆ ಹಗಲುವೇಷಗಾರಿಕೆ ಇಂದು ಕೈ ಹಿಡಿದಿದೆ ಅಂತಲೇ ಎನ್ನಬಹುದು ಮತ್ತು ಸರಿಯಾದ ಉನ್ನತ ವಿದ್ಯಾಭ್ಯಾಸವನ್ನು ಕಲಿಯದ ಬಡ ಅಲೆಮಾರಿ ಕುಟುಂಬದ ಹಿನ್ನೆಲೆಯಲ್ಲಿ ಬಂದಿರುವ ಹಾಗೂ *ಇಂದಿಗೂ ತನ್ನ ಬೇರೆ-ಬೇರೆ ವೃತ್ತಿ ಕಾಯಕದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಮಾನ್ವಿ (ನೂತನ ಸಿರವಾರ) ತಾಲ್ಲೂಕಿನ ಕವಿತಾಳ ಎಂಬ ಪಟ್ಟಣದ ವ್ಯಕ್ತಿಯಾದ ನನ್ನ ಸಂಬಂಧಿಯಾದ(ಮಾವ),ಮಾರ್ಗದರ್ಶಿ,
ಹಿತೈಷಿ,ಅಲೆಮಾರಿಗಳ ಸಾಮಾಜಿಕ ಹೋರಾಟಗಾರ, ಅಲೆಮಾರಿಗಳ ಕಾಳಜಿಯುಳ್ಳ ಅಪ್ಪಟ ಅಲೆಮಾರಿಗಳ ಭಾವಿನಾಯಕ,ಅಲೆಮಾರಿ ಸಮಾಜದ ಹೆಮ್ಮೆಯ ಕುಡಿಯಾದ ನಮ್ಮ ನಿಮ್ಮೆಲ್ಲರ ನೆಚ್ಚಿನ ಆತ್ಮೀಯರಾದ,ಸಹೋದರ ಚಂದ್ರಶೇಖರ್ ಯಡವಲ್ ಎಂಬುವವರು ನಿಖಿತ್ ಪರಿಚಯಿಸುವ ಬಹುಭಾಷೆಯ ಕಿರುಚಿತ್ರವಾದ ಹೋದ ಉಸಿರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿ, ನಿರ್ಮಾಪಕರಾಗಿಯೂ ಕೆಲಸ ಮಾಡಿರುತ್ತಾರೆ.

ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿರುವ ಚೊಚ್ಚಲ(ಮೊದಲ) ಸಿನಿಮಾ “ಹೋದ ಉಸಿರು” ಕಿರುಚಿತ್ರವು ಆರ್ ಪ್ರೊಡಕ್ಷನ್ ಅರ್ಪಿಸುವ ನಿದೇರ್ಶನ,
ಛಾಯಾಗ್ರಹಣರಾದ ರಾಕೇಶ್ ಆಚಾರ್ಯರವರ ಕಥೆ-ಚಿತ್ರಕಥೆ‌:-ಸಂಪತ್ ರಾಯ್ ನೇತೃತ್ವದಲ್ಲಿ ಮೂಡಿಬಂದಿದೆ. ಇದೊಂದು ಪಕ್ಕಾ ಹಳ್ಳಿಯ ನೈಜ ಘಟನಾಧಾರಿತವಾದ ಪ್ರೀತಿಯ ಬಲೆಗೆ ಬಿದ್ದು ಪ್ರೇಮಿ ಕೊಲೆಯಾಗುವ ಕಥೆಯಾಗಿದ್ದು,ಈ ಕಿರುಚಿತ್ರವು ರಾಜ್ಯಾದ್ಯಂತ ಏಕಕಾಲಕ್ಕೆ ಬಹುಭಾಷೆಯಲ್ಲಿ ಅಂದರೆ ಐದು ಭಾಷೆಯಲ್ಲಿ
(ಕನ್ನಡ,ತೆಲುಗು,
ತಮಿಳು,ಮಲಯಾಳಂ,ಹಿಂದಿ)
Youtube ಲಿ ಬಿಡುಗಡೆಗೊಳ್ಳಲಿದೆ ಮತ್ತು
ಮುಂದುವರೆದು ಚಿತ್ರಮಂದಿರಗಳಲ್ಲಿಯೂ ಪ್ರಸಾರವಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಆದ್ದರಿಂದ ತಾವುಗಳು ಈ ಚಿತ್ರವನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಬಂದು ಬಳಗದವರ ಜೊತೆ ಹಂಚಿಕೊಂಡು ಕಿರುಚಿತ್ರವನ್ನು ನೋಡುವುದರ ಮೂಲಕ ಈ ಕಿರುಚಿತ್ರದಲ್ಲಿ ಬಹುಭಾಷೆಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಈ ಭಾಗದ ಹಳ್ಳಿಯ, ಅಪ್ಪಟ್ಟ ಅಲೆಮಾರಿಯ ಯುವ ಪ್ರತಿಭೆಯಾದ ಚಂದ್ರಶೇಖರ್ ಯಡವಲ್ ಹಾಗೂ ಇನ್ನೊಬ್ಬ ನಾಯಕ-ನಟನಾದ ಸಂಪತ್ ರಾಯ್ ಇವರನ್ನು ಗುರುತಿಸಿ, ಪ್ರೋತ್ಸಾಹಿಸಿ,ಸಹಕರಿಸಿ ಆರ್ಶಿವಾದಿಸಬೇಕಾಗಿ ಸಕಲರಲ್ಲಿ ವಿನಂತಿ.

ಇನ್ನೂ ಅನೇಕ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ಜನಮನ್ನಣೆ ಪಡೆದು ಆದಷ್ಟು ಬೇಗನೆ ಚಿತ್ರರಂಗಕ್ಕೆ ಅಲೆಮಾರಿ ಬಂಧುವಾದ ಚಂದ್ರಶೇಖರ್ ಯಡವಲ್ ರವರು ಪಾದಾರ್ಪಣೆಯನ್ನು ಮಾಡಲೆಂದು,ಮುಂದಿನ ಚಿತ್ರರಂಗದ ಅವರ ಬದುಕು ಸುಗಮವಾಗಿ ಸಾಗಿ ಯಶಸ್ಸು ಲಭಿಸಲೆಂದೂ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಶಿವರಾಜ್ ಮೋತಿ ಹಟ್ಟಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಸಂತ್ರಸ್ತರಿಗೆ ‘ಕುರುಕ್ಷೇತ್ರ’ದ ಸಂಭಾವನೆ ನೀಡಿದ ನಿಖಿಲ್ ಕುಮಾರಸ್ವಾಮಿ..!

Published

on

ಸುದ್ದಿದಿನ ಡೆಸ್ಕ್ : ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದ ನಿಖಿಲ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನಿಖಿಲ್ ಪಾತ್ರ ಅದ್ಭುತವಾಗಿ ಬಂದಿದೆ. ಇದೀಗ, ಈ ಚಿತ್ರದಿಂದ ಬಂದ ಸಂಭಾವನೆಯನ್ನ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ಥರಿಗೆ ನೀಡಲು ನಿಖಿಲ್ ಮುಂದಾಗಿದ್ದಾರೆ. ಮಾನವೀಯತೆ ದೃಷ್ಠಿಯಿಂದ ಆ ಮೊತ್ತವನ್ನ ನೆರೆ ಸಂತ್ರಸ್ಥರಿಗೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಸಿನಿ ಸುದ್ದಿ

“ಗಂಡಸು ಎಂದು ಸಾಬೀತು ಪಡಿಸಲು ಮದ್ಯಪಾನ ಮಾಡಬೇಕಿಲ್ಲ, ಕತ್ತಲೂ ಆಗ ಬೇಕಿಲ್ಲ” : ಕಿಚ್ಚ ಸುದೀಪ್ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : ಇನ್ನೇನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ‘ಪೈಲ್ವಾನ್’ ಸಿನೆಮಾ ಬಿಡುಗಡೆಯ ತಯಾರಿಯಲ್ಲಿದೆ. ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಪೈಲ್ವಾನ್ ಚಿತ್ರದ ಕೆಲವು ಹಾಡುಗಳನ್ನು ಚಿತ್ರ ತಂಡ ಬಿಡುಗಡೆ ಸಿದ್ದತೆ ಮಾಡಿಕೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಬಿಡುಗಡೆ ಗೊಳಿಸಲು ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಎಂದೆಂದೂ ಕಂಡರಿಯದ ಪ್ರವಾಹದಿಂದ ಅಲ್ಲಿನ ಜನತೆ ಸಂಕಷ್ಟದಲ್ಲಿ ಸಿಲುಕಿದರು. ಈ ಕಾರಣದಿಂದಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮುಂದೂಡಲಾಯಿತು.

ಅಂದಹಾಗೆ ಕಿ್ಚ್ಚ್ಚ್ಚಚ್ಚ ಸುದೀಪ್ ಇಂದು ಮಾಡಿರುವ ಟ್ವೀಟ್ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾರಣ ಇಷ್ಟೆ ಅವರು ಮಾಡಿರುವ ಟ್ವೀಟ್, ಹೀಗಿದೆ ” ನಾನು ಎಲ್ಲೋ‌ ಓದಿದ ಸಾಲುಗಳಿವು, ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಿಲ್ಲ, ಕತ್ತಲು ಆಗಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ‌. ಇದು ಯಾರಿಗೆ ಟಾಂಗ್ ಕೊಡಲು ಮಾಡಿದ್ದಾರೆ ಎಂಬುದು ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಹಾಗೆ “ಏನನ್ನೋ ಸಾಬೀತು ಪಡಿಸಲು ನಾನು ಪೈಟ್ ಮಾಡುವುದಿಲ್ಲ, ಯೋಗ್ಯತೆ ಇರುವವರೊಂದಿಗೆ ಅಷ್ಟೆ ನನ್ನ ಪೈಟ್” ಎಂಬ ಪೋಟೋ ಪೋಸ್ಟರ್ ಅನ್ನು ಕೂಡ ಟ್ವೀಟ್ ಮಾಡಿದ್ದಾರೆ‌.

 

Continue Reading

ಸಿನಿ ಸುದ್ದಿ

ಫಸ್ಟ್ ಲುಕ್ ರಿಲೀಸ್ ಮಾಡಿದ ‘ರಾಂಚಿ’ ಸಿನಿಮಾ

Published

on

ಸುದ್ದಿದಿನ, ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಂಚಿ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇಡುಗಡೆ ಮಾಡಿದೆ. ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ಇದೀಗ ನಿರ್ದೇಶಕರಾಗಿ ಬದಲಾಗಿದ್ದಾರೆ. ಅರ್ರೆ ಶಾಕ್ ಹಾಗಬೇಕು ಅದ್ಹೇಗಪ್ಪಾ ಒಬ್ಬ ನಟ ಡೈರೆಕ್ಟರ್ ಆದ್ರೂ ಅನ್ಕೊಂಡ್ರಾ ಮುಂದೆ ಓದ್ರಿ..

‘ರಾಂಚಿ’ ಚಿತ್ರದಲ್ಲಿ ನಾಯಕನಾಗಿ ಡೈರೆಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆಯಾದರಿತ ಚಿತ್ರವಾಗಿದೆ. ‘‘ರಾಂಚಿ’ ಚಿತ್ರದಲ್ಲಿ ನಾನು ಚಿತ್ರದ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಒಳಗೊಂಡಿದೆ. ಹಾಗಾಗಿಯೇ ಪಾತ್ರವೂ ತುಂಬಾ ಜವಬ್ದಾರಿಯುತವಾಗಿದೆ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಆಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ರಾಂಚಿ ಎಂದು ಹೆಸರಿಡಲಾಗಿದೆ.

‘ನಾನು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೂ, ಚಿತ್ರದ ಪೋಸ್ಟರ್‌ಗೆ ಈಗಾಗಲೇ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗ ನನ್ನ ಅಭಿನಯದ ‘ರಿಲ್ಯಾಕ್ಸ್ ಸತ್ಯ’ ಮತ್ತು ‘ಮಾಯಾ ಕನ್ನಡಿ’ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದೇನೆ. ನಾನು ಮುಂದಿನ ಸಿನಿಮಾಕ್ಕಾಗಿ ಸಿಕ್ಸ್‌ಪ್ಯಾಕ್ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಕಟ್ಟುನಿಟ್ಟಿನ ವರ್ಕೌಟ್ ಆರಂಭಿಸಿದ್ದೇನೆ. ಹೊಸ ಸಿನಿಮಾದ ಆಯ್ಕೆಯಲ್ಲಿ ನಾನು ತುಂಬಾ ಚೂಸಿಯಾಗಿದ್ದೇನೆ.

ನಿರ್ದೇಶಕರ ಪಾತ್ರ ಮಾಡುವುದು ಒಂದು ಜವಬ್ದಾರಿಯುವಾದ ವೃತ್ತಿ ಎಂದು ನನಗೆ ರಾಂಚಿ ಸಿನಿಮಾದಲ್ಲಿ ತಿಳಿಯಿತು. ಈ ಸಿನಿಮಾವನ್ನು ಆನಂದ್ ಹಾಗೆ ಅರುಣ್ ನಿರ್ಮಿಸುತ್ತಿದ್ದು. ರುದ್ರ ಫಿಲಂ ಹಾಗಿ ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಪ್ರಭು ಮುಂಡ್ಕುರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending