Connect with us

ಸಿನಿ ಸುದ್ದಿ

ಡಿ ಬಾಸ್ ನಾಯಕಿಯಾಗಿ ‘ಮಹಾನಟಿ’ ಕೀರ್ತಿ ಸುರೇಶ್..!

Published

on

ಸುದ್ದಿದಿನ, ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ ಗಂಡುಗಲಿ ವೀರ ಮದಕರಿ ನಾಯಕ’ ಸಿನೆಮಾ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ದರ್ಶನ್ ಅವರ ಹುಟ್ಟು ಹಬ್ಬದಂದು ಚಿತ್ರತಂಡ ಈ ಸಿನೆಮಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿತ್ತು.

ಆದರೆ ಸಿನೆಮಾ ಯಾವಾಗ ಸೆಟ್ಟೇರುತ್ತೆ ? ಹಾಗೇ ಸಿನೆಮಾದ ನಾಯಕಿ ಯಾರು ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದವು. ಆದರೆ ಈಗ ಈ ಸಿನೆಮಾಗೆ ತಮಿಳು ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಾರೆಂದು ಮಾಹಿತಿ ತಿಳಿದು ಬಂದಿದೆ.

ತಮಿಳಿನ ‘ಮಹಾನಟಿ’ ಸಿನೆಮಾ ಮೂಲಕ ತಮ್ಮ ಅಭಿನಯದ ಜನ-ಮನಗೆದ್ದಿರುವ ನಟಿ ಕೀರ್ತಿ ಸುರೇಶ್ ‘ಗಂಡುಗಲಿ ವೀರ ಮದಕರಿ ನಾಯಕ’ ಸಿನೆಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇಷ್ಟರಲ್ಲೇ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕಲಿದೆ. ಹಾಗೇ ಚಿತ್ರದ ಮಹೂರ್ವೂ ಸದ್ಯದಲ್ಲೇ ನಡೆಯಲಿದೆಯಂತೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಫಸ್ಟ್ ಲುಕ್ ವಿಡಿಯೋ ನೋಡಿ | ಸುಕ್ಕಾ ಸೂರಿಯ ‘ಬ್ಯಾಡ್ ಮ್ಯಾನರ್ಸ್’ ನಲ್ಲಿ ಜೂನಿಯರ್ ರೆಬೆಲ್

Published

on

ಸೂರಿ ಸಿನಿಮಾ ಎಂದರೆ ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾದ ನಿರೂಪಣೆಯಲ್ಲಿ ಇರುತ್ತೆ. ಇನ್ನೂ ಚಿತ್ರದ ಟೈಟಲ್ ಗಳನ್ನೂ ಕೂಡ ಅಷ್ಟೇ ವಿಭಿನ್ನವಾಗಿ ಇಡುತ್ತಾರೆ.

ದುನಿಯಾ ಇಂತಿ ನಿನ್ನ ಪ್ರೀತಿಯ ದಿಂದ ಈ ವರ್ಷ
ತೆರೆಕಂಡ ಪಾಪ್ ಕಾರ್ನ್ ಮಂಕಿ ಸೀನ ಚಿತ್ರದ ವರೆಗೆ ತಮ್ಮದೆ ಆದ ಶೈಲಿಯ ಚಿತ್ರಗಳನ್ನು ಸಿನಿ ಪ್ರಿಯರಿಗೆ ನೀಡಿ ಮನರಂಜಿಸಿದ್ದಾರೆ. ಈಗ
ಮತ್ತೊಂದು ಭಿನ್ನವಾದ ಶೀರ್ಷಿಕೆಯ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ‌.

ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಎಂಬ
ಹೆಸರಿಟ್ಟಿರುವ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟು ಹಬ್ಬ.

ಈ ಹುಟ್ಟು ಹಬ್ಬದ ವಿಶೇಷಕ್ಕಾಗಿ ಅವರ ಅಭಿಮಾನಿಗಳಿಗೆ ಉಡುಗೊರೆಯಾಗಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ತುಂಬಾ ಆಕರ್ಷಕವಾಗಿರುವ ಈ ಫಸ್ಟ್ ಲುಕ್ ಪೋಸ್ಟರ್ ಅಂಬಿ ಅವರ ಹುಟ್ಟು ಹಬ್ಬದ ಹಬ್ಬದ ಉಡುಗೊರೆಯಾಗಿದೆ. ಈ ಚಿತ್ರವು
ಶೀಘ್ರದಲ್ಲೇ ಶುರುವಾಗಲಿದೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಪ್ಯಾಟೆ ಹುಡುಗಿ ಹಳ್ಳಿ ಲೈಫು’ ಮೆಬಿನ ಮೈಕಲ್ ದುರಂತ ಅಂತ್ಯ : ಕಂಬನಿ ಮಿಡಿದ ಅಭಿಮಾನಿಗಳು

Published

on

ಸುದ್ದಿದಿನ,ಮಂಡ್ಯ: ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ‘ಪ್ಯಾಟೆ ಹುಡುಗಿ ಹಳ್ಳಿ ಲೈಫು’ ರಿಯಾಲಿಟಿ ಖ್ಯಾತಿಯ ಮೆಬಿನ‌ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಮಂಗಳವಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಅತೀವ ದುಃಖದಿಂದ ಕಂಬನಿ ಮಿಡಿದರು.

ಬೆಂಗಳೂರಿನಿಂದ ಸೋಮವಾರಪೇಟೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಮೆಬೀನಾ ಅವರು ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಎದುರುಗಡೆಯಿಂದ ಬಂದ ಟ್ರಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮೆಬೀನಾ ಅವರನ್ನು ಮೊದಲು ಆದಿಚುಂಚನಗಿರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗ ಮದ್ಯೆಯೇ ಮೃತಪಟ್ಟಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನ ಮೈಕಲ್ ಅವರ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346253

Continue Reading

ದಿನದ ಸುದ್ದಿ

ಮನು ರವಿಚಂದ್ರನ್ ‘ಚಿಲ್ಲಂ’ ಮತ್ತೆ ಶುರು..!

Published

on

ಸಿನೆಮಾ ಸುುದ್ದಿ:   ‘ಪ್ರಾರಂಭ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನಟ ಮನು ರವಿಚಂದ್ರನ್ ಮುಗಿಲ್‌ಪೇಟೆಯ ಚಿತ್ರೀಕರಣ ಪುನರಾರಂಭಿಸಲು ಕಾಯುತ್ತಿದ್ದಾರೆ. ಇದರ ಜೊತೆಗೆ ಇದೇ ವರ್ಷದಲ್ಲಿ ಚಿಲ್ಲಂ ಚಿತ್ರದ ಕೆಲಸವನ್ನೂ ಪ್ರಾರಂಭಿಸಲಿದ್ದಾರೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ 2018ರಲ್ಲಿ ಪ್ರಾರಂಭವಾಗಿ 10 ದಿನಗಳ ಚಿತ್ರೀಕರಣದ ನಂತರ ಮೊಟಕುಗೊಂಡಿತ್ತು.

ಚಿಲ್ಲಂ ಒಂದು ಆಸಕ್ತಿದಾಯಕ ವಿಷಯವಾಗಿದೆ. ಇದು ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಿದ ನಾಯಕನ ಚಿತ್ರವಾಗಿದೆ. ಅದರಲ್ಲಿ ನನ್ನನ್ನು ಕೆಟ್ಟ ಹುಡುಗ ಅವತಾರದಲ್ಲಿ ಚಿತ್ರಿಸಲಾಗುವುದು. ಇದು ನಾನು ಅನ್ವೇಷಿಸಲು ಬಯಸುವ ಒಂದು ವಿಶಿಷ್ಟ ಪಾತ್ರವಾಗಿರುತ್ತದೆ, ಮತ್ತು ಬದಲಾವಣೆ ಆಸಕ್ತಿದಾಯಕವಾಗಿದೆ. ಹೀಗಾಗಿ ನಾನು ಈ ಚಿತ್ರವನ್ನು ಬಿಡುವುದಿಲ್ಲ ಎಂದು ಮನು ರವಿಚಂದ್ರನ್ ಹೇಳಿದ್ದಾರೆ.

ಚಿಲ್ಲಂ ಚಿತ್ರಕ್ಕೂ ಮುನ್ನ ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ ಅಂದುಕೊಂಡತೆ ಚಿತ್ರೀಕರಣ ಮುಂದುವರೆಯಲಿಲ್ಲ. ಒಂದು ವಾರವಷ್ಟೆ ಚಿತ್ರೀಕರಣ ನಡೆದಿತ್ತು. ಚಿತ್ರಕ್ಕೆ ಹೆಚ್ಚಿನ ಬಂಡವಾಳ ಬೇಕಿತ್ತು. ಆದರೆ ಭಾರೀ ಬಜೆಟ್ ಗೆ ನಿರ್ಬಂಧವಿತ್ತು. ಈ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನನಗೆ ಹೊಸ ನಿರ್ಮಾಪಕರು ಸಿಕ್ಕಿದ್ದಾರೆ. ಅವರೊಂದಿಗೆ ನಾನು ದೂರವಾಣಿ ಚರ್ಚೆ ನಡೆಸಿದ್ದೇನೆ. ನಿರ್ದೇಶಕರನ್ನು ಶೀಘ್ರದಲ್ಲೇ ಭೇಟಿಯಾಗುತ್ತೇನೆ ಮತ್ತು ಚಿಲ್ಲಂಗಾಗಿ ಶೆಡ್ಯೂಲ್ ರೂಪಿಸುತ್ತೇನೆ ಎಂದು ಮನು ವಿವರಿಸಿದ್ದಾರೆ. ಜೊತೆಗೆ ಚಿಲ್ಲಮ್‌ಗೆ ಕನಿಷ್ಠ 120 ದಿನಗಳ ಶೂಟಿಂಗ್ ವೇಳಾಪಟ್ಟಿ ಬೇಕಾಗುತ್ತದೆ ಎಂದರು.

ಕೃಪೆ : ಸಿನೆತಾರಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಸೂಳೆಕೆರೆ | ಮುಂಗಾರು ಅವಧಿ ಮುಗಿಯುವವರೆಗೆ ಮೀನು ಹಿಡಿಯುವುದು ನಿಷೇಧ

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕು ಶಾಂತಿಸಾಗರ ಕೆರೆಯಲ್ಲಿ ಮುಂಗಾರು ಮಳೆಗಾಲದ ಅವಧಿಯಲ್ಲಿ ಒಳನಾಡು ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕಿನ ವಿಲೇವಾರಿ ಕಾರ್ಯನೀತಿ 2014ರ ಆದೇಶದಂತೆ ಮುಂಗಾರು ಮಳೆಗಾಲದ...

ದಿನದ ಸುದ್ದಿ2 hours ago

ವಾಷಿಂಗ್ಟನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 105 ಪ್ರಯಾಣಿಕರು

ಸುದ್ದಿದಿನ,ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಅಮೇರಿಕಾದ(ಯು.ಎಸ್.ಎ.) ವಾಷಿಂಗ್ಟನ್‌ ನಿಂದ ಇಂದು (ಮೇ 30) ಬೆಳಗಿನ ಜಾವ 3.15 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ...

ದಿನದ ಸುದ್ದಿ5 hours ago

ನಿತ್ಯ ಭವಿಷ್ಯ- ಶನಿವಾರ | ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ : ಕರೆಮಾಡಿ

ಶ್ರೀ ದುರ್ಗಾ ಆಂಜನೇಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,...

ದಿನದ ಸುದ್ದಿ15 hours ago

ಚಿಗಟೇರಿ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಭೇಟಿ: ಆರ್‍ಟಿಪಿಸಿಆರ್ ಲ್ಯಾಬ್ ಸಿದ್ದತೆ ವೀಕ್ಷಣೆ

ಸುದ್ದಿದಿನ,ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬ್ ತಯಾರಿ ನಡೆಸುತ್ತಿರುವುದನ್ನು ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಸ್ಪತ್ರೆ...

ದಿನದ ಸುದ್ದಿ16 hours ago

ಆರೋಗ್ಯ ಇಲಾಖೆಯಲ್ಲಿನ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ಶಿವಮೊಗ್ಗ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ವೈರಲ್ ರೀಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ(ವಿ.ಆರ್.ಡಿ.ಎಲ್.) ವಿಭಾಗದಲ್ಲಿ ಖಾಲಿ ಇರುವ ರೀಸರ್ಚ್ ಸೈಂಟಿಸ್ಟ್ ಮತ್ತು ಪ್ರಯೋಗಶಾಲಾ ತಂತ್ರಜ್ಞರ ತಲಾ ಒಂದು...

ದಿನದ ಸುದ್ದಿ16 hours ago

ದಾವಣಗೆರೆ ಕೋವಿಡ್-19 | ಒಟ್ಟು 84 ಜನ ಬಿಡುಗಡೆ

ಸುದ್ದಿದಿನ,ದಾವಣಗೆರೆ : ದಾವಣಗೆರೆಯಲ್ಲಿ ಇಂದು ಒಟ್ಟು 4 ಜನರಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಇಂದು ಗುಣಮುಖರಾದ...

ದಿನದ ಸುದ್ದಿ19 hours ago

ಮಿಡತೆ ದಾಳಿಯ ಪೂರ್ವಾಪರ : ಅದೂ ಯಾಕೊ ಕೊರೊನಾ ಥರಾ..!

ನಾಗೇಶ್ ಹೆಗಡೆ ಅತ್ತ ಪೂರ್ವಭಾರತದಲ್ಲಿ ಅಂಫನ್ ದಾಳಿ, ಇತ್ತ ದಿಲ್ಲಿಯ ಸುತ್ತ ಬಿಸಿಗಾಳಿಯ ದಾಳಿ, ಈಕಡೆ ಪಶ್ಚಿಮ ಭಾರತದಲ್ಲಿ ಮಿಡತೆ ದಾಳಿ. ಕೊರೊನಾ ಸಂದರ್ಭದಲ್ಲೇ ಬಂದೊದಗಿದ ಮಿಡತೆ...

ದಿನದ ಸುದ್ದಿ20 hours ago

ಫಸ್ಟ್ ಲುಕ್ ವಿಡಿಯೋ ನೋಡಿ | ಸುಕ್ಕಾ ಸೂರಿಯ ‘ಬ್ಯಾಡ್ ಮ್ಯಾನರ್ಸ್’ ನಲ್ಲಿ ಜೂನಿಯರ್ ರೆಬೆಲ್

ಸೂರಿ ಸಿನಿಮಾ ಎಂದರೆ ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾದ ನಿರೂಪಣೆಯಲ್ಲಿ ಇರುತ್ತೆ. ಇನ್ನೂ ಚಿತ್ರದ ಟೈಟಲ್ ಗಳನ್ನೂ ಕೂಡ ಅಷ್ಟೇ ವಿಭಿನ್ನವಾಗಿ ಇಡುತ್ತಾರೆ. ದುನಿಯಾ ಇಂತಿ ನಿನ್ನ...

ದಿನದ ಸುದ್ದಿ22 hours ago

ಕೋವಿಡ್-19 ಮಧ್ಯಾಹ್ನದ ವರದಿ | 178 ಹೊಸ ಪ್ರಕರಣ ಪತ್ತೆ : ರಾಜ್ಯದಲ್ಲಿ ಒಟ್ಟು 2711 ಕೇಸ್

ಸುದ್ದಿದಿನ, ಬೆಂಗಳೂರು : ಕರ್ನಾಟಕದಲ್ಲಿ ಕೊರೋನ ತಡೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊರೋನಾ ಮುಕ್ತ ರಾಜ್ಯವಾಗಲು ಶ್ರಮಿಸುತ್ತಿದೆ. ಹಾಗೆಯೇ ಕೋವಿಡ್ ವಾರಿಯರ್ಸ್ ಕೂಡಾ ಹಗಲಿರುಳು ಶ್ರಮವಹಿಸಿ...

ದಿನದ ಸುದ್ದಿ22 hours ago

ದಾವಣಗೆರೆಯಲ್ಲಿಂದು 4 ಕೊರೊನಾ ಪಾಸಿಟಿವ್ ಕೇಸ್ ಪತ್ತೆ : ಒಟ್ಟು 63 ಆ್ಯಕ್ಟೀವ್ ಕೇಸ್

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಇಂದು ನಾಲ್ಕು ಕೊರೊನಾ ಸೋಂಕು ಪ್ರಕರಣ ವರದಿಯಾಗಿದೆ. ಈ ಮೂಲಕ ಸೋಂಕಿತರ ಸಕ್ರಿಯ ಪ್ರಕರಣ 63ಕ್ಕೆ ಏರಿದಂತಾಗಿದೆ. ಗುರುವಾರ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿರಲಿಲ್ಲ....

Trending