ಸಿನಿ ಸುದ್ದಿ
ಸಲ್ಲು ಭಾಯ್ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ‘ಭಾರತ್’..!

ಕಳೆದ ವಾರ ಈದ್ ಗೆ ಬಿಡುಗಡೆ ಗೊಂದ ಸಲ್ಲು ಭಾಯ್ ರ ಬಹುನಿರೀಕ್ಷಿತ ಚಿತ್ರ “ಭಾರತ್” , ಬಿಡುಗಡೆಯಾದ ಮೂರೇ ದಿನಕ್ಕೆ ನೂರರ ಕ್ಲಬ್ ಸೇರಿದೆ. ಮೂರನೇ ದಿನವೇ 103 ಕೋಟಿ ರೂಗಳನ್ನುಗಳಿಸಿದ್ದು ಭರ್ಜರಿ ಓಪನಿಂಗ್ ಪಡೆದಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್ ರ ಪ್ರೇಮ ಕಹಾನಿ ದಿಲ್ ಖುಷ್ ಮಾಡಿದರೆ, ಸುನೀಲ್ ಗ್ರೋವರ್ ರ ಅಧ್ಬುತ ಕಾಮಿಡಿ ಮತ್ತು ಸಲ್ಲು-ಸುನೀಲ್ ರ ಜುಗಲ್ ಬಂದಿ ಸೂಪರ್ ಕೂಲ್ ಎನಿಸುತ್ತದೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿರುವ, ದೊಡ್ಡ ತಾರಾಗಣ ಒಳಗೊಂಡಿರುವ ಈ ಚಿತ್ರದಲ್ಲಿ ಜಾಕಿ ಶ್ರಾಫ್, ವಿದ್ಯಾ ಬಾಲನ್, ನೂರ್ ಫತೇಹಲಿ ಖಾನ್, ದಿಶಾ ಪಟಾಣಿ, ಸೇರಿದಂತೆ ಹಲವಾರು ತಾರೆಯರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.
ತಂದೆ ಗೆ ತಕ್ಕ ಜವಾಬ್ದಾರಿ ಯುತ ಮಗನಾಗಿ, ಸಲ್ಮಾನ್ ಖಾನ್ ರ ಅಮೋಘ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ.70 ರ ವೃದ್ಧನಾಗಿ ತನ್ನ ಜೀವನಗಾಥೆಯನ್ನ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುವುದರಿಂದ ಶುರುವಾಗುವ ಚಿತ್ರ, ಮುಂದೆ ಭಾರತ-ಪಾಕ್ ಗಡಿಯ ವಿಭಜನೆ ಸಮಯದ ಜನರ ನೋವು, ಕುಟುಂಬಗಳ ಮಾರಣ ಹೋಮ, ಇವೆಲ್ಲವೂ ಮನಸ್ಸಿಗೆ ನೇರವಾಗಿ ನಾಟುವಂತೆ ಚಿತ್ರಿಸಲಾಗಿದೆ.
ಹಿಂದ್ ರಾಷನ್ ಶಾಪ್ ಗಾಡಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುವ ನಾಯಕ ಭಾರತ್, ಕೂದಲೆಳೆಯ ಮೇಲೆ ಸಾಗುವ ಕಥಾಹಂದರ ಕ್ಕೆ ಸಲ್ಮಾನ್ ಖಾನ್ ರ ಅಭಿನಯವೇ ಕಥಾನಾಯಕ. 2010ರಲ್ಲಿ ಶುರುವಾಗುವ ಕಥೆ,1947, 1960 ಮತ್ತು 90ರ ದಶಕಕ್ಕೆ ಕೊಂಡೊಯ್ಯುತ್ತದೆ.
ಆಕ್ಷನ್ ಸೆಂಟಿಮೆಂಟ್ ರೊಮ್ಯಾನ್ಸ್, ಭರಿತ ಭಾರತ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು,ಸಲ್ಲು ಫಾನ್ಸ್ ಗೆ ರಸದೌತಣ ಉಣಬಡಿಸಿದೆ ಭಾರತ್. ನೂರ್ ಮತ್ತು ದಿಶಾ ರ ಎಂಟ್ರಿ ಪಡ್ಡೆ ಗಳ ಹಾರ್ಟಿಗೆ ಕಿಚ್ಚು ಹೆಚ್ಚಿಸಿದರೆ, ಕತ್ರಿನಾ ತಮ್ಮ ಎಂದಿನ ಅಭಿನಯದಿಂದ”ಮೇಡಮ್ ಸಾರ್” ಆಗಿ ನೆನಪಿನಲ್ಲಿ ಉಳಿಯುತ್ತಾರೆ. ದಿಶಾ ಪಟಾಣಿ ಯು “ಸ್ಲೋ ಮೋಷನ್” ಹಾಡು ಈ ವರ್ಷದ ಸೂಪರ್ ಹಿಟ್ ಹಾಡುಗಳ ಪಟ್ಟಿ ಸೇರಿದೆ.
ವಿಶಾಲ್-ಶೇಖರ್ ರೈ ಸಂಗೀತ ನಿರ್ದೇಶನ ದಿಲ್ಲಿ ಮೂಡಿಬಂದಿರುವ ಭಾರತ್ ಚಿತ್ರ ದ ಹಾಡುಗಳು ಈಗಾಗಲೇ ಬಾಲಿವುಡ್ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಸಲ್ಮಾನ್ ಖಾನ್ ರ ಯಶಸ್ಸಿನ ಕಿರೀಟಕ್ಕೆ ಭಾರತ್ ಮತ್ತೊಂದು ಗರಿ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
ನಟನಾಗಲು ಭಿಕ್ಷುಕರಂತೆ ಅಲೆದಾಡಿದ್ದ ಜಗ್ಗೇಶ್ : 38 ವರ್ಷದ ಹಿಂದಿನ ಕಥೆ ಇಲ್ಲಿದೆ..!

ಎಲ್ಲರಂತೆ ಜಗ್ಗೇಶ್ ಸಹ ನಟರಾಗಬೇಕೆಂದು ಆಸೆ, ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಬಂದವರು. ಇಂದು ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕ, ನಿರ್ಮಾಪಕ, ವಿತರಕರಾಗಿ ಜನಪ್ರಿಯರಾಗಿರುವ ಅವರು ಸರಿಯಾಗಿ 38 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬರಲು ಭಿಕ್ಷುಕನಂತೆ ಅಲೆದಾಡಿದ್ದರು.
ಮೊನ್ನೆ ದಿನಾಂಕ 17ಕ್ಕೆ ಜಗ್ಗೇಶ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 38 ವರ್ಷ ಕಂಪ್ಲೀಟ್ ಆಯ್ತು. ಆರಂಭದಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ, ಖಳನಾಗಿ, ಹೀರೋ ಆಗಿ ಮಿಂಚಿದ್ದ ಅವರು ನಂತರ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು.
ಸದ್ಯ ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಹಳೆಯ ನೆನಪುಗಳನ್ನು ಹಾಗೂ ಅಮ್ಮನ ಪ್ರೋತ್ಸಾಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘1980 Nov 17 ‘ಮಾಯಸಂದ್ರ’ ಪಕ್ಕದ ಪುಟ್ಟ ಹಳ್ಳಿ ‘ಆನಡಗು’ ಗ್ರಾಮದ ನಂಜೇಗೌಡರ ಮೊಮ್ಮಗ ಶಿವಲಿಂಗೇಗೌಡರ ಮಗ ಈಶ್ವರಗೌಡನನ್ನು ಒಬ್ಬ BE ಪದವೀಧರನನ್ನಾಗಿ ಮಾಡಬೇಕು ಎಂದು ಬಯಸಿದ್ದರು..! ಆದರೆ ವಿಧಿಲಿಖಿತ ಬೇರೆ ಆಗಿತ್ತು..!
ನನ್ನ ಇವನ ಬೇಟಿಯಾದದ್ದು 1988ರಲ್ಲಿ..ನಂತರ ನಾವಿಬ್ಬರು ಪ್ರತಿ shooting ನಲ್ಲಿ roommate's.. ನಾನು ಇವನಂತೆ ಹೆಚ್ಚು ಸಂಭಾವನೆ
ಪಡೆಯುವ ನಟನಾಗಿ ಇವನಂತೆ dance ಮಾಡಬೇಕೆಂದು ರಾಯರಲ್ಲಿ
ಪ್ರಾರ್ಥಿಸುತ್ತಿದ್ದೆ..ನಮ್ಮ ಕಾಲದ ಚಂದದ ಹೀರೋ ಇವನಾಗಿದ್ದ
ವಯಸ್ಸಲ್ಲಿ ನನಗಿಂತ ಕಿರಿಯ..
ಹುಟ್ಟುಹಬ್ಬದ ಶುಭಾಷಯಗಳು ಮಿತ್ರ..God bless… https://t.co/yIlWpJB7gL— ನವರಸನಾಯಕ ಜಗ್ಗೇಶ್ (@Jaggesh2) December 2, 2019
ಸಿನಿ ಸುದ್ದಿ
ವಿಡಿಯೋ | ‘ಒಡೆಯ’ ನ ಖಡಕ್ ಟ್ರೈಲರ್ ರಿಲೀಸ್ : ಮಿಸ್ ಮಾಡ್ದೆ ನೋಡಿ

ಸುದ್ದಿದಿನ ಡೆಸ್ಕ್ : ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬಹುನಿರೀಕ್ಷಿತ ಈ ಸಿನೆಮಾ ಟ್ರೇಲರ್ ಭರ್ಜರಿಯಾಗಿದ್ದು, ಹಳ್ಳಿಸೊಗಡಿನ ಸಿನೆಮಾವಾಗಿದೆ.
ಟ್ರೇಲರ್ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಡಿ ಬಾಸ್ ಅಭಿಮಾನಿಗಳಿಗೆ ಟ್ರೈಲರ್ ನಿರಾಸೆಯಂತೂ ಮೂಡಿಸಿಲ್ಲ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡಿದ್ದು, ಎಂ.ಡಿ.ಶ್ರೀಧರ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸಿನೆಮಾದ ತಾರಾಬಳಗದಲ್ಲಿ ಸಾಧುಕೂಕಿಲ, ದೇವರಾಜ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ನಯನ ಇತರರು ಅಭಿನಯಿಸಿದ್ದಾರೆ.
ಟ್ರೈಲರ್ ನೋಡಿ
ನಮ್ಮ ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ನಿಮ್ಮ ಮಡಿಲಿಗೆ ಅರ್ಪಿಸಿದ್ದೇವೆ 😊
ನೋಡಿ ಹರಸಿ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಸದಾ ಆಭಾರಿ
– ನಿಮ್ಮ ದಾಸ ದರ್ಶನ್ https://t.co/Nah4buljGI#Odeya pic.twitter.com/5CzrwxkFBa— Darshan Thoogudeepa (@dasadarshan) December 1, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
‘ಜೂನಿಯರ್ ರಾಜ್ ಕುಮಾರ್’ ಜಯಕುಮಾರ್ ಆಸ್ಪತ್ರೆ ಖರ್ಚಿಗೆ ನೆರವಾಗಿ ; ಪತ್ನಿ ಪದ್ಮಾವತಿ ಅಳಲು

ಅವರೊಬ್ಬ ರಂಗಭೂಮಿಯ ಅಭಿಜಾತ ಕಲಾವಿದ. ಅವರೊಳಗೆ ವರನಟ ಡಾ. ರಾಜಕುಮಾರ್ ಅವರ ಪರಕಾಯ ಪ್ರವೇಶ. ಮತ್ತೆ ಮತ್ತೆ ರಾಜಕುಮಾರ್ ನಮ್ಮೆದುರು ಪ್ರತ್ಯಕ್ಷವಾಗಿಸುವ ಅಭಿನಯ ಚತುರತೆ ಅವರದು. ನಾಟಕ ಯಾವುದೇ ಇರಲಿ ಈ ಕಲಾವಿದನಿಗೆ ಹೀರೋ ಪಾತ್ರ ಮುಡಿಪು. ಅಲ್ಲಿ ಡಾ. ರಾಜ್ ಛಾಪು. ನೋಡಲು ವರನಟನ ತದ್ರೂಪು. ಹಾಗೆಂದು ಅನುಕರಣೀಯ ಪ್ರತಿಭೆ ಮಾತ್ರವಲ್ಲ, ಅವರೊಬ್ಬ ಅಪ್ರತಿಮನಟ. ಹೆಸರು ಜಯಕುಮಾರ್, ಊರು ಕೊಡಗನೂರು.
ಗುಬ್ಬಿ ಕಂಪನಿ ಸೇರಿದಂತೆ ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ… ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಕಳೆದ ಐವತ್ತು ವರ್ಷಗಳ ಕಾಲ ವೃತ್ತಿ ರಂಗಭೂಮಿಯ ನಿರಂತರ ರಂಗಸೇವೆ. ಈಗ್ಗೆ ತಿಂಗಳ ಹಿಂದೆಯಷ್ಟೇ ಕಲಬುರ್ಗಿಯಲ್ಲಿ ಖಾಯಂ ಮೊಕ್ಕಾಂ ಮಾಡಿರುವ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತ. ಸಕ್ಕರೆ ಕಾಯಿಲೆ ಆತನನ್ನು ಯಾಮಾರಿಸಿದೆ. ಎರಡನೇ ಬಾರಿಗೆ ಆದಾಗ, ಸೂಕ್ಷ್ಮವಾಗಿ ತಿಳಿದು ದಾವಣಗೆರೆಗೆ ಧಾವಿಸಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆದು ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಕೆ. ಆ ಸಂದರ್ಭದಲ್ಲಿ ಶಿವಸಂಚಾರದ ಶ್ರೀ ಪಂಡಿತಾರಾಧ್ಯಶ್ರೀಗಳು ಸಂಬಂಧಿಸಿದ ವೈದ್ಯರಿಗೆ ಫೋನ್ ಮೂಲಕ ಹೇಳಿ ನೆರವಾದರು. ಇನ್ನೇನು ಮನೆಗೆ ಕಳಿಸಬೇಕೆನ್ನುವಾಗ ಎರಡೂ ಕಿಡ್ನಿಗಳು ಕೈ ಕೊಡುವ ಸೂಚನೆಗಳು ಎದುರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರೋಗಿಯ ಸ್ಥಳಾಂತರ.
ಕಳೆದ ಹದಿನೈದು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಆಗುವ ಎಲ್ಲ ಲಕ್ಷಣಗಳಿವೆ ಎಂದು ತಜ್ಞ ವೈದ್ಯರ ಅಂಬೋಣ. ಹೆಲ್ತ್ ಕಾರ್ಡಿನ ಸೌಲಭ್ಯಗಳು ಹೃದಯದ ರಕ್ತನಾಳಗಳಿಗೆ ಅಳವಡಿಸಿದ ಸ್ಟಂಟಗಳಿಗೆ ಕೊನೆಗೊಂಡಿತು. ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಚಿಕಿತ್ಸೆಗೂ ಹಣ ಕಟ್ಟಲೇ ಬೇಕಿದೆ. ಒಂದು ಲಕ್ಷ ರುಪಾಯಿ ಮಿಕ್ಕ ಖರ್ಚು. ಕಲಾವಿದ ಜಯಕುಮಾರರ ಬಳಿ ಇರುವ ಹಣವೆಲ್ಲ ಖರ್ಚಾಗಿದೆ. ಆಸ್ಪತ್ರೆಯಲ್ಲಿರುವ ಜಯಕುಮಾರರ ಜತೆ ಅವರ ಪತ್ನಿ ಪದ್ಮಾವತಿ ಮಗ ಮಾರುತಿ ಇದ್ದಾರೆ.
ಶಿವಣ್ಣನ ಜನುಮದ ಜೋಡಿ ಸೇರಿದಂತೆ, ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್ ಅಂತಹ ಹೆಸರಾಂತ ನಟರ ಜತೆ, (ಬರಗೂರರ ನಾಕೈದು ಚಿತ್ರ ) ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಜಯಕುಮಾರ ನಟಿಸಿದ್ದಾರೆ. ಆತ ಅಭಿನಯಿಸಿದ ಕಿರುತೆರೆ ದಾರಾವಾಹಿಗಳು ಲೆಕ್ಕವಿಲ್ಲದಷ್ಟು. ಅಷ್ಟೇ ಪ್ರಮಾಣದ ವೃತ್ತಿ ರಂಗನಾಟಕಗಳು. ಹೀಗೆ ಅವಿರತವಾಗಿ ದುಡಿದ ಬಣ್ಣದಜೀವ ಹಾಸಿಗೆ ಹಿಡಿದಿದೆ. ಈಗ ಅಕ್ಷರಶಃ ಸಂಕಷ್ಟದಲ್ಲಿರುವ ಕೊಡಗನೂರು ಜಯಕುಮಾರರ ನೆರವಿಗಾಗಿ ಅವರ ಪತ್ನಿ ಶ್ರೀಮತಿ ಪದ್ಮಾವತಿ ಹಾಗೂ ಅವರ ಮಗ ಮಾರುತಿ ಮನವಿ ಮಾಡಿಕೊಂಡಿದ್ದಾರೆ.
ಜಯಕುಮಾರ್ ಅವರ ಬ್ಯಾಂಕ್ ಖಾತೆ ವಿವರ ಹೀಗಿದೆ
ಸಿಂಡಿಕೇಟ್ ಬ್ಯಾಂಕ್
ಮಲ್ಲೇಶ್ವರಮ್
ಕೆ.ಸಿ. ಜನರಲ್ ಆಸ್ಪತ್ರೆ ಶಾಖೆ :ಬೆಂ.
A/C : 04492010022368
IFSC code : SYNB 0000449
ಕಲಾವಿದನ ನೆರವಿನ ನಿರೀಕ್ಷೆ ಯಲ್ಲಿ
ಪದ್ಮಾವತಿ w/o ಜಯಕುಮಾರ
ಮಣಿಪಾಲ್ ಆಸ್ಪತ್ರೆ, ಮಣಿಪಾಲ್
ಮೊ: 99023 89044
-
ದಿನದ ಸುದ್ದಿ5 days ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಬಹಿರಂಗ5 days ago
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
-
ಅಂತರಂಗ4 days ago
ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್
-
ಭಾವ ಭೈರಾಗಿ5 days ago
ಕಾಳಾರಾಮ ದೇವಾಲಯ ಪ್ರವೇಶ ಮತ್ತು ಕುವೆಂಪು ‘ಜಲಗಾರ’ ನಾಟಕ : 90 ವರ್ಷಾಚರಣೆಯ ಹೊತ್ತಿನಲ್ಲಿ
-
ಬಹಿರಂಗ5 days ago
ಬಾಬಾಸಾಹೇಬ್ ಅಂಬೇಡ್ಕರರ ಸಾವು ಸಹಜವೋ ಅಥವಾ ಅಸಹಜವೋ?: ಹೀಗೊಂದು ವಿಷಾದದ ಪ್ರಶ್ನೆ
-
ದಿನದ ಸುದ್ದಿ5 days ago
ಪಶುವೈದ್ಯೆ ಅತ್ಯಾಚಾರ, ಕೊಲೆ : ನಾಲ್ವರು ಆರೋಪಿಗಳ ಎನ್ ಕೌಂಟರ್ | ಪ್ರತಿಕ್ರಿಯೆಗಳು
-
ಭಾವ ಭೈರಾಗಿ4 days ago
ಕವಿತೆ | ಗರ್ಭದೊಳಗೆ
-
ಕ್ರೀಡೆ4 days ago
ದಾವಣಗೆರೆ | ವಾರ್ಷಿಕ ಪೊಲೀಸ್ ಕ್ರೀಡಾಕೂಟ-2019