Connect with us

ಸಿನಿ ಸುದ್ದಿ

ಟಾಕೀಸ್ ಸಿನಿವಾರದಲ್ಲಿ : ಆ ಕರಾಳ ರಾತ್ರಿ ‌ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ

Published

on

ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2019ರ ಅಂತ್ಯದಲ್ಲಿ ತೆರೆಕಂಡು ಉತ್ತಮ ವಿಮರ್ಶೆಗಳನ್ನು ಜೊತೆಗೆ ಈ ಸಾಲಿನ 3 ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ದಯಾಳ್ ಪದ್ಮನಾಭ್ ರವರ ನಿರ್ದೇಶನದ ಕನ್ನಡ ಚಿತ್ರ ‘ಆ ಕರಾಳ ರಾತ್ರಿ ’ ಚಿತ್ರದ ಉಚಿತ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 18-01-2020ರ ಶನಿವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ಆ ಕರಾಳರಾತ್ರಿ ಚಿತ್ರವು ಪಕ್ಕಾ ಕ್ರೈಂ ಥ್ರಿಲರ್ ಚಿತ್ರವಾಗಿದ್ದು, ಮೋಹನ್ ಹಬ್ಬುರವರ ನಾಟಕವನ್ನಾಧರಿಸಿದೆ. ಚಿತ್ರದ ಇಡೀ ಕಥೆ 1980ಯಲ್ಲಿ ನಡೆಯುತ್ತದೆ. ಗುಡ್ಡಗಾಡಿನ ಪ್ರದೇಶವದು, ಬಡತನವನ್ನು ಅಲ್ಲಿನ ಒಂಟಿ ಮನೆ ಅಪ್ಪಿಕೊಂಡಿದೆ. ಬದುಕಿನ ಭರವಸೆಗಳೇ ಇಲ್ಲದೇ ಬದುಕುತ್ತಿರುವ ಮೂರು ಜೀವಿಗಳ ಪೈಕಿ, ಒಬ್ಬಬ್ಬೊರದು ಒಂದೊಂದು ಕನಸು.

ಅಂತಹ ಮನೆಗೆ ಲಕ್ಷ್ಮಿ ತಾನಾಗಿಯೇ ಬಂದರೆ ಏನಾಗುತ್ತದೆ? ಎನ್ನುವುದು ಚಿತ್ರದ ಸಾರಾಂಶ. ಚಿತ್ರವು ಈ ಭಾರಿಯ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ನಿರ್ದೇಶಕ ಸಾಲಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದೆ.

ಚಿತ್ರದಲ್ಲಿ ಜೆ.ಕೆ. ಅನುಪಮ ಗೌಡ, ವೀಣಾ ಸುಂದರ್, ಸಿಹಿ ಕಹಿ ಚಂದ್ರು, ನವೀನ್ ಕೃಷ್ಣ ಮುಂತಾದವರಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ಸಂಭಾಷಣೆ, ಪಿ.ಕೆ.ಎಚ್.ದಾಸ್‍ರವರ ಛಾಯಾಗ್ರಹಣವಿದೆ. ಚಿತ್ರದ ಒಟ್ಟು ಅವಧಿ 98 ನಿಮಿಷಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಕೊರೋನಾ ವೈರಸ್ | ಸ್ಟಾರ್ ಗಾಯಕಿಗೆ ವೈದ್ಯರಿಂದ ಕ್ಲಾಸ್

Published

on

ಸುದ್ದಿದಿನ ಡೆಸ್ಕ್ : ಕೊರೊನಾ ವೈರಸ್ ವಿಚಾರದಲ್ಲಿ ಮೂರ್ಖತನದಿಂದ ವರ್ತಿಸಿ ಟೀಕೆಗೆ ಒಳಗಾಗಿರುವ ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ತಪರಾಕಿ ನೀಡಿದೆ. ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ತಾವು ಪಾರ್ಟಿಗಳಲ್ಲಿ ಭಾಗವಹಿಸಿಲ್ಲ, ತಮಗೆ ಯಾರೂ ಪಾರ್ಟಿಗಳಲ್ಲಿ ಭಾಗವಹಿಬಾರದು ಎಂದು ಸಲಹೆ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದ್ದ ಕನಿಕಾ, ಈಗ ಆಸ್ಪತ್ರೆ ವಿರುದ್ಧ ವರಾತ ಆರಂಭಿಸಿದ್ದಾರೆ.

ಆಸ್ಪತ್ರೆಯಲ್ಲಿ ದೂಳು ಇದೆ, ಇಲ್ಲಿ ಸೌಲಭ್ಯ ಇಲ್ಲ, ಜ್ವರ ಇದೆ ಎಂದರೆ ವೈದ್ಯರು ನೋಡುತ್ತಿಲ್ಲ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ಆಸ್ಪತ್ರೆ, ಕನಿಕಾ ಅವರಿಗೆ ಆಸ್ಪತ್ರೆಯಲ್ಲಿನ ಅತ್ಯುತ್ತಮ ಸೌಲಭ್ಯವನ್ನು ಒದಗಿಸಲಾಗಿದೆ. ಅವರು ರೋಗಿಯಂತೆ ವರ್ತಿಸಬೇಕೇ ವಿನಾ ಸ್ಟಾರ್‌ ರೀತಿ ಅಲ್ಲ ಎಂದು ಹೇಳಿದೆ.

Continue Reading

ಸಿನಿ ಸುದ್ದಿ

ವಿಡಿಯೋ | ಅಪ್ಪು-ಡಾಲಿಯ ‘ಯುವರತ್ನ’ ಪಂಚಿಗ್ ಡೈಲಾಗ್ ಟೀಸರ್ ರಿಲೀಸ್..!

Published

on

ಸುದ್ದಿದಿನ, ಡೆಸ್ಕ್ : ಪುನೀತ್ ರಾಜ್‍ಕುಮಾರ್ ಅಭಿನಯದ, ಬಹು ನಿರೀಕ್ಷಿಯ ‘ಯುವರತ್ನ’. ಸಿನೆಮಾದ ಟೀಸರ್ ರಿಲೀಸ್ ಆಗಿದೆ. ಪುನೀತ್ ರ ಆ್ಯಕ್ಷನ್ ಲುಕ್, ಫೈಟಿಂಗ್ ಸೀನ್ ಚೆನ್ನಾಗಿ ಮೂಡಿಬಂದಿದ್ದು, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಈ ಸಿನೆಮಾದ ಇನ್ನೊಂದು ವಿಶೇಷ ಟಗರು ಡಾಲಿ ಧನಂಜಯ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಟೀಸರ್ ನ ಆರಂಭದಲ್ಲೇ ಡಾಲಿಯ ಡೈಲಾಗ್ ರೋಮಾಂಚನಗೊಳಿಸುವಂತಿದೆ. ಸಿನೆಮಾಗೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದು, ತಮನ್ ಸಂಗೀತ ನೀಡಿದ್ದಾರೆ.

ಟೀಸರ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/tC1U5wGSIm8

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಆಸ್ಪತ್ರೆಯಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಡಿಸ್ಚಾರ್ಜ್

Published

on

ಸುದ್ದಿದಿನ,ಮೈಸೂರು: ಲಘು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮೈಸೂರಿನಲ್ಲಿದ್ದ ಅರ್ಜುನ್ ಜನ್ಯ ಅವರಿಗೆ ಬುಧವಾರ ರಾತ್ರಿ ಲಘು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಅರ್ಜುನ್ ಜನ್ಯ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು. ಇದೀಗ ಅರ್ಜುನ್ ಜನ್ಯ ಅವರ ಆರೋಗ್ಯ ಸುಧಾರಿಸಿದ್ದು, ಇಂದು ಡಿಸ್ಚಾರ್ಜ್ ಮಾಡಲಾಗಿದೆ.

ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅರ್ಜುನ್ ಜನ್ಯ ಅವರು ವಿಶ್ರಾಂತಿಗೆ ತೆರಳಿದ್ದಾರೆ. ಕನಿಷ್ಟ 4 ವಾರ ವಿಶ್ರಾಂತಿ ಪಡೆಯುವಂತೆ ಅರ್ಜುನ್ ಜನ್ಯಗೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅರ್ಜುನ್ ಜನ್ಯ ಆರೋಗ್ಯ ದೃಷ್ಠಿಯಿಂದ ಸಿನಿಮಾ, ರಿಯಾಲಿಟಿ ಶೋಗಳಿಂದ ದೂರ ಉಳಿಯಲಿದ್ದಾರೆ.

Continue Reading

Trending