Connect with us

ದಿನದ ಸುದ್ದಿ

ದಾವಣಗೆರೆ | ಖ್ಯಾತ ವೈದ್ಯ, ಸಮಾಜ ಸೇವಕ ಡಾ. ಎ. ಬಸವಣ್ಣಯ್ಯ ನಿಧನ

Published

on

ಸುದ್ದಿದಿನ, ದಾವಣಗೆರೆ : ಚನ್ನಗಿರಿ ತಾಲೂಕಿನ, ಚಿಕ್ಕೂಲಿಕೆರೆ ಗ್ರಾಮದ ಖ್ಯಾತ ವೈದ್ಯರು, ತುಮ್ಕೋಸ್ ಸಂಘದ ಸಂಸ್ಥಾಪಕ ನಿರ್ದೇಶಕರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ತಾಲ್ಲೂಕಿನ ಹಿರಿಯ ಸಮಾಜ ಸೇವಕರಾದ ಡಾ. ಎ ಬಸವಣ್ಣಯ್ಯ ರವರು ದಿ: 14-11-2019 ನೇ ಗುರುವಾರ ರಾತ್ರಿ 8.45 ಕ್ಕೆ ದೈವಾಧೀನರಾಗಿರುತ್ತಾರೆ ಇವರ

ಅಂತ್ಯ ಸಂಸ್ಕಾರವನ್ನು ದಿ:15/11/2019 ಶುಕ್ರವಾರ ಮಧ್ಯಾಹ್ನ 2:00 ಗಂಟೆಗೆ ಸ್ವಗ್ರಾಮ ಚಿಕ್ಕೂಲಿಕೆರೆಯಲ್ಲಿ ನೆರವೇರಿಸಲಾಗುವುದು. ಇಂತಿ ದುಃಖತಪ್ತರು ಅಂಬ್ಳಿಹಳ್ಳಿ ವಂಶಸ್ಥರು, ಹಾಗೂ ಇವರ ಆತ್ಮಕ್ಕೆ ಶಾಂತಿ ಕೋರುವವರು ತುಮ್ಕೋಸ್ ಆಡಳಿತ ಮಂಡಲಿ ಮತ್ತು ಸಿಬ್ಬಂದಿವರ್ಗದವರು. ಹಾಗೂ ಚಿಕ್ಕೂಲಿಕೆರೆ ಗ್ರಾಮಸ್ಥರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದಲ್ಲಿ 118 ವರ್ಷಗಳ ಬಳಿಕ ಅರಳಿದ ಅಪರೂಪದ ಹೂವು..!

Published

on

ಹೂವು : ಯುಲೋಫಿಯಾ ಓಬ್ಟಿಸಾ (Eulophia obtusa)

ಸುದ್ದಿದಿನ,ನವದೆಹಲಿ: ಭಾರತದಲ್ಲಿ 118 ವರ್ಷಗಳ ಬಳಿಕ ಆರ್ಕಿಡ್ ಜಾತಿಗೆ ಸೇರಿದ ಹೂ ಕಂಡು ಬಂದಿದೆ. ಉತ್ತರ ಪ್ರದೇಶದ ದುಧವಾ ಹುಲಿ ಸಂರಕ್ಷಣ ಅರಣ್ಯ ಪ್ರದೇಶದಲ್ಲಿ ಹೂ ಲಭ್ಯವಾಗಿದೆ.

ಈ ಹೂವಿನ ವೈಜ್ಞಾನಿಕ ಹೆಸರು ಯುಲೋಫಿಯಾ ಓಬ್ಟಿಸಾ (Eulophia obtusa). ಐಯುಸಿಎನ್ ಅಳಿವಿನಂಚಿನಲ್ಲಿರೋ ಹೂಗಳ ಕೆಂಪು ಪಟ್ಟಿಯಲ್ಲಿ ಯುಲೋಫಿಯಾ ಓಬ್ಟಿಸಾ ಹೆಸರನ್ನು ಸೇರಿಸಿದೆ.

1902ರಲ್ಲಿ ಈ ಹೂ ಪತ್ತೆಯಾಗಿತ್ತು ಎಂಬುದರ ಬಗ್ಗೆ ಕ್ಯೂ ಹರ್ಬೇರಿಯಂ ದಾಖಲೆಗಳಲ್ಲಿ ಉಲ್ಲೇಖವಿದೆ. 19ನೇ ಶತಮಾನದಲ್ಲಿ ಗಂಗಾ ನದಿ ಪ್ರದೇಶದ ಆಯಿರ್ವೇದ ತಜ್ಷರು ಈ ಹೂವನ್ನು ಇಲ್ಲಿಗೆ ತಂದಿದ್ದರು. ಆದಾದ ಬಳಿಕ 100 ವರ್ಷದ ನಂತರ ವಿಶೇಷವಾದ ಹೂ ಲಭ್ಯವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಆರ್ಕಿಡ್ ಜಾತಿಯ ಅಳಿವಿನಂಚಿನಲ್ಲಿರೋ ಹೂಗಳ ಸಂಶೋಧನೆ ತಂಡದ ನಿರ್ದೇಶಕ ಸಂಜಯ್ ಪಾಟಕ್, ನಮಗೆ ಜೂನ್ 30ರಂದು ಈ ಹೂ ಸಿಕ್ಕಿತು. ಕೂಡಲೇ ಹೂವಿನ ಫೋಟೋ ಕ್ಲಿಕ್ಕಿಸಿ ಬಾಂಗ್ಲಾದೇಶದ ಸಸ್ಯ ಶಾಸ್ತ್ರಜ್ಞ ಮೊಹ್ಮದ್ ಶರೀಫ್ ಹುಸೈನ್ ಸೌರವ್ ಅವರಿಗೆ ಕಳಿಸಿದೆ. ಸದ್ಯ ಮೊಹ್ಮದ್ ಶರೀಪ್ ಜರ್ಮನಿಯಲ್ಲಿದ್ದು, ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಈ ಹೂ ಯುಲೋಫಿಯಾ ಓಬ್ಟಿಸಾ ಎಂದು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ದುಧವಾ ಅರಣ್ಯ ಪ್ರದೇಶದಲ್ಲಿ ಇದೇ ಜಾತಿಯ ಎರಡು ಬಗೆಯ ಹೂಗಳು ಬೇರೆ ಬೇರೆ ಪ್ರದೇಶಗಳಲ್ಲಿವೆ. ಇನ್ನು ಹೆಚ್ಚಿನ ಸ್ಥಳಗಳಲ್ಲಿ ಈ ಹೂ ಇರೋ ಬಗ್ಗೆ ವಿಶ್ವಾಸವಿದೆ ಎಂದು ಪಾಟಕ್ ಹೇಳಿದ್ದಾರೆ. ಇನ್ನು ವಲ್ರ್ಡ್ ವೈಲ್ಡ್ ಫಂಡ್ ಫಾರ್ ನೇಚರ್ ನ ಭಾರತದ ಸಂಯೋಜಕರಾದ ಡಾ. ಮುದಿತ್ ಗುಪ್ತಾ, ಶೀಘ್ರದಲ್ಲಿಯೇ ಯುಲೋಫಿಯಾ ಓಬ್ಟಿಸಾ ಬಗ್ಗೆ ಸರ್ವೇ ನಡೆಯಲಿವೆ ಎಂಬ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ದೆಹಲಿ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಸಬ್-ಇನ್ಸ್‍ಪೆಕ್ಟರ್(SI) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ https://ssc.nic.in
ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಜು.16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಹತೆ

ಅರ್ಜಿದಾರರ ವಯಸ್ಸು 20 ರಿಂದ 25 ವಯೋಮಾನದಾವರಾಗಿರಬೇಕು. (02-01-1996 ರಿಂದ 01-01-2001 ರೊಳಗೆ ಜನಿಸಿರಬೇಕು), ಪ. ಜಾತಿ/ ಪ. ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಹಾಯವಾಣಿ –08025502520/9483862020 ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ದೂರವಾಣಿ ಸಂಖ್ಯೆ: 08192 259446 ಇಲ್ಲಿಗೆ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ರವೀಂದ್ರ.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾನೂನು ಪದವೀಧರರ ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ರಾಯಚೂರು: 2020-21ನೇ ಸಾಲಿನ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರ ತರಬೇತಿ ಭತ್ಯೆಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, 2ಎ, 3ಬಿ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ತರಬೇತಿ ಭತ್ಯೆಗೆ ಆಯ್ಕೆ ಮಾಡಲಾಗುತ್ತದೆ.

ಜಿಲ್ಲೆಯ ಕಾನೂನು ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, ತರಬೇತಿ ಅವಧಿಯಲ್ಲಿ ಮಾಹೆಯಾನ4.000 ರೂ.ಗಳ ಭತ್ಯೆ ನೀಡಲಾಗುವುದು, ಅಭ್ಯರ್ಥಿಗಳ ವಾರ್ಷಿಕ ಕುಟುಂಬದ ಆದಾಯ ಪ್ರವರ್ಗ-1ಕ್ಕೆ 4.50 ಲಕ್ಷ ರೂ.ಗಳು ಹಾಗೂ ಪ್ರವರ್ಗ-2ಎ, 3ಎ,3ಬಿ ವರ್ಗಕ್ಕೆ 2.50ಲಕ್ಷ ರೂ.ಗಳು ಮೀರಬಾರದು, ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದೆ 2 ವರ್ಷದೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತೀರ್ಣರಾಗಿರಬೇಕು.

ಪ್ರವರ್ಗ-1ಕ್ಕೆ ವಯೋಮಿತಿಯಲ್ಲಿ ಸಡಲಿಕೆ ಇದ್ದು, ಉಳಿದ ಪ್ರವರ್ಗ-2ಎ, 3ಎ, 3ಬಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 30 ವರ್ಷ ವಯೋಮಿತಿಯಲ್ಲಿರಬೇಕು, ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲೆಗಳು ಹಾಗೂ 2 ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಕೆಗೆ 2020ರ ಜು.31ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ದೂ.ಸಂಖ್ಯೆ. 968622500, 08532-231710 ಗೆ ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending