Connect with us

ದಿನದ ಸುದ್ದಿ

ಕೆರೆಯ ನೀರನ್ನು ಎಲ್ಲಾ ರೈತರು ಸಮನಾಗಿ ಹಂಚಿಕೊಳ್ಳಿ : ತರಳಬಾಳು ಶ್ರೀಗಳ ಕರೆ

Published

on

ಸುದ್ದಿದಿನ,ದಾವಣಗೆರೆ : ಇಲ್ಲಿಗೆ ಸಮೀಪದ ಬೋರಗುಂಡನಹಳ್ಳಿಯಲ್ಲಿರುವ ಕೆರೆಯಲ್ಲಿ ಒಂದು ಹನಿನೀರು ಇಲ್ಲದಿರುವ ಬಗ್ಗೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಆತಂಕ ವ್ಯಕ್ತ ಪಡಿಸಿದರು.

ಅವರು ಇಂದು ಬೋರಗೋಂಡನಹಳ್ಳಿಯಲ್ಲಿ ಶ್ರೀ ಹಾಲಸ್ವಾಮಿ,ಶ್ರೀ ಮರುಳಸಿದ್ದೇಶ್ವರ,ಶ್ರೀ ಚೌಡೇಶ್ವರಿ ದೇವಿಯ ಗೋಪುರಗಳ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವನಾಳ್ ಸಮೀಪದ ರಾಂಪುರ ಕೆರೆಯು ಕೋಡಿ ಹರಿದ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ತಡೆಗಟ್ಟಲು ,ಇಲ್ಲಿ ಸಂಗ್ರಹಗೊಂಡ ನೀರಿನಿಂದ ಪೈಪ್ ಲೈನ್ ಮೂಲಕ ಬೋರಗುಂಡನಹಳ್ಳಿಯಲ್ಲಿ ಕೆರೆಯನ್ನು ತುಂಬಿಸುವ ಯೋಜನೆ ಕೈಗೊಳ್ಳಲಾಗಿತ್ತು.ಆದರೆ ರಾಂಪುರ ಕೆರೆಯಿಂದ ಸಂಗ್ರಹವಾದ ನೀರು
ಪೈಪ್ ಲೈನ್ ಮೂಲಕ ಹರಿಸಲು ಸಾಧ್ಯವಾಗುವಂತೆ.ಪಂಪ್ ಹೌಸ್ ನಿರ್ಮಾಣ ಮಾಡುವ ಉದ್ದೇಶವಿದ್ದು,ಈ ಕಾರ್ಯಕ್ಕೆ ರೈತರೊಬ್ಬರು ಅಡ್ಡಿಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದಾರೆ.ಈ ಬಗ್ಗೆ ಪರಿಶೀಲಿಸಿದ್ದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಶ್ರೀಗಳು
ತಿಳಿಸಿದರು.

22 ಕೆರೆಗಳ ಏತ ನೀರಾವರಿ ಸಮಿತಿ ಅಧ್ಯಕ್ಷ ಡಾ.ಮಂಜುನಾಥ್ ಗೌಡ್ರು,ಜಿ.ಪಂ ಸದಸ್ಯ ಬಸವಂತಪ್ಪ ಮತ್ತಿತರ ಮುಖಂಡರೊಡನೆ ತಾವು ಸ್ಥಳ ಪರಿಶೀಲನೆ ನಡೆಸಿದ್ದು ಎಲ್ಲರ ಸಲಹೆಗಳನ್ನು ಪಡೆಯುವುದಾಗಿ ಶ್ರೀಗಳು ತಿಳಿಸಿದರು.

ಭದ್ರಾ ಜಲಾಶಯದಿಂದ 127 ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.ಆದರೆ ಕೆರೆಗಳಿಗೆ ತುಂಬಿಸಲು ಬೇಕಾಗಿರುವ 1 ಟಿಎಂಸಿ ನೀರನ್ನು ಪಡೆಯಲಾಗುತ್ತಿಲ್ಲ ಇದಕ್ಕೆ ತಾಂತ್ರಿಕ ದೋಷ ಹಾಗೂ ಪೈಪ್‌ಲೈನ್ ಹೋಗಿರುವ ಜಾಗದಲ್ಲಿನ ರೈತರ ಅಸಹಕಾರವೇ ಕಾರಣ ಎಂದು ವಿಷಾದಿಸಿದರು.

ನೀರನ್ನು ಎಲ್ಲಾ ರೈತರು ಸಮನಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆಯು ಇರುವುದಿಲ್ಲ.ಆದರೆ ರೈತರು ಪರಸ್ಪರ ನಮಗೆ ಹೆಚ್ಚು ನೀರು ಎಂದು ಜಗಳವಾಡುತ್ತಿದ್ದರೆ,ಕೆರೆಗಳಿಗೆ ನೀರು ಬರುವುದು ಯಾವಾಗ ? ಕರೆಗಳಿಗೆ ನೀರು ಹೇಗೆ ತುಂಬುತ್ತದೆ ? ಎಂದು ಪ್ರಶ್ನಿಸಿದರು.

22 ಕೆರೆಗಳ ಯೋಜನೆಯ 2 ನೇ ಜಾಕ್ ವೆಲ್ ಇರುವ ಮಲ್ಲಶೆಟ್ಟಿಹಳ್ಳಿ ಬಳಿ ದೇವಸ್ಥಾನಕ್ಕೆ ಸೇರಿದ 16 ಎಕರೆ ಜಮೀನಿನ್ನು ಕೆರೆ ನಿರ್ಮಾಣ ಮಾಡಲು ಸಮ್ಮತಿಸಿದ್ದು,ಇದಕ್ಕಾಗಿ 5 ಕೋಟಿ ರೂಗಳನ್ನು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು
ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಮೊದಲನೇ ಜಾಕ್ ವೆಲ್ ಬಳಿ
ತಡೆಗೋಡೆಯನ್ನು ನಿರ್ಮಿಸಲು 5 ಕೋಟಿ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿಯೂ ಹೇಳಿದ್ದಾರೆ.22 ಕೆರೆಗಳ ತಾಂತ್ರಿಕ ದೋಷ ಸರಿಪಡಿಸಲು ನಾವು ಶಿಫಾರಸ್ಸು ಮಾಡಿದ ಇಂಜಿನಿಯರ್ ನೇಮಕಕ್ಕೆ ಒಪ್ಪಿಗೆಯೂ ದೊರೆತಿರುವುದಾಗಿ ಶ್ರೀಗಳು ತಿಳಿಸಿದರು.

22 ಕೆರೆಗಳ ನ್ಯೂನತೆಯನ್ನು ಸರಿಪಡಿಸಲು ಜನಪ್ರತಿನಿದಿಗಳು ಒತ್ತಡ ತರಬೇಕು ಕೇವಲ ಹಾರ – ತುರಾಯಿ ಹಾಕಿಸಿಕೊಳ್ಳಲು ಸೀಮಿತರಾಗದೇ ಜನರ ಋಣದಲ್ಲಿ ನಾವಿದ್ದೇವೆ ಎಂಬ ಭಾವನೆ ಇರಬೇಕು ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮುಖಂಡ ಬೇತೂರು ಬಸಪ್ಪ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಕೆ ಎಸ್. ಬಸವಂತಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಮೆಳ್ಳೇಕಟ್ಟೆ ಚಿದಾನಂದ ಐಗೂರು,22ಕೆರೆ ನೀರಾವರಿ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥ ಗೌಡ್ರು,ತಾ.ಪಂ ಸದಸ್ಯ ಶ್ರೀಮತಿ ಲಲಿತಮ್ಮ ಆನಂಪ್ಪ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಮದ್ದೂರು ತಾಲ್ಲೂಕು ಕಛೇರಿಗೆ ನೂತನ ತಹಶೀಲ್ದಾರ್

Published

on

ಸುದ್ದಿದಿನ ಡೆಸ್ಕ್ : ಮದ್ದೂರು ತಾಲ್ಲೂಕು ಕಛೇರಿಗೆ ನೂತನ ಪ್ರಭಾರ ತಹಶೀಲ್ದಾರ್ ಆಗಿ ಎನ್.ಶ್ವೇತಾ ರವರು ಇಂದು ಅಧಿಕಾರ ಸ್ವೀಕರಿಸಿದರು.

ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ರವರನ್ನು ಬೇರೆ ಕಡೆಗೆ ವರ್ಗಾವಣೆ ಆದ ಕಾರಣ ನೂತನ ತಹಶೀಲ್ದಾರ್ ರವರಿಗೆ ಮಹೇಶ್ ರವರು ಅಧಿಕಾರ ಹಸ್ತಾಂತರ ಮಾಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಈಚೆಗೆ ನಾಲ್ಕರಿಂದ ಐದು ಜನ ತಹಶೀಲ್ದಾರ್ ಗಳು ವರ್ಗಾವಣೆ ಗೊಂಡಿದ್ದು ತಾಲ್ಲೂಕು ಕಛೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ವಿಧವಾ ವೇತನ, ವೃದ್ದಾಪ್ಯ ವೇತನ , ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು,ಆಧಾರ್ ಕಾರ್ಡ್ ನೋಂದಣಿ, ಇನ್ನು ಮುಂತಾದ ಸಮಸ್ಯೆಗಳಿದ್ದು ಇವೆಲ್ಲದಕ್ಕೂ ನೂತನ ತಹಶೀಲ್ದಾರ್ ರವರು ತಕ್ಷಣವೇ ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸ ಬೇಕೆಂದು ಆಗ್ರಹಿಸಿದ್ದಾರೆ.

Continue Reading

ದಿನದ ಸುದ್ದಿ

ಬಳ್ಳೆ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ‘ಕ್ಯಾಪ್ಟನ್ ಅರ್ಜುನ ಪತ್ತೆ’

Published

on

ಸುದ್ದಿದಿನ ಡೆಸ್ಕ್ : ಬಳ್ಳೆ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಕ್ಯಾಪ್ಟನ್ ಅರ್ಜುನ ಪತ್ತೆಯಾಗಿದ್ದಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಬಳ್ಳೆ ಕ್ಯಾಂಪ್ ನಿಂದ ಬುಧವಾರ ರಾತ್ರಿ ಕಾಲಿಗೆ ಹಾಕಿದ್ದ ಸರಪಳಿ ಕಿತ್ತುಕೊಂಡು ಎಸ್ಕೇಪ್ ಆಗಿದ್ದ ಈ ಅರ್ಜುನ.

ಅರ್ಜುನನಿಗಾಗಿ ರಾತ್ರಿಯಿಡೀ ಶೋಧಿಸಿದ್ದ ಅರಣ್ಯ ಸಿಬ್ಬಂದಿಗಳಿಗೆ ಇಂದು ಮುಂಜಾನೆ ಬಳ್ಳೆ ಕ್ಯಾಂಪ್ ನಿಂದ 19 ಕಿ.ಮೀ ದೂರದಲ್ಲಿರೋ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಅರ್ಜುನ ಪ್ರತ್ಯಕ್ಷವಾಗಿದ್ದಾನೆ. ಸಾಕಾನೆ ಎಂದು ಗಮನಿಸಿ ಅರಣ್ಯ ಇಲಾಖೆಗೆ ಗ್ರಾಮಸ್ಥರು ಸುದ್ದಿ ಮುಟ್ಟಿಸಿದ್ದಾರೆ. ಈ ಸಂಬಂಧ ನಿಟ್ಟುಸಿರು ಬಿಟ್ಟ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಮೀ ಟೂ ಪ್ರಕರಣ; ಮಹಿಳಾ ಆಯೋಗದ ಮುಂದೆ ಹೋದ ನಟಿ ಶ್ರುತಿ ಹರಿಹರನ್

Published

on

ಸುದ್ದಿದಿನ ಬೆಂಗಳೂರು: ಚಿತ್ರನಟಿ ಶ್ರುತಿ ಹರಿಹರನ್ ಬುಧವಾರ ರಾಜ್ಯ ಮಹಿಳಾ ಆಯೋಗದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ‘ವಿಸ್ಮಯ’ ಚಿತ್ರೀಕರಣ ವೇಳೆ ತಮಗಾದ ನೋವನ್ನು ಆಯೋಗದಲ್ಲಿ ದಾಖಲಿದ್ದಾರೆ.

ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜಿನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿದ್ದರು. ಇದನ್ನು ಆಧರಿಸಿ ಮಹಿಳಾ ಆಯೋಗ ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹೇಳಿಕೆ ದಾಖಲಿಸುವಂತೆ ಮಹಿಳಾ ಆಯೋಗ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೆ ಹಾಜರಾಗಿದ್ದರು.

ನಟಿ ಶ್ರುತಿ ಹರಿಹರನ್ ಅವರನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡು ಹೋಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮೇಲೆ ನಡೆದ ದೌರ್ಜನ್ಯ ಬಗ್ಗೆ ವಿಡಿಯೋ ದಾಖಲೆಗಳಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇನೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending