Connect with us

ದಿನದ ಸುದ್ದಿ

ಗ್ರಹಣ ಎಂದು ಬಾಗಿಲು ಹಾಕಿದ ಅಂಗಡಿಗಳಿಗೆ ಕನ್ನ

Published

on

ಸುದ್ದಿದಿನ ಡೆಸ್ಕ್: ಮೈಸೂರಿನಲ್ಲಿ ಚಂದ್ರಗ್ರಹಣ ಕಾಲದಲ್ಲಿ ಕಳ್ಳರ ಕೈಚ‌ಳಕ ನಡೆದಿದೆ. ಗ್ರಹಣ ಕಾಲದಲ್ಲಿ ಜನ ಹೊರಗೆ ಬರಲ್ಲ ಎಂಬುದನ್ನು ಅರಿತ ಕಳ್ಳರು 8 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳನ್ನ ಕಳ್ಳರು ದೋಚಿದ್ದಾರೆ.
ಮೆಡಿಕಲ್‌ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳ‌ಲ್ಲಿ ಕಳ್ಳತನ ನಡೆದಿದೆ.

ಅಂಗಡಿಗಳ ರೋಲಿಂಗ್ ಶೆಟರ್ ಗಳನ್ನು ಮೀಟಿ ಭಾರೀ ಕಳ್ಳತನ ನಡೆದಿದ್ದು, ಕಿಲಾಡಿಗಳು ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಶೆಟರ್ ಗಳನ್ನು ಮೀಟಿ ತೆರೆಯಲು ಹೈಡ್ರಾಲಿಕ್ ಜಾಕ್ ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕುವೆಂಪು ನಗರ ಪೊಲೀಸರ ಭೇಟಿ, ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ನೋಡಿ:

ದಿನದ ಸುದ್ದಿ

ಸಕ್ಕರೆನಾಡಲ್ಲಿ ನಿಲ್ಲದ ರೈತರ ಆತ್ಮಹತ್ಯೆ

Published

on

ಸುದ್ದಿದಿನ,ಮಂಡ್ಯ : ಸಾಲಭಾಧೆಗೆ ಬೇಸತ್ತು ಮಂಡ್ಯ ಜಿಲ್ಲೆಯ ಮತ್ತೋರ್ವ ಮದ್ದೂರು ತಾಲ್ಲೂಕಿನ ತೂಬಿನಕೆರೆ ಗ್ರಾಮದ ಕೃಷ್ಣೇಗೌಡ ( 55 )ಎಂಬ ರೈತನೊಬ್ಬ ಬಲಿಯಾಗಿದ್ದಾರೆ.

4 ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ 8 ಲಕ್ಷ ರೂಪಾಯಿ ಸಾಲ ಮಾಡಿ ಕೊಂಡಿದ್ದು ಸಾಲಗಾರರ ಒತ್ತಡಕ್ಕೆ ಮಣಿದು ಜಮೀನಿನ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಿ : ಗಿರೀಶ್ ರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತು ಮಂದಿ ಆದಿವಾಸಿ ‘ಗೊಂಡ’ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ..!?

Published

on

ಮೊನ್ನೆ ಉತ್ತರಪ್ರದೇಶದ, ಸಂಭದ್ರಾ ಜಿಲ್ಲೆಯ ಕುಗ್ರಾಮವೊಂದರಲ್ಲಿ ಹತ್ತು ಮಂದಿ ಆದಿವಾಸಿ ಗೊಂಡ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ!? ಯಾಕೆಂದರೆ ಕೊಂದವರು ಗುಜ್ಜಾರರೆಂಬ ಜಮೀನ್ದಾರರು! ಕೊಲ್ಲಿಸಿಕೊಂಡವರು ಗೊಂಡರೆಂಬ ಆದಿವಾಸಿ ಭೂಹೀನರು!!

ತಲೆತಲಾಂತರದಿಂದ ಅಡವಿಯಲ್ಲಿದ್ದು, ಅಡವಿಯ ನಡುವೆಯೇ ಒಂದಷ್ಟು ಭೂಮಿ ಹಸನು ಮಾಡಿಕೊಂಡು ಹೊಟ್ಟೆಪಾಡು ಮಾಡಿಕೊಂಡು ಬಂದಿದ್ದ ಭೂಮಿಯ ಮೇಲೆ ಭೂಮಾಲೀಕರಾದ ಗುಜ್ಜಾರರ ಕಣ್ಣು ನೆಟ್ಟಿದ್ದು ಇಂದು ಏಳು ಮಂದಿ ಗಂಡಸರು ಮತ್ತು ಮೂರು ಮಂದಿ ಹೆಂಗಸರು ಸೇರಿದಂತೆ ಒಟ್ಟಾರೆ ಹತ್ತು ಮಂದಿ ಗೊಂಡರು ಅಸುನೀಗಲು ಕಾರಣವಾಗಿದೆ!

ಅಸಹಾಯಕರಾದ ಆದಿವಾಸಿಗಳ ಮೇಲೆ ಬಂದೂಕು ಹಿಡಿದು ಟ್ರಾಕ್ಟರುಗಳಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಕೊಂದ ಗುಜ್ಜಾರರು ರಾಜಕಾರಣದಲ್ಲೂ ಪ್ರಬಾವಿತರು! ಭೂಮಾಲೀಕರು, ಲೇವಾದೇವಿದಾರರು, ಉದ್ಯಮಿಗಳು ಯಾರೊಂದಿಗಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

“ಗುಜ್ಜಾರರ ಭೂದಾಹ ಹೇಗಿರುತ್ತದೆಯೆಂದರೆ.. ಅವರು ತಮ್ಮ ಮನೆಯ ನಾಯಿ, ಬೆಕ್ಕುಗಳ ಹೆಸರಲ್ಲಿ, ಅಷ್ಟೇಕೆ ಗಿಡ, ಮರಗಳ ಹೆಸರಲ್ಲೂ ಭೂಮಿ ಹೊಂದಿದ್ದಾರೆ..” ಎನ್ನುತ್ತಾರೆ ಗೊಂಡರ ಹುಡುಗ ವಿಜಯ್ ಸಿಂಗ್ ಗೊಂಡ್..! ಮಿಕ್ಕದ್ದನ್ನು ಹೇಳಬೇಕಿಲ್ಲ.. ಈ ದೇಶದ ಅಧಿಕಾರ ರಾಜಕಾರಣ, ಪೋಲಿಸ್, ಕಾನೂನು, ಮಾಧ್ಯಮಗಳನ್ನು ಕಂಡವರಿಗೆ ಗೊಂಡರ ಸಾವು ಒಂದು ಸಹಜ ಘಟನೆಯಷ್ಟೇ..!

-ಸಿ.ಎಸ್.ದ್ವಾರಕಾನಾಥ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಮಹಿಳಾ ಉದ್ದಿಮೆದಾರರಿಗೆ ಸಹಾಯಧನ

Published

on

ಸುದ್ದಿದಿನ,ದಾವಣಗೆರೆ : ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ವಿಶೇಷ ಘಟಕ/ಗಿರಿಜನ ಉಪ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ ಸಹಾಯಧನ ಸೌಲಭ್ಯ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಜ್ಯ ವಲಯದ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ/ಗಿರಿಜನ ಉಪ ಯೋಜನೆಯಡಿ ಪ.ಜಾ/ಪ.ಪಂ ಸೇರಿದ ವೈಯುಕ್ತಿಕ ಫಲಾನುಭವಿ/ಪಾಲುದಾರಿಕೆ ಸಂಸ್ಥೆ /ಸಂಘ ಸಂಸ್ಥೆಗಳು/ಕಂಪನಿ/ಸಹಕಾರಿ ಕಾಯ್ದೆಯಡಿ ನೊಂದಾಯಿತ ಜವಳಿ ಸಹಕಾರ ಸಂಘಗಳು (ಶೇ.100 ರಷ್ಟು ಪ.ಜಾ/ಪ.ಪಂ ಸದಸ್ಯರನ್ನು ಹೊಂದಿರತಕ್ಕದ್ದು) ಸಂಸ್ಥೆಗಳಿಂದ ಸಣ್ಣ ಮತ್ತು ಅತೀ ಸಣ್ಣ ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಈ ಯೋಜನೆಯಡಿ (ಎಸ್.ಎಂ.ಇ) ಅತೀ ಸಣ್ಣ ಜವಳಿ ಕೈಗಾರಿಕಾ ಘಟಕಗಳು ರೂ.25 ಲಕ್ಷಗಳವರೆಗಿನ ಯಂತ್ರೋಪಕರಣಗಳೊಂದಿಗೆ ಹಾಗೂ ಸಣ್ಣ ಪ್ರಮಾಣದ ಜವಳಿ ಕೈಗಾರಿಕಾ ಘಟಕಗಳು ರೂ. 25 ಲಕ್ಷ ಗಳಿಂದ 500 ಲಕ್ಷಗಳ ಯಂತ್ರೋಪಕರಣಗಳೊಂದಿಗೆ ಸ್ಥಾಪಿಸುವ ಘಟಕಗಳಿಗೆ ಬಂಡವಾಳ ಹೂಡಿಕೆಯ ಮೊತ್ತಕ್ಕೆ ಸರ್ಕಾರದ ಸಹಾಯಧನ ಶೇ.75 ಹಾಗೂ ಬ್ಯಾಂಕಿನ ಸಾಲಕ್ಕೆ ಬಡ್ಡಿ ಸಹಾಯಧನ ಶೇ.15 ಹೀಗೆ ಒಟ್ಟು ಶೇ. 90 ರಷ್ಟು ಸಹಾಯಧನ ನೀಡಲಾಗುತ್ತದೆ.

ಜವಳಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಿಚ್ಚಿಸುವ ಆಸಕ್ತ ಮಹಿಳಾ ಉದ್ದಿಮೆದಾರರು ಯೋಜನೆಯ ಸಂಪೂರ್ಣ ಮಾರ್ಗಸೂಚಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-262362 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending