Connect with us

ದಿನದ ಸುದ್ದಿ

ಬೆಂಗಳೂರಿನ ಬಾನಿನಲ್ಲಿ ‘ಆಕಾಶಕಂಪನ’..?

Published

on

  • ನಾಗೇಶ್ ಹೆಗಡೆ

ನಗೆ ಆ ಸದ್ದು ಕೇಳಲಿಲ್ಲ. ನನ್ನ ಕಿವಿಯಲ್ಲಿ ಇಯರ್‌ಫೋನ್‌ ಇತ್ತು. ಯಾವ ಕರೆಯೂ ಬಾರದಂತೆ ಮೊಬೈಲನ್ನು ಏರೋಪ್ಲೇನ್‌ ಮೋಡ್‌ನಲ್ಲಿ ಇಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದೆ. ಆದರೆ ಮೂರುಗಂಟೆಗೆ ಮೊಬೈಲನ್ನು ಹೊರಜಗತ್ತಿಗೆ ತೆರೆದಾಗ ‘ಈ ಬೂಮ್‌ ಸದ್ದು ಕೇಳಿದಿರಾ?’ ಏನು ಕಾರಣ?’ ಅಂತ ಅನೇಕ ಸಂದೇಶಗಳು ಬಂದವು. ಬೆಂಗಳೂರಿನ ಎಲ್ಲ ಸುದ್ದಿ ವಾಹಿನಿಗಳಲ್ಲೂ ಈ ಸದ್ದಿನದ್ದೇ ಸುದ್ದಿ. ವಿಜ್ಞಾನ ನಗರಿ ಎನ್ನಿಸಿಕೊಂಡರೂ ಯಾಕೋ ಯಾವ ತಜ್ಞರೂ ಕಾರಣ ಕೊಡುತ್ತಿಲ್ಲ. ಅದಲ್ಲ, ಇದಲ್ಲ ಎಂಬುದಕ್ಕೆ ಸಾಕಷ್ಟು ಕಾರಣಗಳಿವೆ. ಹಾಗಿದ್ದರೆ ಬೇರೆ ಯಾವುದು ಕಾರಣ?

ಬೇರೆ ಯಾವ ಕಾರಣಗಳೂ ಹೊಳೆಯದಿದ್ದಾಗ ಇಂಥ ಭಾರೀ ಸದ್ದಿಗೆ ‘ಆಕಾಶಕಂಪನ’ವೇ ಕಾರಣ ಎನ್ನಬಹುದು. ನೆಲದ ಮೇಲೆ ಭೂಕಂಪನ ಮತ್ತು ಸಾಗರದಾಳದಲ್ಲಿ ಜಲಕಂಪನ ಆಗುವ ಹಾಗೆ ಬಾನಿನಲ್ಲಿ ಆಕಾಶಕಂಪನ ಆಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ.

ಇಂಥ ಆಕಾಶಕಂಪನಕ್ಕೆ ಅನೇಕ ಕಾರಣಗಳನ್ನು ಕೊಡಲಾಗುತ್ತದೆ:-

1. ಉಲ್ಕಾಪಾತ: ಕ್ಷುದ್ರಗ್ರಹ ಅಥವಾ ಅದಕ್ಕೂ ಚಿಕ್ಕ ಆಕಾಶಕಾಯಗಳು ಅತಿ ವೇಗದಲ್ಲಿ ಭೂಮಿಗೆ ಬರುತ್ತಿರುವಾಗ ವಾಯುಮಂಡಲವನ್ನು ಪ್ರವೇಶಿಸುವಾಗ ಸ್ಫೋಟಿಸಿದರೆ ಇಂಥ ಸದ್ದು ಕೇಳುತ್ತದೆ. ಕಣ್ಣಿಗೆ ಏನೂ ಕಾಣುವುದಿಲ್ಲ. ಅದು ಮೂರು ನಾಲ್ಕು ಕಿ.ಮೀ. ಎತ್ತರದಲ್ಲಿ ಸ್ಫೋಟಿಸಿದರೆ ಹೊಗೆ-ಬೂದಿಯೂ ಚದುರಿ ಹೋಗುತ್ತದೆ.

2. ಕೊರೊನಾ (ವೈರಸ್‌ ಅಲ್ಲ) ಮಾಸ್‌ ಇಜೆಕ್ಷನ್‌ CME ಎಂಬ ವಿದ್ಯಮಾನ ಸೂರ್ಯನಲ್ಲಿ ಘಟಿಸಬಹುದು. ನೀರಿನಿಂದ ಹೊರಡುವ ಗುಳ್ಳೆಯ ಹಾಗೆ ಸೂರ್ಯನ ಹೊರವಲಯದಿಂದ ಆಗೊಮ್ಮೆ ಈಗೊಮ್ಮೆ ಪ್ಲಾಸ್ಮಾ ಮೇಘ ಅತಿ ವೇಗದಲ್ಲಿ ಹೊಮ್ಮುತ್ತದೆ (ಇದೂ ವೈರಸ್‌ಗೆ ಸಂಬಂಧಿಸಿದ ಪ್ಲಾಸ್ಮಾ ಅಲ್ಲ).

ಅದು ತೀರ ದೊಡ್ಡ ಗುಳ್ಳೆಯಾಗಿದ್ದರೆ ಅರ್ಧ ಭೂಮಿಯನ್ನೇ ಆವರಿಸಬಹುದು. ತೀರ ಚಿಕ್ಕ ಗುಳ್ಳೆ ಆಗಿದ್ದರೆ ಚಿಕ್ಕ ಪ್ರದೇಶಕ್ಕೆ ಅಪ್ಪಳಿಸಬಹುದು. ಅದು ಭೂಮಿಯ ವಿದ್ಯುತ್ಕಾಂತೀಯ ವಲಯವನ್ನು ಪ್ರವೇಶ ಮಾಡಿದಾಗ ಸದ್ದು ಹೊಮ್ಮಬಹುದು. ಇದು ಅಪ್ಪಳಿಸಿದಾಗ ಎಲ್ಲ ಬಗೆಯ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಲಕರಣೆಗಳೂ ಧ್ವಂಸ ಆಗುತ್ತವೆ ಎಂದು ಕೇಳಿದ್ದೇನೆ. ಇಲ್ಲಿ ಅಂಥದ್ದೇನೂ ಆಗಿಲ್ಲ. ಹಾಗಾಗಿ ನಾವು ಇದನ್ನೂ ಅಲ್ಲಗಳೆಯಬಹುದು.

3. ತುಂಬ ಎತ್ತರದ ವಾಯುಮಂಡಲದಲ್ಲಿ ತೀರಾ ಶಕ್ತಿಶಾಲಿ ಸಿಡಿಲು ಹೊಮ್ಮಿದರೆ ಇಂಥ ಸದ್ದು ಹೊಮ್ಮುತ್ತದೆ. ಆದರೆ ಒಮ್ಮೆ ಮಾತ್ರ ಇದು ಕೇಳಿದೆ. ಆದ್ದರಿಂದ ಅದೂ ನಂಬಲರ್ಹ ಅಲ್ಲ.

ಆಕಾಶಕಂಪನಕ್ಕೆ ಸಂಬಂಧಿಸಿದ, ಆದರೆ ಬೆಂಗಳೂರಿನಲ್ಲಿ ಸಾಕ್ಷ್ಯ ಸಿಗದ ಇತರ ಸಾಧ್ಯತೆ ಏನೆಂದರೆ: (1) ಭೂಗರ್ಭದಿಂದ/ಗಣಿಯಿಂದ ಅಥವಾ ಕೊಳಕು ಸರೋವರದ ತಳದಿಂದ ಮೀಥೇನ್‌ ಅನಿಲ ಬಿಡುಗಡೆ ಆಗುವುದು; (2) ಸೂಪರ್‌ ಸಾನಿಕ್‌ ವಿಮಾನ ಆಕಾಶಕ್ಕೆ ಜಿಗಿದು ತನ್ನ ವೇಗವನ್ನು ಹಠಾತ್ತಾಗಿ ಹೆಚ್ಚಿಸಿಕೊಂಡಾಗ ಹೀಗಾಗುತ್ತದೆ.

ಉಲ್ಕಾಪಾತವೇ ಆಗಿದೆ ಎನ್ನುವುದಾದರೂ ಅದು ಸ್ಫೋಟವಾಗುವುದು ಹೇಗೆ? ಸುಮ್ಮನೇ ಉರಿದು ಬೂದಿಯಾಗಿ ಕಣ್ಮರೆ ಆಗಬೇಕಲ್ಲವೆ? ಸದ್ದು ಹೊಮ್ಮಿಸಲು ಅದೇನು ಹೊರಲೋಕದಿಂದ ಪಟಾಕಿಯೆ? ಇದಕ್ಕೆ ಉತ್ತರ ಹೀಗಿದೆ: ತೀರ ಅಪರೂಪಕ್ಕೆ ಉಲ್ಕೆಯ ಗರ್ಭದಲ್ಲಿ ಅನಿಲ ಅಥವಾ ನೀರಾವಿ ಇದ್ದರೆ ಅದು ಸ್ಫೋಟ ಆಗುತ್ತದೆ. ಆದರೆ ಅಂಥ ಸಾಧ್ಯತೆಯೂ ತೀರ ಅಪರೂಪ.

ವೈಜ್ಞಾನಿಕ ವಿವರಣೆಗೆ ಸಿಗದ ಇಂಥ ಸ್ಫೋಟದ ಸದ್ದು ಕೇಳಿದ್ದಕ್ಕೆ ನಮ್ಮ ರಾಜ್ಯದಲ್ಲೇ ಬೇರೆಬೇರೆ ಜಿಲ್ಲೆಗಳಲ್ಲಿ ಅನೇಕ ಉದಾಹರಣಗಳಿವೆ. ಈಚೆಗೆ ಏಪ್ರಿಲ್‌ 11ರಂದು ಜಕಾರ್ತಾತದಲ್ಲಿ ಮತ್ತು 23ರಂದು ಮೆಕ್ಸಿಕೋದಲ್ಲಿ ಇಂಥ ಸದ್ದು ಹೊಮ್ಮಿದೆ. ಇತಿಹಾಸದುದ್ದಕ್ಕೂ ಇಂಥ ಘಟನೆಗಳು ಮತ್ತೆಮತ್ತೆ ಘಟಿಸಿವೆ.

ಯಾರಿಗೂ ಯಾವ ವಿಧದಲ್ಲೂ ಅದು ಹಾನಿ ಮಾಡಿಲ್ಲವೆಂದೇ ಪ್ರಾಯಶಃ ವಿಜ್ಞಾನಿಗಳು ಇದನ್ನು ತೀರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಕಾಣುತ್ತದೆ. ಸದ್ಯಕ್ಕೆ ಸೂರ್ಯನ ಕೊರೊನಾ ಮತ್ತು ಪ್ಲಾಸ್ಮಾ ತಾಡನವೇ ಇದು ಕಾರಣವೆಂದು ಭಾವಿಸಬಹುದು (ಇನ್ನೂ ಉತ್ತಮ, ನಂಬಲರ್ಹ ಕಾರಣಗಳು ಸಿಗುವವರೆಗೂ). ಕೊರೊನಾ ವೈರಸ್‌ ಮತ್ತು ಪ್ಲಾಸ್ಮಾಕ್ಕೂ ಇದಕ್ಕೂ ಸಂಬಂಧ ಕಲ್ಪಿಸಬೇಡಿ. ಹಾಗೇನಾದರೂ ಅಸಂಬದ್ಧ ಸಂಬಂಧ ಹುಡುಕುವುದೇ ಆದರೆ ಇನ್ನೂ ಉತ್ತಮ ಉದಾಹರಣೆ ಬೇಕೆ?

ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ‘ಅಂಫನ್‌‘ ಚಂಡಮಾರುತ ಅಪ್ಪಳಿಸಿದ ಕ್ಷಣದಲ್ಲೇ ಇಲ್ಲಿ ಇದು ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending