Connect with us

ದಿನದ ಸುದ್ದಿ

ಸಿಲ್ವರ್ ಸ್ಟಾರ್ ಇಂಡಿಯಾ ಪ್ರೆಸೆಂಟ್ಸ್ ಮಿಸ್ಟರ್ ಅಂಡ್ ಮಿಸ್ ಇಂಡಿಯಾ ಸೂಪರ್ ಮಾಡೆಲ್-2019 ಸೀಸನ್-8 

Published

on

ಸುದ್ದಿದಿನ, ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ ಇಂಡಿಯಾ ಪ್ರತಿ ವರ್ಷವೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ಈ ಬಾರಿಯೂ ನವಯುಗದ 2019ರ ಮೊದಲನೇ ಬೆಂಗಳೂರಿನ ಫ್ಯಾಷನ್ ಶೋ ಇದಾಗಿದ್ದೂ ಇದರಲ್ಲಿ 16 ಯುವತಿಯರು 13 ಯುವಕರು ಸ್ಪರ್ಧಿಯಾಗಿದ್ದಾರೆ.

ಈ 29ರಲ್ಲಿ ಸ್ಪರ್ಧಿಗಳಲ್ಲಿ ಯುವತಿಯರ ತಂಡದಿಂದ 3 ಹಾಗೂ ಯುವಕರ ತಂಡದಿಂದ 3 ಸೂಪರ್ ಮಾಡೆಲ್‍ಗಳು ತಮ್ಮ ಮುಡಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆ ಸ್ಯಾಂಡಲ್‍ವುಡ್‍ನ ಹೆಸರಾಂತ ನಾಯಕ ಹಾಗೂ ನಾಯಕಿಯರು ಪಾಲ್ಗೊಂಡಿದ್ದರು.

ಪಾಲ್ಗೊಂಡಿದ್ದ ಚಲನಚಿತ್ರರಂಗದ ನಟ ನಟಿಯರಿವರು : ನಟ ಯಶಸ್ ಸೂರ್ಯ, ನಟಿ ಸಾಕ್ಷಿ, ನಟ ಸಂಚಾರಿ ವಿಜಯ್, ನಟ ಧನು ಗೌಡ, ನಟಿ ನಿಮಿಕಾ ರತ್ನಾಕರ್, ಶುಭಾ ರಕ್ಷಾ, ನಿರ್ದೇಶಕಿ ರಿಶಿಕಾ ಶರ್ಮ, ನಟ ನಿಹಾಲ್ , ಕಲಾವಿದ ರವಿ ರೆಡ್ಡಿ ಹಾಗೂ ರಾಣಿ ರಿಯಾ, ಸೇರಿದಂತೆ ಮುಂತಾದವರು ಭಾಗವಹಿಸಿದರು.

ಈ ಬಾರಿಯ ಫ್ಯಾಷನ್ ಶೋ ಗೋಕುಲ ಎಕ್ಸ್‍ಟೆಕ್ಷನ್‍ನಲ್ಲಿರುವ ಗೋಕುಲ ಗ್ರ್ಯಾಂಡ್ ಹೋಟೆಲ್ ಮತ್ತಿಕೆರೆ(ಯಶವಂತಪುರ) ಆಯೋಜಿಸಲಾಗಿತ್ತು. ಸಂಜೆ 6 ಗಂಟೆಯಿಂದ ಪ್ರಾರಂಭವಾದ ಫ್ಯಾಷನ್ ಶೋ ಅದ್ಧೂರಿಯಾಗಿ ಮೆರಗು ಮೂಡಿತ್ತು. ಇದರ ಬಗ್ಗೆ ಮಾತನಾಡಿದ ಆಯೋಜಕ ರವಿ “ಸತತವಾಗಿ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ಸ್ ಸಂಸ್ಥೆಯೂ ಚಿತ್ರರಂಗಕ್ಕೆ ಹಾಗೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 2019ರ ಮೊದಲ ಫ್ಯಾಷನ್ ಶೋ ಇದಾಗಿದ್ದೂ, ವರ್ಷಾಂತ್ಯದ ಒಳಗೆ ನಾಲ್ಕಕ್ಕೂ ಅಧಿಕ ಫ್ಯಾಷನ್ ಶೋಗಳನ್ನು ಆಯೋಜಿಸಲಿದ್ದೇವೆ ನಮ್ಮಲ್ಲಿ ಗೆದ್ದಂತಹ ಮಾಡೆಲ್‍ಗಳಿಗೆ ಸಿನಿಮಾ ಮಾಡುವ ಯೋಜನೆಯನ್ನು ಹೊಂದಿದ್ದೇವೆ.

ಯುವತಿಯರು

ವಿನ್ನರ್: ಅಸ್ಮಿತಾ ಸಿಂಗ್-ಮಿಸ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ರಿಮ್‍ಜಿಂಮ್ ಗುಪ್ತ- ಫಸ್ಟ್ ರನ್ನರ್ ಅಪ್

ಸಪ್ನ ಸಿಂಗ್ -ಸೆಕೆಂಡ್ ರನ್ನರ್ ಅಪ್

ಯುವಕರು

ಜಗದೀಶ್-ಮಿಸ್ಟರ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ಅಭಿಷೇಕ್ -ಫಸ್ಟ್ ರನ್ನರ್ ಅಪ್

ವಿಕ್ರಮ್-ಸೆಕೆಂಡ್ ರನ್ನರ್ ಅಪ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9035313303

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರ ಪ್ರದರ್ಶನಕ್ಕೆ ದೂರದರ್ಶನದಲ್ಲಿ ಮಾತ್ರ ನಿರ್ಬಂಧ

Published

on

ಸುದ್ದಿದಿನ,ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಂಬಂಧ ಚುನಾವಣೆಯಲ್ಲಿ ನಟರು ಸ್ಪರ್ಧಿಸುತ್ತಿರುವುದರಿಂದ ಅವರು ನಟಿಸಿರುವ ಚಲನಚಿತ್ರಗಳು ಪ್ರದರ್ಶನವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಸ್ಪಷ್ಟಿಕರಣ ನೀಡಿರುತ್ತಾರೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪತ್ರ ಸಂ 437/6ಜಿಜೆ-ಹೆಚ್‍ಪಿ/2014 ಅನ್ವಯ ಖಾಸಗಿ ಚಾನೆಲ್‍ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ವಾಣಿಜ್ಯ ಜಾಹಿರಾತು, ಚಲನಚಿತ್ರಗಳ ಪ್ರದರ್ಶನ ಹಾಗೂ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.

ಆದರೆ ಲೋಕಸಭೆ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು (ವಾಣಿಜ್ಯ ಜಾಹಿರಾತು ಹೊರತುಪಡಿಸಿ) ಪ್ರದರ್ಶಿಸಲು ನಿರ್ಬಂಧವಿರುತ್ತದೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಗಂಡನ ಕೊಂದ ಹೆಂಡತಿ ರಹಸ್ಯ ಬಯಲು..!

Published

on

ಸುದ್ದಿದಿನ,ಬೆಂಗಳೂರು: ಹೆಂಡತಿಯೇ ಗಂಡನನ್ನ ಕೊಂದ ರಹಸ್ಯ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ‌.ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸೇನಹಳ್ಳಿಯಲ್ಲಿ ನಡೆದಿದ್ದ ಈ ಘಟನೆ, ಕಳೆದ ವರ್ಷ ಗಾರೆಕೆಲಸ ಮಾಡುತ್ತಿದ್ದ ಉಮಾಶಂಕರ್(30)ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.

ಘಟನೆ ಬಳಿಕ ಆತನ ಪತ್ನಿ ನೀಡಿದ ಮಾಹಿತಿ ಮೆರೆಗೆ ಆತ್ಮಹತ್ಯೆ ಪ್ರಕರಣ ಅಂತ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು, ಘಟನೆ ಬಳಿಕ ಮರಣೋತ್ತರ ಪರೀಕ್ಷೆ ಹಾಗೂ ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ಆತ್ಮಹತ್ಯೆ ಯಲ್ಲ ಕೊಲೆ ಅನ್ನೋದು ಸಾಬೀತಾಗಿದೆ.

ಈ ಹಿನ್ನೆಲೆ ಮೃತ ಉಮಾಶಂಕರ್ ಪತ್ನಿ ಸುಖಿತಾ(25) ಹಾಗೂ ಆಕೆಯ ಜೊತೆಗಿದ್ದ ಚಾಲಕ ಶ್ರೀನಿವಾಸ್ ನನ್ನು ಪೋಲಿಸರು ಬಂಧಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಸಂಜೆ 5ಕ್ಕೆ ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ

Published

on

ಸುದ್ದಿದಿನ ಡೆಸ್ಕ್ : ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಾದ್ಯಂತ ಶೋಕಚರಣೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ.ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 9.30 ರಿಂದ10:30ರವರೆಗೆ ಗೋವಾದ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ.

ನಂತರ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಣಜಿಯ ಕಲಾ ಅಕಾಡೆಮಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 5 ಗಂಟೆಗೆ ಮಿರಾಮರ್​ನಲ್ಲಿ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪರಿಕ್ಕರ್​ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending