Connect with us

ದಿನದ ಸುದ್ದಿ

ಸಿದ್ದಾರ್ಥ್ ಮೃತದೇಹ ಪತ್ತೆ

Published

on

ಸುದ್ದಿದಿನ, ಮಂಗಳೂರು : ನೇತ್ರಾವತಿ ಸೇತುವೆಯ ಬಳಿಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರತಿಷ್ಠಿತ ಕಾಫಿಡೇ ಸಂಸ್ಥೆಯ ಮಾಲೀಕ ಹಾಗೂ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರ ಮೃತದೇಹ ಪತ್ತೆಯಾಗಿದೆ.

ಸೋಮವಾರ ರಾತ್ರಿ ಸಿದ್ದಾರ್ಥ್​ ನಾಪತ್ತೆಯಾಗಿದ್ದರು. ಸತತ 36 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಬುಧವಾರ ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್​ ಮಂಜುಗಡ್ಡೆ ಸ್ಥಾವರದ ಬಳಿ ಮೃತದೇಹ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಪೊಲೀಸರು ಮತ್ತು ಎನ್​ಡಿಆರ್​ಎಫ್​ ಪಡೆ ಶೋಧಕಾರ್ಯಾಚರಣೆಯನ್ನು ಆರಂಭಿಸಿದ್ದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೊನೆಗೂ ಬದುಕುಳಿಯಲಿಲ್ಲ ಉನ್ನಾವೋ ಅತ್ಯಾಚಾರ ಸಂತ್ರಸ್ತೆ..!

Published

on

ಸುದ್ದಿದಿನ ಡೆಸ್ಕ್ : ಹೈದರಾಬಾದ್ ಪಶುವೈದ್ಯೆಯ ರೇಪ್​ ಅಂಡ್​ ಮರ್ಡರ್​ ಕೇಸ್​​ನಲ್ಲಿ ಆರೋಪಿಗಳು ಎನ್​​ಕೌಂಟರ್​ನಲ್ಲಿ ಮೃತಪಟ್ಟಿದ್ದಾರೆ. ಆರೋಪಿಗಳಿಗೆ ಪೊಲೀಸರೇ ಒಂದು ರೀತಿಯಲ್ಲಿ ಶಿಕ್ಷೆ ನೀಡಿರೋದು ದೇಶದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಆದ್ರೀಗ ಸತ್ತು ಬದುಕಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮತ್ತೆ ಕೀಚರಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಅತ್ಯಾಚಾರ ಮಾಡಿದ್ದ ಆರೋಪಿ ಸೇರಿ ನಾಲ್ವರು ಸಂತ್ರಸ್ತ ಯುವತಿಯ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.24 ವರ್ಷದ ಯುವತಿಯನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಲಾಗಿತ್ತು ಮತ್ತು ಡಿಸೆಂಬರ್​ 6ರಂದು ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಮತ್ತು ಇತರೇ ಮೂವರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿದ್ದರು.

ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಬೆಂಕಿ ಇಟ್ಟ ಐವರ ಪೈಕಿ ಒಬ್ಬಾತ ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಸಂತ್ರಸ್ತೆ ತನ್ನ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಉನ್ನಾವೋದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ದುಷ್ಕರ್ಮಿಗಳು ಈಕೆಯ ಮೇಲೆ ಬೆಂಕಿ ಹಚ್ಚಿದ ಪರಿಣಾಮ ಈಕೆಯ ದೇಹಭಾಗ ಸುಮಾರು ಶೇ.90ರಷ್ಟು ಸುಟ್ಟುಹೋಗಿತ್ತು. ತಡರಾತ್ರಿ 11.40ರ ಸುಮಾರಿಗೆ ಈಕೆ ಮೃತಪಟ್ಟಿದ್ದಾಳೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಹಾಪುರ | ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

Published

on

ಸುದ್ದಿದಿನ,ಶಹಾಪುರ : ತಾಲೂಕಿನ ಶಿರವಾಳ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನಾಚರಣೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪು‌ಷ್ಪಾರ್ಜನೆ ಮಾಡಲಾಯಿತು. ಸದಾಶಿವ ಗೋನಲ ಮಾಹಾಂತೇಶ ನಡಿಗಿ ಬಸವರಾಜ ಇಂಗಳಗಿ ರಾಮಸ್ವಾಮಿ ಬಡಿಗೇರ ಸುಬಾಸ ನಡಿಗಿ ಹಾಗೂ ಧ್ವಜರೋಹಣ ಪಂಚಶೀಲ ಧ್ವಜ ಅಂಬ್ಲಪ್ಪ ನಡಿವಿನಕೇರಿ ಚಂದ್ರಪ್ಪ ಭಂಡಾರಿ ನೇರವೇರಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿವು ಆಂದೋಲ ಅವರು ಮಾತನಾಡಿ, ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ, ಜಾತಿ ಪದ್ಧತಿ, ಲಿಂಗಭೇದ, ಅಸಮಾನತೆ ವಿರುದ್ಧ ಹೋರಾಡಿ ಶೋಷಿತ ಸಮುದಾಯದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಮಹಾಪರಿನಿರ್ವಾಣ ಹೊಂದಿದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದರು.

ಅವರನ್ನು ಓರ್ವ ಮಾರ್ಗದರ್ಶಿಯನ್ನಾಗಿ ಸ್ವೀಕರಿಸಿ,ಅವರು ತೋರಿಸಿ ಕೊಟ್ಟ ಹಾದಿಯಲ್ಲಿ ಅವರ ಯೋಚನೆ ಮತ್ತು ದೂರದೃಷ್ಟಿಯನ್ನು ಅರ್ಥಮಾಡಿಕೊಂಡು ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವದಡಿ ಸಮಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಬಲಭೀಮ ನಡಿವಿನಕೇರಿ ಸಿದ್ದಪ್ಪ ಧಮ್ಮನ ಹಾಗೂ ಊರಿನ ಹಿರಿಯರು ಮುಖಂಡರು ಮತ್ತು ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು. ನಿರೂಪಣೆ ರವಿ ಭಂಡಾರಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್​ ಆದ ಆರೋಪಿಯ ಪತ್ನಿ

Published

on

ಸುದ್ದಿದಿನ,ಹೈದರಾಬಾದ್ :‌‌ ಪಶು ವೈದ್ಯೆ ಪ್ರಿಯಾಂಕಾ ಪ್ರಕರಣದಲ್ಲಿ ಎನ್‌ಕೌಂಟರ್ ಆದ ಚನ್ನಕೇಶವುಲು ಪತ್ನಿ ತನ್ನ ಆರೋಪಿ ಗಂಡನನ್ನು ಕಳೆದುಕೊಂಡಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಪತಿ ಇಲ್ಲದೆ ನಾನು ಹೇಗೆ ಬದುಕಲಿ, ನಾನು ಸಾಯ್ತೇನೆ ಎಂದು ಗೋಳಾಡಿದ್ದಾರೆ. ಚನ್ನಕೇಶವುಲು ಮದುವೆಯಾಗಿ ಒಂದು ವರ್ಷವೂ ಆಗಿಲ್ಲ.

ವಿಚಾರಣೆ ಬಳಿಕ ವಾಪಸ್ ಕಳುಹಿಸುವುದಾಗಿ ಹೇಳಿದ್ದರು. ಹೀಗೆ ಹೇಳಿ ಪೊಲೀಸರು ನನ್ನ ಪತಿಯನ್ನು ಕರೆದೊಯ್ದಿದ್ದರು. ಆದ್ರೆ ಈಗ ನನ್ನ ಪತಿಯನ್ನು ಕೊಂದಿದ್ದಾರೆ. ನನ್ನ ಪತಿ ಇಲ್ಲದೆ ನಾನು ಹೇಗೆ ಜೀವನ ಮಾಡಲಿ. ನನ್ನ ಪತಿ ಇಲ್ಲದೆ ನಾನು ಬದುಕುವುದಿಲ್ಲ ಎಂದು ಚನ್ನಕೇಶವುಲು ಪತ್ನಿ ಅಳುತ್ತಲೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಆದರೆ ಇಂತಹ ಕಾಮುಕರನ್ನು ಮಟ್ಟ ಹಾಕಿರುವುದಕ್ಕೆ ದೇಶದಾದ್ಯಂತ ಮೆಚ್ಚುಗೆ, ಸಂತೋಷ ವ್ಯಕ್ತವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending