Connect with us

ದಿನದ ಸುದ್ದಿ

ಕರ್ನಾಟಕ ಬಸವಣ್ಣ, ಸರ್ವಜ್ಞ, ಕನಕದಾರಸ ಪುಣ್ಯನೆಲ, ಇಲ್ಲಿ ಕೋಮುವಾದಿಗಳು ಬೇರೂರಲು ಬಿಡಬೇಡಿ : ಸಿದ್ದರಾಮಯ್ಯ ಮನವಿ

Published

on

ಸುದ್ದಿದಿನ, ಬಾಗಲಕೋಟೆ : ಕೋಮುಗಲಭೆ ಸೃಷ್ಟಿಸುವವರಿಗೆ, ದಲಿತ ವಿರೋಧಿಗಳಿಗೆ, ಬಾಂಬು ಹಾಕಿ‌ ಅಮಾಯಕರನ್ನು ಕೊಲ್ಲುವವರಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಮಾಲೆಗಾಂವ್ ಸ್ಪೋಟದ ಪ್ರಮುಖ ಆರೋಪಿಗೆ ಬಿಜೆಪಿ ಟಿಕೆಟ್ ನೀಡಿರುವುದರ ಹಿಂದಿನ ಉದ್ದೇಶವಾದರೂ ಏನು? ಇದರಿಂದ ಸಮಾಜಕ್ಕೆ ಅವರು ನೀಡುವ ಸಂದೇಶವಾದರೂ ಏನು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಭಾನುವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಹುನಗುಂದದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ವೀಣಾ ಕಾಶಪ್ಪನವರ್ ಅವರಿಗೆ ಮತ ನೀಡುವಂತೆ ಕೋರಿದ ಅವರು, ಕರ್ನಾಟಕ ಬಸವಣ್ಣ, ಸರ್ವಜ್ಞ, ಕನಕದಾಸರಂತಹ ಪುಣ್ಯಪುರುಷರ ನೆಲ. ಸೌಹಾರ್ದತೆಯ ಈ ನಾಡಿನಲ್ಲಿ ಕೋಮುವಾದಿಗಳನ್ನು ಬೇರೂರಲು ಬಿಡಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರ ‘ಸಬ್ ಕಾ ಸಾಥ್ ಸಬ್ ಕ ವಿಕಾಸ್’ ಬರಿ ಘೋಷಣೆಗಷ್ಟೇ ಸೀಮಿತ. ಅವರಿಗೆ ಸರ್ವರ ಅಭಿವೃದ್ಧಿಯ ನಿಜಕಾಳಜಿ ಇದ್ದಿದ್ದರೆ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುತ್ತಿರಲಿಲ್ಲವೇ? ಕೇವಲ ಘೋಷಣೆಗಳಿಂದ ಈ ಸಮುದಾಯ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಅವರದೇ ಬಿಜೆಪಿ ಸರ್ಕಾರ ಕೊನೆಯ ದಿನಗಳನ್ನು ಎಣಿಸುತ್ತಿದೆ, ಇತ್ತ ರಾಜ್ಯ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಸರ್ಕಾರ ರಚಿಸುವ ಭ್ರಮೆಯಲ್ಲಿದ್ದಾರೆ. ನರೇಂದ್ರ ಮೋದಿಯವರು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಐಟಿ ದಾಳಿ ಮಾಡಿಸುವ ಬದಲು, ಶಾಸಕರ ಖರೀದಿಗೆ ಕಾದು ಕುಳಿತಿರುವ ರಾಜ್ಯ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಮಾಡಿಸಲಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿಯವರು ನುಡಿದಂತೆ ನಡೆದು 5 ರಾಜ್ಯಗಳ ರೈತರ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಗರೀಬಿ ಹಠಾವೋ ಘೋಷಣೆ ಭಾಷಣಕ್ಕಷ್ಟೇ ಸೀಮಿತವಲ್ಲ. ನುಡಿದಂತೆ ನಡೆಯುವವರು ನಾವು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಡಕುಟುಂಬಕ್ಕೆ ವಾರ್ಷಿಕ ರೂ.72,000 ನೀಡುತ್ತೇವೆ. ಇದರಿಂದ ದೇಶದ ಬಡತನವೂ ನಿರ್ಮೂಲನೆಯಾಗಲಿದೆ ಎಂದು ವಿಶ್ವಾಸ ನೀಡಿದರು.

ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎನ್ನುವವರು, ಪೊಲೀಸ್ ಬ್ಯಾರಿಕೇಡ್‌ ಮುರಿಯುವವರು, ಹುತಾತ್ಮ ಪೊಲೀಸರನ್ನು ಅವಮಾನಿಸುವವರನ್ನು ಇಟ್ಟುಕೊಂಡು ಬಿಜೆಪಿ ದೇಶ ಪ್ರೇಮದ ನಾಟಕವಾಡುತ್ತಿದೆ. ಹಾಗಾಗಿ ಜನತೆ ವಿವೇಚನೆಯಿಂದ ಮತ ಚಲಾಯಿಸಬೇಕು. ದುಷ್ಟರ ಕೈಯಲ್ಲಿ ಅಧಿಕಾರ ಕೊಟ್ಟು ಪರಿತಪಿಸುವ ಬದಲು, ರಾಷ್ಟ್ರ ಕಟ್ಟುವ ಕಾಂಗ್ರೆಸ್ ಕೈಯನ್ನು ಬೆಂಬಲಿಸಿ ಎಂದು ಕರೆ ಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪ್ರಿಯಾಂಕ ರಾಯಭಾರಿ ವಿವಾದ : ಪಾಕ್ ಮನವಿ ತಿರಸ್ಕರಿಸಿದ ವಿಶ್ವಸಂಸ್ಥೆ

Published

on

ಸುದ್ದಿದಿನ ಡೆಸ್ಕ್ : ಯುನಿಸೆಫ್ ಸೌಹಾರ್ದಯುತ ರಾಯಭಾರಿ ಪ್ರಿಯಾಂಕಾ ಚೋಪ್ರಾ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಪಾಕಿಸ್ತಾನ, ವಿಶ್ವಸಂಸ್ಥೆಗೆ ದೂರು ನೀಡಿತ್ತು. ಪಾಕಿಸ್ತಾನದ ದೂರನ್ನು ವಿಶ್ವಸಂಸ್ಥೆ ತಿರಸ್ಕರಿಸಿದ್ದು, ಪಾಕ್ ಗೆ ತೀವ್ರ ಮುಖಭಂಗವಾಗಿದೆ.

ಪಾಕಿಸ್ತಾನ ಮಾನವ ಹಕ್ಕುಗಳ ಸಚಿವ ಶೀರಿನ್ ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.
ಕಾಶ್ಮಿರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಪರ ಪ್ರಿಯಾಂಕಾ ಟ್ವೀಟ್ ಮಾಡಿ ಬೆಂಬಲಿಸಿದ್ದರು. ಜೊತೆಗೆ ಜೈಹಿಂದ್, ಇಂಡಿಯನ್ ಆರ್ಮಿಫೋರ್ಸ್ ಎಂದು ನಮಸ್ತೆಯ ಎಮೋಜಿಗಳನ್ನು ಹಾಕಿದ್ದರು. ಈ ಕಾರಣದಿಂದ ಪಾಕ್ ವಿಶ್ವಸಂಸ್ಥೆಗೆ ಪ್ರಿಯಾಂಕಾ ಅವರನ್ನು ರಾಯಭಾರಿ ಹುದ್ದೆಯಿಂದ ಕೆಳಗಿಳಿಸುವ ಕುರಿತು ದೂರು ನೀಡಿತ್ತು.

ಪ್ರಿಯಾಂಕಾ ಚೋಪ್ರಾ ಅವರಿಗೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಮಾತನಾಡುವ ಹಕ್ಕಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟರೆಸ್ ಅವರ ವಕ್ತಾರ ಸ್ಟೀಫನ್ ಹುಜಾರಿಕ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

  • ಕೃಪೆ : ಡೆಮಾಕ್ರಟಿಕ್ ಟಿವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2,637 ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ 2,637 ಗ್ರಾಮೀಣ ಅಂಚೆ ನೌಕರರ ಹುದ್ದೆಗಳನ್ನು ತುಂಬಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಮತ್ತು ವಯೋಮಿತಿ ಕನಿಷ್ಠ 18 ರಿಂದ 40 ವರ್ಷಗಖಾಗಿದ್ದು, ಅನುಸೂಚಿತ ಜಾತಿ/ಬುಡಕಟ್ಟು/ಹಿಂದುಳಿದ ವರ್ಗಗಳಿಗೆ ಸೇರದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಹೆಸರನ್ನು ವೆಬ್‍ಸೈಟ್ http://indiapost.gov.in
ಅಥವಾ http://appost.in/gdsonline
ರಲ್ಲಿ ನೋಂದಾಯಿಸಿಕೊಳ್ಳಬಹುದು.

ಇತರ ಹಿಂದುಳಿದ ವರ್ಗಗಳ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ರಾಜ್ಯದ ಯಾವುದೇ ಮುಖ್ಯ ಕಚೇರಿ ಅಥವಾ ಆಯ್ದ ಅಂಚೆ ಕಚೇರಿಗಳ ಕೌಂಟರ್‍ನಲ್ಲಿ ಪಾವತಿಸಿಬಹುದು. ಯು.ಆರ್.ಎಲ್ ಲಿಂಕ್ ಮೂಲಕ ಕೂಡ ಪಾವತಿಸಿಬಹುದು.

ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಅನುಸೂಚಿತ ಜಾತಿ/ಬುಡಕಟ್ಟು ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿಗಳಯನ್ನು ಸೆ.04 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ http://appost.in/gdsonline
ಸಂರ್ಪಕಿಸುವಂತೆ ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಪಿ. ಚಿದಂಬರಂ ಐದು ದಿನಗಳ ವಶಕ್ಕೆ ಸಿಬಿಐ ಮನವಿ

Published

on

ಸುದ್ದಿದಿನ,ದೆಹಲಿ: ನಿನ್ನೆ ಐಎನ್ಎಕ್ಸ್ ಹಗಣದ ಆರೋಪದಲ್ಲಿ ಬಂಧಿಸಲಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಂದು ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದರು. ಚಿದಂಬರಂ ಅವರನ್ನು ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಿಬಿಐ ಪರ ವಾದ ಮಂಡಿಸಿ, ಪಿ. ಚಿದಂಬರಂ ವಿಚಾರಣೆಗೆ ಸಹಕರಿಸುತ್ತಿಲ್ಲ. ಯಾವುದೇ ತನಿಖೆಗೂ ಏನನ್ನೂ ಪ್ರತಿಕ್ರಿಯಿಸುತ್ತಿಲ್ಲ. ಮೌನ ಅವರ ಸಾಂವಿಧಾನಿಕ ಹಕ್ಕು, ಆದರೆ, ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ ಎಂದರು.

ಇತರ ಆರೋಪಿಗಳೊಂದಿಗೆ ಪಿ.ಚಿದಂಬರಂ ಅವರನ್ನು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಅವರನ್ನು ಸಿಬಿಐ ವಶಕ್ಕೆ ನೀಡುವಂತೆ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.‌ ಇಂದಿನ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

Continue Reading
Advertisement

Trending