Connect with us

ದಿನದ ಸುದ್ದಿ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ : ಮಿಸ್ ಮಾಡ್ದೆ ಓದಿ

Published

on

ಯುದ್ದೋನ್ಮಾದ ಸ್ಥಿತಿಯಲ್ಲಿ ನಾವುಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನೂ ಪೂರ್ತಿಯಾಗಿ ಕೇಳಿಕೊಳ್ಳಬೇಕಿದೆ. ನಮ್ಮ ಯೋಧ ಅಭಿನಂದನ್ ಬಿಡುಗಡೆಯ ಬಗ್ಗೆ ಮಾತ್ರ ಹೇಳಿರುವ ಮಾಧ್ಯಮಗಳು, ವಿಂಗ್ ಕಮಾಂಡರ್ ಯಾಕಾಗಿ ಬಂಧನಕ್ಕೊಳಗಾದ ? ಯೋಧನ ಬಂಧನಕ್ಕೆ ಭಾರತದ ಮಾಧ್ಯಮಗಳು ಹೇಗೆ ಕಾರಣವಾದವು ಎಂಬುದನ್ನೂ ಇಮ್ರಾನ್ ಖಾನ್ ಹೇಳಿದ್ದಾರೆ. ಯುದ್ದ ಬಯಸುವವರು ನಿಮ್ಮ ಶತ್ರುವಿನ ಮಾತುಗಳಿಗೂ ಒಮ್ಮೆ ಕಿವಿಯಾಗಬೇಕಿದೆ. ಮಾಧ್ಯಮಗಳು ಎಲ್ಲವನ್ನೂ ಹೇಳುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಹೆಮ್ಮೆಯ ಯೋಧ ಅಭಿನಂದನ್ ಬಿಡುಗಡೆಯ ಹೊತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ ಇಲ್ಲಿದೆ.

ಇಮ್ರಾನ್ ಖಾನ್ ಭಾಷಣ

ನಾನು ಪ್ರತಿಪಕ್ಷದ ನಾಯಕರಿಗೆ ಅಭಿವಂದನೆ ಸೂಚಿಸುತ್ತಾ, ಇವತ್ತು ಪಾಕಿಸ್ತಾನ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಸಂಧರ್ಭದಲ್ಲಿ ನಾವೆಲ್ಲರೂ ಒಟ್ಟಾಗಿರೋದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದೇನೆ.

ಮಾನ್ಯ ಸ್ಪೀಕರ್ ರವರೇ,

ಹಿಂದೂಸ್ತಾನ ಒಂದು ಹೆಜ್ಜೆ ನಮ್ಮ ಕಡೆ ಇಟ್ಟರೆ ನಾವು ಎರಡು ಹೆಜ್ಜೆ ಅವರ ಕಡೆ ಮುಂದಡಿ ಇಡುತ್ತೇವೆ ಎಂದು ನಾನು ಅಂದು ಘೋಷಿಸಿದ್ದೆ. ಅಂದು ಅಂದರೆ 26 ಜುಲೈಯಂದು ನಾನಿನ್ನೂ ಕೂಡಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿರಲಿಲ್ಲ. ಇರಲಿ, ಇದರ ಹೊರತಾಗಿ ಬಡತನ ನಿರ್ಮೂಲನೆ ಮಾಡುವುದು ನನ್ನ ಗುರಿಯಾಗಿತ್ತು. ಈ ದೇಶದಲ್ಲಿ ಒಂದಷ್ಟು ಜನ ಶ್ರೀಮಂತರಾಗಿದ್ದಾರೆ. ಒಂದಷ್ಟು ಜನ ಹಸಿವೆಯಿಂದ ಬಳಲುವ ಬಡತನದಲ್ಲಿದ್ದಾರೆ. ಈ ಅಸಮಾನತೆಯನ್ನು ನಾವು ಸರಿದೂಗಿಸಬೇಕಿದೆ. ಚೀನಾ ಅದನ್ನು ಯಶಸ್ವಿಯಾಗಿ ಮಾಡಿ ತೋರಿಸಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಚೀನಾ ಯಾವ ರೀತಿ ಮೂಲಸೌಕರ್ಯದಲ್ಲಿ ಅಭಿವೃದ್ದಿ ಹೊಂದಿದೆಯೋ ಅದೇ ರೀತಿ ಕೋಟ್ಯಾಂತರ ಜನರನ್ನು ಹಸಿವಿನಿಂದ ಮುಕ್ತಗೊಳಿಸಿದೆ.

ಚೀನಾದ ಮತ್ತೊಂದು ಸಾಧನೆಯೆಂದರೆ ತನ್ನ ನೆರೆಹೊರೆಯ ದೇಶಗಳ ಮಧ್ಯೆ ಇದ್ದ ಸಮಸ್ಯೆಗಳನ್ನು ಬಹಳ ಪ್ರಭುದ್ದವಾಗಿ ನಿರ್ವಹಿಸಿರುವುದು. ಕಳೆದ 15 ವರ್ಷಗಳಲ್ಲಿ ಅಮೇರಿಕಾವು ಅಫ್ಘಾನಿಸ್ತಾನಕ್ಕೆ ಭಯೋತ್ಪಾಧನೆಯ ಮೇಲೆಯೇ ಒಂದು ಟ್ರಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ. ಆದರೆ ಚೀನಾ ಮಾತ್ರ ಆ ಸಂಧರ್ಭದಲ್ಲಿ ಅಭೂತಪೂರ್ವ ಅಭಿವೃದ್ದಿ ಕಡೆಗೆ ಮಾತ್ರ ಗಮನ ನೀಡಿತು. ರೈಲು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಂಡಿತು. ಆದ್ದರಿಂದ ಯಾರು ಏನೇ ಮಾಡುತ್ತಿರಲಿ, ನಾವು ದೇಶವಾಗಿ ಅಭಿವೃದ್ದಿಯಲ್ಲಿ ಮುಂದುವರೆಯುವುದು ಈಗಿನ ಪ್ರಾಮುಖ್ಯತೆಯಾಗಿದೆ.

ನಾನು ಭಾರತದ ಜೊತೆ ಈ ಹಿಂದಿನಿಂದಲೂ ಸಂಪರ್ಕದಲ್ಲಿದ್ದೆ. ನಾವು ವಿದೇಶಾಂಗ ಸಚಿವರ ಮಾತುಕತೆ ನಡೆಸಬೇಕಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದೆ. ಭಾರತದ ಪ್ರಧಾನಿ ಮೋದಿಯವರು ನಮ್ಮ ಪತ್ರಕ್ಕೆ ಉತ್ತಮ ಸ್ಪಂದನೆಯನ್ನೇ ಕೊಡಲಿಲ್ಲ. ಯಾಕೆ ನಮ್ಮ ಪತ್ರಕ್ಕೆ ಸ್ಪಂದನೆ ನೀಡಿಲ್ಲ ಎಂದು ನಮಗೆ ನಂತರ ಮನವರಿಕೆಯಾಯ್ತು. ಯಾಕೆಂದರೆ ಹಿಂದೂಸ್ತಾನದಲ್ಲಿ ಚುನಾವಣೆ ಬರುತ್ತಿದೆ. ಬಹುಶಃ ಚುನಾವಣೆಯ ಸಂದರ್ಭದಲ್ಲಿ ಮಾತುಕತೆ ಬೇಡ, ಚುನಾವಣೆಯ ನಂತರ ಮಾಡೋಣಾ ಎಂಬ ಕಾರಣಕ್ಕಾಗಿ ಮೋದಿಯವರು ಸ್ಪಂದನೆ ನೀಡದಿರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದೂ ಸುಳ್ಳಾಯ್ತು.

ಮಾನ್ಯ ಸ್ಪೀಕರ್ ರವರೆ,
ಭಾರತದ ಚುನಾವಣೆಗೂ ಮೊದಲು ನಮ್ಮ ಜೊತೆ ಭಾರತ ಮಾತನಾಡಬಹುದು ಎಂದು ನಾವು ಅಂದುಕೊಂಡಿದ್ದೆವು. ಯಾಕೆಂದರೆ ನಾವು ಮಾತುಕತೆಯ ಮೇಲೆ ನಂಬಿಕೆ ಇರಿಸಿದವರಾಗಿದ್ದೆವು. ಆದರೂ ನಮಗೆ ಅನುಮಾನ ಇತ್ತು. ಚುನಾವಣೆಗೂ ಮೊದಲು ಭಾರತದಲ್ಲಿ ಏನಾದರೊಂದು ದೊಡ್ಡ ಘಟನೆಯಾಗುತ್ತದೆ. ಆ ಘಟನೆಯನ್ನು ಚುನಾವಣೆಗಾಗಿ ಬಳಸಲಾಗುತ್ತದೆ ಎಂಬ ಅನುಮಾನ ನನಗೆ ಬಂದಿತ್ತು. ನಾನು ಹೀಗೆ ಅನುಮಾನಿಸುತ್ತಿರುವಾಗಲೇ ಪುಲ್ವಾಮಾ ಘಟನೆ ನಡೆಯಿತು. ಪುಲ್ವಾಮ ಘಟನೆ ನಡೆದು ಅರ್ಧ ಗಂಟೆಯೂ ಆಗಿರಲಿಲ್ಲ. ಆಗಲೇ ಭಾರತವು ಪಾಕಿಸ್ತಾನದತ್ತಾ ಬೆರಳು ತೋರಿಸಿತು. ಈ ಘಟನೆ ನಡೆದ ಸಮಯ ಸಂದರ್ಭ ಯಾವುದು ಎಂಬುದನ್ನೂ ನಾವು ನೋಡಬೇಕಾಗುತ್ತದೆ. ನಮಗೆ ಅತ್ಯಂತ ಪ್ರಮುಖವಾದ ಸೌದಿ ಅರೇಭಿಯಾ ಬೇಟಿ ಇತ್ತು. ಸೌದಿ ಅರೇಬಿಯಾ ಜೊತೆ ಹಲವು ಒಪ್ಪದಗಳಿಗೆ ನಾವು ಸಹಿ ಹಾಕಬೇಕಿತ್ತು.

ನಮಗೆ ಸಿಕ್ಕಂತಹ ಅಭೂತಪೂರ್ವ ಅವಕಾಶವನ್ನು ನಾವು ಈ ರೀತಿಯ ಕೃತ್ಯ ಮಾಡಿ ನಮಗೆ ನಾವೇ ಹಾಳುಗೆಡವಿ ಮಾಡುವುದಾದರೂ ಏನಿದೆ ? ನಮಗೆ ಇದರಿಂದ ಏನು ಸಿಗುತ್ತದೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಅಥವಾ ಪಾಕಿಸ್ತಾನ ಈ ಘಟನೆಯಿಂದ ಲಾಭ ಮಾಡಿಕೊಳ್ಳುವುದಾದರೂ ಏನನ್ನು ? ಆ ಕಾರಣದಿಂದಲೇ ನಾನು ಭಾರತವನ್ನು ಉದ್ದೇಶಿಸಿ ಮಾತನಾಡಿದೆ. ನೀವು ನಮಗೆ ಯಾವುದೇ ರೀತಿಯ ಮಾಹಿತಿಗಳನ್ನು ನೀಡಿದ ಸಂದರ್ಭದಲ್ಲಿ ನಾವು ಆರೋಪಿಗಳ ಪತ್ತೆಗೆ ಕೆಲಸ ಶುರು ಮಾಡುತ್ತೇವೆ ಎಂದು ಘೋಷಿಸಿದ್ದೆ. ಆದರೆ ಭಾರತ ತನ್ನ ಆರೋಪಕ್ಕೆ ಪೂರಕವಾದ ಮಾಹಿತಿ ರವಾನಿಸಲಿಲ್ಲ.

ಈ ಸದನದಲ್ಲಿ ಇರುವ ಎಲ್ಲಾ ಪಕ್ಷಗಳೂ ಕೂಡಾ ಪಾಕಿಸ್ತಾನದೊಳಗಡೆ ಸಶಸ್ತ್ರ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಶನಲ್ ಅ್ಯಕ್ಷನ್ ಪ್ಲ್ಯಾನ್ ಗೆ ಸಹಿ ಹಾಕಿದ್ದೇವೆ. ನಾವು ಸಹಿ ಹಾಕಿದಂತೆ ಯಾವುದೇ ಸಶಸ್ತ್ರ ಹೋರಾಟವನ್ನು ನಾವು ಬೆಂಬಲಿಸುವುದಿಲ್ಲ. ಆದ್ದರಿಂದಲೇ ನೀವು ಮಾಹಿತಿ ಕೊಟ್ಟರೆ ನಾವು ಆರೋಪಿಗಳ ಪತ್ತೆಗೆ ಕೆಲಸ ಮಾಡುತ್ತೇವೆ ಎಂದು ಭಾರತಕ್ಕೆ ಕೇಳಿಕೊಂಡಿದ್ದೆವು. ಆದರೆ ಅದ್ಯಾವುದನ್ನೂ ಭಾರತ ಮಾಡದೇ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಿತು.

ನಾನು ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ. ಈ ವಿಷಮ ಪರಿಸ್ಥಿತಿಯಲ್ಲಿ ಪಾಕ್ ಮಾಧ್ಯಮಗಳು ಬಹಳ ಸಂಯಮದಿಂದ, ಜವಾಬ್ದಾರಿಯಿಂದ ವರ್ತಿಸಿದವು. ಕಳೆದ 15 ವರ್ಷಗಳಿಂದ ಪಾಕ್ ಮಾಧ್ಯಮಗಳು ಹಲವು ಬಾಂಬ್ ಸಂಘರ್ಷಗಳನ್ನು ಕಂಡಿದೆ. ಬಾಂಬಿನಿಂದ ಎಷ್ಟು ಪ್ರಾಣಹಾನಿಯಾಗುತ್ತದೆ ? ಆಸ್ಪತ್ರೆಯಲ್ಲಿ ಎಷ್ಟು ಜೀವಕ್ಕಾಗಿ ನರಳಬೇಕಾಗುತ್ತದೆ ? ಆಸ್ತಿಪಾಸ್ತಿ ಪ್ರಾಣಹಾನಿಯನ್ನು ಪಾಕ್ ಮಾಧ್ಯಮಗಳು ಕಣ್ಣಾರೆ ಕಂಡಿದ್ದವು. ಆದ್ದರಿಂದ ಪಾಕ್ ಮಾಧ್ಯಮಗಳು ಯುದ್ದವನ್ನು ಬಯಸದೇ ಬಹಳ ಪ್ರಭುದ್ದವಾದ ವರ್ತನೆಯನ್ನು ತೋರಿಸಿದವು.

ಆದರೆ ನಾನು ಬಹಳ ಬೇಜಾರಿನಿಂದ ಒಂದು ಮಾತನ್ನು ಹೇಳಬೇಕಾಗುತ್ತದೆ. ಹಿಂದೂಸ್ತಾನ್ ಮಾಧ್ಯಮಗಳು ಯಾವ ರೀತಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಾಣ ಮಾಡಿದವು ಎಂದರೆ, ಪಾಕಿಸ್ಥಾನದಲ್ಲಿ ಈಗ ಏನಾದರೂ ಆಗಿಯೇ ಬಿಡುತ್ತದೆ ಎಂದು ನಮಗೇ ಅನುಮಾನ ಬರಲಾರಂಭಿಸಿತು. ನೀವೇನಾದರೂ ಮುಂದುವರೆದರೆ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸರ್ವಸನ್ನದ್ದವಾಗಿದೆ ಎಂಬ ವಿಶ್ವಾಸ ನನಗಿತ್ತು.

ಎರಡು ದಿನದ ಹಿಂದೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಅಂತರರಾಷ್ಟ್ರೀಯ ಕಾನೂನನ್ನು ಭಾರತ ಉಲ್ಲಂಘಿಸಿತು. ಯು ಎನ್ ಚಾರ್ಟರ್ ನ ಉಲ್ಲಂಘನೆ ಮಾಡಿತು. ಪುಲ್ವಾಮಾದ ಬಗ್ಗೆ ಯಾವುದೇ ಮಾಹಿತಿ ನೀಡದೇ ಪಾಕಿಸ್ತಾನಕ್ಕೆ ದಾಳಿ ಮಾಡುವ ಹಿಂದೆ ಭಾರತದ ಚುನಾವಣೆಯಿದೆ ಎಂಬುದು ನಮಗೆ ಮನವರಿಕೆಯಾಗಿದೆ. ಪಾಕಿಸ್ಥಾನವು ಪುಲ್ವಾಮ ಘಟನೆ ಸಂಬಂಧ ಏನೆಲ್ಲಾ ಸಹಕಾರವನ್ನು ಭಾರತಕ್ಕೆ ನೀಡಬೇಕೋ ಅದನ್ನು ನೀಡಲು ಸಿದ್ದವಿತ್ತು. ಮತ್ತೊಂದು ಕಡೆ ಪಾಕಿಸ್ತಾನ ಅಫ್ಘಾನಿಸ್ತಾನದ ಸಮಸ್ಯೆಯಿದೆ. ಪಾಕಿಸ್ತಾನ ಮಾತುಕತೆಯ ಮೂಲಕ ಅದನ್ನೂ ಪರಿಹರಿಸಲು ಅವಕಾಶ ಸಿಕ್ಕಿದಾಗ ಮಾಡಿದ್ದೇವೆ. ಈ ರೀತಿಯ ಪ್ರಯತ್ನದಿಂದಾಗಿಯೇ ಮಾತುಕತೆ ಯಶಸ್ವಿಯಾಗಿದೆ. ಈಗ ನಮಗೆ ಭಾರತ ಒಂದು ರೀತಿಯ ಬೆದರಿಕೆ ಒಡ್ಡುತ್ತಿದೆ.

ಹೌದು. ಪಾಕಿಸ್ತಾನದ ಮೇಲೆ ದಾಳಿಯಾಗಿದೆ. ನಮಗೆ 3.30 ರ ವೇಳೆಗೆ ಪಾಕಿಸ್ತಾನದ ಮೇಲೆ ದಾಳಿಯಾಗಿದೆ ಎಂದು ತಿಳಿಯಿತು. ಸೇನಾ ಮುಖ್ಯಸ್ಥ, ವಾಯುಸೇನಾ ಮುಖ್ಯಸ್ಥರ ಜೊತೆ ತಕ್ಷಣ ಮಾತನಾಡಿದೆ. ನಾವು ಭಾರತಕ್ಕೆ ಪ್ರತ್ಯುತ್ತರ ಕೊಡುವುದೋ? ಬೇಡ್ವೋ ? ಎಂಬ ಬಗ್ಗೆ ಚರ್ಚೆ ಮಾಡಿದೆವು. ಏನಾದರೂ ಸಾವು ನೋವುಗಳು ಸಭಂಭವಿಸಿದೆಯೇ ? ಆಸ್ತಿಪಾಸ್ತಿ ನಷ್ಠವಾಗಿದೆಯೇ ಎಂದು ಸೇನಾಧಿಕಾರಿಗಳನ್ನು ಕೇಳಿದೆ. ಯಾವುದೇ ಸಾವುನೋವುಗಳು ಆಗಿಲ್ಲ ಎಂದು ಸೇನಾಧಿಕಾರಿಗಳು ನನಗೆ ಮಾಹಿತಿ ನೀಡಿದರು.

ಆದ್ದರಿಂದ ನಾವು ಭಾರತದ ದಾಳಿಗೆ ಪ್ರತಿಕ್ರಿಯೆ ನೀಡದೇ ಸುಮ್ಮನಿರುವ ಇರುವ ಮಹತ್ವದ ನಿರ್ಧಾರಕ್ಕೆ ಬಂದೆವು. ಪಾಕಿಸ್ತಾನಕ್ಕೆ ದಾಳಿಯಾದ್ರೂ ಸುಮ್ಮನಿದ್ದೀರಿ ಯಾಕೆ ಎಂದು ನನ್ನ ರಾಷ್ಟ್ರದ ಜನರ ಪ್ರಶ್ನೆಯಾಗಿತ್ತು. ಆದರೆ “ದಾಳಿಯಿಂದ ಯಾವುದೇ ಸಾವು ನೋವುಗಳು ಆಗದೇ ಇರುವಾಗ ಪ್ರತಿದಾಳಿ ಮಾಡಿ ಸಾವುನೋವುಗಳನ್ನು ಸೃಷ್ಟಿಸುವುದು ತಪ್ಪಾಗುತ್ತದೆ”. ಆದ್ದರಿಂದ ಒಂದು ಜವಾಬ್ದಾರಿಯುತ ಪ್ರಭುತ್ವವಾಗಿ ಯಾವುದೇ ಪ್ರತ್ಯುತ್ತರವನ್ನು ಕೊಡದೇ ಇರೋದಕ್ಕೆ ನಾವು ನಿರ್ಧರಿಸಿದೆವು.

ಆದರೆ ಭಾರತ ಯುದ್ದೋನ್ಮಾದ ಸ್ಥಿತಿಯಲ್ಲಿತ್ತು. ಮರುದಿನ ನಾವು ಭಾರತದ ಮೇಲೆ ದಾಳಿ ಮಾಡಿದೆವು. ನಮಗೂ ದಾಳಿ ಮಾಡುವ ಸಾಮರ್ಥ್ಯ ಇದೆ. ನೀವು ದಾಳಿ ಮಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ದರಿದ್ದೇವೆ ಎಂದು ತೋರಿಸಿಕೊಡುವುದಕ್ಕಾಗಿ ಈ ದಾಳಿ ಮಾಡಬೇಕಾಯಿತು. ಅದೊಂದೇ ಕಾರಣಕ್ಕಾಗಿ ನಾವು ದಾಳಿ ನಡೆಸಿದೆವು. ನಮ್ಮ ದಾಳಿ ಯಾವುದೇ ನಷ್ಠದ ಗುರಿಯನ್ನು ಹೊಂದಿರಲಿಲ್ಲ. ಯಾವುದೇ ಜೀವಹಾನಿಯ ಟಾರ್ಗೆಟ್ ದಾಳಿ ಅದಾಗಿರಲಿಲ್ಲ. ಭಾರತದ ಯುದ್ದ ವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭ ದಲ್ಲಿ ಭಾರತದ ವಿಮಾನ ಪತನವಾಯ್ತು. ಇದಾದ ಬಳಿಕ ನಿನ್ನೆಯೂ ಸಂಜೆ ನಾನು ನರೇಂದ್ರ ಮೋದಿಗೆ ಸಂಪರ್ಕ ಸಾಧಿಸಲು ದೂರವಾಣಿ ಕರೆ ಮಾಡಿದೆ.

ಯಾಕೆಂದರೆ ನಾವು ಯಾರೊಂದಿಗೂ ಶತೃತ್ವವನ್ನು ಬೆಳೆಸಲು ಇಷ್ಟಪಡುವುದಿಲ್ಲ ಎಂದು ಹೇಳಬೇಕಿತ್ತು. ಆದರೆ ಮೋದಿಯವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಹೆದರಿಸುವ ತಂತ್ರಗಾರಿಕೆಗಳಿಗೆ ನಾವು ಬೆದರಿಲ್ಲ ಎನ್ನುವುದನ್ನೂ ಈ ವೇದಿಕೆಯ ಮೂಲಕ ಸ್ಪಷ್ಟಪಡಿಸುತ್ತೇನೆ. ನಮ್ಮಲ್ಲಿ ಸದೃಢವಾದ ಸೇನಾ ಸಶಸ್ತ್ರಬಲವಿದೆ. ಮಾತುಕತೆ ಮಾಡದೇ ಇರುವಂತಹ ಭಾರತದ ಮನಸ್ಥಿತಿ ನಮ್ಮದಲ್ಲ. ನಮ್ಮ ವಿದೇಶಾಂಗ ಸಚಿವರೂ ನಿನ್ನೆ ಜಗತ್ತಿನ ಹಲವು ದೇಶಗಳ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಮಾತುಕತೆಗಳು ಶಾಂತಿಯ ಉದ್ದೇಶವನ್ನು ಮಾತ್ರ ಹೊಂದಿದೆ.

ಮಾನ್ಯ ಸ್ಪೀಕರ್ ರವರೇ,
ಈ ಎಲ್ಲಾ ಘಟನೆಗಳು, ಸಮಸ್ಯೆಗಳಿಗೆ ಮೂಲ ಕಾರಣ‌‌ ಕಾಶ್ಮೀರ. ಭಾರತವನ್ನು ನಾನು ಕೇಳುತ್ತಿದ್ದೇನೆ. ಕಾಶ್ಮೀರ ವಿಷಯದಲ್ಲಿ ನಿಮ್ಮನ್ನು ನಾಗರಿಕರು ಪ್ರಶ್ನೆಯೇ ಮಾಡಬಾರದೇ ? ಹಲವು ವರ್ಷಗಳಿಂದ ಕಾಶ್ಮೀರದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಿಮ್ಮ ವ್ಯವಸ್ಥೆಯ ಅಪರೇಷನ್ ಗಳಿಂದ, ತಂತ್ರಗಾರಿಕೆಗಳಿಂದ ಕಾಶ್ಮೀರದ ಜನ ಹೈರಾಣಾಗಿದ್ದಾರೆ.

ಹಿಂದೂಸ್ತಾನದ ಹೋರಾಟಗಾರರೊಬ್ಬರ ( ಬಹುಶಃ ಭಗತ್ ಸಿಂಗ್) ಮಾತನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ನೀವು ನಮ್ಮನ್ನು ಜೈಲಿಗೆ ಹಾಕಬಹುದೇ ಹೊರತು ನಮ್ಮ ಸಿದ್ದಾಂತಗಳನ್ನು ಜೈಲಿಗೆ ಹಾಕಲಾಗಲ್ಲ. ಕಾಶ್ಮೀರದಲ್ಲೊಂದು ಪ್ರತ್ಯೇಕತಾ ಚಳುವಳಿಯಿದೆ. ನೀವು ಎಷ್ಟೇ ಹತ್ತಿಕ್ಕಿದರೂ ಅದು ಬೆಳೆಯುತ್ತಿದೆ. 20 ವರ್ಷದ ಹಿಂದೆ ನಾನು ಹಿಂದೂಸ್ತಾನದ ಕಾಂಕ್ಲೇವ್ ನಲ್ಲಿ ಭಾಗಿಯಾಗಿದ್ದೆ. ಆ ಸಮಾವೇಶದಲ್ಲಿ ಕಾಶ್ಮೀರದ ನಾಯಕರು ಯಾರೂ ಕೂಡಾ ಭಾರತದ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈಗಲೂ ಕೂಡಾ ಕಾಶ್ಮೀರದ ಯಾವೊಬ್ಬ ನಾಯಕನೂ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಕಾಶ್ಮೀರದ ಮೇಲೆ ಭಾರತದ ದಾಳಿಯಿಂದಾಗಿ ಅಲ್ಲಿ ಆಜಾದಿ ಹೊರತುಪಡಿಸಿ ಬೇರೆ ಧ್ವನಿ ಕೇಳುತ್ತಿಲ್ಲ. ಅವರಿಗೆ ಆಜಾದಿ ಬೇಕಾಗಿದೆ.

ನಾನು ಹಿಂದೂಸ್ತಾನಿಯರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯಾವ ಸಾಕ್ಷ್ಯವೂ ಇಲ್ಲದೆ ನೀವು ಪಾಕಿಸ್ತಾನದತ್ತಾ ಬೆರಳು ತೋರಿಸಿದಿರಿ. ಆದರೆ ನೀವು ಉತ್ತರ ಕಂಡುಕೊಳ್ಳಿ. ನಿಮ್ಮದೇ ದೇಶದ ಯುವಕನೊಬ್ಬ ಭಯೋತ್ಪಾದಕನಾಗಿ ಮಾನವ ಬಾಂಬ್ ಆಗಿ ಪರಿವರ್ತನೆಗೊಳ್ಳಲು ಕಾರಣವಾದ ಅಂಶಗಳು ಯಾವುದು ? ಅದಕ್ಕೆ ಕಾರಣರು ಯಾರು ? ನಿಮ್ಮದೇ ಯುವಕ ಬಾಂಬ್ ಕಟ್ಟಿಕೊಂಡು ಸೇನೆಯನ್ನೇ ಟಾರ್ಗೆಟ್ ಯಾಕೆ ಮಾಡಿದ ? ಯಾವ ಮನಸ್ಥಿತಿಗೆ ಆತ ತಲುಪಿರಬಹುದು ? ಹಿಂದೂಸ್ತಾನದ ಜನ ಇದನ್ನು ಯೋಚಿಸಿ ಉತ್ತರ ಕಂಡುಕೊಳ್ಳಬೇಕಿದೆ.

ಭಾರತದ ಏಕಮುಖ ನೀತಿಯಿಂದಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಐನ್ ಸ್ಟೈನ್ ಥಿಯರಿಯಾಗಿರುವ ಡಿಫಿನೇಷನ್ ಆಫ್ ಇನ್ಸೇನಿಟಿಯಂತೆ ಮಾಡಿದ್ದನ್ನೇ ಪುನರಾವರ್ತನೆ ಮಾಡಿ ಹೊಸ ಫಲಿತಾಂಶ ಬಯಸೋದು ಎಂಬಂತಾಗಿದೆ. ನಾನು ಅರ್ಥಮಾಡಿಕೊಂಡಂತೆ ಕಾಶ್ಮೀರದ ಭವಿಷ್ಯದ ಬಗ್ಗೆ ಭಾರತದಲ್ಲಿ ಈಗ ಆರೋಗ್ಯಕರ ಚರ್ಚೆಯ ಅವಶ್ಯಕತೆಯಿದೆ. ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಾಶ್ಮೀರದ ಪರಿಸ್ಥಿತಿ ಹೀಗೇ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತೆ. ಅದರ ಹೊಣೆಯನ್ನೂ ಪಾಕಿಸ್ತಾನದ ಮೇಲೆ ಹೊರಿಸುತ್ತಾರೆ. ಯಾವುದೇ ಸಾಕ್ಷ್ಯ ಇಲ್ಲದೇ ಪಾಕಿಸ್ತಾನದ ಮೇಲೆ ಕ್ರಮಕ್ಕೆ ಒತ್ತಡ ಹೇರಲಾಗುತ್ತದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ತೀವ್ರವಾದದ ಹೆಸರಿಗೆ ಕಟ್ಟಲಾಗುತ್ತದೆ. ಈ ರೀತಿಯ ಭಯೋತ್ಪಾದಕ ದಾಳಿಗಳಿಗೆ ಧರ್ಮದ ಹೆಸರನ್ನು ಸೇರಿಸಲಾಗುತ್ತಿದೆ.

ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಈ ಜಗತ್ತಿಗೆ ಆತ್ಮಾಹುತಿ ದಾಳಿಯನ್ನು ಮೊದಲು ಪರಿಚಯಿಸಿದ್ದು ತಮಿಳು ಟೈಗರ್ಸ್. ಅವರು ಹಿಂದೂಗಳು. ಅವರ ಆತ್ಮಾಹುತಿ ದಾಳಿಗೆ ಹಿಂದೂ ಧರ್ಮ ಕಾರಣವಲ್ಲ. ವ್ಯವಸ್ಥೆಯಿಂದ ಹತಾಶೆಗೊಂಡಿರುವುದೇ ಆತ್ಮಾಹುತಿಯಂತಹ ಕೆಲಸಗಳಿಗೆ ಕೈ ಹಾಕಲು ಪ್ರೇರೇಪಿಸುತ್ತದೆ. ಆತನ ಒಳಗಿರುವ ತುಮುಲ, ಆಕ್ರೋಶ, ಹತಾಶೆಗಳು ಆತನನ್ನು ಮಾನವ ಬಾಂಬ್ ಆಗಿ ಪರಿವರ್ತನೆ ಮಾಡುತ್ತದೆ.

ನಾನು ಇಂಡಿಯಾವನ್ನು ಕ್ರಿಕೆಟ್ ನ ಕಾರಣದಿಂದಾಗಿ ಹತ್ತಿರದಿಂದ ಬಲ್ಲೆ. ನನಗೆ ಹಿಂದೂಸ್ತಾನದಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಕಾಶ್ಮೀರದಲ್ಲಿ ವ್ಯವಸ್ಥೆ ಏನು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟು ಭಾರತದ ಜನ ಬುದ್ದಿವಂತರಿದ್ದಾರೆ. ಈಗ ಇರುವ ಸರಕಾರ ಯಾಕೆ ಯುದ್ದವನ್ನು ಬಯಸುತ್ತಿದೆ ಎಂಬುದನ್ನೂ ಹಿಂದೂಸ್ತಾನದ ಜನ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಬಹಳಷ್ಟು ಹಿಂದೂಸ್ತಾನಿಗಳೇ ಯುದ್ದದ ವಿರುದ್ದ ಇದ್ದಾರೆ. ದುರಂತವೆಂದರೆ ಟಿವಿಗಳಲ್ಲಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಲಾಗಿದೆ. ಪಾಕಿಸ್ತಾನದ ಮಾಧ್ಯಮಗಳು ನೋಡಿದಷ್ಟು ಯುದ್ದ, ಸಾವುನೋವುಗಳನ್ನು ಭಾರತೀಯ ಮಾಧ್ಯಮಗಳು ನೋಡಿದ್ದರೆ ಬಹುಷಃ ಅವರೂ ಕೂಡಾ ಯುದ್ದವನ್ನು ಬಯಸುತ್ತಿರಲಿಲ್ಲ. ಯುದ್ದದಲ್ಲಿ ಯಾರಿಗೂ ಗೆಲುವಿಲ್ಲ ಎಂಬುದನ್ನು ಭಾರತದ ಮಾಧ್ಯಮಗಳು ತಿಳಿಯಬೇಕು. ಎರಡೂ ಸಶಸ್ತ್ರ ಬಲಾಬಲ ಹೊಂದಿದ ರಾಷ್ಟ್ರಗಳ ಮಧ್ಯೆ ಯುದ್ದವನ್ನು ಯೋಚಿಸಲೇಬಾರದು.

ಭಾರತ ಮತ್ತು ನಮ್ಮ ಮಧ್ಯೆ ತಪ್ಪು ಲೆಕ್ಕಾಚಾರ ನಡೆಯಬಾರದು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆಯೂ ಈ ರೀತಿ ತಪ್ಪು ಲೆಕ್ಕಾಚಾರ ಇತ್ತು. ಜಗತ್ತಿನ ಪವರ್ ಫುಲ್ ರಾಷ್ಟ್ರಕ್ಕೂ ಕೂಡಾ ಅಫ್ಘಾನಿಸ್ಥಾನದ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ. ಈಗ ಅವರೂ ಮಾತುಕತೆ ಬಂದಿರೋದರಿಂದ ಸರಿಯಾಗುತ್ತಿದೆ. ಯುದ್ದ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ಭಾರತ ಯುದ್ದದ ಪರಿಸ್ಥಿತಿ ನಿರ್ಮಾಣ ಮಾಡಿದ್ರೆ ನಾವು ಪ್ರತ್ಯುತ್ತರ ಕೊಡಬೇಕಾಗುತ್ತದೆ. ಇದು ಮುಂದುವರೆದು ಎಲ್ಲಿಯವರೆಗೆ ಹೋಗಬಹುದು ?

ಪಾಕಿಸ್ತಾನವು ಅಣ್ವಸ್ತ್ರದ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಭಾರತದ ರಾಜಕಾರಣಿಗಳು ಹೇಳುತ್ತಾರೆ. ನ್ಯೂಕ್ಲಿಯರ್ ಬ್ಲಾಕ್ ಮೇಲ್ ಅನ್ನುವುದರ ಅರ್ಥ ಏನು ? ನಮ್ಮಲ್ಲಿ ನ್ಯೂಕ್ಲಿಯರ್ ವೆಪನ್ ಇದೆ ಅನ್ನೊ ಕಾರಣಕ್ಕಾಗಿ ನಾವು ಭಾರತಕ್ಕೆ ಸವಾಲೊಡುತ್ತಿದ್ದೇವೆ ಎಂದರ್ಥವೇ ?

ಮಾನ್ಯ ಸ್ಪೀಕರ್ ರವರೇ,
ನಾನು ಸಂಸತ್ತಿನಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಪಾಕಿಸ್ತಾನ ಶಾಂತಿ ಬಯಸುವ ರಾಷ್ಟ್ರವಾಗಿದೆ. ಶಾಂತಿ ಇದ್ದರೆ ಅಭಿವೃದ್ದಿಯಾಗುತ್ತೆ. ಅಭಿವೃದ್ದಿಯಾದರೆ ಉದ್ಯೋಗ ಸೃಷ್ಟಿಯಾಗುತ್ತೆ. ಆ ಮೂಲಕ ದೇಶ ಆರ್ಥಿಕವಾಗಿಯೂ ಬಲಿಷ್ಠವಾಗುತ್ತದೆ. ಯುದ್ದ ಎನ್ನುವುದು ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಿ ಲಾಭ ತಂದುಕೊಡುವುದಿಲ್ಲ. ಈ ಕಾರಣಕ್ಕಾಗಿ ನಾನು ನಿನ್ನೆಯೂ ನರೇಂದ್ರ ಮೋದಿ ಹತ್ರ ಮಾತನಾಡಲು ಪ್ರಯತ್ನಿಸಿದೆ. ಶಾಂತಿಗಾಗಿ ಇದನ್ನೆಲ್ಲಾ ಮಾಡಲು ಪ್ರಯತ್ನಿಸಿದೆನೇ ಹೊರತು ಅದು ನಮ್ಮ ದೌರ್ಬಲ್ಯವಲ್ಲ. ಪಾಕಿಸ್ತಾನದ ಈ ನಡೆ ತಪ್ಪು ಸಂದೇಶ ರವಾನಿಸಬಾರದು.

ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಿದೆ. ಸ್ವಾತಂತ್ರ ಪೂರ್ವದಲ್ಲಿ ಬಹದೂರ್ ಷಾ ಝಫರ್ ಮತ್ತು ಟಿಪ್ಪುವನ್ನು ಈ ದೇಶ ಕಂಡಿದೆ. ಬಹದೂರ್ ಷಾ ಝಫರ್ ಗೆ ಗುಲಾಮಗಿರಿ ಮತ್ತು ಸಾವಿನ ಆಯ್ಕೆಯನ್ನು ಇಟ್ಟಾಗ ಅವರು ಗುಲಾಮಗಿರಿಯನ್ನು ಆಯ್ಕೆ ಮಾಡಿಕೊಂಡರು. ಮತ್ತೊಂದೆಡೆ ಟಿಪ್ಪು ಸುಲ್ತಾನ್ ಕೂಡಾ ಇದ್ದರು. ಸಾವು ಮತ್ತು ಗುಲಾಮಗಿರಿಯ ಆಯ್ಕೆ ಟಿಪ್ಪುವಿಗೆ ಎದುರಾದಾಗ ಟಿಪ್ಪು ಸಾವನ್ನು ಒಪ್ಪಿಕೊಂಡ. ಈ ನೆಲದ ಹೀರೋ ಟಿಪ್ಪು ಸುಲ್ತಾನ್ ಆಗಿರುತ್ತಾರೆ.

ನಾವೂ ಕೂಡಾ ಪುಟ್ಟ ರಾಷ್ಟ್ರವಾದರೂ ಸ್ವತಂತ್ರದ ಪರವೇ ಇರುತ್ತೇವೆ. ಗುಲಾಮಗಿರಿಯನ್ನು ಒಪ್ಪಲ್ಲ. ಆದ್ದರಿಂದ ಭಾರತ ಮತ್ತು ಮೋದಿಗೆ ಹೇಳಲು ಬಯಸುವುದೇನೆಂದರೆ, ಇದು ಹೀಗೆ ಮುಂದುವರೆಯುವುದು ಬೇಡ. ನನಗೂ ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳು ಗೊತ್ತು. ನಿನ್ನೆ ರಾತ್ರಿ ಭಾರತದ ಸೈನಿಕರು ಮಿಸೈಲ್ ದಾಳಿ ಮಾಡಲು ಮುಂದಾದಾಗ ಅದನ್ನು ನಮ್ಮ ಸೈನಿಕರು ಹೇಗೆ ವಿಫಲಗೊಳಿಸಿದ್ರು ಎಂಬುದನ್ನೂ ನೋಡಿದ್ದೇನೆ. ಆದ್ದರಿಂದಲೇ ಸಂಸತ್ತಿನ ಮೂಲಕ ಭಾರತಕ್ಕೆ ಮನವಿ ಮಾಡುತ್ತಿದ್ದೇವೆ – ಇದನ್ನು ಹೀಗೆ ಇನ್ನು ಮುಂದುವರೆಸಬೇಡಿ.

ನಿಮ್ಮ‌ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗುತ್ತದೆ. ಎರಡು ಸಮಬಲದ ಸಶಸ್ತ್ರವನ್ನು ಹೊಂದಿರುವ ರಾಷ್ಟ್ರಗಳು ಯುದ್ದದ ಬಗ್ಗೆ ಯೋಚಿಸಬಾರದು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಕೂಡಾ ಕಾರ್ಯತತ್ಪರವಾಗಬೇಕು.
ನಾನು ಹೇಳೋದನ್ನು ಮರೆತುಬಿಟ್ಟೆ. ಭಾರತ ಸೈನಿಕ ನಮ್ಮ ವಶದಲ್ಲಿ ಇದ್ದಾನೆ. ನಾವು ಶಾಂತಿಯ ದ್ಯೋತಕವಾಗಿ ನಮ್ಮ ವಶದಲ್ಲಿರುವ ಭಾರತದ ಸೈನಿಕನನ್ನು ನಾಳೆ ಬಿಡುಗಡೆಗೊಳಿಸುತ್ತೇವೆ.

ಬರಹ ರೂಪ : ನವೀನ್ ಸೂರಿಂಜೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 days ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ1 week ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ2 weeks ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ2 weeks ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ2 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending