Connect with us
http://www.suddidina.com/category/political-news

ದಿನದ ಸುದ್ದಿ

ಭಾರತದ ಏಕತಾ ಮೂರ್ತಿ; ಒಂದು ಲಕ್ಷ ಮಂದಿ ವೀಕ್ಷಣೆ, 2.1 ಕೋಟಿ ರೂ. ಸಂಗ್ರಹ

Published

on

ಸುದ್ದಿದಿನ ದೆಹಲಿ: ಒಡೆದು ಹೋಗುತ್ತಿದ್ದ ಅಖಂಡ ಭಾರತವನ್ನು ಏಕೀಕರಣಗೊಳಿಸಿದ ಮಹಾನ್ ಚೇತನ ಸರ್ದಾರ್ ವಲ್ಲಭಭಾಯ್ ಪಟೇಲ್ ಕಾರ್ಯ ಸ್ಮರಣಾರ್ಥ ನಿರ್ಮಿಸಿದ ಅವರ ಏಕತಾ ಮೂರ್ತಿ ವಾರದಲ್ಲಿ ಎಷ್ಟು ಜನರು ನೋಡಿದ್ದಾರೆಂದರೆ ನೀವು ಅಚ್ಚರಿ ಪಡುತ್ತೀರಿ. ಏಕತಾ ಮೂರ್ತಿಯಿಂದ ಭಾರತದ ಹಿರಿಮೆ ವಿಶ್ವದಲ್ಲಿ ಮತ್ತಷ್ಟು ಹೆಚ್ಚಾಗುತ್ತಿದ್ದು, ಏಕತಾ ಮೂರ್ತಿ ನೋಡಲು ದೇಶ, ವಿದೇಶದಿಂದ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಗುಜರಾತಿನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲರ ಏಕತಾ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು. ಅಕ್ಟೋಬರ್ 31ರಂದು ಲೋಕಾರ್ಪಣೆ ಗೊಂಡಿದ್ದ ಏಕತಾ ಮೂರ್ತಿ ಸಾರ್ವಜನಿಕವ ವೀಕ್ಷಣೆಗೆ ನವೆಂಬರ್ ಒಂದರಂದು ತೆರೆಯಲಾಯಿತು. ಶನಿವಾರದಂದು ಅಂದಾಜು 27,000ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಕಳೆದ ಹತ್ತು ದಿನದಲ್ಲಿ ಅಂದಾಜು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದು, 2.1 ಕೋಟಿ ರೂ. ಸಂಗ್ರಹಗೊಂಡಿದೆ.

ಪ್ರಧಾನಿ  ನರೇಂದ್ರ ಮೋದಿ ನಿರ್ಮಿಸಿರುವ ಏಕತಾ ಮೂರ್ತಿ ಹಲವು ವಿಶೇಷಗಳಿಂದ ಕೂಡಿದೆ.

  • 182 ಮೀಟರ್ ಎತ್ತರ
  • ಸ್ಟ್ಯಾಚ್ಯು ಒಳಗೆ ಹೈಸ್ಪೀಡ್ ಲಿಫ್ಟ್
  • ಸರ್ದಾರ್ ವಲ್ಲಭಭಾಯ್ ಪಟೇಲ್ ಜೀವನ ಚರಿತ್ರೆ ಮ್ಯೂಸಿಯಂ
  • ಗ್ಯಾಲರಿ ಒಳಗೆ ಒಂದೇ ದಿನಕ್ಕೆ 5,000 ಪ್ರವೇಶ ಅವಕಾಶ
  • ಸ್ಟ್ಯಾಚ್ಯು ಒಳಗೆ 135 ಮೀಟರ್ ಎತ್ತರದಲ್ಲಿ ವ್ಯೂವರ್ಸ್ ಗ್ಯಾಲರಿ
  • ವ್ಯೂವರ್ಸ್ ಗ್ಯಾಲರಿಗೆ ಪ್ರತಿ ಸಲ 200 ಜನರಿಗೆ ಪ್ರವೇಶ
  • ಪ್ರತಿ ಸೋಮವಾರ ರಜೆ ಇರುತ್ತದೆ
  • ವಯಸ್ಕರರಿಗೆ 350, ಮಕ್ಕಳಿಗೆ (3-15 ವರ್ಷದೊಳಗಿನ) 200 ಶುಲ್ಕ

ದಿನದ ಸುದ್ದಿ

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

Published

on

ಸುದ್ದಿದಿನ,ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗದ ಪ್ರಕಟಣೆಗಳನ್ನು ಶೇ.50 ಮತ್ತು ವಿಶ್ವಕೋಶಗಳು ಹಾಗೂ ಇಂಗ್ಲಿಷ್-ಕನ್ನಡ ನಿಘಂಟುಗಳಿಗೆ ಶೇ.25 ರಂತೆ ರಿಯಾಯಿತಿ ದರದಲ್ಲಿ ಜೂನ್ 15 ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮಾರಾಟ ಮಳಿಗೆ ಮತ್ತು ರಾಮಸ್ವಾಮಿ ವೃತ್ತದ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಸಾರಾಂಗದ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹೆಚ್‍ಏಎಲ್ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಊಂಐ) ನಲ್ಲಿ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನಿಸಿದೆ.

ಇತರೆ ವರ್ಗ 60% ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳು 50% ಅಂಕದೊಂದಿಗೆ ತೇರ್ಗಡೆ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡನ್ನು ಹೊಂದಿರುವವರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಜೂನ್-1 ರೊಳಗಾಗಿ ಅರ್ಜಿಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-255293/8861890866/9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳಾ ಮಿಲಟರಿ ಪಡೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ,: ಭಾರತೀಯ ಸೇನೆಯಲ್ಲಿ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಲು ಬರುವ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ಬೆಳಗಾವಿ ನಗರದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಹೆಸರು ನೊಂದಾಯಿಸಲು ಜೂನ್- 8 ಕೊನೆಯ ದಿನಾಂಕವಾಗಿದ್ದು ನೊಂದಾಣಿ ಕಾರ್ಡ್ ಹಾಗೂ ರ್ಯಾಲಿಯ ನಿಖರ ದಿನಾಂಕವನ್ನು ಅಭ್ಯರ್ಥಿಗಲ ಇ-ಮೇಲ್‍ಗೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-255293, 8861890866, 9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending