Connect with us

ಕ್ರೀಡೆ

ಮೇ 24 ‘ಕಾಮನ್ವೆಲ್ತ್‌ ಡೇ’ | ನಿಮಗಿಷ್ಟು ತಿಳಿದಿರಲಿ : ಮಿಸ್ ಮಾಡ್ದೆ ಓದಿ

Published

on

ಪ್ರಪಂಚವು ‘ಕಾಮನ್ವೆಲ್ತ್ ದಿನ’ವನ್ನು ಮೇ24 ರಂದು ಆಚರಿಸುತ್ತದೆ. ಇದು ರಾಷ್ಟ್ರ ಗಳು ಸ್ನೇಹ ಮತ್ತು ಸೌಹಾರ್ದದ ದೂರದ ಮತ್ತು ಆಳವಾದ ಬೇರೂರಿದ ಜಾಲಗಳ ಮೂಲಕ ಒಟ್ಟಾಗಿ ಕೆಲಸ ಮಾಡಲು ಅವಕಾಶಗಳನ್ನು ನೀಡುತ್ತದೆ.

53 ಸ್ವತಂತ್ರ ರಾಷ್ಟ್ರಗಳ ಒಕ್ಕೂಟ ಕಾಮನ್ವೆಲ್ತ್ ಸಮಾನತೆ ವೈವಿಧ್ಯತೆ ಮತ್ತು ಸಾಮಾನ್ಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಪ್ರಜಾಪ್ರಭುತ್ವ ಶಾಂತಿ ಮತ್ತು ಅಭಿವೃದ್ಧಿಯನ್ನು ಮುಂದುವರಿಸಲು ಕೆಲಸ ಮಾಡುತ್ತದೆ.

1898ರಲ್ಲಿ ಒಂಟಾರಿಯೊದ ಡುಂಡಾಸ್ನಲ್ಲಿರುವ ಕೆನಡಾದ ಶಾಲೆಗಳಲ್ಲಿ ಮೇ 24 ರಂದು ಅಂದರೆ ಸ್ಕೂಲ್‌ ಡೇ ದಿನದಂದು ಕ್ಲೆಮೆಂಟಿನ ಟ್ರೆನ್ಹೋಮ್‌ ಅವರು ಎಂಪೈರ್‌ ದಿನವನ್ನು ಪರಿಚಯಿಸಿದರು. ಇದೇ ದಿನ ‘ರಾಣಿ ವಿಕ್ಟೋರಿಯಾ’ ಅವರ ಹುಟ್ಟುಹಬ್ಬ ಕೂಡ. ಕೆನಡಾದಲ್ಲಿ ಪ್ರತಿ ವರ್ಷ ಈ ದಿನವನ್ನು ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತದೆ. ಎಂಪೈರ್‌ ದಿನದಂದು ಕೆನಡಾ ಶಾಲೆಗಳಲ್ಲಿ ದಿನಪೂರ್ತಿ ಸ್ಫೂರ್ತಿದಾಯಕ ಭಾಷಣ ಮತ್ತು ಕೆಲವು ಹಾಡುಗಳನ್ನು ಹಾಡಲಾಗುತ್ತದೆ.

ಎಂಪೈರ್‌ ದಿನವನ್ನು ಮೇ 24 ರಂದು ಆಚರಿಸಲಾಗುತ್ತದೆ. ಈ ದಿನದಂದು ಕೈತೋಟದ ಹಿಂದೆ ಪಟಾಕಿ ಸಿಡಲಾಗುತ್ತದೆ ಅಥವಾ ಸಮುದಾಯದಲ್ಲಿ ನಡೆಯುವ ದೀಪೋತ್ಸವದಲ್ಲಿ ಭಾಗವಹಿಸಲಾಗುತ್ತದೆ.

ಬೋಯರ್‌ ಯುದ್ಧಕ್ಕಿಂತಲೂ ಮೊದಲು ರಾಣಿಯ ಜನ್ಮದಿನವನ್ನು ಆಚರಿಸಲಾಗುತ್ತಿತ್ತು. ಅದಾದ ನಂತರ ದಕ್ಷಿಣ ಆಫ್ರಿಕಾದ ಒಕ್ಕೂಟದಲ್ಲಿ ಕೂಡ ಆಚರಣೆ ಮಾಡಲಾಗುತ್ತಿತ್ತು. ಜನರಲ ಜಾನ್‌ ಸ್ಮಟ್ಸ್‌ ಅವರು ಕೂಡ 1870 ರಂದು ರಾಣಿಯ ಜನ್ಮದಿನದಂದೇ (ಮೇ 24) ಜನಿಸಿದ್ದರು. 1958ರಲ್ಲಿ ಎಂಪೈರ್‌ ದಿನವನ್ನು ಕಾಮನ್ವೆಲ್ತ್‌ ಡೇ ಆಗಿ ಮರು ನಾಮಕರಣ ಮಾಡಲಾಗಿದೆ.

-ಸಂಗ್ರಹ: ಡಾ .ಬಾಬು ಅಣದೂರೆ
ಮೊಬೈಲ್ : 9880802287

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ದಾವಣಗೆರೆ | ಕ್ರೀಡಾ ಕ್ಷೇತ್ರದಲ್ಲಿ ಸಾಧನೆ : ಏಕಲವ್ಯ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ 2019ನೇ ಸಾಲಿನ ಏಕಲವ್ಯ ಪ್ರಶಸ್ತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಈ ವೆಬ್‍ಸೈಟ್ ನಲ್ಲಿ https://karunadu.karnataka.gov.in/dyesಆಹ್ವಾನಿಸಲಾಗಿದೆ. ಪ್ರಯುಕ್ತ ಅರ್ಹ ಕ್ರೀಡಾಪಟುಗಳು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 08192-237480 ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕೊಹ್ಲಿ – ಅನುಷ್ಕಾ ಡೈವೋರ್ಸ್..!?

Published

on

ಸುದ್ದಿದಿನ ಡೆಸ್ಕ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್​ನ ಖ್ಯಾತ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿರುವುದಾಗಿ ಸಾಮಾಜಿಕ ಜಾಲತಾಣಗಣಲ್ಲಿ ವೈರಲ್ ಆಗಿದೆ. ಅಲ್ಲದೆ, ಕೆಲ ಕಿಡಿಗೇಡಿಗಳ ಕೃತ್ಯದಿಂದ #VirushkaDivorce ಎಂಬ ಹ್ಯಾಷ್​ ಟ್ಯಾಗ್ ಸಹ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವಿವಾಹಕ್ಕೂ ಮುಂಚೆಯೇ ಪ್ರಕಟವಾದ ಸುದ್ದಿಯೊಂದಕ್ಕೆ ಸಂಬಂಧಿಸಿ ಈಗ ವಿರುಷ್ಕಾ ಡಿವೋರ್ಸ್ ಎಂಬ ವದಂತಿ ವೈರಲ್ ಆಗುತ್ತಿದೆ. ಇದು ಹಳೆಯ ಸುದ್ದಿಯಾದ್ರೂ, ಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ನಟಿ ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ವಿರುಷ್ಕಾ ದಂಪತಿ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹರಪನಹಳ್ಳಿ | ಫೀಸ್ ಕಟ್ಟಲು ಹಣ‌ ಕೊಡದ್ದಕ್ಕೆ ರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಗಾಯತ್ರಿ ಆತ್ಮಹತ್ಯೆ

Published

on

ಚಿತ್ರ : ಗಾಯಿತ್ರಿ ಆತ್ಮಹತ್ಯೆಗೆ ಶರಣಾದ ರಾಷ್ಟ್ರೀಯ ಕ್ರೀಡಾ ಪಟು

ಸುದ್ದಿದಿನ,ಹರಪನಹಳ್ಳಿ: ದಾವಣಗೆರೆ ಜಿಲ್ಲೆಯ, ಹರಪನಹಳ್ಳಿ ತಾಲೂಕಿನ ಕೊಂಗನಹೊಸೂರು ಗ್ರಾಮ ರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾ ಪಟು ಹಾಗೂ ಬಿಎಸ್ಸಿ ವಿದ್ಯಾರ್ಥಿನಿ ಯೊಬ್ಬಳು ಶುಲ್ಕ ಪಾವತಿಗೆ ಬೇಗ ಹಣ ನೀಡಲಿಲ್ಲ ಎಂದು ಸಿಟ್ಟಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಾಯತ್ರಿ(21) ಆತ್ಮಹತ್ಯೆಗೆ ಶರಣಾದ ಕ್ರೀಡಾ ಪಟು. ಈಕೆ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ಅಭ್ಯಾಸ ಮಾಡುತ್ತಿದ್ದು, ಲಾಕ್ ಡೌನ್ ಆದಾಗಿನಿಂದ ತಾಲೂಕಿನ ಕೊಂಗನಹೊಸೂರು ಗ್ರಾಮದ ತಮ್ಮ ಮನೆಯಲ್ಲಿ ವಾಸವಾಗಿದ್ದರು.

ಕಾಲೇಜಿಗೆ ಹೋಗಿ ಶುಲ್ಕ ಪಾವತಿಸಿ ಬರುತ್ತೇನೆ ಹಣ ಕೊಡಿ ಎಂದು ತಂದೆಯನ್ನು ಕೇಳಿದ್ದಾಳೆ, ಆಗ ಅವರ ತಂದೆ ಷಡಾಕ್ಷರಯ್ಯನವರು ಬೀಜ ಗೊಬ್ಬರ ತಂದಿದ್ದೇನೆ, ಈಗ ಹಣ ಇಲ್ಲ, ನಾಳೆ ಹೊಂದಾಣಿಕೆ ಮಾಡಿ ಕೊಡುತ್ತೇನೆ ಎಂದು ಹೇಳಿದ್ದರು.

ಮೆ.29 ರಂದು ಬೆಳಿಗ್ಗೆ ತಂದೆ ಜಮೀನಿಗೆ ಬಿತ್ತನೆ‌ ಮಾಡಲು ಹೋಗಿದ್ದಾರೆ, ಹೋಗಿದ್ದಾರೆ, ಮನೆಯಲ್ಲಿ ಒಬ್ಬಳೆ ಇದ್ದ ಗಾಯಿತ್ರಿ ವ್ಯವಸಾಯಕ್ಕೆ ತಂದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಆಕೆಯನ್ನು ಪಕ್ಕದ ಮನೆಯವರು ನೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಜೂ.6 ರಂದು ಸಾವನ್ನಪ್ಪಿದ್ದಾಳೆ. ತಂದೆ ಷಡಾಕ್ಷರಯ್ಯನವರ ದೂರಿನ ಮೇರೇಗೆ ಸ್ಥಳೀಯ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಕಬ್ಬಡಿ ಕ್ರೀಡಾ ಪಟುವಾಗಿದ್ದ ಗಾಯತ್ರಿ ಕಳೆದ 2 ವರ್ಷಗಳ ಹಿಂದೆ ದಾವಣಗೆರೆಯ ಮೈತ್ರಿ ಸ್ಪೋಟ್ಸ ಕ್ಲಬ್ ಗೆ ಸೇರಿ ತರಬೇತಿ ಪಡೆದಿದ್ದಳು.

ಈ ಕುರಿತು ಪ್ರತಿಕ್ರಿಯೆ ನೀಡಿದ ತರಬೇತುದಾರ ದಾವಣಗೆರೆಯ ಎ.ಎಂ. ರವಿಕುಮಾರ 2019 ರಲ್ಲಿ ನೇಪಾಳದ ಕಟ್ಮಂಡೊ ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ಕಬ್ಬಡಿ ತಂಡದಿಂದ ಆಡಿ ಎರಡನೇ ಸ್ಥಾನ ಪಡೆದು ಮೆಡಲ್ ಗಳಿಸಿದ್ದಳು.

ದಾವಣಗೆರೆ ಕ್ಲಬ್ ನಿಂದ ಮಹಾರಾಷ್ಟ್ರ ಹಾಗೂ ಬೆಳಗಾಂ ಹೀಗೆ 2-3 ಓಪನ್ ಟೂರ್ನಿ ಮೆಂಟ್ ನಲ್ಲಿ ಪಾಲ್ಗೊಂಡಿದ್ದಳು. ಉತ್ತಮ ಕಬ್ಬಡಿ ಕ್ರೀಡಾ ಪಟು ಆಗಿದ್ದಳು, ರಾಷ್ಟ್ರೀಯ , ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾಳೆ, ಬೆಸ್ಟ ರೈಡರ್ ಆಗಿದ್ದಳು. ಓದಿನಲ್ಲೂ ಚೆನ್ನಾಗಿದ್ದಳು, ಬಿಎಸ್ಸಿ ಮುಗಿಸಿ ಐಐಎಸ್ ಮಾಡಬೇಕೆಂಬ ಆಸೆ ಆಕೆಗಿತ್ತು ಎಂದು ಸಂತಾಪ ಸೂಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending